• English
    • Login / Register
    Discontinued
    • Honda WRV 2017-2020

    ಹೋಂಡಾ ಡವೋಆರ್‌-ವಿ 2017-2020

    4.3422 ವಿರ್ಮಶೆಗಳುrate & win ₹1000
    Rs.8.08 - 10.48 ಲಕ್ಷ*
    last recorded ಬೆಲೆ/ದಾರ
    Th IS model has been discontinued
    buy ಬಳಸಿದ ಹೋಂಡಾ ಕಾರುಗಳು

    ಹೋಂಡಾ ಡವೋಆರ್‌-ವಿ 2017-2020 ನ ಪ್ರಮುಖ ಸ್ಪೆಕ್ಸ್

    ಇಂಜಿನ್1199 cc - 1498 cc
    ಪವರ್88.7 - 98.6 ಬಿಹೆಚ್ ಪಿ
    torque110 Nm - 200 Nm
    ಟ್ರಾನ್ಸ್ಮಿಷನ್ಮ್ಯಾನುಯಲ್‌
    mileage17.5 ಗೆ 25.5 ಕೆಎಂಪಿಎಲ್
    ಫ್ಯುಯೆಲ್ಪೆಟ್ರೋಲ್ / ಡೀಸಲ್
    • ಏರ್ ಪ್ಯೂರಿಫೈಯರ್‌
    • ಪಾರ್ಕಿಂಗ್ ಸೆನ್ಸಾರ್‌ಗಳು
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ಕ್ರುಯಸ್ ಕಂಟ್ರೋಲ್
    • key ವಿಶೇಷಣಗಳು
    • top ವೈಶಿಷ್ಟ್ಯಗಳು

    ಹೋಂಡಾ ಡವೋಆರ್‌-ವಿ 2017-2020 ಬೆಲೆ ಪಟ್ಟಿ (ರೂಪಾಂತರಗಳು)

    following details are the last recorded, ಮತ್ತು the prices ಮೇ vary depending on the car's condition.

    ಡವೋಆರ್‌-ವಿ 2017-2020 ಅಲೈವ್‌ ಎಡಿಷನ್ ಎಸ್‌(Base Model)1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್8.08 ಲಕ್ಷ* 
    ಡವೋಆರ್‌-ವಿ 2017-2020 ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್8.08 ಲಕ್ಷ* 
    ಡವೋಆರ್‌-ವಿ 2017-2020 ಐ-ವಿಟೆಕ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್8.15 ಲಕ್ಷ* 
    ಡವೋಆರ್‌-ವಿ 2017-2020 ಎಡ್ಜ್ ಎಡಿಷನ್ ಐ-ಡಿಟೆಕ್‌ ಎಸ್‌(Base Model)1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್9.16 ಲಕ್ಷ* 
    ಡವೋಆರ್‌-ವಿ 2017-2020 ಅಲೈವ್‌ ಎಡಿಷನ್ ಡೀಸಲ್ ಎಸ್‌1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್9.16 ಲಕ್ಷ* 
    ಡವೋಆರ್‌-ವಿ 2017-2020 ಐ-ಡಿಟೆಕ್‌ ಎಸ್‌1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್9.25 ಲಕ್ಷ* 
    ಡವೋಆರ್‌-ವಿ 2017-2020 ಐ-ವಿಟೆಕ್‌ ವಿಎಕ್ಸ್1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್9.25 ಲಕ್ಷ* 
    ಡವೋಆರ್‌-ವಿ 2017-2020 ಅಮೇಜ್ ಎಕ್ಸ್‌ಕ್ಲೂಸಿವ್ ಪೆಟ್ರೋಲ್(Top Model)1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್9.35 ಲಕ್ಷ* 
    ಡವೋಆರ್‌-ವಿ 2017-2020 ಐ-ಡಿಟೆಕ್‌ ವಿ1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್9.95 ಲಕ್ಷ* 
    ಡವೋಆರ್‌-ವಿ 2017-2020 ಐ-ಡಿಟೆಕ್‌ ವಿಎಕ್ಸ್1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್10.35 ಲಕ್ಷ* 
    ಡವೋಆರ್‌-ವಿ 2017-2020 ಅಮೇಜ್ ಎಕ್ಸ್‌ಕ್ಲೂಸಿವ್ ಡೀಸೆಲ್(Top Model)1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್10.48 ಲಕ್ಷ* 
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಹೋಂಡಾ ಡವೋಆರ್‌-ವಿ 2017-2020 ವಿಮರ್ಶೆ

    Overview

    ವಿಭಿನ್ನವಾಗಿದೆ - ಎಂಬುದು ನೀವು WR-V.ನೋಡಿದಾಗ   ನಿಮ್ಮ ಮನಸ್ಸಿಗೆ ಅನಿಸುವ ಮೊದಲ  ಪದ. ಹೋಂಡಾ ಬಹಳಷ್ಟು ಸಮಯ ತೆಗೆದುಕೊಂಡಿದೆ ತನ್ನ ಮೊದಲ ಸಬ್-4 ಮೀಟರ್ ಕ್ರಾಸ್ಒವರ್ ಬಿಡುಗಡೆ ಮಾಡಲು, ನಾವು ಕಂಡುಕೊಂಡಂತೆ ಇದು ನವೀನತೆಗಳನ್ನು ಪಡೆದ  ಜಾಜ್  ಆಗಿಲ್ಲ. ಹೋಂಡಾ ಇಂಡಿಯಾ ಅವರ  R&D ವಿಭಾಗ ಉತ್ಪಾದಿಸಿದೆ WRV ಯನ್ನು ಭಾರತಕ್ಕಾಗಿ ಹಾಗು ಇತರ ಮೇಲೆ ಬರುತ್ತಿರುವ ಮಾರ್ಕೆಟ್ ಗಳಿಗಾಗಿ (ಬ್ರೆಜಿಲ್ ಸೇರಿ ). ಹೆಚ್ಚುವರಿಯಾಗಿ, ವಿಶೇಷ ಡಿಸೈನ್ ಇರುವುದಲ್ಲದೆ , ಅದು ಪಡೆಯುತ್ತದೆ ತಾಂತ್ರಿಕ ನವೀಕರಣಗಳಾದ ಹೊಸ ಟ್ರಾನ್ಸ್ಮಿಷನ್ ಪೆಟ್ರೋಲ್ ಎಂಜಿನ್ ಗಾಗಿ, ಹಾಗು ಬದಲಾದ ಸಸ್ಪೆನ್ಷನ್ , ಹಾಗು ಹಲವು ಸಿಟಿ ಇಂದ ಪಡೆಯಲಾದ ಪ್ರೀಮಿಯಂ ಫೀಚರ್ ಗಳು ಸಹ ಕೊಡಲಾಗಿದೆ. ಯಾವುದೇ ಸಂದೇಹವಿಲ್ಲದೆ  WR-V ಅದರದೇ ಎಡಿಎ ನಿಲುವು ಪಡೆದಿದೆ, ಆದರೆ ಈ ಕರಣ ಇದನ್ನು ಜಾಜ್ ಬದಲಾಗಿ ಕೊಳ್ಳಲು ಸಾಕಾಗುತ್ತದೆಯೇ , ಹಾಗು ಪ್ರತಿಸ್ಪರ್ದಿಗಳಿಗಿಂತ ಚೆನ್ನಾಗಿದೆಯೇ?

    Overview

    WR-V  ಯ ಆಯ್ಕೆ  ಜಾಜ್ ಗಿಂತಲೂ ಉತ್ತಮವಾಗಿರುತ್ತದೆಯೇ?  ಹೌದು, ವಿಭಿನ್ನವಾದ ಸ್ಟೈಲಿಂಗ್ ಅಳದೆ , ಅದ್ ಪಡೆಯುತ್ತದೆ ಉತ್ತಮ ಫೀಚರ್ ಗಳು, ಅವುಗಳನ್ನು ಹೋಂಡಾ ಸಿಟಿ ಒಂದಿಗೆ ಹಂಚಿಕೊಳಲಾಗಿದೆ. ನಮ್ಮ ನಿರೀಕ್ಷೆಯಂತೆ ಹೆಚ್ಚುವರಿ ಪ್ರೀಮಿಯಂ ಅದ  ರೂ 70,000-1 ಲಕ್ಷ ಹೆಚ್ಚು ಇರಬಹುದು ಜಾಜ್ ಗೆ ಹೋಲಿಸಿದರೆ. ಅದು ಹೆಚ್ಚುವರಿ ಕಿಟ್ ಗಳಿಗೆ ಮೌಲ್ಯ ಯುಕ್ತವಾಗಿದೆ. 

    ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ನಿಮಗೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದಂತೆ ಅನಿಸುತ್ತದೆ.  ವಿಮರ್ಶಾತ್ಮಕವಾಗಿ ಇದು ಪ್ರತಿಸ್ಪರ್ದಿಗಳಿಗಿಂತ ವಿಭಿನ್ನವಾಗಿದೆ, ಹುಂಡೈ i20 ಆಕ್ಟಿವ್, VW ಕ್ರಾಸ್ ಪೋಲೊ, ಟೊಯೋಟಾ ಎಟಿಯೋಸ್  ಕ್ರಾಸ್ ಅಥವಾ ಅರ್ಬನ್ ಕ್ರಾಸ್  ಗಳಿಗೆ ಹೋಲಿಸಿದರೆ. ಆದರೆ, ಅದರ ನಿರೀಕ್ಷಿತ ಬೆಲೆ ಪಟ್ಟಿ ಪರಿಗಣಿಸಿದರೆ, ಇದನ್ನು ಮಾರಾಟ ಮಾಡಲು ಕಷ್ಟ ಆಗಬಹುದು ಇತರ ಕೈಗೆಟುವ ಬೆಲೆ ಹೊಂದಿದ ಕ್ರಾಸ್ ಓವರ್ ಗಳಾದ ಫೋರ್ಡ್ ಏಕೋ ಸ್ಪೋರ್ಟ್ ಅಥವಾ ಮಾರುತಿ ಸುಜುಕಿ ವಿಟಾರಾ ಬ್ರೆಝ ಪರಿಗಣಿಸಿದಾಗ.

    ಎಕ್ಸ್‌ಟೀರಿಯರ್

    Exterior

    ಕಾಠಿಣ್ಯತೆ ಶೈಲಿಯ ಡಿಸೈನ್ ಹಾಗು ಹೋಂಡಾ - ಇವೆರೆಡನ್ನು ನೀವು ಒಮ್ಮೆಲೆ ಹೇಳಲು ಸಾಧ್ಯವಿಲ್ಲ , ಆದರೆ WR-V ಸಾಕಷ್ಟು ಸದೃಢ ವಾಗಿದೆ, ಅದು ಜಾಜ್ ಬೆಲೆ ಆಧಾರಿತ ಡಿಸೈನ್ ಹೊಂದಿದ್ದರು ಸಹ. ಅದರ ಪ್ರಖರ ವಿನ್ಯಾಸ ಬದಲಾವಣೆಗೆ  ಧನ್ಯವಾದಗಳು, WRV ನಲ್ಲಿ ಒಂದು ಉತ್ತಮ ಹ್ಯಾಚ್ ಆಧಾರಿತ ಕ್ರಾಸ್ ಓವರ್ ನಿಲುವು ಇದೆ. 

    Exterior

    ನಯವಾದ ಹೆಡ್ ಲೈಟ್ ಗಳನ್ನು ಬಿಡಲಾಗಿದೆ ಹಾಗು ಆಕರ್ಷಕ ಹೆಡ್ ಲ್ಯಾಂಪ್ ಗಳು ಕ್ರೆಸೆಂಟ್ ಮೂನ್ ಶೈಲಿಯ ಡೇ ಟೈಮ್ ರನ್ನಿಂಗ್ LED ಗಳನ್ನು  ತಿರುವುಗಳಲ್ಲಿ ಪಡೆಯುತ್ತದೆ. ಕಾರ್ ನ ಮುಂಭಾಗ ಚಪ್ಪಟೆಯಾಗಿದೆ ಸಾಂಪ್ರದಾಯಿಕ SUV  ಯಂತೆ ಹಾಗು ಅದು ದಪ್ಪ ಕ್ರೋಮ್ ಗ್ರಿಲ್ ಒಂದಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಬಾನೆಟ್ ಸ್ವಲ್ಪ ಎತ್ತರದಲ್ಲಿ ಇದೆ, ಹಾಗು ನುಣುಪಾದ ಕೊನೆಗಳನ್ನು ಪಡೆಯುತ್ತದೆ , ಆದರೂ ಸಹ ಹೋಂಡಾ  WR-V  ಯನ್ನು ಪಿಡೆಸ್ಟ್ರಿಯನ್ ಸೇಫ್ಟಿ ನಾರ್ಮ್ಸ್ ಗೆ ಅನುಗುಣವಾಗಿದೆ 

    Exterior

    ಖಂಡಿತವಾಗಿ ಹೇಳಬಹುದು, ಬ್ಲಾಕ್ ಕ್ಲಾಡ್ಡಿಂಗ್ ಅನ್ನು ಸುತ್ತಲೂ ಕೊಡಲಾಗಿದೆ, ಜೊತೆಗೆ ಪ್ಲಾಸ್ಟಿಕ್ ಸಿಲ್ವರ್ ಸ್ಕಿಡ್ ಪ್ಲೇಟ್ ಗಳು ಸಹ, ಆದರೆ ಗುಣಮಟ್ಟ ಸಾಧಾರಣವಾಗಿದೆ ಎಂದು ಹೇಳಬಹುದು. ಬದಿಗಳಲ್ಲಿ ಡೋರ್ ಪ್ಯಾನೆಲ್ ಹಾಗು ಕ್ಯಾರಕ್ಟಾರ್ ಗೆರೆಗಳು ನಿಮಗೆ ಜಾಜ್ ಅನ್ನು ಜ್ಞಾಪಿಸುತ್ತದೆ. ವಾಸ್ತವವಾಗಿ WR-V ಯು  44mm ಉದ್ದವಾಗಿದೆ ಹಾಗು 57mm ಎತ್ತರವಾಗಿದೆ ಜಾಜ್ ಗೆ ಹೋಲಿಸಿದರೆ. ಅದರ ಅಗಲತೆ  40mm ಹೆಚ್ಚು ಇದೆ ಹಾಗು ವೀಲ್ ಬೇಸ್ ಸಹ 25mm ಅಧಿಕವಾಗಿದೆ !

    WR-V ನಲ್ಲಿ ದೊಡ್ಡದು ಚೆನ್ನಾಗಿರುತ್ತದೆ (ಬಿಗ್ಗರ್ ಇಸ್ ಬೆಟರ್ ) ಎನ್ನುವ ಥೀಮ್ ಅನ್ನು ಬೆಂಬಲಿಸುತ್ತದೆ. ಹಾಗಾಗಿ, ವೀಲ್ ಗಳು ದೊಡ್ದಾಗಿದೆ , 6-ಇಂಚು  ಸೆಟ್ 195/60- ಸೆಕ್ಷನ್ ಟೈರ್ ಗಳು. ಹೌದು ,   ಕ್ಲಿಯರೆನ್ಸ್ ಅನ್ನು ಸಹ ಹೆಚ್ಚಿಸಲಾಗಿದೆ  188mm (23mm  ಜಾಜ್ ಗಿಂತ ಹೆಚ್ಚು ). ಈ ವಿಭಾಗದ ಮುಂಚೂಣಿಯಲ್ಲಿರದಿರಬಹುದು ಆದರೆ ನಮ್ಮ ರಸ್ತೆಗಳಿಗೆ ಅನುಗುಣವಾಗಿದೆ , ಎಲ್ಲ ಸೀಟ್ ನಲ್ಲಿ ಪ್ಯಾಸೆಂಜರ್ ಗಳು ಕುಳಿತಿರುವಾಗಲು ಸಹ. 

    Exterior

    ಬೂಮ್ ರಾಂಗ್ -ಶೈಲಿಯ ಟೈಲ್ ಲೈಟ್ ಗಳು ಟೈಲ್ ಗೇಟ್ ಗೆ ತಗಲುತ್ತದೆ ಹಾಗು ನಂಬರ್ ಪ್ಲೇಟ್ ಅನ್ನು ಕೆಳ ಹಂತದಲ್ಲಿ ಇರಿಸಲಾಗಿರುವುದು ಹಾಗು ಕ್ರೋಮ್ ಅಪ್ಪ್ಲಿಕ್ ಆದರೆ ಮೇಲೆ ಇರುವುದು ನಿಮಗೆ ಹುಂಡೈ ಕ್ರೆಟಾ ವನ್ನು ನಪಿಸಬಹುದು. ಒಪ್ಪಿಕೊಳ್ಳುವಂತೆ , ಒಟ್ಟಾರೆ ಸ್ಟೈಲಿಂಗ್ ಆಕರ್ಷಕವಾಗಿದೆ , ಆದರೆ WR-V  ಯಾ ನೋಟ SUV ನೋಟದಿಂದ ಬಹಳಷ್ಟು ಹಿಂದೆ ಸರಿದಿದೆ - ಹಾಗಾಗಿ ನಿಮಗೆ ಅದು ಆಫ್ -ರೋಡ್ ಬಳಕೆಗೆ ಅನುಗುಣವಾಗಿಲ್ಲ ಎಂದೆನಿಸಬಾರದು. 

    ಟ್ರಿವಿಯಾ : ಬ್ರೆಜಿಲಿಯನ್  WR-V ನಾವು ಪಡೆದ ಕಾರ್ ಗಿಂತ ಭಿನ್ನವಾಗಿಲ್ಲ, ಆದರೆ ಗ್ರೌಂಡ್ ಕ್ಲಿಯರೆನ್ಸ್ 200mm ಆಗಿದೆ. ಅದು ಏಕೆ ಎಂದರೆ ಬ್ರೆಜಿಲ್ ಉಪಯೋಗಿಸುತ್ತದೆ ವಿಭಿನ್ನ ಅಳತೆಗೋಲು , ಅಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕಾರ್ ನ ಮದ್ಯ ದಲ್ಲಿ ಅಳತೆ ಮಾಡುತ್ತಾರೆ - ಮಿನಿಮಂ ಕ್ಲಿಯರೆನ್ಸ್ ಅಲ್ಲ. 

    ಬಾಹ್ಯ ಗಳ ಹೋಲಿಕೆ

    HONDA WRV
    Length (mm) 3999mm
    Width (mm) 1734mm
    Height (mm) 1601mm
    Ground Clearance (mm) 188mm
    Wheel Base (mm) 2555mm
    Kerb Weight (kg) 1168kg

     ಬೂಟ್ ಸ್ಪೇಸ್ ಹೋಲಿಕೆ

    HONDA WRV
    Volume 363 Litres

    ಇಂಟೀರಿಯರ್

    Interior

    ಬಾಹ್ಯಗಳಷ್ಟೇ ವಿಭಿನ್ನವಾಗಿ ಇದ್ದರೂ ಚಿರಪರಿಚಿತವಾಗಿದೆ.  WR-V  ಪಡೆಯುತ್ತದೆ ಜಾಜ್ ನಲ್ಲಿರುವಂತಹ  ಆಕರ್ಷಕ ಡ್ಯಾಶ್ ಬೋರ್ಡ್ , ಆದರೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಿಟಿ ಇಂದ ಪಡೆಯಲಾಗಿದೆ (ಇನ್ಫೋಟೈನ್ಮೆಂಟ್ ಸಿಸ್ಟಮ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ --ಹೋಂಡಾ ಸಿಟಿ ವಿಮರ್ಶೆ ಲಿಂಕ್ , ತಂತ್ರಜ್ಞಾನವನ್ನು MMV ನಲ್ಲಿ ಅಳವಡಿಸಲಾಗಿದೆ , ಅದು ಎಲ್ಲ ದರಲ್ಲಿ ಲಭ್ಯವಿಲ್ಲ ಆದರೆ ರೋಡ್ ಟೆಸ್ಟ್ ನಲ್ಲಿ ಕೊಡಲಾಗಿದೆ). ಸ್ಟಿಯರಿಂಗ್ ಸಹ ಅಳವಡಿಸಬಹುದಾಗಿದೆ ರೆಕ್ ಹಾಗು ರೀಚ್ (40mm ಟ್ರಾವೆಲ್ ಎರೆಡರಲ್ಲೂ )

    Interior

    ಹಾಗು  ಅದು ಪಡೆಯುತ್ತದೆ ಕ್ರೂಸ್ ಕಂಟ್ರೋಲ್, ಎತ್ತರ ಅಳವಡಿಸಬಹುದಾದ ಸೀಟ್ ಬೆಲ್ಟ್ ಹಾಗು ಪುಶ್ ಬಟನ್ ಸ್ಟಾರ್ಟರ್, ಆದರೆ ನೀವು ಡೀಸೆಲ್ ಆಯ್ಕೆ ಮಾಡಿದರೆ ಮಾತ್ರ. ಉತ್ತಮ ಸೌಲಭ್ಯ ಎಂದರೆ ಸನ್ ರೂಫ್  ಆಗಿರುತ್ತದೆ, ಹೊಸ ಸಿಟಿ ತರಹ ಅದು ಒನ್ ಟಚ್ ಆಪರೇಷನ್ ಪಡೆಯುತ್ತದೆ. 

    ವಿಶೇಷವಾದ ತುಣುಕುಗಳಾದ ಹೊಸ ಹಾಗು ಚಿಕ್ಕ ಗೇರ್ ಲಿವರ್ ಬಳಸಲು ಚೆನ್ನಾಗಿದೆ. i20  ನಂತೆ ಎರೆಡು ಆಂತರಿಕ ಬಣ್ಣಗಳ ಆಯ್ಕೆ ಲಭ್ಯವಿದೆ - ಕಪ್ಪು ಹಾಗು ಬ್ಲ್ಯೂಇಶ್ ಗ್ರೇ  ಹಾಗು ಕಪ್ಪು ಹಾಗು ಸಿಲ್ವರ್- ಗಮನಿಸಬೇಕಾದ ವಿಷಯವೆಂದರೆ ಬಣ್ಣಗಳ ವಿಭಿನ್ನತೆ ಕೇವಲ ಸೀಟ್ ಮತ್ತು ಡೋರ್ ಪ್ಯಾಡ್ ಹೊರ ಪದರಗಳಿಗೆ ಅನುಗುಣವಾಗಿದೆ.

    Interior

    ಜಾಜ್ ನಂತೆ , ಕ್ಯಾಬಿನ್ ಸ್ಪೇಸ್ ಬಹಳ ವಿಶಾಲವಾಗಿದೆ ಹಾಗು ಪೂರ್ಣ ಕುಟುಂಬದೊಂದಿಗೆ ಪ್ರಯಾಣ ಮಾಡಲು ಯಾವುದೇ ಅಡತಡೆ  ಇರುವುದಿಲ್ಲ. ವಿಶೇಷವಾಗಿ ನಿಮಗೆ  ಬಹಳಷ್ಟು ಬಾಟಲ್ ಹೋಲ್ಡರ್ ಗಳು , ಎರೆಡು ರೇರ್ ಸೀಟ್ ಪ್ಯಾಕೆಟ್  ಹಾಗು  363-ಲೀಟರ್ ಬೂಟ್ (ಜಾಜ್ =354-ಲೀಟರ್ ) ದೊರೆಯುತ್ತದೆ. 

    ಆದರೆ, ದೇವರು ಕೊಡುತ್ತಾನೆ ಹಾಗು ತೆಗೆದುಕೊಳ್ಳುತ್ತಾನೆ ಕೂಡ.

    Interior

    ಹೋಂಡಾ ಬಹಳಷ್ಟು ಫೀಚರ್ ಗಳನ್ನು ಸೇರಿಸಿದೆ, ಆರ್ಮ್ ರೆಸ್ಟ್ ನಲ್ಲಿ ಸ್ಟೋರೇಜ್ ಸೇರಿ, ಜಾಜ್ ನ ಮ್ಯಾಜಿಕ್ ಸೀಟ್ ಅನ್ನು ಬಿಡಲಾಗಿದೆ, ಹಾಗು ಇದರಲ್ಲಿ 60:40 ಸಹ ಲಭ್ಯವಿಲ್ಲ. ನಿಮಗೆ ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಅನ್ನು ಕಾರ್ ನಲ್ಲಿ ಕೊಡಲಾಗುತ್ತದೆ ಅದರ ಬೆಲೆ ಸುಮಾರು ರೂ 10 ಲಕ್ಷ ಇರುತ್ತದೆ ಆನ್ ರೋಡ್ ಬೆಲೆ ಗಿಂತ ಹೆಚ್ಚಾಗಿ ಇರುವಂತಹುದರಲ್ಲಿ! ಹೆಚ್ಚುವರಿಯಾಗಿ , ಒಟ್ಟಾರೆ ಫಿಟ್ ಅಂಡ್ ಫಿನಿಷ್ ಗುಣಮಟ್ಟ ಚೆನ್ನಾಗಿದ್ದಿರಬಹುದಿತ್ತು. ವಿಶೇಷವಾಗಿ ನೀವು WR-V  ಯು ಜಾಜ್ ಗಿಂತ ಹೆಚ್ಚು ಬೆಲೆ ಪಟ್ಟಿ ಹೊಂದಿದೆ ಎಂಬುದನ್ನು ಪರಿಗಣಿಸಿದಾಗ. ಮತ್ತೊಂದು ಅನಾನುಕೂಲ ಎಂದರೆ ಅದು ವಿಟಾರಾ ಬ್ರೆಝ ದಲ್ಲಿರುವಂತೆ ನಿಮಗೆ ಕಮಾಂಡಿಂಗ್ ಆಗಿರುವ ಡ್ರೈವಿಂಗ್ ನಿಲುವು ದೊರೆಯುವುದಿಲ್ಲ, ಹಾಗಿದ್ದಿದ್ದರೆ SUV ಅನುಭವಕ್ಕೆ ಒತ್ತುಕೊಡುತ್ತಿತ್ತು. 

    Interior

    ಸುರಕ್ಷತೆ

    ಎಲ್ಲ ಹೋಂಡಾ WR-V ವೇರಿಯೆಂಟ್ ಗಳು ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ , ABS ಜೊತೆಗೆ  EBD ಯನ್ನು ಸ್ಟ್ಯಾಂಡರ್ಡ್ ಆಗಿ. ಹಾಗು ಅದು ಪಡೆಯುತ್ತದೆ ರೇರ್ ಕ್ಯಾಮೆರಾ ಜೊತೆಗೆ ವಿವಿಧ ಕೋನಗಳ ದೃಷ್ಟಿ, ಆದರೆ ಸಿಟಿ ಹಾಗು ಜಾಜ್ ನಲ್ಲಿರುವಂತೆ ನಿಮಗೆ ರೇರ್ ಪಾರ್ಕಿಂಗ್ ಸೆನ್ಸರ್ ದೊರೆಯುವುದಿಲ್ಲ.  

    ಕಾರ್ಯಕ್ಷಮತೆ

    Performance

    WR-V ಪಡೆಯುತ್ತದೆ ಅದೇ ಪವರ್ ಟ್ರೈನ್ ಗಳ ಆಯ್ಕೆ ಜಾಜ್ ನಲ್ಲಿರುವಂತೆ, ಆಯ್ಕೆಯಾದ CVT ಆಟೋಮ್ಯಾಟಿಕ್ ಕೊಡುಗೆ ಜಾಜ್ ನಲ್ಲಿ ಕೊಟ್ಟಿರುವಂತಹುದರ ಹೊರತಾಗಿ. 1.2 ಪೆಟ್ರೋಲ್ ಪಡೆಯುತ್ತದೆ ಹೊಸ ಐದು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್. ಹೋಂಡಾ ಹೇಳುವಂತೆ , ಇದರಲ್ಲಿರುವ ಟ್ರಾನ್ಸ್ಮಿಷನ್ ನೀವು BR-V ನಲ್ಲಿ ಪಡೆಯುವ ಗೇರ್ ಬಾಕ್ಸ್ ಆಧಾರಿತವಾಗಿದೆ ಹಾಗು ಅದರ  ವೇಗಗತಿ ಪಡೆಯುವಿಕೆಯನ್ನು ಹೆಚ್ಚಿಸಲಾಗಿದೆ, ಆದರೆ ನಾವು ಡ್ರೈವ್  ಮಾಡಿದ WR-V ಯಲ್ಲಿ ಅಷ್ಟು ಗಮನಾರ್ಹವಾಗಿ ಇರಲಿಲ್ಲ. 

    ವಾಸ್ತವ ಎಂದರೆ,  90PS  ಪೆಟ್ರೋಲ್ ಎಂಜಿನ್ ಸ್ವಲ್ಪ ಎಳೆಯುವ ಹಾಗೆ ಇದೆ. ನೀವು ಒಬ್ಬರೇ ಡ್ರೈವ್ ಮಾಡಿದರೆ ಮೋಟಾರ್ ಕಾರ್ಯವನ್ನು ಚೆನ್ನಾಗಿ ನಿಭಾಯಿಸುತ್ತದೆ, ಆದರೆ ಎಲ್ಲ ಸೀಟ್ ನಲ್ಲಿ ಪ್ಯಾಸೆಂಜರ್ ಗಳು ಕುಳಿತಿರಬೇಕಾದರೆ ನೀವು ಎಂಜಿನ್ ಗೆ ಹೆಚ್ಚು ಪರಿಶ್ರಮ ಕೊಡಬೇಕಾಗುತ್ತದೆ ಸತತ ಡೌನ್ ಶಿಫ್ಟ್ ಗಳೊಂದಿಗೆ. ಧನ್ಯವಾದಗಳೊಂದಿಗೆ ಎಂಜಿನ್ ನಯವಾಗಿದೆ ಹಾಗು ಉತ್ತಮ ಅನುಭವ ಕೊಡುತ್ತದೆ. 110Nm ಟಾರ್ಕ್ ಅನ್ನು ಸುಮಾರು 5,000rpm ನಲ್ಲಿ ಪಡೆಯಬಹುದು, ಅದು ಎತ್ತರದ ರಸ್ತೆಗಳಲ್ಲಿ ಸ್ವಲ್ಪ ಕಷ್ಟಕರವಾಗಬಹುದು ಹಾಗು ಅದು ಬೆಟ್ಟಗಳ ಪ್ರದೇಶದಲ್ಲಿ ಹೆಚ್ಚು ಪರಿಶ್ರಮ ಪಡುತ್ತದೆ. WR-V ಪೆಟ್ರೋಲ್ 62kg ಭಾರವಾಗಿದೆ ತತ್ಸಮಾನ ಜಾಜ್ ವೇರಿಯೆಂಟ್ ಗೆ ಹೋಲಿಸಿದರೆ, ಹಾಗು ಪರಿಷ್ಕೃತ ಗೇರ್ ಬಾಕ್ಸ್ ಒಂದಿಗೆ ದೊರೆಯುತ್ತದೆ, ಮೈಲೇಜ್ 17.5kmpl ಗೆ ಇಳಿಯುತ್ತದೆ . 

    1.5- ಲೀಟರ್ ಡೀಸೆಲ್ ಕೊಡುತ್ತದೆ ಅದೇ 100PS ಪವರ್ ಹಾಗು  200Nm ಟಾರ್ಕ್  ಹಾಗು ಅದು ಆರು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ದೊರೆಯುತ್ತದೆ ಕೂಡ. ಮೋಟಾರ್ ಕೊಡುತ್ತದೆ ಉತ್ತಮ ಲೊ ಎಂಡ್ ಟಾರ್ಕ್ ಹಾಗು ಲೊ ರೆವ್ ಜೊತೆಗೆ ಹೈ ಗೇರ್ ಸಂಯೋಜನೆ ಕೂಡ. ಪವರ್ ಡೆಲಿವೆರಿ ನಯವಾಗಿದೆ ಹಾಗು ಎಲ್ಲ ಸಮಯದಲ್ಲೂ ನೆರವಾಗಿದೆ, ಆದರೆ ಡ್ರೈವ್ ಮಾಡಲು ಸುಲಭವಾಗಿದೆ , ಮನೋರಂಜಕವಾಗಿಲ್ಲ. ಹೆಚ್ಚು ವೇಗದಲ್ಲಿ ಬಹಳಷ್ಟು ಶಬ್ದ ಕೊಡುತ್ತದೆ ಆದರೆ ಅಷ್ಟೇ ಬೇಗ ವೇಗಗತಿ ಪಡೆಯುವುದಿಲ್ಲ, ನಿಮ್ಮ ಡ್ರೈವಿಂಗ್ ಸರಳವಾಗಿದ್ದರೆ ನಿಮಗೆ ನಗರದಲ್ಲಿ ಅಥವಾ ಹೈವೇ ಗಳಲ್ಲಿ ಡ್ರೈವ್ ಮಾಡುವಾಗ ಯಾವುದೇ ದೂರು ವಂತಹ ಕಾರಣ ದೊರೆಯುವುದುಲ್ಲ. ಕುಟುಂಬದ ಉಪಯೋಗಕ್ಕಾಗಿ ಕೊಳ್ಳುವ ಗ್ರಾಹಕರಿಗೆ , ಇದು ಉತ್ತಮ ಎಂಜಿನ್ ಪಡೆಯುತ್ತದೆ. ವೇರಿಯೆಂಟ್ ಗೆ ಅನುಸಾರವಾಗಿ  WR-V  ಡೀಸೆಲ್  31-50kg ಹೆಚ್ಚು ಭಾರವಾಗಿದೆ ಜಾಜ್ ಗೆ ಹೋಲಿಸಿದರೆ, ಆದರೆ  ಕಾರ್ಯದಕ್ಷತೆ ಯಲ್ಲಿ ಗಮನಾರ್ಹ ಬದಲಾವಣೆ ಇರುವುದಿಲ್ಲ.  ಮೈಲೇಜ್  25.5kmpl ಇದ್ದು ಒಟ್ಟಾರೆ 1.8kmpl ಕಡಿತ ಉಂಟಾಗಿದೆ 

    ಕಾರ್ಯದಕ್ಷತೆ ಹೋಲಿಕೆ (ಡೀಸೆಲ್ )

    HONDA WRV
    Power 98.6bhp@3600rpm
    Torque (Nm) 200Nm@1750rpm
    Engine Displacement (cc) 1498 cc
    Transmission Manual
    Top Speed (kmph) 176 kmph
    0-100 Acceleration (sec) 12.43 Seconds
    Kerb Weight (kg) 1198kg
    Fuel Efficiency (ARAI) 25.5kmpl
    Power Weight Ratio 82.30bhp/ton

    ಕಾರ್ಯದಕ್ಷತೆ ಹೋಲಿಕೆ (ಪೆಟ್ರೋಲ್ )

    HONDA WRV
    Power 88.7bhp@6000rpm
    Torque (Nm) 110Nm@4800rpm
    Engine Displacement (cc) 1199 cc
    Transmission Manual
    Top Speed (kmph) 164.26 kmph
    0-100 Acceleration (sec) 15.31 Seconds
    Kerb Weight (kg) 1103kg
    Fuel Efficiency (ARAI) 17.5kmpl
    Power Weight Ratio 80.41bhp/ton

    ರೈಡ್ ಮತ್ತು ಹ್ಯಾಂಡಲಿಂಗ್ 

    Performance

    ಹೋಂಡಾ ಹೇಳುವಂತೆ WR-V ಯಲ್ಲಿ ಬಳಸಲಾದ  ಸಸ್ಪೆನ್ಷನ್  ಮಿಡ್ ಸೈಜ್ SUV   HR-V ಇಂದ ಪಡೆಯಲಾಗಿದೆ. ಹೆಚ್ಚು ವೀಲ್ ಟ್ರಾವೆಲ್ ಹಾಗು ದೊಡ್ಡ ವೀಲ್ ಗಳೊಂದಿಗೆ WR-V  ಪಾಟ್ ಹೋಲ್ ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಕ್ರಾಸ್ಒವರ್ ನ ಕಠಿಣ ರೋಡ್ ಸಾಮರ್ಥ್ಯ ಅದು ಮಾಡಲ್ಪಡಲು ಆಧಾರಿತವಾಗಿರುವ   ಹ್ಯಾಚ್ ಬ್ಯಾಕ್ ಗಿಂತ ಹೆಚ್ಚು  ಸದೃಢವಾಗಿದೆ. ಆದರೆ ಒಟ್ಟಾರೆ ಸಸ್ಪೆನ್ಷನ್ ಸೆಟ್ ಅಪ್ ಸ್ವಲ್ಪ ಮೃದುವಾಗಿದೆ, ವಿಶೇಷವಾಗಿ ಹಗುರವಾದ ಪೆಟ್ರೋಲ್ ಎಂಜಿನ್ ಆವೃತ್ತಿಯಲ್ಲಿ. 

    ಹಾಗಾಗಿ, ಇದರಲ್ಲಿ ಸಹಜ ಲಂಬಕೋನದ ಅಲುಗಾಡುವಿಕೆ ಇದೆ ಹಾಗು ಸ್ವಲ್ಪ ಮಟ್ಟಿಗೆ ಬದಿಗೆ ಎಳೆದಂತಹ ಅನುಭವ ಆಗುತ್ತದೆ ಕೂಡ. ಅದು ಹೆಚ್ಚು ವೇಗದಲ್ಲಿ ಕ್ರೂಸ್ ಮಾಡುವಾಗ ಅಷ್ಟು ಗಮನಾರ್ಹವಾಗಿ ಇರುವುದಿಲ್ಲ. ತಿರುವುಗಳಲ್ಲಿ, WR-V ಬಹಳಷ್ಟು ಬಾಡಿ ರೋಲ್ ಪಡೆಯುತ್ತದೆ ಕೂಡ . ಹಾಗಾಗಿ ಉಪಯುಕ್ತತೆಯಲ್ಲಿ ಹೆಚ್ಚು ಮನೋರಂಜಕವಾಗಿಲ್ಲ, ಆದರೆ WR-V  ಸುರಕ್ಷತೆ ಹೊಂದಿದೆ ಹಾಗು ಹೆಚ್ಚು ವೇಗವನ್ನು ನಿರೀಕ್ಷಿಸಬಹುದಾಗಿದೆ, ಅದಕ್ಕೆ ದೊಡ್ಡ ವೀಲ್ ಬೇಸ್ ಹಾಗು ಅಗಲ ಟೈರ್ ಸಹಕಾರಿಯಾಗಿದೆ. 

    ಹ್ಯಾಂಡಲಿಂಗ್ ಸಹ ಉತ್ತಮವಾಗಿದೆ. SUV-ತರಹದ ಬದಲಾವಣೆಗಳು ಇದ್ದರು ಸಹ , WR-V ಈಗಲೂ ಸಹ ಹ್ಯಾಚ್ ಬ್ಯಾಕ್ ತರಹ ಅನುಭವ ಕೊಡುತ್ತದೆ. ಸ್ಟಿಯರಿಂಗ್ ಇನ್ನು ಹೆಚ್ಚು ಚೆನ್ನಾಗಿದ್ದಿದ್ದರೆ ಡ್ರೈವ್ ಮಾಡಲು ಹೆಚ್ಚು ಉತ್ಸುಕವಾಗಿರುತ್ತಿತ್ತು. ಹಾಗಾಗಿ, ಒಂದು ಬೆರೆಳಲ್ಲಿ ಸ್ಟೀರ್  ಮಾಡಬಹುದು  ನಗರದ ರಸ್ತೆಗಳಲ್ಲಿ. ಆದರೆ ಅದು ಹೆಚ್ಚು ಉತ್ಸಾಹಿ ಡ್ರೈವರ್ ಗಳ ಮೆಚ್ಚುಗೆ ಗೆ ಪಾತ್ರವಾಗುವುದಿಲ್ಲ. 

    ಆಫ್ -ರೋಡ್ ಸಾಮರ್ಥ್ಯ 

    ನಿಮಗೆ 188mm ಗ್ರೌಂಡ್ ಕ್ಲಿಯರೆನ್ಸ್ ದೊರೆತರು ಸಹ , WR-V ಈಗಲೂ ಅರ್ಬನ್ ಕ್ರಾಸ್ಒವರ್ ಆಗಿದೆ ಹಾಗು ಅದು ಆಲ್ ವೀಲ್ ಡ್ರೈವ್ ಅಥವಾ ಕಠಿಣ ಅಂಡರ್ ಬಾಡಿ ಸುರಕ್ಷತೆ ಪಡೆಯುವುದಿಲ್ಲ. ದೊಡ್ಡ ಸ್ಪೀಡ್ ಬ್ರೇಕರ್ ಗಳು ಹಾಳಾದ ರಸ್ತೆ ಗಳು WR-V ಗೆ  ಈ ಕಠಿಣ ಪರಿಶ್ರಮ ಕೊಡುತ್ತದೆ. 

    ತಂತ್ರಜ್ಞಾನ

    Performance

    WR-V ಪಡೆಯುತ್ತದೆ ಅದೇ  ಆಧಾರಿತ "ಡಿಜಿ ಪ್ಯಾಡ್ " ಇನ್ಫೋಟೈನ್ಮೆಂಟ್ ಸಿಸ್ಟಮ್,ಹೊಸ ಹೋಂಡಾ  ಒಂದಿಗೆ. ವಿಶೇಷ ಫೀಚರ್ ಗಳ   ಹಾಗು Wi-Fi ಕಾಂನೆಕ್ಟಿವಿಟಿ ಕನೆಕ್ಟಿವಿಟಿ ಸೇರಿದೆ , ಜೊತೆಗೆ HDMI ಪೋರ್ಟ್ ಸಹ ಕೊಡಲಾಗಿದೆ. ಮಿರರ್ ಲಿಂಕ್ ಬಳಸಲು ಫೋನ್ ಅನ್ನು USB ಮುಖಾಂತರ ಕನೆಕ್ಟ್ ಮಾಡಬಹುದು ಹಾಗು ಅದರಲ್ಲಿ ಫೀಚರ್ ಆಗಿರುವ ಅಪ್ ಗಳನ್ನು ಬಳಸಬಹುದು , ನಿಮ್ಮ ಫೋನ್ ಅದಕ್ಕೆ ಅನುಗುಣವಾಗಿದ್ದರೆ (ಮಿರರ್ ಲಿಂಕ್ ಒಂದು ಅಪ್ ಅಲ್ಲ , ಅದು ನಿಮ್ಮ ಫೋನ್ ನಲ್ಲಿ  ಸಹಜವಾಗಿ ಕೊಡಲಾಗಿರಬೇಕು , ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಅದು ಹೆಚ್ಚುವರಿ ಉಪಯುಕ್ತತೆ ಕೊಟ್ಟರು ಸಹ (ಉದಾಹರಣೆಗೆ ಮ್ಯೂಸಿಕ್ ಪ್ಲೇಯರ್ ಹಾಗು ನೇವಿಗೇಶನ್ ಅಪ್ ), ಒಟ್ಟಾರೆ ಅಪ್ ಗಳ ಸಂಖ್ಯೆ ಕಡಿಮೆ ಇದೆ ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ ಪ್ಲೇ ಒಂದಿಗೆ ಹೋಲಿಸಿದರೆ . 

     Wi-Fi  ಕನೆಕ್ಟಿವಿಟಿ ಆಯ್ಕೆ ನಿಮಗೆ ಹತ್ತಿರದ  Wi-Fi ಕನೆಕ್ಟ್ ಮಾಡಲು ಸಹಕಾರಿಯಾಗಿರುತ್ತದೆ (ನಿಮ್ಮ ಫೋನ್ ನ ಹಾಟ್ ಸ್ಪಾಟ್ ಆಗಿರಬಹುದು ) ಅದರ ಕಾರ್ಯಗಳನ್ನು ಬ್ರೌಸರ್ ಅಪ್ ಮುಕಾಂತರ ಬಳಸಲು.  Wi-Fi ಬಳಸಲು ನಿಮಗೆ  USB ಲಭ್ಯವಿರಬೇಕಾಗುತ್ತದೆ , ಅದನ್ನು ಹೋಂಡಾ ಅಸ್ಸೇಸ್ಸೋರಿ ಆಗಿ ಕೊಡುತ್ತಿದೆ. ಒಮ್ಮೆ ಕನೆಕ್ಟ್ ಆದರೆ, ನೀವು ಯಾವುದೇ ವೆಬ್ ಸೈಟ್ ಅನ್ನು ನೇರವಾಗಿ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮುಖಾಂತರ ಬಳಸಬಹುದು . ಅದು ಟ್ರಾಫಿಕ್ ಮಾಹಿತಿ ಪಡೆಯುವುದಕ್ಕೆ ಸುಲಭವಾಗಿದೆ ಇನ್ ಬಿಲ್ಟ್ ನ್ಯಾವಿಗೇಶನ್ ಸಿಸ್ಟಮ್ ಮುಖಾಂತರ (SD ಕಾರ್ಡ್ ಆಧಾರಿತ / ಮ್ಯಾಪ್ ಮೈ ಇಂಡಿಯಾ ಅವರಿಂದ ). ಹೆಚ್ಚುವರಿಯಾಗಿ, ಈ ಸೆಟ್ ಅಪ್ ಪಡೆಯುತ್ತದೆ ವಾಯ್ಸ್ ಕಮಾಂಡ್ ರೆಕಗ್ನಿಷನ್ ಅನ್ನು ನ್ಯಾವಿಗೇಶನ್ ಗಾಗಿ, ಎಂಟರ್ಟೈನ್ಮೆಂಟ್ ಹಾಗು ಟೆಲಿಫೋನ್ ಸಿಸ್ಟಮ್ ಸಹ ಬಳಸಬಹುದು. ಇತರ ಇನ್ಫೋಟೈನ್ಮೆಂಟ್ ಸಿಸ್ಟಮ್ ಫೀಚರ್ ಗಳಲ್ಲಿ  SD ಕಾರ್ಡ್  ಅನ್ನು ಮೀಡಿಯಾ ಫೈಲ್ ಗಳಿಗಾಗಿ, ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್ ಹಾಗು ಟೆಲೆಫೋನಿ ಜೊತೆಗೆ  1.5GB ಆಂತರಿಕ ಮೆಮೊರಿ ಕೊಡಲಾಗಿದೆ. 

    ರೂಪಾಂತರಗಳು

    ಹೋಂಡಾ WRV ಯನ್ನು ಎರೆಡು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ  - S ಹಾಗು  SVX.

    ವರ್ಡಿಕ್ಟ್

    WR-V  ಯನ್ನು ಜಾಜ್ ಗಿಂತ ಮೇಲಾಗಿ ಪರಿಗಣಿಸಬಹುದೇ? ಹೌದು, ವಿಭಿನ್ನವಾದ ಸ್ಟೈಲಿಂಗ್ ಅಲ್ಲದೆ , ಇದರಲ್ಲಿ ಉತ್ತಮ ಫೀಚರ್ ಗಳನ್ನು ಕೊಡಲಾಗಿದೆ ,ಅವುಗಳಲ್ಲಿ ಬಹಳಷ್ಟನ್ನು  ಹೋಂಡಾ ಸಿಟಿ ಒಂದಿಗೂ ಸಹ ಹಂಚಿಕೊಳ್ಳಲಾಗಿದೆ. 

    ಹೋಂಡಾ ಡವೋಆರ್‌-ವಿ 2017-2020

    ನಾವು ಇಷ್ಟಪಡುವ ವಿಷಯಗಳು

    • ಸುರಕ್ಷತೆ: ಡುಯಲ್ ಏರ್ಬ್ಯಾಗ್ ಗಳು, ABS ಜೊತೆಗೆ EBD ಗಳನ್ನು ಎಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
    • ಈ ವಿಭಾಗದಲ್ಲಿ ಸನ್ ರೂಫ್ ಪಡೆದಿರುವ ಮೊದಲ ಕಾರ್ ಆಗಿದೆ
    • ಕ್ಯಾಬಿನ್ ವಿಶಾಲತೆ ಪೂರ್ಣ ಕುಟುಂಬಕ್ಕೆ ಅನುಕೂಲಕರವಾಗಿದೆ. ಹಿರಿಯ ನಾಗರಿಕರು ಸಹ ಒಳಗೆ ಹೋಗಲು ಹಾಗು ಹೊರಗೆ ಬರಲು ಸುಲಭವಾಗಿದೆ
    View More

    ನಾವು ಇಷ್ಟಪಡದ ವಿಷಯಗಳು

    • ಡೀಸೆಲ್ ಎಂಜಿನ್ ನಲ್ಲಿರುವ ಶಕ್ತಿ ಹಾಗು ರೆಫಿನ್ಮೆಂಟ್ ಸಾಲದು
    • ಇದರಲ್ಲಿ ಜಾಜ್ ನಲ್ಲಿ ಕೊಡಲಾದಂತಹ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಿಸ್ ಆಗಿದೆ. ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಲಭ್ಯವಿಲ್ಲ, ಸ್ಪ್ಲಿಟ್ ರೇರ್ ಸೀಟ್ ಅಥವಾ ಮ್ಯಾಜಿಕ್ ಸೀಟ್ ಸಹ ಲಭ್ಯವಿಲ್ಲ
    • ಪೆಟ್ರೋಲ್ ಎಂಜಿನ್ ಎಲ್ಲ ಪ್ಯಾಸೆಂಜರ್ ಗಳು ಇರಬೇಕಾದರೆ ಹೆಚ್ಚು ಪರಿಶ್ರಮ ಪಡುತ್ತದೆ. ಹೈ ವೆ ಕಾರ್ಯದಕ್ಷತೆ ಮಾಧ್ಯಮಿಕವಾಗಿದೆ
    View More

    ಹೋಂಡಾ ಡವೋಆರ್‌-ವಿ 2017-2020 car news

    • ಇತ್ತೀಚಿನ ಸುದ್ದಿ
    • Must Read Articles
    • ರೋಡ್ ಟೆಸ್ಟ್
    • ಹೋಂಡಾ WR-V: ವೇರಿಯೆಂಟ್ ಗಳ ವಿವರಣೆ

      WR-V’ ಮಾಡೆಲ್ ಕೇವಲ ಎರೆಡು ವೇರಿಯೆಂಟ್ ಗಳಲ್ಲಿ ಬರುತ್ತದೆ ಆದರೂ ಇದು ಒಂದು ಹೆಚ್ಚು ಫೀಚರ್ ಗಳಿಂದ ತುಂಬಿದ ಈ ಬೆಲೆಯಲ್ಲಿ ಸಿಗುವ ವಾಹನವಾಗಿದೆ.

      By RaunakApr 26, 2019
    • ಹೋಂಡಾ WR-V vs  ಮಾರುತಿ ವಿಟಾ��ರಾ ಬ್ರೆ: ಹೋಲಿಕೆ ವಿಮರ್ಶೆ
      ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

      ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

      By alan richardMay 14, 2019
    • ಹೋಂಡಾ WR-V:  ರೋಡ್ ಟೆಸ್ಟ್ ವಿಮರ್ಶೆ
      ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

      ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

      By alan richardMay 14, 2019
    • ಹೋಲಿಕೆ ವಿಮರ್ಶೆ : ಹೋಂಡಾ  WR-V vs ಹುಂಡೈ i20 ಆಕ್ಟಿವ್
      ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

      ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

      By siddharthMay 14, 2019
    • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ
      ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

      ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

      By tusharMay 14, 2019

    ಹೋಂಡಾ ಡವೋಆರ್‌-ವಿ 2017-2020 ಬಳಕೆದಾರರ ವಿಮರ್ಶೆಗಳು

    4.3/5
    ಆಧಾರಿತ422 ಬಳಕೆದಾರರ ವಿಮರ್ಶೆಗಳು
    ಜನಪ್ರಿಯ Mentions
    • All (422)
    • Looks (110)
    • Comfort (129)
    • Mileage (144)
    • Engine (98)
    • Interior (57)
    • Space (75)
    • Price (61)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Verified
    • Critical
    • V
      vivaan ahuja on Jan 07, 2025
      4.3
      Honda Wrv - Value For Money
      We have the honda wrv from almost 7 years now. it has run over 70000kms . we have had a very good experience with the car it still gives mileage above 18kmpl in summers(diesel) the power and torque output is also very good and maintenance cost is also less
      ಮತ್ತಷ್ಟು ಓದು
    • S
      sridhar nemmaniwar on Jul 11, 2021
      4.8
      Good Engine
      Halogen lamp rig yard. music player is updated Virgen regard total, very good build quality, next 7 sitter car in Honda
      ಮತ್ತಷ್ಟು ಓದು
      5 1
    • P
      pratheesh d on Jun 18, 2020
      4.5
      Good Car For Family
      It is a very good car. I have the diesel variant which gives very good mileage. Very powerful car and the features are also good. Excellent for long drives.
      ಮತ್ತಷ್ಟು ಓದು
      4
    • S
      sanjiv on Jun 17, 2020
      4.8
      Best Quality Assurance
      White color sunroof cruise control with best mileage and no scratch. Overall, best in comfort with new tires and single head use.
      ಮತ್ತಷ್ಟು ಓದು
      1
    • S
      shiva vermaa on Jun 16, 2020
      4.5
      Power And Road Presence
      Its 1500CC engine will never give you any type of reduction in power whether you are overtaking or making higher speed. It is a subcompact crossover. I think its definitely a good option to buy Honda WR-V.
      ಮತ್ತಷ್ಟು ಓದು
      1
    • ಎಲ್ಲಾ ಡವೋಆರ್‌-ವಿ 2017-2020 ವಿರ್ಮಶೆಗಳು ವೀಕ್ಷಿಸಿ

    ಡವೋಆರ್‌-ವಿ 2017-2020 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು: ಹೋಂಡಾ ಪರೀಚಯಿಸಿದೆ 'ಎನಿ ಟೈಮ್ ವಾರಂಟಿ ' 10  ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ. 

    ಹೋಂಡಾ WR-V ವೇರಿಯೆಂಟ್ ಗಳು ಹಾಗು ಬೆಲೆಗಳು : ಅದು ಮೂರೂ ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ: S, V (ಡೀಸೆಲ್ ಮಾತ್ರ ) ಹಾಗು  VX.. ಕ್ರಾಸ್ ಓವರ್ ಬೆಲೆ ವ್ಯಾಪ್ತಿ ರೂ 8.15 ಲಕ್ಷ ದಿಂದ ರೂ 10.35 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ).

    ಹೋಂಡಾ WR-V  ಎಂಜಿನ್ ಆಯ್ಕೆ ಹಾಗು ಮೈಲೇಜ್ : ಹೋಂಡಾ  ಎರೆಡು ಎಂಜಿನ್ ಆಯ್ಕೆಗಳನ್ನು WR-V ಯಲ್ಲಿ ಕೊಡುತ್ತದೆ: 1.2-ಲೀಟರ್ 

     ಪೆಟ್ರೋಲ್ ಹಾಗು 1.5-ಲೀಟರ್ ಡೀಸೆಲ್. ಪೆಟ್ರೋಲ್ ಆವೃತ್ತಿ ಕೊಡುತ್ತದೆ  90PS/110Nm, ಡೀಸೆಲ್ ಆವೃತ್ತಿ ಕೊಡುತ್ತದೆ 110PS/200Nm. ಪೆಟ್ರೋಲ್ ಯುನಿಟ್ ಅನ್ನು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿದೆ, ಆದರೆ ಡೀಸೆಲ್ ವೇರಿಯೆಂಟ್ ನಲ್ಲಿ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಕೊಡಲಾಗಿದ್ದು ಅಧಿಕೃತ ಮೈಲೇಜ್ 17.5kmpl ಹಾಗು 25.5kmpl ಇರುತ್ತದೆ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ ಅನುಗುಣವಾಗಿ.

    ಹೋಂಡಾ WR-V  ಸಲಕರಣೆ ಹಾಗು ಸುರಕ್ಷತೆ ಫೀಚರ್ ಗಳು : ಇದರಲ್ಲಿ ಬಹಳಷ್ಟು ಫೀಚರ್ ಗಳನ್ನು ಕೊಡಲಾಗಿದೆ ಅದರಲ್ಲಿ ಸನ್ ರೂಫ್, 7- ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ , ಹಾಗು ಪುಶ್ ಬಟನ್ ಸ್ಟಾರ್ಟ್ ಸೇರಿದೆ.  ಹಾಗು WR-V ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ABS ಜೊತೆಗೆ EBD (ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ತ್ರೀಭೂಷಣ್ ) ಹಾಗು ಮಲ್ಟಿ ವ್ಯೂ ರೇರ್ ಪಾರ್ಕಿಂಗ್ಸೆ ಕ್ಯಾಮೆರಾ ಜೊತೆಗೆ ಸೆನ್ಸರ್ ಗಳು. 

    ಹೋಂಡಾ WR-V ಪ್ರತಿಸ್ಪರ್ದಿಗಳು : ಹೋಂಡಾ WR-V ಪ್ರತಿಸ್ಪರ್ದಿಗಳಾದ ಫೋರ್ಡ್ ಫ್ರೀ ಸ್ಟೈಲ್, ಹುಂಡೈ  i20 ಆಕ್ಟಿವ್, ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ  ಹಾಗು ಹೋಂಡಾ ಜಾಜ್ ಸಹ. ಅದು ಇತ್ತೀಚಿಗೆ ಅನಾವರಣಗೊಂಡ ಟಾಟಾ ಅಲ್ಟ್ರಾಜ್ ಜೊತೆಗೂ ಸ್ಪರ್ದಿಸುತ್ತದೆ.

    ಪ್ರಶ್ನೆಗಳು & ಉತ್ತರಗಳು

    Vijay asked on 1 Jul 2020
    Q ) What is length and width of Honda WRV car ?
    By CarDekho Experts on 1 Jul 2020

    A ) The length, width and height of Honda WRV is 3999x1734x1601 mm respectively.

    Reply on th IS answerಎಲ್ಲಾ Answer ವೀಕ್ಷಿಸಿ
    Deepika asked on 20 Jun 2020
    Q ) Can I get a BS4 Honda WR V?
    By CarDekho Experts on 20 Jun 2020

    A ) For the availability, we would suggest you walk into the nearest dealership as t...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    vishnu asked on 3 Jun 2020
    Q ) What is the difference between the cars model of Honda WRV Edge edition idtec S ...
    By CarDekho Experts on 3 Jun 2020

    A ) The difference between Honda WR-V Edge Edition i-DTEC S and i-DTEC S is that the...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    Sanket asked on 2 Jun 2020
    Q ) Is Honda WRV a hybrid car?
    By CarDekho Experts on 2 Jun 2020

    A ) Honda WRV is not a hybrid car. It will be offered with the same engine options: ...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    PRATIK asked on 30 May 2020
    Q ) Are the 2019 models still available for sale?
    By CarDekho Experts on 30 May 2020

    A ) For the availability, we would suggest you walk into the nearest dealership as t...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ

    ಟ್ರೆಂಡಿಂಗ್ ಹೋಂಡಾ ಕಾರುಗಳು

    view ಏಪ್ರಿಲ್ offer
    space Image
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
    ×
    We need your ನಗರ to customize your experience