• English
  • Login / Register

2024 ಜೀಪ್ ಮೆರಿಡಿಯನ್ Vs ಅದರ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

ಜೀಪ್ ಮೆರಿಡಿಯನ್ ಗಾಗಿ shreyash ಮೂಲಕ ಅಕ್ಟೋಬರ್ 23, 2024 08:49 pm ರಂದು ಪ್ರಕಟಿಸಲಾಗಿದೆ

  • 42 Views
  • ಕಾಮೆಂಟ್‌ ಅನ್ನು ಬರೆಯಿರಿ

ಜೀಪ್ ಮೆರಿಡಿಯನ್ ತನ್ನ ಡೀಸೆಲ್ ಪ್ರತಿಸ್ಪರ್ಧಿಗಳಿಗಿಂತ ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ ಎರಡೂ ವೇರಿಯೆಂಟ್‌ಗಳಲ್ಲಿ 10 ಲಕ್ಷ ರೂ.ನಷ್ಟು ಕಡಿಮೆ ಬೆಲೆಯಲ್ಲಿ ಬರುತ್ತದೆ

2024 Jeep Meridian vs Rivals: Price Talk

 ಜೀಪ್ ಮೆರಿಡಿಯನ್ ಇತ್ತೀಚೆಗೆ ಎರಡು ಹೊಸ ಎಂಟ್ರಿ-ಲೆವೆಲ್‌ನ ವೇರಿಯೆಂಟ್‌ಗಳು ಮತ್ತು ಕೆಲವು ಹೆಚ್ಚುವರಿ ಫೀಚರ್‌ಗಳ ರೂಪದಲ್ಲಿ ಹೊಸ ಆಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಮೆರಿಡಿಯನ್, ಈ ಇತ್ತೀಚಿನ MY24 (ಮೊಡೆಲ್‌ ಇಯರ್‌) ಅಪ್‌ಡೇಟ್‌ನೊಂದಿಗೆ, ಈಗ ಮೊದಲಿಗಿಂತ 3 ಲಕ್ಷ ರೂ.ನಷ್ಟು ಹೆಚ್ಚು ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ. ಅದರ ಪ್ರತಿಸ್ಪರ್ಧಿಗಳಾದ ಟೊಯೋಟಾ ಫಾರ್ಚುನರ್ ಮತ್ತು MG ಗ್ಲೋಸ್ಟರ್‌ಗಳಿಗೆ ಹೋಲಿಸಿದರೆ, ಬೆಲೆಗಳು ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿದೆ:  

ಡೀಸೆಲ್‌ ಮ್ಯಾನುವಲ್‌

2024 ಜೀಪ್ ಮೆರಿಡಿಯನ್

ಟೊಯೋಟಾ ಫಾರ್ಚುನರ್

ಲಾಂಗಿಟ್ಯೂಡ್‌ 2WD - 24.99 ಲಕ್ಷ ರೂ.

 

ಲಾಂಗಿಟ್ಯೂಡ್‌ ಪ್ಲಸ್‌ 2WD -  27.50 ಲಕ್ಷ ರೂ.

 

ಲಿಮಿಟೆಡ್‌ (ಒಪ್ಶನಲ್‌) 2WD -  33.77 ಲಕ್ಷ ರೂ.

 

 

2WD - 35.93 ಲಕ್ಷ ರೂ

 

4WD - 40.03 ಲಕ್ಷ ರೂ

ಗಮನಿಸಿದ ಪ್ರಮುಖ ಅಂಶಗಳು

New Jeep Meridian exterior

2024 ರ ಮೆರಿಡಿಯನ್‌ನ ಎಂಟ್ರಿ-ಲೆವೆಲ್‌ನ ವೇರಿಯೆಂಟ್‌, ಟೊಯೊಟಾ ಫಾರ್ಚುನರ್‌ನ ಬೇಸ್‌ ವೇರಿಯೆಂಟ್‌ಗಿಂತ ಸುಮಾರು 11 ಲಕ್ಷ ರೂಪಾಯಿಗಳ ದೊಡ್ಡ ಅಂತರದ ಕಡಿಮೆ ಬೆಲೆಯನ್ನು ಹೊಂದಿದೆ.

ಮೆರಿಡಿಯನ್‌ನ ಮಿಡ್-ಸ್ಪೆಕ್ ಲಿಮಿಟೆಡ್ (ಒಪ್ಶನಲ್‌) ವೇರಿಯೆಂಟ್‌ ಫಾರ್ಚುನರ್‌ನ 2WD ವೇರಿಯೆಂಟ್‌ಗಿಂತ ಸುಮಾರು 2.16 ಲಕ್ಷ ರೂ.ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 

2024 Jeep Meridian vs Rivals: Price Talk

  • ಮೆರಿಡಿಯನ್ ಲಿಮಿಟೆಡ್ (ಒಪ್ಶನಲ್‌) 2WD ವೇರಿಯೆಂಟ್‌ಗಿಂತ ಸುಮಾರು 6 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಹಣ ವ್ಯಹಿಸುವ ಮೂಲಕ, ನೀವು ಟೊಯೋಟಾ ಫಾರ್ಚೂನರ್‌ನ 4WD ವೇರಿಯೆಂಟ್‌ ಅನ್ನು ಸಹ ಆರಿಸಿಕೊಳ್ಳಬಹುದು. ಮತ್ತೊಂದೆಡೆ, ಮ್ಯಾನ್ಯುವಲ್ ಟ್ರಾನ್ಸ್ಮಿಷನ್‌ನಲ್ಲಿರುವ ಮೆರಿಡಿಯನ್ ಅನ್ನು 2WD ವೇರಿಯೆಂಟ್‌ನಲ್ಲಿ ಮಾತ್ರ ಹೊಂದಬಹುದು.

  • ಮೆರಿಡಿಯನ್‌ನ ಮಿಡ್-ಸ್ಪೆಕ್ ಲಿಮಿಟೆಡ್ (O) ವೇರಿಯೆಂಟ್‌ ಫಾರ್ಚುನರ್‌ಗಿಂತ ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್, 10.2-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ಡ್ಯುಯಲ್-ಜೋನ್ ಎಸಿ ಮತ್ತು ಪನರೋಮಿಕ್‌ ಸನ್‌ರೂಫ್‌ನಂತಹ ಸೌಕರ್ಯಗಳನ್ನು ಪಡೆಯುತ್ತದೆ.

  • ಮೆರಿಡಿಯನ್ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಅದು 170ಪಿಎಸ್‌ ಮತ್ತು 350ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ.

  • ಟೊಯೊಟಾ ಫಾರ್ಚುನರ್ ದೊಡ್ಡದಾದ 2.8-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 204 ಪಿಎಸ್‌ ಮತ್ತು 420 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ.

 

ಇದನ್ನೂ ಓದಿ: Mahindra XUV 3XO ಇವಿ ಮತ್ತೊಮ್ಮೆ ಪ್ರತ್ಯಕ್ಷ, ರೆಗುಲರ್‌ ಕಾರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳ ಸೇರ್ಪಡೆ

ಡೀಸೆಲ್ ಆಟೋಮ್ಯಾಟಿಕ್‌  

2024 ಜೀಪ್ ಮೆರಿಡಿಯನ್

ಟೊಯೋಟಾ ಫಾರ್ಚುನರ್

ಎಮ್‌ಜಿ ಗ್ಲೋಸ್ಟರ್‌

ಲಾಂಗಿಟ್ಯೂಡ್‌  2WD - 28.49 ಲಕ್ಷ ರೂ.

 

 

ಲಾಂಗಿಟ್ಯೂಡ್‌ ಪ್ಲಸ್‌ 2WD - 30.49 ಲಕ್ಷ ರೂ.

 

 

ಲಿಮಿಟೆಡ್‌ (ಒಪ್ಶನಲ್‌) 2WD - 34.49 ಲಕ್ಷ ರೂ. 

 

 

ಓವರ್‌ಲ್ಯಾಂಡ್ 2WD - 36.49 ಲಕ್ಷ ರೂ.

 

 

 

2WD - 38.21 ಲಕ್ಷ ರೂ.

 

ಓವರ್‌ಲ್ಯಾಂಡ್ 2WD - 36.49 ಲಕ್ಷ ರೂ.

 

 

 

 

ಶಾರ್ಪ್ 7-ಸೀಟರ್ 2WD - 38.80 ಲಕ್ಷ ರೂ.

 

 

ಸ್ಯಾವಿ 6/7-ಸೀಟರ್ 2WD - 40.34 ಲಕ್ಷ ರೂ.

 

4WD - 42.32 ಲಕ್ಷ ರೂ.

 

 

 

ಸ್ಯಾವಿ 6/7-ಸೀಟರ್ 4WD - 43.16 ಲಕ್ಷ ರೂ.

 

GR-S 4WD - 51.44 ಲಕ್ಷ ರೂ.

 

ಗಮನಿಸಿದ ಪ್ರಮುಖ ಅಂಶಗಳು

  • ಮೆರಿಡಿಯನ್ ಅತ್ಯಂತ ಕೈಗೆಟುಕುವ ಡೀಸೆಲ್ ಆಟೋಮ್ಯಾಟಿಕ್‌ ಎಸ್‌ಯುವಿ ಆಗಿ ಹೊರಹೊಮ್ಮುತ್ತದೆ, ಇದು ಫಾರ್ಚೂನರ್ ಮತ್ತು ಗ್ಲೋಸ್ಟರ್‌ನ ಎಂಟ್ರಿ-ಲೆವೆಲ್‌ನ ಆಟೋಮ್ಯಾಟಿಕ್‌ ವೇರಿಯೆಂಟ್‌ಗಳಿಗಿಂತ ಸುಮಾರು 10 ಲಕ್ಷ ರೂ.ನಷ್ಟು ಕಡಿಮೆ ಬೆಲೆಯಲ್ಲಿ ಬರುತ್ತದೆ.

New Jeep Meridian dashboard

  • ಮೆರಿಡಿಯನ್ ಮತ್ತು ಗ್ಲೋಸ್ಟರ್ ಇಲ್ಲಿ ಪನರೋಮಿಕ್‌ ಸನ್‌ರೂಫ್ ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ನಂತಹ ಫೀಚರ್‌ಗಳೊಂದಿಗೆ ಬರುವ ಎರಡು ಎಸ್‌ಯುವಿಗಳಾಗಿವೆ.

  • ಆದರೆ, ಇಲ್ಲಿ ಗ್ಲೋಸ್ಟರ್ ಅತ್ಯಂತ ಫೀಚರ್‌-ಲೋಡೆಡ್‌ ಎಸ್‌ಯುವಿ ಆಗಿದೆ, ಏಕೆಂದರೆ ಇದು 3-ಝೋನ್‌ ಎಸಿ, ವೆಂಟಿಲೇಶನ್‌ ಮತ್ತು ಬಿಸಿಯಾದ ಮುಂಭಾಗದ ಸೀಟುಗಳು ಮತ್ತು ಚಾಲಕನ ಸೀಟಿಗೆ ಮಸಾಜ್ ಫಂಕ್ಷನ್‌ ಅನ್ನು ಪಡೆಯುತ್ತದೆ. 

  • ಎಮ್‌ಜಿ ಗ್ಲೋಸ್ಟರ್‌ಗಿಂತ ಭಿನ್ನವಾಗಿ, ಇಲ್ಲಿ ಮೆರಿಡಿಯನ್ ಮತ್ತು ಫಾರ್ಚುನರ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

  • ಎಮ್‌ಜಿ ಗ್ಲೋಸ್ಟರ್‌ನ ಎಂಟ್ರಿ-ಲೆವೆಲ್‌ನ ಶಾರ್ಪ್ ವೇರಿಯೆಂಟ್‌ 2-ಲೀಟರ್ ಡೀಸೆಲ್ ಎಂಜಿನ್ (161 ಪಿಎಸ್‌/373.5 ಎನ್‌ಎಮ್‌) ಅನ್ನು ಬಳಸುತ್ತದೆ, ಆದರೆ ಅದರ ಟಾಪ್-ಸ್ಪೆಕ್ ಸ್ಯಾವಿ ವೇರಿಯೆಂಟ್‌ 2-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ (215.5 ಪಿಎಸ್‌/478.5 ಎನ್‌ಎಮ್‌) ಅನ್ನು ಪಡೆಯುತ್ತದೆ. ಎರಡೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ.

  • ಗ್ಲೋಸ್ಟರ್‌ನ ಟ್ವಿನ್‌-ಟರ್ಬೊ ಡೀಸೆಲ್ ವೇರಿಯೆಂಟ್‌ಗಳು 4WD ಡ್ರೈವ್‌ಟ್ರೇನ್‌ನ ಆಯ್ಕೆಯನ್ನು ಸಹ ಪಡೆಯುತ್ತವೆ.

  • ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಹೊಂದಿರುವ ಫಾರ್ಚುನರ್ 500 ಎನ್‌ಎಮ್‌ನೊಂದಿಗೆ ಅತ್ಯಧಿಕ ಟಾರ್ಕ್ ಉತ್ಪಾದನೆಯನ್ನು ಹೊಂದಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಜೀಪ್ ಮೆರಿಡಿಯನ್ ಡೀಸೆಲ್

was this article helpful ?

Write your Comment on Jeep ಮೆರಿಡಿಯನ್

1 ಕಾಮೆಂಟ್
1
S
shivansh
Oct 23, 2024, 5:47:51 PM

good carsss

Read More...
    ಪ್ರತ್ಯುತ್ತರ
    Write a Reply

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience