2024ರ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳ ಒಂದು ವಿಸ್ತೃತ ನೋಟ
ಆಗಸ್ಟ್ 02, 2024 05:21 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಎಕ್ಸ್‌ಟರ್ ನೈಟ್ ಎಡಿಷನ್‌ನಿಂದ ಮಾಸೆರೋಟಿ ಗ್ರೆಕೇಲ್ ಎಸ್‌ಯುವಿವರೆಗೆ, ನಾವು 2024ರ ಜುಲೈನಲ್ಲಿ 10 ಹೊಸ ಕಾರು ಬಿಡುಗಡೆಗಳನ್ನು ನೋಡಿದ್ದೇವೆ
2024ರ ಜುಲೈನಲ್ಲಿ ನಾವು ವಿಶೇಷವಾಗಿ ಮರ್ಸಿಡಿಸ್-ಬೆಂಜ್, ಬಿಎಮ್‌ಡಬ್ಲ್ಯೂ, ಆಡಿ, ಪೋರ್ಷೆ ಮತ್ತು ಮಾಸೆರೋಟಿಯಂತಹ ಐಷಾರಾಮಿ ವಾಹನ ತಯಾರಕರಿಂದ ಹಲವಾರು ಹೊಸ ಕಾರು ಬಿಡುಗಡೆಗಳನ್ನು ನೋಡಿದ್ದೇವೆ. ಇದರ ಜೊತೆಗೆ, ಹ್ಯುಂಡೈ, ಕಿಯಾ ಮತ್ತು ಮಾರುತಿಯಂತಹ ಮಾಸ್-ಮಾರ್ಕೆಟ್ ಬ್ರಾಂಡ್‌ಗಳು ವಿಶೇಷ ಎಡಿಷನ್‌ಗಳು ಮತ್ತು ತಮ್ಮ ಅಸ್ತಿತ್ವದಲ್ಲಿರುವ ಮೊಡೆಲ್‌ಗಳ ಹೊಸ ಆವೃತ್ತಿಗಳನ್ನು ಸಹ ಪರಿಚಯಿಸಿದವು. ಅವುಗಳಲ್ಲಿ ಪ್ರತಿಯೊಂದನ್ನು ಒಂದೊಂದಾಗಿ ವಿವರವಾಗಿ ಗಮನಿಸೋಣ.
ಹ್ಯುಂಡೈ ಎಕ್ಸ್‌ಟರ್ ನೈಟ್ ಎಡಿಷನ್
ಬೆಲೆಯ ರೇಂಜ್: 8.38 ಲಕ್ಷ ರೂ.ನಿಂದ 10.43 ಲಕ್ಷ ರೂ.
2024ರ ಜುಲೈನಲ್ಲಿ, ಹ್ಯುಂಡೈ ಎಕ್ಸ್‌ಟರ್ ಸ್ಪೋರ್ಟಿಯರ್ ನೈಟ್ ಎಡಿಷನ್‌ನ ಆವೃತ್ತಿಯನ್ನು ಪಡೆದುಕೊಂಡಿತು. ಅಬಿಸ್ ಬ್ಲ್ಯಾಕ್, ಶ್ಯಾಡೋ ಗ್ರೇ, ಮತ್ತು ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ಹೊಸ ಶ್ಯಾಡೋ ಗ್ರೇ ಎಂಬ ಮೂರು ಹೊಸ ಬಾಡಿ ಕಲರ್‌ನ ಜೊತೆಗೆ ಇದು ಒಳಗೆ ಮತ್ತು ಹೊರಗೆ ಕೆಂಪು ಹೈಲೈಟ್‌ಗಳನ್ನು ಒಳಗೊಂಡಿದೆ. ಎಕ್ಸ್‌ಟರ್ ನೈಟ್ ಎಡಿಷನ್ ಸಂಪೂರ್ಣ ಕಪ್ಪು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಕಪ್ಪು ಬಣ್ಣದ ಅಲಾಯ್ ವೀಲ್‌ಗಳು ಮತ್ತು ವಿಶಿಷ್ಟವಾದ ನೈಟ್ ಎಡಿಷನ್‌ನ ಬ್ಯಾಡ್ಜ್ ಅನ್ನು ಸಹ ಒಳಗೊಂಡಿದೆ.
ಒಳಭಾಗದಲ್ಲಿ, ಇದು ಸಂಪೂರ್ಣ ಕಪ್ಪು ಇಂಟಿರೀಯರ್ ಥೀಮ್ ಮತ್ತು ಕಪ್ಪು ಸೀಟ್ ಕವರ್ ಅನ್ನು ಪಡೆಯುತ್ತದೆ. ಇದು ಎಸಿ ವೆಂಟ್‌ಗಳು ಮತ್ತು ಸೀಟ್‌ಗಳ ಮೇಲೆ ಕೆಂಪು ಇನ್ಸರ್ಟ್‌ಗಳನ್ನು ಪಡೆಯುತ್ತದೆ. ಎಕ್ಸ್‌ಟರ್ ನೈಟ್ ಎಡಿಷನ್‌ನಲ್ಲಿನ ಫೀಚರ್‌ಗಳ ಪಟ್ಟಿಯು ಬದಲಾಗದೆ ಉಳಿದಿದೆ ಮತ್ತು ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ, ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್ ಕ್ಯಾಮ್ ಅನ್ನು ಒಳಗೊಂಡಿದೆ. ಎಕ್ಸ್‌ಟರ್ ನೈಟ್ ಎಡಿಷನ್ ಅದರ ರೆಗುಲರ್ ಆವೃತ್ತಿಗಳಂತೆ ಅದೇ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.
ಮಾರುತಿ ಇಗ್ನಿಸ್ ರೇಡಿಯನ್ಸ್ ಎಡಿಷನ್
2017ರಲ್ಲಿ ಇಗ್ನಿಸ್ ಅನ್ನು ಭಾರತದಲ್ಲಿ ಮೊದಲು ಬಿಡುಗಡೆ ಮಾಡಲಾಯಿತು ಮತ್ತು ಅಂದಿನಿಂದ ಇದು ದೇಶದಲ್ಲಿ 2.8 ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರ ಮನೆಯನ್ನು ತಲುಪಿದೆ. ಅದರ ಜನಪ್ರಿಯತೆಯ ಆಧಾರದ ಮೇಲೆ, ಮಾರುತಿ ತನ್ನ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನ ರೇಡಿಯನ್ಸ್ ಎಡಿಷನ್ ಅನ್ನು ಬಿಡುಗಡೆ ಮಾಡಿತು, ಇದು ಮಿಡ್-ಸ್ಪೆಕ್ ಡೆಲ್ಟಾ ಟ್ರಿಮ್ ಹೊರತುಪಡಿಸಿ ಎಲ್ಲಾ ಆವೃತ್ತಿಗಳಲ್ಲಿ ಲಭ್ಯವಿದೆ. ಹೊಸ ರೇಡಿಯನ್ಸ್ ಎಡಿಷನ್‌ನ ಪರಿಚಯಿಸುವುದರೊಂದಿಗೆ, ಮಾರುತಿಯು ತನ್ನ ಇಗ್ನಿಸ್‌ನ ಆರಂಭಿಕ ಬೆಲೆಯನ್ನು ರೂ 35,000 ರಷ್ಟು ಕಡಿತಗೊಳಿಸಿದೆ.
ರೇಡಿಯನ್ಸ್ ಎಡಿಷನ್ ರೆಗುರಲ್ ಇಗ್ನಿಸ್‌ನ ಆಕ್ಸೆಸರಿ-ಭರಿತ ಆವೃತ್ತಿಯಾಗಿದೆ. ಲೋವರ್-ಸ್ಪೆಕ್ ಟ್ರಿಮ್‌ಗಳನ್ನು ವೀಲ್ ಕವರ್‌ಗಳು, ಡೋರ್ ವೈಸರ್‌ಗಳು ಮತ್ತು ಡೋರ್ ಕ್ಲಾಡಿಂಗ್‌ನೊಂದಿಗೆ ನೀಡಲಾಗುತ್ತದೆ, ಆದರೆ ಟಾಪ್-ಸ್ಪೆಕ್ ಆವೃತ್ತಿಗಳು ಹೆಚ್ಚುವರಿಯಾಗಿ ಸೀಟ್ ಕವರ್‌ಗಳು ಮತ್ತು ಕುಶನ್‌ಗಳನ್ನು ಪಡೆಯುತ್ತವೆ. ಇಗ್ನಿಸ್‌ನ ರೇಡಿಯನ್ಸ್ ಆವೃತ್ತಿಯು ಇಗ್ನಿಸ್‌ನ ರೆಗುಲರ್ ಆವೃತ್ತಿಯೊಂದಿಗೆ ನೀಡಲಾದ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.
ಕಿಯಾ ಸೆಲ್ಟೋಸ್ & ಕಿಯಾ ಸೋನೆಟ್ ಹೊಸ ಆವೃತ್ತಿಗಳು
ಬೆಲೆ
ಕಿಯಾ ಸೆಲ್ಟೋಸ್ ಜಿಟಿಎಕ್ಸ್ |
19 ಲಕ್ಷ ರೂ. |
ಕಿಯಾ ಸೊನೆಟ್ ಜಿಟಿಎಕ್ಸ್ |
13.71 ಲಕ್ಷ ರೂ.ನಿಂದ 14.56 ಲಕ್ಷ ರೂ. |
ಸೆಲ್ಟೋಸ್‌ಗಾಗಿ HTX+ ಮತ್ತು GTX+ (S) ಟ್ರಿಮ್‌ಗಳ ನಡುವೆ ಮತ್ತು ಸೋನೆಟ್‌ಗಾಗಿ HTX+ ಮತ್ತು GTX+ ಟ್ರಿಮ್‌ಗಳ ನಡುವೆ ಸ್ಥಾನದಲ್ಲಿರುವ ಹೊಸ ಟಾಪ್-ಸ್ಪೆಕ್ GTX ಟ್ರಿಮ್ ಅನ್ನು ಪರಿಚಯಿಸುವ ಮೂಲಕ ಕಿಯಾ ತನ್ನ ಜನಪ್ರಿಯ ಎಸ್‌ಯುವಿಗಳಾದ ಸೆಲ್ಟೋಸ್ ಮತ್ತು ಸೋನೆಟ್‌ಗಳ ವೇರಿಯಂಟ್ ಲೈನ್‌ಅಪ್ ಅನ್ನು ವೃದ್ಧಿಸಿದೆ. ಸೆಲ್ಟೋಸ್‌ನ ಹೊಸ GTX ಆವೃತ್ತಿಯು ಲೆವೆಲ್ 2 ADAS, ಪನರೋಮಿಕ್ ಸನ್‌ರೂಫ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳಂತಹ ಸೌಕರ್ಯಗಳನ್ನು ಹೊಂದಿದೆ, ಆದರೆ ಸೊನೆಟ್ ಜಿಟಿಎಕ್ಸ್ 4-ವೇ ಚಾಲಿತ ಡ್ರೈವರ್ ಸೀಟ್, ಏರ್ ಪ್ಯೂರಿಫೈಯರ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಪಡೆಯುತ್ತದೆ. ಈ ಹೊಸ ಆವೃತ್ತಿಗಳನ್ನು ಟರ್ಬೊ-ಪೆಟ್ರೋಲ್ ಡಿಸಿಟಿ ಆವೃತ್ತಿಗಳು ಅಥವಾ ಎರಡೂ ಎಸ್‌ಯುವಿಗಳ ಡೀಸೆಲ್ ಆಟೋಮ್ಯಾಟಿಕ್ ಅವೃತ್ತಿಗಳೊಂದಿಗೆ ನೀಡಲಾಗುತ್ತದೆ.
ಈ ಹೊಸ ಆವೃತ್ತಿಗಳ ಹೊರತಾಗಿ, ಕಿಯಾ ಎರಡೂ ಎಸ್‌ಯುವಿಗಳ X-ಲೈನ್ ಆವೃತ್ತಿಗೆ ಹೊಸ ಅರೋರಾ ಬ್ಲ್ಯಾಕ್ ಪರ್ಲ್ ಬಾಡಿ ಕಲರ್‌ನ ಆಯ್ಕೆಯನ್ನು ಸೇರಿಸಿದೆ.
ಬಿವೈಡಿ ಅಟ್ಟೊ 3 ಯ ಹೊಸ ಆವೃತ್ತಿಗಳು
ಬೆಲೆ ರೇಂಜ್: 24.99 ಲಕ್ಷ ರೂ.ನಿಂದ 33.99 ಲಕ್ಷ ರೂ.
ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿಯು ಎರಡು ಹೊಸ ಆವೃತ್ತಿಗಳ ಪರಿಚಯದೊಂದಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಮಾರ್ಪಟ್ಟಿದೆ, ಇದರಲ್ಲಿ ಒಂದು ಚಿಕ್ಕ ಬ್ಯಾಟರಿ ಪ್ಯಾಕ್ ಸಹ ಸೇರಿದೆ. ಇದು ಈಗ ಡೈನಾಮಿಕ್, ಪ್ರೀಮಿಯಂ ಮತ್ತು ಸುಪೀರಿಯರ್ ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಅಟ್ಟೋ 3ಯ ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಇದು ಅದರ ಹಿಂದಿನ ಆರಂಭಿಕ ಬೆಲೆಗಿಂತ 9 ಲಕ್ಷ ರೂ.ನಷ್ಟು ಕಡಿಮೆಯಾಗಿದೆ. ಹೆಚ್ಚುವರಿಯಾಗಿ, ಎಸ್‌ಯುವಿಯ ಬಣ್ಣಗಳ ಆಯ್ಕೆಗೆ ಹೊಸ ಕಾಸ್ಮೊಸ್ ಕಪ್ಪು ಬಣ್ಣವನ್ನು ಸೇರಿಸಲಾಗಿದೆ. ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿಯು ಚಿಕ್ಕದಾದ 49.92 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಆದರೆ ಪ್ರೀಮಿಯಂ ಮತ್ತು ಸುಪೀರಿಯರ್ ಆವೃತ್ತಿಗಳು ಹಿಂದೆ ಲಭ್ಯವಿರುವ 60.48 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ.
2024ರ ಬಿಎಮ್‌ಡಬ್ಲ್ಯೂ5 ಸಿರೀಸ್ ಲಾಂಗ್ ವೀಲ್‌ಬೇಸ್
ಬೆಲೆ: 72.90 ಲಕ್ಷ ರೂ.
ಜುಲೈ ತಿಂಗಳಿನಲ್ಲಿ ಎಂಟನೇ ತಲೆಮಾರಿನ ಬಿಎಮ್‌ಡಬ್ಲ್ಯೂ 5 ಸಿರೀಸ್ ಅನ್ನು ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಬಾರಿ, ಇದನ್ನು ಒಂದೇ 530Li ಎಮ್ ಸ್ಪೋರ್ಟ್ ಆವೃತ್ತಿಯಲ್ಲಿ ನೀಡಲಾಗುತ್ತಿದೆ ಮತ್ತು ಮೊದಲ ಬಾರಿಗೆ ಲಾಂಗ್-ವೀಲ್-ಬೇಸ್ (LWB) ಆವೃತ್ತಿಯಲ್ಲಿ ಬರುತ್ತದೆ. ಈ ಹೊಸ 5 ಸಿರೀಸ್ ಮೊಡೆಲ್, 3 ಸಿರೀಸ್ ಮತ್ತು 7 ಸಿರೀಸ್‌ನ ನಂತರ ಭಾರತದಲ್ಲಿ ಬಿಎಮ್‌ಡಬ್ಲ್ಯೂನಿಂದ ಮೂರನೇ ಲಾಂಗ್-ವೀಲ್-ಬೇಸ್ ಮೊಡೆಲ್ ಆಗಿದೆ. ಹೊಸ-ಜನರೇಶನ್‌ನ 5 ಸಿರೀಸ್ ಸ್ಪೋರ್ಟಿಯರ್ ಬಂಪರ್ ವಿನ್ಯಾಸದೊಂದಿಗೆ ಹೆಚ್ಚು ಆಕ್ರಮಣಕಾರಿಯಾಗಿ ಕಾಣುತ್ತದೆ, ಆದರೆ ಹಿಂಭಾಗದಲ್ಲಿ ಸುತ್ತುವ-ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.
ಈ ಹೊಸ-ಜನರೇಶನ್‌ನ ಸೆಡಾನ್ ತಾಜಾ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 14.9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, 4-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 18-ಸ್ಪೀಕರ್ ಬೋವರ್ಸ್ ಮತ್ತು ವಿಲ್ಕಿನ್ಸ್ ಸರೌಂಡ್ ಸೌಂಡ್ ಸಿಸ್ಟಮ್ ಮುಂತಾದ ಸೌಕರ್ಯಗಳನ್ನು ಹೊಂದಿದೆ. ಬಿಎಮ್‌ಡಬ್ಲ್ಯೂ 5 ಸಿರೀಸ್ ಲಾಂಗ್ ವೀಲ್ ಬೇಸ್ ಅನ್ನು ಒಂದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ, ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನೀಡಲಾದ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲಾಗಿದೆ.
2024ರ ಮಿನಿ ಕೂಪರ್ ಎಸ್ & ಕಂಟ್ರಿಮ್ಯಾನ್ ಎಲೆಕ್ಟ್ರಿಕ್
2024 ಮಿನಿ ಕೂಪರ್ ಎಸ್ |
44.90 ಲಕ್ಷ ರೂ. |
ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ |
54.90 ಲಕ್ಷ ರೂ. |
ಮಿನಿ ಕಳೆದ ತಿಂಗಳು ಭಾರತದಲ್ಲಿ ಒಂದಲ್ಲ ಎರಡು ಹೊಸ ಕಾರುಗಳನ್ನು ಪರಿಚಯಿಸಿತು, ಅದುವೇ 2024 ಕೂಪರ್ ಎಸ್ ಮತ್ತು ಮೊದಲ ಕಂಟ್ರಿಮ್ಯಾನ್ ಎಲೆಕ್ಟ್ರಿಕ್. ಹೊಸ ಕೂಪರ್ ಎಸ್ ಹೊಸ ಗ್ರಿಲ್, ಹೆಡ್‌ಲೈಟ್‌ಗಳು ಮತ್ತು ತ್ರಿಕೋನ ಎಲ್ಇಡಿ ಟೈಲ್ ಲೈಟ್‌ಗಳಂತಹ ಹೊಸ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ. ಮತ್ತೊಂದೆಡೆ ಕಂಟ್ರಿಮ್ಯಾನ್ ಅನ್ನು ಮೊದಲ ಬಾರಿಗೆ ಇವಿ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಅದರ ICE ಪ್ರತಿರೂಪಕ್ಕಿಂತ ಹೆಚ್ಚು ಸುವ್ಯವಸ್ಥಿತವಾಗಿ ಕಾಣುತ್ತದೆ. ಒಳಭಾಗದಲ್ಲಿ, ಕೂಪರ್ S ಮತ್ತು ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಎರಡೂ 9.4-ಇಂಚಿನ ಸುತ್ತಿನ OLED ಟಚ್‌ಸ್ಕ್ರೀನ್ ಅನ್ನು ಹೊಂದಿವೆ, ಇದು ಎಲ್ಲಾ ಚಾಲಕ-ಸಂಬಂಧಿತ ಮಾಹಿತಿಗಾಗಿ ಇನ್ಫೋಟೈನ್‌ಮೆಂಟ್ ಯೂನಿಟ್ ಮತ್ತು ಡಿಸ್‌ಪ್ಲೇ ಆಗಿಯೂ ಕಾರ್ಯನಿರ್ವಹಿಸುತ್ತದೆ.
ಮರ್ಸಿಡಿಸ್-ಬೆಂಜ್ ಇಕ್ಯೂಎ
ಬೆಲೆ: 66 ಲಕ್ಷ ರೂ
ಮರ್ಸಿಡೀಸ್-ಬೆಂಜ್ ಇಕ್ಯೂಎ 2024ರ ಜುಲೈನಲ್ಲಿ ಭಾರತದಲ್ಲಿ ಅತ್ಯಂತ ಕೈಗೆಟಕುವ ಎಲೆಕ್ಟ್ರಿಕ್ ಮರ್ಸಿಡಿಸ್ ಆಗಿ ನಮ್ಮ ಮಾರುಕಟ್ಟೆಗೆ ಬಂದಿಳಿದಿದೆ. ಇದು ಒಂದೇ ಒಂದು ಸಂಪೂರ್ಣ ಲೋಡ್ ಆಗಿರುವ 250+ ಟ್ರಿಮ್‌ನಲ್ಲಿ ನೀಡಲಾಗುತ್ತಿದೆ, 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟರ್ ಅನ್ನು ಪವರ್ ಮಾಡುತ್ತದೆ. ಮರ್ಸಿಡೀಸ್-ಬೆಂಜ್ ಇಕ್ಯೂಎವು ಮರ್ಸಿಡಿಸ್‌ನ ಇತರ ಎಲೆಕ್ಟ್ರಿಕ್ ಮಾದರಿಗಳ ವಿನ್ಯಾಸ ಭಾಷೆಯನ್ನು ಹೊಂದಿದೆ. ಒಳಗಿನಿಂದ, ಅದರ ಡ್ಯಾಶ್‌ಬೋರ್ಡ್ ಜಿಎಲ್‌ಎಯಂತೆಯೇ ಕಾಣುತ್ತದೆ, ಆದರೆ ಇದು ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಿತ ನಕ್ಷತ್ರಗಳು ಮತ್ತು ತಾಮ್ರದಲ್ಲಿ ಫಿನಿಶ್ ಮಾಡಿರುವ ಎಸಿ ವೆಂಟ್‌ಗಳಂತಹ ಕೆಲವು EV-ನಿರ್ದಿಷ್ಟ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ.
ಇಕ್ಯೂಎಯ ಬೋರ್ಡ್‌ನಲ್ಲಿರುವ ಪ್ರಮುಖ ಫೀಚರ್‌ಗಳೆಂದರೆ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಪೆನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಎಸಿ, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಸೆಟಪ್, ಮೆಮೊರಿ ಕಾರ್ಯದೊಂದಿಗೆ ವಿದ್ಯುನ್ಮಾನವಾಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್. ಹಾಗೆಯೇ ಇದರ ಸುರಕ್ಷತಾ ಪ್ಯಾಕೇಜ್ ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್, ಹಿಲ್-ಹೋಲ್ಡ್ ಅಸಿಸ್ಟ್, ಹಿಲ್-ಡಿಸೆಂಟ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಪಾರ್ಕ್ ಸಹಾಯದೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇದು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.
ಮರ್ಸಿಡೀಸ್-ಬೆಂಜ್ ಇಕ್ಯೂಬಿ ಫೇಸ್ ಲಿಫ್ಟ್
ಬೆಲೆ ರೇಂಜ್: 70.90 ಲಕ್ಷ ರೂ.ನಿಂದ 77.50 ಲಕ್ಷ ರೂ.
ಮರ್ಸಿಡೀಸ್-ಬೆಂಜ್ ಇಕ್ಯೂಬಿ ಎಲೆಕ್ಟ್ರಿಕ್ ಎಸ್‌ಯುವಿಯು ಕಳೆದ ತಿಂಗಳು ಮಿಡ್‌ಲೈಫ್ ಆಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ ಮತ್ತು ಈಗ 5-ಆಸನಗಳ ಆಯ್ಕೆಯಲ್ಲಿ ನೀಡಲಾಗುತ್ತಿದೆ ಅದು ಒಳಗೆ ಮತ್ತು ಹೊರಗೆ AMG ಲೈನ್ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ. ಮತ್ತೊಂದೆಡೆ ಇಕ್ಯೂಬಿಯ 7-ಸೀಟರ್ ಅವೃತ್ತಿಯು ಈಗ ಹೆಚ್ಚಿನ ಚಾಲನಾ ರೇಂಜ್‌ಗಾಗಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತದೆ. ಇಕ್ಯೂಬಿಯ 5-ಸೀಟರ್ AMG ಲೈನ್ ಅವೃತ್ತಿಯು 7-ಸೀಟರ್ ಅವೃತ್ತಿಗಿಂತ 6.6 ಲಕ್ಷ ರೂ.ನಷ್ಟು ಹೆಚ್ಚು ಬೆಲೆಯನ್ನು ಹೊಂದಿದೆ.
2024 ರ ಇಕ್ಯೂಬಿನಲ್ಲಿರುವ ಫೀಚರ್‌ಗಳು ಇತ್ತೀಚಿನ ತಲೆಮಾರಿನ MBUX Gen 2 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ 10.25-ಇಂಚಿನ ಎರಡು ಡಿಸ್‌ಪ್ಲೇಗಳನ್ನು (ಚಾಲಕನ ಡಿಸ್‌ಪ್ಲೇಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ) ಒಳಗೊಂಡಿವೆ. ಫೀಚರ್‌ನ ಅಪ್‌ಡೇಟ್‌ಗಳು 710W 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಂ ಮತ್ತು ಹೆಡ್ಸ್ ಅಪ್ ಡಿಸ್‌ಪ್ಲೇ ಅನ್ನು ಸಹ ಒಳಗೊಂಡಿವೆ. ಇಕ್ಯೂಬಿ ಫೇಸ್‌ಲಿಫ್ಟ್ ಈಗ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ 535 ಕಿಮೀ (WLTP) ರೇಂಜ್ ಅನ್ನು ನೀಡುತ್ತದೆ.
ಆಡಿ Q5 ಬೋಲ್ಡ್ ಎಡಿಷನ್
ಬೆಲೆ: 72.30 ಲಕ್ಷ ರೂ
ಬಿಡುಗಡೆಗಳ ಸರಣಿಯಲ್ಲಿ ಸೇರಿಕೊಂಡು, ಆಡಿ ತನ್ನ ಕ್ಯೂ5 ಎಸ್‌ಯುವಿಯ ಬೋಲ್ಡ್ ಎಡಿಷನ್ ಅನ್ನು 2024ರ ಜುಲೈಯಲ್ಲಿ ಬಿಡುಗಡೆ ಮಾಡಿತು. ಕ್ಯೂ5 ಬೋಲ್ಡ್ ಆವೃತ್ತಿಯು ಸ್ಪೋರ್ಟಿಯರ್ ಲುಕ್‌ಗಾಗಿ ರಿಫ್ರೆಶ್ ಮಾಡಿದ ಗ್ರಿಲ್, ಬ್ಲ್ಯಾಕ್ಡ್ ಔಟ್ ಲೋಗೊಗಳು, ORVM ಗಳು ಮತ್ತು ರೂಫ್ ರೈಲ್‌ಗಳನ್ನು ಪಡೆಯುತ್ತದೆ. ಇದು ಎರಡು ಹೊಸ ಗ್ಲೇಸಿಯರ್ ವೈಟ್ ಮತ್ತು ಡಿಸ್ಟಿಂಕ್ಟ್ ಗ್ರೀನ್ ಬಾಡಿ ಕಲರ್‌ನ ಆಯ್ಕೆಗಳನ್ನು ಸಹ ಪಡೆಯುತ್ತದೆ. Q5 ಬೋಲ್ಡ್ ಆವೃತ್ತಿಯ ಇಂಟಿರಿಯರ್ ಒಂದೇ ರೀತಿ ಕಾಣುತ್ತದೆ ಹಾಗು ಅಟ್ಲಾಸ್ ಬೀಜ್ ಮತ್ತು ಒಪ್ಕಿ ಬ್ರೌನ್ ಎಂಬ ಎರಡು ಕವರ್ ಆಯ್ಕೆಗಳೊಂದಿಗೆ ಬರುತ್ತದೆ. Q5ನ ಸ್ಪೇಷಲ್ ಎಡಿಷನ್‌ನ ವೈಶಿಷ್ಟ್ಯಗಳ ಹೈಲೈಟ್ಸ್‌ಗಳು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, 755W 19-ಸ್ಪೀಕರ್ ಬ್ಯಾಂಗ್ ಮತ್ತು ಒಲುಫ್‌ಸೆನ್ ಸೌಂಡ್ ಸಿಸ್ಟಮ್, 30 ಕಲರ್ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್ ಮತ್ತು 3- ಝೋನ್ ಎಸಿಯನ್ನು ಒಳಗೊಂಡಿದೆ. Q5 ಬೋಲ್ಡ್ ಆವೃತ್ತಿಯು ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.
ಪೋರ್ಷೆ ಟೇಕನ್ ಫೇಸ್‌ಲಿಫ್ಟ್
ಬೆಲೆ ರೇಂಜ್: 1.89 ಕೋಟಿ ರೂ.ನಿಂದ 2.53 ಕೋಟಿ ರೂ.
ಈ ವರ್ಷದ ಆರಂಭದಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದ ನಂತರ, ಪೋರ್ಷೆ ಟೇಕಾನ್ ಫೇಸ್‌ಲಿಫ್ಟ್ ಅನ್ನು 2024ರ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಗೊಲಿಸಲಾಯಿತು. ಹೊಸ ಎಚ್‌ಡಿ ಮ್ಯಾಟ್ರಿಕ್ಸ್-ಎಲ್‌ಇಡಿ ಲೈಟ್‌ಗಳು, ಬಂಪರ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಏರ್ ವೆಂಟ್‌ಗಳು, ಹೊಸ 21-ಇಂಚಿನ ಅಲಾಯ್ ವೀಲ್‌ಗಳು ಮತ್ತು ಹಿಂಭಾಗದಲ್ಲಿ ಪ್ರಕಾಶಿತವಾದ 'ಪೋರ್ಷೆ' ಲೋಗೋ ಸೇರಿದಂತೆ ಫೇಸ್‌ಲಿಫ್ಟೆಡ್ ಟೇಕಾನ್ ಸೂಕ್ಷ್ಮ ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ. ಒಳಭಾಗದಲ್ಲಿ, ಇದು ಸಂಪೂರ್ಣ ಕಪ್ಪು ಇಂಟಿರೀಯರ್ ಅನ್ನು ಪಡೆಯುತ್ತದೆ ಮತ್ತು ಬಳಕೆದಾರ ಇಂಟರ್ಫೇಸ್ (UI) ಜೊತೆಗೆ 10.9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಗಾಗಿ ವಿಶುವಲ್ ಆಪ್‌ಡೇಟ್‌ಗಳು, 16.8-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಪ್ರಯಾಣಿಕರಿಗಾಗಿ ಐಚ್ಛಿಕ ಡಿಸ್‌ಪ್ಲೇಗಳನ್ನು ಪಡೆಯುತ್ತದೆ. ಇದು ಹೆಡ್ಸ್-ಅಪ್ ಡಿಸ್‌ಪ್ಲೇ, 14-ವೇ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು, ಎಲ್ಲಾ ನಾಲ್ಕು ಸೀಟ್‌ಗಳಲ್ಲಿ ತಾಪನ ಕಾರ್ಯ ಮತ್ತು ಸ್ಟೀರಿಂಗ್ ವೀಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 4-ಜೋನ್ ಎಸಿಯಂತಹ ಹೆಚ್ಚು ಗುಣಮಟ್ಟದ ಫೀಚರ್‌ಗಳನ್ನು ಸಹ ಪಡೆಯುತ್ತದೆ.
2024ರ ಟೇಕನ್‌ನೊಂದಿಗೆ, ಪೋರ್ಷೆ ಹೆಚ್ಚು ಶಕ್ತಿಶಾಲಿ 89 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಸ್ಥಾಪಿಸಿದೆ, ಇದನ್ನು ಐಚ್ಛಿಕ ಕಾರ್ಯಕ್ಷಮತೆಯ ಬ್ಯಾಟರಿ ಪ್ಲಸ್ ಪ್ಯಾಕ್‌ನೊಂದಿಗೆ 105 ಕಿ.ವ್ಯಾಟ್ ಯುನಿಟ್‌ಗೆ ಅಪ್‌ಗ್ರೇಡ್ ಮಾಡಬಹುದು. ಟೇಕನ್ ಫೇಸ್‌ಲಿಫ್ಟ್ 642 ಕಿ.ಮೀ (WLTP) ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾ
ಬೆಲೆ: 2.65 ಕೋಟಿ ರೂ.ಗಳಿಂದ 2.85 ಕೋಟಿ ರೂ.
ಲ್ಯಾಂಡ್ ರೋವರ್ ಭಾರತದಲ್ಲಿ ಡಿಫೆಂಡರ್ ಆಕ್ಟಾವನ್ನು ಬಿಡುಗಡೆ ಮಾಡಿದೆ, ಇದು ಎಸ್‌ಯುವಿಯ ಅತ್ಯಂತ ಹಾರ್ಡ್‌ಕೋರ್ ಮತ್ತು ಶಕ್ತಿಯುತ ಆವೃತ್ತಿಯಾಗಿದೆ. ಇದು ಡಿಫೆಂಡರ್ 110 ಬಾಡಿಸ್ಟೈಲ್ (5-ಡೋರ್) ಅನ್ನು ಆಧರಿಸಿದೆ ಮತ್ತು ಉತ್ತಮ ಆಫ್-ರೋಡ್ ಕಾರ್ಯಕ್ಷಮತೆಗಾಗಿ ವರ್ಧಿತ ಆಯಾಮಗಳು, ನವೀಕರಿಸಿದ ಹೊರಭಾಗ ಮತ್ತು ಸುಧಾರಿತ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ. ಡಿಫೆಂಡರ್ ಆಕ್ಟಾ ಜೊತೆಗೆ, ಎಸ್‌ಯುವಿಯ ವಿಶೇಷ ಎಡಿಷನ್ ಒನ್ ಆವೃತ್ತಿ ಇರುತ್ತದೆ, ಅದು ಬಿಡುಗಡೆಯಾದ ಒಂದು ವರ್ಷದವರೆಗೆ ಮಾರಾಟದಲ್ಲಿರುತ್ತದೆ. ಡಿಫೆಂಡರ್ ಆಕ್ಟಾ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 4.4-ಲೀಟರ್ ಟ್ವಿನ್-ಟರ್ಬೊ V8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ, ಇದು 635 ಪಿಎಸ್ ಮತ್ತು 750 ಎನ್‌ಎಮ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ.
ಮಾಸೆರೋಟಿ ಗ್ರೀಕೇಲ್
ಬೆಲೆ ಶ್ರೇಣಿ: 1.31 ಕೋಟಿ ರೂ.ನಿಂದ 2.05 ಕೋಟಿ ರೂ.
ಲೆವಾಂಟೆಗಿಂತ ಕೆಳಗಿರುವ ಬ್ರ್ಯಾಂಡ್‌ನ ಪ್ರವೇಶ ಮಟ್ಟದ ಎಸ್‌ಯುವಿಯಾದ ಮಾಸೆರೋಟಿ ಗ್ರೆಕೇಲ್ ಎಸ್‌ಯುವಿ ಬಿಡುಗಡೆಯೊಂದಿಗೆ ತಿಂಗಳು ಮುಕ್ತಾಯವಾಯಿತು. ಗ್ರೀಕೇಲ್‌ನ ವಿನ್ಯಾಸವು ಲೆವಾಂಟೆಯಿಂದ ಪ್ರೇರಿತವಾಗಿ ಕಾಣುತ್ತದೆ. ಇದರ ಪ್ರಮುಖ ಹೊರಭಾಗದ ಹೈಲೈಟ್ಸ್‌ಗಳೆಂದರೆ ಸಿಗ್ನೇಚರ್ ಮಸೆರಾಟಿ ಗ್ರಿಲ್, ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬೂಮರಾಂಗ್-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳು ಆಗಿವೆ. ಒಳಭಾಗವು, ಇದು ಸಂಪೂರ್ಣ ಲೆದರ್‌ನ ಕವರ್ ಅನ್ನು ಪಡೆಯುತ್ತದೆ ಮತ್ತು ಅಲ್ಯೂಮಿನಿಯಂ ಎಕ್ಸೆಂಟ್‌ಗಳು ಮತ್ತು ವುಡನ್ ವಿನ್ಯಾಸದ ವಿವರಗಳನ್ನು ಪಡೆಯುತ್ತದೆ. ಇದು ಮೂರು ಡಿಸ್‌ಪ್ಲೇ ಸೆಟಪ್ ಅನ್ನು ಒಳಗೊಂಡಿದೆ, ಅವುಗಳೆಂದರೆ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು HVAC ನಿಯಂತ್ರಣಗಳಿಗಾಗಿ 8.8-ಇಂಚಿನ ಸ್ಕ್ರೀನ್ ಅಗಿದೆ. ಗ್ರೆಕೆಲ್ ಎಸ್‌ಯುವಿಯು ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅದರಲ್ಲಿ ಒಂದು 3-ಲೀಟರ್ ಟರ್ಬೊ-ಪೆಟ್ರೋಲ್ V6 ಎಂಜಿನ್ ಆಗಿದೆ.
ಇವುಗಳು 2024ರ ಜುಲೈನಲ್ಲಿ ಭಾರತದಲ್ಲಿ ಮಾರಾಟವಾದ ಎಲ್ಲಾ ಕಾರುಗಳು. ಇವುಗಳಲ್ಲಿ ನಿಮ್ಮ ಇಷ್ಟದ ಕಾರು ಯಾವುದು ಮತ್ತು ಏಕೆ? ಕೆಳಗೆ ಕಾಮೆಂಟ್ ಮಾಡಿ
ವಾಹನ ಪ್ರಪಂಚದಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.