ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 2025ರ Kia Carens, ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ
2025 ಕಿಯಾ ಕ್ಯಾರೆನ್ಸ್‌ಗಳ ಬೆಲೆಗಳನ್ನು ಜೂನ್ ವೇಳೆಗೆ ಘೋಷಿಸುವ ನಿರೀಕ್ಷೆಯಿದೆ
-
ಎಕ್ಸ್‌ಟೀರಿಯರ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು, ಆಪ್‌ಡೇಟ್ ಮಾಡಿದ ಗ್ರಿಲ್ ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಒಳಗೊಂಡಿರಬಹುದು.
-
ನವೀಕರಿಸಿದ ಸೆಂಟರ್ ಕನ್ಸೋಲ್ ಜೊತೆಗೆ ಸಂಪೂರ್ಣವಾಗಿ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯಬಹುದು.
-
12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಪನೋರಮಿಕ್ ಸನ್‌ರೂಫ್ ಮತ್ತು ಲೆವೆಲ್ 2 ADAS ನಂತಹ ಸೌಲಭ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ.
-
ಪ್ರಸ್ತುತ ಕ್ಯಾರೆನ್ಸ್‌ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಬಳಸುವ ಸಾಧ್ಯತೆಯಿದೆ, ಅವುಗಳೆಂದರೆ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್.
-
11 ಲಕ್ಷದಿಂದ (ಎಕ್ಸ್ ಶೋ ರೂಂ) ಬೆಲೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
2022ರಲ್ಲಿ ಭಾರತದಲ್ಲಿ ಮಾರಾಟಕ್ಕೆ ಬಂದ ಕಿಯಾ ಕ್ಯಾರೆನ್ಸ್, ಮಿಡ್‌ಲೈಫ್ ಆಪ್‌ಡೇಟ್‌ಅನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಅದರ ಬಿಡುಗಡೆಯನ್ನು 2025ರ ಏಪ್ರಿಲ್‌ನಲ್ಲಿ ನಿಗದಿಯಾಗಿದೆ. 2025ರ ಕ್ಯಾರೆನ್ಸ್‌ಗಳು ವಿನ್ಯಾಸ ಬದಲಾವಣೆಗಳಿಗೆ ಒಳಗಾಗಿದೆ ಮತ್ತು ಸುಧಾರಿತ ಫಿಚರ್‌ಗಳ ಸೆಟ್‌ಅನ್ನು ಹೊಂದಲಿದೆ, ಆದರೂ, ಇದು ಅದರ ಅಸ್ತಿತ್ವದಲ್ಲಿರುವ ಆವೃತ್ತಿಯಲ್ಲಿ ಕಂಡುಬರುವ ಅದೇ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. 2025ರ ಕಿಯಾ ಕ್ಯಾರೆನ್ಸ್‌ಗಳ ಬೆಲೆಗಳನ್ನು 2025ರ ಜೂನ್ ಒಳಗೆ ಘೋಷಿಸುವ ನಿರೀಕ್ಷೆಯಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಆಪ್‌ಡೇಟ್ ಮಾಡಲಾದ ಕ್ಯಾರೆನ್ಸ್ ಎಮ್‌ಪಿವಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ.
ಎಕ್ಸ್‌ಟೀರಿಯರ್ ಆಪ್‌ಡೇಟ್‌ಗಳು
2025 ರ ಕಿಯಾ ಕ್ಯಾರೆನ್ಸ್, ಎಮ್‌ಪಿವಿಯ ಹಿಂದಿನ ಸ್ಪೈ ಶಾಟ್‌ಗಳಲ್ಲಿ ಒಂದರಲ್ಲಿ ಕಂಡುಬರುವಂತೆ, ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು, ನವೀಕರಿಸಿದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟ್ವೀಕ್ ಮಾಡಲಾದ ಮುಂಭಾಗದ ಬಂಪರ್ ಸೇರಿದಂತೆ ನವೀಕರಿಸಿದ ಮುಂಭಾಗವನ್ನು ಪಡೆಯುತ್ತದೆ. ಒಟ್ಟಾರೆ ಆಕಾರ ಮತ್ತು ಸಿಲೂಯೆಟ್ ಬದಲಾಗದೆ ಉಳಿಯುತ್ತದೆ, ಆದರೆ ಇದು ಮರುವಿನ್ಯಾಸಗೊಳಿಸಲಾದ ಅಲಾಯ್ ಚಕ್ರಗಳು ಮತ್ತು ಹೊಸ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.
ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್‌ಗಳು
ಆಪ್‌ಡೇಟ್ ಮಾಡಲಾದ ಕ್ಯಾರೆನ್ಸ್ ಒಳಗೆ ದೊಡ್ಡ ಬದಲಾವಣೆ ತರಬಹುದು, ಇದರಲ್ಲಿ ಮರುವಿನ್ಯಾಸಗೊಳಿಸಲಾದ AC ವೆಂಟ್‌ಗಳು, ನವೀಕರಿಸಿದ ಸೆಂಟರ್ ಕನ್ಸೋಲ್ ಸೇರಿವೆ ಮತ್ತು ಇದು ವಿಭಿನ್ನ ಬಣ್ಣದ ಸೀಟ್ ಕವರ್ ಅನ್ನು ಸಹ ಪಡೆಯಬಹುದು. ಫೀಚರ್‌ಗಳ ವಿಷಯದಲ್ಲಿ, ಇದು ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಸೌಲಭ್ಯಗಳನ್ನು ಕ್ಯಾರೆನ್ಸ್‌ನ ಅಸ್ತಿತ್ವದಲ್ಲಿರುವ ಆವೃತ್ತಿಯಿಂದ ಎರವಲು ಪಡೆಯಬಹುದು. ಆದರೆ, ಹೊಸ ಕಿಯಾ ಸೈರೋಸ್‌ನಲ್ಲಿ ಕಂಡುಬರುವಂತೆ ಇದು 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳೊಂದಿಗೆ ಬರಬಹುದು ಮತ್ತು ಬಹುಶಃ ಪನೋರಮಿಕ್ ಸನ್‌ರೂಫ್ ಕೂಡ ಇರಬಹುದು.
ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಇರಬಹುದು. ಹಿಂದಿನ ಸ್ಪೈ ಶಾಟ್‌ನಲ್ಲಿ ಗಮನಿಸಿದಂತೆ, ಇದು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ ಮತ್ತು ಕಿಯಾ ಇಂಡಿಯಾದ ಪೋರ್ಟ್‌ಫೋಲಿಯೊದಲ್ಲಿರುವ ಎಲ್ಲಾ ಇತರ ಮೊಡೆಲ್‌ಗಳಲ್ಲಿ ಈಗ ಲಭ್ಯವಿರುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್‌ನೊಂದಿಗೆ ಬರಬಹುದು.
ಎಂಜಿನ್‌ನಲ್ಲಿ ಬದಲಾವಣೆಗಳಿರಬಹುದೇ?
ಕ್ಯಾರೆನ್ಸ್ ಫೇಸ್‌ಲಿಫ್ಟ್ ತನ್ನ ಅಸ್ತಿತ್ವದಲ್ಲಿರುವ ಪ್ರತಿರೂಪದಂತೆಯೇ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಬಳಸುವುದನ್ನು ಮುಂದುವರಿಸುವ ಸಾಧ್ಯತೆಯಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.5-ಲೀಟರ್ N/A ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
115 ಪಿಎಸ್ |
160 ಪಿಎಸ್ |
116 ಪಿಎಸ್ |
ಟಾರ್ಕ್ |
144 ಎನ್‌ಎಮ್ |
253 ಎನ್‌ಎಮ್ |
250 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನ್ಯುವಲ್ |
6-ಸ್ಪೀಡ್ iMT, 7-ಸ್ಪೀಡ್ DCT |
6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ AT |
N/A - ನ್ಯಾಚುರಲಿ ಆಸ್ಪಿರೇಟೆಡ್
iMT - ಇಂಟಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (ಕ್ಲಚ್ ಪೆಡಲ್ ಇಲ್ಲದ ಮ್ಯಾನ್ಯುವಲ್)
DCT - ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
AT - ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ 2025 ಕ್ಯಾರೆನ್ಸ್‌ಗಳ ಬೆಲೆಯು 11 ಲಕ್ಷ ರೂ.ನಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು. ಕಿಯಾ ಕ್ಯಾರೆನ್ಸ್ ಅನ್ನು ಮಾರುತಿ ಎರ್ಟಿಗಾ, ಮಾರುತಿ XL6 ಮತ್ತು ಟೊಯೋಟಾ ರೂಮಿಯನ್ ಗಳಿಗೆ ಪ್ರೀಮಿಯಂ ಪರ್ಯಾಯವೆಂದು ಪರಿಗಣಿಸಬಹುದು. ಇದನ್ನು ಮಾರುತಿ ಇನ್ವಿಕ್ಟೊ, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ