ಯುರೋ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5 ಸ್ಟಾರ್ ಗಳಿಸಿದ BYD ಸೀಲ್ ಇಲೆಕ್ಟ್ರಿಕ್ ಸೆಡಾನ್
ಬಿವೈಡಿ ಸೀಲ್ ಗಾಗಿ rohit ಮೂಲಕ ಅಕ್ಟೋಬರ್ 27, 2023 10:25 am ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
BYD ಸೀಲ್ ಪ್ರೀಮಿಯಂ ಮತ್ತು ಸ್ಪೋರ್ಟಿ ಆಫರಿಂಗ್ ಆಗಿ ಭಾರತಕ್ಕೆ ಆಗಮಿಸುವುದನ್ನು ಈ ಹಿಂದೆ ದೃಢಪಡಿಸಲಾಗಿತ್ತು.
- ವಯಸ್ಕ ಪ್ರಯಾಣಿಕರ ರಕ್ಷಣೆಗೆ ಸೀಲ್ 35.8/40 ಪಾಯಿಂಟ್‌ಗಳನ್ನು ಪಡೆದಿದೆ.
- ಪ್ರಯಾಣಿಕ ಮಗುವಿನ ರಕ್ಷಣೆಗೆ ಇದು 43/49 ಪಾಯಿಂಟ್ ಗಳಿಸಿದೆ.
- ಯೂರೋ NCAP BYD ಡಾಲ್ಫಿನ್ ಎಂಬ ಇನ್ನೊಂದು EV ಅನ್ನು ಪರೀಕ್ಷಿಸಿದ್ದು, ಇದು ಕೂಡಾ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ.
- ಭಾರತದಲ್ಲಿ BYD ಸೀಲ್ EV ಬಿಡುಗಡೆಯನ್ನು 2023ರ ಅಂತ್ಯದಲ್ಲಿ ನಿರೀಕ್ಷಿಸಲಾಗಿದೆ; ಇದರ ಬೆಲೆ ಸುಮಾರು ರೂ 60 ಲಕ್ಷ ಆಗಿರಬಹುದು.
ಆಟೋ ಎಕ್ಸ್‌ಪೋ 2023ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಈ BYD ಸೀಲ್ ಇಲೆಕ್ಟ್ರಿಕ್ ಸೆಡಾನ್‌ನ ಕ್ರ್ಯಾಶ್ ಟೆಸ್ಟ್ ಅನ್ನು ಯೂರೋ NCAP ಈಗಷ್ಟೆ ಪರೀಕ್ಷಿಸಿದೆ. ಇದು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ವಯಸ್ಕ ಪ್ರಯಾಣಿಕ ಮತ್ತು ಪ್ರಯಾಣಿಕ ಮಗುವಿನ ರಕ್ಷಣೆಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ.
ವಯಸ್ಕ ಪ್ರಯಾಣಿಕರ ರಕ್ಷಣೆ- 35.8/40 Pts (89 ಪ್ರತಿಶತ)
ಯೂರೋ NCAP ಪ್ರೋಟೋಕಾಲ್‌ಗಳ ಪ್ರಕಾರ, ಸೀಲ್ EV ಅನ್ನು 3 ಇಂಪ್ಯಾಕ್ಟ್ ಟೆಸ್ಟ್‌ಗಳು (ಮುಂಭಾಗ, ಪಾರ್ಶ್ವ ಮತ್ತು ಹಿಂಭಾಗ), ಮತ್ತು ರಕ್ಷಣೆ ಹಾಗೂ ಪಾರಾಗುವಿಕೆ ಸೇರಿದಂತೆ 4 ಮಾನದಂಡಗಳ ಮೇಲೆ ರೇಟ್ ಮಾಡಲಾಗಿದೆ. ಹೆಚ್ಚಿನ ಪರೀಕ್ಷೆಗಳಲ್ಲಿ, ಈ ಇಲೆಕ್ಟ್ರಿಕ್ ಸೆಡಾನ್ ಮುಂಭಾಗದ ಪ್ರಯಾಣಿಕರ ತಲೆಗಳಿಗೆ ‘ಉತ್ತಮ’ ರಕ್ಷಣೆಯನ್ನು ನೀಡಿದೆ ಹಾಗೂ ಸಹ-ಚಾಲಕನ ಎದೆ ಮತ್ತು ತೊಡೆಯೆಲುಬಿಗೆ ‘ಸಾಕಷ್ಟು’ ರಕ್ಷಣೆ ನೀಡಿದೆ. ಪ್ರಯಾಣಿಕರ ವಿಭಾಗವನ್ನು ‘ಸ್ಥಿರ’ಎಂದು ರೇಟ್ ಮಾಡಲಾಗಿದೆ.
ಸೈಡ್ ಮತ್ತು ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್‌ಗಳಲ್ಲಿ ದೇಹದ ಎಲ್ಲಾ ನಿರ್ಣಾಯಕ ಭಾಗಗಳಿಗೆ ಒದಗಿಸಲಾದ ರಕ್ಷಣೆಯು ‘ಉತ್ತಮ’ವಾಗಿತ್ತು. ರಿಯರ್ ಇಂಪ್ಯಾಕ್ಟ್‌ನಲ್ಲೂ ಕತ್ತಿನ ಉಳುಕುವಿಕೆ ತಡೆಯುವಲ್ಲಿ ಸೀಲ್ ‘ಉತ್ತಮ’ ರಕ್ಷಣೆ ನೀಡಿದೆ ಎಂದು ಹೇಳಲಾಗಿದೆ.
ರಕ್ಷಣೆ ಮತ್ತು ಪಾರಾಗುವಿಕೆಯ ಮಾನದಂಡದ ಅಡಿಯಲ್ಲಿ, ಸರಕ್ಷತಾ ಅಧಿಕಾರಿಗಳು ರೆಸ್ಕ್ಯೂ ಶೀಟ್ ಲಭ್ಯತೆ, ಎಮರ್ಜೆನ್ಸಿ ಕಾಲಿಂಗ್ ಸಿಸ್ಟಮ್, ಮಲ್ಟಿ ಕೊಲಿಶನ್ ಬ್ರೇಕ್ ಮತ್ತು ಸಬ್ಎಮರ್ಜೆನ್ಸ್ ಚೆಕ್‌ನ ಆಧಾರದ ಮೇಲೆ ಕಾರನ್ನು ಪರಿಶೀಲಿಸಿ ಪ್ರಶಸ್ತಿ ನೀಡುತ್ತದೆ. BYD ಸೀಲ್ ಇ-ಕಾಲಿಂಗ್ ಸಿಸ್ಟಮ್ ಅನ್ನು ಹೊಂದಿದ್ದು ಇದು ಅಪಘಾತದ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಅಲರ್ಟ್ ನೀಡುತ್ತದೆ. ಅಲ್ಲದೇ ಈ ಕಾರು ಮರು ಅಪಘಾತದ ಸಾಧ್ಯತೆಗಳನ್ನು ತಡೆಗಟ್ಟಲು ಬ್ರೇಕ್ ಹಾಕುವ ವ್ಯವಸ್ಥೆಯನ್ನೂ ಒಳಗೊಂಡಿದೆ. ಆದಾಗ್ಯೂ, ಸೀಲ್‌ನ ಡೋರ್‌ಗಳು ಲಾಕ್ ಆಗಿದ್ದರೆ, ನೀರು ಪ್ರವೇಶಿಸಿ ವಿದ್ಯುತ್ ಕಡಿತಗೊಂಡ ಎರಡು ನಿಮಿಷಗಳಲ್ಲಿ ತೆರೆಯಬಹುದಾಗಿದೆ, ಆದರೆ ವಿಂಡೋಗಳ ಕಾರ್ಯನಿರ್ವಹಣೆಯ ಅವಧಿ ಇನ್ನೂ ಸ್ಪಷ್ಟವಾಗಿಲ್ಲ.
FYI- ಈ ಕಾರು ತಯಾರಕರು ಮಾರುಕಟ್ಟೆಯಲ್ಲಿರುವ ಪ್ರತಿ ಕಾರುಗಳಿಗೆ ರೆಸ್ಕ್ಯೂ ಶೀಟ್ ಅನ್ನು ಅಭಿವೃದ್ದಿಪಡಿಸಿ ಹಂಚಿದ್ದು, ಇದು ಏರ್‌ಬ್ಯಾಗ್‌ನ ಸ್ಥಳ, ಪ್ರಿ-ಟೆನ್ಶನರ್‌ಗಳು, ಬ್ಯಾಟರಿಗಳು ಮತ್ತು ಹೈ-ವೋಲ್ಟೇಜ್ ಕೇಬಲ್‌ಗಳಂತಹ ಸಂಭಾವ್ಯ ಅಪಾಯಗಳನ್ನು ಮಾತ್ರವಲ್ಲದೇ ರಚನೆಯನ್ನು ಒಡೆದು ತೆಗೆಯಲು ಅತ್ಯಂತ ಸುರಕ್ಷಿತ ಸ್ಥಳಗಳನ್ನೂ ಗುರುತಿಸಲು ನೆರವಾಗುತ್ತದೆ
ಇದನ್ನೂ ಓದಿ: ಅನಾವರಣಗೊಂಡ ಸುಜುಕಿ eVX ಎಲೆಕ್ಟ್ರಿಕ್ SUV; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ
ಪ್ರಯಾಣಿಕ ಮಗುವಿನ ರಕ್ಷಣೆ- 43/49 Pts (87 ಪ್ರತಿಶತ)
ಫ್ರಂಟಲ್ ಆಫ್‌ಸೆಟ್ ಮತ್ತು ಸೈಡ್ ಬ್ಯಾರಿಯರ್ ಇಂಪ್ಯಾಕ್ಟ್ ಟೆಸ್ಟ್‌ಗಳಲ್ಲಿ 6- ಮತ್ತು 10-ವರ್ಷ ವಯಸ್ಸಿನ ಕೃತಕ ಮಕ್ಕಳ ದೇಹದ ಎಲ್ಲಾ ನಿರ್ಣಾಯಕ ಭಾಗಗಳಿಗೆ ‘ಉತ್ತಮ’ ರಕ್ಷಣೆ ನೀಡುವ ಮೂಲಕ ಸೀಲ್ EV ಪೂರ್ಣ ಅಂಕಗಳನ್ನು ಪಡೆದುಕೊಂಡಿದೆ. ಹಿಂಭಾಗದ ಮಧ್ಯಮ ಸೀಟ್‌ನಲ್ಲಿ ISOFIX ಆ್ಯಂಕರೇಜ್ ಇಲ್ಲದಿರುವುದು ಇದರ ಏಕೈಕ ತಾಂತ್ರಿಕ ಕೊರತೆಯಾಗಿದೆ. ಅಲ್ಲದೇ ಇದು ಇಂಟೆಗ್ರೇಟಡ್ ಚೈಲ್ಡ್-ಸೀಟ್ ರಿಸ್ಟ್ರೈಂಟ್ ಸಿಸ್ಟಮ್ ಅನ್ನು ಹೊಂದಿರುವುದಿಲ್ಲ.
ವಲ್ನರೇಬಲ್ ರೋಡ್ ಯೂಸರ್ಸ್ (VRU) - 51.7/63 Pts (82 ಪ್ರತಿಶತ)
ಟೆಸ್ಟ್‌ನ VRU ಭಾಗವು ಅಪಘಾತದ ಸಂದರ್ಭದಲ್ಲಿ ಕಾರಿನ ಮೇಲೆ ಅಥವಾ ಅಡಿಯಲ್ಲಿ ಬಿದ್ದವರು ಎಷ್ಟು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ಪರಿಶೀಲಿಸುತ್ತದೆ. ಸೀಲ್ EVಯ ಬೋನೆಟ್ ಪಾದಾಚಾರಿಗಳಿಗೆ ‘ಸಾಕಷ್ಟು’ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಮುಂಭಾಗದ ಬಂಪರ್ ಅವರ ಕಾಲುಗಳನ್ನು ನುಜ್ಜುಗುಜ್ಜಾಗಿಸುವ ಸಾಧ್ಯತೆ ಇರುವುದಿಲ್ಲ, ಆದರೂ, ಸೊಂಟ, ತೊಡೆಯೆಲುಬು, ಮೊಣಕಾಲು ಮತ್ತು ಮಂಡಿ ಭಾಗಗಳಿಗೆ ರಕ್ಷಣೆಯು ‘ಉತ್ತಮ’ ಎಂದು ರೇಟ್ ಮಾಡಲಾಗಿದೆ. ಅದೃಷ್ಟವಶಾತ್, ಇದರ ಆಟೋನಾಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB) ಪಾದಾಚಾರಿಗಳು ಮತ್ತು ಸೈಕಲ್ ಸವಾರರನ್ನು ಗುರುತಿಸಿ ಹೆಚ್ಚಿನ ಸಂದರ್ಭಗಳಲ್ಲಿ ಅಪಘಾತವನ್ನು ತಡೆಗಟ್ಟುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು
ಸುರಕ್ಷತಾ ಸಹಾಯಕಗಳು - 13.8/18 Pts (76 ಪ್ರತಿಶತ)
BYD ಯ ಇಲೆಕ್ಟ್ರಿಕ್ ಸೆಡಾನ್ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಪಡೆದಿದ್ದು, ಇವುಗಳಲ್ಲಿ ಹೆಚ್ಚಿನದನ್ನು ಭಾರತ-ಸ್ಪೆಕ್ ಮಾಡೆಲ್‌ನಲ್ಲಿಯೂ ನೀಡಲಾಗುತ್ತದೆ. ಯೂರೋ NCAP ಟೆಸ್ಟ್‌ಗಳ ಪ್ರಕಾರ, ಇದರ ಆಟೊನಾಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB) ಸಿಸ್ಟಮ್, ಅಂತೆಯೇ ಲೇನ್ ಸಪೋರ್ಟ್ ಮತ್ತು ಸ್ಪೀಡ್ ಡಿಟೆಕ್ಷನ್ ಸಿಸ್ಟಮ್‌ಗಳೂ ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. ಆದಾಗ್ಯೂ, ಇದರ ಡ್ರೈವರ್ ಸ್ಟೇಟಸ್ ಮಾನಿಟರಿಂಗ್ ಸಿಸ್ಟಮ್ ಕೇವಲ ಡ್ರೈವರ್ ತೂಕಡಿಸುವುದನ್ನು ಮಾತ್ರ ಗುರುತಿಸಿದ್ದು, ಈ ವಿಭಾಗದಲ್ಲಿ ಇದರ ಒಟ್ಟಾರೆ ಸ್ಕೋರ್ ಅನ್ನು ಕಡಿಮೆಗೊಳಿಸಿದೆ.
ಸೀಲ್ ಅನ್ನು ಮಾತ್ರವೇ ಪರೀಕ್ಷೆಗೆ ಒಳಪಡಿಸಿದ್ದಲ್ಲ
ಚೀನಾದ ಈ EV ತಯಾರಕರ ಇನ್ನೊಂದು ಇಲೆಕ್ಟ್ರಿಕ್ ಕಾರು, BYD ಡಾಲ್ಫಿನ್ ಕೂಡಾ ಇದೇ ಸುರಕ್ಷತಾ ರೇಟಿಂಗ್ ಪಡೆದಿದ್ದು, ವಯಸ್ಕ ಪ್ರಯಾಣಿಕ ಮತ್ತು ಪ್ರಯಾಣಿಕ ಮಗುವಿನ ಸುರಕ್ಷತೆಯಲ್ಲಿ ಸೀಲ್ EVಯಂತೆಯೇ ರೇಟಿಂಗ್ ಪಡೆದಿದೆ. ಅಲ್ಲದೇ ಅನೇಕ ಜಾಗತಿಕ ಮಾರುಕಟ್ಟೆಯಲ್ಲಿ ಇದು ಹೊಸ ಆಫರಿಂಗ್ ಆಗಿದ್ದು, ಯಾವುದೇ ಸಮಯದಲ್ಲಿ ಭಾರತಕ್ಕೆ ಬರಬಹುದಾಗಿದೆ.
ಸೀಲ್ EV ಬಗ್ಗೆ ಇನ್ನಷ್ಟು ವಿವರಗಳು
ಜಾಗತಿಕ-ಸ್ಪೆಕ್ BYD ಸೀಲ್ EV, 82.5kWh ಮತ್ತು 61.4kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ಸಜ್ಜುಗೊಂಡಿದ್ದು, ಅನುಕ್ರಮವಾಗಿ 700km ಮತ್ತು 550km ಕ್ಲೈಮ್ ಮಾಡಲಾದ ರೇಂಜ್ ಅನ್ನು ಪಡೆದಿರುತ್ತದೆ. 530PS ಮತ್ತು 670Nmನಲ್ಲಿ ರೇಟ್ ಮಾಡಲಾದ ಅವಳಿ-ಮೋಟರ್‌ನ AWD (ಆಲ್-ವ್ಹೀಲ್ ಡ್ರೈವ್) ಸೆಟಪ್‌ನೊಂದಿಗೆ ದೀರ್ಘ ಶ್ರೇಣಿಯ ಆವೃತ್ತಿಯು ಮಾರಾಟಕ್ಕೆ ಬರಲಿವೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಕೇವಲ 3.8 ಸೆಕೆಂಡುಗಳಲ್ಲಿ ಈ ಇಲೆಕ್ಟ್ರಿಕ್ ಸೆಡಾನ್ 0-100 kmphಗೆ ಸ್ಪ್ರಿಂಟ್ ಆಗುವಂತೆ ಮಾಡುತ್ತದೆ.
ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ
ಈ BYD ಸೀಲ್ ಭಾರತಕ್ಕೆ CBU ಆಗಿ 2023 ಅಂತ್ಯದ ವೇಳೆಗೆ, ರೂ 60 ಲಕ್ಷ ಬೆಲೆಯೊಂದಿಗೆ ಆಗಮಿಸುವ ನಿರೀಕ್ಷೆ ಇದೆ. BMW i4 ಇದಕ್ಕೆ ನೇರ ಪ್ರತಿಸ್ಪರ್ಧಿಯಾಗಿರಲಿದ್ದು ಕಿಯಾ EV6, ಹ್ಯುಂಡೈ ಅಯಾನಿಕ್ 5, ಮತ್ತು ವೋಲ್ವೋ XC40 ರಿಚಾರ್ಜ್‌ಗೆ ಇದು ಪರ್ಯಾಯವಾಗಲಿದೆ.
ಇದನ್ನೂ ಪರಿಶೀಲಿಸಿ: ಟಾಟಾ ನೆಕ್ಸಾನ್ EVಗೆ ಹೋಲಿಸಿದರೆ ಟಾಟಾ ಪಂಚ್ EV ಹೆಚ್ಚು ರೇಂಜ್ ನೀಡುತ್ತಾ?