ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್ ಹೊಂದಿರುವ 7 ವೈಶಿಷ್ಟ್ಯಗಳು
ಸೆಪ್ಟೆಂಬರ್ 13, 2023 11:16 am ರಂದು anonymous ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ನೆಕ್ಸಾನ್ ಫೇಸ್‌ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆಯುತ್ತದೆ, ತಂತ್ರಜ್ಞಾನ ಭರಿತ ವೆನ್ಯೂಗಿಂತ ಇದು ಮುನ್ನಡೆ ಸಾಧಿಸುತ್ತದೆ
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಕಾರು ಸೆಪ್ಟೆಂಬರ್ 14ರಂದು ಬಿಡುಗಡೆಯಾಗಲಿದ್ದು, ಅದಕ್ಕಿಂತ ಮೊದಲೇ ಈ ವಾಹನದ ವಿಶೇಷತೆಗಳು ಬಹಿರಂಗಗೊಂಡಿವೆ. ಹೊರಾಂಗಣ ವಿನ್ಯಾಸ ಮತ್ತು ಕ್ಯಾಬಿನ್ ನಲ್ಲಿ ಇದು ಸಾಕಷ್ಟು ಪರಿಷ್ಕರಣೆಗೆ ಒಳಪಟ್ಟಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳಲ್ಲಿ ಇದು ಇನ್ನೂ ಲಭ್ಯವಿದೆ. ಈಗಾಗಲೇ ನಾವು ಈ ಟಾಟಾ ಸಬ್ ಕಾಂಪ್ಯಾಕ್ಟ್ SUV ಯನ್ನು ಸಮೀಪದ ಪ್ರತಿಸ್ಪರ್ಧಿ ಮಾರುಜಿ ಬ್ರೆಜ್ಜಾದ ಜೊತೆ ಹೋಲಿಸಿದ್ದೇವೆ. ಈಗ ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ನೆಕ್ಸನ್ ವಾಹನವು ಏನೆಲ್ಲ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ನೋಡೋಣ.
360 ಡಿಗ್ರಿ ಕ್ಯಾಮರಾ
2023 ರ ಟಾಟಾ ನೆಕ್ಸನ್ ಮಾದರಿಯು ಈ ವಿಭಾಗದಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸುವ ಮೊದಲ ವಾಹನ ಅಲ್ಲದಿದ್ದರೂ ಈ ವಾಹನವು ಹ್ಯುಂಡೈ ವೆನ್ಯುಗಿಂತ ಸಾಕಷ್ಟು ಮುಂದಿದೆ. 360 ಡಿಗ್ರಿ ಕ್ಯಾಮರಾ ಇರುವ ಕಾರಣ, ನೀವು ಟರ್ನ್ ಇಂಡಿಕೇಟರ್ ಗಳನ್ನು ತೊಡಗಿಸಿಕೊಂಡ ತಕ್ಷಣವೇ ಬ್ಲೈಂಡ ಸ್ಪಾಟ್ ಮಾನಿಟರ್ ಸಕ್ರಿಯಗೊಳ್ಳುತ್ತದೆ. ಆದರೆ ವೆನ್ಯು ಕಾರು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಮಾತ್ರವೇ ಹೊಂದಿದೆ.
ಮಳೆ ಸಂವೇದಿ ವೈಪರ್ ಗಳು
ನೆಕ್ಸನ್ ಕಾರು ಈಗಾಗಲೇ ಮಳೆ ಸಂವೇದಿ ವೈಪರ್ ಗಳನ್ನು ಹೊಂದಿದೆ. ಹೀಗಾಗಿ ಫೇಸ್ ಲಿಫ್ಟ್ ವಾಹನವು ಸಹ ತನ್ನ ಹ್ಯುಂಡೈ ಪ್ರತಿಸ್ಪರ್ಧಿಗಿಂತ ಹೆಚ್ಚಿನ ಅನುಕೂಲತೆಯನ್ನು ಹೊಂದಿದೆ. ಇದೇನೂ ದೊಡ್ಡದಾದ ವ್ಯತ್ಯಾಸವಲ್ಲ ಎಂಬುದಾಗಿ ಕಂಡರೂ, ಮಳೆಗಾಲದಲ್ಲಿ ಇದು ನಿಮಗೆ ಹೆಚ್ಚು ಅಡಚಣೆಯುಂಟಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರಸ್ತೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಡೀಸೆಲ್ ಅಟೋಮ್ಯಾಟಿಕ್ ಆಯ್ಕೆ
ಸಬ್-4m ವಿಭಾಗದಲ್ಲಿ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯು ಕುಗ್ಗುತ್ತಿದ್ದರೂ, ಈ ಆಯ್ಕೆಯನ್ನು ನೀಡುತ್ತಿರುವ ಕೆಲವು SUV ಗಳಲ್ಲಿ ಟಾಟಾ ನೆಕ್ಸನ್ ಮತ್ತು ಹ್ಯುಂಡೈ ವೆನ್ಯು ಸಹ ಸೇರಿವೆ. ಆದರೆ ವೆನ್ಯು ಕಾರು 6-ಸ್ಪೀಡ್ MT ಜೊತೆಗೆ ಮಾತ್ರವೇ ಡೀಸೆಲ್ ಎಂಜಿನ್ ಅನ್ನು ಒದಗಿಸಿದರೆ, ಫೇಸ್ ಲಿಫ್ಟ್ ನೆಕ್ಸನ್ ವಾಹನವು ತನ್ನ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ಪೀಡ್ AMT (ಪ್ಯಾಡಲ್ ಶಿಪ್ಠರ್ ಗಳ ಜೊತೆಗೆ) ಆಯ್ಕೆಯು ಒದಗಿಸುತ್ತದೆ.
ಚಾಲಕನಿಗಾಗಿ ಸೂಕ್ತ ಡಿಜಿಟಲ್ ಡಿಸ್ಪ್ಲೇ
ಈ ಎರಡೂ SUV ಗಳು ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದರೆ, ನೆಕ್ಸನ್ ಫೇಸ್ ಲಿಫ್ಟ್ ಕಾರು ಮಾತ್ರ 10.25 ಇಂಚಿನ ಸ್ಕ್ರೀನ್ ಡಿಸ್ಪ್ಲೇಯ ಜೊತೆಗೆ ಬರುತ್ತದೆ. ವೆನ್ಯು ಕಾರಿನ ಡಿಸ್ಪ್ಲೇಯು ಸಿಂಗಲ್ ಲೇಔಟ್ ಅನ್ನು ಮಾತ್ರ ಹೊಂದಿದ್ದು, ತೀರಾ ಅಗತ್ಯ ಚಾಲನಾ ಮಾಹಿತಿಯನ್ನು ಮಾತ್ರ ನೀಡುತ್ತದೆ. ನೆಕ್ಸನ್ ಘಟಕವು ವಿವಿಧ ಸ್ಕ್ರೀನ್ ಲೇಔಟ್ ಗಳನ್ನು ಹೊಂದಿದ್ದು, ಇತರ ಸೌಲಭ್ಯಗಳ ಜೊತೆಗೆ ಇನ್ಫೋಟೈನ್ ಮೆಂಟ್ ಸಿಸ್ಟಂ ನಿಂದ ಮ್ಯಾಪ್ ಅನ್ನು ಒದಗಿಸಬಲ್ಲದು.
ದೊಡ್ಡದಾದ ಟಚ್ ಸ್ಕ್ರೀನ್
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ವಾಹನವು 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿದ್ದು ಇದು ವೆನ್ಯು ಕಾರಿನ 8 ಇಂಚಿನ ಘಟಕಕ್ಕಿಂತ ದೊಡ್ಡದಾಗಿದೆ ಮಾತ್ರವಲ್ಲದೆ, ಹೊಸ UI ಮತ್ತು ಆಕರ್ಷಕ ಡಿಸ್ಪ್ಲೇಯ ಕಾರಣದಿಂದಾಗಿ ಹೆಚ್ಚು ಶ್ರೀಮಂತ ಅನುಭವವನ್ನು ಒದಗಿಸುತ್ತದೆ. ಎರಡೂ ಇನ್ಫೋಟೈನ್ ಮೆಂಟ್ ಸಿಸ್ಟಂಗಳು ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಅಟೋ ಅನ್ನು ಆಧರಿಸುತ್ತವೆ.
JBL ಸೌಂಡ್ ಸಿಸ್ಟಂ ಅಬ್ಬರ
ಪರಿಷ್ಕರಣೆಗೆ ಒಳಗಾಗಿವ ನೆಕ್ಸನ್ ವಾಹನವು JBL ಸೌಂಡ್ ಸಿಸ್ಟಂ ಅನ್ನು ಹೊಂದಿದ್ದು, ಇದು 4 ಸ್ಪೀಕರ್ ಗಳು, 4 ಟ್ವೀಟರ್ ಗಳು, ಮತ್ತು ಒಂದು ಸಬ್ ವೂಫರ್ ನೊಂದಿಗೆ ಅದ್ಭುತ ಧ್ವನಿಯನ್ನು ಒದಗಿಸುತ್ತದೆ. ಇನ್ನೊಂದೆಡೆ ವೆನ್ಯು ಕಾರು ಮುಂಭಾಗದ ಮತ್ತು ಹಿಂಭಾಗದ ಸ್ಪೀಕರ್ ಗಳು ಮತ್ತು ಮುಂಭಾಗದ ಟ್ವೀಟರ್ ಗಳೊಂದಿಗೆ ಬರುತ್ತದೆ.
ಎತ್ತರ ಹೊಂದಿಸಬಹುದಾದ ಸಹಚಾಲಕನ ಸೀಟು
ಪರಿಷ್ಕೃತ ನೆಕ್ಸನ್ ಕಾರು, ಎತ್ತರವನ್ನು ಹೊಂದಿಸಬಲ್ಲ ಚಾಲಕನ ಸೀಟಿನೊಂದಿಗೆ ಎತ್ತರವನ್ನು ಹೊಂದಿಸಬಲ್ಲ ಸಹಚಾಲಕನ ಸೀಟನ್ನು ಹೊಂದಿದೆ. ಜತೆಯಲ್ಲಿ ಕುಳಿತವನಿಗೂ ಸಹ ತನ್ನ ಸೀಟನ್ನು ಅಗತ್ಯಕ್ಕೆ ತಕ್ಕುದಾಗಿ ಹೊಂದಾಣಿಕೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಪರಿಷ್ಕರಣೆಗೆ ಒಳಗಾಗಿರುವ ಟಾಟಾ ನೆಕ್ಸನ್ ವಾಹನದ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳಲಿದೆ. ಇದು ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ಕಿಯಾ ಸೋನೆಟ್, ಮಾರುತಿ ಫ್ರಾಂಕ್ಸ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ಜೊತೆಗೆ ತನ್ನ ಸ್ಪರ್ಧೆಯನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ವೆನ್ಯು ಆನ್ ರೋಡ್ ಬೆಲೆ