• English
    • Login / Register

    2025ರ Lexus LX 500d ಬುಕಿಂಗ್‌ಗಳು ಪ್ರಾರಂಭ; 3.12 ಕೋಟಿ ರೂ.ಗೆ ಹೊಸ ಓವರ್‌ಟ್ರೇಲ್ ವೇರಿಯೆಂಟ್‌ ಬಿಡುಗಡೆ

    ಲೆಕ್ಸಸ್ ಎಲ್‌ಎಕ್ಸ ಗಾಗಿ dipan ಮೂಲಕ ಮಾರ್ಚ್‌ 06, 2025 07:28 pm ರಂದು ಪ್ರಕಟಿಸಲಾಗಿದೆ

    • 25 Views
    • ಕಾಮೆಂಟ್‌ ಅನ್ನು ಬರೆಯಿರಿ

    2025ರ ಲೆಕ್ಸಸ್ LX 500d ಅನ್ನು ಅರ್ಬನ್ ಮತ್ತು ಓವರ್‌ಟ್ರೇಲ್ ಎಂಬ ಎರಡು ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತದೆ, ಇವೆರಡೂ 3.3-ಲೀಟರ್ V6 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ, ಇದು 309 ಪಿಎಸ್‌ ಮತ್ತು 700 ಎನ್‌ಎಮ್ ಔಟ್‌ಪುಟ್‌ಅನ್ನು ಉತ್ಪಾದಿಸುತ್ತದೆ

    Bookings Of The 2025 Lexus LX 500d Have Commenced; Gets A New Overtrail Variant At Rs 3.12 Crore

    • ಹೊಸ ಓವರ್‌ಟ್ರೇಲ್ ವೇರಿಯೆಂಟ್‌ ಹೆಚ್ಚು ಆಫ್-ರೋಡ್ ಕೇಂದ್ರಿತವಾಗಿದ್ದು, ಅರ್ಬನ್ ಟ್ರಿಮ್‌ಗಿಂತ ಸುಮಾರು 12 ಲಕ್ಷ ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೋಂದಿದೆ. 

    • ಎರಡೂ ವೇರಿಯೆಂಟ್‌ಗಳು ಬೃಹತ್ ಗ್ರಿಲ್, 3-ಪಾಡ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್‌ ಟೈಲ್ ಲೈಟ್‌ಗಳನ್ನು ಪಡೆಯುತ್ತವೆ.

    • ಅರ್ಬನ್ ವೇರಿಯೆಂಟ್‌ ಗ್ರಿಲ್‌ನಲ್ಲಿ ಸಿಲ್ವರ್‌ ಅಂಶಗಳನ್ನು ಮತ್ತು ದೊಡ್ಡ 22-ಇಂಚಿನ ಡ್ಯುಯಲ್-ಟೋನ್ ರಿಮ್‌ಗಳನ್ನು ಪಡೆಯುತ್ತದೆ.

    • ಓವರ್‌ಟ್ರೇನ್ ಟ್ರಿಮ್ ಗ್ರಿಲ್‌ನಲ್ಲಿ ಬೂದು ಬಣ್ಣದ ಅಂಶಗಳನ್ನು ಮತ್ತು ಆಲ್-ಟೆರೈನ್ ರಬ್ಬರ್‌ನಲ್ಲಿ ಸುತ್ತುವರಿದ ಸಣ್ಣ 18-ಇಂಚಿನ ಗ್ರೇ ಅಲಾಯ್‌ಗಳನ್ನು ಒಳಗೊಂಡಿದೆ.

    • ಒಳಗೆ, ಇದು ಮೂರು ಸ್ಕ್ರೀನ್‌ಗಳು ಮತ್ತು 4-ಝೋನ್‌ ಎಸಿ ಮತ್ತು 25-ಸ್ಪೀಕರ್ ಸೌಂಡ್‌ ಸಿಸ್ಟಮ್‌ ಅನ್ನು ಒಳಗೊಂಡಿರುವ ಫೀಚರ್‌ ಸೆಟ್‌ಗಳು ಸೇರಿವೆ.

    • ಸುರಕ್ಷತಾ ಸೂಟ್‌ನಲ್ಲಿ 10 ಏರ್‌ಬ್ಯಾಗ್‌ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಟಿಪಿಎಮ್‌ಎಸ್‌ ಮತ್ತು ADAS ಸೇರಿವೆ.

    • ಬೆಲೆಗಳು 3 ಕೋಟಿ ರೂ.ಗಳಿಂದ 3.12 ಕೋಟಿ ರೂ.ಗಳವರೆಗೆ(ಎಕ್ಸ್ ಶೋರೂಂ) ಇರುತ್ತವೆ.

    ಲೆಕ್ಸಸ್ ತನ್ನ ಬೆಲೆಬಾಳುವ ಎಸ್‌ಯುವಿಯಾದ 2025 LX 500d ಗಾಗಿ ಆರ್ಡರ್ ಪುಸ್ತಕಗಳನ್ನು ತೆರೆದಿದೆ, ಇದನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಪ್ರದರ್ಶಿಸಿದ ನಂತರ 2025ಕ್ಕೆ ಆಪ್‌ಡೇಟ್‌ ಮಾಡಲಾಗಿದೆ. ಗಮನಾರ್ಹವಾಗಿ, ಜಪಾನಿನ ಕಾರು ತಯಾರಕರು ಫೆಬ್ರವರಿ ಮಧ್ಯದಲ್ಲಿ ಪ್ರೀಮಿಯಂ ಎಸ್‌ಯುವಿಯ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು, ಈಗ ಅದನ್ನು ಮತ್ತೆ ತೆರೆಯಲಾಗಿದೆ. 2025 ಲೆಕ್ಸಸ್ LX 500d ಈಗ ಈ ಹಿಂದೆ ಲಭ್ಯವಿರುವ ಅರ್ಬನ್ ವೇರಿಯೆಂಟ್‌ನ ಜೊತೆಗೆ ಹೊಸ ಆಫ್-ರೋಡ್-ಕೇಂದ್ರಿತ ವೇರಿಯೆಂಟ್‌ನೊಂದಿಗೆ ಬರುತ್ತದೆ. ವಿವರವಾದ ಬೆಲೆಗಳು ಈ ಕೆಳಗಿನಂತಿವೆ:

    ವೇರಿಯೆಂಟ್‌

    ಬೆಲೆ

    ಎಲ್‌ಎಕ್ಸ್‌ 500ಡಿ ಅರ್ಬನ್

    3 ಕೋಟಿ ರೂ.

    ಎಲ್‌ಎಕ್ಸ್‌ 500ಡಿ ಓವರ್‌ಟ್ರೇಲ್ (ಹೊಸದು)

      3.12 ಕೋಟಿ ರೂ.

    ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ

    ಆಪ್‌ಡೇಟ್‌ನೊಂದಿಗೆ ಅರ್ಬನ್‌ ವೇರಿಯೆಂಟ್‌ನ ಬೆಲೆಯಲ್ಲಿ 12 ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ.

    ಎಕ್ಸ್‌ಟೀರಿಯರ್‌

    Bookings Of The 2025 Lexus LX 500d Have Commenced; Gets A New Overtrail Variant At Rs 3.12 Crore

    ಹೆಸರೇ ಸೂಚಿಸುವಂತೆ, ಅರ್ಬನ್ ಹೆಚ್ಚು ನಗರ-ಕೇಂದ್ರಿತ ವಿನ್ಯಾಸವನ್ನು ಹೊಂದಿದೆ, ಸಿಲ್ವರ್‌ ಅಂಶಗಳೊಂದಿಗೆ ಬೃಹತ್ ಗ್ರಿಲ್ ಅನ್ನು ಹೊಂದಿದ್ದು, ಅದು ಈ ಎಸ್‌ಯುವಿಗೆ ಆಕ್ರಮಣಕಾರಿ ನೋಟವನ್ನು ನೀಡುತ್ತದೆ. ಇದು ಬಂಪರ್‌ನ ಕೆಳಗಿನ ಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳೊಂದಿಗೆ ನಯವಾದ ಅಡ್ಡಲಾಗಿ ಜೋಡಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಸೈಡ್‌ನಿಂದ ಗಮನಿಸುವಾಗ, ಇದು 22-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಬಾಗಿಲುಗಳ ಮೇಲೆ ಕ್ರೋಮ್ ಪಟ್ಟಿಯನ್ನು ಪಡೆಯುತ್ತದೆ. ಹಿಂಭಾಗದಲ್ಲಿ, ಇದು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್ ಸೆಟಪ್, ರೂಫ್-ಮೌಂಟೆಡ್ ಸ್ಪಾಯ್ಲರ್, ಹಿಂಭಾಗದ ವೈಪರ್, ಟೈಲ್‌ಗೇಟ್‌ನಲ್ಲಿ ಲೆಕ್ಸಸ್ ಬ್ಯಾಡ್ಜಿಂಗ್ ಮತ್ತು ಹಿಂಭಾಗಕ್ಕೆ ಹೆಚ್ಚುವರಿ ವ್ಯತಿರಿಕ್ತತೆಯನ್ನು ಒದಗಿಸುವ ಸಂಪೂರ್ಣ ಕಪ್ಪಾದ ಹಿಂಭಾಗದ ಬಂಪರ್ ಅನ್ನು ಹೊಂದಿದೆ. ಎಕ್ಸ್‌ಟೀರಿಯರ್‌ ಬಣ್ಣಗಳ ಆಯ್ಕೆಗಳಲ್ಲಿ ಸೋನಿಕ್ ಕ್ವಾರ್ಟ್ಜ್, ಸೋನಿಕ್ ಟೈಟಾನಿಯಂ ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ಸೇರಿವೆ.

    Lexus LX 500d

    ಮತ್ತೊಂದೆಡೆ, ಓವರ್‌ಟ್ರೇಲ್ ವೇರಿಯೆಂಟ್‌ ಹೆಚ್ಚು ಆಫ್-ರೋಡ್ ಕೇಂದ್ರಿತವಾಗಿದೆ, ಮತ್ತು ಇದು ಇದೇ ರೀತಿಯ ಗ್ರಿಲ್ ವಿನ್ಯಾಸವನ್ನು ಹೊಂದಿದೆ, ಆದರೆ ಇದು ಬೂದು ಬಣ್ಣದ ಥೀಮ್ ಅನ್ನು ಹೊಂದಿದೆ ಮತ್ತು ಇದು ಮುಂಭಾಗದಲ್ಲಿ ಸಿಲ್ವರ್‌ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ. ಆದರೆ, ಪ್ರಮುಖ ವ್ಯತ್ಯಾಸವೆಂದರೆ, ಇದು ಗ್ರೇ ಬಣ್ಣದಲ್ಲಿ ಫಿನಿಶ್‌ ಮಾಡಿದ ಚಿಕ್ಕದಾದ 18-ಇಂಚಿನ ಅಲಾಯ್‌ಗಳನ್ನು ಪಡೆಯುತ್ತದೆ ಮತ್ತು ವೇರಿಯೆಂಟ್‌ಗೆ ಎಕ್ಸ್‌ಕ್ಲೂಸಿವ್‌ ಆಗಿ ಆಲ್-ಟೆರೈನ್ ಟೈರ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಡಿಫರೆನ್ಷಿಯಲ್ ಲಾಕ್‌ಗಳನ್ನು ಹೊಂದಿದೆ. ಹಿಂಭಾಗದ ವಿನ್ಯಾಸವು ಅರ್ಬನ್ ವೇರಿಯೆಂಟ್‌ನಂತೆಯೇ ಇದೆ. ಇದು ಮೂನ್ ಡೆಸರ್ಟ್ ಬಣ್ಣದ ಆಯ್ಕೆಗಳಲ್ಲಿ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿದೆ.

    ಇಂಟೀರಿಯರ್‌

    Lexus LX 500d interior

    ಒಳಭಾಗದಲ್ಲಿ, ಲೆಕ್ಸಸ್ LX 500d ಡ್ಯುಯಲ್-ಟೋನ್ ಥೀಮ್‌ನೊಂದಿಗೆ ಬರುತ್ತದೆ, ಇವುಗಳಲ್ಲಿ ಅರ್ಬನ್ ವೇರಿಯೆಂಟ್‌ಗೆ ಕಂದು ಮತ್ತು ಮರೂನ್ ಬಣ್ಣಗಳು ಮತ್ತು ಓವರ್‌ಟ್ರೇಲ್ ವೇರಿಯೆಂಟ್‌ಗೆ ಎಕ್ಸ್‌ಕ್ಲೂಸಿವ್‌ ಆದ ಡಾರ್ಕ್‌ ಗ್ರೀನ್‌ ಆಯ್ಕೆ ಸೇರಿವೆ. ಹಾಗೆಯೇ, ಡ್ಯಾಶ್‌ಬೋರ್ಡ್ ವಿನ್ಯಾಸವು LX 500dಯಂತೆಯೇ ಇದೆ, ಮತ್ತು ಇದು ಮೂರು-ಸ್ಪೋಕ್ ಕಪ್ಪು ಸ್ಟೀರಿಂಗ್ ವೀಲ್, ಸ್ವತಂತ್ರವಾಗಿ ನಿಂತಿರುವ ಟಚ್‌ಸ್ಕ್ರೀನ್ ಮತ್ತು ಎಸ್‌ಯುವಿಯ ಇತರ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಅದರ ಕೆಳಗೆ ಮತ್ತೊಂದು ಸ್ಕ್ರೀನ್‌ ಅನ್ನು ಹೊಂದಿದೆ. ಸ್ಕ್ರೀನ್‌ಗಳ ಕೆಳಗೆ AC ಕಂಟ್ರೋಲ್‌ಗಳು ಮತ್ತು ಚಾರ್ಜಿಂಗ್ ಸಾಕೆಟ್‌ಗಳಿಗೆ ಬಟನ್‌ಗಳಿವೆ. ಈ ಪ್ಯಾನಲ್‌ ಗೇರ್ ಸೆಲೆಕ್ಟರ್ ಸಿಸ್ಟಮ್‌, ಎರಡು ಕಪ್‌ಹೋಲ್ಡರ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್ ಅನ್ನು ಒಳಗೊಂಡಿರುವ ಸೆಂಟರ್ ಕನ್ಸೋಲ್‌ನೊಂದಿಗೆ ವಿಲೀನಗೊಳ್ಳುತ್ತದೆ. ಸೆಂಟ್ರಲ್‌ ಕನ್ಸೋಲ್ ಸೆಂಟರ್‌ ಆರ್ಮ್‌ರೆಸ್ಟ್ ಅನ್ನು ರೂಪಿಸಲು ವಿಸ್ತರಿಸುತ್ತದೆ, ಅದರ ಕೆಳಗೆ ಸ್ಟೋರೇಜ್‌ ಸ್ಥಳವಿದೆ.

    ಇದನ್ನೂ ಓದಿ: ಭಾರತದಲ್ಲಿ 2025ರ Volvo XC90 ಬಿಡುಗಡೆ, ಬೆಲೆ 1.03 ಕೋಟಿ ರೂ. ನಿಗದಿ

    ಫೀಚರ್‌ ಮತ್ತು ಸುರಕ್ಷತೆ

    Lexus LX 500d interior

    ಫೀಚರ್‌ಗಳ ವಿಷಯದಲ್ಲಿ, ಲೆಕ್ಸಸ್ LX 500d 8-ಇಂಚಿನ ಡ್ರೈವರ್ ಡಿಸ್‌ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು ವಾಹನದ ಇತರ ಫಂಕ್ಷನ್‌ಗಳನ್ನು ನಿಯಂತ್ರಿಸಲು ಮತ್ತೊಂದು 7-ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು 4-ಝೋನ್‌ ಆಟೋ ಎಸಿ, ಹೆಡ್ಸ್-ಅಪ್ ಡಿಸ್‌ಪ್ಲೇ (HUD), ಹಿಂದಿನ ಸೀಟಿನ ಪ್ರಯಾಣಿಕರಿಗೆ 11.6-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, 25-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಹೀಟಿಂಗ್‌ ಮತ್ತು ಮಸಾಜ್ ಫಂಕ್ಷನ್‌ಗಳೊಂದಿಗೆ ಮುಂಭಾಗದ ಚಾಲಿತ ಸೀಟುಗಳನ್ನು ಸಹ ಹೊಂದಿದೆ.

    ಇದರ ಸುರಕ್ಷತಾ ಸೂಟ್‌ನಲ್ಲಿ 10 ಏರ್‌ಬ್ಯಾಗ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್ (HAC), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳು ಸೇರಿವೆ. ಇದು ರಾಡಾರ್ ಆಧಾರಿತ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಮೆರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಕೆಲವು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳ (ADAS) ಫೀಚರ್‌ಗಳನ್ನು ಸಹ ಪಡೆಯುತ್ತದೆ.

    ಪವರ್‌ಟ್ರೇನ್ ಆಯ್ಕೆಗಳು

    Lexus LX 500d

    ಲೆಕ್ಸಸ್ LX 500d ಎರಡೂ ವೇರಿಯೆಂಟ್‌ಗಳಲ್ಲಿ 3.3-ಲೀಟರ್ ಡೀಸೆಲ್ V6 ಎಂಜಿನ್‌ನೊಂದಿಗೆ ಬರುತ್ತದೆ, ಇವುಗಳ ವಿಶೇಷಣಗಳು ಈ ಕೆಳಗಿನಂತಿವೆ:

    ಎಂಜಿನ್‌

    3.3 ಲೀಟರ್ ಡೀಸೆಲ್ V6 ಎಂಜಿನ್

    ಪವರ್‌

    309 ಪಿಎಸ್‌

    ಟಾರ್ಕ್‌

    700 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    10-ಸ್ಪೀಡ್‌ ಆಟೋಮ್ಯಾಟಿಕ್‌

    ಡ್ರೈವ್‌ಟ್ರೈನ್‌

    4-ವೀಲ್‌ ಡ್ರೈವ್‌

    ಪ್ರತಿಸ್ಪರ್ಧಿಗಳು

    Lexus LX 500d

    ಲೆಕ್ಸಸ್ LX 500d, ರೇಂಜ್ ರೋವರ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ 300 ಗಳಿಗೆ ಪೈಪೋಟಿ ನೀಡುತ್ತದೆ.

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on Lexus ಎಲ್‌ಎಕ್ಸ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience