ಏನಿದು MG ವಿಂಡ್ಸರ್ EV ಯ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ರೆಂಟಲ್ ಪ್ರೋಗ್ರಾಮ್? ಇನ್ನಷ್ಟು ವಿವರ ಇಲ್ಲಿದೆ
ಎಂಜಿ ವಿಂಡ್ಸರ್ ಇವಿ ಗಾಗಿ anonymous ಮೂಲಕ ಸೆಪ್ಟೆಂಬರ್ 12, 2024 09:02 pm ರಂದು ಪ್ರಕಟಿಸಲಾಗಿದೆ
- 40 Views
- ಕಾಮೆಂಟ್ ಅನ್ನು ಬರೆಯಿರಿ
ವಿಂಡ್ಸರ್ EV ಬೆಲೆಯು ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವುದಿಲ್ಲ. ಬ್ಯಾಟರಿಯನ್ನು ಬಳಸುವುದಕ್ಕಾಗಿ ನೀವು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ, ಮತ್ತು ಅದರ ಬಗ್ಗೆ ನಾವು ಇಲ್ಲಿ ವಿವರವಾಗಿ ತಿಳಿಸಿದ್ದೇವೆ
MG ವಿಂಡ್ಸರ್ EV ಅನ್ನು ಭಾರತದಲ್ಲಿ ರೂ 9.99 ಲಕ್ಷ ಬೆಲೆಗೆ ಬಿಡುಗಡೆ ಮಾಡಲಾಗಿದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ). ಇದರ ಬೆಲೆಯು ಟಾಟಾ ಪಂಚ್ EV ಯಂತೆಯೇ ಇದೆ, ಆದರೆ ಅದರ ಫೀಚರ್ ಗಳು ಮತ್ತು ಸ್ಪೆಸಿಫಿಕೇಷನ್ ಗಳು ಇದನ್ನು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 ಗೆ ಪ್ರತಿಸ್ಪರ್ಧಿಯನ್ನಾಗಿ ಮಾಡುತ್ತದೆ. "ಬ್ಯಾಟರಿ-ಆಸ್-ಎ-ಸರ್ವಿಸ್" ಎಂಬ ವಿಶೇಷ ರೆಂಟಲ್ ಪ್ರೋಗ್ರಾಮ್ ಅನ್ನು ನೀಡುವ ಮೂಲಕ MG ತನ್ನ ವಿಂಡ್ಸರ್ EV ಯ ಬೆಲೆಯನ್ನು ಕಡಿಮೆ ಮಾಡಿದೆ.
ಏನಿದು ಬ್ಯಾಟರಿ-ಆಸ್-ಎ-ಸರ್ವಿಸ್? ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ:
MG ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ವಿವರ
-
ಕಾರಿನೊಂದಿಗೆ ಬ್ಯಾಟರಿ ಪ್ಯಾಕ್‌ನ ಬೆಲೆಯನ್ನು ಸೇರಿಸದೆ MG ಇಲ್ಲಿ ವಿಂಡ್ಸರ್ EV ಯ ಬೆಲೆಯನ್ನು ಕಡಿಮೆ ಮಾಡಿದೆ.
-
ಬ್ಯಾಟರಿ ಪ್ಯಾಕ್ ಬಳಸಿ ನೀವು ಓಡಿಸುವ ಪ್ರತಿ ಕಿಲೋಮೀಟರ್‌ಗೆ ನೀವು 3.5 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
-
ಈ ಸರ್ವಿಸ್ ನಿಮ್ಮ ಮನೆಗೆ RO ಪ್ಯೂರಿಫೈಯರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ರೀತಿಗೆ ಹೋಲುತ್ತದೆ. ನೀವು ಮಷೀನ್ ಅನ್ನು ಖರೀದಿಸುವುದಿಲ್ಲ; ಬದಲಾಗಿ, ಅದರ ಬಳಕೆಯ ಮೇಲೆ ಹಣ ಪಾವತಿಸುತ್ತೀರಿ.
-
ಇದರಿಂದ ಸಿಗುವ ಪ್ರಯೋಜನವೆಂದರೆ ನೀವು ಇತರ ಎಲೆಕ್ಟ್ರಿಕ್ ಕಾರುಗಳಿಗಿಂತ ಕಡಿಮೆ ಬೆಲೆಗೆ ವಾಹನವನ್ನು ಖರೀದಿಸಬಹುದು.
-
ಆದರೆ ನೀವು ಬ್ಯಾಟರಿ ಪ್ಯಾಕ್ ಅನ್ನು ಬಳಸುವುದಕ್ಕಾಗಿ ಹಣ ಪಾವತಿಸಬೇಕಾಗುತ್ತದೆ.
-
ಗ್ರಾಹಕರು ಬ್ಯಾಟರಿ ಪ್ಯಾಕ್ ಅನ್ನು ಕನಿಷ್ಠ 1,500 ಕಿಮೀ ರೀಚಾರ್ಜ್ ಮಾಡಬೇಕಾಗುತ್ತದೆ, ಇದರ ಬೆಲೆ ರೂ. 5,250 ಆಗುತ್ತದೆ (ಪ್ರತಿ ಕಿ.ಮೀ.ಗೆ ರೂ. 3.5 x 1,500 ಕಿ.ಮೀ).
-
ಆದರೆ, ನೀವು ಬ್ಯಾಟರಿ ಬಾಡಿಗೆ ಶುಲ್ಕದ ಜೊತೆಗೆ ಪ್ರತ್ಯೇಕವಾಗಿ ಚಾರ್ಜಿಂಗ್ ವೆಚ್ಚವನ್ನು ಕೂಡ ಪಾವತಿಸಬೇಕಾಗುತ್ತದೆ.
-
MG ತನ್ನ ಸ್ವಂತ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಮೊದಲ ಕೆಲವು ಗ್ರಾಹಕರಿಗೆ ಒಂದು ವರ್ಷದವರೆಗೆ ಉಚಿತ ಫಾಸ್ಟ್ ಚಾರ್ಜಿಂಗ್ ಅನ್ನು ನೀಡಿ ಹೆಚ್ಚುವರಿ ಚಾರ್ಜಿಂಗ್ ವೆಚ್ಚಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ. ಈ ಕೊಡುಗೆಯು ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
-
ಕಾರು ತಯಾರಕರು ಮೊದಲ ಮಾಲೀಕರಿಗೆ ಲೈಫ್ ಟೈಮ್ ವಾರಂಟಿಯನ್ನು ಒದಗಿಸುತ್ತಾರೆ. ಆದರೆ, ನೀವು ಕಾರನ್ನು ಮಾರಾಟ ಮಾಡಿದರೆ, ವಾರಂಟಿಯು 8 ವರ್ಷಗಳು ಅಥವಾ 160,000 ಕಿಮೀಗೆ (ಇದರಲ್ಲಿ ಯಾವುದು ಮೊದಲು) ಬದಲಾಗುತ್ತದೆ.
ಇದನ್ನು ಕೂಡ ಓದಿ ಓದಿ: MG ವಿಂಡ್ಸರ್ EV: ಯಾವಾಗ ಮಾಡಬಹುದು ಟೆಸ್ಟ್ ಡ್ರೈವ್? ಬುಕಿಂಗ್ ಮತ್ತು ಡೆಲಿವರಿ ಯಾವಾಗ? ಇಲ್ಲಿದೆ ಎಲ್ಲಾ ವಿವರಗಳು
MG ವಿಂಡ್ಸರ್ EV: ಒಂದು ಸಣ್ಣ ಪರಿಚಯ
ವಿಂಡ್ಸರ್ EVಯು ಕಾಮೆಟ್ EV ಮತ್ತು ZS EV ನಂತರ MG ಮೋಟಾರ್ ಇಂಡಿಯಾದ ಮೂರನೇ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಕನೆಕ್ಟೆಡ್ LED ಲೈಟ್ ಗಳು ಮತ್ತು ಸರಳವಾದ, ಸ್ಟೈಲಿಶ್ ಡಿಸೈನ್ ನೊಂದಿಗೆ ಆಧುನಿಕ ಲುಕ್ ಅನ್ನು ಹೊಂದಿದೆ. ಇತರ ಪ್ರಮುಖ ಫೀಚರ್ ಗಳಲ್ಲಿ 18-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ ಗಳು ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಸೇರಿವೆ.
ಕ್ಯಾಬಿನ್ ನಲ್ಲಿ, ವಿಂಡ್ಸರ್ EV ಎರಡು ಸ್ಕ್ರೀನ್ ಗಳೊಂದಿಗೆ ಸರಳವಾಗಿರುವ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ: 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ. ಒಳಭಾಗವು ಸಾಕಷ್ಟು ಕಾಂಟ್ರಾಸ್ಟ್ ಆಗಿರುವ ಕಾಪರ್ ಕಲರ್ ಎಲಿಮೆಂಟ್ ಗಳೊಂದಿಗೆ ಬ್ಲಾಕ್ ಫಿನಿಷ್ ಅನ್ನು ಪಡೆಯುತ್ತದೆ. ಹಿಂಭಾಗದ ಸೀಟ್ ಗಳನ್ನು 135 ಡಿಗ್ರಿಗಳವರೆಗೆ ರಿಕ್ಲೈನ್ ಮಾಡುವ ಸಾಮರ್ಥ್ಯದೊಂದಿಗೆ ಆರಾಮವಾಗಿ ಕುಳಿತುಕೊಳ್ಳಲು ಡಿಸೈನ್ ಮಾಡಲಾಗಿದೆ.
ವಿಂಡ್ಸರ್ EVಯು ಮೇಲೆ ತಿಳಿಸಲಾದ ಸ್ಕ್ರೀನ್ ಗಳು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 256-ಕಲರ್ ಇರುವ ಆಂಬಿಯೆಂಟ್ ಲೈಟಿಂಗ್, ಪನರೋಮಿಕ್ ಗ್ಲಾಸ್ ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳಂತಹ ಫೀಚರ್ ಗಳನ್ನು ಪಡೆಯುತ್ತದೆ. ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ನೀಡಲಾಗಿದೆ.
MG ವಿಂಡ್ಸರ್ EV: ಪವರ್‌ಟ್ರೇನ್ ಆಯ್ಕೆ
MG ವಿಂಡ್ಸರ್ EV ಯ ಸ್ಪೆಸಿಫಿಕೇಷನ್ ಗಳ ವಿವರ ಇಲ್ಲಿವೆ:
ಪ್ಯಾರಾಮೀಟರ್ ಗಳು |
MG ವಿಂಡ್ಸರ್ EV |
ಪವರ್ |
136 PS |
ಟಾರ್ಕ್ |
200 Nm |
ಬ್ಯಾಟರಿ ಪ್ಯಾಕ್ |
38 kWh |
MIDC ಕ್ಲೇಮ್ ಮಾಡಿರುವ ರೇಂಜ್ |
331 ಕಿ.ಮೀ |
10 ರಿಂದ 80 ಪ್ರತಿಶತದಷ್ಟು (50 kW) ಸ್ಪೀಡ್ ಚಾರ್ಜಿಂಗ್ |
55 ನಿಮಿಷಗಳು |
MG ವಿಂಡ್ಸರ್ EV: ಪ್ರತಿಸ್ಪರ್ಧಿಗಳು
MG ವಿಂಡ್ಸರ್ EV ಆರಂಭಿಕ ಬೆಲೆಯು ಇದನ್ನು ಟಾಟಾ ಪಂಚ್ EV ಗೆ ಪ್ರತಿಸ್ಪರ್ಧಿಯಾಗಿ ಮಾಡುತ್ತದೆ. ಆದರೆ ಇದರ ಸ್ಪೆಸಿಫಿಕೇಷನ್ ಗಳು ಮತ್ತು ಫೀಚರ್ ಗಳು ಇದನ್ನು ಮಹೀಂದ್ರಾ XUV400 ಮತ್ತು ಟಾಟಾ ನೆಕ್ಸಾನ್ EV ಗೆ ಪರ್ಯಾಯ ಆಯ್ಕೆಯಾಗಿ ಮಾಡುತ್ತದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ವಿಂಡ್ಸರ್ EV ಆಟೋಮ್ಯಾಟಿಕ್