ಹೋಂಡಾ WR-V ಎಕ್ಸ್ಕ್ಲೂಸಿವ್ ಎಡಿಷನ್ ಬಿಡುಗಡೆ : ಬೆಲೆ Rs 9.35 Lakh ಯಿಂದ ಆರಂಭ
ಮೇ 03, 2019 10:29 am ರಂದು sonny ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಹೋಂಡಾ ದ ಕ್ರಾಸ್ಒವರ್ SUVನಲ್ಲಿ ಬಹಳಷ್ಟು ಕಾಸ್ಮೆಟಿಕ್ ಅಸ್ಸೇಸ್ಸೋರಿಸ್ ಕೊಡಲಾಗಿದೆ.
- WR-V ಎಕ್ಸ್ಕ್ಲೂಸಿವ್ ಎಡಿಷನ್ VX ವೇರಿಯೆಂಟ್ ಮೇಲೆ ಆಧಾರಿತವಾಗಿದೆ: Rs 18,000 ಹೆಚ್ಚು ಬೆಲೆ ಆಗಿತ್ತದೆ
- ಇದರಲ್ಲಿ ಹೊಸ ಬಾಡಿ ಗ್ರಾಫಿಕ್ಸ್, ಕಪ್ಪು ಸೀಟ್ ಕವರ್, ಮತ್ತು ಕಪ್ಪು ಟೈಲ್ ಗೇಟ್ ಸ್ಪೋಇಲೆರ್ ಕೊಡಲಾಗಿದೆ
- VX ವೇರಿಯೆಂಟ್ ಟಾಪ್ ಸ್ಪೆಕ್ WR-Vಆಗಿದೆ, ಹಾಗು ಫೀಚರ್ ಗಳಾದ ಆಟೋ AC , ರೇರ್ ಕ್ಯಾಮೆರಾ ಹಾಗು ಸನ್ ರೂಫ್ ಇದೆ
ಹೋಂಡಾ ಮತ್ತೊಂದು ಸ್ಪೆಷಲ್ ಎಡೀಷನ್ WR-V ಅನ್ನು ಲಾಂಚ್ ಮಾಡಿದೆ.ಮತ್ತು ಇದನ್ನು ವಿಶಿಷ್ಟವಾಗಿ ಕಾಣುವಂತೆ ಮಾಡಲು ಇದರಲ್ಲಿ ಬಹಳಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ WR-V ಎಕ್ಸ್ಕ್ಲೂಸಿವ್ ಎಡಿಷನ್ ಬೆಲೆ Rs 9.35 lakh (ಪೆಟ್ರೋಲ್ ) ಮತ್ತು Rs 10.48 lakh (ಡೀಸೆಲ್ ) ಆಗುತ್ತದೆ. ಹಾಗಾಗಿ Rs 18,000 ಟಾಪ್ ಸ್ಪೆಕ್ VX ವೇರಿಯೆಂಟ್ ಗಿಂತಲೂ ಹೆಚ್ಚಿಗೆ ಕೊಡಬೇಕಾಗುತ್ತದೆ.
WR-V ಎಕ್ಸ್ಕ್ಲೂಸಿವ್ ಎಡಿಷನ್ ಪ್ಯಾಕ್ ನಲ್ಲಿ ಹೊಸ ಕಪ್ಪು ಟೈಲ್ ಗೇಟ್ ಸ್ಪೋಇಲೆರ್ LED ಸ್ಟಾಪ್ ಲೈಟ್ ನೊಂದಿಗೆ, ಸೈಡ್ ಸಿಲ್, ಸೈಡ್ ಸಿಲ್ ಇಲ್ಲ್ಯೂಮಿನಾಶನ್ ಗಾರ್ನಿಶ್, ಬಾಡಿ ಗ್ರಾಫಿಕ್ಸ್, ಮತ್ತು ‘Exclusive Edition’ ಬ್ಯಾಡ್ಜ್ ಹೊಂದಿದೆ. WR-V ಎಕ್ಸ್ಕ್ಲೂಸಿವ್ ಎಡಿಷನ್ ಎರೆಡು ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ: ರೆಡಿಯೆಂಟ್ ರೆಡ್ ಮೆಟಾಲಿಕ್, ಮತ್ತು ಆರ್ಕಿಡ್ ವೈಟ್ ಪರ್ಲ್ . ಹೋಂಡಾ ಬಾಡಿ ಕಲರ್ ಟೈಲ್ ಗೇಟ್ ಸ್ಪೋಇಲೆರ್ ಮತ್ತು ಸೀಟ್ ಕವರ್ ಗಳನ್ನೂWR-V ಯಲ್ಲಿ ಅಸ್ಸೇಸ್ಸೋರಿ ಯಾಗಿ ಕೊಡುತ್ತದೆ. ನೀವು ಎಕ್ಸ್ಕ್ಲೂಸಿವ್ ಎಡಿಷನ್ ಅನ್ನು ಈ ಎರೆಡು ವಿಷಯಗಳಿಗೆ ಕೊಳ್ಳಬೇಕೆಂದು ಚಿಂತಿಸುತ್ತಿದರೆ , ನೀವು ಕೊಳ್ಳಬಹುದು. ನೀವು ಇವನ್ನು ಕಾರ್ ಅನ್ನು ಕೊಂಡಿದ್ದು ಆದ ನಂತರವೂ ಸಹ ಅಸ್ಸೇಸೋರ್ಯ್ ಆಗಿ ತೆಗೆದುಕೊಳ್ಳಬಹುದು. ಹಾಗೆ ಮಾಡಿದಾಗ ನಿಮಗೆ ಬೇಕಾದ ಬಣ್ಣದ WR-V ಯನ್ನು ಸಹ ನೀವು ಪಡೆಯಬಹುದು.
WR-V ಎಕ್ಸ್ಕ್ಲೂಸಿವ್ ಎಡಿಷನ್ ನಲ್ಲಿ ಟಾಪ್ ಸ್ಪೆಕ್ VX ವೇರಿಯೆಂಟ್ ನಲ್ಲಿ ಕೊಟ್ಟಿರುವ ಫೀಚರ್ ಗಳನ್ನೂ ಕೊಡಲಾಗಿದೆ. ಇವುಗಳಲ್ಲಿ ಎಲೆಕ್ಟ್ರಿಕ್ ಸನ್ ರೂಫ್, ಫ್ರಂಟ್ ಫಾಗ್ ಲ್ಯಾಂಪ್, ಅಲಾಯ್ ವೀಲ್, 7-inch ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯೂನಿಟ್ ಮಿರರ್ ಲಿಂಕ್ , ಆಟೋ AC , ಹಾಗು ರೇರ್ ಪಾರ್ಕಿಂಗ್ ಕ್ಯಾಮೆರಾ ಸಹ ಇದೆ. WR-V ಯು ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಬರುತ್ತದೆ 1.2-litre ಪೆಟ್ರೋಲ್ ಎಂಜಿನ್, 1.5-litre ಡೀಸೆಲ್ ಎಂಜಿನ್, ಎವೆರೆಡನ್ನು 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಗೆ ಅಳವಡಿಸಲಾಗಿದೆ. ಇದರಲ್ಲಿ ಸದ್ಯಕ್ಕೆ ಆಟೋಮ್ಯಾಟಿಕ್ ವೇರಿಯೆಂಟ್ ಇಲ್ಲ.
ಹೋಂಡಾ ಮತ್ತೊಂದು ಸ್ಪೆಷಲ್ ಎಡಿಷನ್ ಕ್ರಾಸ್ಒವರ್ ವೇರಿಯೆಂಟ್ WR-V Alive Edition ಸಹ ಹೊರತಂದಿದೆ. ಇದು S ವೇರಿಯೆಂಟ್ ಮೇಲೆ ಆಧಾರಿತವಾಗಿದೆ ಆದರೆ ಇದರಲ್ಲಿ ಹೆಚ್ಚಿನ ಫೀಚರ್ ಗಳಾದ ಅಲಾಯ್ ವೀಲ್, ರೇರ್ ಪಾರ್ಕಿಂಗ್ ಸೆನ್ಸರ್, ಕಪ್ಪು ಲೆಥರ್ ಮೇಲ್ಪದರ ‘Ailve’ ಲೋಗೋ ದೊಂದಿಗೆ ಮತ್ತು IRVM ರೇರ್ ಕ್ಯಾಮೆರಾ ಡಿಸ್ಪ್ಲೇ ಒಂದಿಗೆ. ಅಲೈವ್ ಎಡಿಷನ್ ಬೆಲೆ Rs 8.08 lakh (ಪೆಟ್ರೋಲ್) ಮತ್ತು Rs 9.16 lakh (ಡೀಸೆಲ್ ).
WR-V ಯು ಸಬ್ -4m ಕ್ರಾಸ್ಒವರ್ ಗಳು ಮತ್ತು SUV ಗಳಾದ ಫೋರ್ಡ್ ಫ್ರೀಸ್ಟೈಲ್ , ಫೋರ್ಡ್ ಎಸ್ವ್ಸ್ಪೋರ್ಟ್, ಟಾಟಾ ನೆಕ್ಸಾನ್, ಮತ್ತು ಇಷ್ಟರಲ್ಲೇ ಬಿಡುಗಡೆಯಾಗುವ ಮಹಿಂದ್ರಾ XUV300. WR-V ಬೆಲೆ Rs 7.84 lakh ( ಎಲ್ಲ ಬೆಲೆಗಳು ಎಕ್ಸ್ -ಶೋ ರೂಮ್ ದೆಹಲಿ) ಇಂದ ಪ್ರಾರಂಭ ವಾಗುತ್ತದೆ.
Read More on : Honda WR-V diesel