ಹೋಂಡಾ WR-V ಯ ಐದು ವಿಶೇಷಯಾದ ವಾಸ್ತವಿಕ ವಿಷಯಗಳು
ಏಪ್ರಿಲ್ 26, 2019 10:21 am ರಂದು cardekho ಮೂಲಕ ಪ್ರಕಟಿಸಲಾಗಿದೆ
- 11 ಕಾಮೆಂಟ್ಗಳು
- ಕಾಮೆಂಟ್ ಅನ್ನು ಬರೆಯಿರಿ
ಹೋಂಡಾ WRV ಶೋ ರೂಮ್ ಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ ಮಾರ್ಚ್ ಮದ್ಯ 2017, ನಿಮಗೆ ಈಗಾಗಲೇ ಕೆಲವು ವರದಿ ಗಳು ತಲುಪಿದ್ದು ನಿಮಗೆ ಸ್ಪಷ್ಟ ಮಾಹಿತಿ ಸಿಕ್ಕಿರಬಹುದು. ಶೀಘ್ರ ವಾಗಿ ಗಮನಿಸಬಹುದಾದ ಸಾರಾಂಶ ಗಳನ್ನೂ ಕೆಳಗೆ ಕೊಟ್ಟಿದೆ:
- WR-V ಜಾಜ್ ಹಾಗು ಹೋಂಡಾ ಸಿಟಿ ಯ ವೇದಿಕೆ ಮೇಲೆ ತಯಾರಿಸಲಾಗಿದೆ.
- ಇದು ಪವರ್ ಟ್ರೈನ್ ಆಯ್ಕೆಯನ್ನು ಅನ್ನು ಜಾಜ್ ನ 1.2-litre ಪೆಟ್ರೋಲ್ ಹಾಗು 1.5-litre ಡೀಸೆಲ್ ಮೋಟಾರ್ ಜೊತೆಗೆ ಹಂಚಿಕೊಂಡಿದೆ. ಪೆಟ್ರೋಲ್ ನದರಲ್ಲಿ ಐದು- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಕೊಡಲಾಗಿದೆ ಹಾಗು ಡೀಸೆಲ್ ನಲ್ಲಿ ಆರು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಕೊಡಲಾಗಿದೆ.
- ಇದು ಜಾಜ್ ವೇದಿಕೆಯ ಕ್ರಾಸ್ಒವರ್ ಆಗಿರುವುದರಿಂದ, ಇದರ ಡ್ಯಾಶ್ ಬೋರ್ಡ್, ಅಂತರಿಕಗಳ ನೋಟ ಗಳನ್ನೂ ಸಹ ಮುಂದುವರೆಸಲಾಗಿದೆ.
ಈಗ, ಇದರಲ್ಲಿರುವ ಕೆಲವು ಆಸಕ್ತಿದಾಯಕ ಅಂಶಗಳನ್ನು ನೋಡೋಣ.
ಇನ್ಫೋಟೈನ್ಮೆಂಟ್
ನಮಗೆ ಹೋಂಡಾ ದ R&D ಕಾರ್ಯನಿರ್ವಾಹಕರು ಧೃಡೀಕರಿಸಿದಂತೆ, WR-Vನಲ್ಲಿ ಸಿಟಿ ಫೇಸ್ ಲಿಫ್ಟ್ ಹಾಗು ಮೇಲಿನ ವೇರಿಯೆಂಟ್ ಗಳಲ್ಲಿರುವ ಏಳು ಇಂಚು ಡಿಜಿ ಪ್ಯಾಡ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ. ಈ ಸಿಸ್ಟಮ್ ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್ ಮತ್ತು ಟೆಲೆಫೋನಿ , SD ಕಾರ್ಡ್ ನಲ್ಲಿ ಬೇಸ್ ಆಗಿರುವ ನೇವಿಗೇಶನ್ ಸಿಸ್ಟಮ್ ಮತ್ತು ಮೀಡಿಯಾ ಪ್ಲೇಯರ್ ಅನ್ನು ಆಡಿಯೋ ಮತ್ತು ವಿಡಿಯೋ ಪ್ಲೇ ಮಾಡಲು ಸಪೋರ್ಟ್ ಮಾಡುತ್ತದೆ. ಇದು ಒಂದು HDMI ಪೋರ್ಟ್ ಹಾಗು USB ಕನೆಕ್ಟಿವಿಟಿಯೊಂದಿಗೆ ಬರುತ್ತದೆ, ಜೊತೆಗೆ Wi-Fi ಹಾಗು ಮಿರರ್ ಲಿಂಕ್ ಸಪೋರ್ಟ್ ಸಹ ಇದೆ. ಇನ್ನೊಂದು ರೀತಿಯಲ್ಲಿ ಇದರಲ್ಲಿ CD drive ಅಥವಾ AUX port ಇರುವುದಿಲ್ಲ.
ಸನ್ ರೂಫ್
ಇದನ್ನು ಜಾಜ್ ವೇದಿಕೆ ಮೇಲೆ ಮಾಡಲಾಗಿದ್ದರೂ WR-V ಕೆಲವು ವಿಷಯಗಳನ್ನು ಸಿಟಿ ಇಂದ ತೆಗೆದುಕೊಂಡಿದೆ, ಸನ್ ರೂಫ್ ಆಯ್ಕೆಯನ್ನು ಸೇರಿಸಿ. ಮತ್ತು ಇದನ್ನು ಟಾಪ್ ಎಂಡ್ ಗ್ರೇಡ್ ಗಳಲ್ಲಿ ಕೊಡಲಾಗಿದೆ.
ಕ್ರೂಸ್ ಕಂಟ್ರೋಲ್
WR-V ಯಲ್ಲಿ ಹೆಚ್ಚಿನ ಕೊಡುಗೆಗಳಾದ ಕ್ರೂಸ್ ಕಂಟ್ರೋಲ್ ಅನ್ನು ಕೊಡಲಾಗಿದೆ. ಈ ಫೀಚರ್ ನಮ್ಮ ರೋಡ್ ಕಂಡೀಶನ್ ಗಳಲ್ಲಿ ಉಪಯೋಗಿಸಲು ಸ್ವಲ್ಪ ಕಷ್ಟ ಎನಿಸಿದರೂ, ಇದು ಒಂದು ವರದಾಯಕ ಫೀಚರ್ ಆಗಿದೆ ಹೈವೆ ಉಪಯೋಗದಲ್ಲಿ. WR-V ಯಲ್ಲಿ SUV ಮಾದರಿಯ ನೋಟವಿರುವುದಲ್ಲದೆ, ಬಹಳಷ್ಟು ಉಪಯುಕ್ತ ವಸ್ತುಗಳು ಇದೆ, ಇದಕ್ಕೆ ಹೊಂದಿಕೊಳ್ಳುವ ಅಂತರಿಕಗಳು ಕಾರಣವಾಗಿರಬಹುದು. ಇದನ್ನು ಜನರು ವಿವಿಧ ನಗರಗಳನ್ನು ನೋಡಲು ಹೋಗುವ ವೀಕ್ ಎಂಡ್ ಟ್ರಿಪ್ ಗಳಿಗೆ ಉಪಯೋಗಿಸಬಹುದು., ಆಗ ಕ್ರೂಸ್ ಕಂಟ್ರೋಲ್ಪ ಉಪಯೋಗಕಾರವಾಗಿರುತ್ತದೆ. ಜೊತೆಗೆ ಹೋಂಡಾ ಪುಶ್ ಬಟನ್ ಸ್ಟಾರ್ಟ್ ಕೊಡುವ ಸಾಧ್ಯತೆಗಳಿವೆ.
ಗ್ರೌಂಡ್ ಕ್ಲಿಯರೆನ್ಸ್
ಹೋಂಡಾ ಕಾರ್ ಗಳಲ್ಲಿ ಶೀತಲ ಗ್ರೌಂಡ್ ಕ್ಲಿಯರೆನ್ಸ್ ಇರುತ್ತದೆ ಎಂಬ ಖ್ಯಾತಿ ಇದೆ. ಹಾಗಾಗಿ ಇದರ ಕೆಳಬಾಗದಲ್ಲಿ ರಸ್ತೆ ಅಂಕು ಡೊಂಕು ಗಳಿಂದ ಪೆಟ್ಟಾಗುವ ಸಾಧ್ಯತೆ ಇದೆ. WR-V ಯಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಸುಮಾರು 200mm ಇದೆ, ಹಾಗಾಗಿ ಇದನ್ನು ಫೋರ್ಡ್ ಏಕೋ ಸ್ಪೋರ್ಟ್ ನ ಜೊತೆಗೆ ಲೀಗ್ ಗೆ ಸೇರಿಸಬಹುದಾಗಿದೆ. ನೀವು ಕೆಸರು ಮಣ್ಣಿನಿಂದ ಕೂಡಿದ ರಸ್ತೆಗಳಲ್ಲಿ, ಅಥವಾ ಟೌನ್ ರಸ್ತೆ ಗಳಲ್ಲಿ ಡ್ರೈವ್ ಮಾಡುವ ಸಾದ್ಯತೆಗಳಿಲ್ಲದಿದ್ದರೂ, ಎತ್ತರದ ಗ್ರೌಂಡ್ ಕ್ಲಿಯರೆನ್ಸ್ WR-V ಗೆ ಹೆಚ್ಚು ಪ್ಯಾಸೆಂಜರ್ ಗಳೊಂದಿಗೆ ಹೋಗುವಾಗ ಸಹಾಯಕವಾಗಿರುತ್ತದೆ.
ಜಾಜ್ ಗಿಂತಲೂ ಹೆಚ್ಚಿನ ಸುತ್ತಳತೆಗಳು
WR-V ನಲ್ಲಿ ಉದ್ದನೆಯ ವೀಲ್ ಬೇಸ್ ಇದೆ (Jazz = 2,530mm, WR-V = 2,555mm). ಅಗಲ ಮತ್ತು ಎತ್ತರಗಳೂ ಸಹ ಹೆಚ್ಚಾಗಿವೆ 1,730mm and 1,600mm ಅನುಕ್ರಮವಾಗಿ, ಇದು ಹೋಂಡಾ ಬ್ರೆಜಿಲ್ ಶಾಖೆ ದೃಢಪಡಿಸಿದಂತೆ. ಬ್ರೆಜಿಲ್ ಸ್ಪೆಕ್ WR-V ಯು ನಾಲ್ಕು ಮೀಟರ್ ಉದ್ದವಿದೆ ಎಂದು ಹೇಳಲಾಗಿದೆ . ಆದರೂ ಹೋಂಡಾ ಕಾರ್ ಇಂಡಿಯಾ ಇದಕ್ಕೆ ಸ್ವಲ್ಪ ಬದಲಾವಣೆ ಕೊಟ್ಟು ನಾಲ್ಕು ಮೀಟರ್ ಮಾರ್ಕ್ ಒಳಗೆ ಇರುವಂತೆ ಮಾಡಲಾಗುತ್ತದೆ ಎಂದು ಹೇಳಬಹುದು.
ಹೋಂಡಾ WR-V ಬಗ್ಗೆ ನಿಮ್ಮ ಅನಿಸಿಕೆ ಏನು? ನೀವು ಇದನ್ನು ಯಾವ ಬೆಲೆಯಲ್ಲಿ ಕೊಂಡುಕೊಳ್ಳಲ್ಲು ಬಯಸುವಿರಿ? ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.