2024ರ ಆಡಿ ಇ-ಟ್ರಾನ್ ಜಿಟಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಆಡಿ ಈ-ಟ್ರಾನ್ ಜಿಟಿ; ಗಾಗಿ dipan ಮೂಲಕ ಜೂನ್ 24, 2024 08:12 pm ರಂದು ಪ್ರಕಟಿಸಲಾಗಿದೆ
- 89 Views
- ಕಾಮೆಂಟ್ ಅನ್ನು ಬರೆಯಿರಿ
ಆಪ್‌ಡೇಟ್ ಮಾಡಲಾದ ಆರ್‌ಎಸ್ ಇ-ಟ್ರಾನ್ ಜಿಟಿ ಪರ್ಫಾರ್ಮೆನ್ಸ್ ಇಲ್ಲಿಯವರೆಗಿನ ಆಡಿಯ ಅತ್ಯಂತ ಶಕ್ತಿಶಾಲಿ ಉತ್ಪಾದನಾ ಕಾರಾಗಿದೆ
- 2024ರ ಆಡಿ ಇ-ಟ್ರಾನ್ ಜಿಟಿ ರೇಂಜ್ ಅನ್ನು ಯುರೋಪ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
- ಹೊಸ ಎಸ್ ಇ-ಟ್ರಾನ್ ಜಿಟಿ ಮತ್ತು ಆರ್‌ಎಸ್ -ಟ್ರಾನ್ ಜಿಟಿ ಪರ್ಫಾರ್ಮೆನ್ಸ್ ಆವೃತ್ತಿಗಳನ್ನು ಪಡೆಯುತ್ತದೆ.
- ಟಾಪ್-ಎಂಡ್ ಆವೃತ್ತಿಯು 925 ಪಿಎಸ್ ಅನ್ನು ಪ್ಯಾಕ್ ಮಾಡಿದ್ದು, 2.5 ಸೆಕೆಂಡುಗಳಲ್ಲಿ 0-100 kmph ವೇಗವನ್ನು ತಲುಪಬಲ್ಲದು.
- ದೊಡ್ಡದಾದ 105 ಕಿ.ವ್ಯಾಟ್‌ನ ಬ್ಯಾಟರಿ ಪ್ಯಾಕ್, WLTP-ಕ್ಲೈಮ್ ಮಾಡಲಾದ 609 ಕಿಮೀ ವರೆಗೆ ರೇಂಜ್ ಅನ್ನು ಹೊಂದಿದೆ.
- 2025ರ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಆಡಿ ಇ-ಟ್ರಾನ್ ಜಿಟಿಗೆ ಸಣ್ಣ ವಿನ್ಯಾಸದ ಟ್ವೀಕ್‌ಗಳು, ಹೆಚ್ಚು ದುಬಾರಿ ಇಂಟಿರೀಯರ್‌ಗಳು ಮತ್ತು ಯಾಂತ್ರಿಕ ಆಪ್‌ಡೇಟ್‌ಗಳೊಂದಿಗೆ ಶ್ರೇಣಿಯಾದ್ಯಂತ ಗ್ಲೋಬಲ್ ಆಪ್‌ಡೇಟ್‌ಗಳನ್ನು ನೀಡಲಾಗಿದೆ. ಆಡಿ ಇವಿಯ ಪ್ರಮುಖ ರಿಫ್ರೆಶ್ಡ್ ಲೈನ್‌ಅಪ್ ಬಗ್ಗೆ ತಿಳಿದುಕೊಳ್ಳಲು ಐದು ವಿಷಯಗಳು ಇಲ್ಲಿವೆ:
ದೊಡ್ಡ ಬ್ಯಾಟರಿ ಮತ್ತು ಹೆಚ್ಚಿನ ಪರ್ಫಾರ್ಮೆನ್ಸ್
2024ರ ಆಡಿ ಇ-ಟ್ರಾನ್ ರೇಂಜ್ 105 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ (ಹಿಂದೆ 83.7 ಕಿ.ವ್ಯಾಟ್). ಪ್ರತಿ ಆಕ್ಸಲ್‌ನಲ್ಲಿ ಒಂದರಂತೆ ಈ ಬ್ಯಾಟರಿ ಪ್ಯಾಕ್ ಎರಡು ಮೋಟರ್‌ಗಳಿಗೆ ಶಕ್ತಿ ನೀಡುತ್ತದೆ. ಇದರ ಪರಿಣಾಮವಾಗಿ, ಹೊಸ ಎಂಟ್ರಿ-ಲೆವೆಲ್‌ನ ಎಸ್ ಇ-ಟ್ರಾನ್ ಜಿಟಿಯು 679 PS ಅನ್ನು ಉತ್ಪಾದಿಸುತ್ತದೆ (ಮೊದಲು 476 ಪಿಎಸ್ ಅನ್ನು ಉತ್ಪಾದಿಸಲಾಗುತ್ತಿತ್ತು), ಆದರೆ ಆರ್‌ಎಸ್ ಇ-ಟ್ರಾನ್ ಜಿಟಿ 856 ಪಿಎಸ್ ಅನ್ನು ಉತ್ಪಾದಿಸುತ್ತದೆ (ಹಿಂದೆ 598 ಪಿಎಸ್ ಉತ್ಪಾದಿಸಲಾಗುತ್ತಿತ್ತು). ಹೊಸ ಆರ್‌ಎಸ್ ಇ-ಟ್ರಾನ್ ಪರ್ಫಾರ್ಮೆನ್ಸ್, ಮುಂಭಾಗದ ಆಕ್ಸಲ್‌ನಲ್ಲಿ ರಿಪ್ರೊಗ್ರಾಮ್ ಮಾಡಲಾದ ಪಲ್ಸ್ ಇನ್ವರ್ಟರ್ ಅನ್ನು ಹೊಂದಿದೆ, ಇದು 925 ಪಿಎಸ್ ಅನ್ನು ಉತ್ಪಾದಿಸುತ್ತದೆ, ಇದು ಆಡಿಯ ಅತ್ಯಂತ ಶಕ್ತಿಶಾಲಿ ಉತ್ಪಾದನಾ ಕಾರಾಗಿದೆ. ಹೊಸ ಸ್ಟ್ಯಾಂಡರ್ಡ್ ಬೂಸ್ಟ್ ಕಾರ್ಯವು ಹತ್ತು ಸೆಕೆಂಡುಗಳ ಕಾಲ ಚಾಲನೆ ಮಾಡುವಾಗ ಆರ್‌ಎಸ್ ಮೊಡೆಲ್‌ಗಳಿಗೆ 95 ಪಿಎಸ್ ಶಕ್ತಿಯ ಹೆಚ್ಚಳವನ್ನು ಒದಗಿಸಲು ಅನುಮತಿಸುತ್ತದೆ.
ಮೊಡೆಲ್ |
0-100 kmph ಸಮಯ |
ಟಾಪ್ ಸ್ಪೀಡ್ |
|
ಹಿಂದಿನ ಮೊಡೆಲ್ |
ಹೊಸ 2024ರ ಮೊಡೆಲ್ |
||
ಆಡಿ ಎಸ್ ಇ-ಟ್ರಾನ್ ಜಿಟಿ |
4.1 ಸೆಕೆಂಡ್‌ಗಳು |
3.4 ಸೆಕೆಂಡ್‌ಗಳು |
245 kmp |
ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ |
3.3 seconds |
2.8 ಸೆಕೆಂಡ್‌ಗಳು |
250 kmph |
ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ ಪರ್ಫಾರ್ಮೆನ್ಸ್ |
ಅನ್ವಯಿಸುವುದಿಲ್ಲ |
2.5 ಸೆಕೆಂಡ್‌ಗಳು |
250 kmph |
ಹೆಚ್ಚಿದ ರೇಂಜ್ ಮತ್ತು ಚಾರ್ಜಿಂಗ್ ಪವರ್
ಹಿಂದಿನ ಮೊಡೆಲ್‌ನ 500 ಕಿಮೀಗೆ ಹೋಲಿಸಿದರೆ, 2024ರ ಆಡಿ ಇ-ಟ್ರಾನ್ ಜಿಟಿ 609 ಕಿಮೀ ವರೆಗಿನ WLTP ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ. ಆಡಿ ಇದರ ಗರಿಷ್ಠ ಚಾರ್ಜಿಂಗ್ ವೇಗವನ್ನು 50 ಕಿ.ವ್ಯಾಟ್‌ನಿಂದ 320 ಕಿ.ವ್ಯಾಟ್‌ಗೆ ಹೆಚ್ಚಿಸಿದೆ. ಇದನ್ನು ಸೂಪರ್-ಫಾಸ್ಟ್ ಚಾರ್ಜಿಂಗ್ ಹಬ್‌ಗಳಲ್ಲಿ ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಈ ಹೈ-ಪವರ್ ಹಬ್‌ಗಳು ಬ್ಯಾಟರಿಯನ್ನು 10 ನಿಮಿಷಗಳಲ್ಲಿ 280 ಕಿಮೀ ರೇಂಜ್‌ವರೆಗೆ ರೀಚಾರ್ಜ್ ಮಾಡಬಹುದು. ಆಡಿ ಇ-ಟ್ರಾನ್ ಜಿಟಿ ರೇಂಜ್ 22 ಕಿ.ವ್ಯಾಟ್ ಎಸಿ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
ತೀಕ್ಷ್ಣವಾದ ಹೊರಭಾಗಗಳು ಮತ್ತು ಉತ್ತಮ ಯಂತ್ರಾಂಶ
ಹೊರಭಾಗದಲ್ಲಿನ ಬದಲಾವಣೆಗಳು ಸೂಕ್ಷ್ಮವಾಗಿದ್ದರೂ, ಇ-ಟ್ರಾನ್ ಜಿಟಿಯನ್ನು ಅದರ ಅದರ ಹಿಂದಿನ ಮೊಡೆಲ್‌ಗಿಂತ ಪರಿಣಾಮಕಾರಿಯಾಗಿ ಪ್ರತ್ಯೇಕಿಸುತ್ತದೆ. ಎಸ್ ಇ-ಟ್ರಾನ್ ಜಿಟಿಗೆ ಮುಂಭಾಗದ ಏರ್ ಡ್ಯಾಮ್‌ನಲ್ಲಿ ಬೆಳ್ಳಿಯ ತ್ರಿಕೋನ ಇನ್ಸರ್ಟ್‌ನೊಂದಿಗೆ ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡಲಾಗಿದೆ. ಆರ್‌ಎಸ್ ಮೊಡೆಲ್‌ಗಳು, ಮತ್ತೊಂದೆಡೆ ದಪ್ಪ L-ಆಕಾರದ ಇನ್ಸರ್ಟ್‌ನೊಂದಿಗೆ ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತವೆ, ಆದರೆ ಪರ್ಫಾರ್ಮೆನ್ಸ್ ಮೊಡೆಲ್ ಒಪ್ಶನಲ್ "ಮರೆಮಾಚುವಿಕೆ" ಕಾರ್ಬನ್ ಫೈಬರ್ ಪ್ಯಾಕೇಜ್ ಅನ್ನು ಒಳಗೊಂಡಿದೆ. ಎರಡೂ ಆರ್‌ಎಸ್ ಮೊಡೆಲ್‌ಗಳು ವಿಶಿಷ್ಟವಾದ ಉಬ್ಬು ಷಡ್ಭುಜಾಕೃತಿಯ ಮುಂಭಾಗದ ಮಾಸ್ಕ್ ಮತ್ತು ಮರುವಿನ್ಯಾಸಗೊಳಿಸಲಾದ ಹಿಂಭಾಗದ ಡಿಫ್ಯೂಸರ್ ಅನ್ನು ಒಳಗೊಂಡಿವೆ. ಆಡಿ ತನ್ನ ಕಸ್ಟಮೈಸೇಶನ್ ಆಯ್ಕೆಗಳನ್ನು ವಿಸ್ತರಿಸಿದೆ, 20 ರಿಂದ 21 ಇಂಚುಗಳ ಗಾತ್ರದಲ್ಲಿ ಮತ್ತು ಒಂಬತ್ತು ಬಣ್ಣಗಳ ವಿವಿಧ ಹೊಸ ಚಕ್ರ ವಿನ್ಯಾಸಗಳನ್ನು ನೀಡುತ್ತದೆ.
ಹೊಸ ಏರ್ ಸಸ್ಪೆನ್ಷನ್ ಸಿಸ್ಟಮ್‌ಗಳು ಮತ್ತು ಒಪ್ಶನಲ್ ಸಂಪೂರ್ಣ ಆಕ್ಟಿವ್ ಡ್ಯಾಂಪರ್‌ಗಳೊಂದಿಗೆ ಹ್ಯಾಂಡ್ಲಿಂಗ್ ಮತ್ತು ಡೈನಾಮಿಕ್ಸ್ ಅನ್ನು ಸುಧಾರಿಸಲಾಗಿದೆ. ಆರ್‌ಎಸ್ ಮೊಡೆಲ್‌ಗಳು ಸ್ಟ್ಯಾಂಡರ್ಡ್ ಏರ್ ಸಸ್ಪೆನ್ಷನ್ ಮತ್ತು ಒಪ್ಶನಲ್ ಆಕ್ಟಿವ್ ಸಸ್ಪೆನ್ಸನ್ ಸಿಸ್ಟಮ್‌ಅನ್ನು ಒಳಗೊಂಡಿವೆ.
ಇನ್ನಷ್ಟು ಅಪ್‌ಮಾರ್ಕೆಟ್ ಇಂಟೀರಿಯರ್‌ಗಳು ಮತ್ತು ಆಪ್‌ಡೇಟೆಡ್ ಫೀಚರ್‌ಗಳು
ಇಂಟಿರೀಯರ್ ಈಗ ಲೆದರ್ ರಹಿತವಾಗಿದೆ ಮತ್ತು ಡೈನಾಮಿಕಾ (ಸ್ಯೂಡ್ ತರಹದ ವಿನ್ಯಾಸವನ್ನು ಹೊಂದಿರುವ ಸುಸ್ಥಿರ ವಸ್ತು) ಮತ್ತು ಕ್ಯಾಸ್ಕೇಡ್ ಬಟ್ಟೆಗಳಿಂದ ಮಾಡಲ್ಪಟ್ಟಿದೆ. ಸೀಟ್‌ಗಳು, ಸ್ಟೀರಿಂಗ್ ವೀಲ್‌ಗಳು ಮತ್ತು ಪ್ರವೇಶ ಸಿಲ್‌ಗಳನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಸ್ಟೀರಿಂಗ್ ಚಕ್ರವು ಮರುವಿನ್ಯಾಸಗೊಳಿಸಲಾದ ಬಟನ್‌ಗಳು ಮತ್ತು ಪ್ರಕಾಶಿತ ಲೋಗೋದೊಂದಿಗೆ ಸ್ಪೋರ್ಟಿಯರ್-ಕಾಣುವ ಚೌಕಾಕೃತಿಯಾಗಿದೆ(ಚಪ್ಪಟೆಯಾದ ಮೇಲ್ಭಾಗ ಮತ್ತು ಕೆಳಭಾಗ). ಪ್ಯಾಡಲ್ ಲೈಟ್‌ಗಳು ಈಗ ವಿನ್ಯಾಸ ಬದಲಾವಣೆಗಳಿಗೆ ಒಳಗಾಗಿವೆ. 14-ವೇ ಹೊಂದಾಣಿಕೆ ಮತ್ತು ಒಪ್ಶನಲ್ ಮಸಾಜ್ ಕಾರ್ಯದೊಂದಿಗೆ ಸ್ಪೋರ್ಟ್ಸ್ ಸೀಟುಗಳು ಈಗ ಸ್ಟ್ಯಾಂಡರ್ಡ್ ಆಗಿದೆ. 18-ವೇ ಹೊಂದಾಣಿಕೆ ಸೀಟುಗಳೊಂದಿಗೆ, ಪರ್ಫಾರ್ಮೆನ್ಸ್ ಟ್ರಿಮ್ ಒಂದು ಹೆಜ್ಜೆ ಮುಂದೆ ಹೋಗುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯು ಹೊಸ ಬ್ಯಾಟರಿ ತಾಪಮಾನದ ಮಾಹಿತಿಯನ್ನು ಮತ್ತು ಗರಿಷ್ಠ ಚಾರ್ಜಿಂಗ್ ಶಕ್ತಿಯ ನೈಜ-ಸಮಯದ ಡಿಸ್‌ಪ್ಲೇಯನ್ನು ಒದಗಿಸುತ್ತದೆ. ಆರ್‌ಎಸ್ ಇ-ಟ್ರಾನ್ ಜಿಟಿ ಡಿಸ್‌ಪ್ಲೇ ಎಸ್-ನಿರ್ದಿಷ್ಟ ವಿಷಯವನ್ನು ಒಳಗೊಂಡಿದೆ. ಆರ್‌ಎಸ್ ಇ-ಟ್ರಾನ್ ಜಿಟಿ ಪರ್ಫಾರ್ಮೆನ್ಸ್ ಒಪ್ಶನಲ್ ಬಿಳಿ ಡಿಸ್‌ಪ್ಲೇ ಮತ್ತು ಸ್ಪೀಡೋಮೀಟರ್ ಅನ್ನು ಪಡೆಯುತ್ತದೆ, ಇದು 1994 ಆಡಿ ಆರ್‌ಎಸ್ 2 ಅವಂತ್‌ಗೆ ಗೌರವವನ್ನು ನೀಡುತ್ತದೆ. ಪನೋರಮಿಕ್ ಸನ್‌ರೂಫ್‌ಗಳು ಈಗ ಎಲೆಕ್ಟ್ರೋಕ್ರೊಮ್ಯಾಟಿಕ್ ಆಗಿದ್ದು, ಇವುಗಳನ್ನು ಬಟನ್ ಸ್ಪರ್ಶದಿಂದ ಅಪಾರದರ್ಶಕವಾಗಿ ಪರಿವರ್ತಿಸಬಹುದು. ಆದರೆ, ಈ ಬುದ್ಧಿವಂತ ಸನ್‌ರೂಫ್ ಒಪ್ಶನಲ್ ಹೆಚ್ಚುವರಿಯಾಗಿದೆ.
ಭಾರತದಲ್ಲಿ ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
2024ರ ಆಡಿ ಇ-ಟ್ರಾನ್ ಜಿಟಿ ರೇಂಜ್ ಯುರೋಪ್‌ನಲ್ಲಿ ಶುಭಾರಂಭ ಮಾಡಿದೆ, ಅಲ್ಲಿ ಇದು ಈಗಾಗಲೇ ಆರ್ಡರ್ ಮಾಡಲು ಲಭ್ಯವಿದೆ ಮತ್ತು 2025 ರ ಮಧ್ಯದ ವೇಳೆಗೆ ಇದು ಭಾರತಕ್ಕೆ ಆಗಮಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು. ಇದು ಪೋರ್ಷೆ ಟೇಕಾನ್ ಮತ್ತು ಮರ್ಸಿಡಿಸ್-ಬೆನ್ಜ್ ಇಕ್ಯೂಎಸ್‌ಗಳಿಗೆ ಪ್ರತಿಸ್ಪರ್ಧಿ/ಪರ್ಯಾಯವಾಗಿ ಮುಂದುವರಿಯುತ್ತದೆ.
ಆಟೋಮೋಟಿವ್ ಪ್ರಪಂಚದ ಕುರಿತು ತ್ವರಿತ ಆಪ್‌ಡೇಟ್‌ಗಳನ್ನು ಬಯಸುವಿರಾ? ದಯವಿಟ್ಟು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಇ-ಟ್ರಾನ್ ಜಿಟಿ ಆಟೋಮ್ಯಾಟಿಕ್