BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್‌ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ
BYD ತನ್ನ ಭಾರತ-ಸ್ಪೆಕ್ ಸೀಲಿಯನ್ 7 ಅನ್ನು ಅಟ್ಲಾಂಟಿಸ್ ಗ್ರೇ, ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಶಾರ್ಕ್ ಗ್ರೇ ಎಂಬ ನಾಲ್ಕು ಎಕ್ಸ್ಟಿರಿಯರ್ ಕಲರ್ ಆಯ್ಕೆಗಳಲ್ಲಿ ನೀಡುತ್ತದೆ
eಮ್ಯಾಕ್ಸ್ 7, ಅಟ್ಟೊ 3 ಮತ್ತು ಸೀಲ್ ನಂತರ ಬ್ರ್ಯಾಂಡ್‌ನ ನಾಲ್ಕನೇ ಇವಿ ಆಗಿ ಫೆಬ್ರವರಿ 17 ರಂದು ಭಾರತದಲ್ಲಿ BYD ಸೀಲಿಯನ್ 7 ಬಿಡುಗಡೆಯಾಗಲಿದೆ. ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಮೊದಲು ಪ್ರದರ್ಶಿಸಲಾದ ಈ ಎಲೆಕ್ಟ್ರಿಕ್ ಎಸ್‌ಯುವಿ ಈಗ ಡೀಲರ್‌ಶಿಪ್‌ಗಳನ್ನು ತಲುಪಿದೆ. ಭಾರತದಲ್ಲಿ ಹೊಸ BYD ಎಸ್‌ಯುವಿಯ ಲಭ್ಯವಿರುವ ಎಲ್ಲಾ ಬಣ್ಣಗಳ ಶೋರೂಮ್ ಚಿತ್ರಗಳು ನಮಗೆ ಸಿಕ್ಕಿವೆ. ಬನ್ನಿ, ಅವುಗಳನ್ನು ಒಂದೊಂದಾಗಿ ನೋಡೋಣ.
ಅಟ್ಲಾಂಟಿಸ್ ಗ್ರೇ
ಅಟ್ಲಾಂಟಿಸ್ ಗ್ರೇ ಬಣ್ಣವು ಸೀಲಿಯನ್ 7 ಗೆ ನೀಲಿ ಬಣ್ಣದ ಸಾಗರದಂತಹ ನೋಟವನ್ನು ನೀಡುತ್ತದೆ.
ಕಾಸ್ಮೊಸ್ ಬ್ಲಾಕ್
ಸೀಲಿಯನ್ 7 ಎಸ್‌ಯುವಿಗೆ ನೀಡಲಾಗುವ ಏಕೈಕ ಡಾರ್ಕ್ ಶೇಡ್ ಮತ್ತು ಸಾಮಾನ್ಯ ಕಪ್ಪು ಬಣ್ಣ ಇದಾಗಿದೆ.
ಅರೋರಾ ವೈಟ್
ಬಿಳಿ ಬಣ್ಣವು ಎಸ್‌ಯುವಿಯ ಎಲ್ಲಾ ಡಿಸೈನ್ ವಿವರಗಳನ್ನು ಎತ್ತಿ ತೋರಿಸುತ್ತದೆ, ಆ ಮೂಲಕ ಇದು ಅದಕ್ಕೆ ಸ್ವಚ್ಛವಾದ ನೋಟವನ್ನು ನೀಡುತ್ತದೆ.
ಶಾರ್ಕ್ ಗ್ರೇ
ಹೆಸರೇ ಸೂಚಿಸುವಂತೆ, ಈ ಬಣ್ಣವು ಶಾರ್ಕ್‌ನಂತೆಯೇ ಕಾಂಟ್ರಾಸ್ಟ್ ಅನ್ನು ಹೊಂದಿದೆ.
ನೀಡಲಾಗಿರುವ ಪವರ್‌ಟ್ರೇನ್‌ಗಳು
BYD ತನ್ನ ಸೀಲಿಯನ್ 7 ಎಸ್‌ಯುವಿಗೆ 82.5 kWh ಬ್ಯಾಟರಿ ಮತ್ತು ಎರಡು ಪವರ್ ಆಯ್ಕೆಗಳನ್ನು ಒದಗಿಸುತ್ತದೆ:
ವೇರಿಯಂಟ್ |
ಪ್ರೀಮಿಯಂ |
ಪರ್ಫಾರ್ಮೆನ್ಸ್ |
ಬ್ಯಾಟರಿ ಪ್ಯಾಕ್ |
82.5 ಕಿ.ವ್ಯಾಟ್ |
82.5 ಕಿ.ವ್ಯಾಟ್ |
ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
1 |
2 |
ಡ್ರೈವ್‌ಟ್ರೇನ್ |
RWD* |
AWD^ |
ಪವರ್ |
313 ಪಿಎಸ್ |
530 ಪಿಎಸ್ |
ಟಾರ್ಕ್ |
380 ಎನ್‌ಎಮ್ |
690 ಎನ್‌ಎಮ್ |
ಕ್ಲೇಮ್ ಮಾಡಿರುವ ರೇಂಜ್ |
567 ಕಿ.ಮೀ |
542 ಕಿ.ಮೀ |
ಫೀಚರ್‌ಗಳು ಮತ್ತು ಸುರಕ್ಷತೆ
ಭಾರತದಲ್ಲಿ ಬರಲಿರುವ ಸೀಲಿಯನ್‌ನಲ್ಲಿರುವ ಫೀಚರ್‌ಗಳಲ್ಲಿ 15.6-ಇಂಚಿನ ರೊಟೇಟೆಬಲ್ ಟಚ್‌ಸ್ಕ್ರೀನ್, 10.25-ಇಂಚಿನ ಡ್ರೈವರ್ ಡಿಸ್ಪ್ಲೇ, 12-ಸ್ಪೀಕರ್ ಸೌಂಡ್ ಸಿಸ್ಟಮ್, 8-ವೇ ಪವರ್ಡ್ ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಡ್ಯುಯಲ್-ಜೋನ್ ಎಸಿ ಸೇರಿವೆ. ಇದು ಪನೋರಮಿಕ್ ಗ್ಲಾಸ್ ರೂಫ್, ಆಟೋ-ಎಲ್ಇಡಿ ಹೆಡ್‌ಲೈಟ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳನ್ನು ಸಹ ಪಡೆಯುತ್ತದೆ. ಇದರ ಸುರಕ್ಷತಾ ಫೀಚರ್‌ಗಳಲ್ಲಿ 11 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಸಂಪೂರ್ಣ ಸೂಟ್ ಸೇರಿವೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
BYD ಸೀಲಿಯನ್ 7 ಬೆಲೆಯು ರೂ. 45 ಲಕ್ಷಗಳಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ ಮತ್ತು ಇದು ಹುಂಡೈ ಅಯೋನಿಕ್ 5 ಮತ್ತು ಕಿಯಾ EV6 ನಂತಹ ಜನಪ್ರಿಯ ಇವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ