BYD Seal; ಈ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಸುಮಾರು 200ರಷ್ಟು ಸ್ವೀಕಾರ
ಮೂರು ವಿಭಿನ್ನವಾದ ವೇರಿಯಂಟ್ ಗಳಲ್ಲಿ ಬರುವ ಸೀಲ್ ಎಲೆಕ್ಟ್ರಿಕ್ ಸೆಡಾನ್, 650 ಕಿಮೀಗಳ ಕ್ಲೇಮ್ ಮಾಡಿರುವ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ.
- BYD ತನ್ನ ಸೀಲ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಮೂರು ವೇರಿಯಂಟ್ ಗಳಲ್ಲಿ ನೀಡುತ್ತದೆ: ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್.
- ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ - 61.44 kWh ಮತ್ತು 82.56 kWh.
- ಸೀಲ್ ರಿಯರ್-ವೀಲ್-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಈ ಎರಡೂ ಆಯ್ಕೆಗಳನ್ನು ಕೂಡ ಪಡೆಯುತ್ತದೆ.
- ಇದು 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟ್ ಗಳಂತಹ ಫೀಚರ್ ಗಳನ್ನು ಪಡೆಯುತ್ತದೆ.
- ಇದು 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್ ಗಳ ಸಂಪೂರ್ಣ ಸೂಟ್ (ADAS) ಅನ್ನು ಪಡೆಯುತ್ತದೆ.
BYD ಸೀಲ್, e6 MPV ಮತ್ತು ಆಟ್ಟೋ 3 SUV ನಂತರ ಭಾರತದಲ್ಲಿ ಚೀನೀ EV ತಯಾರಕರ ಮೂರನೇ ಕೊಡುಗೆಯಾಗಿದೆ. ಈಗ, ಈ ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್ ನ ಬುಕಿಂಗ್ ಅನ್ನು ಫೆಬ್ರವರಿ 2024 ರ ಕೊನೆಯಲ್ಲಿ ಪ್ರಾರಂಭ ಮಾಡಿದ ದಿನದಿಂದ ಇಲ್ಲಿಯವರೆಗೆ 200 ಬುಕಿಂಗ್‌ಗಳನ್ನು ಸ್ವೀಕರಿಸಲಾಗಿದೆ ಎಂದು BYD ತಿಳಿಸಿದೆ.
ಭಾರತದಲ್ಲಿನ ಗ್ರಾಹಕರ ಪ್ರತಿಕ್ರಿಯೆಯ ಕುರಿತು ಮಾತನಾಡಿದ ಸಂಜಯ್ ಗೋಪಾಲಕೃಷ್ಣನ್, ಸೀನಿಯರ್ ವೈಸ್ ಪ್ರೆಸಿಡೆಂಟ್, ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ BYD ಇಂಡಿಯಾ: ““ಭಾರತದ ಗ್ರಾಹಕರಿಂದ ನಮಗೆ ಅದ್ಭುತವಾದ ಪ್ರತಿಕ್ರಿಯೆ ದೊರೆತಿದೆ. ಇದು ಭಾರತದಲ್ಲಿ ಐಷಾರಾಮಿ ಮತ್ತು ಹೆಚ್ಚಿನ ಪರ್ಫಾರ್ಮೆನ್ಸ್ ನೀಡುವ ಎಲೆಕ್ಟ್ರಿಕ್ ವಾಹನಗಳ ಬೆಳೆಯುತ್ತಿರುವ ಬೇಡಿಕೆಯನ್ನು ತೋರಿಸುತ್ತದೆ. ಎಲೆಕ್ಟ್ರಿಕ್ ಮೊಬಿಲಿಟಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಮತ್ತು BYD ಸೀಲ್‌ನಲ್ಲಿ ಇರುವ ನವೀನ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ನಮ್ಮ ಗ್ರಾಹಕರಿಗೆ ಅಪ್ರತಿಮ ಡ್ರೈವಿಂಗ್ ಅನುಭವವನ್ನು ಒದಗಿಸುತ್ತೇವೆ. ಇಂದು ನಾವು ಭಾರತದಲ್ಲಿರುವ ನಮ್ಮ ಪೋರ್ಟ್‌ಫೋಲಿಯೊದ ವಿವಿಧ MPV, SUV ಮತ್ತು ಸೆಡಾನ್‌ಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ಒದಗಿಸುವ ಗುರಿಯನ್ನು ಹೊಂದಿದ್ದೇವೆ."
BYD ಸೀಲ್ ಕುರಿತು ಇನ್ನಷ್ಟು ವಿವರಗಳು
BYD ಸೀಲ್ ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಅವುಗಳ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ವಿವರಿಸಲಾಗಿದೆ:
ವಿಶೇಷಣಗಳು |
ಡೈನಾಮಿಕ್ ರೇಂಜ್ |
ಪ್ರೀಮಿಯಂ ರೇಂಜ್ |
ಪರ್ಫಾರ್ಮೆನ್ಸ್ |
ಬ್ಯಾಟರಿ ಪ್ಯಾಕ್ |
61.44 kWh |
82.56 kWh |
82.56 kWh |
ಡ್ರೈವ್ ಪ್ರಕಾರ |
RWD |
RWD |
AWD |
ಪವರ್ |
204 PS |
313 PS |
530 PS |
ಟಾರ್ಕ್ |
310 Nm |
360 Nm |
670 Nm |
ಕ್ಲೇಮ್ ಮಾಡಿರುವ ರೇಂಜ್ |
510 ಕಿ.ಮೀ |
650 ಕಿ.ಮೀ |
580 ಕಿ.ಮೀ |
ಇದನ್ನು ಕೂಡ ಓದಿ: BYD ಸೀಲ್ ವರ್ಸಸ್ ಹುಂಡೈ ಐಯೋನಿಕ್ 5, ಕಿಯಾ EV6, ವೋಲ್ವೋ XC40 ರೀಚಾರ್ಜ್, ಮತ್ತು BMW i4: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ
ಚಾರ್ಜಿಂಗ್ ಆಯ್ಕೆಗಳು
ಕೆಳಗೆ ನೀಡಿದ ಮೂರು ಚಾರ್ಜಿಂಗ್ ಆಯ್ಕೆಗಳನ್ನು ಬಳಸಿಕೊಂಡು ನೀವು BYD ಸೀಲ್ ಅನ್ನು ಚಾರ್ಜ್ ಮಾಡಬಹುದು:
ವೇರಿಯಂಟ್ ಗಳು |
ಡೈನಾಮಿಕ್ ರೇಂಜ್ |
ಪ್ರೀಮಿಯಂ ರೇಂಜ್ |
ಪರ್ಫಾರ್ಮೆನ್ಸ್ |
ಬ್ಯಾಟರಿ ಪ್ಯಾಕ್ |
61.44 kWh |
82.56 kWh |
82.56 kWh |
7 kW AC ಚಾರ್ಜರ್ |
✅ |
✅ |
✅ |
110 kW DC ಫಾಸ್ಟ್ ಚಾರ್ಜರ್ |
✅ |
❌ |
❌ |
150 kW DC ಫಾಸ್ಟ್ ಚಾರ್ಜರ್ |
❌ |
✅ |
✅ |
ಫೀಚರ್ ಗಳು ಮತ್ತು ಸುರಕ್ಷತೆ
BYD ಸೀಲ್ ತಿರುಗುವ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟ್‌ಗಳಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದು ಮೆಮೊರಿ ಫಂಕ್ಷನ್ ನೊಂದಿಗೆ 8-ವೇ ಚಾಲಿತ ಡ್ರೈವರ್ ಸೀಟ್, ಡೈನಾಡಿಯೊ ಸೌಂಡ್ 12-ಸ್ಪೀಕರ್ ಸೌಂಡ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಗ್ಲಾಸ್ ರೂಫ್ ಅನ್ನು ಕೂಡ ಪಡೆಯುತ್ತದೆ.
ಸುರಕ್ಷತಾ ಫೀಚರ್ ಗಳಲ್ಲಿ 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್ ಗಳ (ADAS) ಸಂಪೂರ್ಣ ಸೂಟ್ ಸೇರಿವೆ.
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
BYD ಸೀಲ್ ಬೆಲೆಯು 41 ಲಕ್ಷ ಮತ್ತು 53 ಲಕ್ಷಗಳ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ನಡುವೆ ಇದೆ. ಇದು ಹ್ಯುಂಡೈ ಐಯೋನಿಕ್ 5 ಮತ್ತು ಕಿಯಾ EV6 ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಇದನ್ನು ವೋಲ್ವೋ XC40 ರೀಚಾರ್ಜ್ ಮತ್ತು BMW i4 ಗೆ ಪರ್ಯಾಯ ಆಯ್ಕೆಯಾಗಿ ಕೂಡ ಪರಿಗಣಿಸಬಹುದು.
ಇನ್ನಷ್ಟು ಓದಿ: ಸೀಲ್ ಆಟೋಮ್ಯಾಟಿಕ್