Login or Register ಅತ್ಯುತ್ತಮ CarDekho experience ಗೆ
Login

ಬುಕಿಂಗ್ ಪ್ರಾರಂಭಿಸುವುದರೊಂದಿಗೆ 2024ರ Kia Carnival ನ ವಿವರಗಳು ಬಹಿರಂಗ

published on ಸೆಪ್ಟೆಂಬರ್ 16, 2024 04:27 pm by dipan for ಕಿಯಾ ಕಾರ್ನಿವಲ್

ಕಿಯಾ ಕಾರ್ನಿವಲ್ ಎಮ್‌ಪಿವಿಯು ಲಿಮೋಸಿನ್ ಮತ್ತು ಲಿಮೋಸಿನ್ ಪ್ಲಸ್ ಎಂಬ ಎರಡು ಟ್ರಿಮ್‌ಗಳಲ್ಲಿ ಬರುತ್ತದೆ

  • ಕಿಯಾವು ತನ್ನ ನಾಲ್ಕನೇ ತಲೆಮಾರಿನ ಕಾರ್ನಿವಲ್ ಅನ್ನು ಅಕ್ಟೋಬರ್‌ನಲ್ಲಿ ಭಾರತಕ್ಕೆ ತರಲಿದೆ.
  • ಇದು ಲಂಬವಾಗಿ ಜೋಡಿಸಲಾದ ಹೆಡ್‌ಲೈಟ್‌ಗಳು, ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು 18-ಇಂಚಿನ ಅಲಾಯ್‌ ವೀಲ್‌ಗಳನ್ನು ಹೊಂದಿದೆ.
  • ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ 3-ಸಾಲಿನ ಸೀಟ್‌ಗಳ ಆಯ್ಕೆಗಳನ್ನು ಪಡೆಯುತ್ತದೆ.
  • ಫೀಚರ್‌ಗಳು 12.3-ಇಂಚಿನ ಡಿಸ್‌ಪ್ಲೇ, ಮುಂಭಾಗ ಮತ್ತು ಎರಡನೇ ಸಾಲಿನಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು, ಡ್ಯುಯಲ್ ಸನ್‌ರೂಫ್ ಮತ್ತು 12-ಸ್ಪೀಕರ್ ಬೋಸ್ ಆಡಿಯೊ ಸಿಸ್ಟಮ್ ಅನ್ನು ಒಳಗೊಂಡಿದೆ.
  • ಸುರಕ್ಷತಾ ಪ್ಯಾಕೇಜ್‌ 8 ಏರ್‌ಬ್ಯಾಗ್‌ಗಳು, ಲೆವೆಲ್-2 ADAS ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
  • 2.2-ಲೀಟರ್ ಡೀಸೆಲ್ ಎಂಜಿನ್ (193 ಪಿಎಸ್‌/441 ಎನ್‌ಎಮ್‌) ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
  • ಇದರ ಅಂದಾಜು ಬೆಲೆ ಸುಮಾರು 40 ಲಕ್ಷ ರೂ.(ಎಕ್ಸ್ ಶೋ ರೂಂ) ಆಗಿರಲಿದೆ.

2024ರ ಕಿಯಾ ಕಾರ್ನಿವಲ್ ಅನ್ನು ಅಕ್ಟೋಬರ್ 3ರಂದು ಅಧಿಕೃತವಾಗಿ ಬಿಡುಗಡೆಗೊಳಿಸುವ ಮುನ್ನ ಅನಾವರಣಗೊಳಿಸಲಾಗಿದೆ. ಭಾರತದಲ್ಲಿ ಆನ್‌ಲೈನ್ ಮತ್ತು ಭಾರತದಾದ್ಯಂತ ಕಿಯಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ 2 ಲಕ್ಷ ರೂಪಾಯಿಗಳಿಗೆ ಪ್ರೀ-ಲಾಂಚ್ ಬುಕಿಂಗ್‌ಗಳು ಈಗ ತೆರೆದಿವೆ. ಈ ಎಮ್‌ಪಿವಿ ಈ ಹಿಂದೆ ಅದರ ಎರಡನೇ ಪೀಳಿಗೆಯಲ್ಲಿ ಲಭ್ಯವಿತ್ತು, ಆದರೆ 2023 ರಲ್ಲಿ ಸ್ಥಗಿತಗೊಳಿಸಲಾಯಿತು. ನಿಮಗೆ ಇದರ ಕುರಿತು ಇನ್ನಷ್ಟು ಕುತೂಹಲವಿದ್ದರೆ, ಆಪ್‌ಡೇಟ್‌ ಮಾಡಲಾದ ನಾಲ್ಕನೇ-ತಲೆಮಾರಿನ ಕಿಯಾ ಕಾರ್ನಿವಲ್ ಆಫರ್‌ನಲ್ಲಿರುವ ಎಲ್ಲದರ ತ್ವರಿತ ನೋಟ ಇಲ್ಲಿದೆ:

ಬೋಲ್ಡ್ ಆದ ವಿನ್ಯಾಸ

ಇಂಡಿಯನ್-ಸ್ಪೆಕ್ ಕಿಯಾ ಕಾರ್ನಿವಲ್ 2023 ರಲ್ಲಿ ಆಪ್‌ಡೇಟ್‌ ಮಾಡಲಾದ ಅಂತರಾಷ್ಟ್ರೀಯ-ಸ್ಪೆಕ್ ಮೊಡೆಲ್‌ ಅನ್ನು ಹೋಲುತ್ತದೆ. ಇದು ಆಕರ್ಷಕವಾದ ಗ್ರಿಲ್ (ಕ್ರೋಮ್ ಅಲಂಕರಣಗಳನ್ನು ಒಳಗೊಂಡಿರುವ), ಲಂಬವಾಗಿ ಜೋಡಿಸಲಾದ 4-ಪೀಸ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಂತೆ ಕಿಯಾದ ಇತ್ತೀಚಿನ ವಿನ್ಯಾಸ ಶೈಲಿಯನ್ನು ಒಳಗೊಂಡಿದೆ. ಮುಂಭಾಗವು ಭಾರತದಲ್ಲಿ ಮಾರಾಟವಾದ ಹಿಂದಿನ ಮೊಡೆಲ್‌ಗಿಂತ ದೊಡ್ಡದಾದ, ಹೆಚ್ಚು ನೇರವಾದ ಮೂಗು ಮತ್ತು ವಿಶಾಲವಾದ ಗ್ರಿಲ್ ಅನ್ನು ಹೊಂದಿದೆ.

ಬದಿಯಿಂದ ಗಮನಿಸುವಾಗ, ಹಿಂಭಾಗದ ಪ್ರಯಾಣಿಕರಿಗೆ ಪವರ್-ಸ್ಲೈಡಿಂಗ್ ಡೋರ್‌ಗಳನ್ನು ಹೊಸ ಮೊಡೆಲ್‌ನಲ್ಲಿಯೂ ನೀಡಲಾಗುತ್ತದೆ, ಇದು ಎರಡನೇ-ತಲೆಮಾರಿನ ಕಾರ್ನಿವಲ್‌ನಿಂದ ಮುಂದುವರೆದಿದೆ. ಹೊಸ ಮೊಡೆಲ್‌ ಮರುವಿನ್ಯಾಸಗೊಳಿಸಲಾದ 18-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಸಹ ಹೊಂದಿದೆ. ಈ ಎಮ್‌ಪಿವಿಯ ಆಯಾಮಗಳು ಈ ಕೆಳಗಿನಂತಿವೆ:

ಗಾತ್ರಗಳು

2024ರ ಕಿಯಾ ಕಾರ್ನಿವಲ್‌

ಉದ್ದ

5,155 ಮಿ.ಮೀ

ಅಗಲ

1,995 ಮಿ.ಮೀ

ಎತ್ತರ

1,775 ಮಿ.ಮೀ

ವೀಲ್‌ ಬೇಸ್‌

3,090 ಮಿ.ಮೀ

ಲಕ್ಷುರಿ ಇಂಟೀರಿಯರ್‌

ಕಿಯಾ ಕಾರ್ನಿವಲ್‌ನ ಒಳಭಾಗವು ಜಾಗತಿಕ-ಸ್ಪೆಕ್ ಮೊಡೆಲ್‌ನಂತೆಯೇ ಇದೆ. ಇದು 3-ಸಾಲಿನ ವಿನ್ಯಾಸವನ್ನು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು ಮತ್ತು ಕೊನೆಯ ಸಾಲಿನಲ್ಲಿ ಬೆಂಚ್ ಸೀಟ್‌ಗಳನ್ನು ಹೊಂದಿದೆ. ಇದು ನೇವಿ ಬ್ಲೂ ಮತ್ತು ಗ್ರೇ, ಹಾಗು ಟ್ಯಾನ್ ಮತ್ತು ಬ್ರೌನ್ ಎಂಬ ಎರಡು ಇಂಟೀರಿಯರ್‌ ಬಣ್ಣದ ಥೀಮ್‌ಗಳೊಂದಿಗೆ ಬರುತ್ತದೆ.

ಪ್ರೀಮಿಯಂ ಫೀಚರ್‌ಗಳು ಮತ್ತು ಸುರಕ್ಷತಾ ಸೂಟ್

2024ರ ಕಾರ್ನಿವಲ್ ಎರಡು 12.3-ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿದೆ (ಒಂದು ಟಚ್‌ಸ್ಕ್ರೀನ್ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇಗಾಗಿ) ಮತ್ತು 11-ಇಂಚಿನ ಹೆಡ್ಸ್-ಅಪ್ ಡಿಸ್‌ಪ್ಲೇ (HUD). ಇದು ಲಂಬರ್‌ ಸಪೋರ್ಟ್‌ನೊಂದಿಗೆ 12-ವೇ ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 8-ವೇ ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಪ್ಯಾಸೆಂಜರ್ ಸೀಟ್ ಅನ್ನು ಸಹ ಪಡೆಯುತ್ತದೆ. ಇದು ವೆಂಟಿಲೇಶನ್‌, ಹೀಟಿಂಗ್‌ ಮತ್ತು ಲೆಗ್ ಎಕ್ಸ್‌ಟೆನ್ಸನ್‌ ಸಪೋರ್ಟ್‌ನೊಂದಿಗೆ ಸ್ಲೈಡಿಂಗ್ ಮತ್ತು ರೆಕ್ಲೈನಿಂಗ್ ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ಗಳನ್ನು ಸಹ ನೀಡುತ್ತದೆ. ಕಿಯಾವು ಎರಡು ಸಿಂಗಲ್ ಪೇನ್ ಸನ್‌ರೂಫ್‌ಗಳು, 3-ಜೋನ್ ಆಟೋ ಎಸಿ, ಚಾಲಿತ ಟೈಲ್‌ಗೇಟ್ ಮತ್ತು 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್‌ನೊಂದಿಗೆ ಕಾರ್ನಿವಲ್ ಅನ್ನು ಸಹ ನೀಡುತ್ತಿದೆ.

ಸುರಕ್ಷತೆಗಾಗಿ, ಕಾರ್ನಿವಲ್ 8 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ನೊಂದಿಗೆ ಬರುತ್ತದೆ. ಇದು ಮುಂಭಾಗದ ಘರ್ಷಣೆ ಎಚ್ಚರಿಕೆ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಸಹ ಪಡೆಯುತ್ತದೆ.

ಇದನ್ನೂ ಸಹ ಓದಿ: ಏನಿದು MG ವಿಂಡ್ಸರ್ EV ಯ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ರೆಂಟಲ್ ಪ್ರೋಗ್ರಾಮ್? ಇನ್ನಷ್ಟು ವಿವರ ಇಲ್ಲಿದೆ

ಪವರ್‌ಟ್ರೈನ್‌ ಆಯ್ಕೆಗಳು

2024ರ ಕಿಯಾ ಕಾರ್ನಿವಲ್ ಒಂದೇ ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುತ್ತದೆ. ವಿಶೇಷಣಗಳು ಈ ಕೆಳಗಿನಂತಿವೆ:

2024ರ ಕಿಯಾ ಕಾರ್ನಿವಲ್‌

ಎಂಜಿನ್‌

2.2-ಲೀಟರ್‌ ಡೀಸೆಲ್‌

ಪವರ್‌

192 ಪಿಎಸ್‌

ಟಾರ್ಕ್‌

441 ಎನ್‌ಎಮ್‌

ಗೇರ್‌ಬಾಕ್ಸ್‌

8-ಸ್ಪೀಡ್‌ ಆಟೋಮ್ಯಾಟಿಕ್‌

2023 ರಲ್ಲಿ ಸ್ಥಗಿತಗೊಂಡ ಎರಡನೇ ಜನರೇಶನ್‌ನ ಮೊಡೆಲ್‌ನಲ್ಲಿ ನೀಡಲಾದ ಅದೇ ಎಂಜಿನ್ ಇದಾಗಿದೆ. ಅಂತರಾಷ್ಟ್ರೀಯ-ಸ್ಪೆಕ್ ಕಿಯಾ ಕಾರ್ನಿವಲ್ 3.5-ಲೀಟರ್ ವಿ6 ಪೆಟ್ರೋಲ್ (287 ಪಿಎಸ್‌/353 ಎನ್‌ಎಮ್‌) ಮತ್ತು 1.6-ಲೀಟರ್ ಪೆಟ್ರೋಲ್-ಹೈಬ್ರಿಡ್ (242 ಪಿಎಸ್‌/367 ಎನ್‌ಎಮ್‌) ಸೇರಿದಂತೆ ಹಲವಾರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ.

ದುಬಾರಿ ಅನಿಸುವ ಬೆಲೆ

2024ರ ಕಿಯಾ ಕಾರ್ನಿವಲ್‌ನ ಬೆಲೆಗಳು ಸುಮಾರು 40 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಮಾರುತಿ ಇನ್ವಿಕ್ಟೊದಂತಹ ಮೊಡೆಲ್‌ಗಳಿಗೆ ಪ್ರೀಮಿಯಂ ಪರ್ಯಾಯವಾಗಿದೆ. ಹೆಚ್ಚುವರಿಯಾಗಿ, ಟೊಯೊಟಾ ವೆಲ್‌ಫೈರ್ ಮತ್ತು ಲೆಕ್ಸಸ್ ಎಲ್‌ಎಂಗೆ ಹೋಲಿಸಿದರೆ ಇದು ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ.

2024 ರ ಕಿಯಾ ಕಾರ್ನಿವಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ವಾಹನ ಪ್ರಪಂಚದಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್‌ ಚಾನಲ್ ಅನ್ನು ಅನುಸರಿಸಿ.

d
ಅವರಿಂದ ಪ್ರಕಟಿಸಲಾಗಿದೆ

dipan

  • 33 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Kia ಕಾರ್ನಿವಲ್

ಪೋಸ್ಟ್ ಕಾಮೆಂಟ್
2 ಕಾಮೆಂಟ್ಗಳು
S
suhas
Sep 18, 2024, 12:43:03 PM

Compared to vellfire anything is cheap. But 50 lakhs is too high for Kia.

D
dr chiranjeevi manohar
Sep 17, 2024, 4:23:01 PM

Overall good.What about it's safety features

Read Full News

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ