ಹ್ಯುಂಡೈ ಕ್ರೆಟ್ರಾ ಮತ್ತು ಅಲ್ಕಾಝಾರ್ ಅಡ್ವೆಂಚರ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ, ರೂ 15.17 ಲಕ್ಷದಿಂದ ಬೆಲೆಗಳು ಪ್ರಾರಂಭ
ಹುಂಡೈ ಕ್ರೆಟಾ 2020-2024 ಗಾಗಿ rohit ಮೂಲಕ ಆಗಸ್ಟ್ 09, 2023 06:43 am ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಈ ಎರಡು ಹೊಸ ಆವೃತ್ತಿಗಳು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್‌ಟರ್‌ನಿಂದ 'ರೇಂಜರ್ ಖಾಕಿ' ಬಣ್ಣದ ಆಯ್ಕೆಯನ್ನು ಪಡೆಯುತ್ತವೆ
-
ವಿಶೇಷ ಆವೃತ್ತಿಯ ಎರಡೂ SUVಗಳಿಗೆ ರೂ 36,000 ಪ್ರೀಮಿಯಂ ಬೆಲೆಯನ್ನು ನಿಗದಿಪಡಿಸಲಾಗಿದೆ.
-
ಇದು ಅನುಕ್ರಮವಾಗಿ ಕ್ರೆಟಾದ ಮಿಡ್-ಸ್ಪೆಕ್ ಮತ್ತು ಟಾಪ್-ಸ್ಪೆಕ್ SX ಹಾಗೂ SX(O)ಗಳನ್ನು ಆಧರಿಸಿವೆ.
-
ಹ್ಯುಂಡೈ ಇದನ್ನು ಅಲ್ಕಾಝಾರ್‌ನ ಮಿಡ್-ಸ್ಪೆಕ್ ಪ್ಲಾಟಿನಮ್ ಮತ್ತು ಟಾಪ್-ಸ್ಪೆಕ್ ಸಿಗ್ನೇಚರ್(O) ಟ್ರಿಮ್‌ಗಳಲ್ಲಿ ನೀಡುತ್ತಿದೆ.
-
ಅವುಗಳ ಬೆಲೆಗಳು ರೂ 15-17 ಲಕ್ಷದಿಂದ ರೂ.21.24 ಲಕ್ಷದ (ಎಕ್ಸ್-ಶೋರೂಂ) ತನಕ ಇವೆ.
-
ಕಾಸ್ಮೆಟಿಕ್ ರಿವಿಶನ್‌ಗಳು, ಬ್ಲ್ಯಾಕ್ ORVMಗಳು ಮತ್ತು ಲೋಗೋಗಳು ಹಾಗೂ ‘ಅಡ್ವೆಂಚರ್’ ಬ್ಯಾಡ್ಜ್‌ಗಳನ್ನು ಒಳಗೊಂಡಿದೆ.
-
ಇಂಟೀರಿಯರ್ ಬದಲಾವಣೆಗಳು ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಮತ್ತು ಗ್ರೀನ್ ಇನ್‌ಸರ್ಟ್‌ಗಳು ಮತ್ತು ಹೊಸ ಸೀಟ್ ಅಪ್‌ಹೋಲ್ಸ್‌ಟೆರಿಗಳನ್ನು ಒಳಗೊಂಡಿದೆ.
-
ಏಕೈಕ ಫೀಚರ್ ಸೇರ್ಪಡೆಯೆಂದರೆ ಎಕ್ಸ್‌ಟರ್‌ನಿಂದ ಪಡೆದ ಡ್ಯುಯಲ್-ಕ್ಯಾಮರಾ ಡ್ಯಾಶ್‌ಕ್ಯಾಮ್.
-
ಕ್ರೆಟಾದ ವಿಶೇಷ ಆವೃತ್ತಿಯು ಪೆಟ್ರೋಲ್ ಇಂಜಿನ್‌ನೊಂದಿಗೆ ಮಾತ್ರ ದೊರೆಯುತ್ತದೆ ಮತ್ತು ಅಲ್ಕಾಝಾರ್‌ನ ವಿಶೇಷ ಆವೃತ್ತಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳೆರಡರಲ್ಲಿಯೂ ಪಡೆಯಬಹುದು.
ಹ್ಯುಂಡೈ ಕ್ರೆಟಾ ಮತ್ತು ಹ್ಯುಂಡೈ ಅಲ್ಕಾಝಾರ್ ಎರಡೂ ಈಗಷ್ಟೆ ಹೊಸ ‘ಅಡ್ವೆಂಚರ್ ಎಡಿಷನ್’ ಅನ್ನು ಪಡೆದಿವೆ. ಮೊದಲನೆಯದಕ್ಕೆ ಇದು ಎರಡನೆಯ ವಿಶೇಷ ಎಡಿಷನ್ ಆಗಿದ್ದರೆ, ಅಲ್ಕಾಝಾರ್ ಇದನ್ನು ಮೊತ್ತ ಮೊದಲ ಬಾರಿಗೆ ಪಡೆಯುತ್ತಿದೆ. ಕ್ರೆಟಾದ ಅಡ್ವೆಂಚರ್ ಎಡಿಷನ್ ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿದ್ದು, 3-ಸಾಲಿನ ಹ್ಯುಂಡೈ SUV ಇದನ್ನು ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೆರಡರಲ್ಲಿಯೂ ನೀಡುತ್ತದೆ.
ವೇರಿಯೆಂಟ್‌ವಾರು ಬೆಲೆಗಳು


ವೇರಿಯೆಂಟ್ |
ಸಾಮಾನ್ಯ ಬೆಲೆ |
ವಿಶೇಷ ಎಡಿಷನ್ ಬೆಲೆ |
ವ್ಯತ್ಯಾಸ |
ಕ್ರೆಟಾ |
|
|
|
SX MT |
ರೂ 14.81 ಲಕ್ಷ |
ರೂ 15.17 ಲಕ್ಷ |
+Rs 36,000 |
SX(O) CVT |
ರೂ 17.53 ಲಕ್ಷ |
ರೂ 17.89 ಲಕ್ಷ |
+ ರೂ 36,000 |
ಅಲ್ಕಾಝಾರ್ |
|
|
|
ಪ್ಲಾಟಿನಮ್ 7-ಸೀಟರ್ MT |
ರೂ 18.68 ಲಕ್ಷ |
ರೂ 19.04 ಲಕ್ಷ |
+ ರೂ 36,000 |
ಸಿಗ್ನೇಚರ್ (O) 7-ಸೀಟರ್ ಟರ್ಬೋ DCT |
ರೂ 20.28 ಲಕ್ಷ |
ರೂ 20.64 ಲಕ್ಷ |
+ ರೂ 36,000 |
ಪ್ಲಾಟಿನಮ್ 7- ಸೀಟರ್ ಡೀಸೆಲ್ MT |
ರೂ 19.64 ಲಕ್ಷ |
ರೂ 20 ಲಕ್ಷ |
+ ರೂ 36,000 |
ಸಿಗ್ನೇಚರ್ (O) 7- ಸೀಟರ್ ಡೀಸೆಲ್ AT |
ರೂ 20.88 ಲಕ್ಷ |
ರೂ 21.24 ಲಕ್ಷ |
+ ರೂ 36,000 |
-
ಮಾತ್ರವಲ್ಲ, ಹ್ಯುಂಡೈಯು ಅಲ್ಕಾಝಾರ್‌ನ ಟಾಪ್-ಸ್ಪೆಕ್ ಸಿಗ್ನೇಚರ್ (O) ಟ್ರಿಮ್ ಅನ್ನು 6-ಸೀಟರ್ ರೂಪದಲ್ಲಿ ವಿಶೇಷ ಎಡಿಷನ್‌ನೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳೆರಡರಲ್ಲಿಯೂ ನೀಡುತ್ತಿದ್ದು, ಇದನ್ನು 7-ಸೀಟರ್ ಆವೃತ್ತಿಯ ಬೆಲೆಯಲ್ಲೇ ಖರೀದಿಸಬಹುದು.
-
ಎರಡೂ SUVಗಳ ಹೊಸ ‘ಅಡ್ವೆಂಚರ್ ಎಡಿಷನ್’ ಎಲ್ಲಾದಕ್ಕೂ ಅನ್ವಯವಾಗುವಂತೆ ರೂ 36,000ಗಳಷ್ಟು ದುಬಾರಿಯಾಗಿದೆ.
ವಿಭಿನ್ನತೆಗಳ ನೋಟ


ವಿಶೇಷ ಎಡಿಷನ್‌ನೊಂದಿಗೆ ಈ ಕಾರುತಯಾರಕ ಸಂಸ್ಥೆಯು ಎರಡೂ ಮಾಡೆಲ್‌ಗಳಲ್ಲಿಯೂ ಎಕ್ಸ್‌ಟರ್‌ನ ರೇಂಜರ್ ಖಾಕಿಯ ಶೇಡ್‌ಗಳನ್ನು ಪರಿಚಯಿಸಿದೆ. ಕ್ರೆಟಾ ಮತ್ತು ಅಲ್ಕಾಝಾರ್‌ನ ಅಡ್ವೆಂಚರ್ ಎಡಿಷನ್‌ಗಳೆರಡೂ ಸಂಪೂರ್ಣ ಬ್ಲ್ಯಾಕ್ ಗ್ರಿಲ್ ಮತ್ತು ಹ್ಯುಂಡೈ ಲೋಗೋಗಳು (ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆಗಳಲ್ಲಿ), ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು ಮತ್ತು ರೆಡ್ ಬ್ರೇಕ್ ಕ್ಯಾಲಿಪರ್‌ಗಳು (ಕ್ರೆಟಾದಲ್ಲಿ 17-ಇಂಚು ಮತ್ತು ಅಲ್ಲಾಝಾರ್‌ನಲ್ಲಿ 18-ಇಂಚು), ಬ್ಲ್ಯಾಕ್ ORVMಗಳು ಮತ್ತು ಬ್ಲ್ಯಾಕ್ ಡೋರ್ ಕ್ಲಾಡಿಂಗ್ ಮುಂತಾದ ಕೆಲವು ಸಾಮಾನ್ಯ ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ಹಂಚಿಕೊಂಡಿವೆ. ಇತರ ಎಕ್ಸ್‌ಟೀರಿಯರ್ ಅಪ್‌ಡೇಟ್‌ಗಳು ಮುಂಭಾಗದ ಫೆಂಡರ್‌ಗಳಲ್ಲಿ ‘ಅಡ್ವೆಂಚರ್’ ಬ್ಯಾಡ್ಜ್‌ಗಳು, ಬ್ಲ್ಯಾಕ್ ರೂಫ್‌ರೇಲ್‌ಗಳು ಮತ್ತು ಬ್ಲ್ಯಾಕ್ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿವೆ.
ಟಾ ಅಡ್ವೆಂಚರ್ ಎಡಿಷನ್, ಅಬೇಸ್ ಬ್ಲ್ಯಾಕ್, ಟೈಟಾನ್ ಗ್ರೇ, ಅಟ್ಲಾಸ್ ವೈಟ್ ಮತ್ತು ರೇಂಜರ್ ಖಾಕಿ ಎಂಬ ನಾಲ್ಕು ಮೋನೋಟೋನ್ ಕಲರ್‌ಗಳಲ್ಲಿ ಲಭ್ಯವಿದೆ, ಅಲ್ಲದೇ ಕೊನೆಯ ಎರಡು ಶೇಡ್‌ಗಳೊಂದಿಗೆ ಐಚ್ಛಿಕ ಬ್ಲ್ಯಾಕ್ ರೂಫ್ ಅನ್ನೂ ಪಡೆದಿದೆ. ಇನ್ನೊಂದೆಡೆ, ಅಲ್ಕಾಝಾರ್‌ನ ವಿಶೇಷ ಎಡಿಷನ್ ಅನ್ನು ಕ್ರೆಟಾದ ಮೋನೋಟೋನ್ ಪೈಂಟ್ ಆಯ್ಕೆಗಳಲ್ಲಿಯೂ ನೀಡಲಾಗುತ್ತಿದೆ, ಆದಾಗ್ಯೂ, ಎಲ್ಲಾ ಶೇಡ್‌ಗಳಲ್ಲಿ ಬ್ಲ್ಯಾಕ್ ರೂಫ್ ಆಯ್ಕೆಯನ್ನೂ ನೀಡಲಾಗುತ್ತಿದೆ.
ಇದನ್ನೂ ಓದಿ: ಇಲ್ಲಿವೆ ಜುಲೈ 2023 ರಲ್ಲಿ ಮಾರಾಟ ಮಾಡಲಾದ ಟಾಪ್ 10 ಕಾರುಗಳ ನೋಟ
ಕ್ಯಾಬಿನ್‌ನಲ್ಲೂ ಬ್ಲ್ಯಾಕ್ ಡ್ಯಾಶ್‌ಬೋರ್ಡ್
ಎರಡೂ SUVಗಳು ಎಕ್ಸ್‌ಟರ್‌ನಲ್ಲಿರುವಂತೆ ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಥೀಮ್ ಮತ್ತು ಸೇಜ್ ಗ್ರೀನ್ ಇನ್‌ಸರ್ಟ್‌ಗಳೊಂದಿಗೆ ಬರುತ್ತವೆ. ಹ್ಯುಂಡೈ ಇವುಗಳಿಗೆ ಹೊಸ ಬ್ಲ್ಯಾಕ್ ಮತ್ತು ಗ್ರೀನ್ ಸೀಟ್ ಅಪ್‌ಹೋಲ್ಸ್‌ಟೆರಿಯನ್ನೂ ನೀಡಿದ್ದು, ಇದನ್ನು “ಪರ್ವತಗಳ ಚಿತ್ರ” ಎಂದು ಕರೆದಿದೆ. ಇತರ ಇಂಟೀರಿಯರ್ ಪರಿಷ್ಕರಣೆಗಳೆಂದರೆ, 3D ಫ್ಲೋರ್ ಮ್ಯಾಟ್‌ಗಳು ಮತ್ತು ಮೆಟಲ್ ಪೆಡಲ್‌ಗಳು.
ಫೀಚರ್‌ಗಳ ವಿಷಯಕ್ಕೆ ಬಂದರೆ, ಎರಡು ಹ್ಯುಂಡೈ SUVಗಳ ಸಲಕರಣೆಗಳ ಪಟ್ಟಿಯಲ್ಲಿ ಡ್ಯುಯಲ್-ಕ್ಯಾಮರಾ ಡ್ಯಾಶ್‌ಕ್ಯಾಮ್ ಮಾತ್ರ ಹೆಚ್ಚುವರಿ ಸೇರ್ಪಡೆಯಾಗಿದೆ. ಇದರ ಹೊರತಾಗಿ ಕ್ರೆಟಾ ಅಡ್ವೆಂಚರ್ ಎಡಿಷನ್‌ನ ಉಳಿದೆಲ್ಲಾ ಫೀಚರ್‌ಗಳು ಅದರ ಅನುಕ್ರಮ ವೇರಿಯೆಂಟ್‌ಗಳಂತೆಯೇ ಇದ್ದು, 10.25-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವಿಹಂಗಮ ಸನ್‌ರೂಫ್ ಮತ್ತು ವಾತಾಯನದ ಮುಂಭಾಗದ ಸೀಟುಗಳನ್ನು ಒಳಗೊಂಡಿದೆ. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್(VSM), ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಒಳಗೊಂಡಿದೆ.
ಅಲ್ಕಾಝಾರ್‌ನ ವಿಶೇಷ ಎಡಿಷನ್, ಕ್ರೆಟಾಗೆ ಹೋಲಿಸಿದರೆ,ತನ್ನ ಟಾಪ್ ಸ್ಪೆಸಿಫಿಕೇಶನ್‌ನಲ್ಲಿ 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮರಾವನ್ನು ಪಡೆದಿದೆ.
ಆಫರ್‌ನಲ್ಲಿರುವ ಇಂಜಿನ್-ಗೇರ್‌ಬಾಕ್ಸ್ ಆಯ್ಕೆಗಳು
ಪ್ರಾರಂಭದಲ್ಲಿ ಉಲ್ಲೇಖಿಸಿದಂತೆ, ಕ್ರೆಟಾದ ವಿಶೇಷ ಎಡಿಷನ್ ಪೆಟ್ರೋಲ್ ಇಂಜಿನ್ ಆಯ್ಕೆಗೆ ಮಾತ್ರ ಸೀಮಿತವಾಗಿದ್ದರೆ, ಅಲ್ಕಾಝಾರ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳೆರಡರಲ್ಲಿಯೂ ಪಡೆಯಬಹುದು. ಇತರ ತಾಂತ್ರಿಕ ವಿವರಗಳು ಈ ಕೆಳಗಿನಂತಿವೆ:
ನಿರ್ದಿಷ್ಟತೆಗಳು |
ಕ್ರೆಟಾ 1.5-ಲೀಟರ್ ಪೆಟ್ರೋಲ್ |
ಅಲ್ಕಾಝಾ 1.5-ಲೀಟರ್ ಟರ್ಬೋ ಪೆಟ್ರೋಲ್ |
ಅಲ್ಕಾಝಾರ್ 1.5-ಲೀಟರ್ ಡೀಸೆಲ್ |
ಪವರ್ |
115PS |
160PS |
116PS |
ಟಾರ್ಕ್ |
144Nm |
253Nm |
250Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, CVT |
6- ಸ್ಪೀಡ್ MT, 7- ಸ್ಪೀಡ್ DCT |
6- ಸ್ಪೀಡ್ MT, 6- ಸ್ಪೀಡ್ AT |
ಇದನ್ನೂ ಪರಿಶೀಲಿಸಿ: ಹ್ಯುಂಡೈ ಎಕ್ಸ್‌ಟರ್ vs ಟಾಟಾ ಪಂಚ್: ಚಿತ್ರಗಳಲ್ಲಿ ಹೋಲಿಕೆ
ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾದ ಅಡ್ವೆಂಚರ್ ಎಡಿಷನ್‌ನ ನೇರ ಪ್ರತಿಸ್ಪರ್ಧಿಗಳು ಸ್ಕೋಡಾ ಕುಶಕ್ ಮತ್ತು ಫೋಕ್ಸ್‌ವಾಗನ್ ಟೈಗನ್‌ನ ಮ್ಯಾಟ್ ಎಡಿಷನ್‌ಗಳಾದರೆ, ಅಲ್ಕಾಝಾರ್ ವಿಶೇಷ ಎಡಿಷನ್ ಟಾಟಾ ಸಫಾರಿಯ ರೆಡ್ ಡಾರ್ಕ್ ಮತ್ತು ಅಡ್ವೆಂಚರ್ ಎಡಿಷನ್‌ಗಳಿಗೆ ಪೈಪೋಟಿ ನೀಡುತ್ತದೆ.
ಇನ್ನಷ್ಟು ಓದಿ : ಕ್ರೆಟಾದ ಆನ್‌ರೋಡ್ ಬೆಲೆ