• English
    • Login / Register

    2025ರ Skoda Kodiaqನ ವೇರಿಯೆಂಟ್‌-ವಾರು ಫೀಚರ್‌ಗಳ ವಿವರಗಳು

    ಏಪ್ರಿಲ್ 24, 2025 06:30 pm ರಂದು bikramjit ಮೂಲಕ ಪ್ರಕಟಿಸಲಾಗಿದೆ

    4 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹೊಸ ಸ್ಕೋಡಾ ಕೊಡಿಯಾಕ್‌ನ ಎಂಟ್ರಿ ಲೆವೆಲ್‌ನ ಸ್ಪೋರ್ಟ್‌ಲೈನ್ ಮತ್ತು ಟಾಪ್‌-ಎಂಡ್‌ ಸೆಲೆಕ್ಷನ್ L&K ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಎರಡೂ ಉತ್ತಮ ಪ್ಯಾಕೇಜ್ ಹೊಂದಿವೆ

    ಹೊಸ 2025ರ ಸ್ಕೋಡಾ ಕೊಡಿಯಾಕ್ ಅನ್ನು ಭಾರತದಲ್ಲಿ 46.89 ಲಕ್ಷ ರೂ.ಗಳಿಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಬಿಡುಗಡೆ ಮಾಡಲಾಗಿದೆ. ಜೆಕ್ ಮೂಲದ ಈ ಕಾರು ತಯಾರಕರ ಉನ್ನತ ಶ್ರೇಣಿಯ ಎಸ್‌ಯುವಿಯು ಈಗ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಅವುಗಳೆಂದರೆ ಬೇಸ್-ಸ್ಪೆಕ್ ಸ್ಪೋರ್ಟ್‌ಲೈನ್ ಮತ್ತು ಟಾಪ್-ಎಂಡ್ ಸೆಲೆಕ್ಷನ್ ಲೌರಿನ್ & ಕ್ಲೆಮೆಂಟ್ (L&K). ಆಪ್‌ಡೇಟ್‌ ಮಾಡಿದ ಫೀಚರ್‌ಗಳ ಜೊತೆಗೆ, ಕೊಡಿಯಾಕ್ ಪರಿಚಿತ ಪವರ್‌ಟ್ರೇನ್ ಸೆಟಪ್‌ನೊಂದಿಗೆ ಮುಂದುವರಿಯುತ್ತದೆ, ಅದು ಈಗ ಮೊದಲಿಗಿಂತ ಸ್ವಲ್ಪ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಹಾಗೆಯೇ, ನಾವು ಮುಂದೆ ಹೊಸ ಕೊಡಿಯಾಕ್‌ನ ವೇರಿಯೆಂಟ್‌-ವಾರು ಫೀಚರ್‌ಗಳನ್ನು ನೋಡೋಣ.

    2025 ಸ್ಕೋಡಾ ಕೊಡಿಯಾಕ್: ಸ್ಪೋರ್ಟ್‌ಲೈನ್

    Skoda Kodiaq Sportline front
    Skoda Kodiaq Sportline dashboard

    ಸ್ಕೋಡಾ ಕೊಡಿಯಾಕ್‌ನ ಆರಂಭಿಕ ಹಂತದ ಸ್ಪೋರ್ಟ್‌ಲೈನ್ ವೇರಿಯೆಂಟ್‌ ಈ ಫೀಚರ್‌ಗಳೊಂದಿಗೆ ಪ್ರಾರಂಭವಾಗುತ್ತದೆ:

    • ಎಕ್ಸ್‌ಟೀರಿಯರ್‌
    • ಇಂಟೀರಿಯರ್‌
    • ಸೌಕರ್ಯ ಮತ್ತು ಸೌಲಭ್ಯ 
    • ಇಂಫೋಟೈನ್‌ಮೆಂಟ್‌
    • ಸುರಕ್ಷತೆ 
    • ಕಾರ್ನರಿಂಗ್ ಮತ್ತು ವೆಲ್‌ಕಮ್‌ ಫಂಕ್ಷನ್‌ನೊಂದಿಗೆ LED ಹೆಡ್‌ಲೈಟ್‌ಗಳು
    • ವೆಲ್‌ಕಮ್‌ ಎಫೆಕ್ಟ್‌ನೊಂದಿಗೆ LED ಟೈಲ್‌ಲೈಟ್‌ಗಳು
    • 18-ಇಂಚಿನ ಅಲಾಯ್‌ ವೀಲ್‌ಗಳು
    • ರೂಫ್ ರೇಲ್ಸ್‌
    • ಸ್ವೀಡ್ ಕವರ್‌
    • ಪನೋರಮಿಕ್ ಸನ್‌ರೂಫ್
    • ಮೆಮೊರಿ ಫೀಚರ್‌ನೊಂದಿಗೆ ಬಿಸಿಯಾದ ORVM
    • ಡ್ಯುಯಲ್ ಗ್ಲೋವ್ ಬಾಕ್ಸ್
    • ಮುಂಭಾಗ ಮತ್ತು ಹಿಂಭಾಗದ ಪವರ್ ವಿಂಡೋಗಳು
    • ಛತ್ರಿ
    • ಡೋರ್-ಪ್ಯಾನಲ್‌ನಲ್ಲಿ ವೆಸ್ಟ್‌ ಬಿನ್
    • ಬೂಟ್‌ನಲ್ಲಿ ಬ್ಯಾಗ್ ಹುಕ್‌ಗಳು
    •  

    • ಮೆಮೊರಿ ಪಂಕ್ಷನ್‌ನೊಂದಿಗೆ ಪವರ್ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸ್ಪೋರ್ಟ್ ಸೀಟುಗಳು
    • ಮುಂಭಾಗದ ಸೀಟಿನ ತೊಡೆಯ ಬೆಂಬಲ ವಿಸ್ತರಣೆ
    • ಆಟೋ-ಡಿಮ್ಮಿಂಗ್ IRVM
    • ಹಿಂಭಾಗದ ಕಿಟಕಿ ಸನ್‌ಶೇಡ್‌ಗಳು
    • ಎರಡನೇ ಸಾಲಿನ ಸೀಟುಗಳನ್ನು ಸ್ಲೈಡಿಂಗ್ ಮತ್ತು ಒರಗಿಸುವುದು
    • ಎರಡನೇ ಸಾಲಿನಲ್ಲಿ ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಮಧ್ಯಭಾಗದ ಆರ್ಮ್‌ರೆಸ್ಟ್
    • 4x 45W USB C ಚಾರ್ಜಿಂಗ್ ಪೋರ್ಟ್‌ಗಳು
    • ಸ್ಮಾರ್ಟ್ ಡಯಲ್‌ಗಳು
    • ಡಿಸ್‌ಪ್ಲೇ ಕ್ಲೀನರ್
    • ಪ್ಯಾಡಲ್ ಶಿಫ್ಟರ್
    • ಕ್ರೂಸ್ ಕಂಟ್ರೋಲ್

     

    • 12.90-ಇಂಚಿನ ಟಚ್‌ಸ್ಕ್ರೀನ್
    • ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ ಆಪಲ್ ಕಾರ್‌ಪ್ಲೇ
    • 13-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್
    • ವೆಂಟಿಲೇಶನ್‌ನೊಂದಿಗೆ 2-ವೈರ್‌ಲೆಸ್ ಫೋನ್ ಚಾರ್ಜರ್‌ಗಳು
    • 9 ಏರ್‌ಬ್ಯಾಗ್‌ಗಳು
    • ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC)
    • ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌
    • ರೈನ್‌ ಬ್ರೇಕ್ ಸಪೋರ್ಟ್‌
    • ISOFIX ಚೈಲ್ಡ್‌ ಸೀಟ್‌ ಅಂಕರೇಜ್‌ಗಳು
    • ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್‌
    • ಕೀಲೆಸ್ ಎಂಟ್ರಿ
    • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು
    • ರಿಯರ್‌-ವ್ಯೂ ಕ್ಯಾಮೆರಾ

    ಸ್ಪೋರ್ಟ್‌ಲೈನ್ ಕೊಡಿಯಾಕ್‌ನ ಎಂಟ್ರಿ-ಲೆವೆಲ್‌ ವೇರಿಯೆಂಟ್‌ ಆಗಿದ್ದರೂ, ಇದು ಕೊಡಿಯಾಕ್‌ನಿಂದ ಅಗತ್ಯವಿರುವ ಹೆಚ್ಚಿನ ಅಗತ್ಯ ಫೀಚರ್‌ಗಳೊಂದಿಗೆ ತುಂಬಿದೆ ಮತ್ತು ಇದು ನಮ್ಮ ಆಯ್ಕೆಯಾಗಿದೆ. ಇಲ್ಲಿನ ಹೈಲೈಟ್‌ಗಳಲ್ಲಿ 12.90-ಇಂಚಿನ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 13-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್, 9 ಏರ್‌ಬ್ಯಾಗ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾ ಸೇರಿವೆ. ಇದಲ್ಲದೆ, ಇದು ಎಲ್‌ಇಡಿ ಲೈಟಿಂಗ್ ಅಂಶಗಳು ಮತ್ತು ಕಪ್ಪು ಸ್ವೀಡ್ ಲೆದರ್‌ ಇಂಟೀರಿಯರ್‌ ಫಿನಿಶ್‌ಅನ್ನು ಪಡೆಯುತ್ತದೆ. ಬಿಸಿಯಾದ ಸೀಟುಗಳ ಬದಲಿಗೆ ವೆಂಟಿಲೇಟೆಡ್‌ ಸೀಟುಗಳು ಲಭ್ಯವಿದ್ದರೆ, ಅದು ಪ್ಯಾಕೇಜ್ ಅನ್ನು ಪೂರ್ಣಗೊಳಿಸುತ್ತಿತ್ತು.

    2025 ಸ್ಕೋಡಾ ಕೊಡಿಯಾಕ್: ಸೆಲೆಕ್ಷನ್‌ ಲಾರಿನ್ ಮತ್ತು ಕ್ಲೆಮೆಂಟ್

    ಸ್ಪೋರ್ಟ್‌ಲೈನ್ ವೇರಿಯೆಂಟ್‌ಗಿಂತ ಹೆಚ್ಚುವರಿಯಾಗಿ ಟಾಪ್-ಎಂಡ್ ಸ್ಕೋಡಾ ಕೊಡಿಯಾಕ್ ಲೌರಿನ್ & ಕ್ಲೆಮೆಂಟ್ ಈ ಕೆಳಗಿನ ಎಲ್ಲಾ ಫೀಚರ್‌ಗಳನ್ನು ಪಡೆಯುತ್ತದೆ:

    ಎಕ್ಸ್‌ಟೀರಿಯರ್‌

    ಇಂಟೀರಿಯರ್‌

    ಸೌಕರ್ಯ ಮತ್ತು ಸೌಲಭ್ಯ 

    ಇಂಫೋಟೈನ್‌ಮೆಂಟ್‌

    ಸುರಕ್ಷತೆ 

    • ಏರೋ ಇನ್ಸರ್ಟ್‌ಗಳೊಂದಿಗೆ 18-ಇಂಚಿನ ಅಲಾಯ್ ಚಕ್ರಗಳು
    • ಗ್ರಿಲ್‌ನಲ್ಲಿ ಲೈಟ್ ಬಾರ್
    • ಲೆದರ್ ಕವರ್‌
    • 2-ಸ್ಪೋಕ್ ಲೆದರ್ ಫಿನಿಶ್ಡ್ ಸ್ಟೀರಿಂಗ್ ವೀಲ್
    • ಬೂಟ್‌ನಲ್ಲಿ ಡಬಲ್-ಸೈಡ್ ಕಾರ್ಪೆಟ್
    • ಮಸಾಜ್, ವೆಂಟಿಲೇಷನ್, ಹೀಟಿಂಗ್ ಮತ್ತು ಮೆಮೊರಿ ಫಂಕ್ಷನ್‌ನೊಂದಿಗೆ ಪವರ್-ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು
    • 6 ಡ್ರೈವ್ ಮೋಡ್‌ಗಳು
    • ಯಾವುದು ಇಲ್ಲ
    • ಸುಧಾರಿತ ಚಾಲಕ ಗಮನ ಮತ್ತು ಅರೆನಿದ್ರಾವಸ್ಥೆ ಮಾನಿಟರ್
    • ಪೂರ್ವ ಅಪಘಾತ ಪೂರ್ವಭಾವಿ ಪ್ರಯಾಣಿಕರ ರಕ್ಷಣಾ ವ್ಯವಸ್ಥೆ
    • ಹಿಲ್‌ ಸ್ಟಾರ್ಟ್‌ ಆಸಿಸ್ಟ್‌
    • ಹಿಲ್‌ ಡಿಸೆಂಟ್‌ ಕಂಟ್ರೋಲ್‌
    • 360-ಡಿಗ್ರಿ ಕ್ಯಾಮೆರಾ
    • ಆಟೋ-ಪಾರ್ಕಿಂಗ್ ಆಸಿಸ್ಟ್‌

    ಹೆಚ್ಚುವರಿ ವೆಚ್ಚಕ್ಕೆ, ಸ್ಕೋಡಾ ಕೊಡಿಯಾಕ್ ತನ್ನ ಟಾಪ್‌-ಎಂಡ್‌ ವೆರಿಯೆಂಟ್‌ಗಳಲ್ಲಿ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ತಂತ್ರಜ್ಞಾನ ಹಾಗೂ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಕೆಲವು ಉತ್ತಮವಾದ ಅಂಶಗಳನ್ನು ಹೆಚ್ಚುವರಿಯಾಗಿ ತರುತ್ತದೆ. ಆದರೆ ಇನ್ಫೋಟೈನ್‌ಮೆಂಟ್ ವಿಭಾಗದಲ್ಲಿ ಯಾವುದೇ ಸೇರ್ಪಡೆ ಇಲ್ಲ. ಇದು ಸ್ಕೋಡಾದ ಮೂರು ಹೆಚ್ಚುವರಿ ಸಿಂಪ್ಲಿ ಕ್ಲೆವರ್ ಫೀಚರ್‌ಗಳನ್ನು ಪಡೆಯುತ್ತದೆ, ಜೊತೆಗೆ ಕಪ್ಪು/ಕಂದು ಬಣ್ಣದ ಲೆದರ್‌ ಕವರ್‌, ವೆಂಟಿಲೇಶನ್‌ ಮತ್ತು ಮಸಾಜ್ ಫೀಚರ್‌ನೊಂದಿಗೆ ಉತ್ತಮ ಮುಂಭಾಗದ ಸೀಟುಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಆಟೋಮ್ಯಾಟಿಕ್‌ ಪಾರ್ಕಿಂಗ್ ಅಸಿಸ್ಟ್‌ ಫೀಚರ್‌ಅನ್ನು ಹೊಂದಿದೆ. ಇಕೋ, ನಾರ್ಮಲ್, ಸ್ಪೋರ್ಟ್, ಆಫ್‌ರೋಡ್‌, ಸ್ನೋ ಮತ್ತು ಇಂಡಿವಿಜುವಲ್ ಎಂಬ 6 ಡ್ರೈವ್ ಮೋಡ್‌ಗಳೊಂದಿಗೆ ಈ ವೇರಿಯೆಂಟ್‌ಅನ್ನು ಡ್ರೈವ್‌ ಮಾಡುವುದನ್ನು ನೀವು ಹೆಚ್ಚು ಆನಂದಿಸುವಿರಿ.

    2025 ಸ್ಕೋಡಾ ಕೊಡಿಯಾಕ್: ಪವರ್‌ಟ್ರೇನ್ ಆಯ್ಕೆಗಳು

    ಹೊಸ ಸ್ಕೋಡಾ ಕೊಡಿಯಾಕ್ ತನ್ನ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮುಂದುವರೆದಿದೆ, ಇದು ಆಲ್-ವೀಲ್ ಡ್ರೈವ್ ಸಿಸ್ಟಮ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗೆಯೇ, ಈ ಬಾರಿ ಎಂಜಿನ್ ಅನ್ನು ಮರು-ಟ್ಯೂನ್ ಮಾಡಲಾಗಿದೆ, ಏಕೆಂದರೆ ಅದು ಮೊದಲಿಗಿಂತ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

    ಎಂಜಿನ್‌

    2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

    ಪವರ್‌

    204 ಪಿಎಸ್‌ (+14 ಪಿಎಸ್‌)

    ಟಾರ್ಕ್‌

    320 ಎನ್‌ಎಮ್‌ (ಹಿಂದಿನಂತೆ ಇದೆ)

    ಟ್ರಾನ್ಸ್‌ಮಿಷನ್‌

    7-ಸ್ಪೀಡ್‌ DCT*

    ಕ್ಲೈಮ್‌ ಮಾಡಲಾದ ಮೈಲೇಜ್‌

    14.86 ಕಿ.ಮೀ.

    ಡ್ರೈವ್‌ಟ್ರೈನ್‌

    ಆಲ್‌-ವೀಲ್-ಡ್ರೈವ್‌(AWD)

    *DCT- ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್

    2025 ಸ್ಕೋಡಾ ಕೊಡಿಯಾಕ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

    ಸ್ಕೋಡಾ ಕೊಡಿಯಾಕ್ ಕಾರಿನ ಬೆಲೆ ಈ ಕೆಳಗಿನಂತಿದೆ:

    ಕೊಡಿಯಾಕ್‌ ಸ್ಪೋರ್ಟ್‌ ಲೈನ್‌

    ಕೊಡಿಯಾನ್‌ ಸೆಲೆಕ್ಷನ್‌ L&K

    ವ್ಯತ್ಯಾಸ

    46.89 ಲಕ್ಷ ರೂ.

    48.69 ಲಕ್ಷ ರೂ.

    1.8 ಲಕ್ಷ ರೂ.

    *ಎರಡೂ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಂ ಆಗಿದೆ.

    ಇದನ್ನು ನಮ್ಮ ದೇಶದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ ಮತ್ತು ಟೊಯೋಟಾ ಫಾರ್ಚೂನರ್, ಎಂಜಿ ಗ್ಲೋಸ್ಟರ್ ಮತ್ತು ಜೀಪ್ ಮೆರಿಡಿಯನ್‌ನಂತಹ ಇತರ ಪೂರ್ಣ-ಗಾತ್ರದ ಎಸ್‌ಯುವಿಗಳೊಂದಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Skoda ಕೊಡಿಯಾಕ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience