ಮುಂದಿನ ತಿಂಗಳಿನಿಂದ Honda ಕಾರುಗಳ ಬೆಲೆಯಲ್ಲೂ ಏರಿಕೆ
ಹೋಂಡಾ ಅಮೇಜ್ ಗಾಗಿ dipan ಮೂಲಕ ಮಾರ್ಚ್ 21, 2025 04:44 pm ರಂದು ಪ್ರಕಟಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಾರು ತಯಾರಕ ಕಂಪನಿಯು ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದು ದೃಢಪಡಿಸಿದ್ದರೂ, ಬೆಲೆ ಏರಿಕೆಯ ನಿಖರವಾದ ಶೇಕಡಾವಾರು ಅಥವಾ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಿಲ್ಲ
ನಾವು ಸಾಮಾನ್ಯವಾಗಿ ಪ್ರತಿ ಹೊಸ ಕ್ಯಾಲೆಂಡರ್ ಮತ್ತು ಹಣಕಾಸು ವರ್ಷದ ಆರಂಭದಲ್ಲಿ ಗಮನಿಸಿದಂತೆ, ಈ ವರ್ಷ ಹಲವಾರು ಕಾರು ತಯಾರಕರು 2025ರ ಜನವರಿಯಲ್ಲಿಯೇ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಈಗ, ಹೋಂಡಾ ಸೇರಿದಂತೆ ಕೆಲವು ಕಂಪನಿಗಳು ಈ ಬಾರಿ 2025ರ ಏಪ್ರಿಲ್‌ನಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆಯನ್ನು ಘೋಷಿಸಿವೆ. ಜಪಾನಿನ ಕಾರು ತಯಾರಕ ಕಂಪನಿಯು ತನ್ನ ಎಲ್ಲಾ ಮೊಡೆಲ್‌ಗಳಲ್ಲಿ ಬೆಲೆಗಳನ್ನು ಹೆಚ್ಚಿಸುವುದಾಗಿ ಹೇಳಿದೆ, ಆದರೆ ಹೆಚ್ಚಳದ ನಿಖರವಾದ ಮೊತ್ತ ಅಥವಾ ಶೇಕಡಾವಾರು ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಿಲ್ಲ.
ಬೆಲೆ ಏರಿಕೆಗೆ ಕಾರಣ
ಇತರ ಕಾರು ತಯಾರಕರಂತೆ ಹೋಂಡಾ ಕೂಡ, ಮೆಟೀರಿಯಲ್ ಮತ್ತು ಕಾರ್ಯಾಚರಣೆಗಳ ವೆಚ್ಚದಲ್ಲಿನ ಏರಿಕೆಯು ಮುಂಬರುವ ಬೆಲೆ ಏರಿಕೆಯ ಹಿಂದಿನ ಪ್ರಮುಖ ಪ್ರೇರಕ ಶಕ್ತಿಗಳಾಗಿವೆ ಎಂದು ಹೇಳಿದೆ.
ಪ್ರಸ್ತುತ ನೀಡಲಾಗುವ ಹೋಂಡಾ ಕಾರುಗಳು
ಹೋಂಡಾ ಪ್ರಸ್ತುತ ಭಾರತದಲ್ಲಿ ಐದು ಮೊಡೆಲ್‌ಗಳನ್ನು ನೀಡುತ್ತಿದೆ, ಅವುಗಳ ವಿವರವಾದ ಬೆಲೆಗಳು ಈ ಕೆಳಗಿನಂತಿವೆ:
ಮೊಡೆಲ್ |
ಪ್ರಸ್ತುತ ಬೆಲೆ ರೇಂಜ್ |
ಹೋಂಡಾ ಅಮೇಜ್ 2ನೇ ಜನರೇಷನ್ |
7.63 ಲಕ್ಷ ರೂ.ನಿಂದ 9.86 ಲಕ್ಷ ರೂ. |
ಹೋಂಡಾ ಅಮೇಜ್ 3ನೇ ಜನರೇಷನ್ |
8.10 ಲಕ್ಷ ರೂ.ನಿಂದ 11.20 ಲಕ್ಷ ರೂ. |
ಹೋಂಡಾ ಎಲಿವೇಟ್ |
11.91 ಲಕ್ಷ ರೂ.ನಿಂದ 16.73 ಲಕ್ಷ ರೂ. |
ಹೋಂಡಾ ಸಿಟಿ |
12.28 ಲಕ್ಷ ರೂ.ನಿಂದ 16.55 ಲಕ್ಷ ರೂ. |
ಹೋಂಡಾ ಸಿಟಿ ಹೈಬ್ರಿಡ್ |
20.75 ಲಕ್ಷ ರೂ. |
ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.
ಇದನ್ನೂ ಓದಿ: 2025ರ ಏಪ್ರಿಲ್‌ನಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ!
ಹೋಂಡಾದ ಮುಂದಿನ ಯೋಜನೆಗಳೇನು ?
2023ರಲ್ಲಿ, ಹೋಂಡಾ 2030ರ ವೇಳೆಗೆ ಭಾರತದಲ್ಲಿ 5 ಹೊಸ ಎಸ್‌ಯುವಿಗಳನ್ನು ತರುವುದಾಗಿ ಬಹಿರಂಗಪಡಿಸಿತ್ತು, ಅವುಗಳಲ್ಲಿ ಒಂದು ಎಲಿವೇಟ್ ಆಗಿತ್ತು. ಹೋಂಡಾ ಕಂಪನಿಯು ಎಲಿವೇಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯ ಕೆಲಸ ನಡೆಯುತ್ತಿದೆ ಎಂದು ದೃಢಪಡಿಸಿದ್ದು, 2026 ರ ವೇಳೆಗೆ ಅದು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ