ಕಾರ್ ದೇಖೋದಲ್ಲಿರುವ 2023 ರ ಟಾಪ್ 10 ಟ್ರೆಂಡಿಂಗ್ ಕಾರ್ ಬ್ರ್ಯಾಂಡ್‌ಗಳು
ಜನವರಿ 02, 2024 12:02 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ, ಹ್ಯುಂಡೈ ಮತ್ತು ಟಾಟಾ ಈ ವರ್ಷ ಹೆಚ್ಚು ಸರ್ಚ್ ಮಾಡಲಾಗಿರುವ ಕಾರು ಬ್ರಾಂಡ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಾಧಿಸಿವೆ.
2023 ರಲ್ಲಿ, ಹೆಚ್ಚಿನ ಕಾರ್ ದೇಖೋ ಬಳಕೆದಾರರು ಮಾರುತಿ, ಹ್ಯುಂಡೈ ಮತ್ತು ಟಾಟಾ ಮಾಡೆಲ್ ಗಳ ಮೇಲೆ ಒಲವನ್ನು ತೋರಿಸಿದ್ದಾರೆ, ಆ ಮೂಲಕ ಕಾರ್ ದೇಖೋದಲ್ಲಿ ಹೆಚ್ಚು ಸರ್ಚ್ ಮಾಡಲಾಗಿರುವ ಕಾರ್ ಬ್ರಾಂಡ್‌ಗಳ ಪಟ್ಟಿಯಲ್ಲಿ ಅವುಗಳನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಬ್ರಾಂಡ್ ಅನ್ನು ಇದು ಹೋಲುತ್ತದೆ ಮತ್ತು ಟಾಪ್ 3 ಯ ನಂತರ ಮಹೀಂದ್ರಾ ಮತ್ತು ಕಿಯಾ ಬ್ರಾಂಡ್ ಗಳು ಬೇಡಿಕೆಯಲ್ಲಿವೆ. ನಿಮ್ಮ ಸರ್ಚ್ ಗಳ ಆಧಾರದ ಮೇಲೆ, ನಾವು 2023 ರಲ್ಲಿ ಕಾರ್ ದೇಖೋದಲ್ಲಿ ಟಾಪ್ 10 ಅತ್ಯಂತ ಜನಪ್ರಿಯ ಕಾರ್ ಬ್ರ್ಯಾಂಡ್‌ಗಳ ಪಟ್ಟಿಯನ್ನು ಮಾಡಿದ್ದೇವೆ.
-
ಮಾರುತಿ ಸುಜುಕಿ
ಭಾರತದ ಅತಿ ದೊಡ್ಡ ಆಟೋಮೊಬೈಲ್ ತಯಾರಕರು ಮತ್ತು ಹೆಚ್ಚು ಮಾರಾಟವಾಗುವ ಕಾರ್ ಬ್ರಾಂಡ್ ಆಗಿರುವ ಮಾರುತಿ ಸುಜುಕಿ, 2023 ರಲ್ಲಿ ಹೆಚ್ಚು ಸರ್ಚ್ ಮಾಡಲಾದ ಕಾರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತು. ಇದು ಈ ವರ್ಷ ಮಾರುತಿ ಫ್ರಾಂಕ್ಸ್, ಮಾರುತಿ ಜಿಮ್ನಿ ಮತ್ತು ಮಾರುತಿ ಇನ್ವಿಕ್ಟೊ ಸೇರಿದಂತೆ 3 ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಸುದ್ದಿಯಲ್ಲಿದೆ. ಅದೇ ರೀತಿ, ಮಾರುತಿ ಸ್ವಿಫ್ಟ್, ಮಾರುತಿ ವ್ಯಾಗನ್ R, ಮತ್ತು ಮಾರುತಿ ಬಲೆನೊದಂತಹ ಜನಪ್ರಿಯ ಮಾಡೆಲ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಾಗಿ ಪ್ರಾಬಲ್ಯವನ್ನು ಮುಂದುವರೆಸಿದವು. ಮಾರುತಿ ಸುಜುಕಿಯು ಹೊಸ ಜನರೇಷನ್ ನ ಸ್ವಿಫ್ಟ್ ಮತ್ತು ಭಾರತದಲ್ಲಿ ಅದರ ಮೊಟ್ಟ ಮೊದಲ EV ಕಾರನ್ನು ಮಾರುತಿ eVX ರೂಪದಲ್ಲಿ 2024 ರಲ್ಲಿ ಪರಿಚಯಿಸಲು ನೋಡುತ್ತಿದೆ.
-
ಹುಂಡೈ
ಕಾರ್ ದೇಖೋದಲ್ಲಿ ಹುಂಡೈ ಭಾರತದ ಎರಡನೇ ಅತ್ಯಂತ ಜನಪ್ರಿಯ ಕಾರ್ ಬ್ರಾಂಡ್ ಆಗಿತ್ತು. 2023 ರಲ್ಲಿ ಪ್ರತಿ ತಿಂಗಳ ಕಾರು ಮಾರಾಟದಲ್ಲಿ ಹುಂಡೈ ಸತತವಾಗಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷ, ಹುಂಡೈ 3 ಹೊಸ ಮಾಡೆಲ್ ಗಳನ್ನು ಸಹ ಪರಿಚಯಿಸಿತು: ಹುಂಡೈ ಅಯೋನಿಕ್ 5, ಹೊಸ ಜನರೇಷನ್ ನ ಹುಂಡೈ ವೆರ್ನಾ ಮತ್ತು ಹುಂಡೈ ಎಕ್ಸ್‌ಟರ್. ಇತ್ತೀಚೆಗೆ, ಹ್ಯುಂಡೈ ಎಕ್ಸ್‌ಟರ್ ಪ್ರತಿಷ್ಠಿತ ಪ್ರಶಸ್ತಿಯಾದ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) 2024 ಅನ್ನು ಸಹ ಗೆದ್ದಿದೆ.
ನೀವು ಇದನ್ನು ಕೂಡ ಓದಬಹುದು: 2023 ರಲ್ಲಿ ಕಾರ್ ದೇಖೋದಲ್ಲಿ ಟಾಪ್ 10 ಜನಪ್ರಿಯ ಕಾರುಗಳು (ನೀವು ಸರ್ಚ್ ಮಾಡಿರುವ ಆಧಾರದ ಮೇಲೆ)
-
ಟಾಟಾ ಮೋಟಾರ್ಸ್
ಭಾರತೀಯ ಕಾರು ತಯಾರಕರಾದ, ಟಾಟಾ, 2023 ರಲ್ಲಿ ಕಾರ್ ದೇಖೋದಲ್ಲಿ ಮೂರನೇ ಅತಿ ಹೆಚ್ಚು ಸರ್ಚ್ ಮಾಡಲಾಗಿರುವ ಕಾರ್ ಬ್ರ್ಯಾಂಡ್ ಆಗಿದೆ. ಫೇಸ್ ಲಿಫ್ಟ್ ಆಗಿರುವ ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯಂತಹ ಹೊಚ್ಚ ಹೊಸ ಕಾರುಗಳೊಂದಿಗೆ ಟಾಟಾ ಕಾರುಗಳ ಮಾಡೆಲ್ ಗಳು ಈ ವರ್ಷ ಹೆಚ್ಚು ಆಕರ್ಷಕವಾಗಿದೆ. ಹಾಗೆ ನೋಡಿದರೆ, ನೆಕ್ಸಾನ್ (ಕಂಬಾಷನ್-ಎಂಜಿನ್ ಮತ್ತು EV ವರ್ಷನ್ ಗಳು ಎರಡೂ ಸೇರಿ) ತನ್ನ ಸೆಗ್ಮೆಂಟ್ ನಲ್ಲಿ ಮಾತ್ರವಲ್ಲದೆ ಟಾಟಾ ಕಾರುಗಳ ಒಟ್ಟು ಎಲ್ಲಾ ಮಾಡೆಲ್ ಗಳಲ್ಲಿ ಸಹ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 2024 ರಲ್ಲಿ, ಟಾಟಾ ಹೊಸ SUV ಗಳನ್ನು ಬಿಡುಗಡೆ ಮಾಡಲು ರೆಡಿಯಾಗಿದೆ, ಇದರಲ್ಲಿ ಟಾಟಾ ಕರ್ವ್ವ್/ಕರ್ವ್ವ್ EV, ಟಾಟಾ ಪಂಚ್ EV, ಮತ್ತು ಟಾಟಾ ಹ್ಯಾರಿಯರ್ EV ಯಂತಹ ಹೆಚ್ಚು ನಿರೀಕ್ಷಿತ ಮಾಡೆಲ್ ಗಳು ಸೇರಿವೆ.
-
ಮಹೀಂದ್ರಾ
2023 ರಲ್ಲಿ, ಮಹೀಂದ್ರಾ ತನ್ನ ಮಹೀಂದ್ರಾ XUV400 EV ಎಂಬ ಒಂದೇ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆದರೂ ಕೂಡ, ಮಹೀಂದ್ರ ಥಾರ್ ಮತ್ತು ಮಹೀಂದ್ರ ಸ್ಕಾರ್ಪಿಯೊ Nನಂತಹ SUV ಗಳ ಕಾರಣದಿಂದಾಗಿ ಇದು ಕಾರ್ ದೇಖೋದಲ್ಲಿ ಈ ವರ್ಷದ ನಾಲ್ಕನೇ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿತ್ತು. ಮುಂಬರುವ ಥಾರ್ 5-ಡೋರ್ ಬಗ್ಗೆ ಸಾಕಷ್ಟು ಉತ್ಸಾಹ ಗ್ರಾಹಕರಲ್ಲಿದೆ, ಇದನ್ನು 2023 ರಲ್ಲಿ ಅನೇಕ ಬಾರಿ ಗುಟ್ಟಾಗಿ ಟೆಸ್ಟ್ ಮಾಡಲಾಗಿದೆ ಮತ್ತು 2024 ರಲ್ಲಿ ಮಾರುಕಟ್ಟೆಗೆ ಬರಲಿದೆ. ಆಗಸ್ಟ್ 2023 ರಲ್ಲಿ, ಮಹೀಂದ್ರಾ ಥಾರ್‌ನ ಎಲೆಕ್ಟ್ರಿಕ್ ವರ್ಷನ್ ನಂತಹ ಹೊಸ SUVಗಳನ್ನು ಮತ್ತು ಸ್ಕಾರ್ಪಿಯೋ N ಆಧಾರಿತ ಪಿಕಪ್ ಅನ್ನು ಕೂಡ ಪ್ರದರ್ಶಿಸಿತು.
-
ಟೊಯೋಟಾ
ಜಪಾನಿನ ವಾಹನ ತಯಾರಕರಾದ ಟೊಯೋಟಾ, 2023 ರಲ್ಲಿ ಕಾರ್ ದೇಖೋದಲ್ಲಿ ಮಹತ್ವದ ಗಮನವನ್ನು ಸೆಳೆಯಿತು. ಟೊಯೊಟಾ ಮಾರುತಿ ಎರ್ಟಿಗಾದ ರೀಬ್ಯಾಡ್ಜ್ ವರ್ಷನ್ ಆದ ಟೊಯೊಟಾ ರೂಮಿಯನ್ MPV ಅನ್ನು ಪರಿಚಯಿಸಿತು. ಈ ಬ್ರಾಂಡ್ ಟೊಯೋಟಾ ಇನ್ನೋವಾ ಹೈಕ್ರಾಸ್, ಕ್ರಿಸ್ಟಾ MPV ಮತ್ತು ಟೊಯೋಟಾ ಫಾರ್ಚೂನರ್ SUV ಗಳಂತಹ ಅದರ ಪ್ರೀಮಿಯಂ ಕಾರುಗಳ ಕೊಡುಗೆಗಳಿಂದಾಗಿ ಗ್ರಾಹಕರಲ್ಲಿ ಮನೆಮಾತಾಗಿದೆ.
ನೀವು ಇದನ್ನು ಕೂಡ ಓದಬಹುದು: ಇವು 2023 ರ ನಿಮ್ಮ ಮೆಚ್ಚಿನ (ಹೆಚ್ಚು ವೀಕ್ಷಿಸಿದ) ಕಾರ್ ದೇಖೋ ವೀಡಿಯೊಗಳಾಗಿವೆ
-
ಕಿಯಾ
ಹೊಸದಾಗಿ, ಅಂದರೆ 2020 ರಲ್ಲಿ ಅಷ್ಟೇ ಭಾರತಕ್ಕೆ ಬಂದ ಕಿಯಾ 2023 ರಲ್ಲಿ ಕಾರ್ ದೇಖೋದಲ್ಲಿ ಆರನೇ ಅತಿ ಹೆಚ್ಚು ಸರ್ಚ್ ಮಾಡಲಾಗಿರುವ ಕಾರ್ ಬ್ರ್ಯಾಂಡ್ ಆಗಿದೆ. ಕೊರಿಯನ್ ವಾಹನ ತಯಾರಕರಾದ ಕಿಯಾ ಇಲ್ಲಿ ಕೇವಲ 3 ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ ಮತ್ತು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ 2023 ರ ಮಧ್ಯದಲ್ಲಿ ಹೊರತರಲಾಯಿತು. ಡಿಸೆಂಬರ್‌ನಲ್ಲಿ, ಕಿಯಾ ಸೋನೆಟ್‌ನ ಅಪ್ಡೇಟ್ ಆಗಿರುವ ವರ್ಷನ್ ಅನ್ನು ಬಿಡುಗಡೆಗೆ ಮುಂಚೆ ಅನಾವರಣಗೊಳಿಸಲಾಯಿತು. ಈ ಎರಡೂ ಕಾರುಗಳು, ತಮ್ಮ ಫೇಸ್‌ಲಿಫ್ಟ್ ಆಗಿರುವ ವರ್ಷನ್ ನಲ್ಲಿ, ಈಗ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ ಗಳೊಂದಿಗೆ ಬರುತ್ತಿವೆ. ಹಾಗೆಯೆ, ಕಿಯಾ ಕ್ಯಾರೆನ್ಸ್ MPV ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಎಕ್ಸ್-ಲೈನ್ ಮ್ಯಾಟ್ ಶೇಡ್ ಸೇರಿದಂತೆ ಹಲವಾರು ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಕಿಯಾ ಕಾರುಗಳು ಅವುಗಳ ವ್ಯಾಪಕವಾದ ಫೀಚರ್ ಗಳು, ವಿವಿಧ ಪವರ್‌ಟ್ರೇನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದೆ.
-
ಹೋಂಡಾ
2023 ರಲ್ಲಿ, ಹೋಂಡಾ ತನ್ನ ಕಾಂಪ್ಯಾಕ್ಟ್ ಸೆಡಾನ್ ಹೋಂಡಾ ಸಿಟಿಗೆ ಮಿಡ್‌ಲೈಫ್ ಅಪ್ಡೇಟ್ ಅನ್ನು ನೀಡಿತು, ಅದರ ಜೊತೆಗೆ ಸುಮಾರು 7 ವರ್ಷಗಳ ನಂತರ, ಜಪಾನಿನ ವಾಹನ ತಯಾರಕ ತನ್ನ ಹೊಸ ಕಾರು ಹೋಂಡಾ ಎಲಿವೇಟ್ ಕಾಂಪ್ಯಾಕ್ಟ್ SUV ಅನ್ನು ಭಾರತದಲ್ಲಿ ಪರಿಚಯಿಸಿತು. ಹೋಂಡಾ ಸಿಟಿಯು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಹೊಂದಿರುವ ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರುಗಳಲ್ಲಿ ಒಂದಾಗಿದೆ. ಇದಲ್ಲದೆ, ಬಲಿಷ್ಠ ಹೈಬ್ರಿಡ್ ಪವರ್‌ಟ್ರೇನ್‌ನ ಆಯ್ಕೆಯನ್ನು ನೀಡುತ್ತಿರುವ ಭಾರತದಲ್ಲಿನ ಮೂರು ಮಾಸ್-ಮಾರ್ಕೆಟ್ ಕಾರ್ ಬ್ರಾಂಡ್‌ಗಳಲ್ಲಿ ಹೋಂಡಾ ಒಂದಾಗಿದೆ.
-
MG
2023 ರಲ್ಲಿ, MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್‌ಗಳನ್ನು ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದರ ಜೊತೆಗೆ, ಈ ವರ್ಷ MG ಕಾಮೆಟ್ EV ಎಂಬ ಹೆಸರಿನ ಕೈಗೆಟುಕುವ ಬೆಲೆಯ ಮತ್ತು ಅದ್ಬುತ ಡಿಸೈನ್ ನ ಅತ್ಯಂತ ಮಹತ್ವದ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದರ ಮಧ್ಯೆ, ಗ್ಲೋಸ್ಟರ್ ಮತ್ತು ಆಸ್ಟರ್ SUVಗಳ ಹೊಸ ಬ್ಲ್ಯಾಕ್ ಸ್ಟಾರ್ಮ್ ವರ್ಷನ್ ಗಳ ಬಿಡುಗಡೆಯ ಮೂಲಕ MG ತನ್ನ ಗ್ರಾಹಕರಲ್ಲಿ ಉತ್ಸಾಹವನ್ನು ಮೂಡಿಸಲು ಪ್ರಯತ್ನಿಸಿತು.
-
ಸ್ಕೋಡಾ
2023 ರಲ್ಲಿ ಸ್ಕೋಡಾ ತನ್ನ ಯಾವುದೇ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿಲ್ಲ. ಆದರೆ ಸ್ಲಾವಿಯಾ ಮತ್ತು ಕುಶಾಕ್‌ನ ಹೊಸ ವರ್ಷನ್ ಗಳನ್ನು ಪರಿಚಯಿಸುವ ಮೂಲಕ ಕಾರ್ ದೇಖೋದಲ್ಲಿ ಸರ್ಚ್ ಗೆ ಕಾರಣವಾಯಿತು. ಅದರ ಜೊತೆಗೆ ಬ್ರಾಂಡ್ ತನ್ನ ಐಕಾನಿಕ್ ಪ್ರೀಮಿಯಂ ಸೆಡಾನ್ ಮಾದರಿಗಳಾದ ಆಕ್ಟೇವಿಯಾ ಮತ್ತು ಸುಪರ್ಬ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿತು.
-
ಮರ್ಸಿಡೀಸ್-ಬೆಂಜ್
ಜರ್ಮನ್ ಐಷಾರಾಮಿ ಕಾರು ತಯಾರಕರಾದ ಮರ್ಸಿಡಿಸ್-ಬೆಂಜ್, 2023 ರಲ್ಲಿ ಕಾರ್ ದೇಖೋದಲ್ಲಿ 10 ನೇ ಅತಿ ಹೆಚ್ಚು ಸರ್ಚ್ ಮಾಡಲಾದ ಬ್ರ್ಯಾಂಡ್ ಆಗಿತ್ತು. ಇದು ಹೊಸ-ಜನರೇಷನ್ ಮರ್ಸಿಡೀಸ್-ಬೆಂಜ್ GLC, GLE ಫೇಸ್‌ಲಿಫ್ಟ್, ಮರ್ಸಿಡೀಸ್-AMG GT63 SE ಪರ್ಫಾರ್ಮೆನ್ಸ್, ಮರ್ಸಿಡೀಸ್-AMG SL 55 ರೋಡ್‌ಸ್ಟರ್, ಮರ್ಸಿಡೀಸ್-AMG E53 ಕ್ಯಾಬ್ರಿಯೊಲೆಟ್, ಮರ್ಸಿಡೀಸ್-AMG C43, ಮತ್ತು ಮರ್ಸಿಡೀಸ್-ಬೆಂಜ್ EQE SUV ಸೇರಿದಂತೆ ವಿವಿಧ ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಮರ್ಸಿಡಿಸ್-ಬೆಂಜ್ ಕಾರುಗಳು ಬಾಲಿವುಡ್ ಸೆಲೆಬ್ರಿಟಿಗಳ ನಡುವೆ ಜನಪ್ರಿಯವಾಗಿರುವ ಕಾರಣ ಮತ್ತಷ್ಟು ವಿಭಿನ್ನವಾಗಿದೆ. ನಮ್ಮ ಕಾರ್ ದೇಖೋ ಗ್ರೂಪ್ CEO ಅಮಿತ್ ಜೈನ್ ಕೂಡ ಮರ್ಸಿಡಿಸ್-ಬೆಂಜ್ ನ ಒಂದು ಕಾರನ್ನು ಓಡಿಸುತ್ತಾರೆ.
ಇವು 2023 ರಲ್ಲಿ ಕಾರ್ ದೇಖೋದಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ಕಾರ್ ಬ್ರ್ಯಾಂಡ್‌ಗಳಾಗಿವೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಕಾರು ಬ್ರ್ಯಾಂಡ್ ಯಾವುದು ಮತ್ತು ಏಕೆ ಎಂದು ನಮಗೆ ತಿಳಿಸಿ? ನಿಮ್ಮ ಅನಿಸಿಕೆಗಳನ್ನು ಈ ಕೆಳಗಿನ ಕಾಮೆಂಟ್ಸ್ ವಿಭಾಗದಲ್ಲಿ ಬರೆಯಿರಿ.
0 out of 0 found this helpful