ಡಿಸೆಂಬರ್ 15ರಂದು ಭಾರತ್ NCAP ಕ್ರ್ಯಾಶ್ ಟೆಸ್ಟ್ ಪ್ರಾರಂಭ
ನವೆಂಬರ್ 02, 2023 10:53 am ರಂದು ansh ಮೂಲಕ ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸಂಸ್ಥೆಯು ನಡೆಸುವ ಕ್ರ್ಯಾಶ್ ಟೆಸ್ಟ್ ನಲ್ಲಿ ಪಾಲ್ಗೊಳ್ಳಲು ಟಾಟಾ, ಹ್ಯುಂಡೈ ಮತ್ತು ಮಾರುತಿ ಸುಜುಕಿ ಮುಂತಾದ ಬ್ರಾಂಡುಗಳ 30ಕ್ಕಿಂತಲೂ ಹೆಚ್ಚಿನ ಕಾರುಗಳು ಸಾಲು ನಿಂತಿವೆ
- ಇತ್ತೀಚೆಗಷ್ಟೇ ಗ್ಲೋಬಲ್ NCAP ಯಿಂದ ಪರೀಕ್ಷೆಗೆ ಒಳಗಾದ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ ಲಿಫ್ಟ್ ಗಳು ಸಹ ಭಾರತ್ NCAP ಯಿಂದ ಕ್ರ್ಯಾಶ್ ಟೆಸ್ಟ್ ಗೆ ಒಳಗಾಗಲಿವೆ.
- ಮಾರುತಿಯ 3, ಹ್ಯುಂಡೈಯ 3 ಮತ್ತು ಮಹೀಂದ್ರಾದ 4 ನಾಲ್ಕು ಕಾರುಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
- ಇಲ್ಲಿ ನಡೆಸಲಾಗುವ 5 ಪ್ರಮುಖ ಪರೀಕ್ಷೆಗಳೆಂದರೆ: ಫ್ರಂಟಲ್ ಇಂಪ್ಯಾಕ್ಟ್, ಸೈಡ್ ಇಂಪ್ಯಾಕ್ಟ್, ಸೈಡ್ ಪೋಲ್ ಇಂಪ್ಯಾಕ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಪೆಡೆಸ್ಟ್ಟಿಯನ್ ಕಂಪ್ಲಯಂಟ್ ಫ್ರಂಟ್ ಡಿಸೈನ್.
- ಪ್ರತಿಯೊಂದು ಕಾರು ಸಹ ಅಡಲ್ಟ್ ಮತ್ತು ಚೈಲ್ಡ್ ರೇಟಿಂಗ್ ಗಳು, ಮಾದರಿಯ ಹೆಸರು, ವೇರಿಯಂಟ್ ಹೆಸರು ಮತ್ತು ಪರೀಕ್ಷೆಗೆ ಒಳಪಟ್ಟ ವರ್ಷದೊಂದಿಗೆ ಸ್ಟಿಕ್ಕರ್ ಅನ್ನು ಪಡೆಯಲಿದೆ.
BNCAP ಎಂದು ಕರೆಯಲ್ಪಡುವ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ ಅನ್ನು 2023ರ ಆಗಸ್ಟ್ ತಿಂಗಳಿನಲ್ಲಿ ಘೋಷಿಸಲಾಯಿತು. ಇದು ಅಕ್ಟೋಬರ್ 1ರಿಂದ ಔಪಚಾರಿಕವಾಗಿ ಕಾರ್ಯಾರಂಭಿಸಲಿದೆ ಎಂದು ಘೋಷಿಸಲಾಗಿದ್ದರೂ ಸಹ, ಇತ್ತೀಚಿನ ವರದಿಗಳ ಪ್ರಕಾರ ಭಾರತ್ NCAP ಯು ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ಅನ್ನು ಡಿಸೆಂಬರ್ 15ರಿಂದ ಪ್ರಾರಂಭಿಸಲಿದೆ. ಇದು ಕಾರುಗಳಿಗೆ ಸುರಕ್ಷತಾ ಶ್ರೇಯಾಂಕವನ್ನು ನೀಡಲಿದ್ದು, ವಯಸ್ಕ ಪ್ರಯಾಣಿಕನ ರಕ್ಷಣೆ, ಮಗುವಿನ ರಕ್ಷಣೆ ಮತ್ತು ಸುರಕ್ಷಾ ನೆರವು ಗುಣಲಕ್ಷಣಗಳ ಕುರಿತು ವಿವರವಾದ ಶ್ರೇಯಾಂಕವನ್ನು ಸಹ ನೀಡಲಾಗುತ್ತದೆ.
ಪರೀಕ್ಷೆಗೆ ಒಳಪಡಲಿರುವ ಕಾರುಗಳು
ವರದಿಗಳ ಪ್ರಕಾರ ಮೂರು ಡಜನ್ ಗಿಂತಲೂ ಹೆಚ್ಚಿನ ಕಾರುಗಳು ಭಾರತ್ NCAP ಯಿಂದ ಕ್ರ್ಯಾಶ್ ಟೆಸ್ಟ್ ಗೆ ಒಳಪಡಲಿವೆ. ಯಾವೆಲ್ಲ ಕಾರುಗಳು ಈ ಪರೀಕ್ಷೆಗೆ ಒಳಪಡಲಿವೆ ಎನ್ನುವ ಕುರಿತು ಮಾಹಿತಿ ದೊರೆಯದೆ ಇದ್ದರೂ,ಪರಿಷ್ಕೃತ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ಈ ಪರೀಕ್ಷೆಗೆ ಒಳಪಡಲಿವೆ.
ಹೆಸರುಗಳನ್ನು ದೃಢೀಕರಿಸದೆ ಇದ್ದರೂ ಮಾಸ್ ಮಾರ್ಕೆಟ್ ಬ್ರಾಂಡುಗಳ ಯಾವೆಲ್ಲ ಕಾರುಗಳು ಪರೀಕ್ಷೆಗೆ ಒಳಪಡಲು ಸಾಲಿನಲ್ಲಿ ನಿಂತಿದೆ ಎಂಬುದರ ಕುರಿತು ನಮಗೆ ಒಂದಷ್ಟು ಮಾಹಿತಿ ದೊರೆತಿದೆ. ವರದಿಗಳ ಪ್ರಕಾರ, ಮಾರುತಿಯ 3, ಹ್ಯುಂಡೈಸಂಸ್ಥೆಯ 3 ಮತ್ತು ಮಹೀಂದ್ರಾದ 4 ಕಾರುಗಳು ಭಾರತ್ NCAP ವತಿಯಿಂದ ಕ್ರ್ಯಾಶ್ ಟೆಸ್ಟ್ ಗೆ ಒಳಪಡಲಿವೆ. ಅಧಿಕಾರಿಗಳು ಹೇಳಿರುವಂತೆ ಯೂರೋಪಿನ ಕಾರು ತಯಾರಕ ಸಂಸ್ಥೆಗಳಾದ ರೆನೋ, ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಇತ್ಯಾದಿಗಳು ಈ ಪರೀಕ್ಷೆಗೆ ಯಾವುದೇ ಕಾರುಗಳನ್ನು ನಿಯೋಜಿಸಿಲ್ಲ.
ಇದನ್ನು ಸಹ ಓದಿರಿ: ಅಕ್ಟೋಬರ್ 2023ರಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳು, ಈ ಹಬ್ಬದ ಋತುವಿನಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳು
ಈ ಸಂಸ್ಥೆಯು ಕ್ರ್ಯಾಶ್ ಟೆಸ್ಟ್ ಗಾಗಿ ಈ ಕಾರುಗಳ ಬೇಸ್ ವೇರಿಯಂಟ್ ಗಳ 3 ಘಟಕಗಳನ್ನು ತೆಗೆದುಕೊಳ್ಳುತ್ತದೆ.
ಪರೀಕ್ಷಾ ಮಾನದಂಡಗಳು
ಭಾರತ್ NCAPಯ ಪರೀಕ್ಷಾ ಮಾನದಂಡಗಳು ಗ್ಲೋಬಲ್ NCAP ಯ ಮಾನದಂಡಗಳಿಗಿಂತ ಭಿನ್ನವಾಗಿಲ್ಲ. ಪ್ರತಿ ಕಾರು ಸಹ 5 ಪ್ರಮುಖ ಪರೀಕ್ಷೆಗಳಿಗೆ ಒಳಗಾಗಲಿದೆ: ಫ್ರಂಟಲ್ ಇಂಪ್ಯಾಕ್ಟ್, ಸೈಡ್ ಇಂಪ್ಯಾಕ್ಟ್, ಸೈಡ್ ಪೋಲ್ ಇಂಪ್ಯಾಕ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಪೆಡೆಸ್ಟ್ಟಿಯನ್ ಕಂಪ್ಲಯಂಟ್ ಫ್ರಂಟ್ ಡಿಸೈನ್. ಈ ಪರೀಕ್ಷೆಗಳ ಫಲಿತಾಂಶವನ್ನು ಆಧರಿಸಿ ಕಾರಿಗೆ ಅಡಲ್ಟ್ ಒಕ್ಯುಪೆಂಟ್ ಪ್ರೊಟೆಕ್ಷನ್ (AOP) ಮತ್ತು ಚೈಲ್ಡ್ ಒಕ್ಯುಪೆಂಟ್ ಪ್ರೊಟೆಕ್ಷನ್ (COP) ಗಾಗಿ ಅಂಕಗಳನ್ನು ನೀಡಲಾಗುತ್ತದೆ.
ಈ ಅಂಕಗಳನ್ನು ನಂತರ 0ಯಿಂದ 5ರ ತನಕದ ಸ್ಟಾರ್ ಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ಈ ಸ್ಟಾರ್ ಗಳು ಕಾರುಗಳ ಸಮಗ್ರ ಸುರಕ್ಷಾ ರೇಟಿಂಗ್ ಎನಿಸಲಿವೆ. ಭಾರತ್ NCAP ಯಿಂದ ಪರೀಕ್ಷೆಗೆ ಒಳಪಡಲಿರುವ ಎಲ್ಲಾ ಕಾರುಗಳು ಸ್ಟಿಕ್ಕರ್ ಒಂದನ್ನು ಪಡೆಯಲಿದ್ದು ಅದು ಮಾದರಿ, ವೇರಿಯಂಟ್ ಹೆಸರು ಮತ್ತು ಪರೀಕ್ಷೆಗೆ ಒಳಪಟ್ಟ ವರ್ಷದೊಂದಿಗೆ ಅವುಗಳ ಅಡಲ್ಟ್ ಮತ್ತು ಚೈಲ್ಡ್ ಸೇಫ್ಟಿ ರೇಟಿಂಗ್ ಅನ್ನು ತೋರಿಸಲಿದೆ. ಭಾರತ್ NCAP ಪರೀಕ್ಷೆಗಳು ಕಡ್ಡಾಯವಲ್ಲದಿದ್ದರೂ, ಉನ್ನತ ರೇಟಿಂಗ್ ಅನ್ನು ನಿರೀಕ್ಷಿಸಿ ಕಾರು ತಯಾರಕ ಸಂಸ್ಥೆಗಳು ತಮ್ಮ ಮಾಡೆಲ್ ಗಳನ್ನು ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಲು ತುದಿಗಾಲಲ್ಲಿ ನಿಂತಿವೆ.
ಅಲ್ಲದೆ 3ಕ್ಕಿಂತ ಹೆಚ್ಚಿನ ಸ್ಟಾರ್ ಗಳನ್ನು ಪಡೆಯಬೇಕಾದರೆ, 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಫ್ರಂಟ್ ಸೀಟ್ ರಿಮೈಂಡರ್ ಸೇರಿದಂತೆ ಕೆಲವೊಂದು ಸುರಕ್ಷತಾ ಸಾಧನಗಳನ್ನು ಭಾರತ್ NCAP ಯು ಕಡ್ಡಾಯಗೊಳಿಸಿದೆ. ಪ್ರತಿ ಸ್ಟಾರ್ ಗೆ ಬೇಕಾಗುವ ಕನಿಷ್ಠ ಅಂಕಗಳು ಇಲ್ಲಿವೆ.
ಅಡಲ್ಟ್ ಒಕ್ಯುಪೆಂಟ್ಸ್ ಪ್ರೊಟೆಕ್ಷನ್ |
ಚೈಲ್ಡ್ ಒಕ್ಯುಪೆಂಟ್ಸ್ ಪ್ರೊಟೆಕ್ಷನ್ |
||
ಸ್ಟಾರ್ ರೇಟಿಂಗ್ |
ಅಂಕ: |
ಸ್ಟಾರ್ ರೇಟಿಂಗ್ |
ಅಂಕ: |
5 ಸ್ಟಾರ್ ಗಳು |
27 |
5 ಸ್ಟಾರ್ ಗಳು |
41 |
4 ಸ್ಟಾರ್ ಗಳು |
22 |
4 ಸ್ಟಾರ್ ಗಳು |
35 |
3 ಸ್ಟಾರ್ ಗಳು |
16 |
3 ಸ್ಟಾರ್ ಗಳು |
27 |
2 ಸ್ಟಾರ್ ಗಳು |
10 |
2 ಸ್ಟಾರ್ ಗಳು |
18 |
ಭವಿಷ್ಯದ ಯೋಜನೆಗಳು
ಭಾರತ ಸರ್ಕಾರವು ಪರೀಕ್ಷೆಯ ಮಾನದಂಡವನ್ನು ಪರಿಷ್ಕರಿಸುವ ಯೋಜನೆಯನ್ನು ಹೊಂದಿದೆ. ಕೆಲ ಕಾಲದ ನಂತರ ಭಾರತ್ NCAPಯು ತನ್ನ ಮಾನದಂಡದಲ್ಲಿ ರಿಯರ್ ಕ್ರ್ಯಾಶ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಅನ್ನು ಸಹ ಸೇರಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಕಾಲ ಕ್ರಮೇಣ, ಈ ಸಂಸ್ಥೆಯು, ಮೌಲ್ಯಮಾಪನ ಮತ್ತು ಒಟ್ಟಾರೆ ಉತ್ತಮ ಸುರಕ್ಷತಾ ರೇಟಿಂಗ್ ಗಾಗಿ ಆಯ್ದ ADAS ವೈಶಿಷ್ಟ್ಯಗಳ (ಲೇನ್ ಡಿಪಾರ್ಚರ್ ವಾರ್ನಿಂಗ್, ಬ್ರೇಕ್ ಅಸಿಸ್ಟ್, ಮತ್ತು ಅಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್) ಅಗತ್ಯತೆಯನ್ನು ಕಡ್ಡಾಯಗೊಳಿಸಲಿದೆ.
ಇದನ್ನು ಸಹ ಓದಿರಿ: ಹೋಂಡಾ ಎಲೆವೇಟ್ ಪೆಟ್ರೋಲ್ CVT vs ಮಾರುತಿ ಗ್ರಾಂಡ್ ವಿಟಾರ AT: ವಾಸ್ತವಿಕ ಕಾರ್ಯಕ್ಷಮತೆಯ ಹೋಲಿಕೆ
ಭಾರತ್ NCAP ಯಲ್ಲಿ ಮೊದಲಿಗೆ ನೀವು ಯಾವ ಕಾರನ್ನು ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸುವುದನ್ನು ನೋಡಲು ಇಚ್ಛಿಸುತ್ತೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.