ಜುಲೈ ತಿಂಗಳ ಬಿಡುಗಡೆಗೆ ಮೊದಲೇ ಮತ್ತೆ ಕಾಣಿಸಿಕೊಂಡ 2024ರ Nissan X-Trail
ಜುಲೈ 09, 2024 06:01 pm dipan ಮೂಲಕ ಮಾರ್ಪಡಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಈ ಟೀಸರ್ ಗಳಲ್ಲಿ, ಮುಂಬರುವ ಈ ಫುಲ್ ಸೈಜ್ ಎಸ್‌ಯುವಿಯ ಹೆಡ್ ಲೈಟ್, ಫ್ರಂಟ್ ಗ್ರಿಲ್, ಅಲೋಯ್ ವೀಲ್ ಗಳು ಮತ್ತು ಟೇಲ್ ಲೈಟ್ ಗಳು ಕಾಣಿಸಿಕೊಂಡಿವೆ
- 2024 ನಿಸಾನ್ ಎಕ್ಸ್-ಟ್ರೇಲ್ ವಾಹನವು ಭಾರತದಲ್ಲಿ ಮತ್ತೆ ಅಧಿಕೃತವಾಗಿ ಬಹಿರಂಗಗೊಂಡಿದೆ.
- ಹೊಸ ಟೀಸರ್ ನಲ್ಲಿ ಈ ಫುಲ್ ಸೈಜ್ SUV ಯ ಪ್ರಮುಖ ವಿನ್ಯಾಸಗಳನ್ನು ತೋರಿಸಲಾಗಿದೆ.
- ಒಳಾಂಗಣಗಳು ಅಂತರಾಷ್ಟ್ರೀಯ ಮಾದರಿಯಂತೆಯೇ ಇರುವ ನಿರೀಕ್ಷೆ ಇದ್ದು, 12.3 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಂ, ಪ್ಯಾನೊರಾಮಿಕ್ ಸನ್ ರೂಫ್ ಮತ್ತು 12 ಸ್ಪೀಕರ್ ಸೌಂಡ್ ಸಿಸ್ಟಂ ಅನ್ನು ಇದು ಒಳಗೊಂಡಿದೆ.
- ಪವರ್ ಟ್ರೇನ್ ಆಯ್ಕೆಗಳಲ್ಲಿ 12V ಮೈಲ್ಡ್ ಹೈಬ್ರಿಡ್ ಟೆಕ್ ಜೊತೆಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಒಳಗೊಂಡಿದೆ.
- 2024 X-ಟ್ರೇಲ್ SUV ಯು ರೂ. 40 ಲಕ್ಷಕ್ಕೆ (ಎಕ್ಸ್-ಶೋರೂಂ) ದೊರೆಯುವ ಸಾಧ್ಯತೆ ಇದೆ.
ನಾಲ್ಕನೇ ತಲೆಮಾರಿನ ನಿಸಾನ್ X-ಟ್ರೇಲ್l SUVಯು ಭಾರತದ ಮಾರುಕಟ್ಟೆಯಲ್ಲಿ ನಿಸಾನ್ ಸಂಸ್ಥೆಯ ಹೊಚ್ಚ ಹೊಸ ವಾಹನವೆನಿಸಲಿದೆ ಎನ್ನುವುದು ಹೊಸ ವಿಷಯವೇನಲ್ಲ. ಜಪಾನಿನ ಈ ಕಾರು ತಯಾರಕ ಸಂಸ್ಥೆಯು, ಈ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿರುವ ಫುಲ್ ಸೈಜ್ SUV ಯ ಇನ್ನೊಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಈ ಟೀಸರ್ ನಲ್ಲಿ ನಾವು ಏನೆಲ್ಲ ಗಮನಿಸಿದ್ದೇವೆ ಎಂಬುದನ್ನು ನೋಡೋಣ:
ಟೀಸರ್ ನಲ್ಲಿ ನಮಗೆ ಏನೆಲ್ಲ ಕಾಣಲು ಸಿಕ್ಕಿದೆ?
ನಿಸಾನ್ ಎಕ್ಸ್-ಟ್ರೇಲ್ ಕಾರಿನ ಹೊಸ ಟೀಸರ್ ನಲ್ಲಿ ಸ್ಪ್ಲಿಟ್ ಸ್ಟೈಲ್ LED ಹೆಡ್ ಲೈಟುಗಳು ಮತ್ತು ಕ್ರೋಮ್ ಸ್ಲಾಟ್ ಗಳೊಂದಿಗೆ U ಆಕಾರದ ಗ್ರಿಲ್ ಗಳು ಮತ್ತು ಎರಡೂ ಕಡೆಗಳಲ್ಲಿ ಇದರ ಅಂಚುಗಳ ಉದ್ದಕ್ಕೂ ಅಥವಾ ಕೆಳಗಡೆಯಲ್ಲಿ ಕ್ರೋಮ್ ಬಾರ್ ಅನ್ನು ಕಾಣಬಹುದು.


ಅಲ್ಲದೆ ಈ ಫುಲ್ ಸೈಜ್ SUVಯ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು, ಮತ್ತು LED ಟೇಲ್ ಲೈಟ್ ಗಳನ್ನು ಸಹ ಈ ಟೀಸರ್ ನಲ್ಲಿ ಕಂಡುಬಂದಿವೆ. ಸಾಮಾನ್ಯವಾಗಿ ಆಧುನಿಕ ಕಾಲದ ಕಾರುಗಳಲ್ಲಿ ಟೇಲ್ ಲೈಟ್ ಗಳು ಸಂಪರ್ಕಿತ ವಿನ್ಯಾಸವು ಕಂಡುಬರುವುದಿಲ್ಲ.


ಅದರೆ ಒಳಾಂಗಣ ಮತ್ತು ಪವರ್ ಟ್ರೇನ್ ಆಯ್ಕೆಗಳು ಇನ್ನೂ ಸಹ ಬಹಿರಂಗಗೊಂಡಿಲ್ಲ. ಆದರೆ ಅವೂ ಸಹ ಅಂತರಾಷ್ಟ್ರೀಯ ಮಾದರಿಯಲ್ಲಿ ಇರುವಂತೆಯೇ ಇರುವ ಸಾಧ್ಯತೆ ಇದೆ.
ನಿರೀಕ್ಷಿತ ಒಳಾಂಗಣ, ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ನಿಸಾನ್ ಎಕ್ಸ್-ಟ್ರೇಲ್ ವಾಹನವು ಲೆದರೆಟ್ ಅಫೋಲ್ಸ್ಟರಿಯ ಜೊತೆಗೆ ಡ್ಯುವಲ್ ಟೋನ್ ಬ್ಲ್ಯಾಕ್ ಮತ್ತು ಟ್ಯಾನ್ ಇಂಟೀರಿಯರ್ ಆಯ್ಕೆಯನ್ನು ಹೊಂದಿರಲಿದೆ. ಡ್ಯಾಶ್ ಬೋರ್ಡಿನಲ್ಲಿ ವೈರ್ ಲೆಸ್ ಅಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಹಾಗೂ 10.8 ಇಂಚಿನ ಹೆಡ್ಸ್ ಅಪ್ ಡಿಸ್ಪ್ಲೇಯ ಜೊತೆಗೆ 12.3 ಇಂಚಿನ ಎರಡು ಸ್ಕ್ರೀನ್ ಗಳು (ಚಾಲಕನ ಡಿಸ್ಪ್ಲೇಗಾಗಿ ಒಂದು ಮತ್ತು ಇನ್ಫೋಟೈನ್ ಮೆಂಟ್ ಸಿಸ್ಟಂಗಾಗಿ ಇನ್ನೊಂದು) ಇರಲಿವೆ. ತ್ರೀ ಝೋನ್ ಕ್ಲೈಮೇಟ್ ಕಂಟ್ರೋಲ್, ಪ್ಯಾನೊರಾಮಿಕ್ ಸನ್ ರೂಫ್, ಮೆಮೊರಿ ಫಂಕ್ಷನ್ ಜೊತೆಗೆ ಹೀಟೆಡ್ ಅಂಡ್ ಪವರ್ಡ್ ಫ್ರಂಟ್ ಸೀಟುಗಳು, 10 ಸ್ಪೀಕರ್ ಪ್ರೀಮಿಯಂ ಬೋಸ್ ಸರೌಂಡ್ ಸೌಂಡ್ ಸಿಸ್ಟಂ ಇತ್ಯಾದಿ ಇತರ ವಿಶೇಷತೆಗಳನ್ನು ಸಹ ಈ ವಾಹನದಲ್ಲಿ ಕಾಣಬಹುದು.
ಇದರ ಸುರಕ್ಷತಾ ಪಟ್ಟಿಯಲ್ಲಿ ಅನೇಕ ಏರ್ ಬ್ಯಾಗ್ ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಫ್ರಂಟ್ ಕೊಲಿಶನ್ ವಾರ್ನಿಂಗ್ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು 360 ಡಿಗ್ರಿ ಕ್ಯಾಮರಾವನ್ನು ಒಳಗೊಂಡಿರುವ ಅಡ್ವಾನ್ಸ್ಡ್ ಡ್ರೈವರ್ - ಅಸಿಸ್ಟೆನ್ಸ್ ಸಿಸ್ಟಂ (ADAS) ಸೂಟ್ ಇತ್ಯಾದಿಗಳು ಒಳಗೊಂಡಿವೆ.
ಎಂಜಿನ್ ಮತ್ತು ಪವರ್ ಟ್ರೇನ್
ಜಾಗತಿಕವಾಗಿ, ನಿಸಾನ್ ಎಕ್ಸ್-ಟ್ರೇಲ್ ವಾಹನವು 12V ಟೆಕ್ ಜೊತೆಗೆ 1.5 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಬರುತ್ತದೆ. ಇದು ಟು-ವೀಲ್-ಡ್ರೈವ್ (2WD) ಮತ್ತು ಫೋರ್-ವೀಲ್-ಡ್ರೈವ್ (4WD) ಎರಡರಲ್ಲೂ ಲಭ್ಯ. ಹೆಚ್ಚಿನ ವಿವರಗಳು ಇಲ್ಲಿವೆ:
ಎಂಜಿನ್ ವಿವರಗಳು |
ನಿಸಾನ್ ಎಕ್ಸ್-ಟ್ರೇಲ್ |
|
ಎಂಜಿನ್ |
12V ಜತೆಗೆ 1.5 ಲೀಟರ್ ಟರ್ಬೊ ಪೆಟ್ರೋಲ್ |
|
ಡ್ರೈವ್ ಟ್ರೇನ್ |
2WD |
4WD |
ಪವರ್ |
204 PS |
213 PS |
ಟಾರ್ಕ್ |
330 Nm |
495 Nm |
ಟ್ರಾನ್ಸ್ ಮಿಶನ್ |
8-ಸ್ಪೀಡ್ CVT ಅಟೋಮ್ಯಾಟಿಕ್ |
8-ಸ್ಪೀಡ್ CVT ಅಟೋಮ್ಯಾಟಿಕ್ |
ಭಾರತದಲ್ಲಿ ರಸ್ತೆಗಿಳಿಯಲಿರುವ ಮಾದರಿಯ ವಿವರಗಳು ಮುಂಬರುವ ದಿನಗಳಲ್ಲಿ ಬಹಿರಂಗಗೊಳ್ಳಲಿವೆ. ಆದರೆ ಇಲ್ಲಿನ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಗಮನಿಸಿದರೆ, ನಿಸಾನ್ ಸಂಸ್ಥೆಯು ಈ SUVಯನ್ನು ̄̄̄̄2WD ಮತ್ತು 4WD ಕಾನ್ಫಿಗರೇಶನ್ ಗಳೆರಡರಲ್ಲೂ ಹೊರತರುವ ಸಾಧ್ಯತೆಗಳು ಹೆಚ್ಚು.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಹೊಸ ನಿಸಾನ್ ಎಕ್ಸ್-ಟ್ರೇಲ್ ವಾಹನವನ್ನು 2024ರ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 40 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಟೊಯೊಟಾ ಫಾರ್ಚುನರ್, MG ಗ್ಲೋಸ್ಟರ್, ಸ್ಕೋಡಾ ಕೊಡಿಯಾಕ್, ಮತ್ತು ಜೀಪ್ ಮೆರಿಡಿಯನ್ ಜೊತೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಅಟೋಮೋಟಿವ್ ಪ್ರಪಂಚದ ಕುರಿತು ನಿಮಗೆ ಕ್ಷಣ ಕ್ಷಣದ ಮಾಹಿತಿ ಬೇಕೇ? ಕಾರ್ ದೇಖೊ ವಾಟ್ಸಪ್ ಚಾನಲ್ ಅನ್ನು ಫಾಲೋ ಮಾಡಿ