ವಿಭಾಗದಲ್ಲಿನ ತೀವ್ರ ಸ್ಪರ್ಧೆ; ರೆನಾಲ್ಟ್ ಕ್ಯಾಪ್ಟರ್ vs ಟಾಟಾ ನೆಕ್ಸಾನ್ - ಯಾವ SUV ಕೊಳ್ಳುವುದು?
ಟಾಟಾ ನೆಕ್ಸಾನ್ 2017-2020 ಗಾಗಿ dhruv attri ಮೂಲಕ ಮೇ 16, 2019 01:42 pm ರಂದು ಮಾರ್ಪಡಿಸಲಾಗಿದೆ
- 42 Views
- ಕಾಮೆಂಟ್ ಅನ್ನು ಬರೆಯಿರಿ
ಟಾಪ್ ಎಂಡ್ ನೆಕ್ಸಾನ್ ಆರಂಭ ಹಂತದ ಕ್ಯಾಪ್ಟರ್ ಗಿಂತ ಒಂದು ಒಪ್ಪಿಕೊಳ್ಳಬಹುದಾದ ವಿಷಯವೇ?
ಹೊರಗಿನಿಂದ ನಾವು ನೋಡಿದಾಗ ಟಾಟಾ ನೆಕ್ಸಾನ್ ಮತ್ತು ರೆನಾಲ್ಟ್ ಕ್ಯಾಪ್ಟರ್ ಗಳು ನೈಸರ್ಗಿಕ ಪ್ರತಿಸ್ಪರ್ದಿಗಳಲ್ಲ. ನೆಕ್ಸಾನ್ ಒಂದು ಸಬ್ 4-ಮೀಟರ್ SUV ಆಗಿದೆ. ಕ್ಯಾಪ್ಟರ್ ದೊಡ್ಡದಾಗಿದೆ ಮತ್ತು ಇದಕ್ಕಿಂತ ಮೇಲಿನ ವಿಭಾಗಕ್ಕೆ ಸೇರುತ್ತದೆ. ಈ ಎರೆಡೂ SUV ಗಳಲ್ಲಿ ಬೆಲೆಯಲ್ಲಿ ಬಹಳಷ್ಟು ಭಿನ್ನತೆ ಇದೆ ಕೂಡ. ಹಾಗಾಗಿ, ನೀವು ನೆಕ್ಸಾನ್ ಪರಿಗಣಿಸುತ್ತಿದ್ದರೆ, ಅದರಲ್ಲೂ ವಿಶೇಷವಾಗಿ ಟಾಪ್ ಸ್ಪೆಕ್ ವೇರಿಯೆಂಟ್ ಗಳನ್ನು ಕೊಳ್ಳಲು ಬಯಸುವಿರಾದರೆ, ನಿಮ್ಮ ಬಜೆಟ್ ಅನ್ನು ಹೆಚ್ಚಿಸಿ ಇನ್ನು ಪ್ರೀಮಿಯಂ ಆಗಿರುವ ಕ್ಯಾಪ್ಟರ್ ಕೊಳ್ಳಬಹುದೇ? ನಾವು ನೋಡೋಣ.ಟಾಟಾ ನೆಕ್ಸಾನ್ ಟಾಪ್ ವೇರಿಯೆಂಟ್ ಗಳ ಬೆಲೆಗಳು
XZ+ ಪೆಟ್ರೋಲ್ (ಮಾನ್ಯುಯಲ್ ) ಡುಯಲ್ ಟೋನ್: ರೂ 9.01 ಲಕ್ಷ
XZ+ ಡೀಸೆಲ್ (ಮಾನ್ಯುಯಲ್) ಡುಯಲ್ -ಟೋನ್ : ರೂ 9.89 ಲಕ್ಷ
ರೆನಾಲ್ಟ್ ಕ್ಯಾಪ್ಟರ್ ಬೇಸ್ ವೇರಿಯೆಂಟ್ ಬೆಲೆಗಳು
ಕ್ಯಾಪ್ಟರ್ RXE ಮಾನ್ಯುಯಲ್ ಪೆಟ್ರೋಲ್ : ರೂ 9.99 ಲಕ್ಷ (ರೂ 98,000 ಹೆಚ್ಚು)
ಕ್ಯಾಪ್ಟರ್ RXE ಮಾನ್ಯುಯಲ್ ಡೀಸೆಲ್ : ರೂ 11.14 ಲಕ್ಷ (ರೂ 1.25 ಲಕ್ಷ ಹೆಚ್ಚು )
ಹೆಚ್ಚಿನ ವೆತ್ಯಾಸಗಳು
ರೆನಾಲ್ಟ್ ಕ್ಯಾಪ್ಟರ್
ಒಟ್ಟಾರೆ ದೊಡ್ಡದಾಗಿದೆ: ಕ್ಯಾಪ್ಟರ್ ನೆಕ್ಸಾನ್ ಗಿಂತಲೂ ದೊಡ್ಡದಾಗಿದೆ ಮತ್ತು ಸ್ವಲ್ಪ ಹೆಚ್ಚು ಕ್ಯಾಬಿನ್ ನಲ್ಲಿ ಸ್ಥಳಾವಕಾಶ ಕಲ್ಪಿಸುತ್ತದೆ. ಕ್ಯಾಪ್ಟರ್ ನ 392-ಲೀಟರ್ ಬೂಟ್ ನಲ್ಲಿ 42 ಲೀಟರ್ ಹೆಚ್ಚಾದ ಸ್ಟೋರೇಜ್ ಅವಕಾಶ ಇದೆ ನೆಕ್ಸಾನ್ ಗೆ ಹೋಲಿಸಿದರೆ.
ಆಟೋಮ್ಯಾಟಿಕ್ ನ ಆಯ್ಕೆ ಇಲ್ಲ:ಕ್ಯಾಪ್ಟರ್ ಪೆಟ್ರೋಲ್ ಹಾಗು ಡೀಸೆಲ್ ಅವತರಣಿಕೆಯಲ್ಲಿ ಸಿಗುತ್ತದೆ. ಆದರೆ ಎರೆಡೂ ಎಂಜಿನ್ ಗಳು ಕೇವಲ ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ಬರುತ್ತದೆ.
ಕ್ಯಾಪ್ಟರ್ ಒಓದು ನೈಸರ್ಗಿಕ ಪ್ರತಿಸ್ಪರ್ದಿ ಆಗಿದೆ ಹುಂಡೈ ಕ್ರೆಟಾ, ಜೀಪ್ ಕಂಪಾಸ್, ಹಾಗು ಮಹಿಂದ್ರಾ XUV500 ಗಳಿಗೆ.
ಟಾಟಾ ನೆಕ್ಸಾನ್
ನಗರಗಳ ಉಪಯೋಗಕ್ಕೆ ಕಾಂಪ್ಯಾಕ್ಟ್ ಆಗಿದೆ: ನೆಕ್ಸಾನ್ ನಲ್ಲಿ ಕ್ಯಾಪ್ಟರ್ ಗಿಂತಲೂ ಕಡಿಮೆಯಾದ ಅಳತೆಗಳು ಇವೆ ಮತ್ತು ಇದು ನಗರಗಳಲ್ಲಿ ಡ್ರೈವ್ ಮಾಡಲು ಅಥವಾ ಪಾರ್ಕ್ ಮಾಡಲು ಸರಿಹೊಂದುತ್ತದೆ. ರೈಡ್ ಹೇಯ್ಗ್ತ್ ನಲ್ಲಿ ಅಷ್ಟೇನು ವೆತ್ಯಾಸಗಳಿಲ್ಲ. 209mm ನಲ್ಲಿ, ನೆಕ್ಸಾನ್ ಗ್ರೌಂಡ್ ಕ್ಲಿಯರೆನ್ಸ್ ದೊಡ್ಡ SUV ಗಳಿಗೆ ಹೋಲಿಸಬಹುದಾಗಿದೆ. ಹಾಗು ಇದು ಕ್ಯಾಪ್ಟರ್ ಗಿಂತ ಕೇವಲ 1mm ಕಡಿಮೆ ಇದೆ.
ಪವರ್ ಟ್ರೈನ್ ನ ಆಯ್ಕೆಗಳು: ಟಾಟಾ ನೆಕ್ಸಾನ್ ಅನ್ನು ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿತು. ಆದರೆ ಕಾರ್ ಮೇಕರ್ ಇದಕ್ಕೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಕೊಟ್ಟಿತು. ನೆಕ್ಸಾನ್ ನ ಎರದೂ ಎಂಜಿನ್ ಗಳಜೊತೆ AMT ಹೊಂದಬಹುದಾಗಿದೆ.
ಟಾಟಾ ನೆಕ್ಸಾನ್ ಸಬ್ 4-ಮೀಟರ್ SUV ಗಾಲ ಜೊತೆ ಸ್ಪರ್ದಿಸುತ್ತದೆ, ಅವೆಂದರೆ ಫೋರ್ಡ್ ಎಕೋಸ್ಪೋರ್ಟ್, ಮಾರುತಿ ವಿಟಾರಾ ಬ್ರೆಝ ಮತ್ತು ಹೋಂಡಾ WR-V.
ರೆನಾಲ್ಟ್ ಕ್ಯಾಪ್ಟರ್ RXE Vs ಟಾಟಾ ನೆಕ್ಸಾನ್ XZ+ ಡುಯಲ್ ಟೋನ್ : ಫೀಚರ್ ಗಳ ಹೋಲಿಕೆ
ಫೀಚರ್ ಗಳು
ಟೇಕ್ಅವೇ ಗಳು
ನಾವು ಬೇಸ್ ವೇರಿಯೆಂಟ್ ಕ್ಯಾಪ್ಟರ್ ಅನ್ನು ಟಾಪ್ ವೇರಿಯೆಂಟ್ ನೆಕ್ಸಾನ್ ಜೊತೆ ಹೋಲಿಕೆ ಮಾಡಿರುವುದರಿಂದ, ನಾವು ನೆಕ್ಸಾನ್ ನಲ್ಲಿ ಹೆಚ್ಚು ಫೀಚರ್ ಗಳು ಇದ್ದು ಕಡಿಮೆ ಬೆಲೆ ಇರಬಹುದು ಎಂದುಕೊಂಡೆವು, ಮತ್ತು ನಮಗೆ ನಿರಾಸೆ ಆಗಲಿಲ್ಲ. ಕ್ಯಾಪ್ಟರ್ ನ RXE ಯ ಫೀಚರ್ ಗಳ ಜೊತೆಗೆ ನೆಕ್ಸಾನ್ XZ+ ನಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಮತ್ತು ರೇರ್ ಸೆನ್ಸಾರ್ ಗಳು, ಫಾಗ್ ಲ್ಯಾಂಪ್, ಅಲಾಯ್ ವೀಲ್ ಗಳು, ಮತ್ತು ಹೆಚ್ಚು ಸ್ಥಳಾವಕಾಶ.
ಕ್ಯಾಪ್ಟರ್ RXE ಯು Nexon XZ+ ಗಿಂತಲೂ ರೂ 98,000 ಪೆಟ್ರೋಲ್ ಮಾನ್ಯುಯಲ್ ಗೆ , ಹಾಗು ರೂ 1.25 ಲಕ್ಷ ಡೀಸೆಲ್ ಮಾನ್ಯುಯಲ್ ಗಿಂತ ಹೆಚ್ಚಿನ ಬೆಲೆ ಉಳ್ಳದಾಗಿದೆ.
ಅನಿಸಿಕೆ: ಹಾಗಾದರೆ ಯಾವ ಕಾರ್ ಕೊಳ್ಳೋಣ ?
ಟಾಟಾ ನೆಕ್ಸಾನ್ ಏಕೆ ಕೊಳ್ಳೋಣ?
- ಇದು ಕಡಿಮೆ ಬೆಲೆ ಉಳ್ಳದ್ದಾಗಿದೆ : ಉಳಿತಾಯ ಬೆಲೆಯಾದ ರೂ 1 ಲಕ್ಷ ಗಮನರ್ಹ ವಿಷಯವಾಗಿದೆ. ಜೊತೆಗೆ ನಿಮಗೆ ಟಾಪ್ ಎಂಡ್ ಗರಿಷ್ಟ ಫೀಚರ್ ಗಳು ನಿಮಗೆ ಸಿಗುತ್ತದೆ , ಕ್ಯಾಪ್ಟರ್ ನ ಬೇಸ್ ವೇರಿಯೆಂಟ್ ಕೂಡ ಹೆಚ್ಚು ಸಲಕರಣೆಗಳನ್ನು ಹೊಂದಿದೆ ಆದರೆ ಟಾಟಾ ದಕ್ಕಿಂತ ಕಡಿಮೆ ಇದೆ.
- ಕಾಂಪ್ಯಾಕ್ಟ್ ಸುತ್ತಳತೆಗಳು: ಇದು ಸ್ವಲ್ಪ ಡ್ರೈವ್ ಮಾಡಲು ಸುಲಭವಾಗಿದೆ ಮತ್ತು ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ
- ನೋಟ : ಡಿಸೈನ್ ಆಕರ್ಷಕವಾಗಿದೆ ಮತ್ತು ಸೆಳೆಯುತ್ತದೆ. ಟಾಪ್ ಎಂಡ್ ವೇರಿಯೆಂಟ್ ಕೂಡ ಡುಯಲ್ ಟೋನ್ ಹೊರಮೈ ಬಣ್ಣಗಳ ಆಯ್ಕೆ ಹೊಂದಿದೆ ಹಾಗು ಅಲಾಯ್ ವೀಲ್ ಸಹ ಇದೆ.
- ಫೀಚರ್ ಗಳು: ಟಾಟಾ ನೆಕ್ಸಾನ್ ನಲ್ಲಿ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಛತ್ರಿ ಹಿಡಿಕೆ ಮುಂದಿನ ಡೋರ್ ನಲ್ಲಿ, 1-ಬಾಟಲಿ ಹಿಡಿಕೆ ಎಲ್ಲ ಡೋರ್ ಗಳಲ್ಲಿ, ಸ್ಲೈಡ್ ಮಾಡಬಹುದಾದ ಮಧ್ಯದಲ್ಲಿರುವ ಸ್ಟೋರೇಜ್, ಹಾಗು ವೆರಬುಲ್ ಕೀ ಗಳು ಇವೆ. ಇವು ಕ್ಯಾಪ್ಟರ್ ನಲ್ಲಿ ಮಿಸ್ ಆಗಿವೆ.
- ಪವರ್ ಟ್ರೈನ್ ಆಯ್ಕೆಗಳು; ನೀವು ಆಟೋಮ್ಯಾಟಿಕ್ SUV ನೋಡುತ್ತಿದ್ದೀರಾ? ಕ್ಯಾಪ್ಟರ್ ಹಾಗು ನೆಕ್ಸಾನ್ ಗಳಲ್ಲಿ, ಕೇವಲ ಟಾಟಾ AMT ಆಯ್ಕೆ ಕೊಡುತ್ತದೆ, ಜೊತೆಗೆ ಎಂಜಿನ್ ಆಯ್ಕೆ ಗಳು ಸಹ.
ರೆನಾಲ್ಟ್ ಕ್ಯಾಪ್ಟರ್ ಅನ್ನು ಏಕೆ ಕೊಳ್ಳಬೇಕು?
- ನೋಟ: ಕ್ಯಾಪ್ಟರ್ ನ ಯೂರೋಪಿಯನ್ ಶೈಲಿ ಕ್ರಾಸ್ಒವರ್ ನಂತಿರುವ ನೋಟ ಅದ್ಭುತವಾಗಿದೆ ಮತ್ತು ಇದಕ್ಕೆ ಪ್ರೀಮಿಯಂ SUV ತರಹದ ಗುಣಗಳಿವೆ. ಹಾಗು, ಛತ್ರಾರ್ ಗೆ ರಸ್ತೆಗಳಲ್ಲಿ ತನ್ನದೇ ಆದ ಪ್ರತ್ಯೇಕತೆ ಇದೆ ಎಂದು ತೋರ್ಪಡಿಡುತ್ತದೆ.
- ಸ್ಥಳಾವಕಾಶ: ಕ್ಯಾಪ್ಟರ್ ನಲ್ಲಿ ಹೆಚ್ಚು ಲೆಗ್ ರೂಮ್ ಇದೆ ಮತ್ತು ಅಂಡರ್ ಥೈ ಸಪೋರ್ಟ್ ಕೂಡ ನೆಕ್ಸಾನ್ ಗಿಂತಲೂ ಚೆನ್ನಾಗಿದೆ, ಹಾಗು ಹಿಂಬದಿಯ ಸೀಟ್ ಅಗಲವಾಗಿದೆ. ಮತ್ತು ಇದನ್ನು ಬಾಡಿಗೆ ಡ್ರೈವರ್ ಬಳಕೆಗೆ ಸೂಕ್ತವಾಗಿದೆ ಎಂದೆನಿಸುತ್ತದೆ. ಇದರಲ್ಲಿ ದೊಡ್ಡ ಬೂಟ್ ಇದ್ದು ನೀವು ಹೆಚ್ಚು ಲಗೇಜ್ ಸಹ ಇಡಬಹುದು.
- ಮೆಚ್ಚುವಂತಹ ಕಾರ್ಯದಕ್ಷತೆ: ನಮ್ಮ ಟೆಸ್ಟ್ ಗಳು ತೋರಿಸುವಂತೆ ಕ್ಯಾಪ್ಟರ್ ಡೀಸೆಲ್ ಕಡಿಮೆ ಪವರ್ ಇದ್ದರೂ ಸಹ ನೆಕ್ಸಾನ್ ಗಿಂತಲೂ ಸ್ವಲ್ಪ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ..
ಈ SUV ಗಳಲ್ಲಿ ಯಾವುದು ಹೆಚ್ಚು ಸೂಕ್ತವಾಗಿದೆ ಎಂದು ನಿಮಗನಿಸುತ್ತದೆ ಮತ್ತು ಏಕೆ? ನಮಗೆ ಕೆಳಗೆ ಕಾಮೆಂಟ್ ವಿಭಾಗದಲ್ಲಿ ತಿಳಿಸಿ.
Read More on : Nexon on road price