• English
  • Login / Register

ಮಾರುತಿ ಸಿಯಾಜ್ ಸುರಕ್ಷಿತ, ಈಗ ಬರುತ್ತಿದೆ 3 ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ

ಮಾರುತಿ ಸಿಯಾಜ್ ಗಾಗಿ shreyash ಮೂಲಕ ಫೆಬ್ರವಾರಿ 17, 2023 12:39 pm ರಂದು ಪ್ರಕಟಿಸಲಾಗಿದೆ

  • 46 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಡ್ಯುಯಲ್-ಟೋನ್ ಆಯ್ಕೆ ಕೇವಲ ಸೆಡಾನ್‌ನ ಟಾಪ್-ಎಂಡ್ ಆಲ್ಫಾ ಟ್ರಿಮ್‌ನಲ್ಲಿ ಮಾತ್ರ ಲಭ್ಯ

Maruti Ciaz 2023

ಮಾರುತಿಯು  ಬಲೆನೋ, ಎರ್ಟಿಗಾ ಮತ್ತು XL6 ಅನ್ನು ನವೀಕರಿಸಿದ ನಂತರದ ದಿನಗಳಲ್ಲೇ ಸಿಯಾಜ್‌ಗಾಗಿ ಹೊಸ ಸುರಕ್ಷಾ ಫೀಚರ್‌ಗಳು ಮತ್ತು ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳನ್ನು ಪರಿಚಯಿಸಿದೆ. ಆದಾಗ್ಯೂ, ಈ ಹಳೆಯ ಸೆಡಾನ್ ತಂತ್ರಜ್ಞಾನ ಮತ್ತು ಇತರ ಕಂಫರ್ಟ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದಿಲ್ಲ.

ವರ್ಧಿತ ಸುರಕ್ಷತೆ

Maruti Ciaz

ಈ ಸಿಯಾಜ್ ಈಗ ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP ) ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ ಅನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟಾಂಡರ್ಡ್ ಆಗಿ ಹೊಂದಿದೆ. ಇದರೊಂದಿಗೆ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ISOFIX ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಚೈಲ್ಡ್-ಸೀಟ್ ಆ್ಯಂಕೋರೇಜ್ ಅನ್ನು ಸುರಕ್ಷತಾ ಸಾಧನವಾಗಿ ಪಡೆದಿದೆ

ಇದನ್ನೂ ನೋಡಿ: ಮಾರುತಿ ಫ್ರಾಂಕ್ಸ್ ಸಿಎನ್‌ಜಿ ಆಯ್ಕೆಯನ್ನು ಪಡೆಯಬಹುದು; ಬಲೆನೋದ ಪೆಟ್ರೋಲ್ –ಸಿಎನ್‌ಜಿ ಎಂಜಿನ್ ಬಳಸಲಿದೆ

ಹೊಸ ಡ್ಯುಯಲ್-ಟೋನ್ ಬಣ್ಣಗಳು

Maruti Ciaz

ಎಕ್ಸ್‌ಟೀರಿಯರ್ ಬಣ್ಣಗಳ ಬಗ್ಗೆ ಮಾತನಾಡುವಾದ, ಸಿಯಾಜ್ ಈಗ ಡ್ಯುಯಲ್ ಟೋನ್ ಫಿನಿಷ್‌ಗಾಗಿ ಬ್ಲ್ಯಾಕ್ ರೂಫ್‌ನೊಂದಿಗೆ ಪರ್ಲ್ ಮೆಟಾಲಿಕ್ ಆಪ್ಯುಲೆಂಟ್ ರೆಡ್, ಪರ್ಲ್ ಮೆಟಾಲಿಕ್ ಗ್ರ್ಯಾಂಡ್ಯರ್ ಗ್ರೇ ಮತ್ತು ಡಿಗ್ನಿಟಿ ಬ್ರೌನ್ ಎಂಬ ಮೂರು ಬಣ್ಣಗಳೊಂದಿಗೆ ಬರುತ್ತದೆ. ಇದು ಈಗ 10 ಬಣ್ಣಗಳ ಆಯ್ಕೆಯನ್ನು ಹೊಂದಿದ್ದು, ಇದರಲ್ಲಿ ನೆಕ್ಸಾ ಬ್ಲೂ, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್, ಗ್ರ್ಯಾಂಡ್ಯರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಆಪ್ಯುಲೆಂಟ್ ರೆಡ್ ಮತ್ತು ಪರ್ಲ್ ಆರ್ಕ್‌ಟಿಕ್ ವೈಟ್ ಎಂಬ ಏಳು ಮೋನೋಟೋನ್ ಬಣ್ಣಗಳನ್ನು ಒಳಗೊಂಡಿದೆ

ಈ ಡ್ಯುಯಲ್ ಟೋನ್ ಆಯ್ಕೆಯು ಕೇವಲ ಟಾಪ್-ಎಂಡ್‌ ಆಲ್ಫಾ ಟ್ರಿಮ್‌ಗಳ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ನಲ್ಲಿ ಮಾತ್ರ ಲಭ್ಯವಿದೆ. ಅಲ್ಲದೇ, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಮೋನೋಟೋನ್ ಬಣ್ಣದ ಆಯ್ಕೆಯು ಬ್ಲ್ಯಾಕ್ ಆವೃತ್ತಿಯಾಗಿ ನೆಕ್ಸಾ ಮಾಡೆಲ್‌ನಲ್ಲಿ ಮಾತ್ರ ನೀಡಲಾಗಿದೆ 

ಇದನ್ನೂ ಓದಿ: ಜನವರಿಯ ಅತ್ಯಂತ ಜನಪ್ರಿಯ ಸಬ್ -4m SUVಗಳು, ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾ 

ಫೀಚರ್‌ಗಳು

Maruti Ciaz Interior

ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆ್ಯಪಲ್ ಕಾರ್‌ಪ್ಲೇ ಹಾಗೂ  ಆ್ಯಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್‌ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಪ್ಯಾಸೀವ್ ಕೀರಹಿತ ಪ್ರವೇಶ ಮತ್ತು ಕ್ರೂಸ್ ಕಂಟ್ರೋಲ್ ಇವುಗಳು ಈ ಮಾರುತಿ ಕಾಂಪ್ಯಾಕ್ಟ್ ಸೆಡಾನ್‌ನ ಫೀಚರ್‌ಗಳಾಗಿವೆ

ಇದನ್ನೂ ಓದಿ: ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಇತರ ಟಾಪ್ ನಗರಗಳಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಕಾಯುವ ಅವಧಿ

ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ

Maruti Ciaz Engine

ಈ ಸಿಯಾಜ್ 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ (105PS/138Nm ನ) ಅನ್ನೇ ಬಳಸುತ್ತಿದ್ದು ಫೈವ್-ಸ್ಪೀಡ್ ಮ್ಯಾನುವಲ್ ಅಥವಾ ಫೋರ್-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್‌ಗೆ ಜೊತೆಯಾಗಿದೆ. ಈ ಕಾರುತಯಾರಕ ಸಂಸ್ಥೆ ಮ್ಯಾನುವಲ್‌ಗೆ 20.65kmpl ಹಾಗೂ ಆಟೋಮ್ಯಾಟಿಕ್ ವೇರಿಯೆಂಟ್‌ಗೆ 20.04kmpl ಇಂಧನ ದಕ್ಷತೆಯನ್ನು ಹೇಳುತ್ತದೆ.

ಬೆಲೆಗಳು

ಮಾರುತಿ ಸ್ಟಾಂಡರ್ಡ್ ಸುರಕ್ಷತಾ ಫೀಚರ್‌ಗಳ ನವೀಕೃತ ಪಟ್ಟಿಗಳಿಗೆ ಯಾವುದೇ ಪ್ರೀಮಿಯಂ ಅನ್ನು ವಿಧಿಸುತ್ತಿಲ್ಲವಾದರೂ, ಗ್ರಾಹಕರು ಸಿಯಾಜ್‌ನ ಅನುಗುಣವಾದ ಮೋನೋಟೋನ್ ಆಯ್ಕೆಗಳ ಮೇಲೆ ಡ್ಯುಯಲ್ ಟೋನ್ ಆಯ್ಕೆಗಳಿಗಾಗಿ  ರೂ 16,000 ಅನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.

ಮಾರುತಿ ಸಿಯಾಜ್‌ನ ಬೆಲೆಗಳು ಈಗ ರೂ 9.20 ಲಕ್ಷದಿಂದ ರೂ 12.35 ಲಕ್ಷದ (ಎಕ್ಸ್-ಶೋರೂಂ ದೆಹಲಿ) ನಡುವೆ ಇದೆ. ಇದು ಹೋಂಡಾ ಸಿಟಿ, ಹ್ಯುಂಡೈ ವರ್ನಾ, ಫೋಕ್ಸ್‌ವಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ ಮಾರುತಿ ಸಿಯಾಜ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಸಿಯಾಜ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience