2023 ರ ನವೆಂಬರ್‌ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ
ಸ್ಕೋಡಾ ಸ್ಕೋಡಾ ಕುಶಾಕ್ ಗಾಗಿ shreyash ಮೂಲಕ ಡಿಸೆಂಬರ್ 02, 2023 08:57 am ರಂದು ಪ್ರಕಟಿಸಲಾಗಿದೆ
- 82 Views
- ಕಾಮೆಂಟ್ ಅನ್ನು ಬರೆಯಿರಿ
ಮುಂಬರುವ ಮಾಸ್-ಮಾರ್ಕೆಟ್ ಮೊಡೆಲ್‌ನ ಜಾಗತಿಕ ಪಾದಾರ್ಪಣೆಯ ಆಪ್‌ಡೇಟ್‌ಗಳ ಜೊತೆಗೆ, ಮರ್ಸಿಡಿಸ್-ಬೆನ್ಜ್ ಮತ್ತು ಲೋಟಸ್ ಎರಡರಿಂದಲೂ ಪ್ರೀಮಿಯಂ ಸೆಗ್ಮೆಂಟ್‌ಗಳಲ್ಲಿ ಬಿಡುಗಡೆಗಳನ್ನು ನಾವು ವೀಕ್ಷಿಸಿದ್ದೇವೆ.
2023 ರ ಸಾಲು-ಸಾಲು ಹಬ್ಬಗಳ ಸೀಸನ್ ಮುಕ್ತಾಯವಾಗಿದೆ ಮತ್ತು ಇದು ಹೊಸ ಕಾರುಗಳು, ಕೆಲವು ವಿಶೇಷ ಆವೃತ್ತಿಗಳು ಮತ್ತು ಫೇಸ್‌ಲಿಫ್ಟ್‌ಗಳೊಂದಿಗೆ ಆಟೋಮೋಬೈಲ್ ಜಗತ್ತಿನಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಚಟುವಟಿಕೆಗೆ ಸಾಕ್ಷಿಯಾಗಿದೆ. ಈ ಪಟ್ಟಿಯಲ್ಲಿ 3 ಜಾಗತಿಕ ಅನಾವರಣಗಳು ಮತ್ತು ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಕಾರುಗಳ ವಿಶೇಷ ಆವೃತ್ತಿಗಳು ಸೇರಿವೆ, ಅದರೊಂದಿಗೆ ಲೋಟಸ್ ಭಾರತದಲ್ಲಿ ಎಲೆಕ್ಟ್ರಿಕ್ SUV ಯೊಂದಿಗೆ ಪಾದಾರ್ಪಣೆ ಮಾಡಿತು. ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡ ಅಥವಾ ಅನಾವರಣಗೊಂಡ ಎಲ್ಲಾ ಮೊಡೆಲ್‌ಗಳ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.
ವೋಕ್ಸ್‌ವ್ಯಾಗನ್ ಟೈಗನ್ ಮತ್ತು ವರ್ಟಸ್‌ನ ವಿಶೇಷ ಆವೃತ್ತಿಗಳು
2023ರ ನವೆಂಬರ್ ನಲ್ಲಿ ವೋಕ್ಸ್‌ವ್ಯಾಗನ್ ಟೈಗನ್ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್ ಎರಡೂ ವಿಶೇಷ ಆವೃತ್ತಿಗಳನ್ನು ಪಡೆದುಕೊಂಡವು. ಟೈಗುನ್ ಎಸ್‌ಯುವಿಯು ಟ್ರೈಲ್ಸ್ ಮತ್ತು ಸೌಂಡ್ ಎಂಬ 2 ಹೊಸ ಆವೃತ್ತಿಯನ್ನು ಪಡೆದುಕೊಂಡಿದೆ. ಆದರೆ ವರ್ಟಸ್ ಕೇವಲ ಸೌಂಡ್ ಆವೃತ್ತಿಯನ್ನು ಮಾತ್ರ ಪಡೆದುಕೊಂಡಿದೆ. ಟ್ರೈಲ್ ಆವೃತ್ತಿಯು ಟೈಗುನ್‌ನ ಆಫ್-ರೋಡ್ ಕೇಂದ್ರಿತ ಆವೃತ್ತಿಯಾಗಿದ್ದು, ಇದು ಬಾಡಿಯಲ್ಲಿ ಡಿಕಾಲ್‌ಗಳು, ಬ್ಲ್ಯಾಕ್ಡ್-ಔಟ್ ಫ್ರಂಟ್ ಗ್ರಿಲ್, ಆಲ್-ಬ್ಲ್ಯಾಕ್ ಇಂಟೀರಿಯರ್ ಮತ್ತು ರೂಫ್ ರಾಕ್‌ನಂತಹ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾತ್ರ ಪಡೆಯುತ್ತದೆ. ಎಸ್‌ಯುವಿಯ ಈ ವಿಶೇಷ ಆವೃತ್ತಿಯು ಟೈಗುನ್ ಜಿಟಿ ಮ್ಯಾನುವಲ್ ವೇರಿಯೆಂಟ್‌ನಂತೆ ಅದೇ ಬೆಲೆಯನ್ನು ಹೊಂದಿದೆ.
ಮತ್ತೊಂದೆಡೆ, ಟೈಗುನ್ ಮತ್ತು ವರ್ಟಸ್‌ನ ಸೌಂಡ್ ಆವೃತ್ತಿಗಳು ಮ್ಯೂಸಿಕ್-ಆಧಾರಿತ ವಿಶೇಷ ಆವೃತ್ತಿಗಳಾಗಿದ್ದು, ಟಾಪ್-ಸ್ಪೆಕ್ 1-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಇವುಗಳು ಸಬ್ ವೂಫರ್ ಮತ್ತು ಸಿ-ಪಿಲ್ಲರ್‌ನಲ್ಲಿ ವಿಶೇಷ ಬಾಡಿ ಸ್ಟಿಕ್ಕರ್‌ಗಳನ್ನು ಹೊಂದಿವೆ. ಭಾರತದಾದ್ಯಂತ ಸೌಂಡ್ ಆವೃತ್ತಿಗಳ ಎಕ್ಸ್ ಶೋರೂಂ ಬೆಲೆಗಳು ರೂ 15.52 ಲಕ್ಷದಿಂದ ಪ್ರಾರಂಭವಾಗುತ್ತವೆ.
ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಎಲಿಗೆನ್ಸ್ ಆವೃತ್ತಿಗಳು
ಸ್ಕೋಡಾ ತನ್ನ ಕುಶಾಕ್ ಮತ್ತು ಸ್ಲಾವಿಯಾದ ಮೊಡೆಲ್‌ಗಳಲ್ಲಿ 'ಎಲಿಗನ್ಸ್' ಆವೃತ್ತಿ ಎಂಬ ಹೊಸದಾದ ಹಾಗು ಲಿಮಿಟೆಡ್ ವೇರಿಯೆಂಟ್‌ನ್ನು ಪರಿಚಯಿಸಿದೆ. ಎರಡೂ ಮೊಡೆಲ್‌ಗಳ ಈ ವಿಶೇಷ ಆವೃತ್ತಿಯು ಕೆಲವು ಬಾಹ್ಯ ಮತ್ತು ಆಂತರಿಕ ಆಡ್-ಆನ್‌ಗಳೊಂದಿಗೆ ವಿಶಿಷ್ಟವಾದ ಡೀಪ್ ಬ್ಲ್ಯಾಕ್ ಬಾಡಿ ಕಲರ್‌ನ್ನು ಹೊಂದಿದೆ. ಇದರ ಆದರ ಸಾಮಾನ್ಯ ಆವೃತ್ತಿಗಿಂತ ಸುಮಾರು 20,000 ರೂ ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿದೆ. ಎಲಿಗನ್ಸ್ ಆವೃತ್ತಿಯು ಎರಡೂ ಕಾರುಗಳ ಟಾಪ್-ಸ್ಪೆಕ್ 'ಸ್ಟೈಲ್' ವೇರಿಯೆಂಟ್‌ನ್ನು ಆಧರಿಸಿದೆ, ಅವುಗಳ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಇದರಲ್ಲಿಯು ನೀಡಲಾಗುತ್ತದೆ.
ಇದನ್ನೂ ಪರಿಶೀಲಿಸಿ: ಡೀಲರ್‌ಶಿಪ್‌ಗಳಿಗೆ ಆಗಮಿಸುತ್ತಿರುವ ಸ್ಕೋಡಾ ಕುಶಾಕ್ ಎಲಿಗನ್ಸ್ ಆವೃತ್ತಿ
ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಪಾದಾರ್ಪಣೆ
ಜಪಾನ್ ಮೊಬಿಲಿಟಿ ಶೋನಲ್ಲಿನ ಪರಿಕಲ್ಪನೆಯ ಪೂರ್ವವೀಕ್ಷಣೆಯನ್ನು ಅನುಸರಿಸಿ ಸುಜುಕಿ ಜಪಾನ್‌ನಲ್ಲಿ ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ ಕೇವಲ ರಿಫ್ರೆಶ್ ಆಗಿರುವ ವಿನ್ಯಾಸವನ್ನು ಮತ್ತು ಹೊಸ ಕ್ಯಾಬಿನ್‌ನ್ನು ಪಡೆಯುವುದು ಮಾತ್ರವಲ್ಲದೆ, ಇದು ಆಪ್‌ಡೇಟ್ ಆಗಿರುವ 1.2-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ. ಅದರ ಜಾಗತಿಕ ಪಾದಾರ್ಪಣೆಯ ನಂತರ, ಹೊಸ-ಜೆನ್ ಸ್ವಿಫ್ಟ್‌ನ ಪರೀಕ್ಷಾ ಆವೃತ್ತಿಯು ಸಹ ಭಾರತೀಯ ರಸ್ತೆಗಳಲ್ಲಿ ಸುತ್ತು ಹಾಕುವುದನ್ನು ಕಾಣಬಹುದು ಮತ್ತು ಇದು 2024 ರ ಮೊದಲಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶವಾಗುವ ನಿರೀಕ್ಷೆಯಿದೆ.
ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ಅನಾವರಣ
ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ತನ್ನ ಯುರೋಪಿಯನ್ ಲುಕ್ ಆಗಿರುವ ಡೇಸಿಯಾ ಡಸ್ಟರ್ ಆಗಿ ಜಾಗತಿಕವಾಗಿ ಪಾದಾರ್ಪಣೆ ಮಾಡಿತು. ಹೊಸ ಡಸ್ಟರ್, ಈ ಕಾರು ತಯಾರಕರ ಹೊಸ CMF-B ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾಗೆಯೇ ಡೇಸಿಯಾ ಬಿಗ್‌ಸ್ಟರ್ ಪರಿಕಲ್ಪನೆಯಿಂದ ವಿನ್ಯಾಸದ ಸ್ಫೂರ್ತಿಯನ್ನು ಪಡೆಯುತ್ತದೆ. ಪ್ರಸ್ತುತ ಯುರೋಪ್-ರಸ್ತೆಗಾಗಿ ಪರಿಚಯಿಸಿರುವ ಡಸ್ಟರ್ ಮೈಲ್ಡ್-ಹೈಬ್ರಿಡ್, ಸ್ಟ್ರಾಂಗ್-ಹೈಬ್ರಿಡ್ ಮತ್ತು LPG ಸೇರಿದಂತೆ ಹೊಸ ಪವರ್‌ಟ್ರೇನ್ ಆಯ್ಕೆಗಳ ರೇಂಜ್‌ನ್ನು ನೀಡುತ್ತದೆ.
ನಾವು ಇಲ್ಲಿ ಕೊನೆಯದಾಗಿ ಮಾರಾಟವಾದ ಹಳೆಯ ಇಂಡಿಯಾ-ಸ್ಪೇಷಲ್ ರೆನಾಲ್ಟ್ ಡಸ್ಟರ್‌ನೊಂದಿಗೆ ಹೊಸ ಡಸ್ಟರ್ ಅನ್ನು ಹೋಲಿಸಿದ್ದೇವೆ.
ಜಾಗತಿಕವಾಗಿ ಪಾದಾರ್ಪಣೆ ಮಾಡಿದ ಹೊಸ-ಜನ್ ಸ್ಕೋಡಾ ಸೂಪರ್ಬ್
ನಾಲ್ಕನೇ ತಲೆಮಾರಿನ ಸ್ಕೋಡಾ ಸೂಪರ್ಬ್ ತನ್ನ ಜಾಗತಿಕ ಪಾದಾರ್ಪಣೆಯನ್ನು ಆಪ್‌ಡೇಟ್ ಮಾಡಿದ ವಿನ್ಯಾಸ, ಎಲ್ಲಾ-ಹೊಸ ಕ್ಯಾಬಿನ್ ಮತ್ತು ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್‌ಗಳನ್ನು ಒಳಗೊಂಡಂತೆ ವಿವಿಧ ಹೊಸ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಮಾಡಿದೆ. ಸೆಡಾನ್ ಈಗಾಗಲೇ ಎಸ್ಟೇಟ್ ಮತ್ತು ಸೆಡಾನ್ ಆವೃತ್ತಿಗಳಲ್ಲಿ ಪಾದಾರ್ಪಣೆ ಮಾಡಿದ್ದರೂ, ಭಾರತೀಯ ಮಾರುಕಟ್ಟೆಯೂ ಸ್ಕೋಡಾ ಸೂಪರ್ಬ್‌ನ ಸೆಡಾನ್ ಆವೃತ್ತಿಯನ್ನು ಮಾತ್ರ ಪಡೆಯುತ್ತದೆ. ಸ್ಕೋಡಾ ಹೊಸ ತಲೆಮಾರಿನ ಸೂಪರ್ಬ್ ಅನ್ನು 2024 ರ ಜೂನ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಬಹುದು. ಇದರ ಎಕ್ಸ್ ಶೋರೂಂ ಬೆಲೆ ಸುಮಾರು ರೂ 36 ಲಕ್ಷದಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಇದನ್ನೂ ಪರಿಶೀಲಿಸಿ: ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!
ಹುಂಡೈ ಟಕ್ಸನ್ ಫೇಸ್‌ಲಿಫ್ಟ್‌ನ ಜಾಗತಿಕ ಅನಾವರಣ
ಹ್ಯುಂಡೈ ಟಕ್ಸನ್ ಕೂಡ ಮಿಡ್‌ಲೈಫ್ ಆಪ್‌ಡೇಟ್‌ಗೆ ಒಳಗಾಗಿದೆ ಮತ್ತು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಂಡಿದೆ. ಆಪ್‌ಡೇಟ್‌ಗಳು ಬದಲಾವಣೆ ಮಾಡಲಾದ ಬಾಹ್ಯ ವಿನ್ಯಾಸ ಮತ್ತು ಸುಧಾರಿಸಿದ ಕ್ಯಾಬಿನ್ ಅನ್ನು ಒಳಗೊಳ್ಳುತ್ತವೆ. ಫೇಸ್‌ಲಿಫ್ಟೆಡ್ ಟಕ್ಸನ್ ಎಸ್‌ಯುವಿಗೆ ಪವರ್‌ಟ್ರೇನ್ ಆಯ್ಕೆಗಳ ಲಭ್ಯತೆಯನ್ನು ಹ್ಯುಂಡೈ ಇನ್ನೂ ಖಚಿತಪಡಿಸಿಲ್ಲ. ಟಕ್ಸನ್ ಫೇಸ್‌ಲಿಫ್ಟ್ ಮೊದಲ ಬಾರಿಗೆ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪ್ರಾರಂಭಗೊಳ್ಳಲಿದೆ, ಭಾರತದಲ್ಲಿ ಅದರ ಬಿಡುಗಡೆಯು 2024 ರ ದ್ವಿತೀಯಾರ್ಧದಲ್ಲಿ ಅಥವಾ 2025 ರ ಆರಂಭದಲ್ಲಿ ನಿರೀಕ್ಷಿಸಲಾಗಿದೆ.
OEM ಪರಿಶೀಲಿಸಿದ ಕಾರ್ ಸರ್ವೀಸ್ ಹಿಸ್ಟರಿ
ಮರ್ಸೀಡೀಸ್-ಎಎಮ್‌ಜಿ ಸಿ43 ಬಿಡುಗಡೆ
ಹೊಸ Mercedes-AMG C43 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಆದರೆ ಈ ಹೆಚ್ಚು ಪ್ರಾಯೋಗಿಕ 4-ಬಾಗಿಲಿನ ಸೆಡಾನ್ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಹೊಸ AMG C43 ಸೆಡಾನ್ ಗಾತ್ರದಲ್ಲಿ ಕಡಿಮೆಗೊಳಿಸಿದ ಎಂಜಿನ್ ಅನ್ನು ಹೊಂದಿದೆ, ಆದರೆ ಫಾರ್ಮುಲಾ 1-ಪಡೆದ ಟರ್ಬೋಚಾರ್ಜಿಂಗ್ ತಂತ್ರಜ್ಞಾನದಿಂದಾಗಿ ಇದು ಈಗ ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಭಾರತದಾದ್ಯಂತ ಇದರ ಎಕ್ಸ್ ಶೋರೂಂ ಬೆಲೆ 98 ಲಕ್ಷ ರೂ. ನಿಂದ ಪ್ರಾರಂಭವಾಗುತ್ತದೆ.
Mercedes-Benz GLE ಫೇಸ್‌ಲಿಫ್ಟ್ ಬಿಡುಗಡೆ
2023 ರ ಫೆಬ್ರವರಿಯಲ್ಲಿ ಜಾಗತಿಕವಾಗಿ ಚೊಚ್ಚಲ ಪ್ರವೇಶ ಮಾಡಿದ ನಂತರ Mercedes Benz GLE ಫೇಸ್‌ಲಿಫ್ಟ್ ಈ ತಿಂಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ. GLE ಫೇಸ್‌ಲಿಫ್ಟ್‌ನಲ್ಲಿನ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಇದು ಆಪ್‌ಡೇಟ್ ಆಗಿರುವ ಪವರ್‌ಟ್ರೇನ್ ಆಯ್ಕೆಗಳನ್ನು ಒಳಗೊಂಡಿದೆ. ಭಾರತದಾದ್ಯಂತ GLE ಫೇಸ್‌ಲಿಫ್ಟ್‌ನ ಎಕ್ಸ್-ಶೋರೂಮ್ ಬೆಲೆಗಳು 96.40 ಲಕ್ಷ ರೂ ನಿಂದ 1.15 ಕೋಟಿ ರೂ.ವರೆಗೆ ಇರುತ್ತದೆ.
ಇದನ್ನೂ ಪರಿಶೀಲಿಸಿ: ಮರ್ಸಿಡಿಸ್-ಎಎಮ್‌ಜಿ ಜಿ 63 ಎಸ್‌ಯುವಿಯೊಂದಿಗೆ ಮತ್ತೊಂದು ಎಕ್ಸ್‌ಕ್ಲೂಸಿವ್‌ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್
ಲೋಟಸ್ ಎಲೆಟ್ರೆ ಎಸ್‌ಯುವಿ ಬಿಡುಗಡೆ
ಬ್ರಿಟಿಷ್ ಕಾರು ತಯಾರಕ ಲೋಟಸ್ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಪರ್ಫೊರ್ಮೆನ್ಸ್ ಎಸ್‌ಯುವಿಯಾಗಿರುವ ಎಲೆಟರ್‌ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು ಆಕ್ರಮಣಕಾರಿ ನಿಲುವು ಮತ್ತು ಸ್ಪೋರ್ಟಿ ಇಂಟಿರೀಯರ್‌ನ್ನು ಹೊಂದಿದೆ. ಈ ಎಲೆಟರ್ ಎಸ್‌ಯುವಿಯ ಬೆಲೆ 2.55 ಕೋಟಿ ರೂ. ನಿಂದ 2.99 ಕೋಟಿ ರೂ ವರೆಗೆ ಇದೆ. ಲೋಟಸ್ ಭಾರತದಲ್ಲಿ ತನ್ನ ಮೊದಲ ಡೀಲರ್‌ಶಿಪ್ ಅನ್ನು ನವದೆಹಲಿಯಲ್ಲಿ ಪ್ರಾರಂಭಿಸಿದೆ.
ವೋಲ್ವೋ EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದಾರ್ಪಣೆ
ವೋಲ್ವೋ ತನ್ನ ಎಲ್ಲಾ-ಹೊಸತನದಿಂದ ಕೂಡಿರುವ ಎಲೆಕ್ಟ್ರಿಕ್ ಎಮ್‌ಪಿವಿಯಾಗಿರುವ EM90 ನೊಂದಿಗೆ ಐಷಾರಾಮಿ MPV ಸೆಗ್ಮೆಂಟ್‌ಗೆ ಕಾಲಿಟ್ಟಿದೆ. EM90 116 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು CLTC (ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್) ನಲ್ಲಿ 738 ಕಿಮೀ ನಷ್ಟು ದೂರವನ್ನು ಕ್ರಮಿಸಿದೆ. EM90 ಎಲೆಕ್ಟ್ರಿಕ್ MPV ಅನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಾಗುವುದು, ನಂತರ ಇತರ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಇಡಲಿದೆ.
ಇನ್ನಷ್ಟು ಓದಿ : ಸ್ಕೋಡಾ ಕುಶಾಕ್ ಆನ್‌ರೋಡ್ ಬೆಲೆ