ಭಾರತ್ NCAP ನಿಂದ Tata Nexon EVಗೆ 5 ಸ್ಟಾರ್ ಸುರಕ್ಷತಾ ರೇಟಿಂಗ್
ಟಾಟಾ ನೆಕ್ಸಾನ್ ಇವಿ ಗಾಗಿ rohit ಮೂಲಕ ಜೂನ್ 17, 2024 12:10 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಭಾರತ್ ಎನ್‌ಸಿಎಪಿಯಿಂದ ವಯಸ್ಕ ಮತ್ತು ಮಕ್ಕಳ ರಕ್ಷಣೆ ಮೌಲ್ಯಮಾಪನಗಳಲ್ಲಿ ಒಟ್ಟಾರೆ ಸುರಕ್ಷತೆಯಲ್ಲಿ ನೆಕ್ಸಾನ್ EV 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.
ಟಾಟಾ ನೆಕ್ಸಾನ್ EV ಅನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾಡಿದೆ, ಮತ್ತು ಇದು 5-ಸ್ಟಾರ್ ಒಟ್ಟಾರೆ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ SUV ವಯಸ್ಕ ಮತ್ತು ಮಕ್ಕಳ ರಕ್ಷಣೆಯಲ್ಲಿ 5-ಸ್ಟಾರ್ ಗಳನ್ನು ಗಳಿಸಿದೆ ಆದರೆ ವಿವರವಾದ ಸ್ಕೋರ್‌ಗಳು ಟಾಟಾ ಪಂಚ್ EV ಯಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಟಾಟಾ ಪಂಚ್ EV ಕೂಡ BNCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಭಾರತ ಸರ್ಕಾರವು ಅಕ್ಟೋಬರ್ 2023 ರಲ್ಲಿ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ ಅನ್ನು ಪ್ರಾರಂಭಿಸಿತು ಮತ್ತು ಇದುವರೆಗೆ ಏಜೆನ್ಸಿಯಿಂದ ಪರೀಕ್ಷಿಸಲ್ಪಟ್ಟ ಮೊದಲ EV ಗಳಲ್ಲಿ ನೆಕ್ಸಾನ್ ಒಂದಾಗಿದೆ.
BNCAP ನಲ್ಲಿ, SUV ಯ ಟಾಪ್ ವೇರಿಯಂಟ್ ಆಗಿರುವ ಎಂಪವರ್ಡ್ ಪ್ಲಸ್ ಲಾಂಗ್ ರೇಂಜ್ (LR) ಅನ್ನು ಕ್ರ್ಯಾಶ್-ಟೆಸ್ಟ್ ಮಾಡಲಾಗಿದೆ. ಆದರೆ, ಸುರಕ್ಷತೆಯ ರೇಟಿಂಗ್ ಎಲ್ಲಾ ವೇರಿಯಂಟ್ ಗಳಿಗೆ ಅನ್ವಯಿಸುತ್ತದೆ ಎಂದು ಫಲಿತಾಂಶಗಳು ಹೇಳುತ್ತದೆ. ಟಾಟಾ ನೆಕ್ಸಾನ್ EV ಹೇಗೆ ಪ್ರದರ್ಶನ ನೀಡಿದೆ ಎಂಬುದನ್ನು ವಿವರವಾಗಿ ನೋಡೋಣ.
ವಯಸ್ಕ ಪ್ರಯಾಣಿಕರ ರಕ್ಷಣೆ
29.86/32 ಅಂಕಗಳು
ಈ ಸ್ಕೋರ್ ಐದು-ಸ್ಟಾರ್ ರೇಟಿಂಗ್ ಅನ್ನು ನೀಡಿದೆ, ಆದರೆ ಇದುವರೆಗೆ ಭಾರತ್ ಎನ್‌ಸಿಎಪಿ ಪರೀಕ್ಷಿಸಿದ ಟಾಟಾ ವಾಹನಗಳಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆ (ಎಒಪಿ) ಗಾಗಿ ಇದು ಕಡಿಮೆ ಸ್ಕೋರ್‌ಗಳಲ್ಲಿ ಒಂದಾಗಿದೆ.
ಮುಂಭಾಗದ ಇಂಪ್ಯಾಕ್ಟ್
ಪ್ರತಿ ಗಂಟೆಗೆ 64 ಕಿಮೀ ವೇಗದಲ್ಲಿ ಮುಂಭಾಗದ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ನೆಕ್ಸಾನ್ EV ಮುಂಭಾಗದ ಸೀಟ್‌ಗಳಲ್ಲಿ ವಯಸ್ಕರ ವಿಭಾಗದಲ್ಲಿ 16 ಅಂಕಗಳಲ್ಲಿ 14.26 ಅಂಕಗಳನ್ನು ಗಳಿಸಿತು. ನೆಕ್ಸಾನ್ EV ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ 'ಗುಡ್' ರಕ್ಷಣೆಯನ್ನು ನೀಡಿತು. ಆದರೆ, ಚಾಲಕನ ಎದೆಯ ರಕ್ಷಣೆಯು 'ಅಡಿಕ್ವೆಟ್' ಎಂದು ರೇಟ್ ಮಾಡಲಾಗಿದೆ, ಮತ್ತು ಪ್ರಯಾಣಿಕರ ಎದೆಯ ರಕ್ಷಣೆಯನ್ನು 'ಗುಡ್' ಎಂದು ರೇಟ್ ಮಾಡಲಾಗಿದೆ. ಚಾಲಕ ಮತ್ತು ಪ್ರಯಾಣಿಕರ ತೊಡೆಗಳು ಮತ್ತು ಪೆಲ್ವಿಕ್ ಜಾಗಕ್ಕೆ ನೀಡಲಾದ ರಕ್ಷಣೆಯನ್ನು ‘ಗುಡ್’ ಎಂದು ರೇಟ್ ಮಾಡಲಾಗಿದೆ ಆದರೆ ಈ ಪರೀಕ್ಷೆಯಲ್ಲಿ ಅವರ ಮೊಳಕಾಲುಗಳು 'ಅಡಿಕ್ವೆಟ್' ರಕ್ಷಣೆಯನ್ನು ಮಾತ್ರ ಪಡೆದಿವೆ.
ಸೈಡ್ ಇಂಪ್ಯಾಕ್ಟ್
ವಿರೂಪಗೊಳಿಸಬಹುದಾದ ತಡೆಗೋಡೆಯ ವಿರುದ್ಧ ಗಂಟೆಗೆ 50 ಕಿಮೀ ವೇಗದಲ್ಲಿ ಸೈಡ್ ಕ್ರ್ಯಾಶ್ ಪರೀಕ್ಷೆ ನಡೆಸಿದಾಗ, ನೆಕ್ಸಾನ್ EV ಚಾಲಕನ ತಲೆ, ಎದೆ, ಹೊಟ್ಟೆ ಮತ್ತು ಸೊಂಟಕ್ಕೆ 'ಗುಡ್' ರಕ್ಷಣೆಯನ್ನು ಒದಗಿಸಿತು. ಆದರೆ, ಎದೆಯ ಭಾಗವು 'ಅಡಿಕ್ವೆಟ್' ರಕ್ಷಣೆಯನ್ನು ಮಾತ್ರ ಒದಗಿಸಿದೆ.
ಸೈಡ್ ಪೋಲ್ ಇಂಪ್ಯಾಕ್ಟ್
ಸೈಡ್ ಪೋಲ್ ಪರೀಕ್ಷೆಯ ಫಲಿತಾಂಶವು ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಂತೆಯೇ ಇತ್ತು, ಇಲ್ಲಿ ದೇಹದ ಇತರ ಭಾಗಗಳೊಂದಿಗೆ ಎದೆಯ ಭಾಗ ಕೂಡ 'ಗುಡ್' ರಕ್ಷಣೆಯನ್ನು ಪಡೆದಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EVಗೆ ಭಾರತ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್
ಪ್ರಯಾಣಿಸುವ ಮಕ್ಕಳ ರಕ್ಷಣೆ
44.95/49 ಅಂಕಗಳು
ನೆಕ್ಸಾನ್ EV ಮಕ್ಕಳ ಆಕ್ಯುಪೆಂಟ್ ಪ್ರೊಟೆಕ್ಷನ್ (COP) ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ಮೌಲ್ಯಮಾಪನಗಳಲ್ಲಿ ಕೂಡ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಟಾಟಾ EV ಯಲ್ಲಿ ಮಕ್ಕಳ ಸೀಟ್ ಗಳನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಅದರ ವಿವರಗಳು ಇಲ್ಲಿವೆ:
ಪ್ಯಾರಾಮೀಟರ್ |
ಸ್ಕೋರ್ |
ಡೈನಾಮಿಕ್ |
23.95/24 |
CRS ಇನ್ಸ್ಟಾಲೇಷನ್ |
12/12 |
ವಾಹನ ಮೌಲ್ಯಮಾಪನ |
9/13 |
18 ತಿಂಗಳ ಮಗು
18-ತಿಂಗಳ-ವಯಸ್ಸಿನ ಮಗುವಿಗೆ ನೀಡಲಾಗುವ ರಕ್ಷಣೆಯನ್ನು ಪರೀಕ್ಷಿಸಿದಾಗ, ನೆಕ್ಸಾನ್ EV 12 ರಲ್ಲಿ 11.95 ಅಂಕಗಳನ್ನು ಗಳಿಸಿತು.
3 ವರ್ಷದ ಮಗು
3 ವರ್ಷ ವಯಸ್ಸಿನ ಮಗುವಿಗೆ, ಎಲೆಕ್ಟ್ರಿಕ್ SUV 12 ಅಂಕಗಳ ಸಂಪೂರ್ಣ ಸ್ಕೋರ್ ಅನ್ನು ಪಡೆದಿದೆ.
GNCAP ವರದಿಗೆ ಹೋಲಿಸಿದರೆ, BNCAP ಫ್ಯಾಕ್ಟ್ ಶೀಟ್ ವಿಭಿನ್ನ ಕ್ರ್ಯಾಶ್ ಪರೀಕ್ಷೆಗಳ ಸಮಯದಲ್ಲಿ ತಲೆ, ಎದೆ ಅಥವಾ ಕುತ್ತಿಗೆಯ ವಿಷಯದಲ್ಲಿ ಮಕ್ಕಳಿಗೆ ಎಷ್ಟರ ಮಟ್ಟಿಗೆ ರಕ್ಷಣೆಯನ್ನು ನೀಡಲಾಗಿದೆ ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ನೀಡುವುದಿಲ್ಲ.
ಇದನ್ನು ಕೂಡ ಓದಿ: WWDC 2024 ರಲ್ಲಿ ನೆಕ್ಸ್ಟ್ ಜನ್ ಆಪಲ್ ಕಾರ್‌ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್‌ಪ್ಲೇ
ನೆಕ್ಸಾನ್ EV ಸುರಕ್ಷತಾ ಫೀಚರ್ ಗಳು
ಟಾಟಾ ತನ್ನ ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ EVಗೆ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಬ್ರೇಕ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳೊಂದಿಗೆ ರಿವರ್ಸಿಂಗ್ ಕ್ಯಾಮೆರಾದಂತಹ ಸ್ಟ್ಯಾಂಡರ್ಡ್ ಸುರಕ್ಷತಾ ತಂತ್ರಜ್ಞಾನಗಳನ್ನು ನೀಡಿದೆ. ಇದರ ಟಾಪ್ ವೇರಿಯಂಟ್ ಗಳು 360-ಡಿಗ್ರಿ ಕ್ಯಾಮೆರಾ, ಹಿಂಭಾಗದ ಡಿಸ್ಕ್ ಬ್ರೇಕ್ ಗಳು, ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತವೆ.
BNCAP ವರದಿಗಳು ಅನೇಕ ಇತರ ಹೊಸ ಕಾರು ಮೌಲ್ಯಮಾಪನ ಪ್ರೋಗ್ರಾಮ್ ಗಳಿಗೆ ಹೋಲಿಸಿದರೆ ಎಲೆಕ್ಟ್ರಾನಿಕ್ ಸುರಕ್ಷತಾ ಫೀಚರ್ ಗಳ ಫಲಿತಾಂಶಗಳು ಮತ್ತು ಕಾರ್ಯಕ್ಷಮತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸುವುದಿಲ್ಲ. ಎಲೆಕ್ಟ್ರಿಕ್ SUVಯು ಪ್ರಮಾಣಿತ ESC ಯೊಂದಿಗೆ ಬರುತ್ತದೆ ಮತ್ತು AIS-100 ಪ್ರಕಾರ ಪಾದಚಾರಿ ರಕ್ಷಣೆಯ ವಿವರಗಳನ್ನು ನೀಡುತ್ತದೆ, ಆದರೆ ಈ ಪರೀಕ್ಷೆಗಳಲ್ಲಿ SUV ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಹೆಚ್ಚುವರಿ ವಿವರಗಳನ್ನು ವರದಿಯು ನೀಡುವುದಿಲ್ಲ.
ನೆಕ್ಸಾನ್ EV ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್ EV ಬೆಲೆಯು 14.49 ಲಕ್ಷ ಮತ್ತು 19.49 ಲಕ್ಷದ (ಎಕ್ಸ್ ಶೋರೂಂ ದೆಹಲಿ) ನಡುವೆ ಇದೆ. ನೆಕ್ಸಾನ್ EV ಯನ್ನು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: 30 kWh ಮತ್ತು 40.5 kWh. ಪ್ರತಿಯೊಂದು ಬ್ಯಾಟರಿಯು ತನ್ನದೇ ಆದ ಸಿಂಗಲ್-ಮೋಟಾರ್ ಸೆಟಪ್ ಮತ್ತು ಪರ್ಫಾರ್ಮೆನ್ಸ್ ರೇಟಿಂಗ್‌ಗಳನ್ನು ಹೊಂದಿದೆ. ಇದು ಮಹೀಂದ್ರಾ XUV400 ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಇದು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು MG ZS EV ಯಂತಹ SUV ಗಳಿಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ.
ಇನ್ನಷ್ಟು ಓದಿ: ನೆಕ್ಸಾನ್ EV ಆಟೋಮ್ಯಾಟಿಕ್