• English
  • Login / Register

ಟೊಯೋಟಾ ಇನ್ನೋವಾ ಟೂರಿಂಗ್ ಸ್ಪೋರ್ಟ್ ನ ಬಗ್ಗೆ ತಿಳಿಯಬೇಕಾದ ಐದು ವಿಷಯಗಳು

ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಗಾಗಿ raunak ಮೂಲಕ ಮಾರ್ಚ್‌ 19, 2019 10:01 am ರಂದು ಮಾರ್ಪಡಿಸಲಾಗಿದೆ

  • 77 Views
  • ಕಾಮೆಂಟ್‌ ಅನ್ನು ಬರೆಯಿರಿ

Toyota Innova Touring Sport

ಟೊಯೋಟಾ ಇನ್ನೋವಾ ಕ್ರಿಸ್ಟಾ ದ ವಾರ್ಷಿಕೋತ್ಸವವನ್ನು ಇನ್ನೋವಾ ಟೂರಿಂಗ್ ಸ್ಪೋರ್ಟ್ ವರ್ಷನ್ ಹೊರತರುವೊಂದಿಗೆ ಆಚರಿಸಿದೆ. ಇನ್ನೋವಾ ಟೂರಿಂಗ್ ಸ್ಪೋರ್ಟ್ ವಯಕ್ತಿಕ ಉಪಯೋಗಕ್ಕೆ ಹಾಗು ಹೆಚ್ಚು ಸ್ಪರ್ಧಾತ್ಮಕವಾಗಿಯೂ  ಹಾಗು ಇತರ MPV  ಗಳಿಗೆ ಹೋಲಿಸಿದಾಗ ಹೆಚ್ಚು ಕಠಿಣವಾಗಿಯೂ ಇದೆ. ಇದರಲ್ಲಿ ನಮಗಾಗಿ  ಏನು ಇದೆ ನೋಡೋಣ.

Toyota Innova Touring Sport

ಬಾಹ್ಯ

MPV  ಗಳನ್ನೂ ಸಾಮಾನ್ಯವಾಗಿ ನೀರಸ ವಾಗಿರುವ ವಾಹನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆಟೋ ಮೇಕರ್ ಗಳು ಹೆಚ್ಚಹಗಿ ಕ್ರಾಸ್ಒವರ್ ನಂತೆ ಕಾಣುವ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುವ ಕಾರುಗಳನ್ನು ಹೊರತರಲು ಪ್ರಯತ್ನಿಸುವಂತೆ ಆಗಿದೆ. ಉದಾಹರಣೆಗೆ ರೆನಾಲ್ಟ್ ಕ್ರಾಸ್ಒವರ್ ತರಹ ಕಾಣುವ ಲಾಡ್ಜಿ MPV  ಯನ್ನು ಹೊರತಂದಿದೆ. ಇದೆ ರೀತಿ ಟೊಯೋಟಾ ಹೆಚ್ಚು ಕಠಿಣ ಹಾಗು ಸ್ಪರ್ಧಾತ್ಮಕವಾಗಿ ಕಾಣುವ ಇನ್ನೋವಾ ಕ್ರಿಸ್ಟ ಡಾ ಟೂರಿಂಗ್ ಸ್ಪೋರ್ಟ್ ಮಾಡೆಲ್ ಅನ್ನ್ನು ತಂದಿದೆ. ಟೂರಿಂಗ್ ಸ್ಪೋರ್ಟ್ ನಲ್ಲಿ ವಿಭಿನ್ನವಾಗಿ ಕಾಣಲು ಬಾಹ್ಯದಲ್ಲಿ ಬದಲಾಯಿಸಲಾಗಿರುವ ವಿಷಯಗಳು ಕೆಳಗಿನಂತಿವೆ.

  • ಮೊದಲನೆಯ ಹಂತದಲ್ಲಿ ಖರೀದಿಸಲಿಚ್ಛಿಸುವವರಿಗೆ ಟೂರಿಂಗ್ ಸ್ಪೋರ್ಟ್ ನಲ್ಲಿ ಆಲ್ ರೌಂಡ್ ಬ್ಲಾಕ್ ಥೀಮ್ ಅನ್ನು ಹಾಗು ಎರೆಡು ಬಣ್ಣಗಳ ಆಯ್ಕೆಗಳನ್ನು ಕೊಡಲಾಗಿದೆ . ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಹಾಗು ವೈಲ್ಡ್ ಫೈರ್ (ರೆಡ್)
  • ಸ್ಮೋಕ್ಡ್ ಹೆಡ್ ಲ್ಯಾಂಪ್ ಗಳು, ಕ್ರೋಮ್ ಅಸೆಂಟ್ ಮತ್ತು ಹೊಳೆಯುವ ಕಪ್ಪು ಪೈಂಟಿನೊಂದಿಗಿನ ಗ್ರಿಲ್, ORVM  ಮತ್ತು ಲೈಸನ್ಸ್ ಪ್ಲೇಟ ನ ಅಪ್ಪ್ಲಿಕ್ಯು ಗಳು.
  • ಸುತ್ತಲಿನ ಬಾಡಿ ಕ್ಲಾಡ್ಡಿಂಗ್ ಗಳು, ಕ್ರೋಮ್ ಹೈಲೈಟ್ ಗಳು, ಹೆಚ್ಚಿನ ಪ್ರೀಮಿಯಂ ನೋಟವನ್ನು ಕೊಡುತ್ತದೆ.
  • ಕ್ರಿಸ್ಟಾ ದ ೧೭-ಇಂಚು ಅಲಾಯ್ ವೀಲ್ ಗಳನ್ನೂ ಈಗ ಮಟ್ಟೇ ಬ್ಲಾಕ್ ಪೈಂಟ್ ನೊಂದಿಗೆ ಕೊಡಲಾಗಿದೆ.

Toyota Innova Touring Sport

ಅಂತರಿಕಗಳು

ಬಾಹ್ಯದ ತರಹ ಟೂರಿಂಗ್ ಸ್ಪೋರ್ಟ್ ನ ಆಂತರಿಕಗಳು ಕೂಡ ದಟ್ಟವಾದ ಥೀಮ್ ಅನ್ನು ಹೊಂದಿದೆ. ಟೂರಿಂಗ್ ಸ್ಪೋರ್ಟ್ ನ ಕ್ಯಾಬಿನ್  ನಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ.

 Toyota Innova Touring Sport

  • ಕ್ಯಾಬಿನ್ ನ ಮೇಲ್ಪದರಗಳು ಆಲ್ ಬ್ಲಾಕ್ ಲೆಥರ್ ಕಾಂಟ್ರಾಸ್ಟ್ ಸ್ಟಿಚ್ ನೊಂದಿಗೆ ಬರುತ್ತದೆ. ಇನ್ನೋವಾ ಕ್ರಿಸ್ಟಾ ಡುಯಲ್ ಟೋನ್ ( ಬ್ಲಾಕ್ ಮತ್ತು ಟಾನ್ ಬ್ರೌನ್ ) ಲೆಥರ್ ಮೇಲ್ಪದರಗಳನ್ನು ಪಡೆಯುತ್ತದೆ.
  • ಫಾಕ್ಸ್ ರೆಡ್ ವುಡ್ ಇನ್ಸರ್ಟ್ ಗಳನ್ನೂ ಡಾರ್ಕ್ ಬ್ರೌನ್ ದರ ಬದಲಿಗೆ ಕ್ರಿಸ್ಟಾ ದಲ್ಲಿ ಕೊಡಲಾಗಿದೆ.
  • ದಟ್ಟ ಫಾಕ್ಸ್ ಬ್ಲಾಕ್ ವುಡ್ ಇನ್ಸರ್ಟ್ ಸ್ಟಿಯರಿಂಗ್ ವೀಲ್ ಹಾಗು ಡೋರ್ ಇನ್ಸರ್ಟ್ ಗಾಲ ಮೇಲೆ ಕೊಡಲಾಗಿದೆ.
  • ಬ್ಲೂ -ಲಿಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನ ಬದಲು ರೆಡ್ ಇಲ್ಲ್ಯೂಮಿನಾಶನ್ ಅನ್ನು ಇನ್ನೋವಾ ಕ್ರಿಸ್ಟಾ ದಲ್ಲಿ ಕೊಡಲಾಗಿದೆ.

Toyota Innova Touring Sport

ವೇರಿಯೆಂಟ್ ಗಳ  ಬೆಲೆ ಗಳು (ಎಕ್ಸ್ ಶೋ ರೂಮ್ ಹೊಸ ದೆಹಲಿ )

ಟೂರಿಂಗ್ ಸ್ಪೋರ್ಟ್ ಇನ್ನೋವಾ ಕ್ರಿಸ್ಟಾ ದ VX ಮತ್ತು  ZX ಟ್ರಿಮ್ ಗಳ  ಮೇಲೆ ಮಾಡಲಾಗಿದೆ. ಮೇಲೆ ಹೇಳಿದ ವಿನ್ಯಾಸದ ಶೈಲಿಯ ಹೊರತಾಗಿ , ಸಲಕರಣೆಗಳ ಪಟ್ಟಿ ಹಿಂದಿನಂತೆಯೇ ವೇರಿಯೆಂಟ್ ಗೆ ಅನುಗುಣವಾಗಿ ಇದೆ.

  •  ಟೂರಿಂಗ್ ಸ್ಪೋರ್ಟ್  2.7 MT (Petrol): Rs 17.79 ಲಕ್ಷ
  •  ಟೂರಿಂಗ್ ಸ್ಪೋರ್ಟ್ 2.7 AT (Petrol): Rs 20.85 ಲಕ್ಷ
  •  ಟೂರಿಂಗ್ ಸ್ಪೋರ್ಟ್ 2.4 MT (Diesel): Rs 18.91 ಲಕ್ಷ
  • ಟೂರಿಂಗ್ ಸ್ಪೋರ್ಟ್  2.8 AT (Diesel): Rs 22.16 ಲಕ್ಷ

ಎಂಜಿನ್ ಮತ್ತು ಟ್ರಾನ್ಸ್ಮಿಷನ್

ಇನ್ನೋವಾ ಕ್ರಿಸ್ಟಾ ದ ಎಲ್ಲ ಮೂರು ಎಂಜಿನ್ ಗಳನ್ನೂ ಟೂರಿಂಗ್ ಸ್ಪೋರ್ಟ್ ವೇರಿಯೆಂಟ್ ನಲ್ಲಿ ಕೊಡಲಾಗಿದೆ. ಅವೆಂದರೆ 2.4-ಲೀಟರ್  ಮತ್ತು  2.8-ಲೀಟರ್  ಡೀಸೆಲ್ ಎಂಜಿನ್ ಗಳು ಹಾಗು  2.7-ಲೀಟರ್ ಪೆಟ್ರೋಲ್ ಎಂಜಿನ್.  ಪೆಟ್ರೋಲ್ ಎಂಜಿನ್ ಎರೆಡು ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬರುತ್ತದೆ, ೫-ಸ್ಪೀಡ್ ಮಾನ್ಯುಯಲ್ ಅಥವಾ ೬-ಸ್ಪೀಡ್ ಆಟೋಮ್ಯಾಟಿಕ್. ೨.೪ ಲೀಟರ್ ಡೀಸೆಲ್ ಎಂಜಿನ್ (150PS/360Nm) ೬-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಹಾಗು ೨. ೮ ಲೀಟರ್ ಡೀಸೆಲ್ ಎಂಜಿನ್ ೬-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತದೆ.

 ಟೊಯೋಟಾ ಇನ್ನೋವಾ ಟೂರಿಂಗ್ ಸ್ಪೋರ್ಟ್ ಪ್ರಮುಖವಾಗಿ ಕೆಳಪಡುವ ಪ್ರಶ್ನೆಗಳು

ಇನ್ನೋವಾ ಟೂರಿಂಗ್ ಸ್ಪೋರ್ಟ್ ಆಫ್-ರೋಡ್ ಗೆ ಉಪಯೋಗಕಾರಿಯೇ ?

ಇಲ್ಲ, ಟೂರಿಂಗ್ ಸ್ಪೋರ್ಟ್ ನ ಕ್ರಾಸ್ಒವರ್ ನೋಟವು ಬಾಹ್ಯಕ್ಕೆ ಸೀಮಿತ . ಇದು ಕಠಿಣ ಬಾಡಿ ಆನ್ ಫ್ರೇಮ್ ಮೇಲೆ ನಿರ್ಮಿತವಾದರೂ ಇದರ ಗ್ರೌಂಡ್ ಕ್ಲಿಯರೆನ್ಸ್ 167mm ಆಗಿದ್ದು ಸ್ಟ್ಯಾಂಡರ್ಡ್ ಕ್ರಿಸ್ಟಾ ತರಹ ಇದೆ.  ಹಾಗಾಗಿ ರಸ್ತೆಗಳಿಲ್ಲದ ಜಾಗದಲ್ಲಿ ಓಡಿಸಲು ಆಗುವುದಿಲ್ಲ , ಟಾಟಾ ಹೆಕ್ಸಾ ಇದಕ್ಕೆ ವಿಭಿನ್ನವಾಗಿದೆ. ಟೊಯೋಟಾ ಟೂರಿಂಗ್ ಸ್ಪೋರ್ಟ್ ಅನ್ನು ಆಲ್ ವೀಲ್ ಡ್ರೈವ್ ನಲ್ಲಿ ಕೊಟ್ಟಿಲ್ಲ ಮತ್ತು ಇದು ಸ್ಟ್ಯಾಂಡರ್ಡ್ ಟೈಯರ್ ಗಳ ಮೇಲೆ ಓಡುತ್ತದೆ.

Image result for tata hexa cardekho

ಇನ್ನೋವಾ ಕ್ರಿಸ್ಟಾ ಗೆ ಹೋಲಿಸಿದಾಗ ಟೂರಿಂಗ್ ಸ್ಪೋರ್ಟ್ ಕೊಳ್ಳಲು ಎಷ್ಟು ಹಣ ಹೆಚ್ಚಗೆ ಕೊಡಬೇಕಾಗುತ್ತದೆ?

ಇನ್ನೋವಾ ಟೂರಿಂಗ್ ಸ್ಪೋರ್ಟ್ ನ ಎಲ್ಲ ನಾಲ್ಕು ವೇರಿಯೆಂಟ್ ರೂ ೭೫,೦೦೦ ಸರಿಸಮನಾದ ವೇರಿಯೆಂತ್ ಗೆ ಅನುಗುಣಗಾಗಿ ಕೊಡಬೇಕಾಗುತ್ತದೆ.

 ಎಷ್ಟು ಯೂನಿಟ್ ಗಳು ಸಿಗುತ್ತವೆ ?

ಇದು ಒಂದು  ಅಲ್ಲ , ಹಾಗು ಇದು ಎಲ್ಲಿಯವರೆಗೆ ಇನ್ನೋವಾ ಕ್ರಿಸ್ಟಾ ಮಾರಾಟದಲ್ಲಿರುತ್ತದೆಯೋ ಅಲ್ಲಿಯವರೆಗೂ ಇರುತ್ತದೆ.

ನಾನು ಇದನ್ನು ಕೊಳ್ಳಬೇಕೆ ?

Toyota Innova Touring Sport

ನಾವು ಮೇಲೆ ಹೇಳಿದಂತೆ, ಬದಲಾವಣೆಗಳು ಆಕರ್ಷಣೆಗೆ ಸೀಮಿತ , ಮತ್ತು ಇದು ನಿಮಗೆ ಇಷ್ಟವಾಗುತ್ತದೆಯೇ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ಆದರೂ, ನಿಮಗೆ ನಿಮ್ಮ ಇನ್ನೋವಾ ಸ್ಟ್ಯಾಂಡರ್ಡ್ ಕ್ರಿಸ್ಟಾ ಗಿಂತ ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಕಾಣಬೇಕು ಎನಿಸಿದರೆ , ಮತ್ತು ಇದು ಫ್ಲೀಟ್ ಓನರ್ ಗಳಿಗೆ ಹೆಚ್ಚು ಇಷ್ಟವಾಗುತ್ತಿದೆ ಕೂಡ , ಇದು ನಿಮಗೆ ಒಂದು ಉತ್ತಮ ಆಯ್ಕೆ. ಹಾಗು ಇದರ ವಿನ್ಯಾಸವು MPV ಗಿಂತಲು SUV ಯನ್ನು ಹೆಚ್ಚು ಹೋಲುತ್ತದೆ ಹಾಗಾಗಿ ಹೆಚ್ಚು ಜನಗಳಿಗೆ ಪ್ರಿಯವಾಗುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Toyota ಇನೋವಾ ಕ್ರಿಸ್ಟಾ 2016-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience