ಜೂನ್ 30ರವರೆಗೆ ರಾಷ್ಟ್ರವ್ಯಾಪಿ ಮಾನ್ಸೂನ್ ಚೆಕ್‌ಅಪ್ ಸರ್ವಿಸ್ ಕ್ಯಾಂಪ್ ಪ್ರಾರಂಭಿಸಿದ ಹೋಂಡಾ
ಜೂನ್ 22, 2023 02:33 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಶಿಬಿರದ ಸಮಯದಲ್ಲಿ ಗ್ರಾಹಕರು ಆಯ್ದ ಭಾಗಗಳು ಮತ್ತು ಸೇವೆಗಳ ಮೇಲೆ ರಿಯಾಯಿತಿಗಳನ್ನು ಸಹ ಪಡೆಯಬಹುದು
-
ಮಾನ್ಸೂನ್ ಸರ್ವಿಸ್ ಕ್ಯಾಂಪ್ ಜೂನ್ 19 ರಿಂದ ಪ್ರಾರಂಭವಾಗಿದೆ.
-
ಕ್ಯಾಂಪ್ ಅವಧಿಯಲ್ಲಿ, ಹೋಂಡಾ ವೃತ್ತಿಪರರು ಕಾಂಪ್ಲಿಮೆಂಟರಿ 32-ಪಾಯಿಂಟ್ ಕಾರು ಚೆಕ್ಅಪ್ ಅನ್ನು ನಡೆಸುತ್ತಾರೆ.
-
ಈ ಅವಧಿಯಲ್ಲಿ ಹೋಂಡಾ ಕಾಂಪ್ಲಿಮೆಂಟರಿ ಟಾಪ್ ವಾಶ್ ಅನ್ನು ಸಹ ನೀಡುತ್ತಿದೆ.
-
ವೈಪರ್ ಬ್ಲೇಡ್, ಟೈರ್ ಮತ್ತು ರಬ್ಬರ್‌ನಂತಹ ಆಯ್ದ ಭಾಗಗಳು ಮತ್ತು ಹೆಡ್‌ಲ್ಯಾಂಪ್ ಕ್ಲೀನಿಂಗ್‌ನಂತಹ ಸೇವೆಗಳ ಮೇಲೆ ಕೊಡುಗೆಗಳು ಲಭ್ಯವಿವೆ.
-
ಗ್ರಾಹಕರಿಗೆ ಹೋಂಡಾ ಸಿಟಿಯ ಟೆಸ್ಟ್-ಡ್ರೈವ್ ಮಾಡಲು ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟಂಟ್ ಸಿಸ್ಟಂ (ADAS) ಫೀಚರ್‌ನ ಅನುಭವವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ.
ಹೋಂಡಾ ದೇಶಾದ್ಯಂತ ತನ್ನ ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ 2023 ರ ರಾಷ್ಟ್ರವ್ಯಾಪಿ ಮಾನ್ಸೂನ್ ಚೆಕ್‌ಅಪ್ ಸರ್ವಿಸ್ ಕ್ಯಾಂಪೇನ್ ಅನ್ನು ನಡೆಸುತ್ತಿದೆ. ಜೂನ್ 19ರಿಂದ ಈ ಸರ್ವಿಸ್ ಕ್ಯಾಂಪ್ ಆರಂಭವಾಗಿದ್ದು, ಈ ತಿಂಗಳ ಅಂತ್ಯದವರೆಗೆ ಆಯೋಜಿಸಲಾಗಿದೆ.
ಈ ಅವಧಿಯಲ್ಲಿ, ವೈಪರ್ ಬ್ಲೇಡ್/ರಬ್ಬರ್, ಟೈರ್ ಮತ್ತು ಬ್ಯಾಟರಿ ಮತ್ತು ಡೋರ್ ರಬ್ಬರ್ ಸೀಲ್‌ನಂತಹ ಆಯ್ದ ಭಾಗಗಳ ಮೇಲೆ ಈ ಕಾರು ತಯಾರಕರು ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಗ್ರಾಹಕರು ಹೆಡ್‌ಲ್ಯಾಂಪ್ ಕ್ಲೀನಿಂಗ್, ಫ್ರಂಟ್ ವಿಂಡ್‌ಶೀಲ್ಡ್ ಕ್ಲೀನಿಂಗ್ ಮತ್ತು ಅಂಡರ್‌ಬಾಡಿ ಆಂಟಿ-ರಸ್ಟ್ ಕೋಟಿಂಗ್‌ನಂತಹ ಸೇವೆಗಳಲ್ಲಿ ಗಣನೀಯವಾಗಿ ಉಳಿತಾಯ ಮಾಡಬಹುದು. ಹೋಂಡಾ ವೃತ್ತಿಪರರು 32-ಪಾಯಿಂಟ್ ಕಾರು ಚೆಕ್ಅಪ್ ಅನ್ನು ಉಚಿತವಾಗಿ ಮಾಡುತ್ತಾರೆ. ಈ ಅವಧಿಯಲ್ಲಿ ಟಾಪ್ ವಾಶ್ ಅನ್ನು ಕಾಂಪ್ಲಿಮೆಂಟರಿ ಸೇವೆಯಾಗಿ ನೀಡಲಾಗುತ್ತದೆ.
ಈ ಅವಧಿಯಲ್ಲಿ ಹೋಂಡಾ ಕಾರು ಮಾಲೀಕರು ತಮ್ಮ ವಾಹನದ ವಿನಿಮಯ ಮೌಲ್ಯವನ್ನು ಸಹ ಪಡೆದುಕೊಳ್ಳಬಹುದು. ಹಾಗೆಯೇ, ಕಂಪನಿಯು ತನ್ನ ಗ್ರಾಹಕರಿಗೆ ಹೋಂಡಾ ಸಿಟಿಯ ಟೆಸ್ಟ್ ಡ್ರೈವ್‌ನೊಂದಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನ ಅನುಭವವನ್ನು ಪಡೆದುಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ.
ಹೋಂಡಾ ಪ್ರಸ್ತುತ ಭಾರತದಲ್ಲಿ ಸಿಟಿ ಮತ್ತು ಅಮೇಝ್ ಎಂಬ ಎರಡು ಮಾಡೆಲ್‌ಗಳನ್ನು ಮಾರಾಟ ಮಾಡುತ್ತದೆ ಮತ್ತು ಶೀಘ್ರದಲ್ಲೇ ಕಂಪನಿಯು ಎಲಿವೇಟ್‌ನೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಲಿದೆ. ಹೋಂಡಾ ಎಲಿವೇಟ್ ವಿಶೇಷತೆ ಏನು ಎಂಬುದರ ಬಗ್ಗೆ ನೀವು ಇಲ್ಲಿ ಇನ್ನಷ್ಟು ಓದಬಹುದು.
ಕಾರು ತಯಾರಕರು ಬೀಡುಗಡೆ ಮಾಡಿರುವ ಸಂಪೂರ್ಣ ಪತ್ರಿಕಾ ಪ್ರಕಟಣೆ ಇಲ್ಲಿದೆ.
ಹೋಂಡಾ ಕಾರ್ಸ್ ಇಂಡಿಯಾ ರಾಷ್ಟ್ರದಾದ್ಯಂತ ಮಾನ್ಸೂನ್ ಚೆಕ್-ಅಪ್ ಕ್ಯಾಂಪ್ ಅನ್ನು ಆಯೋಜಿಸುತ್ತಿದೆ
ಹೊಸದಿಲ್ಲಿ, 19 ಜೂನ್ 2023: ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), 2023 ರ ಜೂನ್ 19 ರಿಂದ 30 ರವರೆಗೆ ದೇಶಾದ್ಯಂತ ತನ್ನ ಅಧಿಕೃತ ಡೀಲರ್‌ಶಿಪ್ ಫೆಸಿಲಿಟಿಗಳಲ್ಲಿ ತನ್ನ ಮಾನ್ಸೂನ್ ಸರ್ವಿಸ್ ಕ್ಯಾಂಪ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಕಂಪನಿಯ ಗ್ರಾಹಕ-ಕೇಂದ್ರಿತ ಉಪಕ್ರಮಗಳ ಭಾಗವಾಗಿ, ಕ್ಯಾಂಪ್ ಮಾಲೀಕರಿಗೆ ಉಚಿತ 32-ಪಾಯಿಂಟ್ ಕಾರು ಚೆಕ್ ಮತ್ತು ಟಾಪ್ ವಾಶ್ ಜೊತೆಗೆ ವೈಪರ್ ಬ್ಲೇಡ್/ರಬ್ಬರ್, ಟೈರ್ ಮತ್ತು ಬ್ಯಾಟರಿ, ಡೋರ್ ರಬ್ಬರ್ ಸೀಲ್ ಮತ್ತು ಹೆಡ್‌ಲ್ಯಾಂಪ್ ಕ್ಲೀನಿಂಗ್, ಫ್ರಂಟ್ ವಿಂಡ್‌ಶೀಲ್ಡ್ ಕ್ಲೀನಿಂಗ್ ಮತ್ತು ಅಂಡರ್‌ಬಾಡಿ ಆಂಟಿ ರಸ್ಟ್ ಕೋಟಿಂಗ್‌ನಂತಹ ಆಯ್ದ ಭಾಗಗಳಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತದೆ. ಇದರ ಜೊತೆಗೆ, ಮಾಲೀಕರು ತಮ್ಮ ವಾಹನದ ವಿನಿಮಯ ಮೌಲ್ಯವನ್ನು ಸಹ ಕಂಡುಕೊಳ್ಳಬಹುದು. ಉಪಕ್ರಮದ ಕುರಿತು ಮಾತನಾಡುತ್ತಾ, ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ಉಪಾಧ್ಯಕ್ಷರಾದ ಶ್ರೀ ಕುನಾಲ್ ಬೆಹ್ಲ್, “ನಮ್ಮ ಗ್ರಾಹಕರಿಗೆ ವರ್ಧಿತ ಅನುಭವವನ್ನು ನೀಡಲು ಬದ್ಧವಾಗಿರುವ ಕಂಪನಿಯಾಗಿ, ನಮ್ಮ ವ್ಯಾಪಕವಾದ ಡೀಲರ್ ನೆಟ್‌ವರ್ಕ್ ಈ ಮಾನ್ಸೂನ್ ಚೆಕ್‌ಅಪ್ ಕ್ಯಾಂಪ್ ಅನ್ನು ಆಯೋಜಿಸಲು ಸಜ್ಜಾಗಿದೆ. ತರಬೇತಿ ಪಡೆದ ವೃತ್ತಿಪರರ ಬೆಂಬಲದೊಂದಿಗೆ, ಈ ಉಪಕ್ರಮವು ಅಗತ್ಯವಿರುವ ಎಲ್ಲಾ ಚೆಕ್ಅಪ್‌ಗಳನ್ನುನಿರ್ವಹಿಸುತ್ತದೆ ಮತ್ತು ಮಾನ್ಸೂನ್ ಋತುವಿನ ಉದ್ದಕ್ಕೂ ಸುರಕ್ಷಿತ ಮತ್ತು ಜಂಜಟ-ಮುಕ್ತ ಚಾಲನೆಯ ಅನುಭವವನ್ನು ಖಚಿತಪಡಿಸುತ್ತದೆ. ಈ ಪ್ರಯೋಜನಗಳನ್ನು ಪಡೆಯಲು ನಮ್ಮ ಗ್ರಾಹಕರು ತಮ್ಮ ಹತ್ತಿರದ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡಲು ಪ್ರೋತ್ಸಾಹಿಸಲಾಗಿದೆ." ಸರ್ವಿಸ್ ಕ್ಯಾಂಪ್ ಅವಧಿಯಲ್ಲಿ, ಗ್ರಾಹಕರು ಹೋಂಡಾ ಸಿಟಿಯ ಟೆಸ್ಟ್ ಡ್ರೈವ್ ಮೂಲಕ ಹೋಂಡಾ ಸೆನ್ಸಿಂಗ್‌ನ ನವೀನ ADAS ತಂತ್ರಜ್ಞಾನದ ಅನುಭವವನ್ನೂ ಸಹ ಪಡೆದುಕೊಳ್ಳಬಹುದು.
ಇನ್ನಷ್ಟು ಓದಿ: ಸಿಟಿಯ ಆನ್ ರೋಡ್ ಬೆಲೆ