2023ರ ಏಪ್ರಿಲ್ ನಲ್ಲಿ ಮಾರಾಟವಾದ 10 ಅತ್ಯುತ್ತಮ ಕಾರು ಬ್ರ್ಯಾಂಡ್‌ಗಳು ಯಾವುವು ಗೊತ್ತೇ ?
ಏಪ್ರಿಲ್ 2023ರಲ್ಲಿ ಮಾರುತಿ ಸುಝುಕಿ, ಟಾಟಾ ಮತ್ತು ಕಿಯಾ ಹೊರತಾಗಿ ಎಲ್ಲಾ ಬ್ರ್ಯಾಂಡ್‌ಗಳ ತಿಂಗಳಿಂದ ತಿಂಗಳ ಬೆಳವಣಿಗೆ ಋಣಾತ್ಮಕವಾಗಿದೆ.
ಏಪ್ರಿಲ್ 2023ರಲ್ಲಿ ಈ ಟಾಪ್ 10 ಬ್ರ್ಯಾಂಡ್‌ಗಳು ಹೇಗೆ ಕಾರ್ಯನಿರ್ವಹಿಸಿವೆ ಎಂಬುದರ ವಿವರ ಇಲ್ಲಿದೆ:
ಬ್ರ್ಯಾಂಡ್‌ಗಳು |
ಏಪ್ರಿಲ್ 2023 |
ಮಾರ್ಚ್ 2023 |
MoM ಬೆಳವಣಿಗೆ (%) |
ಏಪ್ರಿಲ್ 2022 |
YoY ಬೆಳವಣಿಗೆ (%) |
ಮಾರುತಿ ಸುಝುಕಿ |
1,37,320 |
1,32,763 |
3.4% |
1,21,995 |
12.6% |
ಹ್ಯುಂಡೈ |
49,701 |
50,600 |
-1.8% |
44,001 |
13% |
ಟಾಟಾ |
47,010 |
44,047 |
6.7% |
41,590 |
13% |
ಮಹೀಂದ್ರಾ |
34,694 |
35,796 |
-3.6% |
22,122 |
56.8% |
ಕಿಯಾ |
23,216 |
21,501 |
8% |
19,019 |
22.1% |
ಟೊಯೋಟಾ |
14,162 |
18,670 |
-24.1% |
15,085 |
-6.1% |
ಹೋಂಡಾ |
5,313 |
6,692 |
-20.6% |
7,874 |
-32.5% |
MG |
4,551 |
6,051 |
-24.8% |
2,008 |
126.6% |
ರೆನಾಲ್ಟ್ |
4,323 |
5,389 |
-19.8% |
7,594 |
-43.1% |
ಸ್ಕೋಡಾ |
4,009 |
4,432 |
-9.5% |
5,152 |
-22.1 |
ಪ್ರಮುಖ ಸಾರಾಂಶಗಳು
-
ಮಾರುತಿಯು ಮಾರಾಟ ಚಾರ್ಟ್‌ನಲ್ಲಿ ಮುಂಚೂಣಿಯಲ್ಲಿದ್ದು ಇದು ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಸಹಯೋಗಕ್ಕಿಂತ ಹೆಚ್ಚಿನ ಮಾಡೆಲ್‌ಗಳನ್ನು ಮಾರಾಟ ಮಾಡಿದೆ. ಈ ಕಾರು ತಯಾರಕರ ತಿಂಗಳಿಂದ ತಿಂಗಳ (MoM) ಬೆಳವಣಿಗೆ 3 ಪ್ರತಿಶತ ಆಗಿದ್ದು, ಇದರ ವರ್ಷದಿಂದ ವರ್ಷದ (YoY) ಬೆಳವಣಿಗೆ ಸುಮಾರು 12.5 ಪ್ರತಿಶತದಷ್ಟು ಇದೆ.
-
ಎರಡನೇ ಸ್ಥಾನದಲ್ಲಿರುವ ಹ್ಯುಂಡೈ, MoM ಮಾರಾಟದಲ್ಲಿ 2 ಪ್ರತಿಶತ ಇಳಿಕೆಯನ್ನು ಕಂಡಿತು. ಆದಾಗ್ಯೂ, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ,ಇದರ ಮಾರಾಟವು 13ಪ್ರ ತಿಶತದಷ್ಟು ಹೆಚ್ಚಿದೆ.
ಇದನ್ನೂ ಓದಿ: ಭಾರತದ ಲೀಥಿಯಮ್ ನಿಕ್ಷೇಪ ಈಗ ದೊಡ್ಡದಾಗಿದೆ
-
ಟಾಟಾ ಮತ್ತೊಮ್ಮೆ ಹ್ಯುಂಡೈಗಿಂತಲೂ ಅಗ್ರಸ್ಥಾನದಲ್ಲಿದ್ದು MoM ಮಾರಾಟದಲ್ಲಿ 6.5 ಪ್ರತಿಶತ ಬೆಳವಣಿಗೆ ಮತ್ತು YoY ಮಾರಾಟದಲ್ಲಿ 13 ಪ್ರತಿಶತ ಬೆಳವಣಿಗೆಗೆ ಸಾಕ್ಷಿಯಾಗಿದೆ.
-
MoM ಮಾರಾಟದಲ್ಲಿ ಸುಮಾರು 3.5 ಪ್ರತಿಶತದ ತುಸು ಇಳಿಕೆಯನ್ನು ಕಂಡು ನಾಲ್ಕನೇ ಸ್ಥಾನದಲ್ಲಿರುವ ಮಹೀಂದ್ರಾ MoM ಮಾರಾಟದಲ್ಲಿ 3.5 ಪ್ರತಿಶತ ಇಳಿಕೆಯನ್ನು ಕಂಡಿದ್ದು, YoY ಬೆಳವಣಿಗೆಯಲ್ಲಿ 50 ಪ್ರತಿಶತಕ್ಕೂ ಮಿಗಿಲಾಗಿ ದಾಖಲಿಸಿದೆ.
ಇದನ್ನೂ ಓದಿ: ರೂ.10 ಲಕ್ಷದೊಳಗಿನ 6 ಏರ್‌ಬ್ಯಾಗ್‌ಗಳಿರುವ 5 ಕಾರುಗಳ ವಿವರ ಇಲ್ಲಿದೆ
-
ಕಿಯಾ ತನ್ನ ಹಿಂದಿನ ತಿಂಗಳ ಮಾರಾಟಕ್ಕೆ ಹೊಲಿಸಿದರೆ 8 ಪ್ರತಿಶತದಷ್ಟು MoM ಬೆಳವಣಿಗೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಮಾರುತಿ, ಟಾಟಾ ಮತ್ತು ಕಿಯಾಗೆ ಹೊರತುಪಡಿಸಿದರೆ, ಇದು MoM ಮತ್ತು YoY ಸಂಖ್ಯೆಗಳಲ್ಲಿನ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಏಕಮಾತ್ರ ಕಾರುತಯಾರಕ ಸಂಸ್ಥೆಯಾಗಿದೆ.
-
ಮಾರ್ಚ್‌ಗೆ ಹೋಲಿಸಿದರೆ, ಏಪ್ರಿಲ್ 2023 ಟೊಯೋಟಾ 4,500 ಯೂನಿಟ್‌ಗಳಷ್ಟು ಮಾರಾಟದಲ್ಲಿ ಇಳಿಕೆಯನ್ನು ಕಂಡಿದ್ದು, ಇದರ ವಾರ್ಷಿಕ ಮಾರಾಟವು (ಅದೇ ತಿಂಗಳಿನಲ್ಲಿ) 900 ಯೂನಿಟ್‌ಗಳಿಗಿಂತಲೂ ಹೆಚ್ಚಿನ ಇಳಿಕೆಯನ್ನು ಕಂಡಿದೆ.
-
ಹೋಂಡಾ ಕೂಡಾ ತನ್ನ ಎರಡೂ ಮಾರಾಟ ಅಂಕಿಗಳಲ್ಲಿ ಇಳಿಕೆಯನ್ನು ಕಂಡಿದೆ. ಇದು MoM ಮಾರಾಟದಲ್ಲಿ ಸುಮಾರು 20.5 ರಷ್ಟು ನಷ್ಟವನ್ನು ಎದುರಿಸಿದ್ದು, YoY ಮಾರಾಟದಲ್ಲಿ 32.5 ಇಳಿಕೆಯನ್ನು ಕಂಡಿದೆ.
-
MGಯ MoM ಮಾರಾಟವು ಸುಮಾರು 25 ಪ್ರತಿಶತದಷ್ಟು ಇಳಿಕೆಯನ್ನು ಕಂಡಿದ್ದರೆ, ಅದೇ ಸಮಯದಲ್ಲಿ ಇದರ YoY ಮಾರಾಟದಲ್ಲಿ ಸುಮಾರು 126.5ರ ಭಾರಿ ಹೆಚ್ಚಳವನ್ನು ಕಂಡಿದೆ.
-
ಒಂಭತ್ತನೇ ಸ್ಥಾನದಲ್ಲಿರುವ ರೆನಾಲ್ಟ್ MoM ಮಾರಾಟ ಸಂಖ್ಯೆಯು 1,000 ಯೂನಿಟ್‌ಗಳಿಗಿಂತಲೂ ಹೆಚ್ಚಿನ ಕುಸಿತ ಕಂಡಿದೆ. ಹಿಂದಿನ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಇದು ಸುಮಾರು 3,000ದಷ್ಟು ಕಡಿಮೆ ಮಾರಾಟ ಹೊಂದಿದ್ದು ಇದರ YoY ಅಂಕಿಯು ಇಲ್ಲಿ ಸುಮಾರು 43 ಪ್ರತಿಶತದ ದೊಡ್ಡ ಕುಸಿತವನ್ನು ಕಂಡಿದೆ.
-
-
ಈ ಪಟ್ಟಿಯಲ್ಲಿ ಸ್ಕೋಡಾ MoM ಮಾರಾಟದಲ್ಲಿನ 9.5 ಪ್ರತಿಶತದಷ್ಟು ಕುಸಿತವನ್ನು ಎದುರಿಸಿದ್ದು, ಇದರ ವಾರ್ಷಿಕ ಮಾರಾಟವು 22 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.