BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..!
ಬಿವೈಡಿ ಸೀಲ್ ಗಾಗಿ sonny ಮೂಲಕ ಮಾರ್ಚ್ 06, 2024 06:47 pm ರಂದು ಪ್ರಕಟಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
BYD ಸೀಲ್ ಅನ್ನು 41 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದ್ದು, ಇದು ಎಲ್ಲಾ ರೀತಿಯ ಪ್ರೀಮಿಯಂ EV ಕಾರುಗಳ ಜೊತೆ ಸ್ಪರ್ಧಿಸಲಿದೆ!
BYD ಸೀಲ್ ಎಲೆಕ್ಟ್ರಿಕ್ ಸೆಡಾನ್ ಆಗಮನದೊಂದಿಗೆ ಭಾರತದಲ್ಲಿನ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ವಿಭಾಗವು ಅಲ್ಲೋಲಕಲ್ಲೋಲವಾಗಿದೆ. ಇದನ್ನು ಮೊದಲು ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾಯಿತು, ಮತ್ತು ಈಗ ಸೀಲ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ನಾವು ನಂಬರ್ ಗಳನ್ನು ಚರ್ಚಿಸುವ ಮೊದಲು, BYD ಸೀಲ್ ನ ಟಾಪ್ ವೇರಿಯಂಟ್, 4 ಸೆಕೆಂಡುಗಳಲ್ಲಿ 0-100 kmph ಸ್ಪ್ರಿಂಟ್ ಮಾಡಲು ಡ್ಯುಯಲ್-ಮೋಟರ್ ಸೆಟಪ್ ಮತ್ತು ಸಾಕಷ್ಟು ಪರ್ಫಾರ್ಮೆನ್ಸ್ ಅನ್ನು ನೀಡುವ ಸಾಕಷ್ಟು ಸುಸಜ್ಜಿತ ಮಾಡೆಲ್ ಆಗಿದೆ ಎಂದು ನೀವು ತಿಳಿದುಕೊಳ್ಳಬೇಕು. ಅದರ ಹತ್ತಿರದ ಪ್ರತಿಸ್ಪರ್ಧಿಗಳು ಮತ್ತು ಪರ್ಯಾಯ ಆಯ್ಕೆಗಳಿಗೆ ಹೋಲಿಸಿದರೆ ಅದರ ವೇರಿಯಂಟ್-ವಾರು ಬೆಲೆಗಳು ಹೀಗಿವೆ:
BYD ಸೀಲ್ ಬೆಲೆಗಳು ವರ್ಸಸ್ ಪ್ರತಿಸ್ಪರ್ಧಿಗಳು
BYD ಸೀಲ್ |
ಹುಂಡೈ ಅಯೋನಿಕ್ 5 |
ವೋಲ್ವೋ XC40 ರೀಚಾರ್ಜ್ |
BMW i4 |
|
ಡೈನಾಮಿಕ್ - ರೂ. 41 ಲಕ್ಷ |
|
|
|
|
ಪ್ರೀಮಿಯಂ - ರೂ. 45.50 ಲಕ್ಷ |
|
ರೂ. 45.95 ಲಕ್ಷ |
|
|
ಪರ್ಫಾರ್ಮೆನ್ಸ್ AWD - ರೂ. 53 ಲಕ್ಷ |
|
|
P8 AWD - ರೂ. 57.90 ಲಕ್ಷ |
|
|
GT ಲೈನ್ - ರೂ. 60.95 ಲಕ್ಷ |
|
|
|
|
GT ಲೈನ್ AWD - ರೂ. 65.95 ಲಕ್ಷ |
|
|
|
|
|
|
|
eDrive35 M ಸ್ಪೋರ್ಟ್ – ರೂ. 72.5 ಲಕ್ಷ |
BYD ಸೀಲ್‌ನ ಬೇಸ್-ವೇರಿಯಂಟ್ ಬೆಲೆಯೂ ಹುಂಡೈ ಐಯೋನಿಕ್ 5 ಗಿಂತ ಸುಮಾರು ರೂ. 5 ಲಕ್ಷದಷ್ಟು ಕಡಿಮೆಯಿದೆ. ಈ ಡ್ಯುಯಲ್-ಮೋಟಾರ್ BYD ಸೀಲ್ ಟಾಪ್-ಸ್ಪೆಕ್ ಪರ್ಫಾರ್ಮೆನ್ಸ್ ಆಧಾರಿತ ಮಾಡೆಲ್ ಕೂಡ ಸ್ಪೋರ್ಟಿ ಆಗು ಕಾಣುವ XC40 ರೀಚಾರ್ಜ್ (AWD ಜೊತೆಗೆ) ಗಿಂತ ರೂ 5 ಲಕ್ಷದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಟಾಪ್-ಸ್ಪೆಕ್ BYD ಸೀಲ್ ಬೆಲೆಯು ಭಾರತದಲ್ಲಿ ಲಭ್ಯವಿರುವ ಮುಂದಿನ ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್ ಆಗಿರುವ BMW i4 ಗಿಂತ ಸುಮಾರು ರೂ. 20 ಲಕ್ಷದಷ್ಟು ಕಡಿಮೆಯಿದೆ.
BYD ಸೀಲ್: ಬ್ಯಾಟರಿ, ರೇಂಜ್ ಮತ್ತು ಪರ್ಫಾರ್ಮೆನ್ಸ್
ನೀವು BYD ಸೀಲ್ ಅನ್ನು ಖರೀದಿಸಲು ನೋಡುತ್ತಿದ್ದರೆ, ಈ ಎಲೆಕ್ಟ್ರಿಕ್ ಸೆಡಾನ್‌ನ ವೇರಿಯಂಟ್-ವಾರು ಪವರ್‌ಟ್ರೇನ್ ಸ್ಪೆಸಿಫಿಕೇಷನ್ ಗಳು ಇಲ್ಲಿವೆ:
|
ಸೀಲ್ ಡೈನಾಮಿಕ್ ರೇಂಜ್ |
ಸೀಲ್ ಪ್ರೀಮಿಯಂ ರೇಂಜ್ |
ಸೀಲ್ ಪರ್ಫಾರ್ಮೆನ್ಸ್ |
ಬ್ಯಾಟರಿ ಸೈಜ್ |
61.44 kWh |
82.56 kWh |
82.56 kWh |
ಡ್ರೈವ್ ಟ್ರೈನ್ |
ಸಿಂಗಲ್ ಮೋಟಾರ್ (RWD) |
ಸಿಂಗಲ್ ಮೋಟಾರ್ (RWD) |
ಡುಯಲ್ ಮೋಟಾರ್ (RWD) |
ಪವರ್ |
204 PS |
313 PS |
530 PS |
ಟಾರ್ಕ್ |
310 Nm |
360 Nm |
670 Nm |
ಡಿರುವ ರೇಂಜ್ |
510 ಕಿ.ಮೀ |
650 ಕಿ.ಮೀ |
580 ಕಿ.ಮೀ |
ಫೀಚರ್ ಗಳ ಕಡೆ ಒಂದು ನೋಟ
ಪ್ರೀಮಿಯಂ ಕೊಡುಗೆಯಾಗಿರುವ ಕಾರಣ, BYD ಸೀಲ್ ಸೌಕರ್ಯ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಸಾಕಷ್ಟು ಫೀಚರ್ ಗಳನ್ನು ಹೊಂದಿದೆ. ಇದು ಪನೋರಮಿಕ್ ಗ್ಲಾಸ್ ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ ಬರುತ್ತದೆ.
ಯುರೋ NCAP (2023) ನಿಂದ 5-ಸ್ಟಾರ್ ಸುರಕ್ಷತೆ ರೇಟ್ ಅನ್ನು ಪಡೆದಿರುವ ಇದು, ಸಾಕಷ್ಟು ಸುರಕ್ಷತಾ ಸಾಧನಗಳೊಂದಿಗೆ ಬರುತ್ತದೆ. ಇಂಡಿಯಾ-ಸ್ಪೆಕ್ BYD ಸೀಲ್ 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್‌ಗಳ ಸೂಟ್ (ADAS) ಅನ್ನು ಪಡೆಯುತ್ತದೆ.
ಈ ಬೆಲೆಗೆ ಉತ್ತಮ ಆಯ್ಕೆಯೇ?
BYD ಭಾರತದಲ್ಲಿ ತನ್ನ ಪ್ರಮುಖ ಕೊಡುಗೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ಮೂಲಕ ನಮ್ಮ ಗಮನವನ್ನು ಸೆಳೆದಿದೆ, ಆದರೆ ಈ ಸೀಲ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಡ್ರೈವ್ ಮಾಡುವ ಮೂಲಕ ಅದರ ಅನುಭವವನ್ನು ನಾವು ಇನ್ನೂ ಪಡೆಯಬೇಕಾಗಿದೆ. ಆದ್ದರಿಂದ ಮುಂಬರುವ ವಾರಗಳಲ್ಲಿ ನಮ್ಮ ಫಸ್ಟ್ ಡ್ರೈವ್ ರಿವ್ಯೂ ಮತ್ತು BYD ಸೀಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾರ್ ದೇಖೊ ಲೇಖನಗಳನ್ನು ಓದುತ್ತೀರಿ.
ಇನ್ನಷ್ಟು ಓದಿ: BYD ಸೀಲ್ ಆಟೋಮ್ಯಾಟಿಕ್