Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ Audi Q3 Bold Editionನ ಬಿಡುಗಡೆ, ಇದರ ಬೆಲೆ 54.65 ಲಕ್ಷ ರೂ.ನಿಂದ ಪ್ರಾರಂಭ

published on ಮೇ 10, 2024 09:21 pm by rohit for ಆಡಿ ಕ್ಯೂ3

ಹೊಸ ಲಿಮಿಟೆಡ್‌-ರನ್ ಮೊಡೆಲ್‌ ಗ್ರಿಲ್ ಮತ್ತು ಆಡಿ ಲೋಗೋ ಸೇರಿದಂತೆ ಕೆಲವು ಬಾಹ್ಯ ಅಂಶಗಳಿಗೆ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ.

  • ಆಡಿಯು ಸ್ಟ್ಯಾಂಡರ್ಡ್ Q3 ಮತ್ತು Q3 ಸ್ಪೋರ್ಟ್‌ಬ್ಯಾಕ್ ಎರಡರಲ್ಲೂ ಬೋಲ್ಡ್ ಎಡಿಷನ್‌ ಅನ್ನು ನೀಡುತ್ತಿದೆ.
  • ಬೆಲೆ ಕ್ರಮವಾಗಿ 54.65 ಲಕ್ಷ ಮತ್ತು 55.71 ಲಕ್ಷ ರೂ. (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ.
  • 10.1-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ರೆಗುಲರ್‌ ಮೊಡೆಲ್‌ನಂತೆ ಅದೇ ವೈಶಿಷ್ಟ್ಯಗಳ ಪಟ್ಟಿಯನ್ನು ಪಡೆಯುತ್ತದೆ.
  • ಆಲ್-ವೀಲ್-ಡ್ರೈವ್ ಆಯ್ಕೆಯೊಂದಿಗೆ ಸ್ಟ್ಯಾಂಡರ್ಡ್‌ ಆವೃತ್ತಿಯ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುತ್ತದೆ.

Audi Q3 ಅನ್ನು ಅದರ ಉದ್ದೇಶಿತ ಖರೀದಿದಾರರ ಮನಸ್ಸಿನಲ್ಲಿ ತಾಜಾವಾಗಿಡುವ ಪ್ರಯತ್ನದಲ್ಲಿ, ಕಾರು ತಯಾರಕರು ಈಗ ಎಸ್‌ಯುವಿಯ ಹೊಸ ಲಿಮಿಟೆಡ್‌- ರನ್‌ ಬೋಲ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ. ಇದು ಈ ಸ್ಪೋರ್ಟ್ಸ್‌ ಕಾರಿನ ಎಂಟ್ರಿ-ಲೆವೆಲ್‌ನ ಸ್ಟ್ಯಾಂಡರ್ಡ್‌ ಮತ್ತು ಸ್ಪೋರ್ಟ್‌ಬ್ಯಾಕ್ ಆವೃತ್ತಿಗಳೆರಡರಲ್ಲೂ ಲಭ್ಯವಿದೆ.

ವೇರಿಯೆಂಟ್‌-ವಾರು ಬೆಲೆಗಳು

ವೇರಿಯೆಂಟ್‌

ಬೆಲೆ (ಎಕ್ಸ್‌ಶೋರೂಮ್‌ ಪ್ಯಾನ್‌-ಇಂಡಿಯಾ)

Q3 ಬೋಲ್ಡ್‌ ಎಡಿಷನ್‌

54.65 ಲಕ್ಷ ರೂ.

Q3 ಸ್ಪೋರ್ಟ್ಸ್‌ಬ್ಯಾಕ್‌ ಬೋಲ್ಡ್‌ ಎಡಿಷನ್‌

55.71 ಲಕ್ಷ ರೂ.

Q3 ಬೋಲ್ಡ್ ಆವೃತ್ತಿಯು ಸ್ಟ್ಯಾಂಡರ್ಡ್ Q3 ಗಿಂತ 1.48 ಲಕ್ಷ ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ, ಆದರೆ Q3 ಸ್ಪೋರ್ಟ್‌ಬ್ಯಾಕ್ ಬೋಲ್ಡ್ ಆವೃತ್ತಿಯು ಅದರ ರೆಗುಲರ್‌ ಆವೃತ್ತಿಗಿಂತ 1.49 ಲಕ್ಷ ರೂ,.ನಷ್ಟು ದುಬಾರಿಯಾಗುತ್ತದೆ.

ವಿನ್ಯಾಸದ ಬದಲಾವಣೆಗಳ ವಿವರಗಳು

ಆಡಿಯು ಬೋಲ್ಡ್ ಆವೃತ್ತಿಯನ್ನು 'ಬ್ಲ್ಯಾಕ್ ಸ್ಟೈಲಿಂಗ್' ಪ್ಯಾಕೇಜ್‌ನೊಂದಿಗೆ ನೀಡುತ್ತಿದೆ, ಇದು ಗ್ರಿಲ್, ಹೊರಗಿನ ರಿಯರ್‌ವ್ಯೂ ಮಿರರ್‌ಗಳು (ORVM ಗಳು) ಮತ್ತು ರೂಫ್ ರೈಲ್‌ಗಳಿಗೆ ಹೊಳಪು-ಕಪ್ಪು ಫಿನಿಶ್‌ನೊಂದಿಗೆ ಬರುತ್ತದೆ. Q3 ಮತ್ತು Q3 ಸ್ಪೋರ್ಟ್‌ಬ್ಯಾಕ್ ಎರಡರ ಬೋಲ್ಡ್ ಆವೃತ್ತಿಯು ಮುಂಭಾಗ ಮತ್ತು ಹಿಂಭಾಗದಲ್ಲಿ ಆಡಿ ಲೋಗೋ ಮತ್ತು ವಿಂಡೋದ ಸುತ್ತಲು ಕಪ್ಪು ಬಣ್ಣವನ್ನು ಪಡೆಯುತ್ತದೆ. ಕ್ಯೂ 3 ಮತ್ತು ಕ್ಯೂ 3 ಸ್ಪೋರ್ಟ್‌ಬ್ಯಾಕ್ ಬೋಲ್ಡ್ ಆವೃತ್ತಿಯು ತಮ್ಮ ರೆಗುಲರ್‌ ಕೌಂಟರ್‌ಪಾರ್ಟ್‌ನಂತೆ ಅದೇ 18-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ಬರುತ್ತದೆ. ಕ್ಯೂ3 ಸ್ಪೋರ್ಟ್‌ಬ್ಯಾಕ್ ಸುತ್ತಲೂ ಸ್ಪೋರ್ಟಿ ಲುಕ್‌ಗಾಗಿ ಎಸ್ ಲೈನ್ ಹೊರಭಾಗದ ಪ್ಯಾಕೇಜ್ ಅನ್ನು ಸಹ ಹೊಂದಿದೆ.

ಕ್ಯಾಬಿನ್‌ನಲ್ಲಿ ವ್ಯತ್ಯಾಸವಿಲ್ಲ

ಬಾಹ್ಯ ಬದಲಾವಣೆಗಳಿಗಿಂತ ಭಿನ್ನವಾಗಿ, ಲಿಮಿಟೆಡ್‌ ಎಡಿಷನ್‌ ಆಗಿರುವ Q3 ಬೋಲ್ಡ್ ಎಡಿಷನ್‌ ಒಳಭಾಗದಲ್ಲಿ ಸ್ಟ್ಯಾಂಡರ್ಡ್‌ ಆವೃತ್ತಿಗಳಿಂತ ಹೆಚ್ಚುವರಿಯಾಗಿ ಯಾವುದೇ ಪರಿಷ್ಕರಣೆಗಳನ್ನು ಪಡೆಯುವುದಿಲ್ಲ. ವೈಶಿಷ್ಟ್ಯಗಳ ಪಟ್ಟಿಯು 10.1-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಹೆಡ್‌ಲೈನಿಂಗ್ ಸಾಧನಗಳೊಂದಿಗೆ ಬರುತ್ತದೆ.

ಆರು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಪಾರ್ಕ್ ಅಸಿಸ್ಟ್‌ನೊಂದಿಗೆ Q3 ಮತ್ತು Q3 ಸ್ಪೋರ್ಟ್‌ಬ್ಯಾಕ್ ಗೆ ಸುರಕ್ಷತಾ ಪ್ಯಾಕೇಜ್‌ ಅನ್ನು ಆಡಿ ನೀಡುತ್ತದೆ.

ಇದನ್ನು ಓದಿ: BMW 3 Series Gran Limousine M Sport Pro ಎಡಿಷನ್‌ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ

ಎಂಜಿನ್‌ನ ಬಗ್ಗೆ

ಬೋಲ್ಡ್ ಆವೃತ್ತಿಯು ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (190 ಪಿಎಸ್‌/320 ಎನ್‌ಎಮ್‌) ಜೊತೆಗೆ ಸ್ಟ್ಯಾಂಡರ್ಡ್ ಆಡಿ Q3 ಮತ್ತು Q3 ಸ್ಪೋರ್ಟ್‌ಬ್ಯಾಕ್ ಅನ್ನು ಹೊಂದಿದೆ. ಇದು 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇದು ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ.

ಬೆಲೆಯ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ಬೋಲ್ಡ್ ಎಡಿಷನ್‌ನ ಪರಿಚಯದ ನಂತರ, ಆಡಿ ಕ್ಯೂ3 ಬೆಲೆಗಳು ಈಗ 43.81 ಲಕ್ಷ ರೂ.ನಿಂದ 54.65 ಲಕ್ಷ ರೂ.ವರೆಗೆ ಇರುತ್ತದೆ, ಆದರೆ ಆಡಿ ಕ್ಯೂ 3 ಸ್ಪೋರ್ಟ್‌ಬ್ಯಾಕ್ (ಸ್ಟ್ಯಾಂಡರ್ಡ್ ಕ್ಯೂ 3 ನ ಸ್ಪೋರ್ಟಿಯರ್-ಲುಕಿಂಗ್ ಪರ್ಯಾಯ) ಬೆಲೆಗಳು 54.22 ಲಕ್ಷ ರೂ.ನಿಂದ 55.71 ಲಕ್ಷ ರೂ.ವರೆಗೆ ( ಎಕ್ಸ್‌-ಶೋರೂಮ್ ಪ್ಯಾನ್-ಇಂಡಿಯಾ) ಇದೆ. Q3 ಮಾರುಕಟ್ಟೆಯಲ್ಲಿ Mercedes-Benz GLA ಮತ್ತು BMW X1 ಗೆ ಸ್ಪರ್ಧೆಯನ್ನು ಒಡ್ಡುತ್ತದೆ, ಆದರೆ ನೀವು ಇದರ ಬದಲು Volvo XC40 Recharge ಮತ್ತು Hyundai Ioniq 5 ನಂತಹ EV ಪರ್ಯಾಯಗಳನ್ನು ಪರಿಗಣಿಸಬಹುದು.

ಇನ್ನಷ್ಟು ಓದಿ : ಆಡಿ ಕ್ಯೂ3 ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಆಡಿ ಕ್ಯೂ3

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ