• English
  • Login / Register

2024ರ BMW M2 ಭಾರತದಲ್ಲಿ 1.03 ಕೋಟಿ ರೂ. ಬೆಲೆಯಲ್ಲಿ ಬಿಡುಗಡೆ

ಬಿಎಂಡವೋ ಎಮ್‌2 ಗಾಗಿ dipan ಮೂಲಕ ನವೆಂಬರ್ 29, 2024 06:54 pm ರಂದು ಪ್ರಕಟಿಸಲಾಗಿದೆ

  • 64 Views
  • ಕಾಮೆಂಟ್‌ ಅನ್ನು ಬರೆಯಿರಿ

2024 M2 ಎಕ್ಸ್‌ಟಿರಿಯರ್‌ ಮತ್ತು ಇಂಟೀರಿಯರ್‌ನಲ್ಲಿ ಸೂಕ್ಷ್ಮ ವಿನ್ಯಾಸ ವರ್ಧನೆಗಳನ್ನು ಪಡೆಯುತ್ತದೆ, ಮತ್ತು ಅದೇ ಪವರ್‌ಟ್ರೇನ್‌ಅನ್ನು ಆಗಿದ್ದು, ಆದರೆ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ಬರಲಿದೆ

2024 BMW M2 Launched At Rs 1.03 Crore In India

  • MY24 M2 ಹೊರಹೋಗುವ ಮಾಡೆಲ್‌ಗೆ ಹೋಲಿಸಿದರೆ 5 ಲಕ್ಷ ರೂಪಾಯಿಗಳ ಬೆಲೆ ಏರಿಕೆಯೊಂದಿಗೆ ಬರುತ್ತದೆ.

  • ಬಾಹ್ಯ ವಿನ್ಯಾಸದಲ್ಲಿ ಹೊಸ ಅಲಾಯ್‌ ವೀಲ್‌ಗಳು, ಕಪ್ಪು ಕ್ವಾಡ್ ಟೈಲ್‌ಪೈಪ್‌ಗಳು ಮತ್ತು ಸಿಲ್ವರ್‌ನಿಂದ ಸುತ್ತುವರೆದಿರುವ ಕಪ್ಪು M2 ಬ್ಯಾಡ್ಜ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ಹಿಂದಿನ ರೀತಿಯದ್ದೇ ಆಗಿರುತ್ತದೆ.

  • ಹೊಸ ಸ್ಟೀರಿಂಗ್ ವೀಲ್ ವಿನ್ಯಾಸವನ್ನು ಹೊರತುಪಡಿಸಿ ಇಂಟೀರಿಯರ್‌ ಒಂದೇ ಆಗಿರುತ್ತದೆ.

  • ಇದು 14.9-ಇಂಚಿನ ಟಚ್‌ಸ್ಕ್ರೀನ್ ಮತ್ತು 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿರುವುದನ್ನು ಮುಂದುವರೆಸಿದೆ, ಆದರೆ ಆಪರೇಟಿಂಗ್ ಸಿಸ್ಟಮ್ ಅನ್ನು ಈಗ ಆಪ್‌ಡೇಟ್‌ ಮಾಡಲಾಗಿದೆ.

  • ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

  • ಅದೇ 3-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 27 ಪಿಎಸ್‌ ಮತ್ತು 50 ಎನ್‌ಎಮ್‌ವರೆಗೆ ಹೆಚ್ಚು ಉತ್ಪಾದಿಸುತ್ತದೆ.

 ಆಪ್‌ಡೇಟ್‌ ಮಾಡಲಾದ ಬಿಎಮ್‌ಡಬ್ಲ್ಯೂM2 ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ ಮತ್ತು ಇದು ಈಗ 1.03 ಕೋಟಿ ರೂ. (ಎಕ್ಸ್-ಶೋರೂಮ್, ಪ್ಯಾನ್-ಇಂಡಿಯಾ) ಬೆಲೆಯನ್ನು ಹೊಂದಿದೆ, ಹೊರಹೋಗುವ ಮೊಡೆಲ್‌ಗಿಂತ ಸುಮಾರು 5 ಲಕ್ಷ ರೂ.ನಷ್ಟು ಹೆಚ್ಚು ಇರಲಿದೆ. ಇದು ಒಳಗೆ ಮತ್ತು ಹೊರಗೆ ಕೆಲವೇ ವಿನ್ಯಾಸ ವ್ಯತ್ಯಾಸಗಳನ್ನು ಪಡೆದರೂ, ಇದು ಹೊರಹೋಗುವ ಮೊಡೆಲ್‌ನಂತೆಯೇ ಅದೇ ಎಂಜಿನ್‌ನೊಂದಿಗೆ ಮುಂದುವರಿದಿದೆ, ಆದರೂ ಸುಧಾರಿತ ಔಟ್‌ಪುಟ್‌ಗಳನ್ನು ಪಡೆಯಲಿದೆ. 

ಏನಿದೆ ಹೊಸತು ?

MY24 BMW M2 engine

ಆಪ್‌ಡೇಟ್‌ ಮಾಡಲಾದ ಬಿಎಮ್‌ಡಬ್ಲ್ಯೂ M2 ಅದೇ 3-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಅದು ಈಗ ಹೆಚ್ಚಿನ ಪವರ್‌ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

3-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್

ಪವರ್‌

487 ಪಿಎಸ್‌

ಟಾರ್ಕ್‌

550 ಎನ್‌ಎಮ್‌ (ಮ್ಯಾನುವಲ್‌) / 600 ಎನ್‌ಎಮ್‌ (ಆಟೋಮ್ಯಾಟಿಕ್‌)

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುವಲ್‌, 8-ಸ್ಪೀಡ್‌ ಆಟೋಮ್ಯಾಟಿಕ್‌

ಪವರ್ ಅನ್ನು 27 ಪಿಎಸ್ ಹೆಚ್ಚಿಸಲಾಗಿದೆ ಮತ್ತು ಆಟೋಮ್ಯಾಟಿಕ್‌ ವೇರಿಯೆಂಟ್‌ಗಳ ಟಾರ್ಕ್ ಉತ್ಪಾದನೆಯು ಕೇವಲ 50 ಎನ್ಎಂ ಹೆಚ್ಚಾಗಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು.

MY24 BMW M2 front
MY24 BMW M2 rear

ಬಾಹ್ಯ ವಿನ್ಯಾಸವು ಒಂದೇ ಆಗಿರುತ್ತದೆ, ಆದರೆ M2 ಈಗ ಮುಂಭಾಗ ಮತ್ತು ಹಿಂಭಾಗದಲ್ಲಿ ಕಪ್ಪು 'M2' ಬ್ಯಾಡ್ಜ್‌ಗಳನ್ನು ಸಿಲ್ವರ್‌ನಲ್ಲಿ ಸುತ್ತುವರೆಸಲಾಗಿದೆ, ಕಪ್ಪು ಕ್ವಾಡ್ ಎಕ್ಸಾಸ್ಟ್ ಪೈಪ್‌ಗಳು ಮತ್ತು ಹೊಸ ಸಿಲ್ವರ್ ಅಲಾಯ್‌ ವೀಲ್‌ಗಳನ್ನು ಹೊಂದಿದೆ. ಎಲ್‌ಇಡಿ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು ಮತ್ತು ಹಿಂಭಾಗದ ಡಿಫ್ಯೂಸರ್ ಹಿಂದಿನ ಆವೃತ್ತಿಯದ್ದೇ ಆಗಿವೆ.

MY24 BMW M2 interior

ಒಳಭಾಗದಲ್ಲಿ, ಇದು ಹೊಸ 3-ಸ್ಪೋಕ್ ಫ್ಲಾಟ್-ಬಾಟಮ್ ಲೆದರ್‌ನಿಂದ ಸುತ್ತುವರೆದ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಬಿಎಮ್‌ಡಬ್ಲ್ಯೂ ಒಪ್ಶನಲ್‌ ಆಕ್ಸಸ್ಸರಿಯಾಗಿ ಅಲ್ಕಾಂಟರಾ-ಸುತ್ತಿದ ಸ್ಟೀರಿಂಗ್ ವೀಲ್‌ ಅನ್ನು ಸಹ ಒದಗಿಸುತ್ತಿದೆ. ಕಪ್ಪು ಥೀಮ್‌ನ ಕ್ಯಾಬಿನ್, ಸ್ಪೋರ್ಟ್ಸ್‌ ಸೀಟುಗಳು ಮತ್ತು ಡ್ಯಾಶ್‌ಬೋರ್ಡ್ ವಿನ್ಯಾಸವು ಹಿಂದಿನ ಮೊಡೆಲ್‌ಗೆ ಹೋಲುತ್ತದೆ.

ಮೇಲೆ ತಿಳಿಸಿದ ಬದಲಾವಣೆಗಳ ಹೊರತಾಗಿ, ಬಿಎಮ್‌ಡಬ್ಲ್ಯೂ M2 ವಿನ್ಯಾಸಕ್ಕೆ ಒಳಗೆ ಮತ್ತು ಹೊರಗೆ ಯಾವುದೇ ಮಾರ್ಪಾಡುಗಳನ್ನು ಮಾಡಿಲ್ಲ.

ಇದನ್ನೂ ಓದಿ: Audi Q7 ಫೇಸ್‌ಲಿಫ್ಟ್ ಭಾರತದಲ್ಲಿ ರೂ 88.66 ಲಕ್ಷ ರೂ.ಗೆ ಬಿಡುಗಡೆ

ಫೀಚರ್‌ ಮತ್ತು ಸುರಕ್ಷತೆ

2024 ಬಿಎಮ್‌ಡಬ್ಲ್ಯೂ M2 14.9-ಇಂಚಿನ ಟಚ್‌ಸ್ಕ್ರೀನ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿಯೊಂದಿಗೆ ಮುಂದುವರಿಯುತ್ತದೆ. ವಿಭಿನ್ನವಾದ ವಿಷಯವೆಂದರೆ 2024 M2 ಆಪ್‌ಡೇಟ್‌ ಮಾಡಿದ ಆಪರೇಟಿಂಗ್ ಸಿಸ್ಟಮ್ (OS) ಅನ್ನು ಪಡೆಯುತ್ತದೆ. ಇದು 14-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಹೀಟೆಡ್‌ ಸೀಟ್‌ಗಳನ್ನು ಸಹ ಹೊಂದಿದೆ.

MY24 BMW M2

ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ರಿವರ್ಸಿಂಗ್ ಅಸಿಸ್ಟ್, ಅಟೆನ್ಟಿವ್‌ನೆಸ್ ಅಸಿಸ್ಟ್ ಮತ್ತು ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಡ್ರೈವರ್‌ ಆಸಿಸ್ಟ್‌ ಸಿಸ್ಟಮ್‌ಗಳನ್ನು ಒಳಗೊಂಡಿದೆ. ಇತರ ಸುರಕ್ಷತಾ ಫೀಚರ್‌ಗಳಲ್ಲಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಮತ್ತು ರಿಯರ್‌ವ್ಯೂ ಕ್ಯಾಮೆರಾ ಸೇರಿವೆ.

ಪ್ರತಿಸ್ಪರ್ಧಿಗಳು

MY24 BMW M2 side

BMW M2 ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ.

ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸ್ಆಪ್ ಚಾನೆಲ್ ಅನ್ನು ಫಾಲೋ ಮಾಡಿ

ಇದರ ಕುರಿತು ಇನ್ನಷ್ಟು ಓದಲು : M2 ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on BMW ಎಮ್‌2

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕೌಪ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience