Tata Nexon EV Facelift ಆವೃತ್ತಿಯ ಹೊರಾಂಗಣ ಮತ್ತು ಇಂಟೀರಿಯರ್ ನ ವಿವರಿಸುವ ಈ 15 ಚಿತ್ರಗಳು
ಟಾಟಾ ನೆಕ್ಸಾನ್ ಇವಿ ಗಾಗಿ tarun ಮೂಲಕ ಸೆಪ್ಟೆಂಬರ್ 11, 2023 12:00 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
2023ರ ನೆಕ್ಸನ್ EV ಫೇಸ್ ಲಿಫ್ಟ್ ಆವೃತ್ತಿಗೆ ಮಾಡಲಾಗಿರುವ ಸಂಪೂರ್ಣ ಬದಲಾವಣೆಗಳನ್ನು ಇಲ್ಲಿ ವಿವರಿಸಲಾಗಿದೆ
ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ವಾಹನವು ಸುದ್ದಿ ಇಲ್ಲದೆ ರಸ್ತೆಗಿಳಿಯುತ್ತಿದೆ. ಇದು ನೋಡಲು ಹೊಸ ತಲೆಮಾರಿನ ಎಲೆಕ್ಟ್ರಿಕ್ ವಾಹನಗಳಂತೆಯೇ ಕಾಣುತ್ತದೆ. ಆದರೆ ಇದು ಸಾಕಷ್ಟು ಪರಿಷ್ಕರಣೆಯೊಂದಿಗೆ ರಸ್ತೆಗೆ ಇಳಿಯಲಿದೆ. ಸೆಪ್ಟೆಂಬರ್ 14ರಂದು ಇದರ ಮಾರಾಟವು ಪ್ರಾರಂಭಗೊಳ್ಳಲಿದ್ದು, ಸೆಪ್ಟೆಂಬರ್ 9ರಂದು ಬುಕಿಂಗ್ ಪ್ರಾರಂಭಗೊಂಡಿದೆ.
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ವಾಹನವು ಏನೆಲ್ಲ ಹೊಸತನಗಳೊಂದಿಗೆ ಬರಲಿದೆ ಎಂಬುದನ್ನು ಈ ಕೆಳಗಿನ ಗ್ಯಾಲರಿಯಲ್ಲಿ ಸವಿಸ್ತಾರವಾಗಿ ನೋಡೋಣ.
ಹೊರಾಂಗಣ
ಮುಂಭಾಗ
ಮುಂಭಾಗದಲ್ಲಿ, ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ವಾಹನವು ಇದರ ಹಿಂದಿನ ಆವೃತ್ತಿಯಂತೆ ಕಾಣುತ್ತದೆ. ಕ್ಲೋಸ್ಡ್ ಆಫ್ ಗ್ರಿಲ್ ನ ಬದಲಿಗೆ ಸಂಪರ್ಕಿತ ಹೊಳಪಿನ LED DRL ಗಳನ್ನು ಸಂಪರ್ಕಿಸಲಾಗಿದ್ದು, ಪಲ್ಸ್ ಪರಿಣಾಮದ ಮೂಲಕ ಎಷ್ಟು ಚಾರ್ಜ್ ಆಗಿದೆ ಎಂಬುದನ್ನು ಇದು ತೋರಿಸುತ್ತದೆ. ಸಾಮಾನ್ಯವಾಗಿ ಐಷಾರಾಮಿ ಕಾರುಗಳಲ್ಲಿ ಕಂಡುಬರುವ ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್ ಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಸ್ಪ್ಲಿಟ್ ಏರ್ ಡ್ಯಾಮ್ ಗಳು, ಮತ್ತು ಬಂಪರ್ ನ ಕೊನೆಗೆ ಏರ್ ಕರ್ಟನ್ ಗಳು ಬಂದಿದ್ದು, ಫೇಶಿಯಾಕ್ಕೆ ಹೊಸ ನೋಟವನ್ನು ನೀಡಿವೆ.
ಸೈಡ್
ಪಕ್ಕದಲ್ಲಿಯೇ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಆದರೆ ICE ಆವೃತ್ತಿಯನ್ನು ಹೋಲುವ 16 ಇಂಚಿನ ಏರೋಡೈನಮಿಕಲಿ ಸ್ಟೈಲ್ಡ್ ಅಲೋಯ್ ವೀಲುಗಳನ್ನು ಇದು ಹೊಂದಿದೆ.
ಹಿಂಭಾಗ
ಹಿಂಭಾಗವನ್ನು ಗಮನಿಸಿದರೆ, ವೆಲ್ಕಮ್ ಲೈಟ್ ಫಂಕ್ಷನ್ ಜೊತೆಗೆ ಹೊಸದಾಗಿ ಸಂಪರ್ಕಿಸಿದ LED ಟೇಲ್ ಲೈಟ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ. ಬೂಟ್ ವಿನ್ಯಾಸವನ್ನು ಸಹ ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದೇ ರೀತಿ ಹಿಂದಿನ ಬಂಪರ್ ಸಹ ಬದಲಾಗಿದೆ. ಬೂಟ್ ಲಿಡ್ ನಲ್ಲಿ, ಈ ಕಾರಿನ ಹೊಸ ಬ್ರಾಂಡಿಂಗ್ ಆಗಿರುವ ‘Nexon.ev’ ಎಂಬುದನ್ನು ಕೆತ್ತಲಾಗಿದೆ. ಟಾಟಾ ಸಂಸ್ಥೆಯು ಹಿಂಭಾಗದ ವೈಪರ್ ಅನ್ನು ಅಡಗಿಸಿದ್ದು, ಇದನ್ನು ರಿಯರ್ ಸ್ಪಾಯ್ಲರ್ ಕೆಳಗೆ ಅಳವಡಿಸಲಾಗಿದೆ.
ಇದನ್ನು ಸಹ ಓದಿರಿ: ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ವೇರಿಯಂಟ್ ಗಳಲ್ಲಿ ಬಣ್ಣಗಳ ಆಯ್ಕೆಗಳು
ಬಣ್ಣಗಳು
ನೆಕ್ಸನ್ EV ಫೇಸ್ ಲಿಫ್ಟ್ ವಾಹನವು ಕ್ರಿಯೇಟಿವ್ ಓಶಿಯನ್, ಫಿಯರ್ ಲೆಸ್ ಪರ್ಪಲ್, ಎಂಪವರ್ಡ್ ಆಕ್ಸೈಡ್, ಪ್ರಿಸ್ಟಿನ್ ವೈಟ್, ಡೈಟೋನಾ ಗ್ರೇ, ಇಂಟೆನ್ಸಿ-ತೀಳ್, ಮತ್ತು ಫ್ಲೇಮ್ ರೆಡ್ - ಈ ಏಳು ಬಣ್ಣಗಳಲ್ಲಿ ಬರಲಿದೆ.
ಒಳಾಂಗಣ
ನೆಕ್ಸನ್ ಫೇಸ್ ಲಿಫ್ಟ್ ನಂತೆಯೇ, ನೆಕ್ಸನ್ EV ಫೇಸ್ ಲಿಫ್ಟ್ ವಾಹನವು ಸಹ ಎರಡು ದೊಡ್ಡ ಡಿಸ್ಪ್ಲೇಗಳು ಮತ್ತು ಬೆಳಗುವ ಲೋಗೋ ಜೊತೆಗೆ 2 ಸ್ಪೋಕ್ ಸ್ಟೀಯರಿಂಗ್ ವೀಲ್ ಮೂಲಕ ಒಳಾಂಗಣದಲ್ಲಿ ಸಂಪೂರ್ಣ ಹೊಸ ವಿನ್ಯಾಸವನ್ನು ಪಡೆದಿದೆ. ವೇರಿಯಂಟ್ ಮತ್ತು ಬಣ್ಣವನ್ನು ಆಧರಿಸಿ ನೀವು ಬೇರೆ ಬೇರೆ ಇಂಟೀರಿಯರ್ ಥೀಮ್ ಗಳನ್ನು ಆರಿಸಬಹುದು: ಕಪ್ಪು ಮತ್ತು ನೀಲಿ, ಕಪ್ಪು ಮತ್ತು ನೇರಳೆ, ಹಾಗೂ ಕಪ್ಪು ಮತ್ತು ಬಿಳಿ.
ನಡುಭಾಗವು 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನಿಂದ ಆವರಿಸಿದ್ದು, ಸದ್ಯಕ್ಕೆ ನೆಕ್ಸನ್ EV ವಾಹನದ ಪಾಲಿಗೆ ಇದು ವಿಶಿಷ್ಟವೆನಿಸಿದೆ. ಇದು ಸಂಪರ್ಕಿತ ಕಾರ್ ತಂತ್ರಜ್ಞಾನ ಮತ್ತು ವೈರ್ ಲೆಸ್ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಆಧರಿಸುತ್ತದೆ. ಜತೆಗೆ ಸಬ್ ವೂಫರ್ ಜೊತೆಗೆ 9 ಸ್ಪೀಕರ್ JBL ಸೌಂಡ್ ಸಿಸ್ಟಂ ಇದರಲ್ಲಿ ಲಭ್ಯ.
ನೆಕ್ಸನ್ EV ಫೇಸ್ ಲಿಫ್ಟ್ ಮಾದರಿಯು 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದ್ದು, ಉಳಿದಿರುವ ರೇಂಜ್, ರೀಜನರೇಟಿವ್ ಬ್ರೇಕಿಂಗ್ ಮಟ್ಟ, ಡಿಜಿಟಲ್ ಸ್ಪೀಡೋಮೀಟರ್, ಮತ್ತು ಚಾರ್ಜಿಂಗ್ ಮಟ್ಟವನ್ನು ಇದು ತೋರಿಸುತ್ತದೆ. ಆಂಡ್ರಾಯ್ಡ್ ಅಟೋ ಅಥವಾ ಆಪಲ್ ಕಾರ್ ಪ್ಲೇಗೆ ಸಂಪರ್ಕಿಸಿದಾಗ ಡಿಸ್ಪ್ಲೇಯು ಆನ್ ಸ್ಕ್ರೀನ್ ನೇವಿಗೇಶನ್ ಅನ್ನು ತೋರಿಸುತ್ತದೆ.
ಎಲೆಕ್ಟ್ರಿಕ್ ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜರ್, ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಇತ್ಯಾದಿ ವಿಶೇಷತೆಗಳನ್ನು 2023ರ ನೆಕ್ಸನ್ EV ಕಾರು ಹೊಂದಿದೆ.
ಸುರಕ್ಷತೆ
ಸುರಕ್ಷತೆಗಾಗಿ ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ವಾಹನವು ಪ್ರಮಾಣಿತ ಆರು ಏರ್ ಬ್ಯಾಗುಗಳು, ESP, ಮತ್ತು ಹಿಂದಿನ ಪಾರ್ಕಿಂಗ್ ಕ್ಯಾಮರಾವನ್ನು ಹೊಂದಿದೆ.
ಉನ್ನತ ವೇರಿಯಂಟ್ ಗಳು 360 ಡಿಗ್ರಿ ಕ್ಯಾಮರಾ, ಬ್ಲೈಂಡ್ ವ್ಯೂ ಮಾನಿಟರ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಅಟೋ ಹೋಲ್ಡ್ ಫಂಕ್ಷನ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿವೆ.
ಇದನ್ನು ಸಹ ಓದಿರಿ: ತನ್ನ ICE ಆವೃತ್ತಿಗೆ ಹೋಲಿಸಿದರೆ ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ಈ ರೀತಿ ಕಾಣಿಸುತ್ತದೆ
ಪವರ್ ಟ್ರೇನ್ ಗಳು
ಟಾಟಾ ಸಂಸ್ಥೆಯು ನೆಕ್ಸನ್ EV ಫೇಸ್ ಲಿಫ್ಟ್ ವಾಹನವನ್ನು ಎರಡು ಬ್ಯಾಟರಿ ಪ್ಯಾಕ್ ನೊಂದಿಗೆ ಹೊರತರಲಿದೆ - 30.2kWh ಮತ್ತು 40.5kWh. ಸಣ್ಣ ಪ್ಯಾಕ್ ಈಗ ‘MR / ಮಿಡ್ ರೇಂಜ್’ ಹೆಸರನ್ನು ಹೊಂದಿದ್ದು, 325 ಕಿಲೋಮೀಟರ್ ತನಕದ ಶ್ರೇಣಿಯನ್ನು ಹೊಂದಿದೆ. ದೊಡ್ಡ ಪ್ಯಾಕ್ ‘LR / ಲಾಂಗ್ ರೇಂಜ್’ ಹೆಸರನ್ನು ಹೊಂದಿದ್ದು, 465 ಕಿಲೋಮೀಟರ್ ಗಳ ಚಾಲನಾ ಶ್ರೇಣಿಯನ್ನು ನೀಡಲಿದೆ.
ಇದರ ICE ವಾಹನವನ್ನು ಚಲಾಯಿಸುವಾಗ ಪ್ಯಾಡಲ್ ಶಿಫ್ಟರ್ ಗಳು ಚಾಲಕನಿಗೆ ವಿಶೇಷ ಅನುಭವವನ್ನು ನೀಡುತ್ತವೆ. ಆದರೆ ನೆಕ್ಸನ್ EV ಕಾರಿನಲ್ಲಿ ಬ್ರೇಕ್ ರೀಜನರೇಶನ್ ಮಟ್ಟದ ಹೊಂದಾಣಿಕೆ ಮಾಡಲು ಇದನ್ನು ಬಳಸಲಾಗುತ್ತದೆ.
ನೀವು ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳ ನಡುವೆ ಆಯ್ಕೆ ಮಾಡಬಹುದಾಗಿದ್ದು, ಚಾಲನಾ ಅನುಭವ ಮತ್ತು ಲಭ್ಯವಿರುವ ಶ್ರೇಣಿಯನ್ನು ಇವು ಬದಲಾಯಿಸುತ್ತವೆ.
ಚಾರ್ಜಿಂಗ್ ಸಮಯ
ವೇಗದ ಚಾರ್ಜರ್ ಜೊತೆಗೆ, EV ವಾಹನದ ಮಧ್ಯಮ ಮತ್ತು ದೀರ್ಘ ಶ್ರೇಣಿಯ ವೇರಿಯಂಟ್ ಗಳನ್ನು ಕೇವಲ 56 ನಿಮಿಷಗಳಲ್ಲಿ 10 ರಿಂದ 80 ಶೇಕಡಾದಷ್ಟು ಚಾರ್ಜ್ ಮಾಡಬಹುದು. ಮಧ್ಯಮ ಶ್ರೇಣಿಯ ವೇರಿಯಂಟ್ ಗಳನ್ನು 10ರಿಂದ 100 ಶೇಕಡಾದಷ್ಟು ಚಾರ್ಜ್ ಮಾಡಲು 7.2kW AC ಚಾರ್ಜರ್ ಗೆ 4.3 ಗಂಟೆಗಳು ಬೇಕು. ದೀರ್ಘ ಶ್ರೇಣಿಯ ವೇರಿಯಂಟ್ ಗಳನ್ನು ಚಾರ್ಜ್ ಮಾಡಲು ಆರು ಗಂಟೆಗಳು ಬೇಕು.
ಎಲೆಕ್ಟ್ರಿಕ್ SUV ಯ ಬ್ಯಾಟರಿ ಪ್ಯಾಕ್ ಅನ್ನು ಬಳಸಿ ಉಪಕರಣಗಳಿಗೆ ಶಕ್ತಿ ಒದಗಿಸಲು ಇದು V2L ನ್ನು ಬೆಂಬಲಿಸುತ್ತದೆ. ಜೊತೆಗೆ ಅಗತ್ಯ ಬಿದ್ದಲ್ಲಿ ಇನ್ನೊಂದು EV ಯನ್ನು ಚಾರ್ಜ್ ಮಾಡಲು V2V ಅನ್ನು ಆಧರಿಸುತ್ತದೆ.
ನೆಕ್ಸನ್ EV ಫೇಸ್ ಲಿಫ್ಟ್ ವಾಹನವು ಸುಮಾರು ರೂ. 15 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಮಹೀಂದ್ರಾ XUV400 EV ಜೊತೆಗೆ ಸ್ಪರ್ಧಿಸುವ ನಿರೀಕ್ಷೆ ಇದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ನೆಕ್ಸನ್ ಆಟೋಮ್ಯಾಟಿಕ್