• English
    • Login / Register

    ಭಾರತದಲ್ಲಿ ಕಾರೊಂದರ ಮಾರಾಟವನ್ನು ರದ್ಧುಗೊಳಸಿದ Maruti , ಯಾವುದು ಗೊತ್ತಾ ಆ ಕಾರು..?

    ಏಪ್ರಿಲ್ 09, 2025 03:12 pm ರಂದು dipan ಮೂಲಕ ಪ್ರಕಟಿಸಲಾಗಿದೆ

    27 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು ಸ್ಥಗಿತಗೊಳಿಸಲಾಗಿದ್ದರೂ, ಬಲೆನೊದಂತೆ ಮಾರುತಿ ಸಿಯಾಜ್ ಮೊಡೆಲ್‌ಅನ್ನು ಬೇರೆ ಯಾವುದಾದರೂ ಬಾಡಿ ರೂಪದಲ್ಲಿ ಪುನರುಜ್ಜೀವನಗೊಳಿಸುವ ಸಾಧ್ಯತೆಯಿದೆ

    Maruti Ciaz officially discontinued by the carmaker

    ಬಹಳಷ್ಟು ಊಹಾಪೋಹಗಳ ನಂತರ, ಮಾರುತಿ ಸಿಯಾಜ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು 2014 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು ಮಾರುತಿ ಇತ್ತೀಚೆಗೆ ಈ ಜನಪ್ರಿಯ ಮೊಡೆಲ್‌ಅನ್ನು ಸ್ಥಗಿತಗೊಳಿಸುವ ಮೊದಲು ಮಾರುಕಟ್ಟೆಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿತ್ತು. ಸಿಯಾಜ್ ಬಗ್ಗೆ ಮಾರುತಿ ಸುಜುಕಿಯಿಂದ ನಮಗೆ ಅಧಿಕೃತ ಹೇಳಿಕೆ ಸಿಕ್ಕಿದೆ, ಮತ್ತು ಸ್ಥಗಿತಗೊಂಡ ಮೊಡೆಲ್‌ನ ಬಗ್ಗೆ ಮಾರುತಿ ಏನು ಹೇಳಿದೆ ಎಂಬುದು ಇಲ್ಲಿದೆ:

    ಮಾರುತಿ ಹೇಳುವುದೇನು?

    Maruti Ciaz discontinued

    ಸ್ಥಗಿತಗೊಳಿಸುವಿಕೆಗೆ ಸಂಬಂಧಿಸಿದಂತೆ, ಬ್ರ್ಯಾಂಡ್ ವಕ್ತಾರರ ಅಧಿಕೃತ ಉಲ್ಲೇಖವು ವರದಿಗಳನ್ನು ದೃಢಪಡಿಸಿತು ಮತ್ತು  "ಸಿಯಾಜ್ ಬ್ರ್ಯಾಂಡ್ ನಮ್ಮ  ಕಾರುಗಳ ಪಟ್ಟಿಯ ಭಾಗವಾಗಿ ಉಳಿದಿದೆ. ಆದರೆ, ಯಾವುದೇ ಮೊಡೆಲ್‌ನಂತೆ, ಗ್ರಾಹಕರ ಆದ್ಯತೆಗಳು, ನಿಯಂತ್ರಕ ಬೆಳವಣಿಗೆಗಳು ಮತ್ತು ಮಾರುಕಟ್ಟೆ ಟ್ರೆಂಡ್‌ಗಳ ಆಧಾರದ ಮೇಲೆ ನಾವು ನಮ್ಮ ಲೈನ್ ಅಪ್ ಅನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತೇವೆ.” ಎಂದು ಹೇಳಿದರು. "ಒಂದು ಬ್ರ್ಯಾಂಡ್ ತುಂಬಾ ಪ್ರಬಲವಾಗಿದ್ದಾಗ, ರೂಪಗಳು ಕಾಲಕಾಲಕ್ಕೆ ಬದಲಾಗಬಹುದು" ಎಂದು ಅವರು ಹೇಳಿದರು.

    ಮೇಲೆ ತಿಳಿಸಲಾದ ಹೇಳಿಕೆಯು, ಬಲೆನೊದಲ್ಲಿ ನಾವು ನೋಡಿದಂತೆ, ಸ್ಥಗಿತಗೊಂಡ ಸಿಯಾಜ್ ನಾಮಫಲಕವು ವಿಭಿನ್ನ ರೂಪದಲ್ಲಿ ಮತ್ತೆ ಬಿಡುಗಡೆಯಾಗಬಹುದು ಎಂದು ಸೂಚಿಸುತ್ತದೆ.

    ಗಮನಾರ್ಹವಾಗಿ, ಪ್ರಸ್ತುತ ಹ್ಯಾಚ್‌ಬ್ಯಾಕ್ ಅವತಾರದಲ್ಲಿ ಬರುವ ಮಾರುತಿ ಬಲೆನೊವನ್ನು 1996 ರಲ್ಲಿ ಸೆಡಾನ್ ಬಾಡಿ ಶೈಲಿಯಲ್ಲಿ ಬಿಡುಗಡೆ ಮಾಡಲಾಯಿತು. ಇದನ್ನು ನಂತರ 2007 ರಲ್ಲಿ ನಿಲ್ಲಿಸಲಾಯಿತು, ಆದರೆ 2015 ರಲ್ಲಿ ಅದರ ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿ ಪುನರುಜ್ಜೀವನಗೊಳಿಸಲಾಯಿತು.

    ಆದರೆ, ಕಾರು ತಯಾರಕರು ಈ ವಿಷಯವನ್ನು ಅಧಿಕೃತವಾಗಿ ದೃಢೀಕರಿಸುವವರೆಗೆ ಅಥವಾ ನಿರಾಕರಿಸುವವರೆಗೆ ನಾವು ಹೆಚ್ಚಿನ ಊಹಾಪೋಹಗಳಿಂದ ದೂರವಿರುತ್ತೇವೆ.

     ಇದನ್ನೂ ಓದಿ: 2025ರ Toyota Hyryderನಲ್ಲಿ ಈಗ AWD ಸೆಟಪ್‌ನೊಂದಿಗೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಲಭ್ಯ

    ಮಾರುತಿ ಸಿಯಾಜ್: ಒಂದು ಅವಲೋಕನ

    Maruti Ciaz side

    ಮಾರುತಿ ಸಿಯಾಜ್ ಅನ್ನು 2014 ರಲ್ಲಿ ಬಿಡುಗಡೆ ಮಾಡಲಾಗಿತ್ತು, ಮತ್ತು ಇದು 2018ರಲ್ಲಿ ವಿನ್ಯಾಸ ಆಪ್‌ಡೇಟ್‌ಅನ್ನು ಪಡೆಯಿತು. 2020ರಲ್ಲಿ, ಸೆಡಾನ್‌ನಲ್ಲಿನ ಎಂಜಿನ್ ಆಯ್ಕೆಗಳು BS6 ಕಂಪ್ಲೈಂಟ್ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಮತ್ತೊಂದು ಆಪ್‌ಡೇಟ್‌ಅನ್ನು ಇದು ಪಡೆಯಿತು. ಈ ಆಪ್‌ಡೇಟ್‌ ಸಿಯಾಜ್ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಷನ್‌ಅನ್ನು ಬೆಂಬಲಿಸುವ ದೊಡ್ಡ ಟಚ್‌ಸ್ಕ್ರೀನ್ ಸೇರಿದಂತೆ ಕೆಲವು ಹೊಸ ಫೀಚರ್‌ಗಳೊಂದಿಗೆ ಒದಗಿಸಿದೆ.

    ಎಕ್ಸ್‌ಟೀರಿಯರ್‌ನ ಶೈಲಿಯ ವಿಷಯದಲ್ಲಿ, ಸಿಯಾಜ್ ಪ್ರೊಜೆಕ್ಟರ್ ಆಧಾರಿತ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಮುಂಭಾಗದ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳೊಂದಿಗೆ ಬಂದಿತು.

    Maruti Ciaz dashboard

    ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಬಣ್ಣದ ಇಂಟೀರಿಯರ್‌ಅನ್ನು ಹೊಂದಿದ್ದು, ಸರಳ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಮತ್ತು ಬಣ್ಣದ ಮಲ್ಟಿ-ಇಂಫಾರ್ಮೆಶನ್‌ ಡಿಸ್‌ಪ್ಲೇ (MID) ಹೊಂದಿರುವ ಅನಲಾಗ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು 6 ಸ್ಪೀಕರ್‌ಗಳು, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC ಮತ್ತು ಕ್ರೂಸ್ ಕಂಟ್ರೋಲ್‌ಅನ್ನು ಸಹ ಹೊಂದಿತ್ತು.

    ಇದರ ಸುರಕ್ಷತಾ ಫೀಚರ್‌ಗಳಲ್ಲಿ 2 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಸೆನ್ಸಾರ್‌ಗಳನ್ನು ಹೊಂದಿರುವ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಆಟೋ-ಡಿಮ್ಮಿಂಗ್ ಇನ್‌ಸೈಡ್ ರಿಯರ್‌ವ್ಯೂ ಮಿರರ್ (IRVM) ಮತ್ತು ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು ಸೇರಿವೆ.

    ಮಾರುತಿ ಸಿಯಾಜ್: ಪವರ್‌ಟ್ರೇನ್ ಆಯ್ಕೆಗಳು

    Maruti Ciaz engine

    ಸ್ಥಗಿತಗೊಂಡ ಸಿಯಾಜ್, ನ್ಯಾಚುರಲಿ ಆಸ್ಪಿರೇಟೆಡ್‌ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು, ಅದು ಈ ಕೆಳಗಿನ ವಿಶೇಷಣಗಳನ್ನು ಹೊಂದಿದೆ:

    ಎಂಜಿನ್‌

    1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌

    ಪವರ್‌

    105 ಪಿಎಸ್‌

    ಟಾರ್ಕ್‌

    138 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    5-ಸ್ಪೀಡ್ ಮ್ಯಾನ್ಯುವಲ್‌ / 4-ಸ್ಪೀಡ್ AT*

    ಇಂಧನ ದಕ್ಷತೆ

    ಪ್ರತಿ ಲೀ.ಗೆ 20.65 ಕಿಮೀ (ಮ್ಯಾನ್ಯುವಲ್‌) / ಪ್ರತಿ ಲೀ.ಗೆ  20.04 ಕಿಮೀ (ಆಟೋಮ್ಯಾಟಿಕ್‌)

    *AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

    ಮಾರುತಿ ಸಿಯಾಜ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

    ಮಾರುತಿ ಸಿಯಾಜ್‌ನ ಕೊನೆಯ ದಾಖಲಾದ ಬೆಲೆ 9.42 ಲಕ್ಷ ರೂ.ನಿಂದ 12.31 ಲಕ್ಷ ರೂ.ವರೆಗೆ ಇತ್ತು (ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ). ಇದು ಹುಂಡೈ ವರ್ನಾ, ಹೋಂಡಾ ಸಿಟಿ, ವೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ ಸೇರಿದಂತೆ ಕಾಂಪ್ಯಾಕ್ಟ್ ಸೆಡಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿತ್ತು. 

    ಸಿಯಾಜ್ ಕೂಡ ಬಲೆನೊ ತರಹ ಮತ್ತೆ ಬರಬೇಕು ಅಂತ ನಿಮಗೆ ಅನಿಸುತ್ತಿದೆಯೇ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Maruti ಸಿಯಾಜ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಸೆಡಾನ್‌ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience