• English
    • Login / Register

    2025 ರ ವರ್ಷದ ವಿಶ್ವ ಕಾರು ಪ್ರಶಸ್ತಿಯನ್ನು ಗೆದ್ದ Kia EV3

    ಏಪ್ರಿಲ್ 24, 2025 10:33 pm ರಂದು dipan ಮೂಲಕ ಪ್ರಕಟಿಸಲಾಗಿದೆ

    2 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹ್ಯುಂಡೈ ಇನ್‌ಸ್ಟರ್ ಅನ್ನು ವರ್ಷದ ವಿಶ್ವ ಇವಿ ಎಂದು ಹೆಸರಿಸಲಾಗಿದೆ, ಹಾಗೆಯೇ, ವೋಲ್ವೋ ಇಎಕ್ಸ್90ಯು ವಿಶ್ವ ಐಷಾರಾಮಿ ಕಾರು ಪ್ರಶಸ್ತಿಯನ್ನು ಗೆದ್ದಿದೆ

    Kia EV3 Wins The 2025 World Car Of The Year

    • ಹುಂಡೈ ಇನ್‌ಸ್ಟರ್ ಮತ್ತು ಬಿಎಂಡಬ್ಲ್ಯೂ ಎಕ್ಸ್‌3 WCOTY 2025ರ ರನ್ನರ್ ಅಪ್ ಆಗಿದ್ದವು.

    • ಕಿಯಾ EV3 ಪ್ರಶಸ್ತಿಯನ್ನು ಗೆಲ್ಲುವ ಮೂಲಕ 2003ರಿಂದೀಚೆಗೆ ಕಾರು ತಯಾರಕ ಕಂಪನಿಯು ವಿಶ್ವ ಕಾರು ಪ್ರಶಸ್ತಿಗಳಲ್ಲಿ ಆರನೇ ಜಯ ಸಾಧಿಸಿದೆ.

    • ಇದು ಕೊರಿಯಾ ಮೂಲದ ಕಾರು ತಯಾರಕರ ಜಾಗತಿಕ ಕಾರುಗಳ ಪಟ್ಟಿಯಲ್ಲಿನ ಅತ್ಯಂತ ಚಿಕ್ಕ EV ಆಗಿದ್ದು, ಕಿಯಾ ಸೆಲ್ಟೋಸ್‌ನಂತೆಯೇ ಆಯಾಮಗಳನ್ನು ಹೊಂದಿದೆ.

    • ಜಾಗತಿಕ-ಸ್ಪೆಕ್ ಮೊಡೆಲ್‌ 600 ಕಿ.ಮೀ ವರೆಗಿನ ಕ್ಲೈಮ್‌ ಮಾಡಲಾದ ರೇಂಜ್‌ನೊಂದಿಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ.

    • ಇದರ ಭಾರತ ಬಿಡುಗಡೆ ಇನ್ನೂ ದೃಢಪಟ್ಟಿಲ್ಲ.

    ಕಿಯಾ ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಕಾರು ಆದ EV9 2024 ರಲ್ಲಿ ವಿಶ್ವ ಕಾರು ಪ್ರಶಸ್ತಿಯನ್ನು ಗೆದ್ದ ನಂತರ, ಜಾಗತಿಕವಾಗಿ ಈ ಬ್ರ್ಯಾಂಡ್‌ನ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರು ಕಿಯಾ EV3, 2025 ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಗೆಲುವು ಕಿಯಾ ಅವರ 21 ವರ್ಷಗಳ ವಿಶ್ವ ಕಾರು ಪ್ರಶಸ್ತಿಗಳ ಇತಿಹಾಸದಲ್ಲಿ ಆರನೇ ಗೆಲುವಾಗಿದೆ. ಈ ಗೆಲುವು ಕಿಯಾ ಅವರ 21 ವರ್ಷಗಳ ವಿಶ್ವ ಕಾರು ಪ್ರಶಸ್ತಿಗಳ ಇತಿಹಾಸದಲ್ಲಿ ಆರನೇ ಗೆಲುವಾಗಿದೆ. ಕಿಯಾ EV3 ನ ಇತ್ತೀಚಿನ ಸಾಧನೆಯ ಕುರಿತು ಕೆಲವು ಪ್ರಮುಖ ವಿವರಗಳು ಇಲ್ಲಿವೆ:

    ಪ್ರಶಸ್ತಿಗಾಗಿ ಸೆಣೆಸಾಟ

    ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಅರ್ಹತೆ ಪಡೆಯಲು, ಒಂದು ವಾಹನವು ಜನವರಿ 1, 2024 ರಿಂದ ಮಾರ್ಚ್ 30, 2025 ರ ನಡುವೆ ಎರಡು ಖಂಡಗಳಲ್ಲಿ ಕನಿಷ್ಠ ಎರಡು ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟವಾಗಿರಬೇಕು. ಇದಲ್ಲದೆ ಇದನ್ನು ವಾರ್ಷಿಕವಾಗಿ 10,000 ಯೂನಿಟ್‌ಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುವ ಅಗತ್ಯವಿದೆ ಮತ್ತು ಅದರ ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಐಷಾರಾಮಿ ಕಾರು ಮಟ್ಟಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಬೇಕು.

    Kia EV3 WCOTY 2025

    2025ರಲ್ಲಿ, ಕಿಯಾ EV3 ಈ ಎಲ್ಲಾ ಮಾನದಂಡಗಳನ್ನು ಪೂರೈಸಿತು ಮತ್ತು 52 ಜಾಗತಿಕ ಸ್ಪರ್ಧಿಗಳಲ್ಲಿ ವಿಜೇತ ಎಂದು ಘೋಷಿಸಲ್ಪಟ್ಟಿತು. BMW X3 ಮತ್ತು ಹುಂಡೈ ಇನ್‌ಸ್ಟರ್ (ಇದು 2026ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ) ಎರಡು ರನ್ನರ್ ಅಪ್‌ಗಳಾಗಿದ್ದವು.

    WCOTY 2025 ರ ಇತರ ವಿಭಾಗಗಳ ವಿಜೇತರು

    2025ರ ವಿಶ್ವದ ಐಷಾರಾಮಿ ಕಾರು: ವೋಲ್ವೋ EX90

    Volvo EX90

    2025ರ ವಿಶ್ವದ ಪರ್ಫಾರ್ಮೆನ್ಸ್‌ ಕಾರು: ಪೋರ್ಷೆ 911 ಕ್ಯಾರೆರಾ GTS

    Porsche Carrera 911 GTS

    2025 ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್: ಹ್ಯುಂಡೈ ಇನ್‌ಸ್ಟರ್

    Hyundai Inster

    2025 ವರ್ಲ್ಡ್ ಅರ್ಬನ್ ಕಾರ್: BYD ಸೀಗಲ್ / ಡಾಲ್ಫಿನ್ ಮಿನಿ

    BYD Seagull

    2025 ರ ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್: ವೋಕ್ಸ್‌ವ್ಯಾಗನ್ ID.Buzz

    Volkswagen ID.Buzz

    ಇದನ್ನೂ ಓದಿ: 2025ರ Skoda Kodiaqನ ವೇರಿಯೆಂಟ್‌-ವಾರು ಫೀಚರ್‌ಗಳ ವಿವರಗಳು

    ಕಿಯಾ EV3 ಬಗ್ಗೆ ಹೆಚ್ಚಿನ ವಿವರಗಳು

    KIA EV3 front

    ಮೊದಲೇ ಹೇಳಿದಂತೆ, ಕಿಯಾ EV3 ಕಾರು ತಯಾರಕರ ರೇಂಜ್‌ನಲ್ಲಿನ ಅತ್ಯಂತ ಚಿಕ್ಕ EV ಆಗಿದ್ದು, ಇದು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ನಂತೆಯೇ ಆಯಾಮಗಳನ್ನು ಹೊಂದಿದೆ. ಇದು ಕಾರು ತಯಾರಕರ ಇತರ EV ಗಳಿಗೆ ಹೋಲುವ ವಿನ್ಯಾಸದೊಂದಿಗೆ ಬರುತ್ತದೆ, ಹೆಡ್‌ಲೈಟ್‌ಗಳಲ್ಲಿ ಪಿಕ್ಸೆಲ್ ತರಹದ ವಿನ್ಯಾಸ, L- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಕಿಯಾ ಇವಿ9 ತರಹದ ಟೈಲ್ ಲೈಟ್‌ಗಳನ್ನು ಹೊಂದಿದೆ.

    Kia EV3 dashboard

    ಇದರ ಕ್ಯಾಬಿನ್ ಕಿಯಾ ಸೈರೋಸ್‌ನಂತೆಯೇ ಇದ್ದು, ಬೆಳ್ಳಿ ಮತ್ತು ಬೂದು ಬಣ್ಣದ ಥೀಮ್ ಮತ್ತು ಕಿತ್ತಳೆ ಬಣ್ಣದ ಅಕ್ಸೆಂಟ್‌ಗಳನ್ನು ಹೊಂದಿದೆ. ಇದು ಮುಂಬರುವ ಕಿಯಾ EV6 ನಂತೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆದರೂ, ಟ್ರಿಪಲ್-ಸ್ಕ್ರೀನ್ ವಿನ್ಯಾಸ ಮತ್ತು ಸೀಟ್ ಕವರ್‌ ಚಿಕ್ಕ ಸೈರೋಸ್‌ನಂತೆಯೇ ಇರುತ್ತದೆ.

    Kia EV3 screens

    ಸಿರೋಸ್‌ನಂತೆ, ಕಿಯಾ EV3 ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು, ಕ್ಲೈಮೇಟ್‌ ಕಂಟ್ರೋಲ್‌ಗಾಗಿ 5-ಇಂಚಿನ ಸ್ಕ್ರೀನ್‌, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ಪನೋರಮಿಕ್ ಸನ್‌ರೂಫ್‌ಗಳನ್ನು ಹೊಂದಿದೆ, ಆದರೆ 12-ಇಂಚಿನ ಹೆಡ್ಸ್-ಅಪ್ ಡಿಸ್‌ಪ್ಲೇ (HUD) ಅನ್ನು ಸಹ ಪಡೆಯುತ್ತದೆ. ಇದರ ಸುರಕ್ಷತಾ ಸೂಟ್ ಬಹು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್-2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನವನ್ನು ಒಳಗೊಂಡಿದೆ.

    ಜಾಗತಿಕ-ಸ್ಪೆಕ್ ಕಿಯಾ EV3 ಎರಡು ಬ್ಯಾಟರಿ ಆಯ್ಕೆಗಳನ್ನು ನೀಡುತ್ತದೆ: 58.3 kWh ಸ್ಟ್ಯಾಂಡರ್ಡ್ ಪ್ಯಾಕ್ ಮತ್ತು 81.4 kWh ಲಾಂಗ್‌ ರೇಂಜ್‌ನ ಪ್ಯಾಕ್‌, WLTP- ಕ್ಲೈಮ್ ಮಾಡಿದ  600 ಕಿಮೀ ವರೆಗಿನ ರೇಂಜ್‌ಅನ್ನು ಹೊಂದಿದೆ. ಎರಡೂ ಬ್ಯಾಟರಿ ಪ್ಯಾಕ್‌ಗಳು 204 ಪಿಎಸ್‌ ಮತ್ತು 283 ಎನ್‌ಎಮ್‌ ಉತ್ಪಾದಿಸುವ ಅದೇ ಫ್ರಂಟ್-ಆಕ್ಸಲ್-ಮೌಂಟೆಡ್ (FWD) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿವೆ.

    ನಿರೀಕ್ಷಿತ ಭಾರತ ಬಿಡುಗಡೆ ಮತ್ತು ಬೆಲೆ

    Kia EV3 rear

    ಕಿಯಾ ಇವಿ3 ಭಾರತದಲ್ಲಿ ಬಿಡುಗಡೆಯಾಗುವುದನ್ನು ಕೊರಿಯಾದ ಕಾರು ತಯಾರಕರು ಇನ್ನೂ ದೃಢೀಕರಿಸಿಲ್ಲ. ಆದರೆ ಬಿಡುಗಡೆಯಾದರೆ, ಇದರ ಬೆಲೆ 30 ರಿಂದ 40 ಲಕ್ಷ ರೂ.ಗಳವರೆಗೆ ಇರಬಹುದು (ಎಕ್ಸ್ ಶೋ ರೂಂ). ಹಾಗೆಯೇ ಇದು BYD Atto 3 ಗೆ ಪ್ರತಿಸ್ಪರ್ಧಿಯಾಗಲಿದೆ ಮತ್ತು ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ EV, MG ZS EV, ಮಹೀಂದ್ರಾ BE 6 ಮತ್ತು ಮುಂಬರುವ ಮಾರುತಿ ಇ ವಿಟಾರಾಗಳಿಗೆ ಪ್ರೀಮಿಯಂ ಪರ್ಯಾಯವಾಗಲಿದೆ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Kia ev3

    ಇನ್ನಷ್ಟು ಅನ್ವೇಷಿಸಿ on ಕಿಯಾ ev3

    • ಕಿಯಾ ev3

      Rs.30 Lakh* Estimated Price
      ಆಗಸ್ಟ್‌ 15, 2036 Expected Launch
      ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    space Image

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience