ಅನಾವರಣಗೊಂಡ ಸುಜುಕಿ eVX ಎಲೆಕ್ಟ್ರಿಕ್ SUV; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ
ಮಾರುತಿ ಇ ವಿಟಾರಾ ಗಾಗಿ rohit ಮೂಲಕ ಅಕ್ಟೋಬರ್ 26, 2023 01:28 pm ರಂದು ಪ್ರಕಟಿಸಲಾಗಿದೆ
- 61 Views
- ಕಾಮೆಂಟ್ ಅನ್ನು ಬರೆಯಿರಿ
ಭಾರತದ ರಸ್ತೆಗಳಲ್ಲಿ ಸಂಚರಿಸಲಿರುವ eVX ಕಾರು 60kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದ್ದು 550km ತನಕದ ಶ್ರೇಣಿಯನ್ನು ಹೊಂದಲಿದೆ
- ನಾವು ಮೊದಲಿಗೆ eVX ಕಾನ್ಸೆಪ್ಟ್ ಅನ್ನು ಭಾರತದಲ್ಲಿ ಅಟೋ ಎಕ್ಸ್ಪೊ 2023 ರಲ್ಲಿ ನೋಡಿದೆವು.
- ಹೊಸ ಪರಿಕಲ್ಪನೆಯು ಉತ್ಪಾದನೆಗೆ ಸಿದ್ಧವಾಗಿರುವಂತೆ ಕಾಣುತ್ತದೆ.
- ಹೊರಾಂಗಣದ ವಿಶೇಷತೆಯಲ್ಲಿ ಸುತ್ತಲಿನ LED ಲೈಟಿಂಗ್ ಮತ್ತು ದೊಡ್ಡದಾದ ಅಲೋಯ್ ವೀಲ್ ಗಳು ಸೇರಿವೆ.
- ಇದರ ಕ್ಯಾಬಿನ್ ನಲ್ಲಿ ಸಂಪರ್ಕಿತ ಡಿಸ್ಪ್ಲೇಗಳು ಮತ್ತು ನೊಗದಂತಹ ಸ್ಟೀಯರಿಂಗ್ ವೀಲ್ ಅನ್ನು ನೋಡಬಹುದು.
- ಭಾರತದಲ್ಲಿ ಇದು 2025ರ ಸುಮಾರಿಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 25 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
ಸದ್ಯಕ್ಕೆ ನಡೆಯುತ್ತಿರುವ ಜಪಾನ್ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಸುಜುಕಿ eVX ಎಲೆಕ್ಟ್ರಿಕ್ SUVಯನ್ನು ಅನಾವರಣಗೊಳಿಸಲಾಗಿದ್ದು, ಇದು ಇನ್ನೂ ಹೆಚ್ಚಿನ ನಾಜೂಕಿನ ರೂಪದಲ್ಲಿ ಕಾಣಿಸಿಕೊಂಡಿದೆ. ಸುಜುಕಿ ಸಂಸ್ಥೆಯು, ಬೃಹತ್ ಅಟೋ ಕಾರ್ಯಕ್ರಮದಲ್ಲಿ ಈ ಎಲೆಕ್ಟ್ರಿಕ್ SUV ಯು ಕಾಣಿಸಿಕೊಳ್ಳುವ ಮೊದಲೇ ಇತ್ತೀಚೆಗಷ್ಟೇ ಇದರ ಒಳಭಾಗದ ಚಿತ್ರವನ್ನು ಬಿಡುಗಡೆ ಮಾಡಿತ್ತು.
ಇದರ ವಿನ್ಯಾಸದ ಕುರಿತು ಒಂದಿಷ್ಟು ಮಾಹಿತಿ
ಉದ್ದನೆಯ LED ಹೆಡ್ ಲೈಟ್ ಗಳು DRL ಗಳು, ತ್ರಿಕೋನಾಕಾರದ ಎಲಿಮೆಂಟ್ ಮತ್ತು ದಪ್ಪನೆಯ ಬಂಪರ್ ಜೊತೆಗೆ ಸುಜುಕಿ ಸಂಸ್ಥೆಯು ಈ eVX ಕಾರಿನ ಮುಂಭಾಗಕ್ಕೆ ಹೊಸ ನೋಟವನ್ನು ನೀಡಿದೆ.
ಈ ಎಲೆಕ್ಟ್ರಿಕ್ SUV ಯಲ್ಲಿ ದೊಡ್ಡದಾದ ಅಲೋಯ್ ವೀಲ್ ಗಳು, ಅಗಲವಾದ ವೀಲ್ ಆರ್ಚ್ ಗಳು, ಮತ್ತು ಫ್ಲಶ್ ಟೈಪ್ ಡೋರ್ ಹ್ಯಾಂಡಲ್ ಗಳನ್ನು ಕಾಣಬಹುದು. ಇದರ ಹಿಂಭಾಗದಲ್ಲಿ, 3 ಪೀಸ್ ಲೈಟಿಂಗ್ ಎಲಿಮೆಂಟ್ ಗಳನ್ನು ಹೊಂದಿರುವ ಸಂಪರ್ಕಿತ LED ಟೇಲ್ ಲೈಟ್ ಸೆಟಪ್ ಇದ್ದು, ಪರಿಷ್ಕೃತ DRL ಲೈಟ್ ಸಿಗ್ನೇಚರ್ ನ ವಿನ್ಯಾಸವನ್ನೇ ಇದು ಹೋಲುತ್ತದೆ. ಜೊತೆಗೆ ದೊಡ್ಡ ಸ್ಕಿಡ್ ಪ್ಲೇಟ್ ಅನ್ನು ಸಹ ಇಲ್ಲಿ ನೋಡಬಹುದು.
ಒಳಗಡೆಗೆ ಹೇಗಿದೆ?
ಸುಜುಕಿ ಸಂಸ್ಥೆಯು ಈ eVX ಕಾರಿನ ಒಳಗಡೆ ಸರಳತೆಯನ್ನು ಕಾಪಾಡಿಕೊಂಡಿದೆ. ಇನ್ಫೊಟೈನ್ ಮೆಂಟ್ ಮತ್ತು ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಗಾಗಿ ಇರುವ ಏಕೀಕೃತ ಡಿಸ್ಪ್ಲೇಗಳು ಈ ವಾಹನದ ಒಳಗಡೆ ಇರುವ ವಿಶೇಷತೆ ಎನಿಸಿವೆ. ಸ್ಕ್ರೀನ್ ಗಳನ್ನು ಹೊರತುಪಡಿಸಿ ಈ eVX ನ ಕ್ಯಾಬಿನ್ ನಲ್ಲಿ AC ವೆಂಟ್ ನ ಸ್ಥಳದಲ್ಲಿ ಉದ್ದನೆಯ ಲಂಬ ಸ್ಲಾಟ್ ಗಳು, ನೊಗದಂತೆ ಕಾಣುವ 2 ಸ್ಪೋಕ್ ಸ್ಟೀಯರಿಂಗ್ ವೀಲ್, ಗೇರ್ ಆಯ್ಕೆಗಾಗಿ ಸೆಂಟರ್ ಕನ್ಸೋಲ್ ನಲ್ಲಿ ರೋಟರಿ ಡಯಲ್ ಇತ್ಯಾದಿಗಳನ್ನು ಸಹ ಕಾಣಬಹುದು.
ಇದನ್ನು ಸಹ ಓದಿರಿ: ಹೊಸ ಸುಜುಕಿ ಸ್ವಿಫ್ಟ್ 2024: ನಿಮಗೆ ತಿಳಿದಿರಬೇಕಾದ ಎಲ್ಲಾ ವಿವರಗಳು ಇಲ್ಲಿವೆ
ಎಲೆಕ್ಟ್ರಿಕ್ ರೂಪ
ಸುಜುಕಿ ಸಂಸ್ಥೆಯು ಉತ್ಪಾದನೆಗೆ ಸಿದ್ಧವಾಗಿರುವ eVX ನ ಎಲೆಕ್ಟ್ರಿಕ್ ಪವರ್ ಟ್ರೇನ್ ಅನ್ನು ಬಹಿರಂಗಗೊಳಿಸದೆ ಇದ್ದರೂ, ಮಾರುತಿ ಸುಜುಕಿಯು ಅಟೋ ಎಕ್ಸ್ಪೊ 2023ರಲ್ಲಿ, ಈ Evಯು 60kWh ಬ್ಯಾಟರಿ ಪ್ಯಾಕ್ ಜೊತೆಗೆ ಬರಲಿದ್ದು 550km ತನಕದ ಶ್ರೇಣಿಯನ್ನು ನೀಡಲಿದೆ ಎಂದು ಹೇಳಿದೆ. ಈ eVX ಯು ಡ್ಯುವಲ್ ಮೋಟರ್ ಸೆಟಪ್ ಅನ್ನು ಹೊಂದಿದ್ದು, ಇದನ್ನು ಆಲ್ ವೀಲ್ ಡ್ರೈವ್ ವಾಹನವನ್ನಾಗಿ ಮಾಡಲಿದೆ.
ಬಿಡುಗಡೆಯ ನಿರೀಕ್ಷಿತ ಸಮಯ
ಈ eVX ಕಾರನ್ನು 2025ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 25 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಮಾರುತಿ ಸುಜುಕಿ eVX ಕಾರು MG ZS EV ಮತ್ತು ಹ್ಯುಂಡೈ ಕೋನ ಎಲೆಕ್ಟ್ರಿಕ್ ಜೊತೆಗೆ ನೇರವಾಗಿ ಸ್ಪರ್ಧಿಸಲಿದ್ದು, ಟಾಟಾ ನೆಕ್ಸನ್ EV ಮತ್ತು ಮಹೀಂದ್ರಾ XUV400ಗೆ ಪ್ರೀಮಿಯಂ ಮಟ್ಟದ ಬದಲಿ ಕಾರು ಎನಿಸಲಿದೆ.
ಇದನ್ನು ಸಹ ಓದಿರಿ: ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಆರಿಸಿಕೊಂಡ ಶ್ರದ್ಧಾ ಕಪೂರ್, ಹೊಸ ರೇಂಜ್ ರೋವರ್ ಸ್ಪೋರ್ಟ್ ಪಡೆದ ಅನುಭವ್ ಸಿಂಗ್