Tata Nexon EV Long Range ವರ್ಸಸ್Mahindra XUV400 EV: ವಾಸ್ತವದಲ್ಲಿನ ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ
ಟಾಟಾ ನೆಕ್ಸಾನ್ ಇವಿ ಗಾಗಿ shreyash ಮೂಲಕ ಮಾರ್ಚ್ 21, 2024 06:44 pm ರಂದು ಪ್ರಕಟಿಸಲಾಗಿದೆ
- 36 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ ವೇರಿಯಂಟ್ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ, ಆದರೆ XUV400 EV ಹೆಚ್ಚು ಶಕ್ತಿಯನ್ನು ಹೊಂದಿದೆ.
ಟಾಟಾ ನೆಕ್ಸಾನ್ EV 2023 ರಲ್ಲಿ ಒಂದು ಪ್ರಮುಖ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಇದರಲ್ಲಿ ಉತ್ತಮ ಬ್ಯಾಟರಿ ಪ್ಯಾಕ್ ಮತ್ತು ಹೆಚ್ಚಿನ ರೇಂಜ್ ಗಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್ ಸೇರಿವೆ. ಟಾಟಾದ ಎಲೆಕ್ಟ್ರಿಕ್ ಸಬ್‌ಕಾಂಪ್ಯಾಕ್ಟ್ SUV ಮಹೀಂದ್ರ XUV400 EV ಗೆ ಪ್ರತಿಸ್ಪರ್ಧಿಯಾಗಿದೆ. XUV400 EV ಯು 2024 ರ ಜನವರಿಯಲ್ಲಿ ಒಳಭಾಗ ಮತ್ತು ಕೆಲವು ಫೀಚರ್ ಗಳಿಗೆ ಸೀಮಿತವಾಗಿರುವ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಈ ಎರಡೂ ಎಲೆಕ್ಟ್ರಿಕ್ SUVಗಳ ಆನ್ ರೋಡ್ ಪರ್ಫಾರ್ಮೆನ್ಸ್ ಅನ್ನು ನಾವು ಪರೀಕ್ಷಿಸಿದ್ದೇವೆ ಮತ್ತು ಅವುಗಳ ಹೋಲಿಕೆ ಇಲ್ಲಿದೆ.
ಮೊದಲನೆಯದಾಗಿ, ಎರಡೂ ಎಲೆಕ್ಟ್ರಿಕ್ SUV ಗಳ ಸ್ಪೆಸಿಫಿಕೇಷನ್ ಗಳನ್ನು ನೋಡೋಣ:
ಸ್ಪೆಸಿಫಿಕೇಷನ್ ಗಳು |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
ಮಹೀಂದ್ರ XUV400 EV |
ಬ್ಯಾಟರಿ ಪ್ಯಾಕ್ |
40.5 ಕಿ.ವ್ಯಾಟ್ |
39.4 ಕಿ.ವ್ಯಾಟ್ |
ಪವರ್ |
144 ಪಿಎಸ್ |
150 ಪಿಎಸ್ |
ಟಾರ್ಕ್ |
215 ಎನ್‌ಎಮ್ |
310 ಎನ್‌ಎಮ್ |
ಕ್ಲೇಮ್ ಮಾಡಿರುವ ರೇಂಜ್ |
465 ಕಿ.ಮೀ |
456 ಕಿ.ಮೀ |
ಟಾಟಾ ನೆಕ್ಸಾನ್ EV ಯ ಲಾಂಗ್-ರೇಂಜ್ ವೇರಿಯಂಟ್ ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಮಹೀಂದ್ರಾ XUV400 ನ ಲಾಂಗ್-ರೇಂಜ್ ವೇರಿಯಂಟ್ ಗಿಂತ ಹೆಚ್ಚು ಕ್ಲೇಮ್ ಮಾಡಿರುವ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ. ಆದರೆ, XUV400 EV ನೆಕ್ಸಾನ್ EV ಗಿಂತ ಸ್ವಲ್ಪ ಹೆಚ್ಚು ಪವರ್ ಮತ್ತು ಹೆಚ್ಚಿನ ಟಾರ್ಕ್ ಔಟ್ಪುಟ್ ಅನ್ನು ಹೊಂದಿದೆ. ಎರಡೂ SUV ಗಳು ಮುಂಭಾಗದ ಚಕ್ರಗಳನ್ನು ಡ್ರೈವ್ ಮಾಡುವ ಏಕೈಕ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿವೆ.
ಇದನ್ನು ಕೂಡ ಓದಿ: ಟಾಟಾ ಟಿಯಾಗೊ EV ಈಗ ಹೆಚ್ಚುವರಿ ಅನುಕೂಲಕ್ಕಾಗಿ ಈ 2 ಹೊಸ ಫೀಚರ್ ಗಳನ್ನು ನೀಡಲಿದೆ
ಆಕ್ಸಿಲರೇಷನ್ ಟೆಸ್ಟ್
ಟೆಸ್ಟ್ ಗಳು |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
ಮಹೀಂದ್ರ XUV400 EV |
0 - 100 ಕಿ.ಮೀ ಪ್ರತಿ ಗಂಟೆ |
8.75 ಸೆಕೆಂಡುಗಳು |
8.44 ಸೆಕೆಂಡುಗಳು |
ಕ್ವಾರ್ಟರ್ ಮೈಲ್ |
16.58 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 138.11 ಕಿ.ಮೀ |
16.27 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 138.13 ಕಿ.ಮೀ |
ಕಿಕ್‌ಡೌನ್ (20-80 ಕಿ.ಮೀ ಪ್ರತಿ ಗಂಟೆ) |
5.09 ಸೆಕೆಂಡುಗಳು |
4.71 ಸೆಕೆಂಡುಗಳು |
ಮಹೀಂದ್ರಾ ಎಲೆಕ್ಟ್ರಿಕ್ SUV ಹೆಚ್ಚುವರಿ 95 Nm ಟಾರ್ಕ್ ಅನ್ನು ಹೊಂದಿದ್ದರೂ ಕೂಡ, ಈ EVಗಳ ನಡುವೆ ಆಕ್ಸಿಲರೇಶನ್ ನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ, ಹಾಗೂ ಪ್ರತಿ ಸುತ್ತಿನಲ್ಲಿಯೂ ಮಹೀಂದ್ರಾ SUV ಗೆಲ್ಲುತ್ತದೆ. 0-100 kmph ಸ್ಪ್ರಿಂಟ್‌ನಲ್ಲಿ, XUV400 EV ನೆಕ್ಸಾನ್ EV ಗಿಂತ ಕೇವಲ ಅರ್ಧ ಸೆಕೆಂಡ್ ವೇಗವಾಗಿತ್ತು ಮತ್ತು ಕ್ವಾರ್ಟರ್-ಮೈಲಿಯನ್ನು ಪೂರ್ಣಗೊಳಿಸುವ ಉದ್ದಕ್ಕೂ ಈ ವ್ಯತ್ಯಾಸವನ್ನು ಕಾಯ್ದುಕೊಳ್ಳಲಾಗಿತ್ತು. ಗಂಟೆಗೆ 20 ಕಿಮೀನಿಂದ 80 ಕಿಮೀವರೆಗಿನ ಕಿಕ್‌ಡೌನ್ ಪರೀಕ್ಷೆಯಲ್ಲಿ, XUV400 EV ನೆಕ್ಸಾನ್ EV ಗಿಂತ ಅರ್ಧ ಸೆಕೆಂಡ್ ವೇಗವಾಗಿತ್ತು. ಎರಡಕ್ಕೂ ಕೂಡ ಇಲೆಕ್ಟ್ರಾನಿಕ್ ಆಗಿ ಗರಿಷ್ಠ ವೇಗದ ಮಿತಿಯನ್ನು ಹೊಂದಿಸಲಾಗಿದೆ ಆದರೆ ಮಹೀಂದ್ರಾ ಆಯ್ಕೆಯು ಟಾಟಾ EV ಗಿಂತ ಸ್ವಲ್ಪ ವೇಗವಾಗಿ ಹೋಗಬಹುದು.
ಬ್ರೆಕಿಂಗ್ ಟೆಸ್ಟ್
ಟೆಸ್ಟ್ ಗಳು |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
ಮಹೀಂದ್ರ XUV400 EV |
100 - 0 ಕಿ.ಮೀ ಪ್ರತಿ ಗಂಟೆ |
40.87 ಮೀಟರ್ |
42.61 ಮೀಟರ್ |
80 - 0 ಕಿ.ಮೀ ಪ್ರತಿ ಗಂಟೆ |
25.56 ಮೀಟರ್ |
7.38 ಮೀಟರ್ |
ಬ್ರೇಕಿಂಗ್ ವಿಷಯಕ್ಕೆ ಬಂದಾಗ, ಟಾಟಾ ನೆಕ್ಸಾನ್ EV XUV400 EV ಗಿಂತ ಸ್ವಲ್ಪ ಉತ್ತಮವಾಗಿದೆ. ಗಂಟೆಗೆ 100 ಕಿ.ಮೀ ವೇಗದಿಂದ ನಿಲ್ಲಲು ಬ್ರೇಕ್ ಹಾಕಿದಾಗ, ನೆಕ್ಸಾನ್ EV XUV400 EV ಗಿಂತ 1.74 ಮೀಟರ್ ಕಡಿಮೆ ಮುಂದೆ ಹೋಗುತ್ತದೆ. ಅದೇ ರೀತಿ, ಗಂಟೆಗೆ 80 ಕಿ.ಮೀ ವೇಗದಿಂದ ಸಂಪೂರ್ಣ ನಿಲುಗಡೆಗೆ ಬ್ರೇಕ್ ಹಾಕಿದಾಗ, ನೆಕ್ಸಾನ್ EV XUV400 ಗಿಂತ 1.82 ಮೀಟರ್ ಕಡಿಮೆ ಮುಂದೆ ಹೋಗುತ್ತದೆ.
ನೆಕ್ಸಾನ್ EV ಮತ್ತು XUV400 EV ಎರಡರಲ್ಲೂ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ನೆಕ್ಸಾನ್ EV 16-ಇಂಚಿನ ಅಲೊಯ್ ವೀಲ್ಸ್ ಮೇಲೆ ಸುತ್ತುವ 215 ಸೆಕ್ಷನ್ ಟೈರ್‌ಗಳನ್ನು ಬಳಸುತ್ತದೆ, ಆದರೆ XUV400 EV ಅದೇ 16-ಇಂಚಿನ ಅಲೊಯ್ ವೀಲ್ಸ್ ನಲ್ಲಿ ಕೂಡ 205 ಸೆಕ್ಷನ್ ಟೈರ್‌ಗಳನ್ನು ಹೊಂದಿದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ CNG ಅನ್ನು ಮತ್ತೆ ಟೆಸ್ಟ್ ಮಾಡುವಾಗ ಸ್ಪೈ ಮಾಡಲಾಗಿದೆ, ಶೀಘ್ರದಲ್ಲೇ ಲಾಂಚ್ ಆಗುವ ನಿರೀಕ್ಷೆಯಿದೆ
ಟೇಕ್ಅವೇ
ನೆಕ್ಸಾನ್ EV ಯು ಮಹೀಂದ್ರಾ XUV400 EV ಗಿಂತ ಸ್ವಲ್ಪ ಕಡಿಮೆ ಶಕ್ತಿಯುತವಾಗಿದ್ದರೂ ಕೂಡ, ಆಕ್ಸಿಲರೇಷನ್ ಪರೀಕ್ಷೆಗಳಲ್ಲಿ ಜಾಸ್ತಿ ಹಿಂದೆ ಇರಲಿಲ್ಲ. ಬ್ರೇಕಿಂಗ್ ಪರ್ಫಾರ್ಮೆನ್ಸ್ ಅನ್ನು ನೋಡಿದರೆ, ನೆಕ್ಸಾನ್ EV ಯು XUV400 EV ಗಿಂತ ಸ್ವಲ್ಪ ಉತ್ತಮವಾಗಿದೆ.
ಹಕ್ಕು ನಿರಾಕರಣೆ: ಡ್ರೈವರ್, ಡ್ರೈವಿಂಗ್ ಪರಿಸ್ಥಿತಿಗಳು, ಬ್ಯಾಟರಿಯ ಹೆಲ್ತ್ ಮತ್ತು ತಾಪಮಾನ ಮತ್ತು ಹವಾಮಾನವನ್ನು ಅವಲಂಬಿಸಿ EV ಯ ಪರ್ಫಾರ್ಮೆನ್ಸ್ ಅಂಕಿಅಂಶಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
ಬೆಲೆಗಳು
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
ಮಹೀಂದ್ರ XUV400 EV |
ರೂ. 16.99 ಲಕ್ಷದಿಂದ ರೂ. 19.49 ಲಕ್ಷ (LRಗೆ ಮಾತ್ರ) |
ರೂ. 15.49 ಲಕ್ಷದಿಂದ ರೂ. 19.39 ಲಕ್ಷ |
ಈ ಎರಡೂ EVಗಳನ್ನು MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ EV ಆಟೋಮ್ಯಾಟಿಕ್