ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್ ಫಾಸ್ಟ್; ಈ ಬ್ರಾಂಡ್ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ
vinfast vf6 ಗಾಗಿ ansh ಮೂಲಕ ಅಕ್ಟೋಬರ್ 12, 2023 04:56 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ವಿಯೆಟ್ನಾಂ ದೇಶದ ಈ ಕಾರು ತಯಾರಕ ಸಂಸ್ಥೆಯು ವಿಶ್ವದಾದ್ಯಂತ ಅನೇಕ ಎಲೆಕ್ಟ್ರಿಕ್ SUV ಗಳನ್ನು ಮಾರುತ್ತಿದ್ದು, ಅವುಗಳಲ್ಲಿ ನಾಲ್ಕನ್ನು ಭಾರತದಲ್ಲೂ ಬಿಡುಗಡೆ ಮಾಡುವ ಇರಾದೆ ಇದೆ
ಭಾರತದಲ್ಲಿ EV ಮಾರುಕಟ್ಟೆಯು ವಿಸ್ತರಣೆಗೊಳ್ಳುತ್ತಿದ್ದು, ಇನ್ನೊಂದು ಕಾರು ತಯಾರಕ ಸಂಸ್ಥೆಯು ಸಹ ಇಲ್ಲಿಗೆ ಕಾಲಿಡಲು ಯೋಜನೆ ರೂಪಿಸುತ್ತಿದೆ. ಟೆಸ್ಲಾ ಸಂಸ್ಥೆಯಂತೆಯೇ ವಿಯೆಟ್ನಾಂ ದೇಶದ EV ತಯಾರಕ ಸಂಸ್ಥೆಯಾಗಿರುವ ವಿನ್ ಫಾಸ್ಟ್ ಸಹ ನಮ್ಮ ದೇಶದಲ್ಲಿ ಸದ್ಯದಲ್ಲಿಯೇ ತನ್ನ ಕಾರ್ಯವನ್ನು ಆರಂಭಿಸಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಬ್ರಾಂಡ್ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದ್ಕಕಾಗಿ, ಚೆನ್ನೈಯಲ್ಲಿರುವ ಫೋರ್ಡ್ ತಯಾರಿಕಾ ಘಟಕದ ಮೇಲೆ ತನ್ನ ಕಣ್ಣಿಟ್ಟಿದೆ. ಈ ಬ್ರಾಂಡ್ ಮತ್ತು ಇದು ಪರಿಚಯಿಸಲಿರುವ ಕಾರುಗಳ ಕುರಿತ ಮಾಹಿತಿ ಇಲ್ಲಿದೆ.
ವಿನ್ ಫಾಸ್ಟ್ ಎಂದರೇನು?
ವಿನ್ ಫಾಸ್ಟ್ ಎನ್ನುವುದು ಕಾರು ತಯಾರಿಕಾ ಉದ್ಯಮಕ್ಕೆ ಹೊಸದಾಗಿ ಲಗ್ಗೆ ಇಟ್ಟಿರುವ ವಿಯೆಟ್ನಾಂ ಮೂಲಕ ಬ್ರಾಂಡ್ ಆಗಿದೆ. ಈ ಕಾರು ತಯಾರಕ ಸಂಸ್ಥೆಯು 2017ರಲ್ಲಿ ವಿಯೆಟ್ನಾಂ ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಜಾಗತಿಕ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಅಲ್ಲಿನ ಈ ಕ್ಷೇತ್ರದಲ್ಲಿನ ಏಕೈಕ ಸಂಸ್ಥೆ ಎನಿಸಿಕೊಂಡಿದೆ. ವಿಯೆಟ್ನಾಂನಲ್ಲಿ ಕೆಲವೊಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಗೆ BMW ಅನ್ನು ಆಧರಿಸಿದ ಮಾದರಿಗಳನ್ನು ಮಾರಲು ಪ್ರಾರಂಭಿಸಿದ ಈ ಕಾರು ತಯಾರಕ ಸಂಸ್ಥೆಯು ತದನಂತರ ತನ್ನದೇ ಆದ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿತು.
ಇದನ್ನು ಸಹ ಓದಿರಿ: ಮಾರುತಿ ಸುಝುಕಿ eVX ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ನ ಒಳಾಂಗಣದ ಅನಾವರಣ
ವಿನ್ ಫಾಸ್ಟ್ ಸಂಸ್ಥೆಯು 2021ರಲ್ಲಿ ವಿಯೆಟ್ನಾಂನಲ್ಲಿ ಮೂರು ಎಲೆಕ್ಟ್ರಿಕ್ ಕಾರುಗಳು, ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳು, ಮತ್ತು ಒಂದು ಎಲೆಕ್ಟ್ರಿಕ್ ಬಸ್ ಅನ್ನು ಬಿಡುಗಡೆ ಮಾಡಿತು. ಮೂರರಲ್ಲಿ ಎರಡು ಕಾರುಗಳು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದವು. ಹಾಗೂ 2022ರಲ್ಲಿ ಈ ಸಂಸ್ಥೆಯು ಅಮೆರಿಕ, ಯೂರೋಪ್ ಮತ್ತು ಕೆನಡಾದಲ್ಲಿ ತನ್ನ ಶೋರೂಂಗಳನ್ನು ಸ್ಥಾಪಿಸಿತು. ಈಗ ಭಾರತದಲ್ಲಿ EV ಕ್ಷೇತ್ರವು ಶೀಘ್ರಗತಿಯ ಪ್ರಗತಿಯನ್ನು ಕಾಣುತ್ತಿರುವುದರಿಂದ ವಿನ್ ಫಾಸ್ಟ್ ಸಂಸ್ಥೆಯು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಇಲ್ಲಿ ಪ್ರಮುಖ ಪಾತ್ರ ವಹಿಸುವ ಗುರಿಯನ್ನು ಇಟ್ಟುಕೊಂಡಿದೆ.
ನಿರೀಕ್ಷಿತ ಮಾದರಿಗಳು
ವಿನ್ ಫಾಸ್ಟ್ ಸಂಸ್ಥೆಯು ಭಾರತಕ್ಕೆ ತನ್ನ ಮಾದರಿಗಳನ್ನು CBU ಗಳಾಗಿ (ಕಂಪ್ಲೀಟ್ಲಿ ಬಿಲ್ಟ್ ಅಪ್ ಯೂನಿಟ್ಸ್) ತರುವ ಸಾಧ್ಯತೆ ಇದ್ದು, ಇಲ್ಲಿ ತನ್ನ ಘಟಕವನ್ನು ಸ್ಥಾಪಿಸಿದ ನಂತರ ಕಾರುಗಳನ್ನು CKD (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಆಗಿ ತರಲಿದೆ. ವಿನ್ ಫಾಸ್ಟ್ ಸಂಸ್ಥೆಯು ಭಾರತದಲ್ಲಿ ಪರಿಚಯಿಸಬಹುದಾದ ಕೆಲವು ಕಾರುಗಳ ವಿವರ ಇಲ್ಲಿದೆ.
ವಿನ್ ಫಾಸ್ಟ್ VF7: ಈ ಬ್ರಾಂಡ್ ಭಾರತಕ್ಕೆ ಪ್ರವೇಶಿಸಿದ ನಂತರ VF7 ಅನ್ನು CBU ಆಗಿ ತರುವ ಸಾಧ್ಯತೆ ಇದೆ. ಈ ಎಲೆಕ್ಟ್ರಿಕ್ SUV ಯು 73.5kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದ್ದು, WLTP ಪ್ರಕಾರ 450km ನಷ್ಟು ಶ್ರೇಣಿಯನ್ನು ಹೊಂದಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು ರೂ. 50 ಲಕ್ಷಕ್ಕಿಂತ (ಎಕ್ಸ್ - ಶೋರೂಂ) ಹೆಚ್ಚಿನ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ.
ವಿನ್ ಫಾಸ್ಟ್ VF8: VF8 ಎನ್ನುವುದು ವಿನ್ ಫಾಸ್ಟ್ ತರಲಿರುವ ಇನ್ನೊಂದು CBU ಆಗಿದೆ. ಈ ಕೂಪ್-SUV ಯು VF7 ಗಿಂತ ದೊಡ್ಡದಾಗಿದ್ದು, ಡ್ಯುವಲ್ ಮೋಟರ್ ಸೆಟಪ್ ಜೊತೆಗೆ 87.7kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದೆ. WLTP ಹೇಳಿರುವಂತೆ ಇದು 425km ತನಕದ ಶ್ರೇಣಿಯನ್ನು ಹೊಂದಿರಲಿದ್ದು, ರೂ. 60 ಲಕ್ಷಕ್ಕಿಂತ (ಎಕ್ಸ್-ಶೋರೂಂ) ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ.
ವಿನ್ ಫಾಸ್ಟ್ VFe34: ಈ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ತನ್ನ ತಯಾರಿಕಾ ಘಟಕವನ್ನು ಸ್ಥಾಪಿಸಿದ ನಂತರ ಇದು ಅತ್ಯಂತ ಅಗ್ಗದ ಎಲೆಕ್ಟ್ರಿಕ್ SUV ಯನ್ನು ಇಲ್ಲಿ ಬಿಡುಗಡೆ ಮಾಡಲಿದೆ. ತನ್ನ ತಾಯ್ನೆಲದ ಮಾರುಕಟ್ಟೆಯಲ್ಲಿ ಇದು 41.9kWh ಬ್ಯಾಟರಿ ಪ್ಯಾಕ್ ನೊಂದಿಗೆ ಹಾಗೂ 319km ನಷ್ಟು ಶ್ರೇಣಿಯೊಂದಿಗೆ ಲಭ್ಯವಿದೆ. VFe34, ಇದು ಸುಮಾರು ರೂ. 25 ಲಕ್ಷಕ್ಕಿಂತ (ಎಕ್ಸ್ - ಶೋರೂಂ) ಹೆಚ್ಚಿನ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ.
ವಿನ್ ಫಾಸ್ಟ್ VF6: ವಿನ್ ಫಾಸ್ಟ್ VF6 ಎನ್ನುವುದು ಕ್ರೆಟಾ ಗಾತ್ರದ ಎಲೆಕ್ಟ್ರಿಕ್ SUV ಯಾಗಿದ್ದು 59.6kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ. ಈ ಎಲೆಕ್ಟ್ರಿಕ್ SUV ಯು WLTP ಪ್ರಮಾಣೀಕೃತ 400km ಶ್ರೇಣಿಯನ್ನು ಹೊಂದಿದ್ದು, BYD ಅಟ್ಟೊ 3 ಕಾರಿನಂತೆಯೇ ರೂ. 35 ಲಕ್ಷಕ್ಕಿಂತ (ಎಕ್ಸ್-ಶೋರೂಂ) ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ.
ಭಾರತಕ್ಕಾಗಿ ರೂಪಿಸಲಾಗಿರುವ ಯೋಜನೆ
ವಿನ್ ಫಾಸ್ಟ್ ಸಂಸ್ಥೆಯು ಭಾರತದಲ್ಲಿ ಯಾವಾಗ ತನ್ನ ಕಾರ್ಯವನ್ನು ಪ್ರಾರಂಭಿಸುವುದಾಗಿ ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಈ ಬ್ರಾಂಡ್ ಮುಂದಿನ ವರ್ಷದಲ್ಲಿ ಇಲ್ಲಿಗೆ ಕಾಲಿಡುವ ಸಾಧ್ಯತೆ ಇದೆ. ಇಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 2025ರಲ್ಲಿ ವಿನ್ ಫಾಸ್ಟ್ ಸಂಸ್ಥೆಯು ತನ್ನ ಮೊದಲ ಕಾರನ್ನು ಬಿಡುಗಡೆ ಮಾಡಲಿದೆ.