• ಟಾಟಾ ನೆಕ್ಸ್ಂನ್‌ 2017-2020 ಮುಂಭಾಗ left side image
1/1
  • Tata Nexon 2017-2020
    + 77ಚಿತ್ರಗಳು
  • Tata Nexon 2017-2020
  • Tata Nexon 2017-2020
    + 5ಬಣ್ಣಗಳು
  • Tata Nexon 2017-2020

ಟಾಟಾ ನೆಕ್ಸ್ಂನ್‌ 2017-2020

change car
Rs.6.95 - 11.80 ಲಕ್ಷ*
This ಕಾರು ಮಾದರಿ has discontinued

ಟಾಟಾ ನೆಕ್ಸ್ಂನ್‌ 2017-2020 ನ ಪ್ರಮುಖ ಸ್ಪೆಕ್ಸ್

engine1198 cc - 1497 cc
ಪವರ್108.5 ಬಿಹೆಚ್ ಪಿ
torque260 Nm - 170 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage21.5 ಕೆಎಂಪಿಎಲ್
ರಿಯರ್ ಏಸಿ ವೆಂಟ್ಸ್
ಪಾರ್ಕಿಂಗ್ ಸೆನ್ಸಾರ್‌ಗಳು
ಸ್ಬಯಂಚಾಲಿತ ಹವಾಮಾನ ನಿಯಂತ್ರಣ
ಹಿಂಭಾಗದ ಕ್ಯಾಮೆರಾ
ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
  • ಉತ್ತಮ ವೈಶಿಷ್ಟ್ಯಗಳು

ನೆಕ್ಸ್ಂನ್‌ 2017-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಟಾಟಾ ನೆಕ್ಸ್ಂನ್‌ 2017-2020 ಬೆಲೆ ಪಟ್ಟಿ (ರೂಪಾಂತರಗಳು)

ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಇ(Base Model)1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.6.95 ಲಕ್ಷ* 
ನೆಕ್ಸ್ಂನ್‌ 2017-2020 1.2 ಪೆಟ್ರೋಲ್1198 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.7.50 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸೆಎಮ್‌1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.7.70 ಲಕ್ಷ* 
ನೆಕ್ಸ್ಂನ್‌ 2017-2020 ಕ್ರಾಜ್‌1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.7.73 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸಟಿಎ1198 cc, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.7.90 ಲಕ್ಷ* 
ನೆಕ್ಸ್ಂನ್‌ 2017-2020 ಕ್ರಾಜ್‌ ಪ್ಲಸ್ ಎಎಂಟಿ1198 cc, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.8.18 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಟಟಿ1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.8.25 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಎಂಎ1198 cc, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.8.30 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಟಟಿ ಪ್ಲಸ್1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.8.32 ಲಕ್ಷ* 
ನೆಕ್ಸ್ಂನ್‌ 2017-2020 ಕ್ರಾಜ್‌ ಪ್ಲಸ್1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.8.33 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸ್ಇ(Base Model)1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.8.45 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಝಡ್1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.8.70 ಲಕ್ಷ* 
ನೆಕ್ಸ್ಂನ್‌ 2017-2020 ಕ್ರಾಜ್‌ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.8.78 ಲಕ್ಷ* 
ನೆಕ್ಸ್ಂನ್‌ 2017-2020 ಕ್ರಾಜ್‌ ಪ್ಲಸ್ ಎಎಂಟಿ ಡೀಸಲ್1497 cc, ಆಟೋಮ್ಯಾಟಿಕ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.9.18 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸೆಎಮ್‌1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.9.20 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸ್ಟಟಿ1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.9.21 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವಟ್ರೊನ್ ಎಕ್ಸ್ಟಟಿ ಪ್ಲಸ್1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.9.27 ಲಕ್ಷ* 
ನೆಕ್ಸ್ಂನ್‌ 2017-2020 ಕ್ರಾಜ್‌ ಪ್ಲಸ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.9.48 ಲಕ್ಷ* 
ನೆಕ್ಸ್ಂನ್‌ 2017-2020 1.5 ಡೀಸಲ್1497 cc, ಮ್ಯಾನುಯಲ್‌, ಡೀಸಲ್DISCONTINUEDRs.9.50 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಝಡ್ ಪ್ಲಸ್1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.9.50 ಲಕ್ಷ* 
1.2 ರಿವಟ್ರೊನ್ ಎಕ್ಸ್ಝಡ್ ಪ್ಲಸ್ ಡಿಯೋಲ್‌ ಟೋನ್1198 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.9.70 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸ್ಎಂಎ1497 cc, ಆಟೋಮ್ಯಾಟಿಕ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.9.80 ಲಕ್ಷ* 
ನೆಕ್ಸ್ಂನ್‌ 2017-2020 1.2 ರಿವಟ್ರೊನ್ ಎಕ್ಸ್ಝಡ್ಎ ಪ್ಲಸ್1198 cc, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.10.10 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸ್ಝಡ್ಎ1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.10.20 ಲಕ್ಷ* 
1.2 ರಿವಟ್ರೊನ್ ಎಕ್ಸ್ಝಡ್ಎ ಪ್ಲಸ್ ಡ್ಯುಯಲ್ಟೋನ್(Top Model)1198 cc, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್DISCONTINUEDRs.10.30 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸ್ಝಡ್ಎ ಪ್ಲಸ್1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.11 ಲಕ್ಷ* 
1.5 ರಿವೊಟೋರಿಕ್ ಎಕ್ಸ್ಝಡ್ಎ ಪ್ಲಸ್ ಡಿಯೋಲ್‌ ಟೋನ್1497 cc, ಮ್ಯಾನುಯಲ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.11.20 ಲಕ್ಷ* 
ನೆಕ್ಸ್ಂನ್‌ 2017-2020 1.5 ರಿವೊಟೋರಿಕ್ ಎಕ್ಸ್ಝಡ್ಎ ಪ್ಲಸ್1497 cc, ಆಟೋಮ್ಯಾಟಿಕ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.11.60 ಲಕ್ಷ* 
1.5 ರಿವೊಟೋರಿಕ್ ಎಕ್ಸ್ಝಡ್ಎ ಪ್ಲಸ್ ಡ್ಯುಯಲ್ಟೋನ್(Top Model)1497 cc, ಆಟೋಮ್ಯಾಟಿಕ್‌, ಡೀಸಲ್, 21.5 ಕೆಎಂಪಿಎಲ್DISCONTINUEDRs.11.80 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ನೆಕ್ಸ್ಂನ್‌ 2017-2020 ವಿಮರ್ಶೆ

ಟಾಟಾ ನೆಕ್ಸಾನ್ ಸಬ್-4 ಮೀಟರ್ ವರ್ಗಕ್ಕೆ ಪ್ರವೇಶಿಸುವ ಮೊದಲ ಪ್ರಯತ್ನವಾಗಿದ್ದರೂ ಅದು ಎಲ್ಲ ಸೂಕ್ತ ಕಾರಣಗಳಿಗೆ ಸುದ್ದಿಯಾಗಿದೆ. ಇದು ಗ್ಲೋಬಲ್ ಎನ್.ಸಿ.ಎ.ಪಿ ಕ್ರಾಶ್ ಟೆಸ್ಟ್ ಗಳಲ್ಲಿ 5 ಸ್ಟಾರ್ ಗಳನ್ನು ಪಡೆದ ಮೊದಲ ಭಾರತೀಯ ಕಾರು ಆಗಿದೆ. ಟಾಟಾ ನೆಕ್ಸಾನ್ ತನ್ನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೆರಡರಲ್ಲೂ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ನೀಡುವ ಏಕೈಕ ಸಬ್-4 ಮೀಟರ್ ಎಸ್.ಯು.ವಿ.ಯಾಗಿದೆ. 

ಇದರ ಪ್ರತಿಸ್ಪರ್ಧಿಗಳು ಸುಝುಕಿ ವಿತಾರಾ ಬ್ರೆಝಾ, ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹಿಂದ್ರಾ ಎಕ್ಸ್.ಯು.ವಿ300. ಟಾಟಾ ನೆಕ್ಸಾನ್ ಮೋಜಿನ ಮತ್ತು ಧೈರ್ಯದ ವಿನ್ಯಾಸ ಮಾಡಿದ್ದು, ಅನುಕೂಲಕರ, ಫೀಚರ್-ರಿಚ್ ಕ್ಯಾಬಿನ್ ಮತ್ತು ಐಚ್ಛಿಕ 1.2-ಲೀಟರ್ ಟರ್ಬೊ-ಪೆಟ್ರೋಲ್ ಅಥವಾ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು ಎರಡೂ 6-ಸ್ಪೀಡ್ ಟ್ರಾನ್ಸ್ ಮಿಷನ್ ಅಥವಾ 6-ಸ್ಪೀಡ್ ಎಎಂಟಿಯಲ್ಲಿ ಲಭ್ಯ. ಈ ಎಲ್ಲವೂ ತನ್ನ ಸ್ಪರ್ಧೆಗಿಂತ ಉತ್ತಮವಾದ ವಿನ್ಯಾಸ ಆಗಿಸಲು ಶಕ್ತವಾಗಿದೆಯೇ? ಸಮಯವೇ ಇದಕ್ಕೆ ಉತ್ತರಿಸಬೇಕು!

ನೆಕ್ಸಾನ್ ಮಹತ್ತರ ಮೌಲ್ಯ ಪ್ರತಿಪಾದನೆ ಹೊಂದಿದೆ ಮತ್ತು ಈ ವರ್ಗದಲ್ಲಿ ಸೌಂದರ್ಯದ ದೃಷ್ಟಿಯಿಂದ ಒಂದು ಹೆಜ್ಜೆ ಮುಂದಿದೆ ಎಂಬ ಭಾವನೆ ತರುತ್ತದೆ. 1.5-ಲೀಟರ್ ಎಂಜಿನ್ ಅತ್ಯಂತ ಅನುಕೂಲಕರವಾಗಿದ್ದು ಕಡಿಮೆ ರಿವ್ ಗಳಲ್ಲಿ ಸ್ವಚ್ಛವಾಗಿ ಎಳೆಯುತ್ತದೆ ಮತ್ತು ಸುಧಾರಿತವೂ ಆಗಿದೆ. ಇದು ಮೂಲೆಗಳಲ್ಲಿ ಜೋಡಿಸಲ್ಪಟ್ಟಿದ್ದು ಕೆಟ್ಟ ರಸ್ತೆಗಳ ಉಬ್ಬುಗಳ ಮೇಲೆ ಚೆನ್ನಾಗಿ ನಿರ್ವಹಿಸುತ್ತದೆ. 

ಎಕ್ಸ್‌ಟೀರಿಯರ್

ಟಾಟಾ ನೆಕ್ಸಾನ್ ಸಬ್-ಕಾಂಪ್ಯಾಕ್ಟ್ ಎಸ್.ಯು.ವಿ ಅಲ್ಲ ಅಥವಾ ಹ್ಯಾಚ್ ಬ್ಯಾಕ್ ಕೂಡಾ ಅಲ್ಲ. ಇದು ನಿಜವಾದ ಅರ್ಥದಲ್ಲಿ ಕ್ರಾಸೋವರ್. ನೆಕ್ಸಾನ್ ನ ಎಸ್.ಯು.ವಿಯ ಗುಣಲಕ್ಷಣಗಳಲ್ಲಿ ಗ್ರೌಂಡ್ ಕ್ಲಿಯರೆನ್ಸ್ 209ಎಂಎಂ ಇದ್ದು ರೆನಾಲ್ಟ್ ಡಸ್ಟರ್ ಗೆ ಹೋಲಿಸಬಹುದು ಮತ್ತು ದೊಡ್ಡ 16-ಇಂಚು ವ್ಹೀಲ್ಸ್ ಹೊಂದಿದೆ. ಎತ್ತರದ ನಿಲುವು ಕೂಪೆ-ರೀತಿಯ ಇಳಿಜಾರಿನ ರೂಫ್ ಲೈನ್ ಹೊಂದಿದ್ದು ಅದು ರೇಂಜ್ ರೋವರ್ ಎವೋಕ್ ನಂತೆ ತೀಕ್ಷ್ಣವಾಗಿದೆ. 

ಅಸಾಂಪ್ರದಾಯಿಕ ವಿನ್ಯಾಸ ಕಣ್ಸೆಳೆಯುವಂತಿದೆ, ಇದು ಇತರೆ ಹ್ಯಾಚ್ ಬ್ಯಾಕ್ ಗಳು ಮತ್ತು ಕಾಂಪ್ಯಾಕ್ಟ್ ಎಸ್.ಯು.ವಿಗಳ ಬದಿಯಲ್ಲಿ ನಿಲ್ಲಿಸಿದಾಗ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಚಾಲನೆ ಮಾಡಿದ ನೆಕ್ಸಾನ್ ನ ಟಾಪ್-ಸ್ಪೆಕ್ ಎಕ್ಸ್.ಝಡ್+ ವೇರಿಯೆಂಟ್ ಸ್ಟೀಲ್ ಗ್ರೇಯ ಕಾಂಟ್ರಾಸ್ಟ್ ಬಣ್ಣದ ತಾರಸಿ ಹೊಂದಿದ್ದು ಅದು ಕೆಂಪು,ನೀಲಿ ಮತ್ತು ಕಿತ್ತಳೆ ಬಾಹ್ಯ ಬಣ್ಣಗಳನ್ನು ಹೊಂದಿದೆ. ಇದರಲ್ಲಿ ಬದಿಯಲ್ಲಿ ಗ್ರೀನ್  ಹೌಸ್ ಅಡಿಯಲ್ಲಿ ಚಲಿಸುವ ಆಫ್-ವ್ಹೈಟ್ ಪ್ಲಾಸ್ಟಿಕ್ ಟ್ರಿಮ್ ಸಿಗ್ನೇಚರ್ ಅಂಶವಾಗಿದೆ. ಇದು ಹಿಂಬದಿಯಲ್ಲೂ ಮುಂದುವರೆದಿದೆ, ಆದರೆ ಅದು ಪೇಂಟ್ ಆಗಿದೆಯೇ ಹೊರತು ಪ್ಲಾಸ್ಟಿಕ್ ಅಲ್ಲ. ಟಾಟಾ ಅದನ್ನು ಮಾಡಬಹುದಿತ್ತು, ಆದರೆ ಅದು ಅತಿಯಾದುದಾಗುತ್ತಿತ್ತು. ಆರೇಂಜ್ ಪೇಂಟ್ ನಲ್ಲಿ ಈ ಪಟ್ಟಿ ಕೂಡಾ ತಾರಸಿಯ ಬಣ್ಣದಲ್ಲಿಯೇ ಇದೆ. ಬೂದು ಬಣ್ಣದ ತಾರಸಿ ಮತ್ತು ಮಬ್ಬು ಬಿಳುಪಿನ ಜಾರು ಅಲ್ಲದೆ ಹೊರಗಡೆ ಬ್ಲಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಮತ್ತೊಂದು ಕಾಂಟ್ರಾಸ್ಟಿಂಗ್ ಅಂಶವಾಗಿದೆ. ಇದು ನೆಕ್ಸಾನ್ ಗೆ ಒರಟು ಮತ್ತು ಎತ್ತರದ ನೋಟ ನೀಡುತ್ತದೆ. 

ನೆಕ್ಸಾನ್ ಕಣ್ಣುಗಳಲ್ಲಿ ನೇರವಾಗಿ ನೋಡಿರಿ ಮತ್ತು ನೀವು ಟಾಟಾದವರ `ಇಂಪ್ಯಾಕ್ಟ್' ಡಿಸೈನ್ ಸೂಚನೆ ಪಡೆಯುತ್ತೀರಿ. ಫ್ರಂಟ್ ಗ್ರಿಲ್ ಮೇಲ್ಭಾಗ ಹೆಡ್ ಲ್ಯಾಂಪ್ಸ್ ಮತ್ತು ಬದಿಗೆ ವಿಸ್ತರಿಸಿದೆ. ಇದು ಟಾಟಾ ಪರಿಭಾಷೆಯಲ್ಲಿ `ಹ್ಯುಮ್ಯಾನಿಟಿ ಲೈನ್' ಆಗಿದೆ. ನೆಕ್ಸಾನ್ ವಿನ್ಯಾಸ ತನ್ನ ಸೋದರರಿಗಿಂತ ಹೆಚ್ಚು ಪ್ರಭಾವಿಯಾಗಿದೆ. ಮುಂಬದಿಗೆ ಸೇರ್ಪಡೆ ಮಾಡಿರುವ ಅಂಶಗಳಲ್ಲಿ ಎಲ್.ಇ.ಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, ಹೈ-ಸೆಟ್ ಫಾಗ್ ಲ್ಯಾಂಪ್ಸ್, ದೊಡ್ಡ ಫ್ರಂಟ್ ಏರ್ ಇನ್ಟೇಕ್ ಮತ್ತು ಫ್ಲೇರ್ಡ್ ವ್ಹೀಲ್ ಆರ್ಚಸ್ ಹೊಂದಿವೆ. 

ನೆಕ್ಸಾನ್ ಮುಂಭಾಗದಿಂದ ಎಸ್.ಯು.ವಿಯಂತೆ ಕಾಣುತ್ತದೆಯಾದರೂ, ಹಿಂಬದಿ ಹೆಚ್ಚು ಹ್ಯಾಚ್ ಬ್ಯಾಕ್ ರೀತಿಯಲ್ಲಿದೆ. ಹೈ-ಗ್ರೌಂಡ್ ಕ್ಲಿಯರೆನ್ಸ್ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಮತ್ತು ಸ್ಟಾಕ್ ಟೈರ್ಸ್(215/60 ಆರ್.16) ನೆಕ್ಸಾನ್ ಗಾತ್ರದ ವಾಹನಕ್ಕೆ ಅಗಲವಾಗಿ ಕಾಣುತ್ತದೆ. ರಿಯರ್ ಬಂಪರ್ ನಲ್ಲಿರುವ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತಷ್ಟು ಒರಟುತನ ನೀಡಿದೆ. ಮಬ್ಬು ಬಿಳುಪಿನ ಮತ್ತು ಗ್ಲಾಸಿಕ ಬ್ಲಾಕ್ ಅಂಶವಿದ್ದು ಕ್ಲಿಯರ್-ಲೆನ್ಸ್ ಟೈಲ್ ಲ್ಯಾಂಪ್ಸ್ ವಿನ್ಯಾಸಕ್ಕೆ ವಿಚಿತ್ರತೆ ತಂದಿದ್ದರೂ ನೀವು ಕಾಲ ಕಳೆದಂತೆ ಅದಕ್ಕೆ ಹೊಂದಿಕೊಳ್ಳುತ್ತೀರಿ. 

ಇಂಟೀರಿಯರ್

ನೆಕ್ಸಾನ್ ಒಳಾಂಗಣ ಮೂರು ಪ್ರಮುಖ ಪದರಗಳನ್ನು ಹೊಂದಿದೆ. ಮೇಲ್ಭಾಗ ದಟ್ಟ ಬೂದು ಪ್ಲಾಸ್ಟಿಕ್ ನಲ್ಲಿ ರೂಪುಗೊಂಡಿದೆ ಮತ್ತು ಅದರ ಗುಣಮಟ್ಟ ಅದರ ಸಹವರ್ತಿಗಳ ಮಟ್ಟದಲ್ಲಿದೆ. ಮಧ್ಯದ ಪದರ ಅಲ್ಯುಮಿನಿಯಂ ಫಿನಿಷ್ ಹೊಂದಿದೆ ಮತ್ತು ಇದು ಅಪ್ ಮಾರ್ಕೆಟ್ ನೋಟ ನೀಡುತ್ತದೆ. ಕ್ಯಾಬಿನ್ ನಾದ್ಯಂತ ಈ ಪದರದ ದಪ್ಪ ಮತ್ತು ದೃಢತೆ ಹಾಗೂ ಫಿಟ್ ಅಂಡ್ ಫಿನಿಷ್ ಮಟ್ಟ ಅಷ್ಟೇನೂ ಹೆಚ್ಚಾಗಿಲ್ಲ. ಉದಾಹರಣೆಗೆ, ಗ್ಲೋವ್ ಬಾಕ್ಸ್ ಮುಚ್ಚಲು ಒಂದು ಹೆಚ್ಚು ಪ್ರಯತ್ನ ಬೇಕು ಮತ್ತು ಬಾಗಿಲುಗಳ ಕೆಳ ಭಾಗಕ್ಕೆ ಪ್ರವೇಶ ಅದರಲ್ಲಿಯೂ ಡೋರ್ ಪಾಕೆಟ್ ಗಳ ಸುತ್ತಲೂ ಪ್ರಶ್ನಾರ್ಥಕವಾಗಿದೆ. ಈ ಎರಡೂ ಬಹುಶಃ ಫಿಟ್ ಅಂಡ್ ಫಿನಿಷ್ ಫೀಲ್ ರಾಜಿಯಾದಾಗ ಏಕೈಕ ಟಚ್ ಪಾಯಿಂಟ್ ಗಳಾಗಿವೆ. ಇಲ್ಲದಿದ್ದರೆ, ಟಾಟಾ ಕಾಂಟ್ಯಾಕ್ಟ್ ಪಾಯಿಂಟ್ ಗಳಲ್ಲಿ ಸಂತೃಪ್ತಿಕರ ಗುಣಮಟ್ಟ ನೀಡುವ ಒಳ್ಳೆಯ ಕೆಲಸ ಮಾಡಿದೆ. 

ನೆಕ್ಸಾನ್ ನ ಡ್ಯಾಶ್ ಬೋರ್ಡ್ 6.5-ಇಂಚು ಹರ್ಮನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಹೊಂದಿದ್ದು ಅದನ್ನು ಡ್ಯಾಶ್ ಬೋರ್ಡ್ ಗೆ ಜೋಡಿಸಲಾಗಿದೆ. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಮುಖ್ಯವಾಗಿ ಇದು ಅತ್ಯುತ್ತಮ ಗುಣಮಟ್ಟದ ಭಾವನೆ ನೀಡುತ್ತದೆ ಮತ್ತು ಚೆನ್ನಾಗಿ ಆಲೋಚಿಸಿ ರೂಪಿಸಲಾಗಿದೆ. ಈ ಡಿಸ್ಪ್ಲೇ ಕಠಿಣ ಸೂರ್ಯನ ಬೆಳಕಿನಲ್ಲಿ ನಿಖರ ಮತ್ತು ಓದಬಲ್ಲದಾಗಿದೆ. ಇದು ಕ್ಯಾಮರಾ ಡಿಸ್ಪ್ಲೇ ಮಾತ್ರ ಕೊಂಚ ಗ್ರೈನಿ ವಿನ್ಯಾಸ ಹೊಂದಿದೆ. ಆದರೆ, ಕ್ಯಾಮರಾದ ಫಲಿತಾಂಶಕ್ಕಿಂತ ಸ್ಕ್ರೀನ್ ಉತ್ತಮಗೊಳ್ಳಬೇಕಿದೆ. 

ಯೂಸರ್ ಇಂಟರ್ಫೇಸ್ ಬಹಳ ಸುಲಭ ಬಳಕೆಯನ್ನು ಹೊಂದಿದ್ದು ಏರ್ ಕಾನ್ ಸೆಟ್ಟಿಂಗ್ಸ್, ಆಡಿಯೊ ಸೋರ್ಸ್ ಮತ್ತು ಮೆಗಾ ಮೆನು ಕಾರ್ಯಗಳಿಗೆ ತಕ್ಷಣ ಪ್ರವೇಶ ನೀಡುತ್ತದೆ. ಟಚ್ ಸ್ಕ್ರೀನ್ ಅತ್ಯಂತ ಅಂತರ್ಬೋಧೆಯನ್ನು ಹೊಂದಿದೆ, ಮತ್ತು ನೀವು ಬಳಸಿದ ಪ್ರತಿ ಸಲವೂ ಕೊಂಚ ತಡವಾಗುತ್ತದೆ. ಆದರೆ ಇದು ಇನ್ ಪುಟ್ ಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಇದು ಭೌತಿಕ ಬಟನ್ ಗಳು ಮತ್ತು ನಾಬ್ ಗಳನ್ನು ಬಳಸಿದಾಗ ವೇಗವಾಗಿ ಪ್ರತಿಕ್ರಿಯಿಸುತ್ತದೆ, ದನ್ನು ಟಾಟಾ ಚಲನೆಯಲ್ಲಿ ಬಳಸುವಂತೆ ಚೆನ್ನಾಗಿ ಅದನ್ನು ರೂಪಿಸಲಾಗಿದೆ. 

ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಬಿಡುಗಡೆಯ ಸಂದರ್ಭದಲ್ಲಿನ ಆಂಡ್ರಾಯಿಡ್ ಆಟೊದಲ್ಲಿ ಮಾತ್ರ ಲಭ್ಯವಿದ್ದು ಆಗಸ್ಟ್ 2018ರಿಂದ ಮಾರಾಟವಾಗುವ ಮಾಡೆಲ್ ಗಳು ಆಪಲ್ ಕಾರ್ ಪ್ಲೇ ಹೊಂದಿದೆ. ಹಿಂದೆ ತಮ್ಮ ಕಾರು ಕೊಂಡವರು ಅವರ ಸಿಸ್ಟಂಗಳನ್ನು ತಮ್ಮ ಸರ್ವೀಸ್ ಸೆಂಟರ್ ನಲ್ಲಿ ಆಪಲ್ ಕಾರ್ ಪ್ಲೇಗೆ ಅಪ್ ಡೇಟ್ ಮಾಡಿಕೊಳ್ಳಬಹುದು. ಚಾಲಕರ ಬದಿಯ ಇನ್ಸ್ ಟ್ರುಮೆಂಟ್ ವಿನ್ಯಾಸದ ದೃಷ್ಟಿಯಿಂದ ಸರಳವಾಗಿದೆ ಮತ್ತು ಸ್ಪೀಡೊಮೀಟರ್ ಮತ್ತು ಟ್ಯಾಕೊಮೀಟರ್ ನಡುವೆ ಮಲ್ಟಿ-ಇನ್ಫೊ ಡಿಸ್ಪ್ಲೇ ಯೂನಿಟ್ ಪಡೆದಿದೆ. ನೀವು ಎರಡು ಟ್ರಿಪ್ ಮೀಟರ್ ಗಳು, ಸರಾಸರಿ ಇಂಧನ ಕ್ಷಮತೆಯ ಡಿಸ್ಪ್ಲೇ, ಖಾಲಿಯಾಗುವ ದೂರ ಮತ್ತು ಸಾಮಾನ್ಯ ಮಾಹಿತಿಗಳನ್ನು ಅಲ್ಲಿ ಪಡೆಯಬಹುದು. 

ಸೆಂಟರ್ ಕನ್ಸೋಲ್ ಸೆಂಟ್ರಲ್ ಎ.ಸಿ.ವೆಂಟ್ ಗಳ ಅಡಿಗೆ ವಿಸ್ತರಿಸಿದೆ ಮತ್ತು ಹಿಂಬದಿಯವರೆಗೂ ವಿಸ್ತರಿಸಿದೆ. ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನಾಬ್ ಅಲ್ಲದೆ ಇದು ಯು.ಎಸ್.ಬಿ ಮತ್ತು ಆಕ್ಸ್ ಪೋರ್ಟ್ ಹೊಂದಿದೆ ಮತ್ತು ಡ್ರೈವ್ ಸೆಲೆಕ್ಟ್ ನಾಬ್ ಕೂಡಾ ಹೊಂದಿದೆ. ಇದು ಜೋಡಿ ಕಪ್ ಹೋಲ್ಡರ್ ಗಳನ್ನು ಹೊಂದಿದ್ದು ಅದನ್ನು ತಂಬೌರ್ ಡೋರ್ ನೊಂದಿಗೆ ಮುಚ್ಚಬಹುದು, ಅದು ರೋಲರ್ ಶಟರ್ ಆಗಿದ್ದು ನೀವು ಹೈಯರ್-ಎಂಡ್ ಕಾರುಗಳಲ್ಲಿ ಕಾಣಬಹುದು. ನೋಟದಲ್ಲಿ ಇದು ನಿಮಗೆ ಪ್ರಭಾವಿಸುತ್ತದೆ. ಆದರೆ ಅದರಲ್ಲಿನ ರಂಧ್ರಗಳು ದಕ್ಷತಾಶಾಸ್ತ್ರದ ವೈಫಲ್ಯ: ಇದು ಕಪ್ ಗಳನ್ನು ಇರಿಸಲು ಮತ್ತು ತೆಗೆಯಲು ಅತ್ಯಂತ ಆಳವಾದ ಮತ್ತು ತುಂಬಿದಂತಿರುತ್ತದೆ. ಮತ್ತಷ್ಟು ಹಿಂದಕ್ಕೆ ಚಲಿಸಿದರೆ, ಆರ್ಮ್ ರೆಸ್ಟ್ ಇದ್ದು ಸಣ್ಣ ಗ್ಲೋವ್ ಬಾಕ್ಸ್ ತೆರೆಯುತ್ತದೆ ಅದು ನಿಮ್ಮ ಸ್ಮಾರ್ಟ್ ಫೋನ್ ಮತ್ತು ವ್ಯಾಲೆಟ್ ಇರಿಸಲು ತಕ್ಕಷ್ಟು ಸ್ಥಳಾವಕಾಶ ಇದೆ. ಇದನ್ನು ಯು.ಎಸ್.ಬಿ ಮತ್ತು ಆಕ್ಸ್ ಸಾಕೆಟ್ ಗಳಿಗೆ ಸೂಕ್ತವಾದ ಸ್ಥಳವಾಗಿತ್ತು. ಸೆಂಟರ್ ಆರ್ಮ್ ಸ್ಟ್ರೆಚ್ ಗಳು ರಿಯರ್ ಕ್ಯಾಬಿನ್ ಗೆ ವಿಸ್ತರಿಸಿದೆ ಮತ್ತು ಹಿಂಬದಿಯ ಪ್ರಯಾಣಿಕರಿಗೆ ಏರ್ ಕಾನ್ ಬ್ಲೋವರ್ ಗಳನ್ನು ಹೊಂದಿದೆ. 

ಅನುಕೂಲ

ನೆಕ್ಸಾನ್ ನ ಕ್ಯಾಬಿನ್ ಅತ್ಯಂತ ಅನುಕೂಲಕರವಾಗಿದ್ದು ಇದನ್ನು ವಿಶೇಷವಾಗಿ ಉಲ್ಲೇಖಿಸುವುದು ಅಗತ್ಯ. ವಿಷಯಗಳು ಸ್ಪಷ್ಟಪಡಿಸಲು ನೆಕ್ಸಾನ್ ನಾಲ್ವರಿಗೆ ಸೂಕ್ತವಾದ ಕಾರು ಆಗಿದೆ. ಮತ್ತು ಅದನ್ನು ಹೇಳಿದಾಗ ಕ್ಯಾಬಿನ್ ವಿಶಾಲವಾಗಿಲ್ಲ ಎಂದಲ್ಲ, ಬರೀ ಹಿಂಬದಿಯ ಸೀಟುಗಳನ್ನು ಹಾಗೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ನೀವು ಹಿಂಬದಿಯ ಸೀಟು ಪಡೆದಾಗ ಸೀಟುಗಳನ್ನು ಇಬ್ಬರು ಪ್ರಯಾಣಿಕರಿಗೆ ಆಗುವಂತೆ ರೂಪಿಸಲಾಗಿದೆ. ಮೂರನೆಯ ಪ್ರಯಾಣಿಕನಿಗೆ ಸೀಟು ಬೇಕೆಂದರೆ ಸೆಂಟ್ರಲ್ ಆರ್ಮ್ ರೆಸ್ಟ್ ಮಡಚಬೇಕು. ಆದರೆ ಅಲ್ಪ ದೂರಗಳಿಗೆ ಅಲ್ಲದಿದ್ದರೆ ನೀವು ಅದನ್ನು ಮಾಡಲಾಗುವುದಿಲ್ಲ. 

ಹಿಂಬದಿಯಲ್ಲಿ ಮೂವರಿಗೆ ಸೀಟು ನೀಡಲು ಮಾರುತಿ ವಿತಾರಾ ಬ್ರೆಝಾ ಕೊಂಚ ಒಳ್ಳೆಯ ಕೆಲಸ ಮಾಡಿದ್ದು 1400ಎಂಎಂ ಶೌಲ್ಡರ್ ರೂಮ್ ನೀಡಿದೆ ನೆಕ್ಸಾನ್ 1385ಎಂಎಂ ಹೊಂದಿದೆ. 1220ಎಂಎಂನಲ್ಲಿ ನೆಕ್ಸಾನ್ ಸೀಟ್ ಬೇಸ್ ವಿತಾರಾ ಬ್ರೆಝಾಗಿಂತ(1300ಎಂಎಂ) ಕಿರಿದಾಗಿದೆ. ಆದರೆ ಹಿಂಬದಿಯಲ್ಲಿ ಕೇವಲ ಇಬ್ಬರು ಪ್ರಯಾಣಿಕರಿದ್ದರೆ ಟಾಟಾ ನೆಕ್ಸಾನ್ ಹೆಚ್ಚು ಅನುಕೂಲಕರ ಎಂದು ಸಾಬೀತುಪಡಿಸುತ್ತದೆ. ಇದು ವಿತಾರಾಬ್ರೆಝಾಗಿಂತ 20ಎಂಎಂನಷ್ಟು ಹೆಚ್ಚುವರಿ ಹೆಡ್ ರೂಂ ನೀಡಿರುವುದೇ ಅಲ್ಲದೆ ಇದು ನೀ ರೂಂ 715ಎಂಎಂ-905ಎಂಎಂ ವರ್ಸಸ್ ಮಾರುತಿಯ 625ಎಂಎಂ-860 ಎಂಎಂ ಹೊಂದಿವೆ. 

ನೆಕ್ಸಾನ್ ಮುಂಬದಿಯ ಸೀಟಿಗೆ ಪ್ರವೇಶಿಸಿದರೆ ಇಲ್ಲಿ ಕೂಡಾ ಸೌಖ್ಯದ ಮಡಿಲಿನಲ್ಲಿರುತ್ತೀರಿ. ಚಾಲಕರ ಸೀಟಿನ 965ಎಂಎಂ-1020ಎಂಎಂ ಹೆಡ್ ರೂಂ, ಉದ್ದದ ಚಾಲಕರಿಗೂ ಅನುಕೂಲವಾಗಿದೆ. ಹೌದು, ಚಾಲಕರ ಸೀಟು ಎತ್ತರ ಹೊಂದಿಸುವಂತಿದೆ, ಸ್ಟೀರಿಂಗ್ ಹೊರ ಚಾಚಲು ಹೊಂದಿಸುವಂತಿದೆ, ಮತ್ತು ಸೀಟುಗಳು ಅದ್ಭುತವಾಗಿ ಕೆಳಬೆನ್ನಿಗೆ ಬೆಂಬಲ ನೀಡಿವೆ. ಆದ್ದರಿಂದ ಉತ್ತಮ ಚಾಲನೆಯ ಸ್ಥಾನಕ್ಕೆ ಪ್ರವೇಶಿಸುವುದು ಸುಲಭ. ಸೀಟುಗಳು ವಿವಿಧ ಗಾತ್ರಗಳ, ಆಕಾರಗಳ ಜನರಿಗೆ ಕುಳಿತುಕೊಳ್ಳಲು ತಕ್ಕಷ್ಟು ಅಗಲವಾಗಿವೆ, ಮತ್ತು ತೊಡೆಯ ಕೆಳಭಾಗದ ಹೆಚ್ಚುವರಿ ಬೆಂಬಲ ಮತ್ತಷ್ಟು ಅನುಕೂಲಕರವಾಗಿಸಿದೆ. ಇದು ರಿಯರ್ ಸೀಟುಗಳಿಗೂ ಅನ್ವಯಿಸುತ್ತದೆ. ಹಿಂಬದಿಯ ಕ್ಯಾಪ್ಟನ್ ಗಳ(ಅವುಗಳ ವಿನ್ಯಾಸಕ್ಕೆ ಒಳ್ಳೆಯ ಹೆಸರು ನೀಡಲಾಗಿದೆ) ಎರಡು ಸೀಟುಗಳ ಕುರಿತು ಆಲೋಚಿಸಿ ಮತ್ತು ನೀವು ಸುಖಕರವಾಗಿ ಕುಳಿತುಕೊಳ್ಳಬಹುದು. ಸೀಟಿನ ಹಿಂಬದಿಯ ಕೋನ ಸಾಮಾನ್ಯವಾಗಿ ಕಂಫರ್ಟ್  ಮೋಡ್ ನಲ್ಲಿರುತ್ತದೆ. ಸೊಂಟ ಮತ್ತು ತೊಡೆಯ ಕೆಳಭಾಗದ ಪ್ರದೇಶಗಳಿಗೆ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ಕುಷನ್ ಹೊಂದಿದೆ ಮತ್ತು ಸೀಟುಗಳನ್ನು ಮೇಡ್-ಟು-ಆರ್ಡರ್ ಆಗಿ ಭಾಸವಾಗುತ್ತವೆ. 

ಕಾರ್ಯಕ್ಷಮತೆ

ನೆಕ್ಸಾನ್ 1.2-ಲೀಟರ್ ಟರ್ಬೊಚಾರ್ಚ್ಡ್ ಪೆಟ್ರೋಲ್ ಎಂಜಿ(110ಪಿಎಸ್/170ಎನ್ಎಂ) ಮತ್ತು 1.5-ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್(110ಪಿಎಸ್/260ಎನ್ಎಂ) ಪಡೆದಿದೆ. ಎರಡೂ ಎಂಜಿನ್ ಗಳು 6-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ನೊಂದಿಗೆ ಸ್ಟಾಂಡರ್ಡ್ ಆಗಿ ಬಂದಿದೆ ಅಲ್ಲದೆ 6-ಸ್ಪೀಡ್ ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ಸ್(ಎಎಂಟಿ)ನಲ್ಲೂ ಲಭ್ಯ. ಎರಡೂ ಎಂಜಿನ್ ಗಳನ್ನು ಟಾಟಾದಲ್ಲಿ ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪೆಟ್ರೋಲ್ ಎಂಜಿನ್ ಟೈಗರ್ಸ್ ಎಂಜಿನ್ನ ಟರ್ಬೊಚಾರ್ಜ್ಡ್ ಆವೃತ್ತಿಯಾಗಿದ್ದು ಈ ಡೀಸೆಲ್ ಎಂಜಿನ್ ಸಂಪೂರ್ಣ ಹೊಸದಾಗಿದೆ. 

ಡೀಸೆಲ್ ಎಂಜಿನ

ಇದು ಟಾಟಾದ ಇಲ್ಲಿಯವರೆಗಿನ ಅತ್ಯುತ್ತಮ ಎಂಜಿನ್, ಮತ್ತು ಇದನ್ನು ಕಾಂಪ್ಯಾಕ್ಟ್ ಕಾರಿನ ವಲಯದಲ್ಲಿ ಅತ್ಯುತ್ತಮ ಡೀಸೆಲ್ ಎಂಜಿನ್ ಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಎಂಜಿನ್ 260ಎನ್ಎಂ ಪೀಕ್ ಟಾರ್ಕ್ ಅನ್ನು 1500-2700ಆರ್.ಪಿ.ಎಂ ಮತ್ತು 110ಪಿಎಸ್ ಗರಿಷ್ಠ ಶಕ್ತಿಯನ್ನು 3750ಆರ್.ಪಿ.ಎಂನಲ್ಲಿ ನೀಡುತ್ತದೆ. ಕಾಗದದಲ್ಲಿ ಇದು ಈ ವರ್ಗದಲ್ಲಿ ಅತ್ಯಂತ ಟಾರ್ಕಿಯೆಸ್ಟ್ ಘಟಕವಾಗಿದೆ ಮತ್ತು ಸಂಪೂರ್ಣವಾಗಿ ಗರಿಷ್ಠ ಟಾರ್ಕ್ ಮಟ್ಟಕ್ಕಿಂತ ಕೆಳಕ್ಕೆ ಇಳಿಯುವುದಿಲ್ಲದೇ ಇರುವುದು ಇದನ್ನು ಮತ್ತಷ್ಟು ವಿಶೇಷವಾಗಿಸಿದೆ. ಪೆಟ್ರೋಲ್ ಗಿಂತ ಕಿರಿದಾದ ಗೇರಿಂಗ್ ನಿಮಗೆ ಇದನ್ನು 30-40 ಕೆಎಂಪಿಎಚ್  ವೇಗದಲ್ಲಿ ಕೆಳಕ್ಕೆ ಚಲಿಸದೆ 3ನೇ ಗೇರ್ ನಲ್ಲಿ ಚಾಲಿಸುವ ಅನುಕೂಲ ನೀಡುತ್ತದೆ. ನಮ್ಮ ಕಾರ್ಯಕ್ಷಮತೆ ಪರೀಕ್ಷೆಯಲ್ಲಿ ಡೀಸೆಲ್ 13.25 ಸೆಕೆಂಡುಗಳಲ್ಲಿ 0-100 ಸ್ಪ್ರೀಟ್ ನಿರ್ವಹಿಸಿದೆ. ಇದು ಸಮರ್ಥವಾಗಿಯೂ ಇದ್ದು ಹೆದ್ದಾರಿಯಲ್ಲಿ 23.97 ಕೆಎಂಪಿಎಲ್  ನೀಡುತ್ತದೆ, ಆದರೆ ನಗರದಲ್ಲಿ ಕಡಿಮೆ ಗೇರಿಂಗ್ ನಲ್ಲಿ ಇದು 16.8ಕೆಎಂಪಿಎಲ್ ಗೆ ಕುಸಿಯುತ್ತದೆ. 

ಡೀಸೆಲ

ನೀವು ಹೊಸ ಚಾಲಕರಾದರೆ ಅಥವಾ ಬಂಪರ್ ಟು ಬಂಪರ್ ಟ್ರಾಫಿಕ್ ನಲ್ಲಿ ಗೇರ್ ಬದಲಾವಣೆಯಿಂದ ಸುಸ್ತಾಗಿದ್ದರೆ ನೀವು ಎಎಂಟಿ ಆಯ್ಕೆ ಮಾಡಿಕೊಳ್ಳಬಹುದು. ಬಹಳಷ್ಟು ಎಎಂಟಿಗಳಂತೆ ಅಲ್ಲದೆ ಟ್ರಾನ್ಸ್ ಮಿಷನ್ ಆಗಾಗ್ಗೆ ಗೇರ್ ಗಳನ್ನು ಬದಲಾಯಿಸುವುದಿಲ್ಲ. ಇದು 1500 ಆರ್.ಪಿ.ಎಂ ಮೇಲ್ಪಟ್ಟ 260ಎನ್ಎಂ ಉನ್ನತ ಟಾರ್ಕ್ ನಿಂದ ಸಾಧ್ಯವಾಗಿದೆ. ಇದು ಎಸ್.ಯು.ವಿಯನ್ನು ನಗರದಲ್ಲಿ ಕೆಳಕ್ಕೆ ಶಿಫ್ಟ್ ಆಗದೆ ಓವರ್ ಟೇಕ್ ಗಳನ್ನು ಮಾಡಲು ಅವಕಾಶ ನೀಡುತ್ತದೆ. ಇದು ಶಿಫ್ಟ್ ಗಳು ತ್ವರಿತವಲ್ಲದೇ ಇರುವುದರಿಂದ ಒಳ್ಳೆಯದಾಗಿದೆ. ಮೊದಲ ಗೇರ್ ಬಳಕೆ ಕೊಂಚ ಜರ್ಕ್ ಉಂಟು ಮಾಡುತ್ತಿದ್ದು ಅದು ಕೊಂಚ ಕಾಲ ಕಳೆದಂತೆ ಕಿರಿಕಿರಿ ಆಗುತ್ತದೆ, ಅದರಲ್ಲೂ ಸ್ಟಾಪ್-ಅಂಡ್-ಗೋ ಟ್ರಾಫಿಕ್ ನಲ್ಲಿ ಕೆರಳಿಸುತ್ತದೆ. ಆದರೆ ಇದು ನಿಧಾನವಾಗಿ ಚಲಿಸುವ ಟ್ರಾಫಿಕ್ ನಲ್ಲಿ ಮರೆಯಾಗುತ್ತದೆ ಎರಡನೇ ಗೇರ್ ನಂತರ ಮೃದುವಾಗುತ್ತದೆ. ಗ್ರೇಡಿಯೆಂಟ್ ಮೀರಿ ಹೋಗುತ್ತಿರುವಾಗ ನೀವು ಕೆಳಕ್ಕೆ ಚಲಿಸಬೇಕೋ ಬೇಡವೋ ಎಂದು ನಿರ್ಧರಿಸದೇ ಇರುವಾಗ ಗೇರ್ ಬಾಕ್ಸ್ ಲಾಜಿಕ್ ಕೊಂಚ ಗೊಂದಲ ಉಂಟು ಮಾಡುತ್ತದೆ. ಅಲ್ಲದೆ ಮೂರು ಡ್ರೈವ್ ಮೋಡ್ಸ್- ಇಕೊ, ಸಿಟಿ ಮತ್ತು ಸ್ಪೋರ್ಟ್ ಎಲ್ಲವೂ ಎಎಂಟಿಯಲ್ಲಿ ಲಭ್ಯ. ಒಟ್ಟಾರೆ ಎಎಂಟಿ ಟ್ರಾಫಿಕ್ ಒತ್ತಡಗಳನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ, ಆದರೆ ನೀವು ಗೇರ್ ಬದಲಾವಣೆಯಿಂದ ಸುಸ್ತಾಗಿದ್ದರೆ ಮತ್ತು ರೂ.70,200 ಪ್ರೀಮಿಯಂ ಕೊಂಚ ಹೆಚ್ಚೇ ಆಗುತ್ತದೆ. 

ಪೆಟ್ರೋಲ್ ಎಂಜಿನ್

ಟೈಗರ್ ನ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 25ಪಿಎಸ್ ಪವರ್ ಬರ್ಸ್ಟ್ ಟರ್ಬೊಚಾರ್ಜರ್ ನೊಂದಿಗೆ ಪಡೆಯುತ್ತದೆ. ಇದು 110ಪಿಎಸ್ ಗರಿಷ್ಠ ಶಕ್ತಿಯನ್ನು 5000ಆರ್.ಪಿ.ಎಂನಲ್ಲಿ ನೀಡುತ್ತದೆ ಮತ್ತು 170ಎನ್ಎಂ ಪೀಕ್ ಟಾರ್ಕ್ ಅನ್ನು 1750-4000 ಆರ್.ಪಿ.ಎಂನಲ್ಲಿ ನೀಡುತ್ತದೆ. 

ಆದರೆ ಇದು ಡೀಸೆಲ್ ಯೂನಿಟ್ ನಂತೆ ಉತ್ಸಾಹಕಾರಿ ಮತ್ತು ಸುಧಾರಿತ ಅಲ್ಲ. ಆದ್ದರಿಂದ ಡೀಸೆಲ್ ಎಂಜಿನ್ ಕಡಿಮೆ ಆರ್.ಪಿ.ಎಂನಲ್ಲಿಯೂ ರೆಸ್ಪಾನ್ಸಿವ್ ಆಗಿದ್ದು ಪೆಟ್ರೋಲ್ ಎಂಜಿನ್ ಕೊಂಚ ಜಡವಾಗಿದೆ ಮತ್ತು ನೀವು ಫುಲ್ ಹೌಸ್ ಚಾಲನೆ ಮಾಡುತ್ತಿದ್ದರೆ ಪ್ರಗತಿ ಮತ್ತಷ್ಟು ನಿಧಾನವಾಗುತ್ತದೆ. ಪೆಟ್ರೋಲ್ ಎಂಜಿನ್ 3000ಆರ್.ಪಿ.ಎಂನಲ್ಲಿ ತನ್ನ ಪವರ್ ಬ್ಯಾಂಡ್ ಮುಟ್ಟುತ್ತದೆ 1750ಆರ್.ಪಿ.ಎಂನಲ್ಲಿ ಅಲ್ಲ, ಅದರಲ್ಲಿ ಗರಿಷ್ಠ ಟಾರ್ಕ್ ನೀಡುತ್ತದೆ. 

ಪೆಟ್ರೊಲ್ ಎಂಜಿನ್ ತನ್ನ ಉದ್ದದ ಗೇರಿಂಗ್ ನಿಂದ ಸ್ವಭಾವತಃ ಮುಕ್ತ ರಿವ್ವಿಂಗ್ ಹೊಂದಿಲ್ಲ ಮತ್ತು ವೇಗ ಪಡೆದುಕೊಳ್ಳಲು ಟಾರ್ಕ್ ಮೇಲೆ ಆಧಾರಪಟ್ಟಿದೆ. ಟಾರ್ಕ್ ಬ್ಯಾಂಡ್ ತಕ್ಕಷ್ಟು ಅಗಲವಿದ್ದು ನೆಕ್ಸಾನ್ 4000ಆರ್.ಪಿ.ಎಂ ಮೇಲ್ಪಟ್ಟು ವೇಗ ಮುಂದುವರೆಸುತ್ತದೆ. ಈ ಎಂಜಿನ್ ತನ್ನ 5500ಆರ್.ಪಿ.ಎಂ ರೆಡ್  ಲೈನ್ ನಲ್ಲಿ ಒರಟು ಅಥವಾ ಪ್ರಯಾಸ ಎನಿಸುವುದಿಲ್ಲ. ಎತ್ತರದ ಗೇರಿಂಗ್ ಇದ್ದರೂ ಪೆಟ್ರೋಲ್ ನಲ್ಲಿ ಗೇರಿಂಗ್ 100ಕೆಎಂಪಿಎಚ್ ಸ್ಪ್ರಿಂಟ್ ನಲ್ಲಿ ತ್ವರಿತವಾಗಿ ಪಡೆದುಕೊಳ್ಳುತ್ತದೆ ಮತ್ತು ಅಲ್ಲಿಗೆ ತಲುಪಲು ಕೇವಲ 11.64 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಡೀಸೆಲ್ ಕಾರಿಗಿಂತ ಪೆಟ್ರೋಲ್ ನಲ್ಲಿ ಟನ್ ತಲುಪಲು ಒಂದು ಕಡಿಮೆ ಗೇರ್ ಬದಲಾವಣೆ ಮಾತ್ರ ಸಾಕು. ಇಂಧನ ಬಳಸುವಲ್ಲಿ ಪೆಟ್ರೋಲ್ ಅತ್ಯಂತ ಗೌರವಾನ್ವಿತವಾಗಿದ್ದು ಹೆದ್ದಾರಿಯಲ್ಲಿ 17.88ಕೆಎಂಪಿಎಲ್ ಮತ್ತು ನಗರದಲ್ಲಿ 14.02 ಕೆಎಂಪಿಎಲ್ ನೀಡುತ್ತದೆ. 

ಟ್ರಾನ್ಸ್ ಮಿಷನ್ ಮತ್ತು ಡ್ರೈವ್ ಮೋಡ್ಸ್ 

ಪೆಟ್ರೋಲ್ ಮತ್ತು ಡೀಸೆಲ್  ಎರಡೂ ಪ್ರಸ್ತುತ 6-ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಹೊಂದಿದ್ದು ಡೀಸೆಲ್ ಕಾರು ಕೊಂಚ ಕಡಿಮೆ ಅನುಪಾತಗಳನ್ನು ಹೊಂದಿದೆ. ಇದು ಡೀಸೆಲ್ ಗೆ ಅತ್ಯುತ್ತಮ ಚಾಲನೀಯತೆ ನೀಡುತ್ತದೆ ಮತ್ತು 100ಕೆಎಂಪಿಎಚ್ ಸ್ಪ್ರಿಂಟ್ ತಲುಪಲು ಹೆಚ್ಚು ಗೇರ್ ಗಳನ್ನು ಬದಲಾಯಿಸಬೇಕು. ಅದಕ್ಕೆ ಕಾರಣ ವೇಗವಾಗಿ ಬದಲಾಗುವ ಗೇರ್ ಬಾಕ್ಸ್ ಅಲ್ಲ. ಹೊರಚಾಚುಗಳು ಉದ್ದವಿವೆ ಮತ್ತು ಶಿಫ್ಟ್ ಗಳು ಸಕಾರಾತ್ಮಕವಾಗಿಲ್ಲ. ತಿರುವಿನ ರಸ್ತೆಗಳಲ್ಲಿ ಚಾಲನೆಗೆ ಮತ್ತು ನಮ್ಮ ಪರ್ಫಾರ್ಮೆನ್ಸ್ ಟೆಸ್ಟ್ ಗಳಲ್ಲಿ ಮೂರನೇ ಗೇರ್ ಅತ್ಯಂತ ಕಠಿಣವಾಗಿದೆ ಮತ್ತು ನಮಗೆ ಹಲವಾರು ಸಲ ಶಿಫ್ಟ್ ಗಳು ತಪ್ಪಿಸಿಕೊಂಡವು. 

ನೆಕ್ಸಾನ್ ಮೂರು ಡ್ರೈವ್ ಮೋಡ್ ಗಳು-ಸ್ಪೋರ್ಟ್, ಇಕೊ ಮತ್ತ ಸಿಟಿ ಹೊಂದಿದ್ದು ಈ ಎಲ್ಲ ಮೂರು ಕೂಡಾ ಮೂರು ಬಗೆಯ ಎಂಜಿನ್ ಲಕ್ಷಣವನ್ನುತೋರುತ್ತದೆ. ಇದರಿಂದ ಅದನ್ನು ಜಾಣ್ಮೆಯಿಂದ ಬಳಸಬಹುದು. ಸ್ಪೋರ್ಟ್ ಮೋಡ್ ಎಲ್ಲವನ್ನೂ ಸಡಿಲಗೊಳಿಸುತ್ತದೆ, 2000  ಆರ್.ಪಿ.ಎಂನಲ್ಲಿ ಟರ್ಬೊ ಕಿಕ್ ಗಳು ಸಿಟಿ ಮೋಡ್ ಟಾರ್ಕ್ ಪೂರೈಕೆಯನ್ನು ಮೃದುಗೊಳಿಸುತ್ತದೆ ಮತ್ತು ಇದು ನಗರದಲ್ಲಿ ಚಾಲನೆ ಸುಲಭಗೊಳಿಸುತ್ತದೆ. ಇಕೊ ಮೋಡ್ ನಲ್ಲಿ ಪ್ರತಿಕ್ರಿಯೆ ಮತ್ತಷ್ಟು ದುರ್ಬಲವಾಗುತ್ತದೆ ಮತ್ತು ಇದು ಅತ್ಯಂತ ನಿಗ್ರಹ ರೀತಿಯಲ್ಲಿ ಚಾಲಿಸಲು ಒತ್ತಾಯಪಡಿಸುತ್ತದೆ. ಇದನ್ನು ನಿಜಕ್ಕೂ ಒಂದು ದೃಷ್ಟಿಕೋನದಲ್ಲಿ ಇರಿಸಲು ನಾವು 0-100 ಸ್ಪ್ರಿಂಟ್ ಅನ್ನು ಡೀಸೆಲ್ ನಲ್ಲಿ ನಾವು ಪೂರ್ಣಗೊಳಿಸಿದೆವು ಮತ್ತು ಸ್ಪೋರ್ಟ್(ಅತ್ಯಂತ ವೇಗದ ಸಮಯ) ಮತ್ತು ಇಕೊ ಮೋಡ್(ಅತ್ಯಂತ ನಿಧಾನ) 8 ಸೆಕೆಂಡುಗಳಾಗಿತ್ತು. 

ಚಾಲನೆ, ನಿರ್ವಹಣೆ ಮತ್ತು ಬ್ರೇಕಿಂಗ್

ನೆಕ್ಸಾನ್ ಮುಂಬದಿಯಲ್ಲಿ ಮೆಕ್ ಫರ್ಸನ್ ಸ್ಟ್ರಟ್ಸ್ ಪಡೆಯುತ್ತದೆ ಮತ್ತು ಹಿಂಬದಿಯಲ್ಲಿ ಟ್ವಿಸ್ಟ್ ಬೀಮ್ ಸೆಟಪ್ ಪಡೆಯುತ್ತದೆ. ಚಾಲನೆ ಕಠಿಣ ಮತ್ತು ಮೃದುವಿನ ನಡುವೆ ಸುಗಮವಾಗಿದೆ, ಏಕೆಂದರೆ ಹೆಚ್ಚು ಬಾಡಿ ರೋಲ್ ಇಲ್ಲ ಹಾಗೂ ಒಳಗಡೆ ಹೆಚ್ಚು ಐಷಾರಾಮದ ಭಾವನೆ ನೀಡುತ್ತದೆ. ಇದು ದೊಡ್ಡ ಎಸ್.ಯು.ವಿಗಳಂತೆ ರಸ್ತೆಯ ಗುಂಡಿಗಳನ್ನು ನಿರ್ವಹಿಸುತ್ತದೆ. ಆದ್ದರಿಂದ ನಿಮಗೆ ಬೇಕಾದುದೆಲ್ಲ ಮೃದುವಾದ ಥಡ್ ಮತ್ತು ಕೊಂಚ ಲಂಬ ಚಲನೆ ವೇಗವಾಗಿರುತ್ತದೆ. ಡೀಸೆಲ್ ನೆಕ್ಸಾನ್ ಪೆಟ್ರೋಲ್ ಗಿಂತ 68 ಕೆಜಿ ಭಾರವಾಗಿದೆ, ಮತ್ತು ಹೆಚ್ಚುವರಿ ಭಾರದಿಂದ ಕ್ಯಾಬಿನ್ ಒರಟು ಮೇಲ್ಮೈಯಲ್ಲಿ ಚಲಿಸುವಾಗ ಅಥವಾ ಹೆಚ್ಚಿನ ವೇಗದಲ್ಲಿ ಮತ್ತಷ್ಟು ಸ್ಥಿರವಾಗಿರುತ್ತದೆ. 

ಡೀಸೆಲ್ ನೆಕ್ಸಾನ್ ನಿರ್ವಹಣೆಗೆ ಬಂದಾಗ ಹೆಚ್ಚುವರಿ ತೂಕದ ಬೆಲೆ ಪಾವತಿಸುತ್ತದೆ, ಆದರೆ ದೊಡ್ಡ ಮಾರ್ಜಿನ್ ನಲ್ಲಿ ಅಲ್ಲ. ಡೀಸೆಲ್ ನೆಕ್ಸಾನ್ ತಿರುವಿನಲ್ಲಿ ಕೊಂಚ ಮಟ್ಟಿಗೆ ಅಂಡರ್ ಸ್ಟೀರ್ ಮಾಡುತ್ತದೆ, ಆದರೆ ಪೆಟ್ರೋಲ್ ನೆಕ್ಸಾನ್ ಹೋಲಿಕೆಯಲ್ಲಿ ಹೆಚ್ಚು ನಿಖರವಾಗಿದೆ. ಒಟ್ಟಾರೆ ನೆಕ್ಸಾನ್ ರಸ್ತೆಯ ಮೇಲೆ ವಿಶ್ವಾಸದಿಂದ ಕಾಣುತ್ತದೆ ಹೆದ್ದಾರಿಗಳ ವೇಗದಲ್ಲಿ ಸ್ಥಿರತೆ ಕೂಡಾ ಕಾಳಜಿಯ ವಿಷಯವಲ್ಲ. 

ಮುಂಬದಿಯಲ್ಲಿ ಡಿಸ್ಕ್ ಗಳು ಮತ್ತು ಹಿಂಬದಿಯಲ್ಲಿ ಡ್ರಮ್ಸ್ ಒಳಗೊಂಡಿದ್ದು ಇದು ಕಠಿಣ ಬ್ರೇಕಿಂಗ್ ನಲ್ಲಿ ವಿಶ್ವಾಸದ ಭಾವನೆ ನೀಡುತ್ತದೆ. ಆದರೆ ಬ್ರೇಕ್ ಗಳು ತಕ್ಷಣದ ಕಡಿತ ನೀಡುವುದಿಲ್ಲ, ಇದರಿಂದ ನಿಮಗೆ ಸನ್ನಿವೇಶ ಆಧರಿಸಿ ಬ್ರೇಕ್ ಪ್ರೆಷರ್ ಅಗತ್ಯವಾಗುತ್ತದೆ. 

ಟಾಟಾ ನೆಕ್ಸ್ಂನ್‌ 2017-2020

ನಾವು ಇಷ್ಟಪಡುವ ವಿಷಯಗಳು

  • ಸಬ್-4ಎಂ ಎಸ್.ಯು.ವಿ. ವಿಭಾಗದಲ್ಲಿ ಅತ್ಯಂತ ಸಮರ್ಥ ಬೆಲೆ ಹೊಂದಿದ ಟಾಟಾ ನೆಕ್ಸಾನ್ ಬೆಲೆಯ ದೃಷ್ಟಿಯಿಂದ ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳಿಗೆ ಸರಿ ಸಮಾನವಾಗಿದೆ.
  • ಟಾಟಾ ನೆಕ್ಸಾನ್ ನ 209ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಈ ವರ್ಗದಲ್ಲಿ ಅತ್ಯುತ್ತಮ ಮಾತ್ರವಲ್ಲ, ರೆನಾಲ್ಟ್ ಕ್ಯಾಪ್ಟರ್/ಡಸ್ಟರ್ ಎ.ಡಬ್ಲ್ಯೂ.ಡಿ(210ಎಂಎಂ) ನಂತರದಲ್ಲಿದ್ದು ಈ ಎರಡೂ ದೊಡ್ಡ ಎಸ್.ಯು.ವಿ.ಗಳಾಗಿವೆ.
  • ಈ ವರ್ಗದ ಮುಂಚೂಣಿಯ ಹರ್ಮನ್ ಅಕೌಸ್ಟಿಕ್ಸ್ ದೊಡ್ಡ ಹಾಗೂ ನಿಖರ ಶಬ್ದ ನೀಡುತ್ತದೆ.
  • ರಸ್ತೆಯ ಮೇಲೆ ಎದ್ದು ಕಾಣುವ ಕೂಪೆ-ರೀತಿಯ ರೂಫ್ ಲೈನ್ ಅದರ ಒಟ್ಟಾರೆ ನೋಟಕ್ಕೆ ಲಕ್ಷಣ ಸೇರ್ಪಡೆ ಮಾಡಿದೆ.
  • ಸಬ್-10 ಲಕ್ಷ ಬೆಲೆಯಲ್ಲಿ ಅತ್ಯಂತ ವಿಶಾಲ ಕೊಡುಗೆಯಾಗಿದ್ದು ಟಾಟಾ ನೆಕ್ಸಾನ್ ಈ ವರ್ಗದಲ್ಲಿ ಅತ್ಯಂತ ಅಗಲದ್ದಾಗಿದೆ.

ನಾವು ಇಷ್ಟಪಡದ ವಿಷಯಗಳು

  • ಒಟ್ಟಾರೆ ಫಿಟ್ ಅಂಡ್ ಫಿನಿಷ್ ನಮಗೆ ಇನ್ನೂ ಸುಧಾರಣೆಗೆ ಅವಕಾಶವಿದೆ ಎನ್ನಿಸುತ್ತದೆ
  • ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಇನ್ನೂ ತಪ್ಪಿಸಿಕೊಂಡಿದೆ, ಇದು ಇಕೊಸ್ಪೋರ್ಟ್ ಮತ್ತು ವಿತಾರಾ ಬ್ರೆಝಾದಲ್ಲಿ ನೀಡಲಾಗುತ್ತಿದೆ
  • 6.5-ಇಂಚು ಟಚ್ ಸ್ಕ್ರೀನ್ ಮಂದಗತಿಯಲ್ಲಿದೆ ಮತ್ತು ಇಕೊಸ್ಪೋರ್ಟ್ ನೀಡುವುದಕ್ಕಿಂತ ಯಾವ ರೀತಿಯಲ್ಲೂ ಹತ್ತಿರದಲ್ಲಿಲ್ಲ
  • ತಪ್ಪಿ ಹೋದ ಪ್ರೀಮಿಯಂ ಫೀಚರ್ ಗಳು: ಆಟೊ ಹೆಡ್ ಲ್ಯಾಂಪ್ಸ್, ರೈನ್-ಸೆನ್ಸಿಂಗ್ ವೈಪರ್ಸ್, ಕ್ರೂಸ್ ಕಂಟ್ರೋಲ್ ಇವು ವಿತಾರಾ ಬ್ರೆಝಾ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕೂಡಾ ನೀಡುತ್ತಿವೆ.

ಟಾಟಾ ನೆಕ್ಸ್ಂನ್‌ 2017-2020 Car News & Updates

  • ಇತ್ತೀಚಿನ ಸುದ್ದಿ
  • Must Read Articles
  • ಟಾಟಾ ನೆಕ್ಸಾನ್:ವೇರಿಯೆಂಟ್ ಗಳ ವಿವರಣೆ

    ಟಾಟಾ ನೆಕ್ಸಾನ್ ನಾಲ್ಕು ಟ್ರಿಮ್ ಗಳಲ್ಲಿ ಒರೆಯುತ್ತದೆ, ಜೊತೆಗೆ ಪೆಟ್ರೋಲ್ ಹಾಗು ಡೀಸೆಲ್ ನಲ್ಲಿ ತಲಾ ಐದು ವೇರಿಯೆಂಟ್ ಇರುತ್ತದೆ, ಡುಯಲ್ ಟೋನ್ ಮಾಡೆಲ್ ಸೇರಿಸಿ. ಹಾಗಾದರೆ ನೀವು ಯಾವ ವೇರಿಯೆಂಟ್ ಗಾಗಿ ಹಣ ಕೊಡಬಹುದು?

    By RaunakMay 15, 2019
  • ಟಾಟಾ  ನೆಕ್ಸಾನ್:  ಮೊದಲ ಡ್ರೈವ್ ವಿಮರ್ಶೆ

    ನೆಕ್ಸಾನ್ ಸಬ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ  ಮೊದಲ ಬಿಡುಗಡೆಯಲ್ಲೇ ಟಾಟಾ ಗಾಗಿ ಹೆಸರು ತರಬಹುದೇ?

    By JagdevMay 28, 2019

ಟಾಟಾ ನೆಕ್ಸ್ಂನ್‌ 2017-2020 ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ1668 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (1668)
  • Looks (349)
  • Comfort (355)
  • Mileage (286)
  • Engine (202)
  • Interior (215)
  • Space (149)
  • Price (212)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • Perfect Car.

    Extraordinary performance and good mileage with good features for the amount which I spent on the Ca...ಮತ್ತಷ್ಟು ಓದು

    ಇವರಿಂದ vikram tallapalliverified Verified Buyer
    On: Jan 23, 2020 | 119 Views
  • Safest car ever.

    Nice build quality worth buying Xt and XZ models. It also has eco, city, sport modes just u drive it...ಮತ್ತಷ್ಟು ಓದು

    ಇವರಿಂದ prajyot thakur
    On: Jan 23, 2020 | 71 Views
  • Reliable vehicle for Indian roads .

    The best thing in this SUV is the ride quality and magically a significant one in all Indian road co...ಮತ್ತಷ್ಟು ಓದು

    ಇವರಿಂದ dr ramiz mondal
    On: Jan 22, 2020 | 106 Views
  • Best in Segment.

    I've been using this car for almost two years now, and it is the best in its segment. Power, Safety,...ಮತ್ತಷ್ಟು ಓದು

    ಇವರಿಂದ palak berry
    On: Jan 20, 2020 | 207 Views
  • for 1.2 Revotron XZ Plus

    Great in performance

    The car performance was good, but I face some problems with the touchscreen and gearbox issue. The p...ಮತ್ತಷ್ಟು ಓದು

    ಇವರಿಂದ ganesh naik
    On: Jan 20, 2020 | 94 Views
  • ಎಲ್ಲಾ ನೆಕ್ಸ್ಂನ್‌ 2017-2020 ವಿರ್ಮಶೆಗಳು ವೀಕ್ಷಿಸಿ

ನೆಕ್ಸ್ಂನ್‌ 2017-2020 ಇತ್ತೀಚಿನ ಅಪ್ಡೇಟ್

%3Cp%3E%E0%B2%B9%E0%B3%8A%E0%B2%B8%26nbsp%3B%E0%B2%85%E0%B2%AA%E0%B3%8D%26nbsp%3B%E0%B2%A1%E0%B3%87%E0%B2%9F%E0%B3%8D%3A%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%26nbsp%3B%E0%B2%95%E0%B2%BE%E0%B2%B0%E0%B3%81%26nbsp%3B%E0%B2%89%E0%B2%A4%E0%B3%8D%E0%B2%AA%E0%B2%BE%E0%B2%A6%E0%B2%95%E0%B2%B0%E0%B2%BF%E0%B2%82%E0%B2%A6%26nbsp%3B%E0%B2%89%E0%B2%A4%E0%B3%8D%E0%B2%AA%E0%B2%BE%E0%B2%A6%E0%B2%A8%E0%B3%86%E0%B2%AF%E0%B2%BE%E0%B2%97%E0%B3%81%E0%B2%B5%26nbsp%3B%E0%B2%9C%E0%B2%BE%E0%B2%97%E0%B2%A4%E0%B2%BF%E0%B2%95%26nbsp%3B%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E.%E0%B2%AA%E0%B2%BF%26nbsp%3B%E0%B2%95%E0%B3%8D%E0%B2%B0%E0%B2%BE%E0%B2%B6%E0%B3%8D%26nbsp%3B%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%B5%E0%B2%AF%E0%B2%B8%E0%B3%8D%E0%B2%95%26nbsp%3B%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%A3%E0%B2%BF%E0%B2%95%E0%B2%B0%26nbsp%3B%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%AB%E0%B3%88%E0%B2%B5%E0%B3%8D-%E0%B2%B8%E0%B3%8D%E0%B2%9F%E0%B2%BE%E0%B2%B0%E0%B3%8D%26nbsp%3B%E0%B2%B0%E0%B3%87%E0%B2%9F%E0%B2%BF%E0%B2%82%E0%B2%97%E0%B3%8D%26nbsp%3B%E0%B2%B8%E0%B2%BE%E0%B2%A7%E0%B2%BF%E0%B2%B8%E0%B2%BF%E0%B2%A6%26nbsp%3B%E0%B2%AE%E0%B3%8A%E0%B2%A6%E0%B2%B2%26nbsp%3B%E0%B2%95%E0%B2%BE%E0%B2%B0%E0%B3%81%26nbsp%3B%E0%B2%8E%E0%B2%A8%E0%B2%BF%E0%B2%B8%E0%B2%BF%E0%B2%A6%E0%B3%86.%26nbsp%3B%E0%B2%87%E0%B2%A6%E0%B3%81%26nbsp%3B%E0%B2%AE%E0%B2%95%E0%B3%8D%E0%B2%95%E0%B2%B3%26nbsp%3B%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF%E0%B2%AF%E0%B3%82%26nbsp%3B%E0%B2%A5%E0%B3%8D%E0%B2%B0%E0%B3%80-%E0%B2%B8%E0%B3%8D%E0%B2%9F%E0%B2%BE%E0%B2%B0%E0%B3%8D%26nbsp%3B%E0%B2%AA%E0%B2%A1%E0%B3%86%E0%B2%A6%E0%B2%BF%E0%B2%A6%E0%B3%86.%26nbsp%3B%E0%B2%87%E0%B2%A6%E0%B2%95%E0%B3%8D%E0%B2%95%E0%B3%86%26nbsp%3B%E0%B2%B8%E0%B3%81%E0%B2%B0%E0%B2%95%E0%B3%8D%E0%B2%B7%E0%B2%A4%E0%B3%86%E0%B2%AF%26nbsp%3B%E0%B2%B5%E0%B2%BF%E0%B2%B6%E0%B3%87%E0%B2%B7%E0%B2%A4%E0%B3%86%E0%B2%97%E0%B2%B3%E0%B2%BE%E0%B2%A6%26nbsp%3B%E0%B2%B8%E0%B3%80%E0%B2%9F%E0%B3%8D%26nbsp%3B%E0%B2%AC%E0%B3%86%E0%B2%B2%E0%B3%8D%E0%B2%9F%E0%B3%8D%26nbsp%3B%E0%B2%B0%E0%B2%BF%E0%B2%AE%E0%B3%88%E0%B2%82%E0%B2%A1%E0%B2%B0%E0%B3%8D%26nbsp%3B%E0%B2%87%E0%B2%A4%E0%B3%8D%E0%B2%AF%E0%B2%BE%E0%B2%A6%E0%B2%BF%E0%B2%97%E0%B2%B3%26nbsp%3B%E0%B2%B8%E0%B3%87%E0%B2%B0%E0%B3%8D%E0%B2%AA%E0%B2%A1%E0%B3%86%26nbsp%3B%E0%B2%95%E0%B2%BE%E0%B2%B0%E0%B2%A3.%26nbsp%3B%E0%B2%B9%E0%B3%86%E0%B2%9A%E0%B3%8D%E0%B2%9A%E0%B3%81%26nbsp%3B%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%B2%E0%B3%81%26nbsp%3B%E0%B2%87%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%95%E0%B3%8D%E0%B2%B2%E0%B2%BF%E0%B2%95%E0%B3%8D%26nbsp%3B%E0%B2%AE%E0%B2%BE%E0%B2%A1%E0%B2%BF%E0%B2%B0%E0%B2%BF.%26nbsp%3B%3C%2Fp%3E%0A%0A%3Cp%3E%E0%B2%B9%E0%B2%BF%E0%B2%82%E0%B2%A6%E0%B3%86%26nbsp%3B%E0%B2%AC%E0%B2%BF%E0%B2%A1%E0%B3%81%E0%B2%97%E0%B2%A1%E0%B3%86%E0%B2%AF%E0%B2%BE%E0%B2%A6%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%A8%26nbsp%3B%E0%B2%95%E0%B3%8D%E0%B2%B0%E0%B2%BE%E0%B2%9D%E0%B3%8D%26nbsp%3B%E0%B2%B5%E0%B3%87%E0%B2%B0%E0%B2%BF%E0%B2%AF%E0%B3%86%E0%B2%82%E0%B2%9F%E0%B3%8D%26nbsp%3B%E0%B2%97%E0%B3%86%26nbsp%3B%E0%B2%B9%E0%B3%8A%E0%B2%B8%26nbsp%3B%E0%B2%AC%E0%B2%A3%E0%B3%8D%E0%B2%A3%26nbsp%3B%E0%B2%A8%E0%B3%80%E0%B2%A1%E0%B2%B2%E0%B2%BE%E0%B2%97%E0%B2%BF%E0%B2%A6%E0%B3%86.%26nbsp%3B%E0%B2%B9%E0%B3%86%E0%B2%9A%E0%B3%8D%E0%B2%9A%E0%B3%81%26nbsp%3B%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%B2%E0%B2%BF%26nbsp%3B%E0%B2%87%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%95%E0%B3%8D%E0%B2%B2%E0%B2%BF%E0%B2%95%E0%B3%8D%26nbsp%3B%E0%B2%AE%E0%B2%BE%E0%B2%A1%E0%B2%BF%E0%B2%B0%E0%B2%BF.%26nbsp%3B%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%B5%E0%B3%87%E0%B2%B0%E0%B2%BF%E0%B2%AF%E0%B3%86%E0%B2%82%E0%B2%9F%E0%B3%8D%E0%B2%B8%E0%B3%8D%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%AC%E0%B3%86%E0%B2%B2%E0%B3%86%E0%B2%97%E0%B2%B3%E0%B3%81%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%85%E0%B2%A8%E0%B3%8D%E0%B2%A8%E0%B3%81%26nbsp%3B%E0%B2%90%E0%B2%A6%E0%B3%81%26nbsp%3B%E0%B2%B5%E0%B2%BF%E0%B2%AD%E0%B2%BF%E0%B2%A8%E0%B3%8D%E0%B2%A8%26nbsp%3B%E0%B2%B5%E0%B3%87%E0%B2%B0%E0%B2%BF%E0%B2%AF%E0%B3%86%E0%B2%82%E0%B2%9F%E0%B3%8D%26nbsp%3B%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%A8%E0%B3%80%E0%B2%A1%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%86.%26nbsp%3B%E0%B2%85%E0%B2%B5%E0%B3%81%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D.%E0%B2%87.%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%E0%B2%8E%E0%B2%82%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D.%E0%B2%9F%E0%B2%BF%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D.%E0%B2%9D%E0%B2%A1%E0%B3%8D%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D.%E0%B2%9D%E0%B2%A1%E0%B3%8D%2B%26nbsp%3B%E0%B2%87%E0%B2%A4%E0%B2%B0%E0%B3%86%26nbsp%3B%E0%B2%B8%E0%B2%82%E0%B2%AF%E0%B3%8B%E0%B2%9C%E0%B2%A8%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%A1%E0%B3%8D%E0%B2%AF%E0%B3%81%E0%B2%AF%E0%B2%B2%E0%B3%8D-%E0%B2%9F%E0%B3%8B%E0%B2%A8%E0%B3%8D%26nbsp%3B%E0%B2%B0%E0%B3%82%E0%B2%AB%E0%B3%8D%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%86%E0%B2%9F%E0%B3%8A%E0%B2%AE%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%95%E0%B3%8D%26nbsp%3B%E0%B2%9F%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%26nbsp%3B%E0%B2%AE%E0%B2%BF%E0%B2%B7%E0%B2%A8%E0%B3%8D%26nbsp%3B%E0%B2%A8%E0%B3%80%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86.%26nbsp%3B%E0%B2%86%E0%B2%A6%E0%B2%B0%E0%B3%86%26nbsp%3B%E0%B2%B5%E0%B2%BF%E0%B2%B6%E0%B3%87%E0%B2%B7%E0%B2%A4%E0%B3%86%E0%B2%97%E0%B2%B3%E0%B3%81%26nbsp%3B%E0%B2%B9%E0%B2%BE%E0%B2%97%E0%B3%86%E0%B2%AF%E0%B3%87%26nbsp%3B%E0%B2%89%E0%B2%B3%E0%B2%BF%E0%B2%A6%E0%B2%BF%E0%B2%B5%E0%B3%86.%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%AC%E0%B3%86%E0%B2%B2%E0%B3%86%E0%B2%97%E0%B2%B3%E0%B3%81%26nbsp%3B%E0%B2%B0%E0%B3%82.6.36%26nbsp%3B%E0%B2%B2%E0%B2%95%E0%B3%8D%E0%B2%B7(%E0%B2%8E%E0%B2%95%E0%B3%8D%E0%B2%B8%E0%B3%8D-%E0%B2%B6%E0%B3%8B%E0%B2%B0%E0%B3%82%E0%B2%82%26nbsp%3B%E0%B2%A8%E0%B2%B5%E0%B2%A6%E0%B3%86%E0%B2%B9%E0%B2%B2%E0%B2%BF)%E0%B2%97%E0%B2%B3%E0%B2%BF%E0%B2%97%E0%B3%86%26nbsp%3B%E0%B2%AA%E0%B3%8D%E0%B2%B0%E0%B2%BE%E0%B2%B0%E0%B2%82%E0%B2%AD%E0%B2%B5%E0%B2%BE%E0%B2%97%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%B0%E0%B3%82.10.80%26nbsp%3B%E0%B2%B2%E0%B2%95%E0%B3%8D%E0%B2%B7%26nbsp%3B%E0%B2%B0%E0%B3%82.%E0%B2%B5%E0%B2%B0%E0%B3%86%E0%B2%97%E0%B3%86%26nbsp%3B%E0%B2%B5%E0%B2%BF%E0%B2%B8%E0%B3%8D%E0%B2%A4%E0%B2%B0%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86(%E0%B2%8E%E0%B2%95%E0%B3%8D%E0%B2%B8%E0%B3%8D-%E0%B2%B6%E0%B3%8B%E0%B2%B0%E0%B3%82%E0%B2%82%26nbsp%3B%E0%B2%A8%E0%B2%B5%E0%B2%A6%E0%B3%86%E0%B2%B9%E0%B2%B2%E0%B2%BF).%26nbsp%3B%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%AA%E0%B2%B5%E0%B2%B0%E0%B3%8D%26nbsp%3B%E0%B2%9F%E0%B3%8D%E0%B2%B0%E0%B3%88%E0%B2%A8%E0%B3%8D%3A%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%85%E0%B2%A8%E0%B3%8D%E0%B2%A8%E0%B3%81%26nbsp%3B1.2-%E0%B2%B2%E0%B3%80%E0%B2%9F%E0%B2%B0%E0%B3%8D%26nbsp%3B%E0%B2%9F%E0%B2%B0%E0%B3%8D%E0%B2%AC%E0%B3%8A%E0%B2%9A%E0%B2%BE%E0%B2%B0%E0%B3%8D%E0%B2%9C%E0%B3%8D%E0%B2%A1%E0%B3%8D%26nbsp%3B%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%8E%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%85%E0%B2%A5%E0%B2%B5%E0%B2%BE%26nbsp%3B1.5-%E0%B2%B2%E0%B3%80%E0%B2%9F%E0%B2%B0%E0%B3%8D%26nbsp%3B%E0%B2%9F%E0%B2%B0%E0%B3%8D%E0%B2%AC%E0%B3%8A%E0%B2%9A%E0%B2%BE%E0%B2%B0%E0%B3%8D%E0%B2%9C%E0%B3%8D%E0%B2%A1%E0%B3%8D%26nbsp%3B%E0%B2%A1%E0%B3%80%E0%B2%B8%E0%B3%86%E0%B2%B2%E0%B3%8D%26nbsp%3B%E0%B2%8E%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%A8%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%AA%E0%B2%A1%E0%B3%86%E0%B2%AF%E0%B2%AC%E0%B2%B9%E0%B3%81%E0%B2%A6%E0%B3%81.%26nbsp%3B%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%8E%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B110%E0%B2%AA%E0%B2%BF%E0%B2%8E%E0%B2%B8%E0%B3%8D%26nbsp%3B%E0%B2%97%E0%B2%B0%E0%B2%BF%E0%B2%B7%E0%B3%8D%E0%B2%A0%26nbsp%3B%E0%B2%B6%E0%B2%95%E0%B3%8D%E0%B2%A4%E0%B2%BF%26nbsp%3B%E0%B2%A8%E0%B3%80%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B170%E0%B2%8E%E0%B2%A8%E0%B3%8D%E0%B2%8E%E0%B2%82%26nbsp%3B%E0%B2%AA%E0%B3%80%E0%B2%95%E0%B3%8D%26nbsp%3B%E0%B2%9F%E0%B2%BE%E0%B2%B0%E0%B3%8D%E0%B2%95%E0%B3%8D%26nbsp%3B%E0%B2%A8%E0%B3%80%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86.%26nbsp%3B%E0%B2%A1%E0%B3%80%E0%B2%B8%E0%B3%86%E0%B2%B2%E0%B3%8D%26nbsp%3B%E0%B2%8E%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B110%E0%B2%AA%E0%B2%BF%E0%B2%8E%E0%B2%B8%E0%B3%8D%26nbsp%3B%E0%B2%97%E0%B2%B0%E0%B2%BF%E0%B2%B7%E0%B3%8D%E0%B2%A0%26nbsp%3B%E0%B2%B6%E0%B2%95%E0%B3%8D%E0%B2%A4%E0%B2%BF%2C%26nbsp%3B%E0%B2%86%E0%B2%A6%E0%B2%B0%E0%B3%86%26nbsp%3B%E0%B2%AA%E0%B3%80%E0%B2%95%E0%B3%8D%26nbsp%3B%E0%B2%9F%E0%B2%BE%E0%B2%B0%E0%B3%8D%E0%B2%95%E0%B3%8D%26nbsp%3B%E0%B2%95%E0%B3%8A%E0%B2%82%E0%B2%9A%26nbsp%3B%E0%B2%B9%E0%B3%86%E0%B2%9A%E0%B3%8D%E0%B2%9A%E0%B3%81%26nbsp%3B260%26nbsp%3B%E0%B2%8E%E0%B2%A8%E0%B3%8D%E0%B2%8E%E0%B2%82%26nbsp%3B%E0%B2%A8%E0%B3%80%E0%B2%A1%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86.%26nbsp%3B%E0%B2%8E%E0%B2%B0%E0%B2%A1%E0%B3%82%26nbsp%3B%E0%B2%8E%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81%26nbsp%3B6-%E0%B2%B8%E0%B3%8D%E0%B2%AA%E0%B3%80%E0%B2%A1%E0%B3%8D%26nbsp%3B%E0%B2%AE%E0%B3%8D%E0%B2%AF%E0%B2%BE%E0%B2%A8%E0%B3%8D%E0%B2%AF%E0%B3%81%E0%B2%AF%E0%B2%B2%E0%B3%8D%26nbsp%3B%E0%B2%9F%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%26nbsp%3B%E0%B2%AE%E0%B2%BF%E0%B2%B7%E0%B2%A8%E0%B3%8D%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B6-%E0%B2%B8%E0%B3%8D%E0%B2%AA%E0%B3%80%E0%B2%A1%E0%B3%8D%26nbsp%3B%E0%B2%8E%E0%B2%8E%E0%B2%82%E0%B2%9F%E0%B2%BF%E0%B2%AF%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%B9%E0%B3%8A%E0%B2%82%E0%B2%A6%E0%B2%AC%E0%B2%B9%E0%B3%81%E0%B2%A6%E0%B3%81.%26nbsp%3B%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%B5%E0%B2%BF%E0%B2%B6%E0%B3%87%E0%B2%B7%E0%B2%A4%E0%B3%86%E0%B2%97%E0%B2%B3%E0%B3%81%3A%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%B9%E0%B2%B0%E0%B3%8D%E0%B2%AE%E0%B2%A8%E0%B3%8D%26nbsp%3B%E0%B2%95%E0%B2%BE%E0%B2%B0%E0%B3%8D%E0%B2%A1%E0%B2%A8%E0%B3%8D%26nbsp%3B%E0%B2%A8%26nbsp%3B8-%E0%B2%B8%E0%B3%8D%E0%B2%AA%E0%B3%80%E0%B2%95%E0%B2%B0%E0%B3%8D%26nbsp%3B%E0%B2%B8%E0%B3%86%E0%B2%9F%E0%B2%AA%E0%B3%8D%26nbsp%3B%E0%B2%A8%26nbsp%3B6.5%26nbsp%3B%E0%B2%87%E0%B2%82%E0%B2%9A%E0%B3%81%26nbsp%3B%E0%B2%9F%E0%B2%9A%E0%B3%8D%26nbsp%3B%E0%B2%B8%E0%B3%8D%E0%B2%95%E0%B3%8D%E0%B2%B0%E0%B3%80%E0%B2%A8%E0%B3%8D%26nbsp%3B%E0%B2%87%E0%B2%A8%E0%B3%8D%E0%B2%AB%E0%B3%8A%E0%B2%9F%E0%B3%88%E0%B2%A8%E0%B3%8D%26nbsp%3B%E0%B2%AE%E0%B3%86%E0%B2%82%E0%B2%9F%E0%B3%8D%26nbsp%3B%E0%B2%B8%E0%B2%BF%E0%B2%B8%E0%B3%8D%E0%B2%9F%E0%B2%82%26nbsp%3B%E0%B2%B9%E0%B3%8A%E0%B2%82%E0%B2%A6%E0%B2%BF%E0%B2%A6%E0%B3%86.%26nbsp%3B%E0%B2%AA%E0%B3%8D%E0%B2%B0%E0%B3%8A%E0%B2%9C%E0%B3%86%E0%B2%95%E0%B3%8D%E0%B2%9F%E0%B2%B0%E0%B3%8D%26nbsp%3B%E0%B2%B9%E0%B3%86%E0%B2%A1%E0%B3%8D%26nbsp%3B%E0%B2%B2%E0%B3%8D%E0%B2%AF%E0%B2%BE%E0%B2%82%E0%B2%AA%E0%B3%8D%E0%B2%B8%E0%B3%8D%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%8E%E0%B2%B2%E0%B3%8D.%E0%B2%87%E0%B2%A1%E0%B2%BF%26nbsp%3B%E0%B2%A1%E0%B2%BF.%E0%B2%86%E0%B2%B0%E0%B3%8D.%E0%B2%8E%E0%B2%B2%E0%B3%8D%26nbsp%3B%E0%B2%97%E0%B2%B3%E0%B3%81%26nbsp%3B%E0%B2%95%E0%B3%82%E0%B2%A1%E0%B2%BE%26nbsp%3B%E0%B2%88%26nbsp%3B%E0%B2%95%E0%B2%BF%E0%B2%9F%E0%B3%8D%26nbsp%3B%E0%B2%AD%E0%B2%BE%E0%B2%97%E0%B2%B5%E0%B2%BE%E0%B2%97%E0%B2%BF%E0%B2%B5%E0%B3%86.%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%B0%E0%B2%BF%E0%B2%AF%E0%B2%B0%E0%B3%8D%26nbsp%3B%E0%B2%8E.%E0%B2%B8%E0%B2%BF.%26nbsp%3B%E0%B2%B5%E0%B3%86%E0%B2%82%E0%B2%9F%E0%B3%8D%26nbsp%3B%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81%26nbsp%3B%E0%B2%AA%E0%B2%A1%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%B9%E0%B2%B2%E0%B2%B5%E0%B3%81%26nbsp%3B%E0%B2%A1%E0%B3%8D%E0%B2%B0%E0%B3%88%E0%B2%B5%E0%B2%BF%E0%B2%82%E0%B2%97%E0%B3%8D%26nbsp%3B%E0%B2%AE%E0%B3%8B%E0%B2%A1%E0%B3%8D%E0%B2%B8%E0%B3%8D(%E0%B2%87%E0%B2%95%E0%B3%8A%2C%26nbsp%3B%E0%B2%B8%E0%B2%BF%E0%B2%9F%E0%B2%BF%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%B8%E0%B3%8D%E0%B2%AA%E0%B3%8B%E0%B2%B0%E0%B3%8D%E0%B2%9F%E0%B3%8D)%26nbsp%3B%E0%B2%B9%E0%B3%8A%E0%B2%82%E0%B2%A6%E0%B2%BF%E0%B2%A6%E0%B3%86.%26nbsp%3B%E0%B2%B8%E0%B3%81%E0%B2%B0%E0%B2%95%E0%B3%8D%E0%B2%B7%E0%B2%A4%E0%B3%86%E0%B2%AF%26nbsp%3B%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF%E0%B2%AF%E0%B2%BF%E0%B2%82%E0%B2%A6%26nbsp%3B%E0%B2%A1%E0%B3%8D%E0%B2%AF%E0%B3%81%E0%B2%AF%E0%B2%B2%E0%B3%8D%26nbsp%3B%E0%B2%AB%E0%B3%8D%E0%B2%B0%E0%B2%82%E0%B2%9F%E0%B3%8D%26nbsp%3B%E0%B2%8F%E0%B2%B0%E0%B3%8D%26nbsp%3B%E0%B2%AC%E0%B3%8D%E0%B2%AF%E0%B2%BE%E0%B2%97%E0%B3%8D%E0%B2%B8%E0%B3%8D%2C%26nbsp%3B%E0%B2%90%E0%B2%B8%E0%B3%8A%E0%B2%AB%E0%B2%BF%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9A%E0%B3%88%E0%B2%B2%E0%B3%8D%E0%B2%A1%E0%B3%8D%26nbsp%3B%E0%B2%B8%E0%B3%80%E0%B2%9F%E0%B3%8D%26nbsp%3B%E0%B2%AE%E0%B3%8C%E0%B2%82%E0%B2%9F%E0%B3%8D%E0%B2%B8%E0%B3%8D%2C%26nbsp%3B%E0%B2%87%E0%B2%AC%E0%B2%BF%E0%B2%A1%E0%B2%BF%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%B8%E0%B2%BF.%E0%B2%8E%E0%B2%B8%E0%B3%8D.%E0%B2%B8%E0%B2%BF(%E0%B2%95%E0%B2%BE%E0%B2%B0%E0%B3%8D%E0%B2%A8%E0%B2%B0%E0%B3%8D%26nbsp%3B%E0%B2%B8%E0%B3%8D%E0%B2%9F%E0%B3%86%E0%B2%AC%E0%B2%BF%E0%B2%B2%E0%B2%BF%E0%B2%9F%E0%B2%BF%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D)%E0%B2%AF%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%8E%E0%B2%AC%E0%B2%BF%E0%B2%8E%E0%B2%B8%E0%B3%8D%26nbsp%3B%E0%B2%B9%E0%B3%8A%E0%B2%82%E0%B2%A6%E0%B2%BF%E0%B2%A6%E0%B3%86.%26nbsp%3B%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B2%BF%E0%B2%97%E0%B2%B3%E0%B3%81%3A%26nbsp%3B%E0%B2%B8%E0%B2%AC%E0%B3%8D-4%26nbsp%3B%E0%B2%AE%E0%B3%80%E0%B2%9F%E0%B2%B0%E0%B3%8D%26nbsp%3B%E0%B2%8E%E0%B2%B8%E0%B3%8D.%E0%B2%AF%E0%B3%81.%E0%B2%B5%E0%B2%BF.%26nbsp%3B%E0%B2%B5%E0%B2%BF%E0%B2%AD%E0%B2%BE%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%A8%E0%B3%86%E0%B2%95%E0%B3%8D%E0%B2%B8%E0%B2%BE%E0%B2%A8%E0%B3%8D%26nbsp%3B%E0%B2%AE%E0%B2%BE%E0%B2%B0%E0%B3%81%E0%B2%A4%E0%B2%BF%26nbsp%3B%E0%B2%B8%E0%B3%81%E0%B2%9D%E0%B3%81%E0%B2%95%E0%B2%BF%26nbsp%3B%E0%B2%B5%E0%B2%BF%E0%B2%A4%E0%B2%BE%E0%B2%B0%E0%B2%BE%26nbsp%3B%E0%B2%AC%E0%B3%8D%E0%B2%B0%E0%B3%86%E0%B2%9D%E0%B2%BE%2C%26nbsp%3B%E0%B2%AB%E0%B3%8B%E0%B2%B0%E0%B3%8D%E0%B2%A1%E0%B3%8D%26nbsp%3B%E0%B2%87%E0%B2%95%E0%B3%8A%E0%B2%B8%E0%B3%8D%E0%B2%AA%E0%B3%8B%E0%B2%B0%E0%B3%8D%E0%B2%9F%E0%B3%8D%2C%26nbsp%3B%E0%B2%AB%E0%B3%8B%E0%B2%B0%E0%B3%8D%E0%B2%A1%E0%B3%8D%26nbsp%3B%E0%B2%AB%E0%B3%8D%E0%B2%B0%E0%B3%80%E0%B2%B8%E0%B3%8D%E0%B2%9F%E0%B3%88%E0%B2%B2%E0%B3%8D%2C%26nbsp%3B%E0%B2%B9%E0%B3%8A%E0%B2%82%E0%B2%A1%E0%B2%BE%26nbsp%3B%E0%B2%A1%E0%B2%AC%E0%B3%8D%E0%B2%B2%E0%B3%8D%E0%B2%AF%E0%B3%82.%E0%B2%86%E0%B2%B0%E0%B3%8D-%E0%B2%B5%E0%B2%BF%2C%26nbsp%3B%E0%B2%AE%E0%B2%B9%E0%B2%BF%E0%B2%82%E0%B2%A6%E0%B3%8D%E0%B2%B0%E0%B2%BE%26nbsp%3B%E0%B2%9F%E0%B2%BF%E0%B2%AF%E0%B3%81%E0%B2%B5%E0%B2%BF%26nbsp%3B300%26nbsp%3B%E0%B2%AE%E0%B2%A4%E0%B3%8D%E0%B2%A4%E0%B3%81%26nbsp%3B%E0%B2%AE%E0%B2%B9%E0%B2%BF%E0%B2%82%E0%B2%A6%E0%B3%8D%E0%B2%B0%E0%B2%BE%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D.%E0%B2%AF%E0%B3%81.%E0%B2%B5%E0%B2%BF%26nbsp%3B300%26nbsp%3B%E0%B2%B0%E0%B3%80%E0%B2%A4%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF%E0%B2%A6%E0%B3%86.%26nbsp%3B%3C%2Fp%3E%0A
ಮತ್ತಷ್ಟು ಓದು

ಟಾಟಾ ನೆಕ್ಸ್ಂನ್‌ 2017-2020 ವೀಡಿಯೊಗಳು

  • Tata Nexon Variants Explained | Which One To Buy
    7:01
    Tata Nexon Variants Explained | Which One To Buy
    6 years ago | 22.2K Views
  • Tata Nexon Hits & Misses
    5:34
    ಟಾಟಾ ನೆಕ್ಸ್ಂನ್‌ Hits & Misses
    6 years ago | 8.5K Views
  • Tata Nexon vs Maruti Suzuki Brezza | Comparison | ZigWheels.com
    15:38
    Tata Nexon vs Maruti Suzuki Brezza | Comparison | ZigWheels.com
    6 years ago | 23.1K Views

ಟಾಟಾ ನೆಕ್ಸ್ಂನ್‌ 2017-2020 ಚಿತ್ರಗಳು

  • Tata Nexon 2017-2020 Front Left Side Image
  • Tata Nexon 2017-2020 Side View (Left)  Image
  • Tata Nexon 2017-2020 Rear Left View Image
  • Tata Nexon 2017-2020 Front View Image
  • Tata Nexon 2017-2020 Grille Image
  • Tata Nexon 2017-2020 Front Fog Lamp Image
  • Tata Nexon 2017-2020 Headlight Image
  • Tata Nexon 2017-2020 Taillight Image
space Image

ಟಾಟಾ ನೆಕ್ಸ್ಂನ್‌ 2017-2020 ಮೈಲೇಜ್

ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 21.5 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 21.5 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌21.5 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌21.5 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌17 ಕೆಎಂಪಿಎಲ್

ಟಾಟಾ ನೆಕ್ಸ್ಂನ್‌ 2017-2020 Road Test

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Is Tata Nexon CNG provided by company?

Aslam asked on 10 Jan 2020

Tata Nexon is offered with either a 1.2-litre turbocharged petrol engine or a 1....

ಮತ್ತಷ್ಟು ಓದು
By CarDekho Experts on 10 Jan 2020

Is Tata Nexon electric vehicle?

Udaya asked on 9 Jan 2020

Tata has unveiled the Nexon EV and will be available for the Indian market in th...

ಮತ್ತಷ್ಟು ಓದು
By CarDekho Experts on 9 Jan 2020

I'm using a Tata Nexon diesal base model. Is it possible to convert the same in ...

Jose asked on 6 Jan 2020

For this, For the availability of spare parts, we would suggest you walk into th...

ಮತ್ತಷ್ಟು ಓದು
By CarDekho Experts on 6 Jan 2020

What is difference between Kraz and Kraz+ edition???

Aryan asked on 3 Jan 2020

The difference between Tata Nexon KRAZ and Tata Nexon KRAZ Plus is that, The KRA...

ಮತ್ತಷ್ಟು ಓದು
By CarDekho Experts on 3 Jan 2020

I need a automatic sunroof in the Tata Nexon?

Saurav asked on 2 Jan 2020

For any add on feature in the car, we would suggest you walk into the nearest se...

ಮತ್ತಷ್ಟು ಓದು
By CarDekho Experts on 2 Jan 2020

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Found what ನೀವು were looking for?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience