ಟಾಟಾ ನೆಕ್ಸಾನ್:ವೇರಿಯೆಂಟ್ ಗಳ ವಿವರಣೆ
ಟಾಟಾ ನೆಕ್ಸಾನ್ 2017-2020 ಗಾಗಿ raunak ಮೂಲಕ ಮೇ 15, 2019 02:31 pm ರಂದು ಪ್ರಕಟಿಸಲಾಗಿದೆ
- 38 Views
- 3 ಕಾಮೆಂಟ್ಗಳು
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ನೆಕ್ಸಾನ್ ನಾಲ್ಕು ಟ್ರಿಮ್ ಗಳಲ್ಲಿ ಒರೆಯುತ್ತದೆ, ಜೊತೆಗೆ ಪೆಟ್ರೋಲ್ ಹಾಗು ಡೀಸೆಲ್ ನಲ್ಲಿ ತಲಾ ಐದು ವೇರಿಯೆಂಟ್ ಇರುತ್ತದೆ, ಡುಯಲ್ ಟೋನ್ ಮಾಡೆಲ್ ಸೇರಿಸಿ. ಹಾಗಾದರೆ ನೀವು ಯಾವ ವೇರಿಯೆಂಟ್ ಗಾಗಿ ಹಣ ಕೊಡಬಹುದು?
ಟಾಟಾ ನೆಕ್ಸಾನ್ ನ ಬೆಲೆ ವ್ಯಾಪ್ತಿ ರೊ6.16 - 10.59 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ಈ ಬೆಲೆಗಳ ಜೊತೆಗೆ , ಟಾಟಾ ನೆಕ್ಸಾನ್ ಪ್ರತಿಸ್ಪರ್ದಿಗಳನ್ನು ಹಿನ್ನಡೆಯುವಂತೆ ಮಾಡುತ್ತಿದ್ದಾರೆ ಹಾಗು ಬಹಳಷ್ಟು ಕ್ರಾಸ್ ಹ್ಯಾಚ್ ಗಳನ್ನೂ ಸಹ. ಪ್ರಾರಂಬಹಂತದ ಬೆಲೆ ಇದ್ದರೂ ಸಹ ಟಾಟಾ ನೆಕ್ಸಾನ್ ಅದ್ಭುತವಾಗಿದೆ! ನಿಮಗೆ ಯಾವ ವೇರಿಯೆಂಟ್ ಹೆಚ್ಚು ಹೊಂದುತ್ತದೆ ಎಂದು ನೋಡೋಣ.
ಹೈಲೈಟ್
- ಟಾಟಾ ನೆಕ್ಸಾನ್ ಸಬ್-4m SUV ಆಗಿದೆ ಮತ್ತು ಇದು ಫೋರ್ಡ್ ಎಕೋಸ್ಪೋರ್ಟ್ ಹಾಗು ಮಾರುತಿ ಸುಜುಕಿ ವಿಟಾರಾ ಜೊತೆಗೆ ಸ್ಪರ್ದಿಸುತ್ತದೆ.
- ಟಾಟಾ ನೆಕ್ಸಾನ್ ನಾಲ್ಕು ಟ್ರಿಮ್ ಗಳಲ್ಲಿ ಸಿಗುತ್ತದೆ – XE (ಬೇಸ್ ), XM, XT, XZ, XZ+ ಮತ್ತು XZA+( ರೇಂಜ್ ನ ಟಾಪ್ ನಲ್ಲಿದೆ ). ಡುಯಲ್ ಟೋನ್ ವೇರಿಯೆಂಟ್ ಗಳು XZ ಮತ್ತು XZ+ ಟ್ರಿಮ್ ಗಳಲ್ಲಿ ಸಿಗುತ್ತದೆ. ಒಟ್ಟಿನಲ್ಲಿ ಇದರಲ್ಲಿ ಆರು ವೇರಿಯೆಂಟ್ ಗಳು ಇದ್ದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಿವೆ.
- ನೆಕ್ಸಾನ್ ನಲ್ಲಿ ಟರ್ಬೊ ಚಾರ್ಜ್ ಎಂಜಿನ್ ಗಳು ಮಾತ್ರ ಲಭ್ಯವಿದೆ – 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಈ ಎಂಜಿನ್ ಗಳನ್ನು ಮೊದಲ ಬಾರಿಗೆ ಸಬ್ -4m SUV ನಲ್ಲಿ ಕೊಡಲಾಗಿದೆ.
- ಇದರಲ್ಲಿ ಸ್ಟ್ಯಾಂಡರ್ಡ್ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಇದೆ, ಹಾಗು ಒಂದು AMT (ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್) ಇದರ 6 ಸ್ಪೀಡ್ ಮಾನ್ಯುಯಲ್ ಮೇಲೆ ಆಧಾರವಾಗಿದ್ದು ಇದನ್ನು ರೇಂಜ್ ಟಾಪ್ ಆದ XZA+ ವೇರಿಯೆಂಟ್ ನಲ್ಲಿ ಕೊಡಲಾಗಿದೆ.
- ಟಾಟಾ ನೆಕ್ಸಾನ್ ಅಧಿಕೃತವಾಗಿ ಹೇಳಲಾದ ಮೈಲೇಜ್ ಆದ 17kmpl ಮತ್ತು 21.5kmpl ಕೊಡುತ್ತದೆ ಪೆಟ್ರೋಲ್ ಹಾಡು ಡೀಸೆಲ್ ಮಾಡೆಲ್ ನಲ್ಲಿ.
ಸ್ಟ್ಯಾಂಡರ್ಡ್ ಫೀಚರ್ ಗಳು
ಡುಯಲ್ ಏರ್ಬ್ಯಾಗ್ ಗಳು ಮುಂಭಾಗದಲ್ಲಿ, ಮತ್ತು ABS (anti-lock braking system) ಜೊತೆ EBD (electronic brake-force distribution)
ಬಣ್ಣಗಳ ಆಯ್ಕೆ
- ಮೊರಾಕನ್ ಬ್ಲೂ
- ವೇರಮೌಂಟ್ ರೆಡ್
- ಸಿಯಾಟಲ್ ಸಿಲ್ವರ್
- ಗ್ಲ್ಯಾಸ್ಗೋ ಗ್ರೇ
- ಕ್ಯಾಲಗ್ರಿ ವೈಟ್
- ಎಟ್ನಾ ಆರೆಂಜ್
ಈ ಆರು ಬಣ್ಣಗಳ ಆಯ್ಕೆಗಳಲ್ಲಿ ಕೇವಲ ಮೊರಾಕನ್ ಬ್ಲೂ , ಎಟ್ನಾ ಆರೆಂಜ್ ಮತ್ತು ವೇರಮೌಂಟ್ ರೆಡ್ ಗಳನ್ನು ಕಾಂಟ್ರಾಸ್ಟ್ ಸಿಲ್ವರ್ (ಸೋನಿಕ್ ಸಿಲ್ವರ್ )ರೂಫ್ ಜೊತೆಗೆ ಪಡೆಯಬಹುದು.
ಟಾಟಾ ನೆಕ್ಸಾನ್ XE
ಬೆಲೆಗಳು ಎಕ್ಸ್ ಶೋ ರೂಮ್ ದೆಹಲಿ
ಫೀಚರ್ ಗಳು
- LED ಟೈಲ್ ಲ್ಯಾಂಪ್ ಗಳು
- ಟೈರ್:195/60 R16
- ಛತ್ರಿ ಇಡಲು ಮುಂಭಾಗದ ಬಾಗಿಲಲ್ಲಿ ಜಾಗ
- ಮಾನ್ಯುಯಲ್ ಏರ್ ಕಂಡೀಶನ್ ಮತ್ತು ಮುಂಭಾಗದ ಪವರ್ ವಿಂಡೋ ಗಳು
- ಡ್ರೈವಿಂಗ್ ಮೋಡ್: ity, Eco ಮತ್ತು Sport
- ಟಿಲ್ಟ್ ಅಳವಡಿಕೆಯ ಪವರ್ ಸ್ಟಿಯರಿಂಗ್
ಇದನ್ನು ಕೊಳ್ಳಬಹುದೇ?
ಇದರಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಸುರಕ್ಷತೆಗಳನ್ನು ಅಳವಡಿಸಲಾಗಿದೆ, ಬೇಸ್ XE ಮಾಡೆಲ್ ಅತೀ ಕಡಿಮೆ ಫೀಚರ್ ಗಳನ್ನು ಹೊಂದಿರುವ ಸಬ್ -4m SUV ಆಗಿದೆ. ಇದರಲ್ಲಿ ಅಷ್ಟೇನು ಕೊಡುಗೆಗಳಿಲ್ಲ, ಇರಬೇಕಾದ ಅವಶ್ಯಕ ಉಪಕರಣಗಳೂ ಸಹ ಅವೆಂದರೆ ರಾತ್ರಿ ಆಂತರಿಕ ರೇರ್ ವ್ಯೂ ಮಿರರ್, ಆಶ್ಚರ್ಯಕರವಾಗಿ ಇದನ್ನು ಕೇವಲ ಟಾಪ್ ಸ್ಪೆಕ್ ಟ್ರಿಮ್ ಗಳಲ್ಲಿ ಮಾತ್ರ ಕೊಡಲಾಗಿದೆ. ಟಾಟಾ ಮ್ಯೂಸಿಕ್ ಸಿಸ್ಟಮ್ ಅನ್ನು ಸಹ ಮಿಸ್ ಮಾಡಿದೆ ಈ ವೇರಿಯೆಂಟ್ ನಲ್ಲಿ. ಆದರೆ ಅದನ್ನು ಅಸ್ಸೇಸ್ಸೋರಿ ಆಗಿ ಹೊರಗಡೆಯಿಂದ ಅಳವಡಿಸಿಕೊಳ್ಳಬಹುದು. ಆ ವೇರಿಯೆಂಟ್ ಅನ್ನು ಬಿಟ್ಟು ಇದಕ್ಕಿಂತ ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿರುವ XM ಟ್ರಿಮ್ ತೆಗೆಯುಕೊಳ್ಳಲು ನಾವು ಹೇಳುತ್ತೇವೆ.
ಟಾಟಾ ನೆಕ್ಸಾನ್ XM
ಬೆಲೆ ( ಎಕ್ಸ್ ಶೋ ರೂಮ್ ದೆಹಲಿ )
Over the base XE, the XM gets:
ಬೇಸ್ XEಮ್ ಗಿಂತಲೂ ಹೆಚ್ಚಾಗಿ XM ನಲ್ಲಿ ಸಿಗುತ್ತದೆ
- ಟಚ್ ಫೀಚರ್ ಇಲ್ಲದ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟಮ್ ( ಟಿಯಾಗೋ ತರಹದು )ಜೊತೆಗೆ ನಾಲ್ಕು ಸ್ಪೀಕರ್ ಸಿಸ್ಟಮ್,ಬ್ಲೂಟೂತ್ ಮತ್ತು iPod ಕನೆಕ್ಟಿವಿಟಿ ಮತ್ತು USB ಹಾಗು aux-in. ಸ್ಮಾರ್ಟ್ ಫೋನ್ ಅಪ್ ಅಳವಡಿಕೆ.
- ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು
- ರೇರ್ ಪಾರ್ಕಿಂಗ್ ಸೆನ್ಸರ್ ಗಳು
- ರಿಮೋಟ್ ಸೆಂಟ್ರಲ್ ಲಾಕಿಂಗ್
- ಹಿಂಬದಿ ಪವರ್ ವಿಂಡೋ ಗಳು
- ವೇಗದ USB ಚಾರ್ಜಿನ್ಗ್
- ಇಲೆಕ್ಟ್ರಾನಿಕ್ ಅಳವಡಿಕೆಯ ಹೊರಗಡೆಯ ರೇರ್ ವ್ಯೂ ಮಿರರ್ ಗಳು
ಇದನ್ನು ಕೊಳ್ಳಬಹುದೇ?
ಪ್ರೀಮಿಯಂ ಬೆಲೆಯಾದ ಸುಮಾರು ರೊ 75,000 ಮತ್ತು ರೊ 65,000 XE ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್ ಗಿಂತಲೂ ಹೆಚ್ಚು ಆಗಿದೆ. XM ನಲ್ಲಿ ಪ್ರೀಮಿಯಂ ಅಂಶ ಹೆಚ್ಚಿದೆ. ನಿಮಗೆ ಟಿಯಾಗೋ ದಿಂದ ತಂದಂತಹ ಮ್ಯೂಸಿಕ್ ಸಿಸ್ಟಮ್ ನಲ್ಲಿ ಬಹಳಷ್ಟು ಸ್ಮಾರ್ಟ್ ಫೋನ್ ವೇದಿಕೆಯ ಆಪ್ ಗಳು ಕೊಡಲಾಗಿದೆ. ಆದರೆ XE ನಂತೆ ಇದರಲ್ಲಿ ಕೂಡ ಸೌನ್ದರ್ಯಕಗಳು ಮಿಸ್ ಆಗಿವೆ, ಅವೆಂದರೆ ಬಾಡಿ ಕಲರ್ ಡೋರ್ ಹ್ಯಾಂಡಲ್ ಮತ್ತು ಮಿರರ್ ಗಳು, ಜೊತೆಗೆ ರೂಫ್ ರೈಲ್ ಗಳು. ಒಟ್ಟಿನಲ್ಲಿ XM ಟ್ರಿಮ್ ಹೆಚ್ಚು ಮಾರಾಟವಾಗುವ ಟ್ರಿಮ್ ಆಗಿದೆ ನೆಕ್ಸಾನ್ ನ ಪಟ್ಟಿಯಲ್ಲಿ. ಇದರಲ್ಲಿ ಗ್ರಾಹಕರಿಗೆ ಬೇಕಾಗುವ ಬಹಳಷ್ಟು ಫೀಚರ್ ಗಳು ಇವೆ.
ಟಾಟಾ ನೆಕ್ಸಾನ್ XT
ಬೆಲೆ (ಎಕ್ಸ್ ಶೋ ರೂಮ್ ದೆಹಲಿ )
XM ಗಿಂತಲೂ ಹೆಚ್ಚಾಗಿ XT ನಲ್ಲಿ ಸಿಗುತ್ತದೆ :
- ಬಾಹ್ಯ : ಬಾಡಿ ಕಲರ್ ಡೋರ್ ಹ್ಯಾಂಡಲ್ ಮತ್ತು ORVM ಗಳು, ರೂಫ್ ರೈಲ್ ಗಳು ಮತ್ತು ಶಾರ್ಕ್ ಫ಼ಿನ್ ಆಂಟೆನಾ.
- ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ರೇರರ್ AC ವೆಂಟ್ ಜೊತೆಗೆ
- ಇಲೆಕ್ಟ್ರಾನಿಕ್ ಆಗಿ ಮಡಚಬಹುದಾದ ORVM ಗಳು
- ಹಿಂಬದಿ ಪವರ್ ಔಟ್ಲೆಟ್
- ಬಣ್ಣ ಹಾಗು ಬೆಳಕು ಸಹಿತ ಗ್ಲೋವ್ ಬಾಕ್ಸ್
ಇದನ್ನು ಕೊಳ್ಳಬಹುದೇ?
XT ವೇರಿಯೆಂಟ್ ಗಾಗಿ ಪ್ರೀಮಿಯಂ ಬೆಲೆಯಾದ ರೂ 62,000 ಮತ್ತು ರೂ 56,000 ಪೆಟ್ರೋಲ್ ಹಾಗು ಡೀಸೆಲ್ ಗಾಗಿ ಕೊಡಬೇಕಾಗುತ್ತದೆ, ಮತ್ತು ಇದು ಹೆಚ್ಚಿನ ಬೆಲೆ ಕೂಡ.
ಈ ಹೆಚ್ಚಿನ ಹಣಕ್ಕೆ ನಿಮಗೆ ಮುಂದುವರೆದ ಸೌಂದರ್ಯಕಗಳು ಬಾಹ್ಯದಲ್ಲಿ ಜೊತೆಗೆ ಆಟೋ AC ಮತ್ತು ಇಲೆಕ್ಟ್ರಾನಿಕ್ ಆಗಿ ಮಡಚಬಹುದಾದ ORVM ಗಳು ದೊರೆಯುತ್ತವೆ! ಇದರಲ್ಲಿ ಮಿಸ್ ಆಗಿರುವ ಕೆಲವು ವಿಚಾರಗಳೆಂದರೆ ಅಲಾಯ್ ವೀಲ್ ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್, ಮತ್ತು ಫಾಗ್ ಲ್ಯಾಂಪ್ ಗಳು, ಇವುಗಳನ್ನು ಆಟೋ ಮೇಕರ್ ಗಳು ಮದ್ಯದ ವೇರಿಯೆಂಟ್ ಗಳಲ್ಲಿ ಸಹ ಕೊಡಲಾರಂಭಿಸಿದ್ದಾರೆ. ಒಟ್ಟಿನಲ್ಲಿ ನೆಕ್ಸಾನ್ XT ಹೆಚ್ಚು ಬೆಲೆ ಪಟ್ಟಿ ಒಳಗೊಂಡಿದೆ ಎಂದು ಅನ್ನಿಸುತ್ತದೆ.
ಟಾಟಾ ನೆಕ್ಸಾನ್ XZ
ಬೆಲೆ (ಎಕ್ಸ್ ಶೋ ರೂಮ್ ದೆಹಲಿ)
XT ವೇರಿಯೆಂಟ್ ಗಿಂತಲೂ ಹೆಚ್ಚಾಗಿ XZ ನಲ್ಲಿ ಸಿಗುತ್ತದೆ :
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು
- 6.5-ಇಂಚು ಟಚ್ಸ್ಕ್ರೀನ್ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು 8-ಸ್ಪೀಕರ್ ಸಿಸ್ಟಮ್ (4 ಸ್ಪೀಕರ್ ಗಳು ಮತ್ತು 4 ಟ್ವಿಟರ್ ಗಳು). ಈ ಯೂನಿಟ್ ನಲ್ಲಿ ವಾಯ್ಸ್ ಕಮಾಂಡ್ ಗಳಿಗೆ ಕೂಡ ಸಪೋರ್ಟ್ ಸಿಗುತ್ತದೆ, ಕ್ಲೈಮೇಟ್ ಕಂಟ್ರೋಲ್ ಸೇರಿ.
- ಟಾಟಾ ಸ್ಮಾರ್ಟ್ ರಿಮೋಟ್ ಆಪ್
- ಡೋರ್ ಅಜರ್ ಗೆ ವಾಯ್ಸ್ ಅಲರ್ಟ್ ಗಳು, ಸೀಟ್ ಬೆಲ್ಟ್ ರಿಮೈಂಡರ್ ಗಳು, ಮತ್ತು ಕಡಿಮೆ ಇಂಧನ ಸೂಚಿ, ಇವುಗಳು ಸೇರಿವೆ
- ರೇರ್ ವ್ಯೂ ಕ್ಯಾಮೆರಾ ಡಿಸ್ಪ್ಲೇ ಜೊತೆಗೆ ಇನ್ಫೋಟೈನ್ಮೆಂಟ್ ಯೂನಿಟ್ ನಲ್ಲಿ ಮತ್ತು ಪಾರ್ಕಿಂಗ್ ಸೆನ್ಸಾರ್ ಗಳು ಕೂಡ
- ಡ್ರೈವರ್ ಸೀಟ್ ಎತ್ತರ ಅಳವಡಿಕೆ, ಎತ್ತರ ಅಳವಡಿಕೆಯ ಮುಂಭಾಗದ ಸೀಟ್ ಬೆಲ್ಟ್
ಇದನ್ನು ಕೊಳ್ಳಬಹುದೇ?
ಪ್ರೀಮಿಯಂ ಬೆಲೆಯಾದ ರೂ 46,000 ಮತ್ತು ರೂ 59,000 ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂತ್ ಗಳಿಗೆ, ನಿಮಗೆ ಟಾಟಾ ಫ್ಲಾಗ್ ಶಿಪ್ ನ ಟಚ್ ಸ್ಕ್ರೀನ್ ಯೂನಿಟ್ ಮತ್ತು ಅದರ ಜೊತೆಗೆ ಬರುವ ಆಂಡ್ರಾಯ್ಡ್ ಆಟೋ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದರಲ್ಲಿ ನೇವಿಗೇಶನ್ ವಯಾ ಗೂಗಲ್ ಮ್ಯಾಪ್ ಇದೆ.
ಹಾಗಾಗಿ ಮೌಲ್ಯವರ್ಧಕಗಳಾದ ವಾಯ್ಸ್ ಅಲರ್ಟ್ ಗಳು, ರೇರ್ ವ್ಯೂ ಕ್ಯಾಮೆರಾ, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಇನ್ನಷ್ಟು ದೊರೆಯುತ್ತದೆ. ನಮಗೆ ತಿಳಿದಿರುವಂತೆ ಈ ವೇರಿಯೆಂಟ್ ನಲ್ಲಿ ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಸಿಗುತ್ತದೆ, ಹಾಗಾಗಿ ನಾವು ಈ ವೇರಿಯೆಂಟ್ ಅನ್ನು ಶಿಫಾರಸು ಮಾಡುತ್ತೇವೆ.
ಟಾಟಾ ನೆಕ್ಸಾನ್ XZ+/XZ+ (ಡುಯಲ್ ಟೋನ್ )
ಬೆಲೆ (ಎಕ್ಸ್ ಶೋ ರೂಮ್ , ದೆಹಲಿ )
Engine |
Price |
Rs 8.81 lakh |
|
Rs 9.02 lakh |
|
Rs 9.69 lakh |
|
Rs 9.89 lakh |
XZ ಗಿಂತಲೂ ಹೆಚ್ಚಿನದಾಗಿ XZ+ ನಲ್ಲಿ ಸಿಗುತ್ತದೆ
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ ಡೇ ಟೈಮ್ ರನ್ನಿಂಗ್ ಲ್ಯಾಂಪ್ LED ಒಂದಿಗೆ
- 16-ಇಂಚು ಮಷೀನ್ ಕಟ್ ಅಲಾಯ್ ಜೊತೆಗೆ ಅಗಲವಾದ 215/60 ಕ್ರಾಸ್ ಸೆಕ್ಷನ್ R16 ಅಲಾಯ್ ಗಳು
- ಮುಂಬದಿ ( ಕಾರ್ನೆರಿಂಗ್ ಕಾರ್ಯದೊಂದಿಗೆ) ಮತ್ತು ಹಿಂಬದಿ ಫಾಗ್ ಲ್ಯಾಂಪ್ ಗಳು
- ಮುಂಬದಿ ಸೆಂಟ್ರಲ್ ಆರ್ಮ್ ರೆಸ್ಟ್ ಮತ್ತು ಟಂಬೌರ್ ಡೋರ್
- 60:40 ಸ್ಪ್ಲಿಟ್ ಹಿಂಬದಿ ಸೀಟ್
- ಹಿಂಬದಿ ಡಿ ಫಾಗರ್ ಮತ್ತು ವೈಪರ್
- ಫಾಸ್ಸಿವ್ ಕೀಲೆಸ್ಸ್ ಎಂಟ್ರಿ ಜೊತೆಗೆ ಪುಶ್ ಬಟನ್ ಸ್ಟಾರ್ಟ್ ಸ್ಟಾಪ್
ಇದನ್ನು ಕೊಳ್ಳಬಹುದೇ?
XZ+ ಟ್ರಿಮ್ ನಲ್ಲಿ ನಿಮಗೆ ಟಾಟಾ ಕೊಡಬಹುದಾದ ಎಲ್ಲ ಒಳಿತುಗಳು ದೊರೆಯುತ್ತದೆ. ಇಲ್ಲಿ ಬಹಳಷ್ಟು ಹೊಗಳಬಹುಆದ ವಿಷಯಗಳು ಇವೆ, ಅವೆಂದರೆ ಟಂಬೌರ್ ಡೋರ್ ಸೆಂಟ್ರಲ್ ಕನ್ಸೋಲ್ ಮೇಲೆ, DRL ಗಳು, ಪಸ್ಸಿವ್ ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 16- ಅಲಾಯ್ ಮತ್ತು ಇನ್ನು ಹೆಚ್ಚು.
ಮುಂದುವರೆದು, ಹೆಚ್ಚು ಪ್ರೀಮಿಯಂ ಆದ ಸುಮಾರು ರೂ 20,000, ನಿಮಗೆ ಡುಯಲ್ ಟೋನ್ ಆವೃತ್ತಿ ಸಿಗುತ್ತದೆ, ಮತ್ತು ಅದು ಇತರ ನೆಕ್ಸಾನ್ ಮಾಡೆಲ್ ಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ. XZ+ ಟ್ರಿಮ್ ನಲ್ಲಿ ಹೆಚ್ಚು ಮೌಲ್ಯ ವರ್ಧಕ ವಿಷಯಗಳು ಇವೆ ಆರೇ ಹೆಚ್ಚು ಬೆಲೆ ಪಟ್ಟಿಯೂ ಸಹ ಇದೆ. ಒಟ್ಟಿನಲ್ಲಿ ನೀವು ಇದು ಒಂದು ಕೊಳ್ಳಬಹುದಾದ ಟ್ರಿಮ್ ಆಗಿದೆ , ವಿಶೇಷವಾಗಿ ಇದರಲ್ಲಿ ಸಬ್ -4m ಕೆಟಗರಿ ನಲ್ಲಿ ಬಹಳಷ್ಟು ಚೆನ್ನಾಗಿರುವ ಪ್ಯಾಕೇಜ್ ಇದೆ.
ಟಾಟಾ ನೆಕ್ಸಾನ್ XZA+
ಬೆಲೆ (ಎಕ್ಸ್ ಶೋ ರೂಮ್ ದೆಹಲಿ )
Engine |
Price |
Petrol XZA+/ XZA+ (dual-tone) |
Rs 9.41 lakh/ Rs 9.62 lakh |
Diesel XZA+/ XZA+ (dual-tone) |
Rs 10.39 lakh/ Rs 10.59 lakh |
AMT ಆಯ್ಕೆಯನ್ನು ಟಾಪ್ ಸ್ಪೆಕ್ XZ+ ವೇರಿಯೆಂಟ್ ನಲ್ಲಿ ಮಾತ್ರ ಕೊಡಲಾಗಿದೆ. ಇದರಲ್ಲಿ ಮಾನ್ಯುಯಲ್ ಟಾಪ್ ಎಂಡ್ ಗಿಂತಲೂ ಹೆಚ್ಚಗೆ ಏನು ದೊರೆಯುತ್ತದೆ ಎಂದು ಪಟ್ಟಿ ಮಾಡಲಾಗಿದೆ
- ವೆರಬಲ್ PEPS ಕೀ ಅಥವಾ ಆಕ್ಟಿವಿಟಿ ಕೀ (ಇದು ಒಂದು ಕೈ ಗೆ ಕಟ್ಟಿಕೊಳ್ಳಬಹುದಾದ ಬ್ಯಾಂಡ್ ಇದು ಕೀ ಆಗಿ ಪರಿವರ್ತನೆಗೊಳ್ಳುತ್ತದೆ ಹಾಗಾಗಿ ನೀವು ಭಾರವಾದ ಕೀ ಫ್ಯಾಬ್ ಅನ್ನು ಸದಾ ಕೊಂಡೊಯ್ಯುವಹಾಗಿಲ್ಲ )
- ಮಾನ್ಯುಯಲ್ ಮೋಡ್
- ಸ್ಮಾರ್ಟ್ ಹಿಲ್ ಅಸಿಸ್ಟ್
- ಕ್ರೀಪ್ ಕಾರ್ಯ ( ಫಾರ್ವರ್ಡ್ ಹಾಗು ರಿವೆರ್ಸ್)
ಇದನ್ನು ಕೊಳ್ಳಬಹುದೇ?
ಆಟೋಮ್ಯಾಟಿಕ್ ನೆಕ್ಸಾನ್ ಅನ್ನು ಕೊಳ್ಳಬಯಸುವ ಗ್ರಾಹಕರಿಗೆ, ಈ ವೇರಿಯೆಂಟ್ ಉತ್ತಮ ಆಯ್ಕೆ. ಇದು ಕೇವಲ ಟಾಪ್ ಎಂಡ್ XZA+ ವೇರಿಯೆಂಟ್ ನಲ್ಲಿ ಮಾತ್ರ ಸಿಗುತ್ತದೆ, ನೆಕ್ಸಾನ್ AMT ನಿಮಗೆ ಅಡತಡೆ ಇಲ್ಲದ ಡ್ರೈವಿಂಗ್ ಅನುಭವ ಕೊಡುತ್ತದೆ ನಗರದ ಟ್ರಾಫಿಕ್ ಗಳಲ್ಲಿ ಮತ್ತು ಹೈವೇ ಗಳಲ್ಲಿ ಕೂಡ. ಮಾನ್ಯುಯಲ್ ಮೋಡ್ ನಲ್ಲಿ ನಿಮಗೆ ಗೇರ್ ಆಯ್ಕೆ ಯನ್ನು ಕಂಟ್ರೋಲ್ ಮಾಡಲು ಅವಕಾಶ ಕೂಡ ಕೊಡುತ್ತದೆ. ಹೆಚ್ಚಾಗಿ, ಕ್ರೀಪ್ ಕಾರ್ಯ ಒಂದು ವರಪ್ರದವಾದ ಫೀಚರ್ ಆಗಿದೆ ವಿಶೇಷವಾಗಿ ಬಂಪರ್ ನಿಂದ ದುಂಪರ್ ನ ವರೆಗಿನ ಟ್ರಾಫಿಕ್ ಗಳಲ್ಲಿ, ನಿಮಗೆ ಮುಂದಿನ ಕಾರ್ ಸ್ವಲ್ಪ ಮುಂದುವರೆದಾಗಲೆಲ್ಲ ಆಕ್ಸಿಲರೇಟರ್ ಒನ್ನು ಪ್ರತಿ ಬಾರಿ ಒತ್ತಬೇಕಾಗಿರುವುದಿಲ್ಲ. ಇದಲ್ಲದೆ AMT ಗಾಗಿ ನೀವು ರೂ 60,000 ಮತ್ತು ರೂ 70,000 ಹೆಚ್ಚು ಕೊಡಬೇಕಾಗುತ್ತದೆ ಪೆಟ್ರೋಲ್ ಹಾಗು ಡೀಸೆಲ್ ಮಾನ್ಯುಯಲ್ ಗಳೊಂದಿಗೆ. ಆದರೆ ಹೆಚ್ಚಿನ ಬೆಲೆನಿಮಗೆ ವೆರಬಲ್ ಆಕ್ಟಿವಿಟಿ ಕೀ ಸಿಗುತ್ತದೆ– ಕೀ ಫ್ಯಾಬ್ ಅನ್ನು ಯಾವಾಗಲು ಜೊತೆಯಲ್ಲಿರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
Read More on : Nexon on road price