Login or Register ಅತ್ಯುತ್ತಮ CarDekho experience ಗೆ
Login

ವೀಕ್ಷಿಸಿ: ಲೋಡ್ ಮಾಡಿದ ಇವಿ Vs ಲೋಡ್‌ ಇಲ್ಲದ ಇವಿ: ವಾಸ್ತವದಲ್ಲಿ ಯಾವ ಲಾಂಗ್‌ ರೇಂಜ್‌ Tata Nexon EV ಹೆಚ್ಚು ಮೈಲೇಜ್‌ ನೀಡುತ್ತದೆ ?

ಟಾಟಾ ನೆಕ್ಸಾನ್ ಇವಿ ಗಾಗಿ dipan ಮೂಲಕ ಜುಲೈ 03, 2024 06:49 am ರಂದು ಮಾರ್ಪಡಿಸಲಾಗಿದೆ

ತಿರುವಿನಿಂದ ಕೂಡಿದ ಘಾಟ್ ರಸ್ತೆಗಳಲ್ಲಿನ ಮೈಲೇಜ್‌ನ ವ್ಯತ್ಯಾಸವು ಎರಡೂ ಇವಿಗಳ ನಗರ ರಸ್ತೆಗಿಂತ ಸುಮಾರು ಎರಡು ಪಟ್ಟು ಹೆಚ್ಚು ಇದೆ.

EV ಗಳ ಪರ್ಫಾರ್ಮೆನ್ಸ್‌ಗೆ ಬಂದಾಗ, ಕ್ಲೈಮ್‌ ಮಾಡಿದ ರೇಂಜ್‌ನ ಅಂಕಿಅಂಶಕ್ಕೆ ಅವು ಎಷ್ಟು ಹತ್ತಿರದಲ್ಲಿರಬಹುದು ಎಂಬುದನ್ನು ಮೌಲ್ಯಮಾಪನ ಮಾಡಲು ಹಲವಾರು ಅಂಶಗಳಿವೆ, ವಿಶೇಷವಾಗಿ ಕಾರಿನಲ್ಲಿ ಹಲವು ಪ್ರಯಾಣಿಕರನ್ನು ಕುಳ್ಳಿರಿಸಿ ಸಂಚರಿಸುವಾಗ. ನಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ನಾವು ಪರೀಕ್ಷಿಸಲು ಪ್ರಯತ್ನಿಸಿದ್ದೇವೆ, ಏಕೆಂದರೆ ನಾವು ಎರಡು ಟಾಟಾ ನೆಕ್ಸಾನ್ ಇವಿಗಳನ್ನು ಪರೀಕ್ಷೆ ಮಾಡಿದ್ದೇವೆ, ಒಂದನ್ನು ನಾಲ್ಕು ಪ್ರಯಾಣಿಕರು ಮತ್ತು 35 ಕೆಜಿ ಲೋಡ್, ಮತ್ತು ಇನ್ನೊಂದನ್ನು ಕೇವಲ ಡ್ರೈವರ್‌ನೊಂದಿಗೆ ಕಡಿಮೆ-ಲೋಡ್ ಹೊಂದಿರುವಾಗ ಇವಿಯು ಹೆಚ್ಚು ಮೈಲೇಜ್‌ಅನ್ನು ಪಡೆಯುತ್ತದೆಯೇ ಎಂದು ನೋಡಲು.

ಪರೀಕ್ಷೆಯ ವೇಳೆಯಲ್ಲಿ

ನಮ್ಮ ಪರೀಕ್ಷೆಯ ಸಮಯದಲ್ಲಿ, ನಾವು ಎರಡೂ ಇವಿಗಳ ಭಾರತೀಯ ರಸ್ತೆಗಳ ಪರಿಸ್ಥಿತಿಗಳಲ್ಲಿ ಅವುಗಳ ಮೈಲೇಜ್‌ ಅನ್ನು ನಿರ್ಧರಿಸಲು ಚಾರ್ಜ್ ಮುಗಿಯುವವರೆಗೆ ಒಂದಕ್ಕೊಂದನ್ನು ಜೊತೆಯಾಗಿ ಓಡಿಸಿದ್ದೇವೆ. ನೈಜತೆಯನ್ನು ಖಚಿತಪಡಿಸಿಕೊಳ್ಳಲು, ನಾವು ನಗರ ಮತ್ತು ಹೆದ್ದಾರಿ ರಸ್ತೆಗಳಲ್ಲಿ ಟಾಟಾ ನೆಕ್ಸಾನ್ ಇವಿಗಳನ್ನು ಪರೀಕ್ಷಿಸಿದ್ದೇವೆ. MIDC ಮಾನದಂಡಗಳ ಪ್ರಕಾರ 465 ಕಿಮೀ ವ್ಯಾಪ್ತಿಯನ್ನು ಕ್ಲೈಮ್ ಮಾಡುವ ಟಾಟಾ ನೆಕ್ಸಾನ್ ಇವಿಯ ಲಾಂಗ್‌-ರೇಂಜ್‌ ಎಡಿಷನ್‌ಗಳನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದೇವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ದಿನದ ಅಂತ್ಯದ ವೇಳೆಗೆ, ಎರಡೂ ಇವಿಗಳು ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಿದವು ಮತ್ತು ಅವುಗಳ ಮೈಲೇಜ್‌ ಕುರಿತ ಮಾಹಿತಿಯನ್ನು ನಾವು ಪಡೆದೆವು. ನಾಲ್ಕು ಪ್ರಯಾಣಿಕರನ್ನು ಹೊಂದಿದ್ದ ನೆಕ್ಸಾನ್‌ ಇವಿಯು 271 ಕಿಮೀ ದೂರವನ್ನು ಕ್ರಮಿಸಿದರೆ, ಡ್ರೈವರ್‌ ಮಾತ್ರವಿದ್ದ ನೆಕ್ಸಾನ್‌ ಇವಿಯು 299 ಕಿಮೀ ಕ್ರಮಿಸಿತು.

ನಮ್ಮ ಪರೀಕ್ಷೆಯ ಸಮಯದಲ್ಲಿ, ಎರಡೂ ಕಾರುಗಳ ಮೈಲೇಜ್‌ನಲ್ಲಿ ಗಮನಾರ್ಹ ವ್ಯತ್ಯಾಸಗಳನ್ನು ನಾವು ಕಂಡುಹಿಡಿದಿದ್ದೇವೆ. ನಗರದ ರಸ್ತೆಗಳಲ್ಲಿ, ವ್ಯತ್ಯಾಸವು ಸುಮಾರು 15-20 ಕಿ.ಮೀ.ಯಷ್ಟಿತ್ತು. ಆದರೆ, ಹಲವಾರು ತಿರುವುಗಳನ್ನು ಹೊಂದಿರುವ ಗುಡ್ಡಗಾಡು ರಸ್ತೆಗಳಲ್ಲಿ, ವ್ಯತ್ಯಾಸವು ಗಮನಾರ್ಹವಾಗಿ 35-40 ಕಿ.ಮೀ. ಆಗಿತ್ತು.

ಟಾಟಾ ನೆಕ್ಸಾನ್‌ ಇವಿ: ಒಂದು ಅವಲೋಕನ

ಟಾಟಾ ನೆಕ್ಸಾನ್‌ ಇವಿಯನ್ನು 2020ರಲ್ಲಿ ಬಿಡುಗಡೆ ಮಾಡಿತು ಮತ್ತು ಇತ್ತೀಚೆಗೆ ಅದನ್ನು ತಾಜಾ ವಿನ್ಯಾಸ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಆಪ್‌ಡೇಟ್‌ ಮಾಡಿದೆ. ನಾವು ಪರೀಕ್ಷಿಸಿದ ಎರಡೂ EVಗಳ ಪವರ್‌ಟ್ರೇನ್‌ಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಮೊಡೆಲ್‌

ಟಾಟಾ ನೆಕ್ಸಾನ್ ಇವಿ ಲಾಂಗ್‌-ರೇಂಜ್‌

ಬ್ಯಾಟರಿ ಪ್ಯಾಕ್‌

40.5 ಕಿ.ವ್ಯಾಟ್‌

ಇಲೆಕ್ಟ್ರಿಕ್‌ ಮೊಟಾರುಗಳ ಸಂಖ್ಯೆ

1

ಪವರ್‌

144 ಪಿಎಸ್‌

ಟಾರ್ಕ್‌

215 ಎನ್‌ಎನ್‌

ಕ್ಲೈಮ್‌ಡ್‌ ರೇಂಜ್‌

465 ಕಿ.ಮೀ (MIDC)

ನಾವು ಪರೀಕ್ಷಿಸಿದ ನೆಕ್ಸಾನ್‌ ಇವಿಗಳು ಮೊಡೆಲ್‌ನ ದೀರ್ಘ-ಶ್ರೇಣಿಯ ಆವೃತ್ತಿಗಳಾಗಿವೆ. ಆದರೆ, ಇವಿಯು 130 ಪಿಎಸ್‌ ಮತ್ತು 215 ಎನ್‌ಎಮ್‌ ಅನ್ನು ಉತ್ಪಾದಿಸುವ 30 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಮಿಡ್‌ ರೇಂಜ್‌ನ ಅವತಾರ್‌ನಲ್ಲಿ ಲಭ್ಯವಿದೆ, ಹಾಗೆಯೇ ಇದು MIDC- ಕ್ಲೈಮ್‌ ಮಾಡಿದ 325 ಕಿ.ಮೀ. ರೇಂಜ್‌ ಅನ್ನು ಹೊಂದಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024ರ ಟಾಟಾ ನೆಕ್ಸಾನ್ ಇವಿಯ ಬೆಲೆಯು 14.49 ಲಕ್ಷ ರೂ.ನಿಂದ 19.99 ಲಕ್ಷ ರೂ.ವಿನ (ಎಕ್ಸ್-ಶೋರೂಮ್) ನಡುವೆ ಇರಲಿದ್ದು, ಇದು ಮಹೀಂದ್ರಾ ಎಕ್ಸ್‌ಯುವಿ400 ಇವಿಯೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ. ಇದನ್ನು ಎಮ್‌ಜಿ ಜೆಡ್‌ಎಸ್‌ ಇವಿಗೆ ಹೆಚ್ಚು ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಇವಿ ಆಟೋಮ್ಯಾಟಿಕ್‌

Share via

Write your Comment on Tata ನೆಕ್ಸಾನ್ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ