2023 ರ ಫೆಬ್ರವರಿಯಲ್ಲಿ ಅತ್ಯಧಿಕ ಮಾರಾಟವಾದ 10 ಕಾರು ಬ್ರ್ಯಾಂಡ್‌ಗಳು ಯಾವುವು ಗೊತ್ತಾ?
ಮಾರ್ಚ್ 11, 2023 09:25 pm ರಂದು ansh ಮೂಲಕ ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ತನ್ನ ಗೆಲುವಿನ ಸರಣಿಯನ್ನು ಕಾಯ್ದುಕೊಂಡಿದ್ದರೆ, ಹ್ಯುಂಡೈ ಟಾಟಾಗಿಂತ ಅತ್ಯಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಹೆಚ್ಚಿನ ಕಾರು ತಯಾರಕರು ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗಿದ್ದರಿಂದ ಭಾರತೀಯ ಕಾರು ಮಾರುಕಟ್ಟೆಯ ಜನವರಿಯ ಮಾರಾಟದಲ್ಲಿ ಏರಿಕೆ ಕಂಡಿದೆ. ಆದಾಗ್ಯೂ, ಹೆಚ್ಚಿನ ಬ್ರ್ಯಾಂಡ್‌ಗಳಿಗೆ ತಿಂಗಳಿನಿಂದ ತಿಂಗಳ (MoM) ಬೆಳವಣಿಗೆಯ ಕುಸಿತದ ಆಧಾರದಲ್ಲಿ ಫೆಬ್ರವರಿ ಮೊದಲ ತಿಂಗಳಿಗಿಂತ ಉತ್ತಮವಾಗಿಲ್ಲ.
ಇದನ್ನೂ ಓದಿ: ಫೆಬ್ರವರಿ 2023 ರಲ್ಲಿ ಮಾರುತಿ ಸುಜುಕಿ ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ ಬಗೆ ಇಲ್ಲಿದೆ
ಫೆಬ್ರವರಿ 2023 ರಲ್ಲಿ ಟಾಪ್ 10 ಬ್ರ್ಯಾಂಡ್‌ಗಳು ಮಾರಾಟ ಎಷ್ಟಿತ್ತು ಎಂಬುದನ್ನು ಕೆಳಗೆ ನೀಡಲಾಗಿದೆ:
ಕಾರು ತಯಾರಕರು |
ಫೆಬ್ರವರಿ 2023 |
ಜನವರಿ 2023 |
MoM ಬೆಳವಣಿಗೆ (%) |
ಫೆಬ್ರವರಿ 2022 |
YoY ಬೆಳವಣಿಗೆ (%) |
ಮಾರುತಿ ಸುಜುಕಿ |
1,47,467 |
1,47,348 |
0.1% |
1,33,948 |
10.1% |
ಹ್ಯುಂಡೈ |
46,968 |
50,106 |
-6.3% |
44.050 |
6.6% |
ಟಾಟಾ |
42,865 |
47,990 |
-10.7% |
39.980 |
7.2% |
ಮಹೀಂದ್ರಾ |
30,221 |
33,040 |
-8.5% |
27,536 |
9.8% |
ಕಿಯಾ |
24,600 |
28,634 |
-14.1% |
18,121 |
35.8% |
ಟೊಯೋಟಾ |
15,267 |
12,728 |
19.9% |
8,745 |
74.6% |
ರೆನಾಲ್ಟ್ |
6,616 |
3,008 |
119.9% |
6,568 |
0.7% |
ಹೋಂಡಾ |
6,086 |
7,821 |
-22.2% |
7,187 |
-15.3% |
ಎಂಜಿ |
4,193 |
4,114 |
1.9% |
4,528 |
-7.4% |
ಸ್ಕೋಡಾ |
3,418 |
3,818 |
-10.5% |
4,503 |
-24.1% |
ಸಾರಾಂಶ
- ಮಾರುತಿಯು ವರ್ಷದಿಂದ ವರ್ಷಕ್ಕೆ (YoY) 10 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದರೂ, ಅದರ ತಿಂಗಳಿನಿಂದ ತಿಂಗಳಿನ ಬೆಳವಣಿಗೆ ಕೇವಲ 0.1 ಶೇಕಡಾ ಆಗಿದೆ. 44 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಮಾರುತಿಯು ಫೆಬ್ರವರಿ 2023 ರಲ್ಲಿ ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಕಂಪನಿಗಳಿಗಿಂತ ಹೆಚ್ಚು ಮಾರಾಟವಾಗಿದೆ.
- ಹ್ಯುಂಡೈನ ವರ್ಷದಿಂದ ವರ್ಷಕ್ಕೆ ಮಾರಾಟವು ಶೇಕಡಾ 6.6 ರಷ್ಟು ಹೆಚ್ಚಾಗಿದ್ದರೂ, ತಿಂಗಳಿನಿಂದ ತಿಂಗಳಿನ ಮಾರಾಟವು ಶೇಕಡಾ 6.3 ರಷ್ಟು ಕಡಿಮೆಯಾಗಿದೆ.
- ಟಾಟಾ ಮಾಸಿಕ ಮಾರಾಟದಲ್ಲಿ ಶೇಕಡಾ 10.7 ರಷ್ಟು ಕುಸಿತವನ್ನು ಕಂಡಿದ್ದರೂ ಅದರ ವಾರ್ಷಿಕ ಮಾರಾಟವು ಶೇಕಡಾ 7 ರಷ್ಟು ಏರಿಕೆಯಾಗಿದೆ.
- ಮಹೀಂದ್ರಾದ ಮಾಸಿಕ ಮಾರಾಟವು ಶೇಕಡಾ 8.5 ರಷ್ಟು ಕಡಿಮೆಯಾಗಿದ್ದರೂ, ಅದರ ವಾರ್ಷಿಕ ಮಾರಾಟ ಶೇಕಡಾ 10ರಷ್ಟು ಏರಿಕೆಯನ್ನು ಕಂಡಿದೆ.
- ಕಿಯಾದ ವಾರ್ಷಿಕ ಮಾರಾಟವು ಶೇಕಡಾ 36 ರಷ್ಟು ಹೆಚ್ಚಳವನ್ನು ಕಂಡಿದ್ದರೂ, ಅದರ ಮಾಸಿಕ ಮಾರಾಟವು ಶೇಕಡಾ 14 ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ.
- ವಾರ್ಷಿಕ ಮತ್ತು ಮಾಸಿಕ ಮಾರಾಟಗಳಲ್ಲಿ ಕ್ರಮವಾಗಿ ಶೇಕಡಾ 19.9 ಮತ್ತು ಶೇಕಡಾ 74.6 ರಷ್ಟು ಬೆಳವಣಿಗೆಯನ್ನು ಕಂಡಿರುವ ಎರಡು ಬ್ರ್ಯಾಂಡ್‌ಗಳಲ್ಲಿ ಟೊಯೋಟಾ ಒಂದಾಗಿದೆ. ಈ ಪಟ್ಟಿಯಲ್ಲಿ 10,000 ಯೂನಿಟ್-ಮಾರಾಟದ ಗುರಿಯನ್ನು ತಲುಪಿರುವ ಕೊನೆಯ ಬ್ರ್ಯಾಂಡ್ ಇದಾಗಿದೆ.
-
ಫೆಬ್ರವರಿ 2023 ರಲ್ಲಿ ಮಾರಾಟದಲ್ಲಿ ಹೆಚ್ಚಳವನ್ನು ಕಂಡಿರುವ ಇನ್ನೊಂದು ಬ್ರ್ಯಾಂಡ್ ರೆನಾಲ್ಟ್ ಆಗಿದೆ. ಇದು ಮಾಸಿಕ ಮಾರಾಟದಲ್ಲಿ ಶೇಕಡಾ 119.9 ಜಿಗಿತದೊಂದಿಗೆ ಏಳನೇ ಅತ್ಯುತ್ತಮ ಮಾರಾಟವಾದ ಬ್ರ್ಯಾಂಡ್‌ಗೆ ಶ್ರೇಯಾಂಕವನ್ನು ಪಡೆದುಕೊಂಡಿದೆ.
-
ಮಾಸಿಕ ಮಾರಾಟದಲ್ಲಿ ಹೋಂಡಾ ಶೇಕಡಾ 22 ಕ್ಕಿಂತ ಹೆಚ್ಚು ನಷ್ಟಕ್ಕೆ ಗುರಿಯಾಗಿರುವುದರೊಂದಿಗೆ ವಾರ್ಷಿಕ ಮಾರಾಟದಲ್ಲಿ ಶೇಕಡಾ 15 ಕ್ಕಿಂತ ಹೆಚ್ಚಿನ ನಷ್ಟವನ್ನು ಅನುಭವಿಸಿದೆ.
- ಮಾಸಿಕ ಮಾರಾಟದಲ್ಲಿ ಎಂಜಿ ಶೇಕಡಾ 1.9 ಏರಿಕೆಗೆ ಸಾಕ್ಷಿಯಾಗಿದ್ದರೂ, ಅದರ ವಾರ್ಷಿಕ ಮಾರಾಟವು ಶೇಕಡಾ 7.4 ರಷ್ಟು ಕಡಿಮೆಯಾಗಿದೆ.
- ಸ್ಕೋಡಾದ ಮಾಸಿಕ ಮಾರಾಟವು ಶೇಕಡಾ 10.5 ರಷ್ಟು ಮತ್ತು ಅದರ ವಾರ್ಷಿಕ ಮಾರಾಟವು ಶೇಕಡಾ 24.1 ರಷ್ಟು ಕುಸಿತವನ್ನು ಕಂಡಿವೆ.
-
ಒಟ್ಟಾರೆಯಾಗಿ, ಜನವರಿ 2023 ಕ್ಕೆ ಹೋಲಿಸಿದರೆ ಪ್ರಯಾಣಿಕ ವಾಹನ ಉದ್ಯಮದ ಮಾಸಿಕ ಮಾರಾಟವು ಶೇಕಡಾ ಮೂರಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಿಮ್ಮ ಹೋಳಿಯನ್ನು ಸಂಭ್ರಮ ಹೆಚ್ಚಿಸಲಿವೆ ಈ 8 ಕಾರುಗಳು ಮತ್ತು ಅವುಗಳ ವರ್ಣರಂಜಿತ ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳು
0 out of 0 found this helpful