ಪಾದಾರ್ಪಣೆಗಿಂತ ಮೊದಲೇ ಆನ್‌ಲೈನ್‌ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು
ರೆನಾಲ್ಟ್ ಡಸ್ಟರ್ 2025 ಗಾಗಿ rohit ಮೂಲಕ ನವೆಂಬರ್ 29, 2023 11:50 am ರಂದು ಪ್ರಕಟಿಸಲಾಗಿದೆ
- 41 Views
- ಕಾಮೆಂಟ್ ಅನ್ನು ಬರೆಯಿರಿ
ಮೂರನೇ ಪೀಳಿಗೆಯ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದರ ಬೆಲೆಗಳು ಸುಮಾರು 10 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ
- ರೆನಾಲ್ಟ್‌ನ ಬಜೆಟ್ ಆಧಾರಿತ ಜಾಗತಿಕ ಬ್ರ್ಯಾಂಡ್, ಡೇಸಿಯಾ, ನವೆಂಬರ್ 29 ರಂದು ಹೊಸ ಡಸ್ಟರ್ ಅನ್ನು ಅನಾವರಣಗೊಳಿಸಲಿದೆ.
- Y-ಆಕಾರದ ಎಲ್ಇಡಿ DRLಗಳು ಮತ್ತು ಸ್ಲಿಮ್ಮರ್ ಗ್ರಿಲ್ ಸೇರಿದಂತೆ ಬಿಗ್‍ಸ್ಟರ್ ಪರಿಕಲ್ಪನೆಯ ವಿನ್ಯಾಸ ಸಾಮ್ಯತೆಗಳನ್ನು ಹೊಂದುವ ಸಾಧ್ಯತೆಯಿದೆ.
- ಮಲ್ಟಿಪಲ್ ಡಿಸ್‌ಪ್ಲೇಗಳು, ವೆಂಟಿಲೇಟೆಡ್ ಸೀಟ್‌ಗಳು ಮತ್ತು ADAS ನಂತಹ ಫೀಚರ್‌ಗಳನ್ನು ಇದರಲ್ಲಿ ಒದಗಿಸಬಹುದು.
- ಅಂತರರಾಷ್ಟ್ರೀಯ-ಸ್ಪೆಕ್ ಮಾಡೆಲ್ ಮೂರು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ; ಇಂಡಿಯಾ-ಸ್ಪೆಕ್ ಪವರ್‌ಟ್ರೇನ್ ವಿವರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
- ಭಾರತದಲ್ಲಿ ಮೊದಲ ಪೀಳಿಗೆಯ ರೆನಾಲ್ಟ್ ಡಸ್ಟರ್ ಅನ್ನು ಮಾತ್ರ ಪರಿಚಯಿಸಲಾಗಿದೆ; ಇದನ್ನು 2022 ರ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು.
ಅಕ್ಟೋಬರ್ 2023 ರ ಅಂತ್ಯದ ವೇಳೆಗೆ ಮೂರನೇ-ಪೀಳಿಗೆಯ ರೆನಾಲ್ಟ್ ಡಸ್ಟರ್ ಅನ್ನು ನವೆಂಬರ್ 29 ರಂದು ಅನಾವರಣಗೊಳಿಸಲಾಗುವುದು ಎಂದು ದೃಢೀಕರಿಸಲಾಗಿದೆ. ರೆನಾಲ್ಟ್‌ನ ಅಂಗಸಂಸ್ಥೆ ಡೇಸಿಯಾ ಈ ಎಸ್‌ಯುವಿ ಕಾರನ್ನು ಪೋರ್ಚುಗಲ್‌ನಲ್ಲಿ ಅನಾವರಣಗೊಳಿಸಲಿದೆ, ಆದರೆ ಅದಕ್ಕೂ ಮೊದಲು ಹೊಸ ಡಸ್ಟರ್‌ನ ಫೋಟೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ರೆನಾಲ್ಟ್ 2012 ರಿಂದ ಭಾರತದಲ್ಲಿ ಮೊದಲ-ಜೆನ್ ಡಸ್ಟರ್ ಅನ್ನು ಮಾತ್ರ ನೀಡಿತು ಮತ್ತು 2022 ರ ಆರಂಭದಲ್ಲಿ ಅದನ್ನು ಸ್ಥಗಿತಗೊಳಿಸಿತು. ಇದು ಭಾರತದಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಂಪನಿಯ ಮೊದಲ ಮಾಡೆಲ್ ಆಗಿದೆ.
ಅದು ಹೊರಗಿನಿಂದ ಹೇಗೆ ಕಾಣಿಸುತ್ತದೆ?
ಈ ಎಸ್‌ಯುವಿಯ ಹೊರಭಾಗದ ಪ್ರೊಫೈಲ್ ಸೋರಿಕೆಯಾದ ಟೀಸರ್‌ನಲ್ಲಿ ಗೋಚರಿಸುತ್ತದೆ ಮತ್ತು ಅದನ್ನು ಗಮನಿಸಿದಾಗ, ಅದರ ವಿನ್ಯಾಸವು ಬಿಗ್‌ಸ್ಟರ್ ಪರಿಕಲ್ಪನೆಯಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಕಂಪನಿಯ ಇತ್ತೀಚಿನ ವಿನ್ಯಾಸ ಥೀಮ್‌ನೊಂದಿಗೆ ಹೊಸ ಡಸ್ಟರ್‌ನಲ್ಲಿ ಬಾಕ್ಸ್ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ. ಮುಂಭಾಗದಲ್ಲಿ, ಇದು Y-ಆಕಾರದ ಎಲ್‌ಇಡಿ DRL ಗಳೊಂದಿಗೆ ಸ್ಲಿಮ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಮತ್ತು ಫಾಗ್ ಲ್ಯಾಂಪ್‌ಗಳೊಂದಿಗೆ ದೊಡ್ಡದಾದ ಏರ್ ಡ್ಯಾಮ್ ಅನ್ನು ಹೊಂದಿದೆ.
ಇದರ ಪ್ರೊಫೈಲ್ ಸ್ಕ್ವೇರ್ಡ್ ಆಫ್ ವ್ಹೀಲ್ ಆರ್ಚ್‌ಗಳು, ರೂಫ್ ರೈಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಶಕ್ತಿಯುತ ನೋಟವನ್ನು ಒದಗಿಸಲು, ಸುತ್ತಲೂ ಬಾಡಿ ಕ್ಲಾಡಿಂಗ್ ಅನ್ನು ಬಳಸಲಾಗಿದೆ. ಇದರ ಹಿಂಭಾಗದ ಸ್ಕೀಡ್ ಪ್ಲೇಟ್ ಸಾಕಷ್ಟು ದೊಡ್ಡದಾಗಿದೆ ಮತ್ತು ಇದು Y-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ.
ಕ್ಯಾಬಿನ್ ಮತ್ತು ಫೀಚರ್‌ಗಳು
ಟೀಸರ್ ಹೊಸ ಡಸ್ಟರ್ ಕ್ಯಾಬಿನ್ ಅನ್ನು ವಿವರವಾಗಿ ತೋರಿಸದಿದ್ದರೂ, ನಮಗೆ ಅದರ ನೋಟ ಲಭ್ಯವಾಗಿದ್ದು ಅದರಲ್ಲಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಕಂಡುಬಂದಿದೆ. ಇತರ ನಿರೀಕ್ಷಿತ ಫೀಚರ್‌ಗಳಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ವಿಹಂಗಮ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿವೆ.
ಪ್ರಯಾಣಿಕರ ಸುರಕ್ಷತೆಗಾಗಿ, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಫೀಚರ್‌ಗಳನ್ನು ಇದರಲ್ಲಿ ಒದಗಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಹೊಸ ಕಾರು ಖರೀದಿಯ ಎಲ್ಲಾ ಅನುಕೂಲಗಳು ಮತ್ತು ಅನಾನುಕೂಲಗಳು
ಪ್ಲಾಟ್‌ಫಾರ್ಮ್ ಮತ್ತು ಪವರ್‌ಟ್ರೇನ್ ವಿವರಗಳು
ಮೂರನೇ-ಪೀಳಿಗೆಯ ಡಸ್ಟರ್ ಅನ್ನು ಯುರೋಪ್‌ನಲ್ಲಿ ಲಭ್ಯವಿರುವ ಎರಡನೇ ಪೀಳಿಗೆಯ ಕ್ಯಾಪ್ಚರ್‌ಗೆ ಆಧಾರವಾಗಿರುವ ಹೊಸ CMF-B ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ತಯಾರಿಸಲಾಗುವುದು. ಈ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ತಯಾರಿಸಲಾದ ಕಾರುಗಳು ಅಂತರ್ದಹನ ಎಂಜಿನ್ (ICE) ಮತ್ತು EV ಪವರ್‌ಟ್ರೇನ್‌ಗಳನ್ನು ಬೆಂಬಲಿಸುತ್ತವೆ. ಹೊಸ ಡಸ್ಟರ್ 110 PS 1--ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, 1.2-ಲೀಟರ್ ಹೈಬ್ರಿಡ್ ಎಂಜಿನ್ (120 PS ಮತ್ತು 140 PS ನಡುವೆ), ಮತ್ತು 170 PS 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಎಂಬ ಮೂರು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಡಸ್ಟರ್‌ನಲ್ಲಿ ಈ ಎಂಜಿನ್‌ಗಳನ್ನು ಒದಗಿಸಲಾಗುವುದು, ಈಗ ಕಂಪನಿಯು ತನ್ನ ಭಾರತೀಯ ಮಾಡೆಲ್‌ನಲ್ಲಿ ಯಾವ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತದೆ ಎಂಬುದನ್ನು ಕಾದು ತಿಳಿದುಕೊಳ್ಳಬೇಕಾಗಿದೆ.
ಬಿಡುಗಡೆ ಮತ್ತು ಬೆಲೆ
ಮೂರನೇ ಪೀಳಿಗೆಯ ರೆನಾಲ್ಟ್ ಡಸ್ಟರ್ 2025 ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು ಅದರ ಬೆಲೆ ರೂ.10 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). ಇದು ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, MG ಆಸ್ಟರ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್ ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧಿಸಲಿದೆ.