ಮಾರುತಿ ಸುಝುಕಿ eVX ಇಲೆಕ್ಟ್ರ ಿಕ್ SUV ಕಾನ್ಸೆಪ್ಟ್‌ನ ಇಂಟೀರಿಯರ್ ಅನಾವರಣ
ಮಾರುತಿ ಇ vitara ಗಾಗಿ rohit ಮೂಲಕ ಅಕ್ಟೋಬರ್ 06, 2023 03:57 pm ರಂದು ಪ್ರಕಟಿಸಲಾಗಿದೆ
- 105 Views
- ಕಾಮೆಂಟ್ ಅನ್ನು ಬರೆಯಿರಿ
ಈ ಇಲೆಕ್ಟ್ರಿಕ್ SUV ಭಾರತದಲ್ಲಿ ಮಾರುತಿ ಸುಝುಕಿಯ ಮೊದಲನೇ EV ಆಗಿರಲಿದ್ದು, 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ
- ಭಾರತದಲ್ಲಿ ಆಟೋ ಎಕ್ಸ್ಪೋ 2023ರಲ್ಲಿ ಪಾದಾರ್ಪಣೆಗೊಂಡಿತು
- ಇನ್ನಷ್ಟು ಪರಿಷ್ಕೃತ ಆವೃತ್ತಿಯನ್ನು ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾಗುತ್ತದೆ.
- ಇಂಟೀರಿಯರ್‌ನಲ್ಲಿ ಅಗತ್ಯವಿರುವ ಕನಿಷ್ಠ ಫೀಚರ್‌ಗಳನ್ನು ಮಾತ್ರ ಕಾಣಬಹುದಾಗಿದೆ; ಪ್ರಮುಖ ಅಂಶಗಳು ಸಂಯೋಜಿತ ಡಿಸ್‌ಪ್ಲೇಗಳು ಮತ್ತು ಯೋಕ್-ನಂತಹ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.
- ಹೊರನೋಟವು, ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಈಗ ಪರಿಷ್ಕೃತ LED ಲೈಟಿಂಗ್ ಸೆಟಪ್ ಅನ್ನು ಪಡೆದಿದೆ.
- 550km ಕ್ಲೈಮ್ ಮಾಡಲಾದ ರೇಂಜ್ ನೀಡಬಹುದಾದ 60kWh ಬ್ಯಾಟರಿ ಪ್ಯಾಕ್ ಪಡೆಯುವುದು ದೃಢಗೊಂಡಿದೆ.
- ಭಾರತದಲ್ಲಿ ಬೆಲೆಗಳು ರೂ 25 ಲಕ್ಷಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು.
ಈ ತಿಂಗಳ ಕೊನೆಗೆ ನಿಗದಿಪಡಿಸಲಾದ ಜಪಾನೀಸ್ ಮೊಬಿಲಿಟಿ ಶೋಗೂ ಮೊದಲೇ, ನಾವು ಹೊಸ-ಪೀಳಿಗೆ ಸುಝುಕಿ ಸ್ವಿಫ್ಟ್ ಅನ್ನು ಕಾನ್ಸೆಪ್ಟ್ ರೂಪವನ್ನು ಇತ್ತೀಚೆಗಷ್ಟೇ ನೋಡಿದ್ದೇವೆ. ಅಲ್ಲದೇ ಈ ಕಾರುತಯಾರಕ ಸಂಸ್ಥೆಯು eVX ಇಲೆಕ್ಟ್ರಿಕ್ SUV ಕಾನ್ಸೆಪ್ಟ್‌ನ ಹೆಚ್ಚು ಪರಿಷ್ಕೃತ ಆವೃತ್ತಿಯನ್ನೂ ಬಿಡುಗಡೆ ಮಾಡಲಿದೆ. ಆದರೆ ಇದನ್ನು ಪ್ರತ್ಯಕ್ಷವಾಗಿ ನೋಡುವುದಕ್ಕೂ ಮುನ್ನ, ಇದರ ಇಂಟೀರಿಯರ್‌ನ ಮೊದಲನೇ ನೋಟವು ನಿಮಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.
ಕ್ಯಾಬಿನ್‌ನಲ್ಲಿ ಏನಿದೆ?
ಈ eVX ಕಾನ್ಸೆಪ್ಟ್‌ನ ಕ್ಯಾಬಿನ್ ಕನಿಷ್ಠ ಫೀಚರ್‌ಗಳನ್ನು ಮಾತ್ರ ಒಳಗೊಂಡಿದ್ದು, ಮುಖ್ಯವಾಗಿ ಸಂಪರ್ಕಿತ ಡಿಸ್‌ಪ್ಲೇಗಳನ್ನು (ಇನ್ಸ್‌ಟ್ರುಮೆಂಟೇಷನ್‌ಗಾಗಿ ಒಂದು ಹಾಗೂ ಇನ್ಫೋಟೇನ್‌ಮೆಂಟ್‌ಗಾಗಿ ಇನ್ನೊಂದು) ಡ್ಯಾಶ್‌ಬೋರ್ಡ್ ಮೇಲೆ ಸ್ಥಾಪಿಸಲಾಗಿದೆ. ಇತರ ಫೀಚರ್‌ಗಳೆಂದರೆ, AC ವೆಂಟ್‌ಗಳಿಗಾಗಿ ಉದ್ದನೆಯ ಲಂಬ ಸ್ಲ್ಯಾಟ್‌ಗಳು, ಯೋಕ್ ಅನ್ನು ಹೋಲುವ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಡ್ರೈವ್ ಮೋಡ್‌ಗಳಿಗಾಗಿ ಸೆಂಟರ್ ಕನ್ಸೋಲ್‌ನಲ್ಲಿ ರೋಟರಿ ನಾಬ್ ಅನ್ನು ಪಡೆದಿದೆ. ಆದರೆ ಇದೊಂದು ಕಾನ್ಸೆಪ್ಟ್ ಆಗಿರುವುದರಿಂದ ಈ ಡಿಸೈನ್ ಅಂಶಗಳು ವಿಶ್ವಾಸಾರ್ಹವೆಂದು ಭಾವಿಸಲಾಗದು ಹಾಗೂ ಸ್ಪೈಶಾಟ್ ಒಂದರಲ್ಲಿ ಈಗಾಗಲೇ ನೋಡಿರುವಂತೆ ಪ್ರೊಡಕ್ಷನ್ ಸ್ಪೆಕ್ ಮಾಡೆಲ್‌ಗಿಂತ ಇದು ಹೆಚ್ಚಿನ ಬದಲಾವಣೆಯನ್ನು ಹೊಂದಿರಲಿದೆ.
ಹೊರನೋಟದಲ್ಲಿನ ವ್ಯತ್ಯಾಸಗಳು
ತನ್ನ ಹೊಸ ರೂಪದಲ್ಲಿ, ಈ ಇಲೆಕ್ಟ್ರಿಕ್ SUV ಸ್ಲಿಮರ್ LED ಹೆಡ್‌ಲೈಟ್‌ಗಳು ಮತ್ತು ತ್ರಿಕೋನಾಕಾರದ DRLಗಳು ಹಾಗೂ ಚಂಕಿ ಬಂಪರ್‌ಗಳೊಂದಿಗೆ ಪರಿಷ್ಕೃತ ಫೇಶಿಯಾ ಹೊಂದಿದೆ.
ಇದರ ಪ್ರೊಫೈಲ್ ದೊಡ್ಡಾದ ಅಲಾಯ್ ವ್ಹೀಲ್‌ಗಳು ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳೊಂದಿಗೆ ಚಂಕಿ ಆರ್ಕ್‌ಗಳನ್ನು ಪಡೆದಿದೆ. ಹಿಂಭಾಗದಲ್ಲಿ, ಇದು ಚೂಪಾದ ಸಂಪರ್ಕಿತ ಟೇಲ್‌ಲೈಟ್‌ಗಳು ಮತ್ತು 3-ಪೀಸ್ ಲೈಟಿಂಗ್ ಎಲಿಮೆಂಟ್ ಅನ್ನು ಪಡೆದಿದ್ದು, ನವೀಕೃತ DRL ಲೈಟ್ ಸಿಗ್ನೇಚರ್ ಮತ್ತು ದೊಡ್ಡದಾದ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.
ಇದನ್ನೂ ಪರಿಶೀಲಿಸಿ: ಹೊಸ ಸುಝುಕಿ ಸ್ವಿಫ್ಟ್ ಕಾನ್ಸೆಪ್ಟ್ ಅನಾವರಣ, ನಾಲ್ಕನೇ ಪೀಳಿಗೆ ಮಾರುತಿ ಸ್ವಿಫ್ಟ್‌ನ ಪೂರ್ವವೀಕ್ಷಣೆ
ಇಲೆಕ್ಟ್ರಿಕ್ ಪವರ್‌ಟ್ರೇನ್ ವಿವರಗಳು
ಈ ಪ್ರೊಡಕ್ಷನ್-ಸ್ಪೆಕ್ eVX ಮತ್ತು ಇದರ ಇಲೆಕ್ಟ್ರಿಕ್ ಪವರ್‌ಟ್ರೇನ್ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಇದು 550km ತನಕದ ಕ್ಲೈಮ್ ಮಾಡಲಾದ ರೇಂಜ್‌ನ 60kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ ಎಂದು ಆಟೋ ಎಕ್ಸ್ಪೋ 2023ರಲ್ಲಿ ಮಾರುತಿ ಸುಝುಕಿ ಬಹಿರಂಗಪಡಿಸಿದೆ. ಅಲ್ಲದೇ ಈ eVX 4x4 ಡ್ರೈವ್ ಟ್ರೇನ್‌ನೊಂದಿಗೆ ಡ್ಯುಯಲ್ ಮೋಟರ್ ಸೆಟಪ್ ಅನ್ನು ಪಡೆಯುತ್ತದೆ.
ಬಿಡುಗಡೆ ಯಾವಾಗ?
ಸುಝುಕಿಯು ಭಾರತಕ್ಕೆ eVX ಅನ್ನು 2025ರ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಇದರ ಆರಂಭಿಕ ಬೆಲೆ ಸುಮಾರು ರೂ 25 ಲಕ್ಷ (ಎಕ್ಸ್-ಶೋರೂಂ) ಎಂದು ಅಂದಾಜಿಸಲಾಗಿದೆ. ಇದು MG ZS EV ಮತ್ತು ಹ್ಯುಂಡೈ ಕೋನಾ ಇಲೆಕ್ಟ್ರಿಕ್‌ಗೆ ಪೈಪೋಟಿ ನೀಡಲಿದ್ದು, ಮಹೀಂದ್ರಾ XUV400 ಮತ್ತು ಹೊಸ ಟಟಾ ನೆಕ್ಸಾನ್ EV ಗೆ ದುಬಾರಿ ಪರ್ಯಾಯವಾಗಲಿದೆ.
0 out of 0 found this helpful