ವೋಕ್ಸ್ವ್ಯಾಗನ್ ಅಮೆಯೋ GT ಲೈನ್ ಅನ್ನು ಬಿಡುಗಡೆ ಮಾಡಲಾಗಿದೆ ರೂ 10 ಲಕ್ಷ ದಲ್ಲಿ
ವೋಕ್ಸ್ವ್ಯಾಗನ್ ಅಮೇಯೊ ಗಾಗಿ sonny ಮೂಲಕ ಸೆಪ್ಟೆಂಬರ್ 12, 2019 02:47 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಅಮೆಯೋ GT ಲೈನ್ ಹೈ ಲೈನ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಮೇಲೆ ಆಧಾರವಾಗಿದೆ.
- ವೋಕ್ಸ್ವ್ಯಾಗನ್ ಅಮೆಯೋ ನಲ್ಲಿ GT ಲೈನ್ ಟ್ರಿಮ್ ಕೊಡಲಾಗಿದೆ ಅದು ಹೊಸ ಪೋಲೊ ಮತ್ತು ವೆಂಟೋ ಫೇಸ್ ಲಿಫ್ಟ್ ಹೋಲಿಕೆ ಹೊಂದಿದೆ.
- ಅಮೆಯೋ GT ಲೈನ್ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 7-ಸ್ಪೀಡ್ DSG ಟ್ರಾನ್ಸ್ಮಿಷನ್ ಪಡೆಯುತ್ತದೆ
- ಅಮೆಯೋ ನಲ್ಲಿ GT ಲೈನ್ ನಲ್ಲಿನ ಫೀಚರ್ ಗಳ ಪಟ್ಟಿ ಟಾಪ್ ಸ್ಪೆಕ್ ಹೈ ಲೈನ್ ಪ್ಲಸ್ ವೇರಿಯೆಂಟ್ ನೊಂದಿಗೆ ಹಂಚಿಕೊಳ್ಳಲಾಗಿದೆ
- ಇದರಲ್ಲಿ ಕಾಂಟ್ರಾಸ್ಟ್ ಕಪ್ಪು ರೂಫ್, ORVM ಗಳು, ಮತ್ತು ಬೂಟ್ ಲೀಡ್ ಸ್ಪೋಯ್ಲ್ಯಾರ್ ಜೊತೆಗೆ GTಲೈನ್ ಡೆಕಲ್ ಗಳು ಮತ್ತು ಬ್ಯಾಡ್ಜ್ ಕೊಡಲಾಗಿದೆ.
- ಆದರೆ, ಅಮೆಯೋ GT ಲೈನ್ ಲೈನ್ ನಲ್ಲಿ GTI-ತರಹದ ಫ್ರಂಟ್ ಮತ್ತು ರೇವೂರ್ ಬಂಪರ್ ಗಳನ್ನು ಕೊಡಲಾಗಿಲ್ಲ ಅವುಗಳನ್ನು ನವೀಕರಣಗೊಂಡ ಪೋಲೊ ಮತ್ತು ವೆಂಟೋ ಗಳಲ್ಲಿ ಕಾಣಬಹುದು.
ವೋಕ್ಸ್ವ್ಯಾಗನ್ ಅಮೆಯೋ ನಲ್ಲಿ GT ಲೈನ್ ತರಹದ ಫೀಚರ್ ಗಳನ್ನು ಕೊಡಲಾಗಿದೆ, ಅದನ್ನು ಪೋಲೊ ಹಾಗು ವೆಂಟೋ ಫೇಸ್ ಲಿಫ್ಟ್ ಗಳಲ್ಲಿ ಕಾಣಬಹುದು. ಬೆಲೆ ಪಟ್ಟ್ಟಿ ರೂ 10 ಲಕ್ಷ (ಎಕ್ಸ್ ಶೋ ರೂಮ್ ಭಾರತ ), ಅಮೆಯೋ GT ಲೈನ್ ಕೇವಲ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 7-ಸ್ಪೀಡ್ DSG ಟ್ರಾನ್ಸ್ಮಿಷನ್ ಒಂದಿಗೆ ದೊರೆಯುತ್ತದೆ. ಡೀಲರ್ ಗಳು ಹೇಳಿರುವಂತೆ ಅಮೆಯೋ GT ಲೈನ್ ಈಗಾಗಲೇ ಬಾಹಲಷ್ಟು ನಗರಗಳಲ್ಲಿ ಲಭ್ಯವಿದೆ ಮತ್ತು ಹಲವು ನಗರಗಳಲ್ಲಿ ಡೆಲಿವರಿ ಪಡೆಯಲು ಎರೆಡು ವಾರಗಳ ವರೆಗೂ ಕಾಯಬೇಕಾಗಬಹುದು
ಅಮೆಯೋ ದಲ್ಲಿ ಅದರ ಸಹೋದರಗಳಲ್ಲಿ (ಪೋಲೊ, ವೆಂಟೋ) ದೊರೆಯುವ ನವೀಕರಣ ಕೊಡಲಾಗಿಲ್ಲ, ಆದರೆ ಇದರಲ್ಲಿ GT ಲೈನ್ ಸೌಂದರ್ಯಕಗಳನ್ನು ಕೊಡಲಾಗಿದೆ. ಇದರಲ್ಲಿ GT ಡೆಕಲ್ ಗಳು ಮತ್ತು ಬ್ಯಾಡ್ಜ್ ಗಳು ಜೊತೆಗೆ ಕಪ್ಪು ಬಣ್ಣದ ರೂಫ್, ORVM ಗಳು, ಮತ್ತು ಬೂಟ್ ಲೀಡ್ ಸ್ಪೋಯ್ಲ್ಯಾರ್ ಕೊಡಲಾಗಿದೆ. ಅಮೆಯೋ GT ಲೈನ್ ಐದು ಬಣ್ಣಗಳ ಆಯ್ಕೆಗಳಲ್ಲಿ ದೊರೆಯುತ್ತದೆ ಅದರಲ್ಲಿ ಹೊಸ ಹೊಸ ಸನ್ಸೆಟ್ ರೆಡ್ ಆಯ್ಕೆ ಸೇರಿದೆ. ಇತರ ಶೇಡ್ ಗಳಲ್ಲಿ ಕ್ಯಾಂಡಿ ವೈಟ್, ಲಾಪಿಜ್ ಬ್ಲೂ, ರಿಫ್ಲೆಕ್ಸ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಸೇರಿದೆ.
ಫೀಚರ್ ಗಳ ವಿಷಯದಲ್ಲಿ, GT ಲೈನ್ ಅಮೆಯೋ ದಲ್ಲಿ ಟಾಪ್ ಸ್ಪೆಕ್ ಹೈ ಲೈನ್ ಪ್ಲಸ್ ನಲ್ಲಿ ದೊರೆಯುವ ಸಲಕರೆಣೆಗಳನ್ನು ಕೊಡಲಾಗಿದೆ. ಇದರಲ್ಲಿ ಕ್ರೂಸ್ ಕಂಟ್ರೋಲ್, ಆಟೋ ಡಿಮಿಂಗ್ IRVM, ಆಟೋ AC, ರೇರ್ AC ವೆಂಟ್ ಗಳು, ರೈನ್ ಸೆನ್ಸಿಂಗ್ ವೈಪರ್ ಗಳು, ರೇರ್ ಪಾರ್ಕಿಂಗ್ ಕ್ಯಾಮೆರಾ ಮತ್ತು 7-ಇನ್ಫೋಟೈನ್ಮೆಂಟ್ ಸೇರಿದೆ.
ಅಮೆಯೋ GT ಲೈನ್ ನ 1.5-ಲೀಟರ್ ಡೀಸೆಲ್ ಎಂಜಿನ್ 110PS ಪವರ್ ಮತ್ತು 250Nm ತಾರ್ಕ್ ಕೊಡುತ್ತದೆ. ಸದ್ಯಕ್ಕೆ ಅದು ಕೇವಲ DSG ಒಂದಿಗೆ ದೊರೆಯುತ್ತದೆ. ವೋಕ್ಸ್ವ್ಯಾಗನ್ ನವರು ಮಾನ್ಯುಯಲ್ ಆವೃತ್ತಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಬಹುದು. ವೋಕ್ಸ್ವ್ಯಾಗನ್ ನವರು GTಲೈನ್ ವೇರಿಯೆಂಟ್ ಅನ್ನು ಸಾಂಪ್ರದಾಯಿಕ ಹೈ ಲೈನ್ ಪ್ಲಸ್ ವೇರಿಯೆಂಟ್ ಬೆಲೆ ಪಟ್ಟಿ ಯಲ್ಲಿ ಸೇರಿಸಿದ್ದಾರೆ. ಹೊಸ GT ಲೈನ್ ಡೀಸೆಲ್ ಅಮೆಯೋ ಬಗ್ಗೆ ಸ್ವಲ್ಪ ಒಲವು ಮೂಡುವಂತೆ ಮಾಡಬಹುದು ಏಕೆಂದರೆ ಅದು ತನ್ನ್ನ ಸ್ಫರ್ದೆಯನ್ನು ಮಾರುತಿ ಸುಜುಕಿ ಡಿಸೈರ್ , ಹುಂಡೈ ಎಕ್ಸೆನ್ಟ್ , ಹೋಂಡಾ ಮೇಜ್ ಮತ್ತು ಫೋರ್ಡ್ ಅಸ್ಪೈರ್ ಜೊತೆಗೆ ಮಾಡುತ್ತದೆ.