Login or Register ಅತ್ಯುತ್ತಮ CarDekho experience ಗೆ
Login

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಯಾವ ಕಾರು ಬ್ರ್ಯಾಂಡ್‌ಗಳು ಬರಲಿವೆ ? ಇಲ್ಲಿದೆ ಮಾಹಿತಿ..

ಡಿಸೆಂಬರ್ 06, 2024 08:34 pm ರಂದು dipan ಮೂಲಕ ಪ್ರಕಟಿಸಲಾಗಿದೆ

ಎಂಟು ಮಾಸ್‌-ಮಾರ್ಕೆಟ್‌ ಕಾರು ತಯಾರಕರು ಮತ್ತು ನಾಲ್ಕು ಐಷಾರಾಮಿ ಬ್ರಾಂಡ್‌ಗಳು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಭಾಗವಹಿಸಲಿವೆ

2025ರ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ, ಮತ್ತು ಆಟೋಮೋಟಿವ್ ಉತ್ಸಾಹಿಗಳಿಗೆ ಜನವರಿ ಎಂದರೆ ತಟ್ಟನೆ ನೆನಪಾಗುವುದೇ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ. ಮುಂದಿನ ವರ್ಷ, ಈ ಆಟೋ ಶೋ ತನ್ನ ಎರಡನೇ ಪುನರಾವರ್ತನೆಯೊಂದಿಗೆ ಪುನರಾಗಮನವನ್ನು ಮಾಡುತ್ತಿದೆ ಮತ್ತು ಇಲ್ಲಿ ಆಗಮಿಸಲಿರುವ ಕಾರು ತಯಾರಕರ ಪಟ್ಟಿಯನ್ನು ಈಗ ಬಹಿರಂಗಪಡಿಸಲಾಗಿದೆ. ಈ ಪಟ್ಟಿಯನ್ನು ವಿವರವಾಗಿ ನೋಡೋಣ:

ಯಾವ ಕಾರು ತಯಾರಕರು ಭಾಗವಹಿಸುತ್ತಾರೆ?

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಒಟ್ಟು 12 ಕಾರು ತಯಾರಕರು ಭಾಗವಹಿಸಲಿದ್ದಾರೆ.

  • ಮಾರುತಿ

  • ಹ್ಯುಂಡೈ

  • ಮಹೀಂದ್ರಾ

  • ಟಾಟಾ

  • ಕಿಯಾ

  • ಟೊಯೋಟಾ

  • ಎಂಜಿ

  • ಸ್ಕೋಡಾ

  • ಬಿಎಂಡಬ್ಲ್ಯು

  • ಲೆಕ್ಸಸ್

  • ಮರ್ಸಿಡಿಸ್ ಬೆಂಜ್

  • ಪೋರ್ಷೆ

ಆದರೆ, ಹೋಂಡಾ, ಜೀಪ್, ರೆನಾಲ್ಟ್, ನಿಸ್ಸಾನ್, ಫೋಕ್ಸ್‌ವ್ಯಾಗನ್, ಸಿಟ್ರೊಯೆನ್, ಆಡಿ, ಬಿವೈಡಿ, ಫೋರ್ಸ್ ಮೋಟಾರ್ಸ್, ಇಸುಜು, ಜೆಎಲ್‌ಆರ್ ಮತ್ತು ವೋಲ್ವೋ ಮುಂತಾದ ಕಾರು ತಯಾರಕರು ಮುಂಬರುವ ಆಟೋ ಎಕ್ಸ್‌ಪೋದ ಭಾಗವಾಗಿರುವುದಿಲ್ಲ.

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಎಂದರೇನು?

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಆಟೋಮೊಬೈಲ್‌ ಕ್ಷೇತ್ರದಲ್ಲಿನ ಇತ್ತೀಚಿನ ಆವಿಷ್ಕಾರಗಳನ್ನು ಎತ್ತಿ ಹಿಡಿಯಲು ವಾರ್ಷಿಕವಾಗಿ ನಡೆಯುವ 6-ದಿನಗಳ ಕಾರ್ಯಕ್ರಮವಾಗಿದೆ. ಪ್ರಪಂಚದಾದ್ಯಂತದ ಪ್ರಮುಖ ಕಾರು ತಯಾರಕರು, ಟೆಕ್ ಕಂಪನಿಗಳು ಮತ್ತು ಉದ್ಯಮದ ತಜ್ಞರನ್ನು ಸೆಳೆಯುವ ಭಾರತದ ಅತಿದೊಡ್ಡ ಆಟೋಮೋಟಿವ್ ಈವೆಂಟ್‌ಗಳಲ್ಲಿ ಇದು ಒಂದಾಗಿದೆ. ಇದನ್ನು ಇಂಜಿನಿಯರಿಂಗ್ ಎಕ್ಸ್‌ಪೋರ್ಟ್‌ ಪ್ರಮೋಷನ್ ಕೌನ್ಸಿಲ್ ಇಂಡಿಯಾ (EEPC ಇಂಡಿಯಾ) ಆಯೋಜಿಸಲಿದೆ ಮತ್ತು ವಿವಿಧ ಉದ್ಯಮ ಸಂಸ್ಥೆಗಳು ಇದಕ್ಕೆ ಬೆಂಬಲಿಸಲಿದೆ.

ಇದನ್ನೂ ಓದಿ: ಹೊಸ Honda Amaze ಬಿಡುಗಡೆ, ಬೆಲೆಗಳು 8 ಲಕ್ಷ ರೂ.ನಿಂದ ಪ್ರಾರಂಭ

2025ರ ಎಕ್ಸ್‌ಪೋ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋವು 2025ರ ಜನವರಿ 17 ರಿಂದ 22ರವರೆಗೆ ದೆಹಲಿ ಎನ್‌ಸಿಆರ್‌ನ ಮೂರು ಸ್ಥಳಗಳಲ್ಲಿ ನಡೆಯಲಿದೆ. ಇವುಗಳಲ್ಲಿ ಭಾರತಮಂಡಪಂ (ಪ್ರಗತಿ ಮೈದಾನ), ದ್ವಾರಕಾದಲ್ಲಿನ ಯಶೋಭೂಮಿ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮಾರ್ಟ್ ಸೇರಿವೆ.

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ನಲ್ಲಿ ಏನನ್ನು ನಿರೀಕ್ಷಿಸಲಾಗಿದೆ?

2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಕಾರುಗಳನ್ನು ಮಾತ್ರವಲ್ಲದೆ ಎಲೆಕ್ಟ್ರಿಕ್ ಕಾರುಗಳು, ದ್ವಿಚಕ್ರ ವಾಹನಗಳು, ಕನ್‌ಸ್ಟ್ರಕ್ಷನ್‌ನ ಯಂತ್ರೋಪಕರಣಗಳು, ಸ್ಪೇರ್‌ ಪಾರ್ಟ್ಸ್‌ಗಳು, ಕಂಪೊನೆಂಟ್‌ಗಳು, ಟೈರ್‌ಗಳು, ಬ್ಯಾಟರಿಗಳು ಮತ್ತು ವಾಹನ ಸಾಫ್ಟ್‌ವೇರ್ ಸೇರಿದಂತೆ 15 ಕ್ಕೂ ಹೆಚ್ಚು ಸಮ್ಮೇಳನಗಳೊಂದಿಗೆ ಎಲ್ಲಾ ರೇಂಜ್‌ನ ವಾಹನಗಳು ಮತ್ತು ಅವಿಷ್ಕಾರಗಳನ್ನು ಪ್ರದರ್ಶಿಸುತ್ತದೆ.

ಕಾರ್ ಶೋಕೇಸ್‌ಗಳ ವಿಷಯದಲ್ಲಿ, ಮುಂಬರುವ ಎಕ್ಸ್‌ಪೋದಲ್ಲಿ ಮಾರುತಿ ಇವಿಎಕ್ಸ್, ಹ್ಯುಂಡೈ ಕ್ರೆಟಾ ಇವಿ ಮತ್ತು ಟಾಟಾ ಹ್ಯಾರಿಯರ್ ಇವಿಯಂತಹ ಮೊಡೆಲ್‌ಗಳನ್ನು ಪ್ರದರ್ಶಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಹಾಗೆಯೇ, ಕಾರುಗಳ ಅಂತಿಮ ಪಟ್ಟಿಯನ್ನು ಶೀಘ್ರದಲ್ಲೇ ದೃಢೀಕರಿಸಲಾಗುವುದು, ಆದ್ದರಿಂದ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವೆಬ್‌ಸೈಟ್‌ಗೆ ಟ್ಯೂನ್ ಮಾಡಿ.

ಕಾರುಗಳ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ WhatsApp ಚಾನಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ