• English
  • Login / Register

ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದ ಸ್ಕೋಡಾ- ವೋಕ್ಸ್‌ವ್ಯಾಗನ್‌

ಸ್ಕೋಡಾ ಸ್ಲಾವಿಯಾ ಗಾಗಿ dipan ಮೂಲಕ ಮೇ 27, 2024 08:41 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದೆ,  ಇದರಲ್ಲಿ ಸ್ಕೋಡಾದ ಕುಶಾಕ್ ಮತ್ತು ಸ್ಲಾವಿಯಾ, ಮತ್ತು ವೋಕ್ಸ್‌ವ್ಯಾಗನ್‌ನ ಟೈಗುನ್ ಮತ್ತು ವರ್ಟಸ್‌ನ 3 ಲಕ್ಷ ಕಾರುಗಳು ಸೇರಿದೆ

Skoda Volkswagen group production milestone

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಗ್ರೂಪ್‌ನ ಕಾರುಗಳ ಪಟ್ಟಿಯಲ್ಲಿ ಪ್ರಸ್ತುತ ಸ್ಕೋಡಾ ಸ್ಲಾವಿಯಾ, ಕುಶಾಕ್, ಕೊಡಿಯಾಕ್ ಮತ್ತು ಸುಪರ್ಬ್, ಹಾಗೆಯೇ ವೋಕ್ಸ್‌ವ್ಯಾಗನ್ ವರ್ಟಸ್, ಟೈಗುನ್ ಮತ್ತು ಟಿಗುವಾನ್ ಅನ್ನು ಒಳಗೊಂಡಿದೆ. ಈಗ, ಎರಡೂ ಕಾರು ತಯಾರಕರು ಒಟ್ಟಾಗಿ, ವಾಹನ ತಯಾರಿಕೆ, ಎಂಜಿನ್ ಉತ್ಪಾದನೆ ಮತ್ತು ರಫ್ತು ಸೇರಿದಂತೆ ಹಲವಾರು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಈ ಮೈಲಿಗಲ್ಲುಗಳ ವಿಶೇಷತೆಗಳು ಇಲ್ಲಿವೆ:

ಪುಣೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳ ತಯಾರಿ 

2009 ರಿಂದ, ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಸಮೂಹವು ಸ್ಕೋಡಾ ಫ್ಯಾಬಿಯಾ ಹ್ಯಾಚ್‌ಬ್ಯಾಕ್‌ನಿಂದ ಪ್ರಾರಂಭಿಸಿ ದೇಶದಲ್ಲಿ 15 ಲಕ್ಷ ವಾಹನಗಳನ್ನು ಉತ್ಪಾದಿಸಿದೆ. ಈ ಸಾಧನೆಯು ವೆಂಟೊ ಮತ್ತು ಪೊಲೊ, ಮತ್ತು ಸ್ಕೋಡಾ ರಾಪಿಡ್‌ನಂತಹ ಐಕಾನಿಕ್ ವೋಕ್ಸ್‌ವ್ಯಾಗನ್ ಸಮೂಹದ ಮೊಡೆಲ್‌ಗಳನ್ನು ಒಳಗೊಂಡಿದೆ, ಜೊತೆಗೆ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಹೊಸ ಮಾದರಿಗಳಾದ  ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್ ಮತ್ತು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾವನ್ನು ಒಳಗೊಂಡಿದೆ.

ಭಾರತದಲ್ಲಿ 3.8 ಲಕ್ಷಕ್ಕೂ ಹೆಚ್ಚು ಎಂಜಿನ್‌ಗಳ ತಯಾರಿ 

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಗ್ರೂಪ್‌ಗಾಗಿ ಪುಣೆಯ ಚಕನ್ ಘಟಕದಲ್ಲಿ ಎಂಜಿನ್ ಶಾಪ್ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಘಟಕದಲ್ಲಿ ವೋಕ್ಸ್‌ವ್ಯಾಗನ್ ಇಂಡಿಯಾ ಸಮೂಹ 3.8 ಲಕ್ಷಕ್ಕೂ ಹೆಚ್ಚು ಎಂಜಿನ್‌ಗಳನ್ನು ತಯಾರಿಸಿದೆ. 1-ಲೀಟರ್ TSI ಇಂಜಿನ್‌ನ ಹೆಚ್ಚಿನ ಭಾಗಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂಬ ಅಂಶದಿಂದ ಈ ಸಾಧನೆಗೆ ಮತ್ತಷ್ಟು ಹಿರಿಮೆ ಸೇರಿದಂತಾಗಿದೆ. 

ಇಂಡಿಯಾ 2.0 ಯೋಜನೆಯಡಿ 3 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ತಯಾರಿ 

ಕಂಪನಿಯು ತನ್ನ ಇಂಡಿಯಾ 2.0 ಯೋಜನೆಯ ಭಾಗವಾಗಿ 3 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಉತ್ಪಾದಿಸಿದೆ ಎಂದು ಹೇಳಿಕೊಂಡಿದೆ. ಈ ಯೋಜನೆಯಡಿಯಲ್ಲಿ, ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಸಮೂಹವು ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್, ಹಾಗೆಯೇ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾಗಳನ್ನು ವಿನ್ಯಾಸಗೊಳಿಸಿತು ಮತ್ತು ತಯಾರಿಸಿತು, ಇವೆಲ್ಲವೂ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ.

ಶೇಕಡಾ 30 ರಷ್ಟು ಕಾರುಗಳನ್ನು 40 ದೇಶಗಳಿಗೆ ರಫ್ತು

ಈ ಸಮೂಹ ತನ್ನ ಶೇಕಡ 30 ರಷ್ಟು ಮೇಡ್-ಇನ್-ಇಂಡಿಯಾ ವಾಹನಗಳನ್ನು 40 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಿದೆ, ಈ ಮೂಲಕ ಭಾರತವನ್ನು ಜಾಗತಿಕವಾಗಿ ತನ್ನ ನಾಲ್ಕನೇ ಅತಿದೊಡ್ಡ ರಫ್ತು ಕೇಂದ್ರವನ್ನಾಗಿ ಮಾಡಿದೆ.

ಇನ್ನಷ್ಟು ಓದಿ : ಸ್ಲಾವಿಯಾ ಆಟೋಮ್ಯಾಟಿಕ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Skoda ಸ್ಲಾವಿಯಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience