• English
    • Login / Register

    ಹುಂಡೈ ಕ್ರೆಟಾ ಫೇಸ್ ಲಿಫ್ಟ್: 5 ವಿಷಯಗಳು ನಮಗೆ ಇಷ್ಟವಾದದ್ದು

    ಹುಂಡೈ ಕ್ರೆಟಾ 2015-2020 ಗಾಗಿ raunak ಮೂಲಕ ಜೂನ್ 14, 2019 11:00 am ರಂದು ಪ್ರಕಟಿಸಲಾಗಿದೆ

    • 49 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹುಂಡೈ ಕ್ರೆಟಾ 2018 ಒಂದು ಉತ್ತಮ ಪ್ಯಾಕೇಜ್ ಆಗಿ ಮಾರ್ಪಟ್ಟಿದೆ, ಹಿಂದೆ ಇದ್ದುದಕ್ಕಿಂತ.

    Hyundai Creta

    ಹುಂಡೈ ಒಂದು ಮಧ್ಯಂತರ ಮತ್ತು ರಿಫ್ರೆಶ್ ಆದ ಕ್ರೆಟಾ ವಾನ್ನಿ ಇತ್ತೀಚಿಗೆ ಬಿಡುಗಡೆ ಮಾಡಿದೆ, ಪ್ರಾರಂಭದ ಬೆಲೆ Rs 9.43 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ಸೌತ್ ಕೊರಿಯಾ ದ ಆಟೋ ಮೇಕರ್ ಕೆಲವು ಬದಲಾವಣೆಯನ್ನು ಮಾತ್ರ ಮಾಡಿದೆ ಕ್ರೆಟಾ ವನ್ನು ಹಿಂದಿನದಕ್ಕಿಂತ ಉತ್ತಮ ಪ್ಯಾಕೇಜ್ ಮಾಡಲು. ಮತ್ತು ಅದರಿಂದ ಉತ್ತಮ ಫಲಿತಾಂಶ ಸಹ ದೊರೆತಿದೆ ಕ್ರೆಟಾ ದ ಫೇಸ್ ಲಿಫ್ಟ್ ನ ಬುಕಿಂಗ್  ಗಳು 14K  ಯನ್ನು ಕೇವಲ 10 ದಿನಗಳಲ್ಲಿ ದಾಟಿದೆ.

    Hyundai Creta

    ನಮಗೆ  ಹುಂಡೈ ಕ್ರೆಟಾ 2018 ನಲ್ಲಿ  ಇಷ್ಟವಾದ ಐದು ವಿಷಯಗಳು ಕೆಳಗಿನಂತಿವೆ.

    ಉತ್ತಮ ನೋಟವನ್ನು ಹೊಂದಿರುವುದು ಮುಂದುವರೆದಿದೆ!

    Hyundai Creta

    ಹುಂಡೈ ನ ಹೊಸ ಕ್ಯಾಸ್ಕೇಡಿಂಗ್ ಗ್ರಿಲ್ ಕ್ರೆಟಾ ದ ಮುಖ ದ ಮೇಲಿದ್ದ ಕೆಲವು ಸುಕ್ಕುಗಳನ್ನು ತೆಗೆಯಲಾಗಿದೆ. ಅದರ ಅಳತೆಗಳು ಆಕರ್ಷಕವಾಗಿದೆ. ಹೊಸ ಡಿಸೈನ್ ನ ಬಂಪರ್ ನಲ್ಲಿ ಫೀಚರ್ ಗಳಾದ ಡೇ ಟೈಮ್ ರನ್ನಿಂಗ್  LED ಗಳು ಮತ್ತು ದೊಡ್ಡ ಸ್ಕಿಡ್ ಪ್ಲೇಟ್ ಕೊಡಲಾಗಿದೆ, ಮತ್ತು ಕ್ರೆಟಾ ಈಗ ನೋಡಲು ಅಗಲವಾಗಿದೆ ಮತ್ತು ಹಿಂದಿಗಿಂತಲೂ ಚೆನ್ನಾಗಿದೆ ಎನ್ನಬಹುದು.

    Hyundai Creta

    ಕ್ರೆಟಾ ದ ಮುಂದಿನ ಗ್ರಿಲ್ ನಲ್ಲಿ ಬಹಳಷ್ಟು ಬದಲಾವಣೆಗಳು ಮಾಡಲಾಗಿದೆ, ಸೈಡ್ ಮತ್ತು ಹಿಂದಿನ ಭಾಗಗಳೂ ಸಹ ಸ್ವಲ್ಪ ಬದಲಾವಣೆ ಪಡೆದಿವೆ, ಹೊಸತಾಗಿ ಕಾಣಲು.

     

    ಹೆಚ್ಚು ಪ್ರೀಮಿಯಂ ಪ್ಯಾಕೇಜ್ ಹೊಂದಿದೆ.

    Hyundai Creta

    ಫೇಸ್ ಲಿಫ್ಟ್ ಗಿಂತಲೂ ಹಿಂದಿನ ಕ್ರೆಟಾ ಒಂದು ಹೆಚ್ಚು ಫೀಚರ್ ಗಳನ್ನು ಹೊಂದಿದ SUV ವಿಭಾಗಕ್ಕೆ ಸೇರಿಸಬಹುದಿತ್ತು. ಆದರೆ, ಫೇಸ್ ಲಿಫ್ಟ್ ಒಂದಿಗೆ ಹುಂಡೈ ಸ್ಪರ್ಧೆಯನ್ನು ಮತ್ತಷ್ಟು ಕಠಿಣಗೊಳಿಸಿದೆ.

    Hyundai Creta

    ಕ್ರೆಟಾ ದಲ್ಲಿ ಈಗ ಈ ವಿಭಾಗದಲ್ಲಿ ವಿಶೇಷವಾದ ಫೀಚರ್ ಗಳಾದ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜಿನ್ಗ್ ಮತ್ತು ಸ್ಮಾರ್ಟ್ ಆಕ್ಸೆಸ್ ಬ್ಯಾಂಡ್ ಕೊಡಲಾಗಿದೆ.

    Hyundai Creta

    ಈ ಫೀಚರ್ ಗಳು ಪ್ರಸಕ್ತದಲ್ಲಿ ಇರುವ  ಸಲಕರಣೆಗಳ ದೊಡ್ಡ ಪಟ್ಟಿ ಗೆ ಸೇರುತ್ತದೆ, ಮತ್ತು ಇದರಲ್ಲಿ ಉತ್ತಮ ಫೀಚರ್ ಗಳಾದ ಆರು ಏರ್ಬ್ಯಾಗ್ ಗಳು, 17-ಇಂಚು ಮೆಷೀನ್ ಆಗಿರುವ ವೀಲ್ ಗಳು,  ಟ್ರಾಕ್ಷನ್ ಕಂಟ್ರೂಲ್ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಗಳು ಕೂಡ ಸೇರಿವೆ.

    Hyundai Creta

    ಬೆಲೆ ಕಡಿತ

    ಹುಂಡೈ ನವರು  ಕ್ರೆಟಾ ದ ಟಾಪ್ ಸ್ಪೆಕ್ SX(O) ವೇರಿಯೆಂಟ್ ನ ಬೆಲೆಯನ್ನು ಸುಮಾರು Rs 50k ಹೆಚ್ಚಿಸಿದೆ, ಹೊಸ ಫೀಚರ್ ಗಳನ್ನು ಸಹ ಕೊಡಲಾಗಿದೆ, ಮೇಲೆ ಪಟ್ಟಿ ಮಾಡಿದಂತೆ. ಆದರೆ, ಹಲವು ಕೆಳಮಟ್ಟದ ಮತ್ತು ಮಧ್ಯಮ ಸ್ಪೆಕ್ ವೇರಿಯೆಂಟ್ ಗಳಾದ  (S, SX  ಡೀಸೆಲ್ ಮತ್ತು ಇನ್ನು ಹೆಚ್ಚು) ಕ್ರೆಟಾ ಫೇಸ್ ಲಿಫ್ಟ್ ನ ಬೆಲೆ ಕಡಿಮೆ ಗೊಳಿಸಲಾಗಿದೆ. ಹುಂಡೈ ನವರು ಕ್ರೆಟಾ ದ ವೇರಿಯೆಂಟ್ ಲೈನ್ ಅಪ್ ಅನ್ನು ಕಡಿತ ಗೊಳಿಸಿ ವೇರಿಯೆಂಟ್ ಗಳಲ್ಲಿನ ಹೆಚ್ಚಿನ ಆಯ್ಕೆ ಯನ್ನು ತೆಗೆಯಲಾಗಿದೆ.

    Hyundai Creta

    ಹೆಚ್ಚು ಫೀಚರ್ ಗಳನ್ನು  ಹೊಂದಿರುವ ಪೆಟ್ರೋಲ್

    ಹುಂಡೈ ನವರು ಹೆಚ್ಚು ಫೀಚರ್ ಗಳನ್ನು  ಹೊಂದಿರುವ SX (O) ವೇರಿಯೆಂತ್ ಮತ್ತು ಪೆಟ್ರೋಲ್ ಪವರ್ ಹೊಂದಿರುವ ಕ್ರೆಟಾ ವನ್ನು ಫೇಸ್ ಲಿಫ್ಟ್ ನೊಂದಿಗೆ ಮೊದಲ ಬಾರಿಗೆ ಕೊಡುತ್ತಿದ್ದಾರೆ. Rs 13.59 ಲಕ್ಷದಲ್ಲಿ, ಇದು ಒಂದು ಹೆಚ್ಚು ಬೆಲೆ ಹೊಂದಿರುವ ವೇರಿಯೆಂಟ್ ಆಗಿದೆ ಕ್ರೆಟಾ ಪೆಟ್ರೋಲ್ ಲೈನ್ ಅಪ್ ನಲ್ಲಿ. ಇದು ಒಂದು ಒಳ್ಳೆ ನಿರ್ಧಾರವಾಗಿದೆ ಏಕೆಂದರೆ ಮಾರ್ಕೆಟ್ ನಲ್ಲಿ ಪೆಟ್ರೋಲ್ ಪವರ್ ಹೊಂದಿರುವ SUV ಗಳ  ಸಂಖ್ಯೆ ಹೆಚ್ಚುತ್ತಿದೆ. ಅಂದರೆ, ಕ್ರೆಟಾ ಪೆಟ್ರೋಲ್ ಕೊಳ್ಳಬೇಕೆಂದಿರುವ ಗ್ರಾಹಕರು ಫೀಚರ್ ಗಳ  ಬಗ್ಗೆ ರಾಜಿ ಮಾಡಿಕೊಳ್ಳಬೇಕಿಲ್ಲ, ಹಿಂದೆ ಇದ್ದಂತೆ.

    Hyundai Creta

    ಹೊಸ ಪ್ರಖರವಾದ ಬಣ್ಣಗಳು

    Hyundai Creta

    ಹುಂಡೈ ನವರು ಎರೆಡು ಹೊಸ ಮಾತು ಪ್ರೌಢ ಬಣ್ಣಗಳ ಆಯ್ಕೆ ಕೊಟ್ಟಿದ್ದಾರೆ. ಮರೀನಾ ಬ್ಲೂ, ಮತ್ತು ಪ್ಯಾಶನ್ ಆರೆಂಜ್, ಕ್ರೆಟಾ ಫೇಸ್ ಲಿಫ್ಟ್ ಜೊತೆಗೆ. ಇವುಗಳನ್ನು ಮೊದಲಬಾರಿಗೆ ಎಲೈಟ್  i20 ಫೇಸ್ ಲಿಫ್ಟ್ ನಲ್ಲಿ ಕೊಡಲಾಗಿದೆ, ಅದನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಇವೆರೆಡು ಬಣ್ಣಗಳಲ್ಲಿ, ಪ್ಯಾಶನ್ ಆರೆಂಜ್ ಆಯ್ಕೆಯನ್ನು ಕ್ರೆಟಾ ದ ಡುಯಲ್ ಟೋನ್ ಬಣ್ಣದಲ್ಲಿ ಪಡೆಯಬಹುದಾಗಿದೆ., ಇದು ಆರು ವೇರಿಯೆಂಟ್ ಗಳಲ್ಲಿ ಕೋಣೆಯಿಂದ ಎರೆಡನೆ ವೇರಿಯೆಂಟ್ ನಲ್ಲಿ ಪಡೆಯಬಹುದಾಗಿದೆ.

    Hyundai Creta

     

    Check out: 2018 Hyundai Creta Facelift: Review

    was this article helpful ?

    Write your Comment on Hyundai ಕ್ರೆಟಾ 2015-2020

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience