Login or Register ಅತ್ಯುತ್ತಮ CarDekho experience ಗೆ
Login

2025ರ ಏಪ್ರಿಲ್‌ನಲ್ಲಿ ಬೆಲೆ ಏರಿಕೆ ಘೋಷಿಸಿರುವ ಎಲ್ಲಾ ಕಾರು ಬ್ರಾಂಡ್‌ಗಳು

ಮಾರ್ಚ್‌ 24, 2025 08:20 pm ರಂದು kartik ಮೂಲಕ ಪ್ರಕಟಿಸಲಾಗಿದೆ

ಈ ಪಟ್ಟಿಯಲ್ಲಿ ಉಲ್ಲೇಖಿಸಲಾದ ಬಹುತೇಕ ಎಲ್ಲಾ ಬ್ರ್ಯಾಂಡ್‌ಗಳು ಬೆಲೆ ಏರಿಕೆಗೆ ಹೆಚ್ಚುತ್ತಿರುವ ಮೆಟಿರಿಯಲ್‌ಗಳ ಬೆಲೆಯನ್ನು ಪ್ರಮುಖ ಕಾರಣಗಳಲ್ಲಿ ಒಂದೆಂದು ಉಲ್ಲೇಖಿಸಿವೆ

2024-25ನೇ ಹಣಕಾಸು ವರ್ಷದ (FY) ಅಂತ್ಯದೊಂದಿಗೆ, ಹಲವಾರು ಕಾರು ತಯಾರಕರು ಭಾರತದಲ್ಲಿ ತಮ್ಮ ಕಾರುಗಳಿಗೆ ಬೆಲೆ ಏರಿಕೆಯನ್ನು ಪರಿಚಯಿಸಲು ನಿರ್ಧರಿಸಿದ್ದಾರೆ. ಬಹುತೇಕ ಎಲ್ಲರೂ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಗೆ ಪ್ರಮುಖ ಕಾರಣವೆಂದು ಹೇಳುತ್ತಾರೆ ಮತ್ತು ಈ ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಬೆಲೆ ಏರಿಕೆಯನ್ನು ಪರಿಚಯಿಸಿದ್ದಾರೆ. 2025ರ ಏಪ್ರಿಲ್‌ಗೆ ಬೆಲೆ ಏರಿಕೆಯನ್ನು ಘೋಷಿಸಿರುವ ಎಲ್ಲಾ ಬ್ರ್ಯಾಂಡ್‌ಗಳ ತ್ವರಿತ ಕಿರುನೋಟ ಇಲ್ಲಿದೆ.

ಕಾರು ತಯಾರಕರು

ಬೆಲೆ ಏರಿಕ್‌

ಮಾರುತಿ

4 ಪ್ರತಿಶತದವರೆಗೆ

ಟಾಟಾ ಮೋಟಾರ್ಸ್‌

N/A*

ಕಿಯಾ

3 ಪ್ರತಿಶತದವರೆಗೆ

ಹ್ಯುಂಡೈ

3 ಪ್ರತಿಶತದವರೆಗೆ

ಹೋಂಡಾ

N/A*

ರೆನಾಲ್ಟ್‌

2 ಪ್ರತಿಶತದವರೆಗೆ

ಬಿಎಮ್‌ಡಬ್ಲ್ಯೂ ಮೋಟಾರ್ಸ್‌

3 ಪ್ರತಿಶತದವರೆಗೆ

ಮಹೀಂದ್ರಾ

3 ಪ್ರತಿಶತದವರೆಗೆ

*ಈ ಕಾರು ತಯಾರಕರು ಅಂಕಿ ಅಂಶವನ್ನು ಒದಗಿಸಿಲ್ಲ.

ಮಾರುತಿ

2025ರ ಏಪ್ರಿಲ್‌ನಲ್ಲಿ ಬೆಲೆ ಏರಿಕೆಯನ್ನು ಘೋಷಿಸಿದ ಮೊದಲ ಕಾರು ತಯಾರಕರಲ್ಲಿ ಮಾರುತಿ ಕೂಡ ಒಂದು. ಶೇಕಡಾ 4 ರಷ್ಟು ಬೆಲೆ ಏರಿಕೆಯು ಅದರ ಕಾರುಗಳ ಪಟ್ಟಿಯಲ್ಲಿ ನೀಡಲಾಗುವ ಎಲ್ಲಾ ಮೊಡೆಲ್‌ಗಳಿಗೆ ಅನ್ವಯಿಸುತ್ತದೆ. ಬೆಲೆ ಏರಿಕೆಗೆ ಮೆಟಿರಿಯಲ್‌ಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಾಗುತ್ತಿರುವುದೇ ಕಾರಣ ಎಂದು ಮಾರುತಿ ಹೇಳಿದೆ. ಬೆಲೆ ಏರಿಕೆಯು ಆಯ್ಕೆ ಮಾಡಿದ ಮೊಡೆಲ್‌ ಮತ್ತು ವೇರಿಯೆಂಟ್‌ಅನ್ನು ಅವಲಂಬಿಸಿರುತ್ತದೆ ಎಂದು ಮಾರುತಿ ತಿಳಿಸಿದೆ. ಮಾರುತಿಯ ಪ್ರಸ್ತುತ ರೇಂಜ್‌ನಲ್ಲಿ ಆಲ್ಟೊ ಕೆ10, ವ್ಯಾಗನ್ ಆರ್, ಗ್ರ್ಯಾಂಡ್ ವಿಟಾರಾ, ಬ್ರೆಝಾ, ಬಲೆನೊ ಮತ್ತು ಇನ್ವಿಕ್ಟೊ ಸೇರಿವೆ.

ಟಾಟಾ ಮೋಟಾರ್ಸ್‌

2025ರ ಆರಂಭದಿಂದ ಟಾಟಾ ತನ್ನ ಕಾರುಗಳ ಬೆಲೆಯಲ್ಲಿ ಎರಡನೇ ಬಾರಿಗೆ ಏರಿಕೆಯನ್ನು ಪರಿಚಯಿಸಿದೆ. ಕಾರು ತಯಾರಕ ಕಂಪನಿಯು ಬೆಲೆ ಏರಿಕೆಗೆ ಮೆಟಿರಿಯಲ್‌ ವೆಚ್ಚಗಳು ಹೆಚ್ಚುತ್ತಿರುವ ಕಾರಣವನ್ನು ಒದಗಿಸಿದ್ದರೂ, ಬೆಲೆ ಏರಿಕೆಯ ನಿರ್ದಿಷ್ಟ ಅಂಕಿ ಅಂಶವನ್ನು ಒದಗಿಸಿಲ್ಲ. ಬೆಲೆ ಏರಿಕೆಯು ಮೊಡೆಲ್‌ ಮತ್ತು ವೇರಿಯೆಂಟ್‌ಅನ್ನು ಅವಲಂಬಿಸಿರುತ್ತದೆ ಎಂದು ಟಾಟಾ ಹೇಳಿದೆ. 2025 ರಲ್ಲಿ ಕಾರು ತಯಾರಕರು ಮಾಡಿದ ಎರಡನೇ ಬೆಲೆ ಏರಿಕೆ ಇದಾಗಿದ್ದು, ಅಲ್ಲಿ ಅವರು ಬೆಲೆಗಳನ್ನು ಶೇಕಡಾ 3 ರಷ್ಟು ಹೆಚ್ಚಿಸಿದ್ದಾರೆ. ಟಾಟಾ ಪ್ರಸ್ತುತ ತನ್ನ ಕಾರುಗಳ ಪಟ್ಟಿಯಲ್ಲಿ 13 ಮೊಡೆಲ್‌ಗಳನ್ನು ಹೊಂದಿದೆ, ಅವುಗಳಲ್ಲಿ ನೆಕ್ಸಾನ್, ಟಿಯಾಗೊ, ಆಲ್ಟ್ರೋಜ್ ಮತ್ತು ಕರ್ವ್ ಇವಿ ಸೇರಿವೆ, ಇವೆಲ್ಲವೂ ಏಪ್ರಿಲ್‌ನಲ್ಲಿ ಬೆಲೆ ಏರಿಕೆಯನ್ನು ಕಾಣಲಿವೆ.

ಮಹೀಂದ್ರಾ

ಮಹೀಂದ್ರಾ ಮತ್ತೊಂದು ಪ್ರಮುಖ ಭಾರತೀಯ ಕಾರು ತಯಾರಕ ಕಂಪನಿಯಾಗಿದ್ದು, ಮುಂದಿನ ತಿಂಗಳಿನಿಂದ ಬೆಲೆ ಏರಿಕೆಯನ್ನು ಪರಿಚಯಿಸಲಿದೆ. ಕಾರು ತಯಾರಕ ಕಂಪನಿಯು ತನ್ನ ಕಾರುಗಳ ಬೆಲೆಗಳನ್ನು ಶೇಕಡಾ 3 ರಷ್ಟು ಹೆಚ್ಚಿಸುತ್ತಿದೆ ಮತ್ತು ಈ ಹೆಚ್ಚಳಕ್ಕೆ ಇತರ ವಿಷಯಗಳ ಜೊತೆಗೆ ಮೆಟಿರಿಯಲ್‌ ವೆಚ್ಚಗಳಲ್ಲಿನ ಹೆಚ್ಚಳ ಕಾರಣ ಎಂದು ಹೇಳಿದೆ. ಮಹೀಂದ್ರಾದ ರೇಂಜ್‌ನಲ್ಲಿ ಎಕ್ಸ್‌ಯುವಿ 700, ಥಾರ್, ಸ್ಕಾರ್ಪಿಯೋ ಮತ್ತು ಬೊಲೆರೊ ಸೇರಿವೆ.

ಕಿಯಾ

ಟಾಟಾ ಮತ್ತು ಮಾರುತಿಯಂತೆಯೇ ಕಿಯಾ ಕೂಡ 2025 ರಲ್ಲಿ ಎರಡನೇ ಬೆಲೆ ಏರಿಕೆಯನ್ನು ಘೋಷಿಸಿದೆ. ಕೊರಿಯಾದ ಕಾರು ತಯಾರಕ ಕಂಪನಿಯು ಬೆಲೆ ಏರಿಕೆಗೆ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚ ಮತ್ತು ಇತರ ಅಂಶಗಳನ್ನು ಕಾರಣವೆಂದು ಉಲ್ಲೇಖಿಸಿದೆ. ಈ ಹೆಚ್ಚಳವು ಕಿಯಾ ಭಾರತದಲ್ಲಿ ನೀಡುತ್ತಿರುವ ಎಲ್ಲಾ 7 ಮೊಡೆಲ್‌ಗಳನ್ನು ಒಳಗೊಳ್ಳುತ್ತದೆ, ಅವುಗಳಲ್ಲಿ ಹೊಸದಾಗಿ ಬಿಡುಗಡೆಯಾದ ಕಿಯಾ ಸೈರೋಸ್ ಕೂಡ ಸೇರಿದೆ. ಬೆಲೆ ಏರಿಕೆಯು ಮೊಡೆಲ್‌ ಮತ್ತು ವೇರಿಯೆಂಟ್‌ಅನ್ನು ಅವಲಂಬಿಸಿರುತ್ತದೆ ಮತ್ತು ಇದು ಶೇಕಡಾ 3 ರವರೆಗೆ ಹೆಚ್ಚಾಗುತ್ತದೆ ಎಂದು ಕಿಯಾ ವರದಿ ಮಾಡಿದೆ. ಕಿಯಾ ಪ್ರಸ್ತುತ ನೀಡುವ ಕಾರುಗಳಲ್ಲಿ ಸೋನೆಟ್, ಸೆಲ್ಟೋಸ್ ಮತ್ತು EV6 ಸೇರಿವೆ.

ಹ್ಯುಂಡೈ

ತನ್ನ ಸಹೋದರಿ ಕಂಪನಿಯೊಂದಿಗೆ, ಹುಂಡೈ ಕೂಡ ಶೇಕಡಾ 3 ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ. ಈ ಬೆಲೆ ಏರಿಕೆಯು ಇತ್ತೀಚಿನ ಕ್ರೆಟಾ ಎಲೆಕ್ಟ್ರಿಕ್ ಸೇರಿದಂತೆ ಸಂಪೂರ್ಣ ಕಾರುಗಳ ಪಟ್ಟಿಗೆ ಅನ್ವಯಿಸುತ್ತದೆ. ಕೊರಿಯಾದ ಕಾರು ತಯಾರಕ ಕಂಪನಿಯು ಇನ್‌ಪುಟ್ ವೆಚ್ಚಗಳಲ್ಲಿನ ಹೆಚ್ಚಳ, ಹೆಚ್ಚಿನ ಕಾರ್ಯಾಚರಣೆಯ ವೆಚ್ಚಗಳು ಮತ್ತು ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳವು ಈ ಹೆಚ್ಚಳಕ್ಕೆ ಕಾರಣಗಳಾಗಿವೆ ಎಂದು ವರದಿ ಮಾಡಿದೆ. ಹುಂಡೈ ಪ್ರಸ್ತುತ ನಮ್ಮ ಮಾರುಕಟ್ಟೆಯಲ್ಲಿ ಕ್ರೆಟಾ, ಎಕ್ಸ್‌ಟರ್, ಗ್ರ್ಯಾಂಡ್ ಐ10 ನಿಯೋಸ್ ಮತ್ತು ಅಯೋನಿಕ್ 5 ಸೇರಿದಂತೆ 14 ಕಾರುಗಳನ್ನು ನೀಡುತ್ತದೆ.

ಹೋಂಡಾ

2025ರ ಜನವರಿಯಲ್ಲಿ ನಡೆದ ಮೊದಲ ಸುತ್ತಿನ ಬೆಲೆ ಏರಿಕೆಯನ್ನು ಹೋಂಡಾ ತಪ್ಪಿಸಿಕೊಂಡರೂ, ಈ ಬಾರಿ ಅದು ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಜಪಾನಿನ ಈ ಕಾರು ತಯಾರಕ ಕಂಪನಿಯು, ಪಟ್ಟಿಯಲ್ಲಿರುವ ಇತರ ಕಾರು ತಯಾರಕಂತೇ ಇದೇ ರೀತಿಯ ಕಾರಣವನ್ನು ನೀಡಿತು, ಉದಾಹರಣೆಗೆ ಕಚ್ಚಾ ವಸ್ತುಗಳ ಬೆಲೆ ಏರಿಕೆ. ಹೋಂಡಾ ಪ್ರಸ್ತುತ ಭಾರತದಲ್ಲಿ ಐದು ಮೊಡೆಲ್‌ಗಳನ್ನು ನೀಡುತ್ತದೆ, ಅವುಗಳಲ್ಲಿ ಅಮೇಜ್, ಸಿಟಿ ಮತ್ತು ಸಿಟಿ ಹೈಬ್ರಿಡ್ ಸೇರಿವೆ.

ರೆನಾಲ್ಟ್‌

ಫ್ರೆಂಚ್ ಮೂಲದ ಈ ಕಾರು ತಯಾರಕ ಕಂಪನಿಯು ತನ್ನ ಕಾರುಗಳ ಬೆಲೆಯಲ್ಲಿ ಶೇಕಡಾ 2 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಗಮನಾರ್ಹವಾಗಿ, ರೆನಾಲ್ಟ್ 2023ರಿಂದ ತನ್ನ ಮೊಡೆಲ್‌ಗಳ ಬೆಲೆ ಏರಿಕೆಯನ್ನು ಪರಿಚಯಿಸಿಲ್ಲ, ಆದರೆ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ರೆನಾಲ್ಟ್‌ನ ಪ್ರಸ್ತುತ ಕಾರುಗಳ ಪಟ್ಟಿಯಲ್ಲಿ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಸೇರಿವೆ.

ಬಿಎಮ್‌ಡಬ್ಲ್ಯೂ

ಐಷಾರಾಮಿ ಕಾರು ಬ್ರಾಂಡ್ ಬಿಎಂಡಬ್ಲ್ಯು ಕೂಡ ಶೇಕಡಾ 3 ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ. ಕಾರು ತಯಾರಕ ಕಂಪನಿಯು ಬೆಲೆ ಏರಿಕೆಗೆ ನಿಖರವಾದ ಕಾರಣವನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ಈ ಹೆಚ್ಚಳವು MINI ಕಾರುಗಳು ಸೇರಿದಂತೆ ಅದರ ಸಂಪೂರ್ಣ ರೇಂಜ್‌ನ ಮೊಡೆಲ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. BMW ಕಾರುಗಳ ಪಟ್ಟಿಯಲ್ಲಿ X3, X7, X1 ಲಾಂಗ್ ವೀಲ್ ಬೇಸ್ (LWB), ಮಿನಿ ಕೂಪರ್ S ಮತ್ತು M5 ನಂತಹ ಕಾರುಗಳು ಸೇರಿವೆ.

ಮೇಲೆ ತಿಳಿಸಿದ ಯಾವುದೇ ಕಾರು ತಯಾರಕರಿಂದ ನೀವು ಯಾವುದಾದರೂ ಕಾರು ಖರೀದಿಸಲು ಯೋಜಿಸುತ್ತಿದ್ದಿರಾ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ