Login or Register ಅತ್ಯುತ್ತಮ CarDekho experience ಗೆ
Login

ಎಕ್ಸ್‌ಕ್ಲೂಸಿವ್‌: ಒಟ್ಟಿಗೆ ಬಿಡುಗಡೆಯಾಗಲಿರುವ Kia Carens ಫೇಸ್‌ಲಿಫ್ಟ್ ಮತ್ತು ಕಿಯಾ ಕ್ಯಾರೆನ್ಸ್ ಇವಿ, ಯಾವ ಸಮಯದಲ್ಲಿ ?

ಜನವರಿ 28, 2025 08:06 pm ರಂದು dipan ಮೂಲಕ ಪ್ರಕಟಿಸಲಾಗಿದೆ
36 Views

2025ರ ಕ್ಯಾರೆನ್ಸ್ ಹೊಸ ಬಂಪರ್‌ಗಳು ಮತ್ತು 2025ರ ಇವಿ6 ತರಹದ ಹೆಡ್‌ಲೈಟ್‌ಗಳು, ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ದೊಡ್ಡ ಡಿಸ್‌ಪ್ಲೇಗಳು ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಹೊಸ ಫೀಚರ್‌ಗಳೊಂದಿಗೆ ಬರಲಿದೆ

ಕಿಯಾ ಕ್ಯಾರೆನ್ಸ್ ಎಮ್‌ಪಿವಿಯ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿಯು ಕೆಲವು ಸಮಯದಿಂದ ಅಭಿವೃದ್ಧಿಯ ಹಂತದಲ್ಲಿದೆ ಎಂಬುದು ಹಳೆಸುದ್ದಿ. ಈ ಬಾರಿ ನಾವು ನಿಮಗಾಗಿ ಎಕ್ಸ್‌ಕ್ಲೂಸಿವ್‌ ಆಗಿ ಸುದ್ದಿಯೊಂದನ್ನು ತಂದಿದ್ದು, ಹಲವು ಇವಿ ಪ್ರೇಮಿಗಳು ನಿರೀಕ್ಷಿಸುತ್ತಿದ್ದ ಕ್ಯಾರೆನ್ಸ್‌ ಇವಿಯು 2025 ರ ಮಧ್ಯಭಾಗದಲ್ಲಿ ರೆಗ್ಯುಲರ್‌ ಕ್ಯಾರೆನ್ಸ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯ ಜೊತೆಗೆ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಕ್ಯಾರೆನ್ಸ್ ಇವಿ ಮತ್ತು ಕ್ಯಾರೆನ್ಸ್ ಫೇಸ್‌ಲಿಫ್ಟ್‌ನಿಂದ ನಾವು ನಿರೀಕ್ಷಿಸಬಹುದಾದ ಎಲ್ಲವನ್ನೂ ವಿವರವಾಗಿ ತಿಳಿಯೋಣ:

ಕ್ಯಾರೆನ್ಸ್ ಇವಿ ಮತ್ತು ಕ್ಯಾರೆನ್ಸ್ ಫೇಸ್‌ಲಿಫ್ಟ್: ಒಂದು ಅವಲೋಕನ

ಆಪ್‌ಡೇಟ್‌ ಮಾಡಲಾದ ಕಿಯಾ ಕ್ಯಾರೆನ್ಸ್ ಮತ್ತು ಕ್ಯಾರೆನ್ಸ್ ಇವಿ ಮುಂಬರುವ ಕಿಯಾ ಇವಿ6 ಗೆ ಹೋಲುವ ತ್ರಿಕೋನ ಎಲ್ಇಡಿ ಹೆಡ್‌ಲೈಟ್‌ಗಳೊಂದಿಗೆ ಬರಲಿವೆ ಎಂದು ಸ್ಪೈ ಶಾಟ್‌ಗಳು ಸೂಚಿಸುತ್ತವೆ. ಇದು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಹೊಸ ಪೂರ್ಣ-ಅಗಲದ ಟೈಲ್‌ಲೈಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಫೇಸ್‌ಲಿಫ್ಟೆಡ್ ಕ್ಯಾರೆನ್ಸ್ ಹೊಸ ಅಲಾಯ್ ವೀಲ್ ವಿನ್ಯಾಸವನ್ನು ಪಡೆಯುವ ನಿರೀಕ್ಷೆಯಿದೆ, ಆದರೆ ಅದರ ಎಲೆಕ್ಟ್ರಿಕ್ ಅವತಾರವು ಏರೋಡೈನಾಮಿಕ್‌ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳನ್ನು ಪಡೆಯಬಹುದು.

ಫೇಸ್‌ಲಿಫ್ಟೆಡ್ ಕ್ಯಾರೆನ್ಸ್‌ನ ಒಳಭಾಗವನ್ನು ಹೊಸ ಮತ್ತು ಹೆಚ್ಚು ಆಧುನಿಕವಾಗಿ ಕಾಣುವ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ವಿಭಿನ್ನ ಬಣ್ಣದ ಸೀಟ್ ಕವರ್‌ನೊಂದಿಗೆ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಫೇಸ್‌ಲಿಫ್ಟೆಡ್ ICE-ಚಾಲಿತ ಕ್ಯಾರೆನ್ಸ್ ಮತ್ತು ಕ್ಯಾರೆನ್ಸ್ ಇವಿಯ ಒಳಭಾಗದ ನಡುವಿನ ಒಂದು ವ್ಯತ್ಯಾಸವೆಂದರೆ ಎಲೆಕ್ಟ್ರಿಕ್‌ ಮೊಡೆಲ್‌ನಲ್ಲಿ ಸುಸ್ಥಿರ ಮೆಟಿರಿಯಲ್‌ಗಳ ವ್ಯಾಪಕ ಬಳಕೆ ಮತ್ತು ವಿಶಿಷ್ಟ ಕ್ಯಾಬಿನ್ ಥೀಮ್ ಆಗಿದೆ.

ಫೀಚರ್‌ಗಳನ್ನು ಗಮನಿಸುವಾಗ, ಈ ಎರಡೂ ಕಾರುಗಳು ಡ್ಯಾಶ್‌ಬೋರ್ಡ್‌ನಲ್ಲಿ ದೊಡ್ಡ 12.3-ಇಂಚಿನ ಡ್ಯುಯಲ್-ಸ್ಕ್ರೀನ್ ಸೆಟಪ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರಬಹುದು.

ಎರಡೂ ಕಾರುಗಳ ಸುರಕ್ಷತಾ ಸೂಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿರಬಹುದು. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಫಾರ್ವರ್ಡ್ ಡಿಕ್ಕಿ ಎಚ್ಚರಿಕೆ ಸೇರಿದಂತೆ ಫೀಚರ್‌ಗಳೊಂದಿಗೆ ಲೆವೆಲ್ 2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಒಳಗೊಂಡಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ಟಾಟಾ ತನ್ನ Nexonನಲ್ಲಿ ಮಾಡಿದ ತಂತ್ರವನ್ನು ಮುಂಬರುವ Carens ಫೇಸ್‌ಲಿಫ್ಟ್‌ನಲ್ಲಿ ಅನುಸರಿಸಲಿರುವ Kia

ಕ್ಯಾರೆನ್ಸ್ ಫೇಸ್‌ಲಿಫ್ಟ್: ಪವರ್‌ಟ್ರೇನ್ ಆಯ್ಕೆಗಳು

ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಪ್ರಸ್ತುತ-ಸ್ಪೆಕ್ ಮೊಡೆಲ್‌ನಂತೆಯೇ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ. ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ iMT ಅನ್ನು ಸರಿಯಾದ ಮ್ಯಾನುವಲ್ ಟ್ರಾನ್ಸ್ಮಿಷನ್ ಮೂಲಕ ಬದಲಾಯಿಸುವ ಸಾಧ್ಯತೆಯೂ ಇದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್ ಆಯ್ಕೆ

1.5-ಲೀಟರ್ N/A ಪೆಟ್ರೋಲ್

1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

115 ಪಿಎಸ್/

160 ಪಿಎಸ್

116 ಪಿಎಸ್

ಟಾರ್ಕ್‌

144 ಎನ್ಎಂ

253 ಎನ್ಎಂ

250 ಎನ್ಎಂ

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌

6-ಸ್ಪೀಡ್ iMT, 7-ಸ್ಪೀಡ್ DCT*

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ AT

*ಡಿಸಿಟಿ = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

^AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್

ಕ್ಯಾರೆನ್ಸ್ ಇವಿ: ಪವರ್‌ಟ್ರೇನ್ ಆಯ್ಕೆಗಳು

ಕಿಯಾ ಕ್ಯಾರೆನ್ಸ್‌ನ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳ ವಿವರಗಳನ್ನು ಕಾರು ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಇದು 400-500 ಕಿಮೀ ರೇಂಜ್‌ ಹೊಂದಿರುವ ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರಬಹುದೆಂದು ಎಂದು ನಾವು ನಿರೀಕ್ಷಿಸುತ್ತೇವೆ.

ಕ್ಯಾರೆನ್ಸ್ ಇವಿ ಮತ್ತು ಕ್ಯಾರೆನ್ಸ್ ಫೇಸ್‌ಲಿಫ್ಟ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಕ್ಯಾರೆನ್ಸ್‌ನ ಬೆಲೆ ಪ್ರಸ್ತುತ 10.60 ಲಕ್ಷ ರೂ.ಗಳಿಂದ 19.70 ಲಕ್ಷ ರೂ.ಗಳವರೆಗೆ ಇದ್ದು, ಫೇಸ್‌ಲಿಫ್ಟೆಡ್ ಮೊಡೆಲ್‌ನ ಬೆಲೆ 11.50 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಹಾಗೆಯೇ, ಕ್ಯಾರೆನ್ಸ್ ಇವಿ ಬೆಲೆ 16 ಲಕ್ಷ ರೂ.ಗಿಂತ ಹೆಚ್ಚಿರಬಹುದೆಂದು ನಿರೀಕ್ಷಿಸಲಾಗಿದೆ.

2025ರ ಕಿಯಾ ಕ್ಯಾರೆನ್ಸ್, ಮಾರುತಿ ಎರ್ಟಿಗಾ ಮತ್ತು ಮಾರುತಿ XL6 ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ, ಆದರೆ ಕ್ಯಾರೆನ್ಸ್ ಇವಿಯು, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊಗೆ ಎಲೆಕ್ಟ್ರಿಕ್‌ ಪರ್ಯಾಯವಾಗಿರುತ್ತದೆ.

ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia ಕೆರೆನ್ಸ್ 2025

explore similar ಕಾರುಗಳು

ಕಿಯಾ ಕೆರೆನ್ಸ್ ಇವಿ

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
Rs.16 ಲಕ್ಷ* Estimated Price
ಜೂನ್ 25, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕಿಯಾ ಕೆರೆನ್ಸ್ 2025

4.84 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.11 ಲಕ್ಷ* Estimated Price
ಮೇ 09, 2025 Expected Launch
ಟ್ರಾನ್ಸ್ಮಿಷನ್ಮ್ಯಾನುಯಲ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ