- + 10ಬಣ್ಣಗಳು
- + 36ಚಿತ್ರಗಳು
- ವೀಡಿಯೋಸ್
ಮಾರುತಿ ಸಿಯಾಜ್
ಮಾರುತಿ ಸಿಯಾಜ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1462 cc |
ಪವರ್ | 103.25 ಬಿಹೆಚ್ ಪಿ |
torque | 138 Nm |
ಟ್ರಾನ್ಸ್‌ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 20.04 ಗೆ 20.65 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ |
- ರಿಯರ್ ಏಸಿ ವೆಂಟ್ಸ್
- ಪಾರ್ಕಿಂಗ್ ಸೆನ್ಸಾರ್‌ಗಳು
- cup holders
- android auto/apple carplay
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಫಾಗ್‌ಲೈಟ್‌ಗಳು
- ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- android auto/apple carplay
- voice commands
- ಏರ್ ಪ್ಯೂರಿಫೈಯರ್
- key ವಿಶೇಷಣಗಳು
- top ವೈಶಿಷ್ಟ್ಯಗಳು

ಸಿಯಾಜ್ ಇತ್ತೀಚಿನ ಅಪ್ಡೇಟ್
ಮಾರುತಿ ಸಿಯಾಜ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಮಾರುತಿ ಸಿಯಾಜ್ ಅನ್ನು ಈ ಅಕ್ಟೋಬರ್‌ನಲ್ಲಿ 48,000 ರೂ.ವರೆಗೆ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತಿದೆ. ಈ ಡಿಸ್ಕೌಂಟ್‌ನಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.
ಮಾರುತಿ ಸಿಯಾಜ್‌ನ ಬೆಲೆ ಎಷ್ಟು?
ಮಾರುತಿಯು ಸಿಯಾಜ್‌ನ ಬೆಲೆಯನ್ನು 9.40 ಲಕ್ಷ ರೂ.ನಿಂದ 12.30 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ-ದೆಹಲಿ) ನಿಗದಿಪಡಿಸಿದೆ.
ಮಾರುತಿ ಸಿಯಾಜ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಇದು ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ಮಾರುತಿ ಸಿಯಾಜ್‌ನಲ್ಲಿ ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಯಾವುದು ?
ಟಾಪ್‌ಗಿಂತ ಒಂದು ಕೆಳಗಿರುವ ಝೀಟಾವನ್ನು ಮಾರುತಿಯ ಕಾಂಪ್ಯಾಕ್ಟ್ ಸೆಡಾನ್‌ನ ಅತ್ಯುತ್ತಮ ವೇರಿಯೆಂಟ್ ಎಂದು ಪರಿಗಣಿಸಬಹುದು. ಇದು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 15-ಇಂಚಿನ ಅಲಾಯ್ ವೀಲ್‌ಗಳು, 7-ಇಂಚಿನ ಟಚ್‌ಸ್ಕ್ರೀನ್, ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್‌ನಂತಹ ಸೌಕರ್ಯಗಳೊಂದಿಗೆ ಲೋಡ್ ಆಗುತ್ತದೆ. ಇದು ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ಸನ್‌ಶೇಡ್‌ಗಳನ್ನು ಸಹ ಪಡೆಯುತ್ತದೆ. ಸುರಕ್ಷತೆಯನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಿಂದ ನೋಡಿಕೊಳ್ಳಲಾಗುತ್ತದೆ.
ಮಾರುತಿ ಸಿಯಾಜ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಸಿಯಾಜ್‌ನ ಬೋರ್ಡ್‌ನಲ್ಲಿರುವ ಫೀಚರ್‌ಗಳು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್ (2 ಟ್ವೀಟರ್‌ಗಳನ್ನು ಒಳಗೊಂಡಂತೆ), ಆಟೋಮ್ಯಾಟಿಕ್ ಎಸಿ, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಮಾರುತಿ ಸಿಯಾಜ್ ಎಷ್ಟು ವಿಶಾಲವಾಗಿದೆ?
ಸಿಯಾಜ್ ವಿಶಾಲವಾದ ಕ್ಯಾಬಿನ್ ಜಾಗವನ್ನು ನೀಡುತ್ತದೆ, 6-ಅಡಿಗಳಷ್ಟು ಎತ್ತರದ ಇಬ್ಬರು ಸುಲಭವಾಗಿ ಒಬ್ಬರ ಹಿಂದೆ ಒಬ್ಬರ ಹಿಂದೆ ಕುಳಿತುಕೊಳ್ಳಬಹುದು. ಹಿಂದಿನ ಸೀಟುಗಳು ಸಾಕಷ್ಟು ಮೊಣಕಾಲು ಕೊಠಡಿ ಮತ್ತು ಲೆಗ್‌ರೂಮ್ ಅನ್ನು ನೀಡುತ್ತವೆ, ಆದರೆ, ಹೆಡ್‌ರೂಮ್ ಅನ್ನು ಸುಧಾರಿಸಬೇಕಾಗುತ್ತದೆ. ಫ್ಲೋರ್‌ನ ಎತ್ತರವು ಅತಿಯಾಗಿಲ್ಲ, ಇದು ಉತ್ತಮ ತೊಡೆಯ ಬೆಂಬಲವನ್ನು ಖಾತ್ರಿಗೊಳಿಸುತ್ತದೆ. ಸಿಯಾಜ್ 510 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.
ಮಾರುತಿ ಸಿಯಾಜ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಸಿಯಾಜ್ 1.5-ಲೀಟರ್ ಪೆಟ್ರೋಲ್ ಎಂಜಿನ್ (105 ಪಿಎಸ್/138 ಎನ್‌ಎಮ್) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ಲಭ್ಯವಿದೆ.
ಮಾರುತಿ ಸಿಯಾಜ್‌ನ ಮೈಲೇಜ್ ಎಷ್ಟು?
ಸಿಯಾಝ್‌ನ ಕ್ಲೈಮ್ ಮಾಡಿದ ಮೈಲೇಜ್ ಹೀಗಿದೆ :
-
1.5-ಲೀಟರ್ ಮ್ಯಾನುವಲ್: ಪ್ರತಿ ಲೀ.ಗೆ 20.65 ಕಿ.ಮೀ
-
1.5-ಲೀಟರ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 20.04 ಕಿ.ಮೀ
ಮಾರುತಿ ಸಿಯಾಜ್ ಎಷ್ಟು ಸುರಕ್ಷಿತ?
ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿದೆ. ಸಿಯಾಜ್ ಅನ್ನು 2016 ರಲ್ಲಿ ASEAN NCAP ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿತು ಮತ್ತು ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 4 ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಗಾಗಿ 2 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.
ಮಾರುತಿ ಸಿಯಾಜ್‌ನಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?
ಮಾರುತಿಯು ಸಿಯಾಜ್‌ಗೆ ಏಳು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ನೀಡುತ್ತದೆ: ಸೆಲೆಸ್ಟಿಯಲ್ ಬ್ಲೂ, ಡಿಗ್ನಿಟಿ ಬ್ರೌನ್, ಬ್ಲೂಯಿಶ್ ಬ್ಲ್ಯಾಕ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಕಪ್ಪು ರೂಫ್‌ನ ಕಾಂಬಿನೇಶನ್‌ನೊಂದಿಗೆ ಬರುತ್ತದೆ.
ನೀವು ಮಾರುತಿ ಸಿಯಾಜ್ ಖರೀದಿಸಬಹುದೇ ?
ಮಾರುತಿ ಸಿಯಾಜ್ ಇದೀಗ ಭಾರತದಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆಯ ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಇದು ಎಲ್ಲಾ ಅಗತ್ಯ ಫೀಚರ್‌ಗಳೊಂದಿಗೆ ವಿಶಾಲವಾದ ಇಂಟಿರಿಯರ್ ಅನ್ನು ನೀಡುತ್ತದೆ. ಅದರ ವಿಶ್ವಾಸಾರ್ಹತೆ ಮತ್ತು ಮಾರಾಟದ ನಂತರದ ಮಾರುತಿಯ ದೃಢವಾದ ಸರ್ವೀಸ್ ಸೇವೆಗಳಿಂದಾಗಿ ಅದರ ಪ್ರತಿಸ್ಪರ್ಧಿಗಳಿಂದ ಅದನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ. ಆದರೂ, ಸಿಯಾಜ್‌ಗೆ ಜನರೇಶನ್ ಆಪ್‌ಡೇಟ್‌ನ ಅಗತ್ಯವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಮಾರುತಿ ಸಿಯಾಜ್‌ಗೆ ಪರ್ಯಾಯಗಳು ಯಾವುವು?
ಮಾರುತಿ ಸಿಯಾಜ್ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಸಿಯಾಜ್ ಸಿಗ್ಮಾ(ಬೇಸ್ ಮಾಡೆಲ್)1462 cc, ಮ್ಯಾನುಯಲ್, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹9.41 ಲಕ್ಷ* | ||
ಸಿಯಾಜ್ ಡೆಲ್ಟಾ1462 cc, ಮ್ಯಾನುಯಲ್, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹9.99 ಲಕ್ಷ* | ||
ಅಗ್ರ ಮಾರಾಟ ಸಿಯಾಜ್ ಝೀಟಾ1462 cc, ಮ್ಯಾನುಯಲ್, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹10.40 ಲಕ್ಷ* | ||
ಸಿಯಾಜ್ ಡೆಲ್ಟಾ ಎಟಿ1462 cc, ಆಟೋಮ್ಯಾಟಿಕ್, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹11.11 ಲಕ್ಷ* | ||
ಸಿಯಾಜ್ ಆಲ್ಫಾ1462 cc, ಮ್ಯಾನು ಯಲ್, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹11.20 ಲಕ್ಷ* | ||
ಸಿಯಾಜ್ ಝೀಟಾ ಎಟಿ1462 cc, ಆಟೋಮ್ಯಾಟಿಕ್, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹11.50 ಲಕ್ಷ* | ||
ಸಿಯಾಜ್ ಆಲ್ಫಾ ಎಟಿ(ಟಾಪ್ ಮೊಡೆಲ್)1462 cc, ಆಟೋಮ್ಯಾಟಿಕ್, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | ₹12.29 ಲಕ್ಷ* |

ಮಾರುತಿ ಸಿಯಾಜ್ ವಿಮರ್ಶೆ
Overview
ಮಾರುತಿ ಸಿಯಾಜ್ ವಿಮರ್ಶೆ
ಆಶ್ಚರ್ಯಕರವಾಗಿ, ಮಾರುತಿ ಆಶ್ವಾಸನೆ ಕೊಡುತ್ತಿದೆ ಸ್ವಚ್ಛ , ಹೆಚ್ಚು ದಕ್ಷ ಡ್ರೈವ್ ಜೊತೆಗೆ ನೈಕರಣ ಗೊಂಡ ಪೆಟ್ರೋಲ್ ಆವೃತ್ತಿಯ ಹಾಗು ಕಡಿಮೆ ಬೆಲೆ ಜೊತೆಗೆ ಡೀಸೆಲ್. ಸಹಜವಾಗಿ ಸಿಯಾಜ್ ಗೆ ಬಹಳಷ್ಟು ಫೀಚರ್ ಗಳನ್ನೂ ಸೇರಿಸಲಾಗಿದೆ. ಪೇಪರ್ ನಲ್ಲಿ, ಸಿಯಾಜ್ ಬಹಳಷ್ಟು ಉತ್ತಮಗಳನ್ನು ಕೊಡಲಾಗಿದೆ. ಹಾಗಾಗಿ ನಾವು ಒಂದು ಸರಳ ಪ್ರಶ್ನೆಗೆ ಉತ್ತರಿಸುತ್ತೇವೆ - ನವೀಕರಣಗಳು ನಿಮ್ಮ ಚೆಕ್ ಗೆ ಮೌಲ್ಯಯುಕ್ತ ಆಗಿದೆಯೇ?
ಸಿಯಾಜ್ ನಲ್ಲಿ ಸಾಮಾನ್ಯ ವಿಷಯಗಳಾದ ವಿಶಾಲತೆ, ರೈಡ್ ಗುಣ ಮಟ್ಟ, ಸುಲಭವಾಗಿ ಡ್ರೈವ್ ಮಾಡಲು ಅನುಕೂಲ ಕೊಡಲಾಗಿದೆ. ಜೊತೆಗೆ, ಇದನ್ನು ಕೊಳ್ಳಲು ಬಹಳಷ್ಟು ಪೂರಕ ವಿಷಯಗಳು ಲಭ್ಯವಿದೆ. ಹಾಗು ಹೊಸ ಎಂಜಿನ್ ಹೆಚ್ಚು ಮೈಲೇಜ್ ಕೊಡುತ್ತಿದ್ದು ಅದು ಆಟೋಮ್ಯಾಟಿಕ್ ನ ಸಾಮಾನ್ಯ ಸಮಸ್ಯೆಯಾದ ಹೆಚ್ಚು ಇಂಧನ ಬಳಕೆಯನ್ನು ಹೋಗಲಾಡಿಸುತ್ತದೆ. ಹೌದು , ಈಗಲೂ ಸಹ ಇದರಲ್ಲಿ ಆಶ್ಚರ್ಯಕರ ವಿಷಯಗಳಾದ ಸನ್ ರೂಫ್ ಕೊಡಲಾಗಿಲ್ಲ ಅಥವಾ ಇತರ ಫೀಚರ್ ಗಳಾದ ಹ್ಯಾಂಡ್ಸ್ ಫ್ರೀ ಟ್ರಂಕ್ ರಿಲೀಸ್ ಅಥವಾ ವೆಂಟಿಲೇಟೆಡ್ ಸೀಟ್ ಕೊಡಲಾಗಿಲ್ಲ. ಇಲ್ಲಿ ಕೇವಲ ಮಿಸ್ ಆಗಿರುವ ವಿಷಯವೆಂದರೆ ಸೈಡ್ ಹಾಗು ಕರ್ಟನ್ ಏರ್ಬ್ಯಾಗ್ ಗಳು ಮಿಸ್ ಆಗಿರುವುದು.
ಇದರ ಬೆಲೆ ಪಟ್ಟಿ ವಿಚಾರಕ್ಕೆ ಬಂದರೆ, ಸಿಯಾಜ್ ಹೆಚ್ಚು ಮೌಲ್ಯಯುಕ್ತವಾಗಿದೆ. ಡೀಲ್ ಗೆ ಹೆಚ್ಚು ಪೂರಕ ವಾದ ವಿಷಯಗಳೆಂದರೆ ಕೆಳ ಹಂತದ ವೇರಿಯೆಂಟ್ ಗಳು ಪಡೆಯುತ್ತದೆ ಉತ್ತಮ ಫೀಚರ್ ಗಳನ್ನು. ಅದರ ಅರ್ಥ ನಿಮಗೆ ನಿಮ್ಮ ಬಜೆಟ್ ನಿಂದ ಮಲತಾಯಿ ದೋರಣೆ ಗೆ ದಾರಿ ಉಂಟಾಗುವುದಿಲ್ಲ.
ಅದರ ಒಟ್ಟಾರೆ ಕಾರ್ಯ ದಕ್ಷತೆ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಗಳು ನಿಮ್ಮ ಪಟ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ ಹಾಗು ನಿಮಗೆ ಅನುಕೂಲವಾದ , ವಿಶಾಲವಾದ, ಸೆಡಾನ್ ಡ್ರೈವ್ ಮಾಡಲು ಬೇಕಾಗಿದ್ದರೆ ಕೆಲಸದಿಂದ ಮನೆಗೆ ಹೋಗಲು, ಸಿಯಾಜ್ ಹಿಂದಿಗಿಂತಲೂ ಹೆಚ್ಚು ಸದೃಢ ಆಯ್ಕೆ ಆಗಿರುತ್ತದೆ.
ಎಕ್ಸ್‌ಟೀರಿಯರ್
ಬಾಹ್ಯಗಳು
ಜನಗಳು ನೀವು ಹೊಸ ಸಿಯಾಜ್ ಅನ್ನು ಡ್ರೈವ್ ಮಾಡುತ್ತಿದ್ದೀರಿ ಎಂದು ಕೊಳ್ಳುತ್ತಾರೆಯೇ ಅಥವಾ ಹಳೆಯದನ್ನು ಎಂದುಕೊಳ್ಳುತ್ತಾರೆಯೇ? ಇದಕ್ಕೆ ಉತ್ತರ ವೇರಿಯೆಂಟ್ ಗಳ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ , ಟಾಪ್ -ಸ್ಪೆಕ್ ಅಲ್ಫಾ ವೇರಿಯೆಂಟ್ ನೀವುಚಿತ್ರಗಳಲ್ಲಿ ನೋಡಬಹುದು ಅದು ಹಳೆಯ ಮಾಡೆಲ್ ಗಿಂತಲೂ ವಿಭಿನ್ನವಾಗಿದೆ. ಇತರ ಮಾಡೆಲ್ ಗಳು ಸ್ವಲ್ಪ ಗಮನಿಸಬೇಕಾಗುತ್ತದೆ.
ಇದರ ಫೀಚರ್ ಗಳಲ್ಲಿ, ಹೊಸ ಪೂರ್ಣ -LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಹಾಗು LED ಫಾಗ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ ಗಳು ಹೊಂದಿದೆ. ಹಾಗು ಇದರಲ್ಲಿ ಹೊಸ ಡಿಸೈನ್ ಹೊಂದಿರುವ 16-ಇಂಚು ಪೂರ್ಣ ಅಲಾಯ್ ವೀಲ್ ಗಳು ಹಾಗು ಬಹಳಷ್ಟು ಕ್ರೋಮ್ ತುಣುಕುಗಳು ರೇರ್ ಬಂಪರ್ ಮೇಲೆ ಕೊಡಲಾಗಿದೆ ಸಹ. ಕೆಳ ಹಂತದ ವೇರಿಯೆಂಟ್ ಗಳಲ್ಲಿ ಸೌಂದರ್ಯಕಗಳ ಬದಲಾವಣೆ ಗಳನ್ನು ಫ್ರಂಟ್ ಗ್ರಿಲ್ ಹಾಗು ಬಂಪರ್ ಗೆ ಸೀಮಿತಗೊಳಿಸಲಾಗಿದೆ.
ಹೊಸ ಗ್ರಿಲ್ ಅಗಲವಾಗಿದೆ ಹಾಗು ಹೆಡ್ ಲ್ಯಾಂಪ್ ಗಳನ್ನು ಸೇರುತ್ತದೆ. ನಮಗೆ ಕ್ರೋಮ್ ಪಟ್ಟಿ ಇಷ್ಟವಾಯಿತು ಹಾಗು ಮೆಶ್ ತರಹದ ವಿವರಗಳು ಸಹ. ಅದು ಹೇಳಿದ ನಂತರ , ಇದು ನಮಗೆ ಟಾಟಾ ಅವರ "ಹುಮಾನಿಟಿ ಲೈನ್ " ಅನ್ನು ಸ್ವಲ್ಪ ಜ್ಞಾಪಿಸುತ್ತದೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚುವರಿ ಆಕರ್ಷಕಗಳನ್ನು ಕೊಡಲಾಗಿದೆ ಬಂಪರ್ ನಲ್ಲಿ ಅಗಲವಾದ ಏರ್ ಡ್ಯಾಮ್ ಹಾಗು ಪ್ರಮುಖವಾಗಿರುವ C-ಶೈಲಿಯ ಔಟ್ ಲೈನ್ ಗಳು ಫಾಗ್ ಲ್ಯಾಂಪ್ ಗಳಿಗಾಗಿ.
ಮಾರುತಿ ಸುಜುಕಿ ಸೈಡ್ ಪ್ರೊಫೈಲ್ ನಲ್ಲಿ ಅಥವಾ ಹಿಂಬದಿಯಲ್ಲಿ ಹೆಚ್ಚು ಬದಲಾವಣೆ ತಂದಿಲ್ಲ. ನಮಗೆ ಹಿಂಬದಿಯಲ್ಲಿ ಸ್ಪರ್ಧಾತ್ಮಕ ನೋಟದ ಬಂಪರ್ ಇದ್ದಿದ್ದರೆ ಚೆನ್ನಾಗಿರುತಿತ್ತು ಎನಿಸಿತು. ಸ್ಪರ್ಧಾತ್ಮಕ ವಿಷಯಗಳಲ್ಲಿ ವೆನಿಲ್ಲಾ ಸಿಯಾಜ್ ನಿಮಗೆ ಹೆಚ್ಚು ಆಕರ್ಷಕವಾಗಿ ಕಾಣುವುದಿಲ್ಲ, ನೀವು ಹಲವು ಬಾಡಿ ಕಿಟ್ ಮತ್ತು ಅಸ್ಸೇಸ್ಸೋರಿ ಪಟ್ಟಿಯಲ್ಲಿ ಸ್ಪೋಯಿಲರ್ ಅನ್ನು ಸೇರಿಸಬಹುದು. ಅವುಗಳ ಜೊತೆಗೆ ಅದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಹಾಗಾಗಿ, ಹೌದು ಸಿಯಾಜ್ ಹಿಂದಿನದಕ್ಕಿಂತ ಹೆಚ್ಚು ನವೀಕರಣ ಗೊಂಡಂತೆ ಕಾಣುತ್ತದೆ. ಅದು ಗರಿಷ್ಟ ಬದಲಾವಣೆ ಗಳು ಆಗಿಲ್ಲ ಆದರೆ ಎಲ್ಲರಿಗು ನೀವು ಸಿಯಾಜ್ ಡ್ರೈವ್ ಮಾಡುತ್ತಿದ್ದೀರಿ ಎಂದು ತಿಳಿಯುತ್ತದೆ. ಹಾಗು ಬಹಳಷ್ಟು ಮಾಡಿಗೆ ನೀವು ಹೊಸ ಸಿಯಾಜ್ ಡ್ರೈವ್ ಮಾಡುತ್ತಿದ್ದೀರಿ ಎಂದು ತಿಳಿಯುತ್ತದೆ.
ಇಂಟೀರಿಯರ್
ಆಂತರಿಕಗಳು
ಒಳಗಡೆ ಬಂದರೆ , ನಿಮಗೆ ಎಲ್ಲವು ಪರಿಚಿತವಾಗಿರುವಂತೆ ಕಾಣುತ್ತದೆ. ಲೇಔಟ್ ಒಂದೇ ತರಹ ಇದೆ. ಹಾಗಾಗಿ ಇಲ್ಲಿ ಆಶ್ಚರ್ಯಕರ ವಿಷಯಗಳು ಇರುವುದಿಲ್ಲ. ನಿಮಗೆ ಡ್ರೈವರ್ ಸೀಟ್ ನಲ್ಲಿ ಶೀಘ್ರವಾಗಿ ಆರಾಮದಾಯಕವಾಗಿರುವ ಅನುಭವ ಉಂಟಾಗುತ್ತದೆ. ಎಲ್ಲ ಕಂಟ್ರೋಲ್ ಗಳು ಸುಲಭವಾಗಿ ಕೈಗೆ ಸಿಗುತ್ತದೆ, ಹಾಗು ಹೆಚ್ಚು ಪ್ರಮುಖವಾಗಿ ಅವುಗಳು ನಿಮಗೆ ಬೇಕಾಗುವ ಹಾಗೆ ಇರಿಸಲಾಗಿದೆ. ಕ್ಲೈಮೇಟ್ ಕಂಟ್ರೋಲ್ ಇಂಟರ್ಫೇಸ್ ಆಗಿರಬಹುದು, ಪವರ್ ವಿಂಡೋ ಸ್ವಿಚ್ ಆಗಿರಬಹುದು ಅಥವಾ ಬೂಟ್ ರಿಲೀಸ್ ಬಟನ್ ಆಗಿರಬಹುದು.
ಡ್ರೈವರ್ ಸೀಟ್ ನಿಂದ , ನಿಮಗೆ ಶೀಘ್ರವಾಗಿ ಕಂಡುಬರುತ್ತದೆ ಹೊಸ ಫೀಚರ್ ಗಳ ಪಟ್ಟಿ. ಹೊಸ ಡಯಲ್ ಗಳು (ಜೊತೆಗೆ ಬ್ಲೂ ನೀಡಲ್ ಗಳು, ಸಹ ) ಹಾಗು 4.2-ಇಂಚು ಬಣ್ಣದ MID ಆಕರ್ಷಕವಾಗಿದೆ. ಡಿಸ್ಪ್ಲೇ ನೋಡಲು ಬಲೆನೊ ದಲ್ಲಿರುವುದರ ತರಹ ಇದೆ. ಹಾಗು ಪವರ್ ಮತ್ತು ಟಾರ್ಕ್ ಪೈ ಚಾರ್ಟ್ ಗಳು ನಾಟಕೀಯವಾಗಿದೆ. ನಮಗೆ ಅದನ್ನು ನೋಡಿದಾಗ ನಗು ಬಂದಿತು.
ಎರೆಡನೇಯದಾಗಿ, ಸ್ಟಿಯರಿಂಗ್ ವೀಲ್ ನ ಬಲ ಬದಿ ಕಾಳಿ ಇಲ್ಲ. ಅದು ಪಡೆಯುತ್ತದೆ ಬಟನ್ ಗಳು ಸಿಯಾಜ್ ಗೆ ಅವಶ್ಯಕವಾಗಿದ್ದವು - ಕ್ರೂಸ್ ಕಂಟ್ರೋಲ್ ಗಾಗಿ. ಹದ್ದಿನ ಕಣ್ಣಿನ ಶೈಲಿಯ ವಿಷಯಗಳು ವುಡ್ ಇನ್ಸರ್ಟ್ ಗಳನ್ನೂ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಅದನ್ನು ಈಗ ಮಾರುತಿ ಹೇಳುವಂತೆ "ಬಿರ್ಚ್ ಬ್ಲಾಂಡ್ " ಎನ್ನಲಾಗಿದೆ.
ನೀವು ಬಾಡಿಗೆ ಡ್ರೈವ್ ಹೊಂದುವ ಹಾಗಿದ್ದರೆ , ನಿಮಗೆ ಸಿಯಾಜ್ ನ ಮೊಣಕಾಲು ಜಾಗ ಇಷ್ಟವಾಗಬಹುದು. ಅದು ಹೋಂಡಾ ಸಿಟಿ ಗೆ ತಕ್ಕುದಾಗಿದೆ ಹೌ ಎರೆಡು ಆರು -ಅಡಿ ಮನುಷ್ಯರು ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳಬಹುದು ಯಾವುದೇ ಇರುಸು ಮುರುಸು ಇಲ್ಲದೆ .
ಪ್ರಯಾಣ ವನ್ನು ಹೆಚ್ಚು ಆರಾಮದಾಯಕ ವಾಗಿ ಮಾಡುವ ವಿಷಯಗಳು ಎಂದರೆ ಅದರ ಹೆಚ್ಚುವರಿ ಹೆಡ್ ರೆಸ್ಟ್ ಗಳು ಹಿಂಬದಿ ಸೀಟ್ ನಲ್ಲಿ. ಆದರೆ ಅದು ಟಾಪ್ ವೇರಿಯೆಂಟ್ ಗಳಿಗೆ ಮಾತ್ರ ಸೀಮಿತವಾಗಿದೆ. ಹಾಗು ಕೇವಲ ಝಿಟ ಮತ್ತು ಅಲ್ಫಾ ದಲ್ಲಿ ರೇರ್ ಸನ್ ಶೇಡ್ ಕೊಡಲಾಗಿದ್ದು ಅದು ನಿಮ್ಮನ್ನು ಸಾಯಂಕಾಲದ ಸೂರ್ಯನ ಬೆಳಕಿನಿಂದ ತಂಪಾಗಿರಿಸುತ್ತದೆ.
ಮಾರುತಿ ಇಂದ ನಿರೀಕ್ಷಿಸಲಾಗುವಂತೆ , ಸಾಮಾನ್ಯ ವಿಷಯಗಳು ಉತ್ತಮವಾಗಿರಿಸಲಗಿದೆ. ಫ್ಲೋರ್ ಹುಮ್ಪ್ ಹೆಚ್ಚು ಎತ್ತರವಾಗಿಲ, ವಿಂಡೋ ಲೈನ್ ಸಹ ಹೆಚ್ಚು ಎತ್ತರವಾಗಿಲ್ಲ, ಹಾಗು ಫ್ಯಾಬ್ರಿಕ್ /ಲೆಥರ್ ಎಲ್ಬೋ ಪ್ಯಾಡ್ ಕೊಡಲಾಗಿದೆ ಸಹ. ಹೆಡ್ ರೂಮ್ ಹಾಗು ತೊಡೆಗಳಿಗಾಗಿ ಇರುವ ಜಾಗ ಇನ್ನು ಚೆನ್ನಾಗಿದ್ದಿರಬಹುದಿತ್ತು. ಖೇದವಾಗಿ, ಅವುಗಳನ್ನು ಹೊರ ಹೋಗುತ್ತಿರುವ ಮಾಡೆಲ್ ನಂತೆ ಮುಂದುವರೆಸಲಾಗಿದೆ ಹೆಚ್ಚುವರಿ ಉತ್ತಮಗಳೊಂದಿಗೆ.
ಹಾಗು, ಹೊರ ಹೋಗುತ್ತಿರುವ ಪೀಳಿಗೆಯಂತೆ ,ಸಿಯಾಜ್ ಹೆಚ್ಚು ಸಲಕರಣೆಗಳಿಂದ ಭರಿತವಾಗಿದೆ ಬೆಲೆ ಪಟ್ಟಿಗೆ ತಕ್ಕಂತೆ. ಆಂತರಿಕಗಳ ಫೀಚರ್ ಗಳಲ್ಲಿ ಆಟೋಆತಿಕ್ ಕ್ಲೈಮೇಟ್ ಕಂಟ್ರೋಲ್, 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ), ರೇರ್ -AC ವೆಂಟ್ , ಮತ್ತು ರೇವೆರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದೆ. ಐಷಾರಾಮಿ ವಿಷಯಗಳಾದ ಲೆಥರ್ (ತರಹದ) ಹೊರ ಪಾರಾಗಲು, ಮುಂಬದಿ ಹಾಗು ಹಿಂಬದಿ ಆರ್ಮ್ ರೆಸ್ಟ್ ಗಳು, ಲೆಥರ್ ಸುತ್ತುವರೆದ ಸ್ಟಿಯರಿಂಗ್ ವೀಲ್ ಕೊಡಲಾಗಿದೆ . ಹೆಚ್ಚುವರಿಯಾಗಿ ಸನ್ ರೂಫ್ ಇದ್ದಿದ್ದರೆ ಹೆಣ್ಣಾಗಿರುತ್ತಿತ್ತು, ಆದರೆ ಮಾರುತಿ ಆಶ್ಚರ್ಯಕರವಾಗಿ ಅದನ್ನು ದೂರವಿಟ್ಟಿದೆ.
ಒಟ್ಟಾರೆ, ಸಿಯಾಜ್ ನ ಕ್ಯಾಬಿನ್ ಹೆಚ್ಚು ಸಲಕರಣೆಗಳಿಂದ ಭರಿತವಾಗಿದೆ ಎಲ್ಲರನ್ನು ಸಂತೋಷಗೊಳಿಸುವಂತೆ ಹಾಗು ವಿಶಾಲವಾಗಿದೆ ಮತ್ತು ವೃದ್ದರು ಮೆಚ್ಚುವಂತೆ ಹೆಚ್ಚು ಆರಾಮದಾಯಕವಾಗಿರುವಂತೆ ಮಾಡಲಾಗಿದೆ.
ಸುರಕ್ಷತೆ
ಸುರಕ್ಷತೆಗಳು
ನಾವು ಗಾಳಿ ಸುದ್ದಿಗಳು ಸೂಚಿಸಿದಂತೆ ಸಿಯಾಜ್ ನಲ್ಲಿ ಆರು ಏರ್ಬ್ಯಾಗ್ ಫೀಚರ್ ಮಾಡುವ ಸಾಧ್ಯತೆ ಯನ್ನು ನಿರೀಕ್ಷಿಸಿದ್ದೆವು, ಖೇದವಾಗಿ ಅದು ನಿಜವಾಗಲಿಲ್ಲ. ಅದರಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ , ಆಂಟಿ -ಲಾಕ್ ಬ್ರೇಕ್ (ABS) ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಹೆಚ್ಚುವರಿಯಾಗಿ ಸೆಡಾನ್ ಪಡೆಯುತ್ತದೆ ಸೀಟ್ ಬೆಲ್ಟ್ ರಿಮೈಂಡರ್ ಮುಂಬದಿಯ ಎರೆಡೂ ಪ್ಯಾಸೆಂಜರ್ ಗಳಿಗೆ ಹಾಗು ಸ್ಪೀಡ್ ವಾರ್ನಿಂಗ್ ಅಲರ್ಟ್ ಸಹ. ಕೊಡಲಾಗಿದೆ.
ಕಾರ್ಯಕ್ಷಮತೆ
ಕಾರ್ಯದಕ್ಷತೆ
ನವೀಕರಣ ದೊಂದಿಗೆ ಸಿಯಾಜ್ ಪಡೆಯುತ್ತದೆ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸುಜುಕಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ. ಮೋಟಾರ್ ಅನ್ನು ಶುರು ಮಾಡಿದರೆ ಅದು ಜೀವ ಪಡೆಯುತ್ತದೆ ಹೆಚ್ಚು ಕರ್ಕಶ ಶಬ್ದ ಇಲ್ಲದೆ. ಹಾಗು ಮುಖ್ಯವಾಗಿ ಮೋಟಾರ್ ನಿಶಬ್ದವಾಗಿ ಚೆನ್ನಾಗಿದೆ. ನೀವು ಹೆಚ್ಚು ವೇಗ ಉಂಟು ಮಾಡಿದರೆ ಮಾತ್ರ ಶಬ್ದ ಗುರುತಿಸಬಹುದಾಗಿದೆ. ಅದಷ್ಟೇ ಒಟ್ಟಾರೆ ಎಂಜಿನ್ ಶಬ್ದ ಚೆನ್ನಾಗಿದೆ.
ಹೊಸ ಎಂಜಿನ್ ಕೊಡುತ್ತದೆ 105PS ಪವರ್ ಮತ್ತು 138Nm ಟಾರ್ಕ್ . ಶೀಘ್ರ ಲೆಕ್ಕ ಸೂಚಿಸುವಂತೆ ನಿಮಗೆ 12.5PS ಮತ್ತು 8Nm ಹೆಚ್ಚುವರಿ ಸಿಗುತ್ತದೆ ಹೊರಹೋಗುತ್ತಿರುವ 1.4-ಲೀಟರ್ ಮೋಟಾರ್ ಗಿಂತ. ಹಾಗಾಗಿ, ನಮಗೆ ಹೆಚ್ಚು ವೇಗವನ್ನು ಶೀಘ್ರವಾಗಿ ಪಡೆಯಬಹುದಾದ ನಿರೀಕ್ಷೆ ಇಲ್ಲ. ಡ್ರೈವ್ ಮಾಡಲು ಅದು ಹೆಚ್ಚು ಅಥವಾ ಕಡಿಮೆ ಹೊರ ಹೋಗುತ್ತಿರುವ ಇಂಜಿನೇತರಃ ಇದೆ. ಅದು ವಾಸ್ತವವಾಗಿ ಹೆಚ್ಚು ಆಶ್ಚರ್ಯ ಉಂಟು ಮಾಡುವುದಿಲ್ಲ. ಅದೇ ಸಮಯದಲ್ಲಿ ಅದು ಸಾಲದು ಎಂದೂ ಅನಿಸುವುದಿಲ್ಲ.
ಇಲ್ಲಿನ ಹೈಲೈಟ್ ಎಂದರೆ , ಹಿಂದಿನ ಕಾರ್ ತರಹ ಅದರ ಡ್ರೈವ್ ಗುಣಮಟ್ಟ ಹಾಗೆ ಇದೆ. ಕ್ಲಚ್ ಬಿಟ್ಟ ನಂತರ ಸಿಯಾಜ್ ಶೀಘ್ರ ವೇಗತಿ ಪಡೆಯುತ್ತದೆ. ಹಾಗು ಎಂಜಿನ್ ಹೆಚ್ಚು ವೇಗ ಪಡೆಯುವದರಲ್ಲಿ ಹಿಂಜರಿಯುವುದಿಲ್ಲ. ಹಾಗಾಗಿ ನೀವು ಪ್ರತಿ ಬಾರಿ ಸ್ಪೀಡ್ ಬ್ರೇಕರ್ ಕಂಡಾಗ ಕಡಿಮೆ ಗೇರ್ ಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ ಎರೆಡನೆ ಗೇರ್ ಸಾಕಾಗುತ್ತದೆ. ನಿಮಗೆ 0kmph ನಿಂದ ಎರೆಡನೆ ಗೇರ್ ನಲ್ಲಿ ಎಂಜಿನ್ ಕರ್ಕಶ ಶಬ್ದ ಇಲ್ಲದೆ ಪಡೆಯಬಹುದು. ನಮ್ಮ ಡ್ರೈವ್ ನಲ್ಲಿ ಸಿಯಾಜ್ ಸಿಟಿ ಯಲ್ಲಿ ಆರಾಮದಾಯಕವಾಗಿ ನಿರ್ವಹಿಸಿತು. ನೀವು ನಗರದಲ್ಲಿ ಪೂರ್ತಿ ದಿನ ಯಾವುದೇ ಆಯಾಸ ಇಲ್ಲದೆ ಸುತ್ತಾಡಬಹುದು. ಹಾಗು ನಗರದ ಡ್ರೈವ್ ನಲ್ಲಿ ಶಾಂತಿಯುತವಾಗಿ ಇರುತ್ತದೆ ಸಹ.
ಇನ್ನೊಂದು ಬದಿಯಲ್ಲಿ, ಹೈವೇ ನಲ್ಲಿ ಸ್ವಲ್ಪ ಇರುಸು ಮುರುಸು ಆಗಬಹುದು. ಸಿಯಾಜ್ ನಲಿ ಪವರ್ ಕಡಿಮೆ ಇದೆ ಎಂದುಕೊಳ್ಳಬೇಡಿ ಅಥವಾ ಮೂರು ಅಂಕೆ ಸ್ಪೀಡ್ ಗಳಲ್ಲಿ ಆರಾಮದಾಯಕವಾಗಿ ಕ್ರೂಸ್ ಮಾಡುವುದಿಲ್ಲ ಎಂದುಕೊಳ್ಳಬೇಡಿ. ಆದರೆ ಅದು ಕೇವಲ ಓವರ್ ಟೇಕ್ ಮಾಡುವಾಗ ಸ್ವಲ್ಪ ಹೆಚ್ಚು ಪರಿಶ್ರಮ ಪಡುತ್ತದೆ. ಟಾಪ್ ಗೇರ್ ಗಳಲ್ಲಿ 100kmph ಗಿಂತಲೂ ಹೆಚ್ಚನ ವೇಗಗಳಲ್ಲಿ ಕಾರ್ ಗಳಾದ ವೆರ್ನಾ ಮತ್ತು ಸಿಟಿ ಸಹ ಹೆಚ್ಚು ಪರಿಶ್ರಮ ಪಡುತ್ತದೆ ವೇಗಗತಿ ಪಡೆಯಲು. ಸಿಯಾಜ್ ನಲ್ಲಿ ಹಾಗೆ ಇಲ್ಲ. ನೀವು ಗೇರ್ ಬಾಕ್ಸ್ ಬಳಸಿ ಡೌನ್ ಶಿಫ್ಟ್ ಮಾಡಬೇಕಾಗುತ್ತದೆ ಶೀಘ್ರ ವೇಗ ಗತಿ ಪಡೆಯಬೇಕಾದ ಪರಿಸ್ಥಿತಿಗಳಲ್ಲಿ.
ನೀವು ಪೆಟ್ರೋಲ್ ಪವರ್ ಹೊಂದಿರುವ ಸಿಯಾಜ್ ಬಯಸಿದರೆ ಮಾರುತಿ ಸುಜುಕಿ ನಿಮಗೆ 5- ಸ್ಪೀಡ್ ಮಾನ್ಯುಯಲ್ ಹಾಗು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆ ಕೊಡುತ್ತದೆ. ನಾವು ಮಾನ್ಯುಯಲ್ ಆಯ್ಕೆಗೆ ಕೊಡುತ್ತೇವೆ ಏಕೆಂದರೆ ನೀವು ಹೆಚ್ಚು ಗೇರ್ ಶಿಫ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗು ಗೇರ್ ಬದಲಾವಣೆ ಮತ್ತು ಕ್ಲಚ್ ಬಳಕೆ ಸುಲಭವಾಗಿದೆ. ಆಟೋಮ್ಯಾಟಿಕ್ ಹೆಚ್ಚು ಆರಾಮದಾಯಕತೆಗಳನ್ನು ಕೊಡುತ್ತದೆ ಸಹ. ಆಟೋಮ್ಯಾಟಿಕ್ ಬಹಳಷ್ಟು ಹೆಚ್ಚುವರಿ ಆರಾಮದಾಯಕತೆ ಕೊಡುತ್ತದೆ. ಮತ್ತು ನಿಮಗೆ ಕೆಲಸದಿಂದ ಮನೆಗೆ ಆರಾಮದಾಯಕವಾಗಿ ಬರುವುದು ಹೆಚ್ಚು ಪ್ರಮುಖ ವಿಷಯವಾಗಿದ್ದರೆ , ಈ ಹಳೆ ಮಾದರಿಯ AT ಯಾವುದೇ ದೂರು ಮಾಡುವಂತೆ ಮಾಡುವುದಿಲ್ಲ. ಅದರ ಪ್ರತಿಕ್ರಿಯೆ ಅಷ್ಟು ಶೀಘ್ರವಾಗಿಲ್ಲದಿದ್ದರೂ , ನೀವು ಸರಳವಾಗಿ ಡ್ರೈವ್ ಮಾಡಿದರೆ ನಿಮ್ಮ ಕೆಲಸ ಅಂದುಕೊಂಡಂತೆ ಆಗುತ್ತದೆ. ಆಟೋ ಬಾಕ್ಸ್ ಶೀಘ್ರವಾಗಿ ಅಪ್ ಶಿಫ್ಟ್ ಆಗಲು ಪ್ರಯತ್ನಿಸುತ್ತದೆ (ಸಾಮಾನ್ಯವಾಗಿ 2000rpm ಒಳಗೆ), ಹಾಗು ನೀವು ಶೀಘ್ರವಾಗಿ ಟಾಪ್ ಗೇರ್ ನಲ್ಲಿ ಇರುತ್ತೀರಿ. ಇಷ್ಟು ಹೇಳಿದ ನಂತರ ನಾವು ಹೆಚ್ಚು ನವೀಕರಣ ಗೊಂಡ ಟಾರ್ಕ್ ಕನ್ವರ್ಟರ್ ನೋಡಬಯಸುತ್ತೇವೆ ( ನಿರ್ದಿಷ್ಟ ಮಾನ್ಯುಯಲ್ ಮೋಡ್ ಒಂದಿಗೆ) ಅಥವಾ ಇನ್ನು ಉತ್ತಮವಾಗಿ ಒಂದು CVT.
ಮಾರುತಿ ಸಿಯಾಜ್
ನಾವು ಇಷ್ಟಪಡುವ ವಿಷಯಗಳು
- ವಿಶಾಲತೆ: ಉತ್ತಮ 5-ಸೀಟ್ ಸೆಡಾನ್; ಕುಟುಂಬಕ್ಕೆ ಸಂತೋಷ ಉಂಟುಮಾಡುತ್ತದೆ.
- ಮೈಲೇಜ್: ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನ ಪೆಟ್ರೋಲ್ ಹಾಗು ಡೀಸೆಲ್ ಗೆ ಅಳವಡಿಸಲಾಗಿದ್ದು ಹಣದ ಉಳಿತಾಯ ಆಗುತ್ತದೆ.
- ಉತ್ತಮ ಸಲಕರಣೆಗಳಿಂದ ಕುಡಿದ ಕಡಿಮೆ ಹಂತದ ವೇರಿಯೆಂಟ್ ಗಳು: ನೀವು ನಿಜವಾಗಿಯೂ ಟಾಪ್ ಸ್ಪೆಕ್ ಅನ್ನು ಕೊಳಬೇಕಾಗಿಲ್ಲ ಪ್ರೀಮಿಯಂ ಅನುಭಾವಕ್ಕಾಗಿ
ನಾವು ಇಷ್ಟಪಡದ ವಿಷಯಗಳು
- 1.3-ಲೀಟರ್ ಡೀಸೆಲ್ ಎಂಜಿನ್ ಪ್ರತಿಸ್ಪರ್ದಿಗಳಷ್ಟು ಮನೋರಂಜನೆ ಕೊಡುವುದಿಲ್ಲ
- ವೆರ್ನಾ, ವೆಂಟೋ ಹಾಗು ರಾಪಿಡ್ ನಲ್ಲಿರುವ ತರಹ ಡೀಸೆಲ್ -ಆಟೋ ಸಂಯೋಜನೆ ಇಲ್ಲ
- ಹಲವು ಉತ್ತಮ ಫೀಚರ್ ಗಳಾದ ಸನ್ ರೂಫ್, ಆರು ಏರ್ಬ್ಯಾಗ್ ಗಳನ್ನು, ಹಾಗು ಇನ್ನಿತರ ಗಳನ್ನು ಮಿಸ್ ಮಾಡಿಕೊಂಡಿದೆ.
ಮಾರುತಿ ಸಿಯಾಜ್ comparison with similar cars
![]() Rs.9.41 - 12.29 ಲಕ್ಷ* | ![]() Rs.11.07 - 17.55 ಲಕ್ಷ* | ![]() Rs.6.84 - 10.19 ಲಕ್ಷ* | ![]() Rs.12.28 - 16.55 ಲಕ್ಷ* | ![]() Rs.7.20 - 9.96 ಲಕ್ಷ* | ![]() Rs.8.69 - 14.14 ಲಕ್ಷ* | ![]() Rs.6.70 - 9.92 ಲಕ್ಷ* | ![]() Rs.11.19 - 20.09 ಲಕ್ಷ* |
Rating733 ವಿರ್ಮಶೆಗಳು | Rating537 ವಿರ್ಮಶೆಗಳು | Rating408 ವಿರ್ಮಶೆಗಳು | Rating187 ವಿರ್ಮಶೆಗಳು | Rating324 ವಿರ್ಮಶೆಗಳು | Rating719 ವಿರ್ಮಶೆಗಳು | Rating601 ವಿರ್ಮಶೆಗಳು | Rating557 ವಿರ್ಮಶೆಗಳು |
Transmissionಮ ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine1462 cc | Engine1482 cc - 1497 cc | Engine1197 cc | Engine1498 cc | Engine1199 cc | Engine1462 cc | Engine1197 cc | Engine1462 cc - 1490 cc |
Fuel Typeಪೆಟ್ರೋಲ್ | Fuel Typeಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ | Fuel Typeಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ |
Power103.25 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power69 - 80 ಬಿಹೆಚ್ ಪಿ | Power119.35 ಬಿಹೆಚ್ ಪಿ | Power88.5 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power76.43 - 88.5 ಬಿಹೆಚ್ ಪಿ | Power87 - 101.64 ಬಿಹೆಚ್ ಪಿ |
Mileage20.04 ಗೆ 20.65 ಕೆಎಂಪಿಎಲ್ | Mileage18.6 ಗೆ 20.6 ಕೆಎಂಪಿಎ ಲ್ | Mileage24.79 ಗೆ 25.71 ಕೆಎಂಪಿಎಲ್ | Mileage17.8 ಗೆ 18.4 ಕೆಎಂಪಿಎಲ್ | Mileage18.3 ಗೆ 18.6 ಕೆಎಂಪಿಎಲ್ | Mileage17.38 ಗೆ 19.89 ಕೆಎಂಪಿಎಲ್ | Mileage22.35 ಗೆ 22.94 ಕೆಎಂಪಿಎಲ್ | Mileage19.38 ಗೆ 27.97 ಕೆಎಂಪಿಎಲ್ |
Boot Space510 Litres | Boot Space- | Boot Space- | Boot Space506 Litres | Boot Space- | Boot Space- | Boot Space318 Litres | Boot Space373 Litres |
Airbags2 | Airbags6 | Airbags6 | Airbags2-6 | Airbags2 | Airbags6 | Airbags2-6 | Airbags2-6 |
Currently Viewing | ಸಿಯಾಜ್ vs ವೆರ್ನಾ | ಸಿಯಾಜ್ vs ಡಿಜೈರ್ | ಸಿಯಾಜ್ vs ನಗರ | ಸಿಯಾಜ್ vs ಅಮೇಜ್ 2nd gen | ಸಿಯಾಜ್ vs ಬ್ರೆಜ್ಜಾ | ಸಿಯಾಜ್ vs ಬಾಲೆನೋ | ಸಿಯಾಜ್ vs ಗ್ರಾಂಡ್ ವಿಟರಾ |

ಮಾರುತಿ ಸಿಯಾಜ್ ಕಾರು ಸುದ್ದಿ ಮತ್ತು ಅಪ್ಡೇಟ್ಸ ್
- ಇತ್ತೀಚಿನ ಸುದ್ದಿ
- ಓದಲೇಬೇಕಾದ ಸುದ್ದಿಗಳು
- ರೋಡ್ ಟೆಸ್ಟ್