ಭಾರತದಲ್ಲಿ ಹೊಸ ಜೀಪ್ ಮೆರಿಡಿಯನ್ ಬಿಡುಗಡೆ, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ
ಜೀಪ್ ಮೆರಿಡಿಯನ್ ಗಾಗಿ dipan ಮೂಲಕ ಅಕ್ಟೋಬರ್ 21, 2024 08:53 pm ರಂದು ಪ್ರಕಟಿಸಲಾಗಿದೆ
- 97 Views
- ಕಾಮೆಂಟ್ ಅನ್ನು ಬರೆಯಿರಿ
ಆಪ್‌ಡೇಟ್ ಮಾಡಲಾದ ಮೆರಿಡಿಯನ್ ಎರಡು ಹೊಸ ಬೇಸ್ ವೇರಿಯೆಂಟ್‌ಗಳನ್ನು ಮತ್ತು ಸಂಪೂರ್ಣ ಲೋಡ್ ಆಗಿರುವ ಓವರ್‌ಲ್ಯಾಂಡ್ ವೇರಿಯೆಂಟ್‌ನೊಂದಿಗೆ ADAS ಸೂಟ್ ಅನ್ನು ಪಡೆಯುತ್ತದೆ
-
2024 ಜೀಪ್ ಮೆರಿಡಿಯನ್ 5- ಮತ್ತು 7-ಸೀಟರ್‌ಗಳ ವಿನ್ಯಾಸಗಳೊಂದಿಗೆ ಬರುತ್ತದೆ.
-
ಹೊರಹೋಗುವ ಮೊಡೆಲ್‌ನೊಂದಿಗೆ ನೀಡಲಾಗುತ್ತಿದ್ದ ಲಿಮಿಟೆಡ್ ಮತ್ತು X ವೇರಿಯೆಂಟ್‌ಅನ್ನು ಸ್ಥಗಿತಗೊಳಿಸಲಾಗಿದೆ.
-
ಎಲ್ಲಾ-ಎಲ್‌ಇಡಿ ಲೈಟಿಂಗ್ ಮತ್ತು 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಹೊರಭಾಗವು ಒಂದೇ ಆಗಿರುತ್ತದೆ.
-
ಒಳಭಾಗದಲ್ಲಿ, ಇದು ಈಗ ವೇರಿಯೆಂಟ್-ಆಧಾರಿತ ಕ್ಯಾಬಿನ್ ಥೀಮ್‌ಗಳನ್ನು ಮತ್ತು ಹೊರಹೋಗುವ ಮೊಡೆಲ್‌ನಂತೆಯೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ.
-
ಫೀಚರ್‌ಗಳಲ್ಲಿ 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು 6 ಏರ್‌ಬ್ಯಾಗ್‌ಗಳು (ಎಲ್ಲಾ ವೇರಿಯೆಂಟ್‌ಗಳಲ್ಲಿ) ಸೇರಿವೆ.
-
ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆಗಳು 24.99 ಲಕ್ಷ ರೂ.ನಿಂದ 36.49 ಲಕ್ಷ ರೂ.ವರೆಗೆ ಇದೆ.
2024 ರ ಜೀಪ್ ಮೆರಿಡಿಯನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆ 24.99 ಲಕ್ಷ ರೂ.ನಿಂದ (ಪ್ಯಾನ್-ಇಂಡಿಯಾ) ಪ್ರಾರಂಭವಾಗುತ್ತದೆ. ಇದು ಎರಡು ಹೊಸ ಬೇಸ್ ವೇರಿಯೆಂಟ್‌ಗಳನ್ನು ಪಡೆಯುತ್ತದೆ ಮತ್ತು ವೇರಿಯೆಂಟ್‌ಗಳ ಪಟ್ಟಿಯಲ್ಲಿ ಈಗ ಒಟ್ಟು ನಾಲ್ಕು ಆಯ್ಕೆಗಳನ್ನು ಹೊಂದಿದೆ.
ವೇರಿಯೆಂಟ್ |
ಹೊಸ ಬೆಲೆ |
ಹಳೆ ಬೆಲೆ |
ವ್ಯತ್ಯಾಸ |
ಲಾಂಗಿಟ್ಯೂಡ್ |
24.99 ಲಕ್ಷ ರೂ. |
– |
ಹೊಸ ವೇರಿಯೆಂಟ್ |
ಲಾಂಗಿಟ್ಯೂಡ್ ಪ್ಲಸ್ |
27.50 ಲಕ್ಷ ರೂ. |
– |
ಹೊಸ ವೇರಿಯೆಂಟ್ |
ಲಿಮಿಟೆಡ್ |
– |
29.99 ಲಕ್ಷ ರೂ. |
ಸ್ಥಗಿತಗೊಳಿಸಲಾಗಿದೆ |
X |
– |
31.23 ಲಕ್ಷ ರೂ. |
ಸ್ಥಗಿತಗೊಳಿಸಲಾಗಿದೆ |
ಲಿಮಿಟೆಡ್ (ಒಪ್ಶನಲ್) |
30.49 ಲಕ್ಷ ರೂ. |
33.77 ಲಕ್ಷ ರೂ. |
(- 3.28 ಲಕ್ಷ ರೂ.) |
ಓವರ್‌ಲ್ಯಾಂಡ್ |
36.49 ಲಕ್ಷ ರೂ. |
37.14 ಲಕ್ಷ ರೂ. |
(- 65,000 ರೂ.) |
ಇವುಗಳು ವೇರಿಯೆಂಟ್‌ಗಳ ಆರಂಭಿಕ ಬೆಲೆಗಳಾಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.
ಆಪ್‌ಡೇಟ್ ಮಾಡಲಾದ ಜೀಪ್ ಮೆರಿಡಿಯನ್‌ನಲ್ಲಿ ಲಭ್ಯವಿರುವ ಎಲ್ಲವನ್ನೂ ನಾವು ನೋಡೋಣ:
ಹೊಸತೇನಿದೆ?
ಹೊಸ ಜೀಪ್ ಮೆರಿಡಿಯನ್ ಹೊರಹೋಗುವ ಮೊಡೆಲ್‌ನಂತೆಯೇ ಕಾಣುತ್ತದೆ. ಇದು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.
ಒಳಗೆ, ಇದು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ, ಇದು ಆಯ್ಕೆ ಮಾಡಿದ ವೇರಿಯೆಂಟ್‌ನ ಆಧಾರದ ಮೇಲೆ ಇದು ಬದಲಾಗುತ್ತದೆ. ನಾವು ಇದರ ಬಣ್ಣ ಆಯ್ಕೆಗಳನ್ನು ನೋಡೋಣ:
-
ಲಾಂಗಿಟ್ಯೂಡ್: ಕಪ್ಪು ಮತ್ತು ಗ್ರೇ
-
ಲಾಂಗಿಟ್ಯೂಡ್ ಪ್ಲಸ್: ಕಪ್ಪು ಮತ್ತು ಗ್ರೇ
-
ಲಿಮಿಟೆಡ್ (ಒಪ್ಶನಲ್): ಬೀಜ್ ಮತ್ತು ಕಪ್ಪು
-
ಓವರ್‌ಲ್ಯಾಂಡ್: ಟ್ಯೂಪೆಲೋ ಮತ್ತು ಕಪ್ಪು
ಡ್ಯಾಶ್‌ಬೋರ್ಡ್ ವಿನ್ಯಾಸವು ಮೊದಲಿನಂತೆಯೇ ಇದ್ದರೂ, 2024 ಮೆರಿಡಿಯನ್ ಈಗ 5 ಮತ್ತು 7 ಸೀಟರ್‌ಗಳ ಆಯ್ಕೆಯನ್ನು ಹೊಂದಿದೆ. ಬೇಸ್-ಸ್ಪೆಕ್ ಲಾಂಗಿಟ್ಯೂಡ್ ಕಟ್ಟುನಿಟ್ಟಾಗಿ 5-ಸೀಟರ್‌ಗಳ ಎಸ್‌ಯುವಿ ಆಗಿದ್ದರೆ, ಬೇಸ್‌ಗಿಂತ ಒಂದು ಮೇಲಿನ ಲಾಂಗಿಟ್ಯೂಡ್ ಪ್ಲಸ್ 5 ಮತ್ತು 7 ಸೀಟರ್‌ಗಳ ಆಯ್ಕೆಯನ್ನು ಹೊಂದಿದೆ. ಹೈಯರ್-ಸ್ಪೆಕ್ ಲಿಮಿಟೆಡ್ (ಒಪ್ಶನಲ್) ಮತ್ತು ಓವರ್‌ಲ್ಯಾಂಡ್ ವೇರಿಯೆಂಟ್‌ಗಳನ್ನು 7-ಸೀಟರ್‌ಗಳಾಗಿ ನೀಡಲಾಗುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಆಪ್‌ಡೇಟ್ ಮಾಡಲಾದ ಮೆರಿಡಿಯನ್ 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು ಹೊಸ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿದೆ. ವೈರ್‌ಲೆಸ್ ಫೋನ್ ಚಾರ್ಜರ್, ಕನೆಕ್ಟೆಡ್ ಕಾರ್ ಟೆಕ್, ಪ್ರಿ-ಕೂಲಿಂಗ್ ಎಸಿ ಫಂಕ್ಷನ್‌ನೊಂದಿಗೆ ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಡ್ಯುಯಲ್-ಝೋನ್ ಆಟೋ ಎಸಿ, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಇತರ ಫೀಚರ್‌ಗಳನ್ನು ಒಳಗೊಂಡಿದೆ.
ಸುರಕ್ಷತಾ ಸೂಟ್ ಅನ್ನು ಸಹ ಆಪ್‌ಡೇಟ್ ಮಾಡಲಾಗಿದ್ದು, ಹೊಸ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ವೇರಿಯೆಂಟ್‌ಗಳಲ್ಲಿ) ಮತ್ತು ಹೊಸ ರೇಡಾರ್ ಮತ್ತು ಕ್ಯಾಮೆರಾ-ಆಧಾರಿತ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ನಿರ್ಗಮನ ಎಚ್ಚರಿಕೆಯಂತಹ ಫೀಚರ್‌ಗಳನ್ನು ಪಡೆಯುತ್ತದೆ. ಇದು ಬ್ಲೈಂಡ್ ಸ್ಪಾಟ್ ಮಾನಿಟರ್ ಜೊತೆಗೆ 360 ಡಿಗ್ರಿ ಕ್ಯಾಮೆರಾವನ್ನು ಸಹ ಹೊಂದಿದೆ.
ಇದನ್ನೂ ಓದಿ: ಪರೀಕ್ಷಾ ವೇಳೆಯಲ್ಲಿ ಮತ್ತೆ ಪ್ರತ್ಯಕ್ಷವಾದ Mahindra XUV.e9, ಈ ಬಾರಿ ಕೆಲವು ಡೈನಾಮಿಕ್ ಅಂಶಗಳು ಬಹಿರಂಗ
ಪವರ್‌ಟ್ರೈನ್ ಆಯ್ಕೆಗಳು
ಹೊರಹೋಗುವ ಮೆರಿಡಿಯನ್‌ನಿಂದ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಇದರಲ್ಲಿಯೂ ನೀಡಲಾಗುತ್ತದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
2-ಲೀಟರ್ ಡೀಸೆಲ್ |
ಪವರ್ |
170 ಪಿಎಸ್ |
ಟಾರ್ಕ್ |
350 ಎನ್‌ಎಮ್ |
ಟ್ರಾನ್ಸ್‌ಮಿಷನ್* |
6-ಸ್ಪೀಡ್ MT / 9-ಸ್ಪೀಡ್ AT |
ಡ್ರೈವ್‌ಟ್ರೈನ್^ |
FWD / AWD |
ಮೈಲೇಜ್ |
ಪ್ರತಿ ಲೀ.ಗೆ 16.25 ಕಿ.ಮೀ.ವರೆಗೆ |
*MT = ಮ್ಯಾನುವಲ್ ಟ್ರಾನ್ಸ್‌ಮಿಷನ್; AT = ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್;
^FWD = ಫ್ರಂಟ್-ವೀಲ್-ಡ್ರೈವ್; AWD = ಆಲ್-ವೀಲ್-ಡ್ರೈವ್
ಹೊರಹೋಗುವ ಮೆರಿಡಿಯನ್‌ಗೆ ಹೋಲಿಸಿದರೆ ಪವರ್ ಅಥವಾ ಟಾರ್ಕ್ ಔಟ್‌ಪುಟ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಟ್ರಾನ್ಸ್‌ಮಿಷನ್ ಆಯ್ಕೆಗಳು ಸಹ ಒಂದೇ ಆಗಿರುತ್ತವೆ.
ಪ್ರತಿಸ್ಪರ್ಧಿಗಳು
2024 ರ ಜೀಪ್ ಮೆರಿಡಿಯನ್ ಟೊಯೋಟಾ ಫಾರ್ಚುನರ್, ಎಮ್‌ಜಿ ಗ್ಲೋಸ್ಟರ್ ಮತ್ತು ಸ್ಕೋಡಾ ಕೊಡಿಯಾಕ್‌ಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಜೀಪ್ ಮೆರಿಡಿಯನ್ ಡೀಸೆಲ್
0 out of 0 found this helpful